ಆಕ್ರಮಣ (ಭಾಗ 1): ಜೆ.ವಿ. ಕಾರ್ಲೊ

ಮೂಲ: ಕಾರ್ಲ್ ಸ್ಟೀಫನ್ ಸನ್ ಅನುವಾದ: ಜೆ.ವಿ. ಕಾರ್ಲೊ “ಒಂದು ವೇಳೆ ಅವು ದಿಕ್ಕು ಬದಲಿಸಿದರೆ, ಬೇರೆ ಮಾತು.. ಆದರೆ ಹಾಗೆಂದು ಭಾವಿಸಲು ಯಾವುದೇ ಆಧಾರಗಳಿಲ್ಲ. ಅವು ನಿಮ್ಮ ತೋಟದ ಕಡೆಗೇ ಬರುತ್ತಿವೆ. ಹೆಚ್ಚೆಂದರೆ ಇನ್ನು ಎರಡು ದಿವಸ!” ಲೆನಿಂಜೆನ್ನನ ಮುಖದ ಮೇಲೆ ಆತಂಕದ ಗೆರೆಗಳು ಮೂಡಿದವು. ತನ್ನ ನಂದಿ ಹೋಗಿದ್ದ ದಪ್ಪನೆಯ ಚಿರೂಟನ್ನು, ಹಸಿದವನಂತೆ ಗಬಗಬನೆ ಸೇದತೊಡಗಿದ. ಅವನಿಗೆ ಸುದ್ಧಿ ಕೊಡಲು ಬಂದಿದ್ದ ಜಿಲ್ಲಾಧಿಕಾರಿಯ ಮುಖದ ಮೇಲೂ ಚಿಂತೆಯ ಗೆರೆಗಳು ಮೂಡಿದ್ದವಷ್ಟೇ ಅಲ್ಲದೆ ಅವನು ಯಥೇಚ್ಛವಾಗಿ … Read more

ಮರೆಯಲಾಗದ ಮದುವೆ (ಭಾಗ 6): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ -೬- ರಾತ್ರಿ ಎರಡು ಘಂಟೆಗೆ ರೈಲು ನೆಲ್ಲೂರನ್ನು ತಲುಪಿತು. ಅದು ಎಲ್ಲರೂ ಹೆಣಗಳಂತೆ ನಿದ್ರಿಸುವ ಹೊತ್ತು. ಕಳ್ಳ ಕಾಕರು ಸಕ್ರಿಯರಾಗುವ ಹೊತ್ತು. ಸಾಮಾನ್ಯವಾಗಿ ಆ ಸಮಯದಲ್ಲಿ ರೈಲ್ವೇ ಪೋಲೀಸರು ಪ್ರಯಾಣಿಕರನ್ನು ಜಾಗೃತಗೊಳಿಸುವುದು ಪದ್ಧತಿ. ಅದರಂತೆ ನೆಲ್ಲೂರಿನಲ್ಲಿ ರೈಲುಹತ್ತಿದ ಇಬ್ಬರು ರೈಲ್ವೇ ಪೋಲೀಸರು “ನಿಂ ನಿಂ ಬೆಲೆಬಾಳೋ ವಸ್ತು ಜೋಪಾನಾ… ಕಿಟ್ಕಿ ಬಾಗ್ಲು ಹಾಕ್ಕಳೀ…ಒಡವೆ ವಸ್ತ್ರ ಜೋಪಾನಾ…” ಎಂದು ಪ್ರತಿಬೋಗಿಯಲ್ಲೂ ಕೂಗುತ್ತಾ ಬರುತ್ತಿದ್ದರು. ಅಯ್ಯರ್ ಬೋಗಿಯಲ್ಲಿಯೂ ಬಂದು ಕೂಗುತ್ತಿದ್ದಂತೆ ಅಯ್ಯರ್ ತಂಡಕ್ಕೆ ಸೇರದ ಅಲ್ಲಿದ್ದ ಪ್ರಯಾಣಿಕನೊಬ್ಬ “ಬೋಗಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 37 & 38): ಎಂ. ಜವರಾಜ್

-೩೭- ಬಾಗ್ಲು ‘ಕಿರ್..’ ಅನ್ತು ನನ್ಗ ಮಂಪ್ರು ನೋಡ್ಬೇಕು ಅಂದ್ರು ಆಯ್ತಿಲ್ಲ ಹಂಗೆ ಕಣ್ಮುಚ್ದಿ ‘ಕಿರ್..’ ಅದೆ ಬಾಗ್ಲು ಸದ್ದು ಇನ್ನೊಂದ್ಸಲ. ಈ ಅಯ್ನೋರು ನಾಟ್ಕ ನೋಡ್ತ ಎದ್ಬಂದಾಗ ಬೆಳುಗ್ಗ ನಾಕತ್ರ ಆಗಿತ್ತು ಈಗ್ತಾನೆ ನಿದ್ದ ಹತ್ತಿತ್ತು ಅರಗಣ್ಣು ಬುಟ್ಟಿ ನೀಲವ್ವೋರು ಕಂಡ್ರು ಅದ್ಯಾಕಾ ಏನಾ ಇವತ್ತು ಸೀಗಕಡ್ಡಿ ಹಿಡಿದೆ ಇಟ್ಗ ಗುಡ್ಡಲಿ ತಿಕ ಊರಿ ಮಂಡಿ ತಬ್ಕಂಡು ಬಿಸುಲ್ಗ ಮುಖ ಕೊಟ್ಗಂಡು ಕುಂತ್ರು. ದೊಡ್ಡವ್ವ ಬಂದು ‘ಕುಸೈ ನೀಲ ಹೆಂಗಿದ್ದಯ್ ನೀ ಯೋಚ್ನ ಮಾಡ್ಬೇಡ ಮೈಯಿಳಿಸ್ಕಂಡದು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 35 & 36): ಎಂ. ಜವರಾಜ್

-೩೫- ‘ದೊಡ್ಡವ್ವವ್..’ ಎದುರು ಮನ ಪಡ್ಸಾಲ್ಲಿ ಕುಂತು ಎಲ ಅಡ್ಕ ಹಾಕತ ಅಯ್ನೋರ್ ದನಿ. ಆ ದನಿಗ, ‘ಕುಸೈ ಒಳ್ಳಿ ಕೆಲ್ಸ ಮಾಡ್ದ ಬುಡು ಊರು ಸುಮ್ನಿದ್ದಾ.. ಈ ವಯ್ಸಲಿ ಇದ್ಯಾನ ಹಿಂಗಾ.. ನೀಲ ಒಳ್ಳೋಳೆ ಆದ್ರ ಹಣಬರ ಇರ್ಬೇಕಲ್ಲ ಬುಡು ಈಗೇನ ಶಂಕ್ರಿಲ್ವ.. ಸಾಕು ಬುಡು ಹೆಂಗು ಅವ್ನುಗು ಗಂಡಾಗದ ವಂಶ ಹೆಸರೇಳಕಾದ್ರು ಆಯ್ತಲ್ಲ ಬುಡು’ ‘ದೊಡ್ಡವ್ವವ್ ಸುಮ್ನಿದ್ದಯ.. ಕುಲ್ಗೆಟ್ಟವೆಲ್ಲ ನನ್ ವಂಶನಾ..’ ‘ಮೊಗ ಅವ ಕುಲ್ಗೆಟ್ಟ ಹೆಣ್ಣೇ ಇರಬೋದು ನಿನ್ ರಕ್ತ ಕುಲ್ಗೆಟ್ಟೊಗಿದ್ದಾ.. ಶಂಕ್ರನ್ … Read more

ಪಂಜು ಕಾವ್ಯಧಾರೆ

ಅಂತ್ಯವೆಲ್ಲಿ? ತೋಳ ತೆಕ್ಕೆಯಲಿಲ್ಲದ ಕಾಣದ ನೋಟ ಆದರೂ ಹಠ ಬಿಡದ ಭಯಂಕರ ಸಾವು-ನೋವು ಮಂದಗತಿಯಲಿ ಹೊಗೆ ಉರಿಯುತ್ತಿದೆ ಬೆಂಕಿ ಅಡಗಿದೆ ಗಾಳಿ ಸೋಕಿ ಸೋಂಕು ಎನಿಸಿಕೊಂಡಿದೆ ಮನೆಯಲ್ಲಿ ಬೀಗ ಜಡಿದಿದ್ದಾರೆ ನೆರೆಯವರು ಗುಸುಗುಸು ಸನಿಹವಂತೂ ಸುಳಿಯೋದೆ ಇಲ್ಲ ಯಾರೂ …ಬೆಳಕು, ಗಾಳಿ, ಕತ್ತಲು ಬಂಧುಗಳಿಲ್ಲ, ಹೆಂಗಳೆಯರು ಎಲ್ಲೋ ತಾಯ್ಮನೆ ನೆನೆಸುತ್ತಿದ್ದಾರೆ ಆದರೆ ಬರಲೊಲ್ಲದ ಸಮಯ ಬೇಲಿ ಹಾಕಿದ್ದಾರೆ ಸರ್ಕಾರದವರು ನಮ್ಮ ಒಳಿತಿಗೆ ಅಲ್ಲವೇ? ಮನೆಯ ಬಾಗಿಲ ದಾರಂದರ ಪಟ್ಟಿಯೊಳಗೆ ಹಸಿ ಬಟ್ಟೆಯ ಸುಳಿವಿಲ್ಲ ರಂಗೋಲಿ, ಒಲೆಗೆ ಬೆಂಕಿ … Read more

ಕಬಡೀ… ಕಬಡೀ… whatever!: ಗುರುಪ್ರಸಾದ ಕುರ್ತಕೋಟಿ

ಮಕ್ಕಳು ಎಲ್ಲಿದ್ದರೂ ಮಕ್ಕಳೇ. ಅದರೂ NRI ಮಕ್ಕಳು ವಿಭಿನ್ನ ಅಂತ ನನಗೆ ಅನಿಸುತ್ತಿದ್ದುದು ಅವರ ಮಾತಾಡುವ ಶೈಲಿಯಲ್ಲಿ. ಅದೊಂಥರ ಅರಗಿಸಿಕೊಳ್ಳಲಾಗದ ವಿಷಯ ನನಗೆ. ವಿಶೇಷವಾಗಿ ಅವರು ಮಾತಾಡುವ american accent ನನ್ನಲ್ಲಿ ಆ ಭಾವನೆ ಹುಟ್ಟಿಸುತ್ತಿತ್ತು. ಮಕ್ಕಳು ಎಲ್ಲಿ ಬೆಳೆಯುತ್ತಾರೋ ಅಲ್ಲಿನ ಭಾಷೆ ಸಂಸ್ಕೃತಿಗಳಿಗೆ ಒಗ್ಗಿಕೊಳ್ಳುತ್ತಾರೆ. ಅದು ಅವರ ತಪ್ಪಲ್ಲ. ಹೊಸದಾಗಿ ಅಮೆರಿಕೆಯಲ್ಲಿ ಹೋಗಿ ಅಲ್ಲಿದ್ದ ಮಕ್ಕಳ ಕುರಿತು ಹಾಗೆ ಯೋಚಿಸಿದ್ದು ನನ್ನ ತಪ್ಪು. ಕ್ರಮೇಣ ಅವರ ಮಾತುಗಳು ನನಗೆ ಒಂತರಹದ ಮಜಾ ಕೊಡುತ್ತಿದ್ದವು. ನನ್ನ ಮಗಳೂ … Read more

ಬ್ಯಾಚುಲರ್ ಬದುಕಿನ ಬಾನ್ಗಡಿಗಳು…: ವಿನಾಯಕ ಅರಳಸುರಳಿ

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕಳಿಕೆ ಶುರುವಾಗಿದೆ. “ನೋಡ್ತಿರು…ದೊಡ್ಡ ಸಾಧನೆ ಮಾಡಿ ನಾನೇನು ಅಂತ ತೋರಿಸ್ತೀನಿ ಅವಳಿಗೆ!” ಅರ್ಧ ಕೆಜಿ ಅಳು, ಎರೆಡು ಕ್ವಿಂಟಾಲ್ ಹತಾಶೆ, ಎರೆಡು ಡಜನ್ ರೊಚ್ಚು, ಐದೂವರೆ ಕ್ವಾಟರ್ ನಶೆ ಹಾಗೂ ಸಾವಿರಾರು ಗ್ಯಾಲನ್ ದುಃಖ… ಇವೆಲ್ಲ ಒಟ್ಟಾಗಿ ಬೆರೆತ ಧ್ವನಿಯೊಂದು ಹಾಗಂತ ಅಬ್ಬರಿಸುತ್ತದೆ. “ಹೂ ಮಚ್ಚೀ.. ನೀನೇನಾದ್ರೂ ಅಚೀವ್ಮೆಂಟ್ ಮಾಡ್ಲೇಬೇಕು. ನಿನ್ನ ಬಿಟ್ಟೋಗಿದ್ದು ಎಷ್ಟು ದೊಡ್ಡ … Read more

