ಚಕ್ರ: ಡಾ. ಗವಿಸ್ವಾಮಿ

''ತಾಯವ್ವಾ'' ''ಇನ್ನೂ ಆಗಿಲ್ಲ ಕ ನಿಂಗಿ ..  ತಿರ್ಗಾಡ್ಕಂಡ್ ಬಾ ಹೋಗು'' ''ಆಗಿದ್ದದೇನೋ ಅಂದ್ಕಂಡು ಕೇಳ್ದಿ ಕನ್ನೆವ್ವಾ … ಇಲ್ಲೇ ಕೂತಿರ್ತಿನಿ ತಕ್ಕಳಿ'' ಒಳಗೆ ಪೇಪರ್ ಒದುತ್ತಾ ಕೂತಿದ್ದವನು ನಿಂಗಿಯ ಸದ್ದು ಕೇಳಿ ಆಚೆ ಬಂದೆ. ಆವತ್ತು ಗೌರಿ ಹಬ್ಬ. ಹಬ್ಬಹರಿದಿನಗಳಂದು ಹೊಲಗೇರಿಯ ನಿಂಗಿ ನಮ್ಮ ಕೇರಿಯ ಮನೆಗಳಿಗೆ ಬಂದು ಊಟ ತಿಂಡಿ ಹಾಕಿಸಿಕೊಂಡು ಹೋಗುವುದು ಮಾಮೂಲು. ಆವತ್ತು ಎಂದಿನಂತೆ ಅದೇ ಹಳೆಯ  ಬಿದಿರಿನ ಪುಟ್ಟಿಯೊಂದಿಗೆ ಪಡಸಾಲೆಯ ಕೆಳಗಿನ ಮೆಟ್ಟಿಲುಗಳ ಮೇಲೆ ಕೂತಿದ್ದಳು. ಚಪ್ಪಲಿಗಳನ್ನು ಅಡ್ಡಾದಿಡ್ಡಿಯಾಗಿ ಬಿಟ್ಟಿದ್ದರಿಂದ … Read more

ವಾಯೇಜರ್ ಗಗನ ನೌಕೆಗಳು – ೩೬ ವರ್ಷಗಳ ಕಾಲ ೧೯೦೦ ಕೋಟಿ ಕಿ.ಮೀ ದೂರ ಪಯಣ: ಜೈಕುಮಾರ್.ಹೆಚ್.ಎಸ್.

ವಾಯೇಜರ್ ಗಗನನೌಕೆಗಳ ಪಯಣ: ೧೯೭೭ರಲ್ಲಿ ಅಮೇರಿಕಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ನಾಸಾ) ’ವಾಯೇಜರ್ ೧’ ಮತ್ತು ಅದರ ಅವಳಿ ಗಗನನೌಕೆ ’ವಾಯೇಜರ್ ೨’ ಹೆಸರಿನ ಎರಡು ಗಗನನೌಕೆಗಳನ್ನು ೧೬ ದಿನಗಳ ಅಂತರದಲ್ಲಿ ಗಗನಕ್ಕೆ ಹಾರಿಬಿಟ್ಟಿತು. ಇವೆರಡೂ ಇನ್ನೂ ತಮ್ಮ ಪಯಣವನ್ನು ಮುಂದುವರೆಸುತ್ತಾ ಸೌರವ್ಯೂಹದಾಚೆಗಿನ ಮಾಹಿತಿಯನ್ನು ನಮಗೆ ರವಾನಿಸುತ್ತಲೇ ಇವೆ. ಇವೆರಡೂ ಗಗನನೌಕೆಗಳು ಮೊದಲಿಗೆ ಗುರು ಮತ್ತು ಶನಿ ಗ್ರಹವನ್ನು ಹಾದು ಹೋಗಿ ನಂತರದಲ್ಲಿ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ಹಾದು ಮುಂದೆ ಹೋಗಿವೆ. ಇಲ್ಲಿಂದಾಚೆಗೆ ಅಂತರನಕ್ಷತ್ರ ಪ್ರದೇಶವಿದೆ. … Read more

ಮೂವರ ಕವಿತೆಗಳು: ಮಂಜು ಹಿಚ್ಕಡ್, ಸುನೀತಾ ಮಂಜುನಾಥ್, ದಿಲೀಪ್ ರಾಥೋಡ್

ಮತ್ತೆ ಕಟ್ಟಲಾದಿತೇ ರಾಮರಾಜ್ಯ! ಹುಚ್ಚೆದ್ದು ಕುಣಿಯುತಿದೆ ನಾಡಿನ ಜನತೆ. ಮರೆಯಾಗಿ ಹೋಗುತಿದೆ ಒಲವಿನ ಒರತೆ.   ಇತ್ತ ರೋಡಲಿ ಕಾರು ಅತ್ತ ಬಾರಲಿ ಬೀರು ಎಲ್ಲಿ ನೋಡಿದರಲ್ಲಿ ಹಣದ ಕಾರುಬಾರು.   ಮಾನಕ್ಕೆ ಬೆಲೆಯಿಲ್ಲ ಮಾನವಂತರು ಇಲ್ಲ. ಆಗಿಹುದು ನಾಡು, ಸುಡುಗಾಡು ