ಮನೆ ಬಾಡಿಗೆಗಿದೆ!: ಎಸ್.ಜಿ.ಶಿವಶಂಕರ್
ಹೌದು, ನನ್ನ ಮನೆಯ ಮೊದಲ ಮಹಡಿ ಮನೆ ಬಾಡಿಗೆಗಿದೆ! ಫ್ಯಾಕ್ಟ್ರಿ ಕೆಲಸ ಮಾಡಿದವರಿಗೆ ನನ್ನ ಕಾಲದಲ್ಲಿ ಪೆನ್ಷನ್ ಇರಲಿಲ್ಲ. ಅದಕ್ಕೇ ಪಿಎಫ್ ಸಾಲ ತೆಗೆದು ಬಾಡಿಗೇಗೇಂತ ಇಪ್ಪತ್ತು ವರ್ಷದ ಹಿಂದೆ ಮಹಡಿ ಮೇಲೊಂದು ಮನೆ ಕಟ್ಟಿಸಿದ್ದೆ. ಕೆಳಗೆ ನಾನು ವಾಸ, ಮೇಲಿನದು ಬಾಡಿಗೆಗೇಂತ ಯೋಜನೆ ಮಾಡಿ ಕಾರ್ಯ ಅರೂಪಕ್ಕಿಳಿಸಿದ್ದೆ. ಕಳೆದ ಇಪ್ಪತ್ತು ವರ್ಷದಲ್ಲಿ ಐದಾರು ಜನ ಬಾಡಿಗೆದಾರರು ನೆಮ್ಮದಿಯಿಂದ ಇದ್ದು ಹೋದರು. ಆದರೆ ಈಗ ಮಾತ್ರ ವಿಚಿತ್ರ ಪರಿಸ್ಥಿತಿ ಎದುರಾಗಿತ್ತು. ಪ್ರತೀ ರೂಮಿಗೂ ಅಟ್ಯಾಚ್ಡ್ ಬಾತ್ರೂಮು ಕೇಳುತ್ತಿದ್ದರು! … Read more