ಕೊರೋನಾ ಕಾಲದಲ್ಲಿ ಹೆಣ್ಣುಮಕ್ಕಳ ಕೌಟುಂಬಿಕ ಸಮಸ್ಯೆಗಳು: ತೇಜಾವತಿ ಹುಳಿಯಾರು

ಹಿಂದೆಂದೂ ಕಾಣದೊಂದು ಸೂಕ್ಷ್ಮ ಅಣುಜೀವಿ ಇಂದು ವಿಶ್ವದೆಲ್ಲೆಡೆ ಹರಡಿ ತನ್ನ ಕಬಂಧಬಾಹುವನ್ನು ವಿಸ್ತರಿಸಿಕೊಂಡು ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತ ಇಡೀ ಮನುಕುಲವನ್ನೇ ತಲ್ಲಣವನ್ನುಂಟುಮಾಡಿದೆ. ವಿಜ್ಞಾನ – ತಂತ್ರಜ್ಞಾನಕ್ಕೇ ಸವಾಲೊಡ್ಡಿರುವ ಪರಿಸ್ಥಿತಿ ನಮ್ಮ ಕಣ್ಣೆದುರೇ ಇದೆ. ಎಲ್ಲರ ನಿದಿರೆಯಲ್ಲೂ ಸಿಂಹಸ್ವಪ್ನವಾಗಿರುವ ಕೊರೋನಾ ಮಹಾಮಾರಿಯಾಗಿ ತನ್ನ ಅಟ್ಟಹಾಸವನ್ನು ಮರೆಯುತ್ತಾ ಪ್ರಕೃತಿಯ ಮುಂದೆ ಎಲ್ಲವೂ ಶೂನ್ಯವೆಂಬ ನೀತಿಯನ್ನು ನೆನಪಿಸಿದೆ. ಒಂದೆಡೆ ರೋಗದ ಹರಡುವಿಕೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತ ತನ್ನ ವೇಗದ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಹೇಗೋ ಜೀವನ ಸಾಗಿಸುತ್ತಿದ್ದ ಹಲವಾರು ಕುಟುಂಬಗಳ ಪರಿಸ್ಥಿತಿ … Read more

ಕುಡಿತದ ದಾಸರೇ ನಿಮಗಾಗಿ: ಪ್ರೇಮ್

ಕುಡಿತದ ದುಷ್ಪರಿಣಾಮವನ್ನು ನಾನು ಹಲವು ಕುಟುಂಬಗಳ, ಸಂಬಂಧಿಕರನ್ನು ನೋಡಿ ಕಣ್ಣಾರೆ ಕಂಡವಳು. ಅದೇ ಬೇಸರದಲ್ಲಿ, ಒಟ್ಟಿಗೆ ಭಯ, ಗಾಬರಿ, ಹತಾಶೆ, ನೋವು, ಬೇಸರ, ಕೊಳಕು, ನರಕ ಎಲ್ಲಾ ಭಾವಗಳೂ ಮನದಲ್ಲಿ ಒತ್ತರಿಸಿ ಬರುವುವು. ಯಾರೇ ಆಗಲಿ ಯಾವುದಕ್ಕೂ ದಾಸರಾಗಬಾರದು. ನಮ್ಮ ಮನಸ್ಸು, ನಮ್ಮ ಕೆಲಸ, ನಮ್ಮ ಭಾವನೆಗಳು ನಮ್ಮ ಹಿಡಿತದಲ್ಲಿ ಇರಬೇಕು. ಕುಡಿತ ಸುಳ್ಳನ್ನು ಪ್ರೋತ್ಸಾಹಿಸುತ್ತದೆ. ಯಾಕೋ ಆ ಸುಳ್ಳು ತುಂಬಾ ನೋವು ಕೊಡುತ್ತದೆ. ಹಲವಾರು ಬಾರಿ ಜೀವನದಲ್ಲಿ ಸುಳ್ಳುಗಳಿಂದ ಹತಾಶಳಾಗಿರುವೆವು ನಾವು. ಅದು ಮತ್ತೆ ಜೀವನದಲ್ಲಿ … Read more

ಮರೆಯಲಾಗದ ಮದುವೆ (ಭಾಗ 5): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ -೪- ದಿನಕಳೆದಂತೆ ಕಾವಶ್ಶೇರಿಯ ದನದಕೊಟ್ಟಿಗೆಯಲ್ಲಾದ ಮುಖಭಂಗದ ನೆನೆಪು ಮಾಸಿದಂತಾಗಿ ಕೊನೆಗೆ ಗುರುತುಸಿಕ್ಕದಂತೆ ಅಯ್ಯರ್ ಮನದಾಳದಲ್ಲೆಲ್ಲೋ ಹೂತುಹೋಗಿತ್ತು. ಹೆಚ್ಚೂಕಮ್ಮಿ ವರುಷ ಎರಡು ವರುಷಕ್ಕೊಂದರಂತೆ ಅಯ್ಯರ್ ಒಬ್ಬೊಬ್ಬರೇ ಹೆಣ್ಣುಮಕ್ಕಳ ಮದುವೆ ಮಾಡಿಮುಗಿಸಿದರು. ಅವುಗಳ ಪೈಕಿ ಯಾವುದಾದರೊಂದು ಮದುವೆಗೆ ಮುಕ್ತಾ ಬಂದಿದ್ದರೆ ಮಾಸಿದ ನೆನಪು ಮತ್ತೆ ಹಸಿರಾಗುತ್ತಿತ್ತೇನೋ! ಆದರೆ ಹೈದ್ರಾಬಾದಿನ ಬ್ಯಾಂಕಿನಲ್ಲಿ ಗುಮಾಸ್ತರಾಗಿದ್ದ ಮುರಳೀಧರರಿಗೆ ಉದ್ಯೋಗದಲ್ಲಿ ಭಡ್ತಿ ದೊರೆತಂತೆಲ್ಲಾ ಮೂರುನಾಲ್ಕು ವರ್ಷಗಳಿಗೊಮ್ಮೆ ಬಾಂಬೆ, ಡೆಲ್ಲಿ, ಕಲ್ಕತ್ತಾ, ಎಂದು ವರ್ಗವಾಗುತ್ತಲೇ ಇತ್ತು. ಅಲ್ಲದೇ ಉದ್ಯೋಗನಿಮಿತ್ತ ಕಾಲಿಗೆಚಕ್ರಕಟ್ಟಿಕೊಂಡಂತೆ ಸುತ್ತುತ್ತಿದ್ದ ಅವರಿಗೆ ಮದುವೆ ಮುಂಜಿಗಳೆಂದು … Read more

ಸಂವೇದನಾಶೀಲ ಯುವ ಕವಿ ಕಾಜೂರು ಸತೀಶ್: ಕಾವ್ಯ ಎಸ್

ನಾನು ಇಂದು ಪರಿಚಯಿಸುತ್ತಿರುವುದು, ನಮ್ಮ ನಿಮ್ಮೆಲ್ಲರೊಂದಿಗೆ ಸಾಮಾನ್ಯರಂತಿರುವ, ಭಿನ್ನತೆಯಲ್ಲಿ ವಿಭಿನ್ನತೆ ಮೆರೆಯುವ ಕೊಡಗಿನ ಪ್ರತಿಭಾನ್ವಿತ., ಸಂವೇದನಾಶೀಲ ಯುವ ಕವಿ.. ಶಿಕ್ಷಕ.. ಅನುವಾದಕ.. ಸಾಹಿತಿ.. ಚಿಂತಕ ಕಾಜೂರು ಸತೀಶ್ ರವರ ಬಗ್ಗೆ. ಶ್ರೀ. ನಾರಾಯಣ್ ಮತ್ತು ಶ್ರೀಮತಿ. ವಿಶಾಲಾಕ್ಷಿ ಯವರ ಪ್ರೀತಿಯ ಪುತ್ರ K. N. ಸತೀಶ್. ಇವರ ವಾಸ್ತವ್ಯ ಸೋಮವಾರಪೇಟೆ ತಾಲೋಕಿನ ಕಾಜೂರು ಗ್ರಾಮ. ಸತೀಶ್ ರವರ ಕವಿತೆಗಳನ್ನು ಜೀರ್ಣಿಸಿಕೊಳ್ಳಲು ಎರೆಡೆರೆಡು ಬಾರಿಯಾದರೂ ಓದುವ ನಾನು ಅವರ ಕವಿತೆಗಳ ಬಗ್ಗೆ ಏನು ಹೇಳಲು ಸಾಧ್ಯ..? ಎಂಬ ಪ್ರಶ್ನೆ … Read more

