ಬಂಗಾರದಕ್ಕಿ ಮತ್ತು ಇತರೆಗಳು:ಅಖಿಲೇಶ್ ಚಿಪ್ಪಳಿ ಅಂಕಣ

 ವಿಟಮಿನ್ ಎ ಕೊರತೆಯಿಂದ ಪ್ರಪಂಚದಲ್ಲಿ ಪ್ರತಿವರ್ಷ ೨೦ ಲಕ್ಷ ಜನ ಸಾಯುತ್ತಾರೆ ಮತ್ತು ೫ ಲಕ್ಷ ಮಕ್ಕಳು ಕುರುಡರಾಗುತ್ತಿದ್ದಾರೆ ಎಂಬುದೊಂದು ಅಂಕಿ-ಅಂಶ. ವಿಟಮಿನ್ ಎ ಮನುಷ್ಯ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಜೀವಸತ್ವ. ವಿಟಮಿನ್ ಎ ಕೊರತೆಯು ಮುಖ್ಯವಾಗಿ ಕಣ್ಣಿನ ಮೇಲಾಗುತ್ತದೆ ಎಂಬುದು ಆರೋಗ್ಯ ವಿಜ್ಞಾನ ಕಂಡುಕೊಂಡಿರುವ ಸತ್ಯ. ಏರುತ್ತಿರುವ ಜನಸಂಖ್ಯೆ, ಬಡತನ ಇತ್ಯಾದಿ ಕಾರಣಗಳಿಂದಾಗಿ ಬಡವರ ಮಕ್ಕಳಿಗೆ ವಿಟಮಿನ್ ಎ ಕೊರತೆಯಾಗಿ ಕಾಡುತ್ತದೆ ಮತ್ತು ಇದರಿಂದಾಗಿ ಪ್ರಪಂಚದ ಮೇಲೆ ತೀವ್ರವಾದ ಪರಿಣಾಮವಾಗುತ್ತದೆ. ಹೆಚ್ಚಿನ ಬಡ ಮಕ್ಕಳು ದೃಷ್ಟಿಮಾಂದ್ಯರಾದರೆ … Read more

ರೂಪಾಯಿ, ಪೆಟ್ರೋಲು ಮತ್ತು ಸ್ವದೇಶಿ:ಪ್ರಶಸ್ತಿ ಬರೆವ ಅಂಕಣ

ರೂಪಾಯಿ ಮೌಲ್ಯ ಅಪಮೌಲ್ಯ ಆಗ್ತಾ ಆಗ್ತಾ ಅದ್ರ ಬೆಲೆ ಅರವತ್ತೆಂಟು ದಾಟಾಯ್ತು.. ಇನ್ನಾದ್ರೂ ನಾವು ಎಚ್ಚೆತ್ತಿಲ್ಲ. ಮನೆಗೊಂದು ಕಾರು, ತೆಲೆಗೊಂದು ಬೈಕು ಅಂತ ಜುಂ ಜಾಮಾಗಿರೋ ನಾವು ನಮ್ಮೀ ವೈಭವದಿಂದಲೇ ಪೆಟ್ರೋಲ್ ದರ ಗಗನಕ್ಕೇರಿರೋದು ಅಂತಲೂ ತಿಳೀತಿಲ್ಲ. ಪೆಟ್ರೋಲ್ ಬೆಲೆ ಏನಾದ್ರಾಗ್ಲಿ, ಅದ್ರಿಂದ ಡಾಲರ್ ದರ ಅರವತ್ತಲ್ಲ ನೂರು ಮುಟ್ಟಿದ್ರೂ ನಮಗೇನು ಅಂದ್ರಾ ? ಡಾಲರ್ ದರ ಹೆಚ್ಚಾದಷ್ಟೂ ಟೆಕ್ಕಿಗಳಿಗೆ, ರಫ್ತು ಮಾಡೋರಿಗೆ ಲಾಭವೇ ಅಲ್ವಾ ? ದೇಶಕ್ಕೇನಾದ್ರೆ ನಮಗೇನು ಅಂದ್ರಾ ? ! ರಫ್ತೆಂದರೆ ಚೀನಾದಂತೆ … Read more

