ಗಜಲ್: ಜಯಶ್ರೀ.ಭ.ಭಂಡಾರಿ
ಗಜಲ್ 1 ಸುಂದರ ವದನ ಇಂದೇಕೆ ಬಾಡಿದೆ ಹೇಳು ಗೆಳತಿಕಣ್ಣುಗಳಲ್ಲಿ ಎಂದಿನ ಕಾವ್ಯ ಕಳೆ ಇಲ್ಲ ಗೆಳತಿ ನೀಳ ನಾಸಿಕ ಅದೇಕೆ ಕೆಂಪಾಗಿದೆ ಹೇಳಲಾರೆಯಾಅಳು ನುಂಗಿ ನಗುವ ಪ್ರಮೇಯ ಯಾಕೆ ಗೆಳತಿ ಹಣೆಯ ಕಾಸಿನಗಲ ಕುಂಕುಮದಲಿ ಸಂಭ್ರಮ ನಗುತ್ತಿಲ್ಲಬಾಗಿದ ಹುಬ್ಬುಗಳಲಿ ಕಾಮನ ಬಿಲ್ಲಿನಂದ ತೋರುತ್ತಿಲ್ಲ ಗೆಳತಿ ತೊಂಡೆಯ ತುಟಿಗಳಲ್ಲಿ ಜೇನು ವಸರುವದು ಕಾಣುತ್ತಿಲ್ಲಕೆನ್ನೆಯಲ್ಲಿ ಗುಲಾಬಿ ರಂಗು ಸೊರಗಿದೆ ಏಕೆ ಹೇಳು ಗೆಳತಿ ಭರವಸೆಯಲ್ಲಿ ಬೆಳಕು ಚೆಲ್ಲುವ ನೀನೇ ಹೀಗಾದರೆ ಹೇಗೆಜುಮಕಿಯ ನಾದದಲ್ಲಿಯೂ ಅದೇಕೊ ಇಂಪಿಲ್ಲ ಗೆಳತಿ ಕಪ್ಪಾದ … Read more