ಪಂಜು ಕಾವ್ಯಧಾರೆ

ಬೆಳಕಾದವರಿಗೆ ನಮಸ್ಕಾರ… ಮೊದಲು ತಾಯಿಗೆ ಜನ್ಮ ಕೊಟ್ಟ ತಂದೆಗೆ ಎರಡೂ ಕಣ್ಣು ಕೊಟ್ಟ ದೇವರಿಗೆ ಭೂಮಿಯಿಂದ ಜನಿಸಿದಾಗ ಸುತ್ತಾ ಮುತ್ತಾ ಪಸರಿಸಿತ್ತು ಪ್ರೀತಿ ಪ್ರೇಮದ ಗಂಧ ಪ್ರೀರಿಗೊಂದು‌ ಅರ್ಥ ಕೊಟ್ಟು ರೂಪ ಕೊಟ್ಟ ತಾಯಿಗೆ ಸಹನೆಯೆಂಬ ಜೇನು ಸುರಿದು ಬರಗಾಲ-ಉಳಿಗಾಲ-ಅಳಿಗಾಲದಲ್ಲೂ ಗರಿಕೆಯ ರಸಕುಡಿಸಿ ಭರವಸೆಯ ಬೆಳಕಾದ ತಾಯಿಗೆ ಗರಿಕೆಯೊಳಗೆ ಜೀವವಾಗಿ ಉಸುರು ತುಂಬಿ ತಾಯಿ ಮಗುವ ತಬ್ಬಿದ ತಂದೆಗೆ ಯಾವ ಭೂಮಿ ಎಲ್ಲಿಯ ಜಲ ಆಕಾಶವೆಂಬುವುದು ನಿತ್ಯಜನ್ಯಲೋಕ ಅರಿವಿನ ಕಿರಣ ಕೊಟ್ಟ ಗುರುವಿಗೆ ಬೆಳಕಾದ ಮನದಿಂದ ನಮಸ್ಕಾರ … Read more

ಹುಲಿ ಬಂತು ಹುಲಿ: ನಂದಾದೀಪ, ಮಂಡ್ಯ

ಹುಲಿ ಬಂತು ಹುಲಿ ಎಂದು ಅಜ್ಜಿ ಕತೆ ಶುರು ಮಾಡಿ ಹುಲಿ ಜಿಂಕೆನಾ ತಿಂದು ಬಿಡ್ತು ಎಂದು ಕತೆ ಮುಗಿಸುವಾಗ ನಮ್ಮೆಲ್ಲರ ಮನಸಲ್ಲಿ ಹುಲಿ ಎಂದರೆ ಏನೋ ಒಂದು ಅವ್ಯಕ್ತ ಭಯ ಆವರಿಸುತ್ತದೆ..! ಭಯದ ಜೊತೆಗೆ ಹುಲಿಯನ್ನು ನೋಡಬೇಕೆಂಬ ಕುತೂಹಲವು ಹೆಚ್ಚಾಗುತ್ತದೆ..! ಮೃಗಾಲಯದಲ್ಲಿ ದೂರದಿಂದಲೇ ಹುಲಿಯನ್ನು ಬೆರಗುಗಣ್ಣಿಂದಲೇ ತುಂಬಿಕೊಂಡಿದ್ದು ಉಂಟು..! ಹುಲಿಯ ಮೇಲಿನ ಕುತೂಹಲ ಹೆಚ್ಚಿದಂತೆ ಅದರ ಬಗ್ಗೆ ತಿಳಿಯಲು ಒಂದಷ್ಟು ವಿಷಯಗಳನ್ನು ತಿಳಿಯಲು ಹೊರಟಾಗ ಅದು ಭಯ ಹುಟ್ಟಿಸುವ ಜೀವಿ ಅನ್ನೋದಕ್ಕಿಂತ ಸ್ವಾಭಿಮಾನಿ ಜೀವಿ ಎನ್ನುವುದು … Read more

ನಾವು… ನಮ್ಮದು: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ) ನಮ್ಮ ಜೀವನದ ಗತಿಯನ್ನು, ನಮ್ಮ ಯೋಚನಾ ಲಹರಿಯನ್ನು ಬದಲಿಸಬಲ್ಲ ತಾಕತ್ತು ಇರುವುದು ಪುಸ್ತಕಗಳಲ್ಲಿ ಮಾತ್ರ ಎಂದು ಬಲವಾಗಿ ನಂಬಿರುವವನು ನಾನು. ನಮ್ಮ ಮನೆಯಲ್ಲಿದ್ದ ಪುಸ್ತಕಗಳು, ವಾರಕ್ಕೊಮ್ಮೆ ಬರುತ್ತಿದ್ದ ತರಂಗ, ಸುಧಾ ಗಳಂತಹ ಪತ್ರಿಕೆಗಳು ನಮ್ಮ ಓದಿನ ಹುಚ್ಚು ಹೆಚ್ಚಿಸಿದ್ದಲ್ಲದೆ ನಮ್ಮ ಯೋಚನಾ ಕ್ರಮವನ್ನೇ ಬದಲಿಸಿದ್ದವು. ಅವುಗಳು ಈಗಿನ ಗೂಗಲ್ ಗಿಂತ ಹೆಚ್ಚಿನ ಮಾಹಿತಿಗಳನ್ನು ಕೊಡುತ್ತಿದ್ದವು. ಈಗಿನ ಅಂತರ್ಜಾಲ ಒಂದು ಸಾಗರ. ಅದರಲ್ಲಿ ನಮಗೆ ಬೇಕಾದ ನಿಖರ ಮಾಹಿತಿ ತೊಗೊಳ್ಳೋದು ಅಂದರೆ ಒಳ್ಳೆಯ ಬಲೆಯಲ್ಲಿ ಮೀನು ಹಿಡಿದಂತೆ. … Read more