ಪ್ರಾಣೇಶ-ಕಲ್ಲೋಳ ಹಾಸ್ಯದ್ವಯರ ಸಂಗಮ:ಗುಂಡೇನಟ್ಟಿ ಮಧುಕರ ಕುಲಕರ್ಣಿ

ಸುಮಾರು ಹತ್ತು ವರ್ಷಗಳ ಹಿಂದೆ ಹಾಸ್ಯಲೇಖಕ ಅನಂತ ಕಲ್ಲೋಳರಿಂದ ಒಂದು ಕಾಗದ ನನಗೆ ಬಂದಿತ್ತು. ನಾನೊಂದು ಕಾರ್‍ಯಕ್ರಮದಲ್ಲಿ ಯುವಕನೊಬ್ಬನ ಹಾಸ್ಯ ಭಾಷಣವನ್ನು ಕೇಳಿದೆ, ತುಂಬಾ ಚನ್ನಾಗಿ ಮಾತನಾಡುತ್ತಾರೆ. ಜನ ಬಿದ್ದು ಬಿದ್ದು ನಕ್ಕರು. ನೀವು ’ಕ್ರಿಯಾಶೀಲ ಬಳಗ’ದಿಂದ ಆ ಯುವ ಹಾಸ್ಯಭಾಷಣಕಾರನ ಕಾರ್‍ಯಕ್ರಮವನ್ನಿಟ್ಟುಕೊಳ್ಳಬೇಕು. ಬೆಳಗಾವಿ ಜನರಿಗೆ ಅವರ ಭಾಷಣವನ್ನು ಕೇಳುವ ಅವಕಾಶ ಮಾಡಿಕೊಡಿ ಎಂದು ಕಾಗದ ಬರೆದಿದ್ದರು. ಅನಂತ ಕಲ್ಲೋಳರ ಪತ್ರದಲ್ಲಿ ಬರೆದಿರುವಂತೆ ಮುಂದೆ ನಗರದ ಸಾಹಿತ್ಯ ಭವನದಲ್ಲಿ ಆ ನಗೆಭಾಷಣಕಾರನ ಭಾಷಣವನ್ನಿಟ್ಟುಕೊಂಡಿದ್ದೆವು. ಅಂದು ಸಾಹಿತ್ಯ ಭವನ … Read more

ರತ್ನನ ಪರ್ಪಂಚದಲ್ಲಿ ಉಪ್ಪಿ ಚಪ್ಪರಿಸಿದ ಉಪ್ಗಂಜಿ:ಹೃದಯಶಿವ ಅಂಕಣ

ರಾಜರತ್ನಂ ಬೀದಿಯಲ್ಲಿ ಅಡ್ಡಾಡುತ್ತಾ… ಟಿ.ಪಿ. ಕೈಲಾಸಂ ಗ್ರಾಮ್ಯಭಾಷೆಯನ್ನು ನಾಟಕಗಳಲ್ಲಿ ತಂದರೆ ಜಿ.ಪಿ. ರಾಜರತ್ನಂ ರವರು ಕಾವ್ಯಕ್ಕೆ ತಂದವರು. ಬಡತನದಲ್ಲಿ ಹುಟ್ಟಿ ಬೆಳೆದು ವಿದ್ಯಾಭ್ಯಾಸಕ್ಕಾಗಿ ಪಡಬಾರದ ಕಷ್ಟಪಟ್ಟು ಸಾಂಸಾರಿಕ ಕಷ್ಟಗಳ ನಡುವೆಯೇ ಆಶಾವಾದಿತ್ವ ಸಾರುವ ರತ್ನನ ಪದಗಳನ್ನು ರಚಿಸಿದ ರಾಜರತ್ನಂ 1904ರಲ್ಲಿ ಮೈಸೂರಿನಲ್ಲಿ ಜನಿಸಿ 1938 ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ ಇವರು 1979 ರಲ್ಲಿ ತೀರಿಕೊಂಡರು. ಶಾಂತಿ ಮೊದಲಾದ ಗ್ರಂಥಸ್ಥ ಭಾಷೆಯ ರೀತಿ ರಚನೆಗಳಿಂದ ಹೊರಬಂದು ಬೇಂದ್ರೆಯವರಂತೆ ಗ್ರಾಮೀಣ ಸೊಗಡಿನ ಸ್ಪರ್ಶದೊಂದಿಗೆ ವಿದ್ಯಾರ್ಥಿದೆಸೆಯಲ್ಲಿದ್ದಾಗಲೇ ರಾಜರತ್ನಂ ರಚಿಸಿದ 'ಯೆಂಡ್ಕುಡ್ಕ … Read more

