ಕರೋನಾ ಕರ್ಫ್ಯೂ ಕಲಿಸುತ್ತಿರುವ ಪಾಠ: ಹೊ.ರಾ.ಪರಮೇಶ್ ಹೊಡೇನೂರು
ಅತ್ಯಾಧುನಿಕ ಕಾಲಘಟ್ಟದಲ್ಲಿ ಬದುಕುತ್ತಿರುವ ನಾವು ಇಂದು ವೈಜ್ಞಾನಿಕವಾಗಿ ಸಾಕಷ್ಟು ಸಾಧಿಸಿದ್ದೇವೆ, ವೈಚಾರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಬುದ್ಧಿವಂತರೆಂದು ಬೀಗುತ್ತಿದ್ದೇವೆ, ಉನ್ನತ ಶಿಕ್ಷಣವನ್ನು ಪಡೆದು, ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುವ ನೌಕರಿ ಹಿಡಿದುಕೊಂಡು ಐಷಾರಾಮಿ ಜೀವನವನ್ನು ನಡೆಸುತ್ತಿದ್ದೇವೆ. ತಾಂತ್ರಿಕವಾಗಿ ಮುಂದುವರೆದು ಇಡೀ ಪ್ರಪಂಚದ ಯಾವುದೇ ಮೂಲೆಯಲ್ಲಿ ಏನೇ ವಿದ್ಯಮಾನ ಘಟಿಸಿದರೂ ಕ್ಷಣಾರ್ಧದಲ್ಲಿ ವೀಕ್ಷಿಸುವ ಮಾಧ್ಯಮಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಮಂಗಳನ ಅಂಗಳದಲ್ಲಿ ಆಟವಾಡುವಷ್ಟು ಸಾಮರ್ಥ್ಯವನ್ನು ಹೊಂದಿದ್ದೇವೆ, ಚಂದ್ರನ ಮೈಲ್ಮೈಯಲ್ಲಿ ತುಸುಹೊತ್ತು ವಿರಮಿಸುವಷ್ಟರ ಮಟ್ಟಿಗೆ ಸಂಶೋಧನಾ ಕಾರ್ಯಗಳನ್ನು ಕೈಗೊಂಡು ಯಶಸ್ಸು ಕಂಡಿದ್ದೇವೆ. ವೈದ್ಯಕೀಯ ಲೋಕದ ಅದ್ಭುತವಾದ … Read more