ಮರೆಯಲಾಗದ ಮದುವೆ (ಭಾಗ 4): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ ಅಂದು ವೈಕುಂಠಸಮಾರಾಧನೆ. ಹನ್ನೆರಡು ದಿನದ ಅಶುಭ ಕಳೆದು ನಡೆಯುತ್ತಿದ್ದ ಶುಭಕಾರ್ಯವದು. ನೆಂಟರಷ್ಟರಿಂದ ತುಂಬಿದ ಮನೆ ಚಟುವಟಿಕೆಗಳ ಗಿಜಿಗಿಜಿಯಿಂದ ತುಂಬಿತ್ತು. ಅಂದಿನ ಸಮಾರಂಭ ಮುಗಿಸಿ ಅಯ್ಯರ್ ಮರುದಿನ ತಿರುವಾರೂರಿಗೆ ಹೊರಡುವವರಿದ್ದರು. ಬೆಳಗಿನ ಕಾಫಿ ಕುಡಿದು ಕೊಳಕ್ಕೆ ಹೋಗಿ ಸ್ನಾನ ಮುಗಿಸಿದ ಅಯ್ಯರ್ ಆಗಷ್ಟೆ ಮನೆಗೆ ಹಿಂತಿರುಗಿ ಹಜಾರದಲ್ಲಿ ಕುಳಿತಿದ್ದ ಇನ್ನೂ ಐದಾರು ಜನರೊಂದಿಗೆ ಕುಳಿತು ತಿಂಡಿತಿನ್ನುತ್ತಿದ್ದರು. ಅಷ್ಟರಲ್ಲಿ ಸಾಲಾಗಿ ಕುಳಿತಿದ್ದವರಿಗೆಲ್ಲಾ ಚಟ್ನಿ ಬಡಿಸಿಕೊಂಡು ಬಂದ ಮುಕ್ತಾಳನ್ನು ಕಂಡ ಅಯ್ಯರಿನ ಸ್ಥಿಮಿತ ತಪ್ಪಿದಂತಾಯಿತು. ಚಿಕ್ಕಚಿಕ್ಕ ವಿಷಯಗಳು ಮಾಡುವ ದೊಡ್ಡ … Read more

ಸೌಂದರ್ಯವೇ ಸತ್ಯ, ಸತ್ಯವೇ ಸೌಂದರ್ಯ – ಅಮರ ಕವಿ ಜಾನ್ ಕೀಟ್ಸ್: ನಾಗರೇಖಾ ಗಾಂವಕರ

ಅತಿ ಚಿಕ್ಕ ವಯಸ್ಸಿನಲ್ಲಿ, ಅತೀ ಕಡಿಮೆ ಅವಧಿಯಲ್ಲಿ ಅಪಾರ ಅದ್ವಿತೀಯ ಪ್ರಗಾಥ ಸಾಹಿತ್ಯವನ್ನು ರಚಿಸಿ ಜಾಗತಿಕ ಸಾರಸ್ವತ ಲೋಕದ ಧ್ರುವತಾರೆಯಂತೆ ಬೆಳಗಿದವನೆಂದರೆ ಜಾನ್ ಕೀಟ್ಸ್. ಅಕ್ಷರ ಜಗತ್ತಿನಲ್ಲಿ ಚಿಮ್ಮಿದ ಬೆಳಕಿನ ಸೂಡಿ ಕೀಟ್ಸ್. ಆತನ ಜೀವನದುದ್ದಕ್ಕೂ ಸಾವು ಸುಳಿಯುತ್ತಲೇ ಇತ್ತು. ಹೆತ್ತವರ, ಒಡಹುಟ್ಟಿದವರ, ಸಾವು ಆತನ ವಿಚಲಿತಗೊಳಿಸುತ್ತಲೇ ಇದ್ದರೂ ಸಾವಿನಲ್ಲೂ ಸೌಂದರ್ಯ ಕಂಡ ಕವಿ. ತನ್ನ ಗೋರಿ ವಾಕ್ಯವನ್ನು ತಾನೇ ಬರೆದಿಟ್ಟ ಧೀರ. ವಿಲಿಯಂ ವಡ್ರ್ಸವರ್ಥ, ಎಸ್ ಟಿ. ಕೋಲ್ರಿಡ್ಜ್ ಇಂಗ್ಲೆಂಡಿನಲ್ಲಿ ರೋಮ್ಯಾಂಟಿಕ್ ಯುಗದ ಪ್ರವರ್ತಕರಾಗಿ “ಲಿರಿಕಲ್ … Read more

ಗೆಳೆಯನಲ್ಲ (ಭಾಗ 4): ವರದೇಂದ್ರ ಕೆ.

ಇಲ್ಲಿಯವರೆಗೆ… (7) ಇತ್ತ ಕಮಲಮ್ಮ ಸಂಪತ್ಗೆ ಫೋನ್ ಮಾಡಿ ಪ್ರೀತಿ ತವರು ಮನೆಗೆ ಹೋದ ವಿಷಯ ತಿಳಿಸಿ, ಮನೆಗೆ ಬೇಗ ಬರಲು ಹೇಳುತ್ತಾಳೆ. ಸಂಜೆ ಆಯಿತು ಮಗ ಮನೆಗೆ ಬರುವ ಸಮಯ ಬದಲಾಗಿದೆ, ಫೋನ್ ಮಾಡಿದರೆ ಸ್ವೀಕರಿಸುವುದಿಲ್ಲ. ಸ್ವೀಕರಿಸಿದರೂ ಸರಿಯಾಗಿ ಮಾತನಾಡುವುದಿಲ್ಲ. ಯಾವಾಗಲೂ ಏನೋ ಚಿಂತೆಯಲ್ಲಿರುವಂತೆ ಕಾಣಿಸುತ್ತಾನೆ. ಮದುವೆಯಾಗಿ ಹೊಸತರಲ್ಲಿ ಹೇಗಿರಬೇಕು? ಸಂಪತ್ನ ವಿಚಾರಿಸಬೇಕು ಮನೆಗೆ ಬಂದ ಕೂಡಲೆ ಎಂದು ಕಮಲಮ್ಮ ಕಾದು ಕೂಡುತ್ತಾರೆ. ತಡರಾತ್ರಿ ಮನೆಗೆ ಬಂದ ಸಂಪತ್ ಅನ್ನು ತಾಯಿ ವಿಚಾರಿಸುತ್ತಾಳೆ, “ಸಂಪತ್, ಪ್ರೀತಿ … Read more