ಮುಗ್ಧತೆ, ಭೀಕರತೆಯ ನಡುವಿನ ಬೇಲಿ:ವಾಸುಕಿ ರಾಘವನ್ ಅಂಕಣ

ಆರು ಮಿಲಿಯನ್. ಅಂದರೆ ಅರವತ್ತು ಲಕ್ಷ! ಅರವತ್ತು ಲಕ್ಷದಲ್ಲಿ ಎಷ್ಟು ಸೊನ್ನೆ ಎಂದು ಥಟ್ ಅಂತ ಕೇಳಿದರೆ ಒಂದು ಕ್ಷಣ ನೀವೂ ತಡವರಿಸುತ್ತೀರ. ಈ ಸಂಖ್ಯೆಯ ಅಗಾಧತೆ ಗೊತ್ತಾಗಬೇಕಾದರೆ ಅರವತ್ತು ಲಕ್ಷ ಜನರನ್ನು ಊಹಿಸಿಕೊಳ್ಳಿ. ಅದು ಎರಡನೇ ವಿಶ್ವಮಹಾಯುದ್ಧದಲ್ಲಿ ಬರ್ಬರವಾಗಿ ಕೊಲ್ಲಲ್ಪಟ್ಟ ಯಹೂದಿಗಳ ಸಂಖ್ಯೆ! ಒಂದು ಅಣುಬಾಂಬು ಹಾಕಿ ಅಷ್ಟೂ ಜನರನ್ನು ಕೊಂದಿದ್ದರೆ ಅದನ್ನು ಯುದ್ಧಕಾಲದ ವಿವೇಚನಾರಹಿತ ನಿರ್ಧಾರ ಅನ್ಕೊಬೋದಿತ್ತು. ಆದರೆ ವ್ಯವಸ್ಥಿತವಾಗಿ ಯಹೂದಿಗಳ ಮನೆ, ಆಸ್ತಿ ಎಲ್ಲವನ್ನೂ ವಶಪಡಿಸಿಕೊಂಡು, ಅವರನ್ನು ಸ್ಥಳಾಂತರಿಸಿ, ಸರಿಯಾಗಿ ಊಟ ಕೊಡದೇ … Read more

ಪೌಲ್ ಬುರ್ರೆಲ್ ಎಂಬ ಡಯಾನಾರ ತೆರೆಮರೆಯ ತಾರೆ: ಪ್ರಸಾದ್ ಕೆ.

ಕೆಲವೊಂದು ಮುಖಗಳೇ ಹಾಗಿರುತ್ತವೆ. ವರ್ಷಗಳು ಸಂದು ಹೋದರೂ, ಪೀಳಿಗೆಗಳು ಕಳೆದರೂ "ಐಕಾನ್" ಎನಿಸಿಕೊಳ್ಳುತ್ತವೆ. ವಿನ್ಸ್‍ಟನ್ ಚರ್ಚಿಲ್ ಸಿಗಾರ್ ಸೇದುತ್ತಾ ರಾಜಭಂಗಿಯಲ್ಲಿ ಕುಳಿತ ಕಪ್ಪು ಬಿಳುಪು ಛಾಯಾಚಿತ್ರ ಈಗಲೂ ಆ ದಂತಕಥೆಗೆ ಮೆರುಗನ್ನು ನೀಡುತ್ತದೆ. ಮರ್ಲಿನ್ ಮನ್ರೋರ ಮಾದಕ ನಗುಮುಖಕ್ಕೆ ಮರ್ಲಿನ್ ಮನ್ರೋರೇ ಸಾಟಿ. ಇಂತಹ ವಿಶಿಷ್ಟ ಮುಖಗಳ ಬಗ್ಗೆ ಮಾತನಾಡುವಾಗ ಮೊದಲಿಗೆ ಮನಸ್ಸಿನಲ್ಲಿ ಹಾದುಹೋಗುವ ಚಿತ್ರ ಬ್ರಿಟನ್ನಿನ ರಾಜಕುಮಾರಿ ಡಯಾನಾರದ್ದು. ಪ್ರಪಂಚದಲ್ಲೇ ಅತೀ ಹೆಚ್ಚು ಬಾರಿ ಛಾಯಾಚಿತ್ರೀಕರಿಸಲ್ಪಟ್ಟ ಮಹಿಳೆಯೆಂದರೆ ರಾಜಕುಮಾರಿ ಡಯಾನಾ. ತನ್ನ ಜೀವಿತಾವಧಿಯಲ್ಲಿ ವಿಶಿಷ್ಟ ಕಾರ್ಯವೈಖರಿ, … Read more

ಪುಟ್ರಾಜು ಕತೆ: ಗವಿಸ್ವಾಮಿ

ಮಧ್ಯಾಹ್ನದ ಹೊತ್ತು. ಪಕ್ಕದ ಹಳ್ಳಿಯಲ್ಲೊಂದು ಕೇಸು ಮುಗಿಸಿಕೊಂಡು ವಾಪಸ್ ಬರುತ್ತಿದ್ದೆ. ಹೈವೇ ಬದಿಯಲ್ಲಿರುವ ಪುಟ್ಟರಾಜುವಿನ ಸೂರ್ಯಕಾಂತಿ ಹೊಲದಲ್ಲಿ ಐದಾರು ಮಂದಿ ಟೂರಿಸ್ಟುಗಳು  ಫೋಟೋ  ತೆಗೆಸಿಕೊಳ್ಳುತ್ತಿದ್ದರು. ಬಂಡೀಪುರ – ಊಟಿ ಕಡೆಗೆ ಹೋಗುವ  ಟೂರಿಸ್ಟುಗಳು ದಾರಿಯಲ್ಲಿ  ಎತ್ತಿನಗಾಡಿಯನ್ನು ಕಂಡರೂ ಫೋಟೊ ತೆಗೆಸಿಕೊಳ್ಳುತ್ತಿರುತ್ತಾರೆ. ಗಾಡಿ ಮೇಲೆ ಕೂತ ರೈತನಿಗೆ ಒಂಥರಾ ಬೆರಗು! ಪಾಪ ಅವರ ಕಡೆ ಇದೆಲ್ಲಾ ನೋಡೋದಿಕ್ಕೆ ಸಿಗೋದಿಲ್ವೇನೋ ಅಂದುಕೊಂಡು ಖುಷಿಯಿಂದ ಪೋಸು ನೀಡುತ್ತಾನೆ. ಇನ್ನು ಕೆಲ ಟೂರಿಸ್ಟರು ಆಲದ ಮರದ ಬೀಳಲುಗಳನ್ನು ಹಿಡಿದು ಜೋತಾಡುವ ತಮ್ಮ ಮಕ್ಕಳನ್ನು ನೋಡುತ್ತಾ ರಿಲ್ಯಾಕ್ಸ್ ಆಗುತ್ತಿರುತ್ತಾರೆ. … Read more

