ಚೈನ್ ಲಿಂಕ್ ಚತುರರು: ವಿನಾಯಕ ಅರಳಸುರಳಿ
ನೀವು ಬೆಂಗಳೂರಿಗೆ ಕೆಲವೇ ದಿನಗಳ ಕೆಳಗೆ ಹೊಸದಾಗಿ ಬಂದು ಸೇರಿಕೊಂಡಿದ್ದೀರ. ಈಗಷ್ಟೇ ಒಂದು ಕೆಲಸ ಸಿಕ್ಕಿದೆ. ಅಲ್ಲಿ ಯಾವುದೋ ರೋಡಿನ ಎಷ್ಟನೆಯದೋ ಕ್ರಾಸಿನಲ್ಲಿರುವ ನಿಮ್ಮ ರೂಮಿನಿಂದ ಆಫೀಸಿಗೆ ದಿನಾ ಬಸ್ಸಿನಲ್ಲಿ ಓಡಾಡುತ್ತಿದ್ದೀರ. ಭಾರತದ ಜ್ವಲಂತ ಸಮಸ್ಯೆಯಾದ ಜನಸಂಖ್ಯಾ ಸ್ಪೋಟದ ನೇರ ಪರಿಣಾಮದಿಂದ ಹಿಗ್ಗಮಗ್ಗಾ ರಶ್ ಆಗಿರುವ ಬಸ್ಸಿನಲ್ಲಿ ಸೊಂಟ ಬಳುಕಿದ ತೆಂಗಿನ ಮರದಂತೆ ನಿಂತು ದಿನವೂ ಪ್ರಯಾಣಿಸುತ್ತಿದ್ದ ನಿಮಗೆ ಈ ದಿನ ಇದ್ದಕ್ಕಿದ್ದಂತೆ ಸೀಟೊಂದು ಸಿಕ್ಕಿದೆ. ಬಸ್ಸಿನಲ್ಲಿ ನಿಂತಿರುವ ಉಳಿದ ಅಸಂಖ್ಯಾತ ಪ್ರಯಾಣಿಕರ ನಡುವೆ ನಿಮಗೆ ಮಾತ್ರ … Read more