ಜೀವನದ ಗತಿಯನ್ನು ಬದಲಿಸುವ ‘ಗುರು’: ತೇಜಾವತಿ ಎಚ್.ಡಿ

ಮಾತೃ ದೇವೋಭವ ಪಿತೃ ದೇವೋಭವ ಆಚಾರ್ಯ ದೇವೋಭವ ಅತಿಥಿ ದೇವೋಭವ ಬ್ರಹ್ಮನಾಗಿದ್ದಾನೆ, ಅವನೇ ವಿಷ್ಣುವೂ ಕೂಡ. ಅವನೇ ಸಾಕ್ಷಾತ್ ಪರಬ್ರಹ್ಮ ಆದ್ಯಂತಿಕ ಸತ್ಯ. ಅಂತಹ ಗುರುವಿಗೆ ನಮಸ್ಕಾರ. ಗುರುವಿನಲ್ಲೇ ಪರಬ್ರಹ್ಮನನ್ನು ಕಾಣುವ ಮೂಲಕ ಅವನನ್ನು ಪೂಜ್ಯ ಭಾವನೆಯಿಂದ ನೋಡುತ್ತೇವೆ. ಇಂದಿಗೂ ಕೂಡ ಯಾವುದೇ ಕಾರ್ಯವನ್ನು ಮಾಡುವ ಸಂದರ್ಭದಲ್ಲಿ ನಾವು ಈ ಶ್ಲೋಕವನ್ನು ಪಠಿಸುತ್ತೇವೆ. ಸಮಾಜ ಇಷ್ಟೊಂದು ಗೌರವವನ್ನು ಶಿಕ್ಷಕರಿಗೆ ನೀಡುವಾಗ ಅವರೂ ಕೂಡ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಶಿಕ್ಷಕ ಸಕಾರಾತ್ಮಕತೆಯ ಕಿರಣವಾಗಿದ್ದು ಎಂತಹ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 35 & 36): ಎಂ. ಜವರಾಜ್

-೩೫- ‘ದೊಡ್ಡವ್ವವ್..’ ಎದುರು ಮನ ಪಡ್ಸಾಲ್ಲಿ ಕುಂತು ಎಲ ಅಡ್ಕ ಹಾಕತ ಅಯ್ನೋರ್ ದನಿ. ಆ ದನಿಗ, ‘ಕುಸೈ ಒಳ್ಳಿ ಕೆಲ್ಸ ಮಾಡ್ದ ಬುಡು ಊರು ಸುಮ್ನಿದ್ದಾ.. ಈ ವಯ್ಸಲಿ ಇದ್ಯಾನ ಹಿಂಗಾ.. ನೀಲ ಒಳ್ಳೋಳೆ ಆದ್ರ ಹಣಬರ ಇರ್ಬೇಕಲ್ಲ ಬುಡು ಈಗೇನ ಶಂಕ್ರಿಲ್ವ.. ಸಾಕು ಬುಡು ಹೆಂಗು ಅವ್ನುಗು ಗಂಡಾಗದ ವಂಶ ಹೆಸರೇಳಕಾದ್ರು ಆಯ್ತಲ್ಲ ಬುಡು’ ‘ದೊಡ್ಡವ್ವವ್ ಸುಮ್ನಿದ್ದಯ.. ಕುಲ್ಗೆಟ್ಟವೆಲ್ಲ ನನ್ ವಂಶನಾ..’ ‘ಮೊಗ ಅವ ಕುಲ್ಗೆಟ್ಟ ಹೆಣ್ಣೇ ಇರಬೋದು ನಿನ್ ರಕ್ತ ಕುಲ್ಗೆಟ್ಟೊಗಿದ್ದಾ.. ಶಂಕ್ರನ್ … Read more

ಲಾಕ್ಡೌನ್ – ವರ್ಕ್ ಫ಼್ರಮ್ ಹೋಮ್ ಮತ್ತು ಫ಼ಾರ್ ಹೋಮ್!!: ಸಹನಾ ಪ್ರಸಾದ್

ಅಬ್ಬಾ, ೪ ತಿಂಗಳು!! ಇಷ್ಟು ಸಮಯ ಒಟ್ಟಿಗೆ ಮನೆಯಲ್ಲಿ ಇದ್ದದ್ದು ನೆನಪಿಲ್ಲ. ಮೊದಲ ಸಲ ಮಾರ್ಚ್ ೨೪ರಿಂದ ಎಲ್ಲಾ ಲಾಕ್ ಎಂದು ಘೋಷಿಸಿದಾಗ ಮೊದಲು ಅನಿಸಿದ್ದು ” ಅಯ್ಯೊ, ಕೆಲಸದವಳು ಇಲ್ಲವಲ್ಲ, ಹೇಗೆ ನಿಭಾಯಿಸುವುದು” ಎಂದು. ಎಲ್ಲರೂ ಕೋವಿಡ್, ಕೋವಿಡ್ ಎಂದು ಕೂಗಾಡುತ್ತಿದ್ದರೂ ಅಷ್ಟೇನು ಭಯವಿರಲಿಲ್ಲ. ಶಾಲಾ, ಕಾಲೇಜು ರಜೆ ಎಂದಾಗ ಮನಸ್ಸು ಸ್ವಲ್ಪ ಸೀರಿಯಸ್ ಆಗಿದ್ದು ನಿಜ. ಬೆಳಗ್ಗೆ ಎದ್ದ ತಕ್ಷಣ ಶುರುವಾದ ಕೆಲಸಗಳು ಮುಗಿಯುತ್ತಲೇ ಇಲ್ಲ, ಪಾತ್ರೆಗಳು ಸಿಂಕ್ ಅಲ್ಲಿ ಕರಗುತ್ತಲೇ ಇಲ್ಲ! ಮನೆಯ … Read more

ಎಲ್ಲರೂ ಮಲಗಿದ್ದಾಗ…: ಗುರುಪ್ರಸಾದ ಕುರ್ತಕೋಟಿ

ಚಿಕ್ಕಂದಿನಲ್ಲಿ ನನಗೆ ನಿದ್ದೆಯಲ್ಲಿ ನಡೆದಾಡುವ (Sleep walking) ಖಾಯಿಲೆ ಇತ್ತು. ಹಾಗೆ ರಾತ್ರಿ ಅಡ್ಡಾಡಿದ್ದು ಬೆಳಿಗ್ಗೆ ಎದ್ದಾಗ ನನಗೆ ನೆನಪೇ ಇರುತ್ತಿರಲಿಲ್ಲ. ಆ ನನ್ನ ಖಾಯಿಲೆಯಿಂದ ತುಂಬಾ ಕಷ್ಟ ಅನುಭವಿಸಿದವಳು ನನ್ನಮ್ಮ. ಮಗ ಹೀಗೆ ಒಂದು ರಾತ್ರಿ ಎದ್ದು ಹೊರಗೆ ಹೋಗಿಬಿಟ್ಟರೆ ಎನು ಗತಿ ಅಂತ ಮನೆಯ ತಲಬಾಗಿಲಿಗೆ ಹಾಗು ಹಿತ್ತಲ ಬಾಗಿಲಿಗೆ ಒಳಗಿನಿಂದ ಕೀಲಿ ಹಾಕಿ ಮಲಗುತ್ತಿದ್ದಳು. ನಾನು ಎದ್ದು ಅಡ್ಡಾಡುತ್ತಿದ್ದೆನೆ ವಿನಃ ಕೀಲಿ ತೆಗೆದು ಹೊರಗೆ ಹೋಗುತ್ತಿರಲಿಲ್ಲ, ಅದೊಂದು ವಿನಾಯತಿ ನೀಡಿತ್ತು ಆ ಖಾಯಿಲೆ! … Read more