ಕಾಣದ ಕರಡಿ: ದೊಡ್ಡಮನಿ.ಎಂ.ಮಂಜುನಾಥ

ನೂರೆಂಟು ತೂತು ಬಿದ್ದು ಹರಿದ ಬನಿಯನ್ ಹಾಕಿಕೊಂಡು, ಕಿತ್ತು ಹೋದ ಹವಾಯಿ ಚಪ್ಪಲಿಗೆ ಪಿನ್ನು ಹಾಕುತ್ತ, ಮನೆಯ ಅಂಗಳದಲ್ಲಿ ಕೂತಿದ್ದ ಬಳೆಗಾರ ಶಿವಪ್ಪನಿಗೆ ಕುಂಟ್ಲಿಂಗ ಒಂದೇ ಉಸಿರಿನಲ್ಲಿ ಕುಂಟಿಕೊಂಡು ತನ್ನತ್ತ  ಓಡಿ ಬರುವುದನ್ನು  ಕಂಡೊಡನೆ ಮನಸಿಗೆ  ಗಲಿಬಿಲಿಯಾಯಿತು. ಎದೆ ಉಸಿರು ಬಿಡುತ್ತ ನಿಂತ ಕುಂಟ ಲಿಂಗನನ್ನು ಎದ್ದು ನಿಂತು ಏನಾಯ್ತೋ ಕುಂಟ್ಯ ಹಿಂಗ್ಯಾಕ್ ಓಡಿ ಬಂದಿ ? ಎನ್ನುವಷ್ಟರಲ್ಲಿ ಸರೋಜಳ ಸಾವಿನ ವಿಷಯವನ್ನು ಸರಾಗವಾಗಿ ಕುಂಟ ಲಿಂಗ ಒದರಿಬಿಟ್ಟ, ಇದನೆಲ್ಲ ಕೇಳುತ್ತಾ ಕುಸಿದು ಬೀಳುವಷ್ಟು ನಿಶ್ಯಕ್ತನಾದರು ತಡ ಮಾಡದೆ ಉಕ್ಕಿ ಬರುವ ದುಃಖವನ್ನು ನುಂಗಿ ಇವ ಹೇಳಿದ್ದೆಲ್ಲಾ ಸುಳ್ಳಾಗಲಿ ಎಂದು ಇದ್ದ ಬದ್ದ ದೇವರನೆಲ್ಲ ನೆನಪಿಸಿಕೊಳ್ಳುತ್ತಾ … Read more

ಅಪಘಾತುಕಗಳು: ಸಚಿನ್ ಎಂ. ಆರ್.

  “ಏನ್ ಜನಗಳೋ ಏನೋ? ಮನುಷ್ಯತ್ವದ ಒಂದು ತುಣುಕಾದ್ರೂ ಬೇಡವಾ? ಅವರ ಮೂತಿಗಿಷ್ಟು ಬರೇ ಹಾಕಾ.. ಅವರ ಪಿಂಡ ಏಲಿಯನ್ ನೆಕ್ಕಾ.. ನಾನೇನಾದ್ರೂ ದೇವರಾಗಿದ್ರೆ, ನನ್ನತ್ರ ಏನಾದ್ರೂ ಸೂಪರ್ ನ್ಯಾಚುರಲ್ ಪವರ್ ಇದ್ದಿದ್ರೆ ಆಗ ತೋರಿಸ್ತಿದ್ದೆ ನನ್ನ ಕೆಪ್ಯಾಸಿಟಿನ, ಈಗಲೂ ನೆನಸ್ಕೊಂಡ್ರೆ ಎಲ್ಲೆಲ್ಲೋ ಉರಿತದೆ..” ಹೀಗೆ ಎರ್ರಾಬಿರ್ರಿ ಬೈಗುಳಗಳ ಸುರಿಮಳೆ ಸುರಿಸ್ತಾ ಇದ್ದ ನಮ್ಮ ಡೊಂಕೇಶ. ನಾನೂ ನಮ್ಮ ಕ್ರಾಕ್ ಬಾಯ್ ಇಬ್ಬರೂ ಲೆಮನ್ ಟೀ ಕುಡೀವಾ ಅಂತ ಹೋದೋರು, ಅಲ್ಲಿಯೇ ಇದ್ದ ನಮ್ಮ ಡೊಂಕೇಶನ ಆರ್ಭಟ … Read more

