ಸಾರಿ ರೀ.. ಥ್ಯಾಂಕ್ಯೂ: ಪ್ರಶಸ್ತಿ ಅಂಕಣ
ತಪ್ಪು ಮಾಡದೋರು ಯಾರವ್ರೇ, ತಪ್ಪೇ ಮಾಡದವ್ರು ಯಾರವ್ರೇ ಅಂತ ನಮ್ಮ ಜಗ್ಗೇಶ್ ಮಠ ಫಿಲ್ಮಲ್ಲಿ ಕುಣಿದಿದ್ದು ಎಲ್ರಿಗೂ ಗೊತ್ತಿದ್ದೆ. ತಿಳಿದೋ, ತಿಳೀದೆನೋ ಏನಾರೂ ತಪ್ಪು ಮಾಡ್ತಾನೆ ಇರ್ತೀವಿ. ನಮಗೆ ಸರಿಯೆನಿಸಿದ್ದು ಯಾರಿಗೋ ತಪ್ಪೆನಿಸಿ ಅವರ ಮನ ನೋಯಿಸಿರ್ತೀವಿ. ಸುಮ್ಮನೇ ತಪ್ಪೆಣಿಸಿ ಮುಗ್ದ ಮನವನ್ನ ನೋಯಿಸಿರ್ತೀವಿ. ಯಾರೋ ತಪ್ಪು ತಿಳೀಬೋದೆಂದು ತಪ್ಪಾಗಿ ಭಾವಿಸಿ ಹೇಳಬೇಕಾದ ಮಾತು, ಮಾಡಬೇಕಾದ ಕೆಲಸ ಮಾಡದೇ ತಪ್ಪೆಸಗಿರ್ತೀವಿ. ಹೀಗೇ ಹೆಜ್ಜೆ ಹೆಜ್ಜೆಗೆ ತಪ್ಪು, ಕೂತಿದ್ದು-ನಿಂತಿದ್ದು ತಪ್ಪೆಂದು ಕಾಡಿ ಎಷ್ಟೋ ಜೀವಗಳ ಕಣ್ಣೀರಿಳಿಸಿರ್ತೀವಿ. ಕೆಲವೊಮ್ಮೆಯಂತೂ ನಾವು … Read more