ಪಂಜು ಕಾವ್ಯಧಾರೆ

ಖಾಲಿಯಿದೆ… ಈಗಲೂ ನನ್ನೀ ಹೃದಯ ನೆತ್ತರು ಚಿಮ್ಮುತಿದೆ ನಿತ್ಯವೂ ಮಿಡಿಯುತಿದೆ ಬದುಕಿಗಾಗಿ ತುಡಿಯುತಿದೆ ಹೃದಯವಿನ್ನೂ ಖಾಲಿಯಿದೆ ದಣಿವಿಲ್ಲ ಗುರಿಯಿಲ್ಲ ಕನಸೇಕೋ ಕಾಡುತಿಲ್ಲ ಯಾವುದೋ ನೋವಿನಲ್ಲಿ ಹೇಳಲಾರೆ ದನಿಯಿಲ್ಲ ಯಾತರದ್ದೋ ಗೊಣಗಾಟ ಯಾತಕ್ಕಾಗಿಯೋ ಹೆಣಗಾಟ ಹಾರಿ ಹೋಗದು ಜೀವ ತೂರಾಡುತಿಹುದು ಭಾವ ಬೀಸುತಿದೆ ಬಿರುಗಾಳಿ ಹೃದಯವಂತೂ ಖಾಲಿಯಿದೆ ಏನ ಬಯಸಿ ಸೋಸುತಿಹುದು ಜೀವ ಹಿಡಿಯಲಾಗದೇನೋ ಮನದ ನೋವಾ ದಕ್ಕುವುದೇ ಎಂದಿಗಾದರೂ ಪ್ರೇಮಾಮೃತಪಾನ ಹೃದಯವು ಸದಾ ಖಾಲಿಯೇ ಖಾಲಿ ಕಾವಲಿಯ ಕಾವಲಿಗೆ ನಿಂತು ಮಾಡುವುದೇನು ಹೃದಯವೀಗಲೂ ಖಾಲಿ ಖಾಲಿ –ಚಿನ್ನು … Read more

ಮರೆಯಲಾಗದ ಮದುವೆ (ಭಾಗ 3): ನಾರಾಯಣ ಎಂ ಎಸ್

   ಇಲ್ಲಿಯವರೆಗೆ -೩- ಇತ್ತೀಚೆಗೆ ಸೀತಮ್ಮನ ತಂದೆಯವರ ಆರೋಗ್ಯ ಕ್ಷೀಣಿಸಿ ಹಾಸಿಗೆ ಹಿಡಿದುಬಿಟ್ಟಿದ್ದರು. ಮಧುರಮ್ಮನವರಲ್ಲೂ ಮುಂಚಿನ ಕಸುವು ಉಳಿದಿರಲಿಲ್ಲ. ಹಾಗಾಗಿ ಈ ಬಾರಿ ತನ್ನ ಏಳನೇ ಹೆರಿಗೆಗೆ ಸೀತಮ್ಮ ಕಾವಶ್ಯೇರಿಗೆ ಹೋಗಲಿಲ್ಲ. ಆದರೆ ಬಸುರಿ ಹೆಂಗಸಿಗೆ ತಗುಲಿದ ಟಯ್ಫಾಡ್ ಖಾಯಿಲೆ ಸೀತಮ್ಮಳನ್ನು ಹಣಿದುಬಿಟ್ಟಿತು. ಸಾಲದ್ದಕ್ಕೆ ಏಳನೇ ತಿಂಗಳಿಗೆ ಗರ್ಭಪಾತವೂ ಆಗಿಹೋಯಿತು. ಸೀತಮ್ಮಳ ಪುಣ್ಯ! ಅವಳ ಆಯಸ್ಸು ಗಟ್ಟಿಯಿದ್ದಿರಬೇಕು. ತಿರವಾರೂರಿನಲ್ಲಿ ಉಳಿಯದೆ ವಾಡಿಕೆಯಂತೆ ಕಾವಶ್ಯೇರಿಗೆ ಹೋಗಿಬಿಟ್ಟಿದ್ದರೆ ಏನೇನೂ ವೈದ್ಯಕೀಯ ಸೌಕರ್ಯಗಳಿಲ್ಲದ ಆ ಕುಗ್ರಾಮದಲ್ಲಿ ಅವಳು ಬದುಕುಳಿಯುತ್ತಿದ್ದದು ಅನಮಾನವೇ. ಒಂದೆರಡು … Read more

ಕೊಡೆಯ ಕಡ್ಡಿಗಳು ಮತ್ತು ಬೆಚ್ಚನೆಯ ನೆನಪು: ಸಾವಿತ್ರಿ ಹಟ್ಟಿ

ಒಂಬತ್ತು ವರ್ಷದ ಹಿಂದಿನ ನೆನಪು. ಕೊಡೆ ಹಿಡ್ಕೊಂಡು ಅವಸರದಾಗ ಹೊಂಟಾಕಿಗಿ “ಹಿ ಹೀ ಹೀ ಸಾವಿತ್ರಿ ಊಟ ಆಯ್ತಾ” ಅಂತ ಆ ಹಾಲಿನ ಚಿಗವ್ವ ಕೇಳಿದಾಗ ಅಕಿಗೆ ಉತ್ತರ ಹೇಳೂಕ್ಕಿಂತ ನನ್ನೊಳಗ ಎದ್ದ ಪ್ರಶ್ನೆಗೆ ಉತ್ರ ಹೊಳೀಲಿಲ್ಲ. ‘ಊಟಾಯ್ತಾ ಸಾವಿತ್ರಿ’ ಅಂತಷ್ಟೇ ಕೇಳಿದ್ರ ನಡೀತಿರಲಿಲ್ಲನು! ಮತ್ಯಾಕ ಈಕಿ ಅಷ್ಟೂ ಬೆಳ್ಳನ್ನ ಹಲ್ಲು ತಗದು ಹಿಹೀಹೀ ಅಂತ ನಕ್ಳು ಅಂತ ತಲಿ ಕೆರಕೊಂಡು ಆಕಿಗಿ ಉತ್ತರಿಸೂವಷ್ಟರಾಗ ಮತ್ತೆ ಕೇಳೀದ್ಲು, “ ಅಲ್ಲಾ ಸಾವಿತ್ರಿ ತುಂಬಾ ಬೆಳ್ಳಗಿದ್ದೀಯಲ್ಲಾ, ಕಪ್ಪಾಗ್ತೀನಿ ಅಂತ … Read more