ಕಣ್ಣಂಚಿನ ಪ್ರೀತಿ:ಸುಮನ್ ದೇಸಾಯಿ ಅಂಕಣದಲ್ಲಿ ಕತೆ

 ನನ್ನ ಮಕ್ಕಳ ಕ್ರಿಸ್ ಮಸ್ ಸೂಟಿ ಶೂರು ಆಗಿದ್ವು. ಹದಿನೈದ ದಿನಾ ರಜಾ ಇದ್ವು. ನನ್ನ ಮಕ್ಕಳಿಬ್ಬರು ಎಲ್ಲೆರೆ ಪ್ರವಾಸಕ್ಕ ಹೋಗೊಣ ಅಂತ ಗಂಟಬಿದ್ದಿದ್ರು. ನನ್ನ ಮಗಳು "ಅಮ್ಮಾ ಗೋವಾಕ್ಕ ಹೋಗೊಣು ಅಲ್ಲೆ ಕ್ರಿಸ್ ಮಸ್ ಹಬ್ಬಾನ ಭಾಳ ಮಸ್ತ ಸೆಲೆಬ್ರೇಟ್ ಮಾಡತಾರಂತ, ಮತ್ತ ಗೋವಾದಾಗ ಬೀಚನ್ಯಾಗ ಮಸ್ತ ಆಟಾನು ಆಡಬಹುದು" ಅಂದ್ಲು. ಪ್ರೀತಿ ಮಗಳು ಕೇಳಿದ್ದನ್ನ ಇಲ್ಲಾ ಅನ್ಲಿಕಾಗ್ಲಿಲ್ಲಾ ನಾ ಯೆಸ್ ಅಂದೆ. ಇನ್ನ ಹೆಂಡತಿ ಡಿಸೈಡ ಮಾಡಿದ್ದನ್ನ ಬ್ಯಾಡ ಅನ್ಲಿಕ್ಕೆ ಸಾಧ್ಯನ ಇಲ್ಲಂತ ನಮ್ಮನಿಯವರನು … Read more

ನಾಟಕಕಾರರಾಗಿ ಕುವೆಂಪು (ಭಾಗ-18) : ಹಿಪ್ಪರಗಿ ಸಿದ್ದರಾಮ್, ಧಾರವಾಡ

    ಬಲಿದಾನ (1948) : ಆತ್ಮೀಯ ಓದುಗಪ್ರಭುಗಳೇ,   ಹಿಂದಿನ ಸಂಚಿಕೆಯಲ್ಲಿ ಮಹಾಕವಿಗಳ ‘ಬಲಿದಾನ’ ರಂಗಕೃತಿಯ ಎರಡು ದೃಶ್ಯಾವಳಿಗಳ ಕುರಿತು ತಿಳಿದುಕೊಂಡಿದ್ದೇವೆ. ಆರಂಭದ ದೃಶ್ಯದಲ್ಲಿ ಹಾಳುಬಿದ್ದ ಕತ್ತಲುಗವಿದಿರುವ ಕಾಳಿಕಾ ಮಂದಿರದಲ್ಲಿ ಭರತಸುತನು ನೋವು-ನಿರಾಶೆ-ಹತಾಶೆ ಭಾವಗಳಿಂದ ಮಲಗಿಕೊಂಡಿರುವಾಗ ಭಾರತಾಂಬೆಯು ಪ್ರತ್ಯಕ್ಷಳಾಗಿ, ಪರಿಚಯಿಸಿಕೊಂಡು ತನಗೊದಗಿರುವ ಸ್ಥಿತಿಯನ್ನು ವಿವರಿಸುತ್ತಾಳೆ. ತನ್ನನ್ನು ಈ ಬಂಧನದ ಸಂಕೋಲೆಗಳಿಂದ ಬಿಡಿಸಬೇಕಾದರೆ ಅದರ ಕೀಲಿಕೈ ಮಿತ್ರರಾಗಿ ಆಗಮಿಸಿ ಆಕ್ರಮಿಸಿಕೊಂಡಿರುವವರ ಹತ್ತಿರವಿದೆ. ಅದನ್ನು ತೆಗೆದುಕೊಂಡು ಬರಲು ಹೇಳುತ್ತಾಳೆ. ಅದರಂತೆ ಭರತಸುತನು ಹೊರಡುತ್ತಾನೆ. ಮುಂದಿನ ದೃಶ್ಯದಲ್ಲಿ ಹಾಳುಬಿದ್ದ ಕಾಳಿಕಾ … Read more