ಜಾನ್ ಡನ್ – ಎರಡು ಅನುಭಾವಿಕ ಕವಿತೆಗಳು: ನಾಗರೇಖಾ ಗಾಂವಕರ

ಹದಿನಾರನೇ ಶತಮಾನ ಜ್ಞಾನ ಪುನರುಜ್ಜೀವನದ ಮೇರು ಕಾಲ. ಅದರ ಉತ್ತರಾರ್ಧದಲ್ಲಿ ಜನಿಸಿದ ಡನ್ ಜಗತ್ತಿನ ಶ್ರೇಷ್ಟ ಸಾಹಿತಿಗಳಾದ ಶೇಕ್ಸಪಿಯರ್, ಸ್ಪೆನ್ಸರ್,ಮಿಲ್ಟನ್ , ಡ್ರೈಡನ್ ಮುಂತಾದ ಪ್ರಮುಖ ಕವಿಗಳ ಸಾಲಿನಲ್ಲಿ ಕಾಣಿಸಿಕೊಂಡರೂ ಆ ರಿನೇಸ್ಸಾನ್ಸ್‍ನ ಪ್ರಭಾವಕ್ಕೆ ಸಿಲುಕಿಯೂ ಸಿಲುಕದಂತೆ ಹೊಸ ಕಾವ್ಯ ಜಗತ್ತನ್ನು ಸೃಷ್ಟಿಸಿದ. ವಿದ್ವತ್ತಿನ ಪ್ರಭಾವಕ್ಕಿಂತಲೂ ಅನುಭವದ ನೈಜ ಸಂವೇದನೆಗಳು ಆತನ ಕಾವ್ಯವನ್ನು ಪ್ರಚಲಿತಗೊಳಿಸಿದವು. ಹೊಸತನಕ್ಕೆ ತೆರೆದುಕೊಂಡಿದ್ದ ಕಾವ್ಯ ಲಹರಿ, ಪದವಿನ್ಯಾಸಗಳು, ಲಯ ಎಲ್ಲವೂ ಡನ್‍ನ ಕಾವ್ಯವನ್ನು ಅಮರಗೊಳಿಸಿದವು. ಡನ್ ಮೆಟಾಫಿಸಿಕಲ್ ಕಾವ್ಯ ಪರಂಪರೆಯ ಪ್ರಮುಖ ಕವಿ. … Read more

ಕೊರೋನಾ ವಾರಿಯರ್ಸಗೊಂದು ನಮನ : ತೇಜಾವತಿ ಹೆಚ್. ಡಿ.(ಖುಷಿ)

ಮಾನವೀಯತೆಯ ದೀಪದಲ್ಲಿ ಕರುಣೆಯ ಬತ್ತಿ ಹಚ್ಚಿ ಜ್ಯೋತಿಯಾದೆ ನೀನುಅಂತಃಕರಣದ ಮಿಡಿತದಿಂದ ಆತ್ಮವಿಶ್ವಾಸದ ಕಿರಣಬೀರಿ ಬೆಳಕಾದೆ ನೀನು ಶುಭ್ರ ಶ್ವೇತ ವಸನವನ್ನುಟ್ಟು ಸ್ವಚ್ಛ ಮನವ ತೊಟ್ಟು ರೋಗಿಗಳ ಆರೈಕೆ ಮಾಡಿ ಮರಣದ ಕದ ತಟ್ಟಿದವರಿಗೆ ಹೆಗಲಾಗಿ ಸಾಂತ್ವನ ನೀಡುವ ದಿಟ್ಟೆಯಾದೆ ನೀನು ಅಬ್ಬಬ್ಬಾ…… ಮಹಿಳೆಯರ ಒಳಹೊರಗಿನ ಮಾನಸಿಕ ಸ್ಥಿತಿಗತಿಗಳು ಅವರಿಗಷ್ಟೇ ಗೊತ್ತು. ತಮ್ಮ ಹಾದಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನೂ ಮೀರಿ ದಿಟ್ಟ ಹೆಜ್ಜೆಯನ್ನಿಟ್ಟು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಹಿಳಾಮಣಿಗಳು ಅವರಿಗೆ ಅವರೇ ಸಾಟಿ ಎನ್ನುವುದನ್ನು ತಾವು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 33 & 34): ಎಂ. ಜವರಾಜ್

-೩೩- ಕರಿ ನಾಯಿ ಕಿಂವ್ಞ್ ಕಿಂವ್ಞ್ ಅನ್ತ ಬಾಲ ಅಳ್ಳಾಡುಸ್ತ ಬಂದು ಶಂಕ್ರಪ್ಪೋರ ಕಾಲ್ನೆಕ್ಕಕ ಶುರು ಮಾಡ್ತು ಈ ಶಂಕ್ರಪ್ಪೋರು ಬಂದು ಕುಂತು ಎಸ್ಟೊತ್ತಾಯ್ತು ಈ ಅಯ್ನೋರ್ ನಿದ್ದ ಮುಗಿನೇ ಇಲ್ಲ.. ತ್ವಾಟದ ಬೇಲಿ ಇಣುಕುದ್ರ ಊರೊಳಗ ತಮ್ಟ ಸದ್ದು ಜೋರಾಯ್ತು ಜೊತ್ಗ ಬೆಳಕೂ ಹರಿತು. ಈ ಅಯ್ನೋರು ಈಗ ಈಚ ಬಂದು ಮೈ ಮುರಿತಾ… ಆಕುಳುಸ್ತಾ ಕಣ್ಣಾಡುಸ್ತ ಕಣ್ಣಾಡುಸ್ತ ಕಲ್ಲಾಸಿನ ಮ್ಯಾಲ ಶಂಕ್ರಪ್ಪೋರು ಕುಂತಿರದ ನೋಡುದ್ರು ಈ ಅಯ್ನೋರು, ‘ಹ್ಞು ಈಗ ಗ್ಯಾನ ಬತ್ತಾ’ ‘ನಾನೇನು … Read more

ಗೆಳೆಯನಲ್ಲ (ಭಾಗ 3): ವರದೇಂದ್ರ ಕೆ.

(5) ಆ ದಿನ ರಾತ್ರಿ, ಸಂಪತ್ಗೂ ರಿಪ್ಲೈ ಮಾಡದೆ ಅತೀವ ದುಃಖದಿಂದ ಮಲಗಿಬಿಟ್ಟಳು. ಮರುದಿನ ಎದ್ದು, ತಲೆ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ, ಆದ ದುರ್ಘಟನೆಯನ್ನು ನೆನೆದು ಕಣ್ಣೀರಾದಳು. ಮುಖ ಸಪ್ಪೆ, ಕಣ್ಣುಗಳಲ್ಲಿ ಕಾಂತಿ ಇಲ್ಲ. ಮದುವೆ ಆಗುವ ಹುಡುಗಿಗೆ ಇರುವ ಲವಲವಿಕೆ ಇಲ್ಲ. ತವರು ಮನೆ ಬಿಟ್ಟು ಹೋಗುವ ದುಃಖ ಇರಬಹುದೆಂದು ಎಲ್ಲರೂ ಸುಮ್ಮನಾದರು. ಸಂತೋಷ್ ನಿಂದ ಮೆಸೇಜೂ ಇಲ್ಲ, ಕರೆನೂ ಇಲ್ಲ. ಎಂದಿನಂತೆ ಸಂಪತ್ನ ಜೊತೆ ಮಾತನಾಡುತ್ತಿದ್ದರೂ, ಮನಸಲ್ಲಿ ಮಾತ್ರ ಮೋಸ ಮಾಡುತ್ತಿರುವೆನೆಂಬ … Read more