ಕೆಂಗುಲಾಬಿ (ಭಾಗ 9): ಹನುಮಂತ ಹಾಲಿಗೇರಿ

ಇಲ್ಲಿಯವರೆಗೆ ಆ ಕಡೆಯಿಂದ ಒಮ್ಮಿಂದೊಮ್ಮೆಲೆ ಗಲಾಟೆ ಶುರುವಾಯಿತು. ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಕರ್ಚೀಫ್ ಅಂಗಡಿಯವನು ಕರ್ಚೀಫ್‍ಗಳೆಲ್ಲವನ್ನು ಬಾಚಿ ಎದೆಗೊತ್ತಿ ಓಡತೊಡಗಿದ. ಬಾಚಣಿಕೆ, ಕನ್ನಡಿ, ಬ್ರಷ್, ಸೀರಣಿಗೆ ಮಾರುತ್ತಿದ್ದ ಸಲೀಮ ಹರವಿದ್ದ ಪ್ಲಾಸ್ಟಿಕ್ ಕವರನ್ನೆ ಮಡಚಿ ಬಗಲಲ್ಲಿಟ್ಟುಕೊಂಡು ಮೆಲ್ಲನೆ ಕಾಲುಕಿತ್ತ. ಅದೆಲ್ಲೆಲ್ಲಿಂದಲೋ ಹೊಂದಿಸಿದ್ದ ಸೆಕೆಂಡ್ ಹ್ಯಾಂಡ್ ಚಪ್ಪಲಿಗಳನ್ನು ರಾಶಿ ಹಾಕಿ ಹರಾಜು ಹಾಕುತ್ತಿದ್ದ ರಾಜು ಒಂದೇ ಉಸಿರಿಗೆ ಗೋಣಿ ಚೀಲಕ್ಕೆ ಎಲ್ಲಾ ಚಪ್ಪಲಿಗಳನ್ನು ತುರುಕಿ ಹೊರಲಾರದೆ ಹೊತ್ತು ಅವಸರದಿಂದ ನಡೆಯತೊಡಗಿದ. ಎಲ್ಲವೂ ಕ್ಷಣಾರ್ಧದಲ್ಲಿಯೇ ನಮ್ಮ ಕಣ್ಮಂದೆ ನಡೆಯುತ್ತಿತ್ತು. … Read more

ಮೂವರ ಕವಿತೆಗಳು: ಶಿವು.ಕೆ, ನಾಗೇಶ ಮೈಸೂರು, ಸತೀಶ್ ರೆಡ್ಡಿ

  ಒಪ್ಪಿಕೊಳ್ಳಬೇಕಷ್ಟೆ… ತಪ್ಪು ಹಣವನ್ನು ಕೊಟ್ಟ ಎಟಿಎಂ ಯಂತ್ರವನ್ನು ಏಕೆಂದು ಪ್ರಶ್ನಿಸಲಾಗುವುದಿಲ್ಲ ಆ ಕ್ಷಣದಲ್ಲಿ ಏನೂ ಮಾಡೋಕೆ ಆಗೋಲ್ಲ ಒಪ್ಪಿಕೊಳ್ಳಬೇಕಷ್ಟೆ….   ಬೇಡದ ಕೆಂಪು ಹಳದಿ ಮಳೆ ಸುರಿಸಿದ ಮೋಡಗಳಿಗೆ ಅದನ್ನು ವಾಪಸ್ ಕಳಿಸಲಾಗುವುದಿಲ್ಲ ಆ ಕ್ಷಣದಲ್ಲಿ ಏನೂ ಮಾಡೋಕೆ ಆಗೋಲ್ಲ ಒಪ್ಪಿಕೊಳ್ಳಬೇಕಷ್ಟೆ….   ಮುಂಜಾನೆ ನಾಟ್ ರೀಚಬಲ್ ಆದ ಪೇಪರ್ ಬೀಟ್ ಹುಡುಗರನ್ನು ಹುಡುಕಿದರೆ ಸಿಗುವುದಿಲ್ಲ ಆ ಕ್ಷಣದಲ್ಲಿ ಏನೂ ಮಾಡೋಕೆ ಆಗೋಲ್ಲ ಒಪ್ಪಿಕೊಳ್ಳಬೇಕಷ್ಟೆ…   ತಪ್ಪು ತಪ್ಪು ಅಕ್ಷರಗಳ ಇಂಕನ್ನು ಬಾಲ್ ಪೆನ್ನಿಗೆ  ಕಾಗದದಿಂದ … Read more

ಸಂಬಂಧಗಳು ಆರೋಗ್ಯಕರವಾಗಿ ಅರಳಲಿ, ಉಳಿಯಲಿ, ಬೆಳೆಯಲಿ ಎಂಬ ಆಶಯದಿಂದ: ನಟರಾಜು ಎಸ್. ಎಂ.

ಒಬ್ಬ ವ್ಯಕ್ತಿಗೆ ಮದುವೆಯಾಗಿತ್ತು. ಎದೆ ಎತ್ತರಕ್ಕೆ ಬೆಳೆದ ಮಗನೂ ಇದ್ದ. ನೌಕರಿಯ ನಿಮಿತ್ತ ಬೇರೊಂದು ಊರಿಗೆ ವರ್ಗಾವಣೆಯಾಗಿ ಬರುವಾಗ ಹೆಂಡತಿ ಮಕ್ಕಳನ್ನು ತನ್ನೂರಿನಲ್ಲೇ ಬಿಟ್ಟು ಬಂದಿದ್ದ. ಹೊಸ ಊರು, ಹೊಸ ಆಫೀಸ್, ಹೊಸ ಜನಗಳ ನಡುವೆ ಒಂದು ಹುಡುಗಿ ಹೇಗೋ ಈ ಸಂಸಾರಸ್ಥನ ಕಣ್ಣಿಗೆ ಬಿದ್ದಿದ್ದಳು. ಆತನ ವಯಸ್ಸು ಸುಮಾರು 46. ಆಕೆಗೆ ಕೇವಲ 26 ವರ್ಷ ವಯಸ್ಸು. ಒಂದೇ ಆಫೀಸಿನಲ್ಲಿ ಇಬ್ಬರು ನೌಕರರಾಗಿದ್ದ ಕಾರಣ ಇಬ್ಬರಿಗೂ ಸ್ನೇಹವಾಯಿತು. ಸ್ನೇಹ ಪ್ರೇಮಕ್ಕೆ ತಿರುಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ. … Read more

ಸೂಪರ್ ಗಾಡ್ ಸಣ್ಣಯ್ಯ (ಕಥೆ): ಹೃದಯಶಿವ ಅಂಕಣ

  "ಸಿಸುಮಗನೇ ನಾನೇಳಿದಷ್ಟು ಮಾಡು. ನಿಂಗೆ ಒಳ್ಳೇದಾಗ್ಲಿಲ್ಲ ಅಂದ್ರೆ ನನ್ನೆಸ್ರು ಬದಲಾಯಿಸಿಕೊಳ್ತೀನಿ" ಎಂದು ಮೈಮೇಲೆ ಬಸಪ್ಪದೇವರು ಬಂದಿದ್ದ ಸಣ್ಣಯ್ಯ ಹೇಳಿದಾಗ ಸುತ್ತ ನೆರೆದಿದ್ದ ರಾಗಿದೊಡ್ಡಿಯ ಜನ ದೂಸ್ರಾ ಮಾತಾಡದೆ ಕೈ ಮುಗಿದರು. ನಾವೆಲ್ಲಾ ಅದನ್ನು ನೋಡಿ ಕಂಗಾಲಾದೆವು. ಅಷ್ಟೊತ್ತಿಗಾಗಲೇ ಸಣ್ಣಯ್ಯ ತನ್ನೆದುರು ಬಿಡಿಸಿದ್ದ ರಂಗೋಲಿಯನ್ನು ತನ್ನ ಬಲಗೈಯಿಂದ ಉಜ್ಜಿ ಉಜ್ಜಿ ಚುಕ್ಕಿ ಹಾಗೂ ಗೆರೆಗಳ ಗುರ್ತು ಸಿಗದಂತೆ ಮಾಡಿ ಆರ್ಭಟಿಸಿದ್ದ. ಸಗಣಿ ಉಂಡೆಯ ಮೇಲಿದ್ದ ಮಣ್ಣಿನ ದೀಪ ಆಕಳಿಸುತ್ತಿತ್ತು. ನಾವು ತೂಕಡಿಸುತ್ತಿದ್ದೆವು. ಸಣ್ಣಯ್ಯ ಕಡೆಗೂ 'ಅರಾ ಅರಾ … Read more

ಕೆಂಗುಲಾಬಿ (ಭಾಗ 8): ಹನುಮಂತ ಹಾಲಿಗೇರಿ

ಹಿಂದಿನ ಸಂಚಿಕೆಯಿಂದ… ಸುಮಾರು ಮುಕ್ಕಾಲು ಗಂಟೆ ಕಳೆದಿರಬಹುದು. ಏಳೆಂಟು ವರ್ಷದ ಹುಡುಗಿ ಏದುಸಿರು ಬಿಡುತಾ ಓಡೋಡಿ ಬಂದು ನನ್ನನ್ನು ಹೌದು ಅಲ್ಲವೋ ಎಂದು ಅನುಮಾನಿಸುತಾ "ಅಂಕಲ್ ಅವ್ವ ಕರಿತಿದಾರೆ" ಎಂದಿತು. ನಾನು ಆ ಮಗುವನ್ನು ಹಿಂಬಾಲಿಸುತ್ತಾ ಮಾತಿಗಿಳಿದೆ. ’ಪುಟ್ಟಿ ನಿನ್ನ ಹೆಸರು?’ ’ರಾಜಿ’ ಎಂದಿತು ನಾಚಿಕೊಂಡು. ’ನಿಮ್ಮ ಪಪ್ಪಾ ಎಲ್ಲಿದ್ದಾರೆ ರಾಜಿ?’ ’ಗೊತ್ತಿಲ್ಲ, ನಾ ಸಣ್ಣವಳಿದ್ದಾಗ ದಿನ ಕುಡಿದು ಬಂದು ಮಮ್ಮಿನ ಹೊಡಿತಿದ್ರು. ಆಗ ಅವ್ವ ಅಳತಿದ್ಲು. ಈಗೆಲ್ಲಿದ್ದಾರೋ ಗೊತಿಲ್ಲ. ಆದರೆ ಈಗ ದಿನಾಲೂ ಮನೆಗೆ ಹೊಸ … Read more

ಪ್ರತಿಭಾನಂದಕುಮಾರ್ ಅವರೊಂದಿಗೆ ಸಂದರ್ಶನ: ನಳಿನ ಡಿ.

ಓರ್ವ ಲೇಖಕಿಯಾಗಿ ನಿಮ್ಮನ್ನು ಬೆಳೆಸಿದ ಅಂಶಗಳು ‘ನಾವು ಹುಡುಗಿಯರೇ ಹೀಗೆ’ ಎಂದು ಪ್ರಜಾವಾಣಿಗೆ ಬರೆದೆ ಅದು ಪ್ರಕಟ ಆಯ್ತು.  ಅದು ‘ಓವರ್ ನೈಟ್ ಸೆಲೆಬ್ರಿಟಿ’ ಮಾಡಿತ್ತು.  ಇದುವರೆಗೂ ಅದರ ಪ್ರಭಾವ ಇದೆ, ಆಮೇಲೆ ಬರೆದಂತ ಹುಡುಗಿಯರು ತುಂಬಾ ಜನ ಅದೇ ಶೈಲಿಯಲ್ಲಿ ಬರೆಯಲು ಶುರು ಮಾಡಿದರು.  ಎರಡು ಪೀಳಿಗೆ ಹುಡುಗಿಯರು ಆದ ಮೇಲೆ, ಈಗ ಮೂರನೇ ಪೀಳಿಗೆ ಆಗಿದೆ.  ಶ್ರೀನಿವಾಸ ರಾಜು, ಹೆಚ್. ಎಸ್. ರಾಘವೇಂದ್ರ ಇವರು ನಮ್ಮ ಮೇಷ್ಟ್ರು, ಇದನ್ನೆಲ್ಲಾ ಸೇರಿಸಿ, ಮುದ್ದಣ್ಣ ಪ್ರಶಸ್ತಿ ಗೆ … Read more

ಕಾಬೂಲಿನ ಕಥೆ: ನಟರಾಜ್ ಕಾನುಗೋಡು

ಇದು ನಾನು ಯೂರೋಪಿನ “1tv” ಕಾಬೂಲ್ ಬ್ರಾಂಚಿನಲ್ಲಿ ಕೆಲಸ ಮಾಡುವಾಗಿನ ಘಟನೆ. ನನಗೆ ಕಾಬೂಲ್ ತುಂಬಾ ಅಮೇರಿಕಾ ಹಾಗೂ ಯುರೋಪ್ ಸೈನಿಕರು ಎಲ್ಲೆಲ್ಲೂ ಕಾಣುತ್ತಿದ್ದರು. ಅಗ ನಾನು ಕಬೂಲಿಗೆ ಬಂದ ಹೊಸತು. ನನಗೆ ಏಕೋ ತಾಲಿಬಾನ್ ಮುಖ್ಯಸ್ಥನನ್ನು ಖುದ್ಧಾಗಿ ಭೆಟ್ಟಿಯಾಗುವ ಮನಸ್ಸಾಯಿತು. ನಾನು ಕೆಲಸ ಮಾಡುತ್ತಿರುವ ಚಾನೆಲ್ ಮುಖ್ಯಸ್ಥರನ್ನು ಕೇಳಿದೆ. ನಿರಾಶಾದಾಯಕ ಉತ್ತರ ದೊರೆಯಿತು. ಮತ್ತು ನನಗೆ ಅವರನ್ನು ಭೆಟ್ಟಿ ಆಗಲು ಅವಕಾಶ ನಿರಾಕರಿಸಲಾಯಿತು. ಕಾರಣ ಒಮ್ಮೆ ಅಲ್ಲಿಗೆ ಅವರ ಸಂದರ್ಶನಕ್ಕೆಂದು ಹೋದ ಯೂರೋಪಿನ ಒಬ್ಬ ವರದಿಗಾರ … Read more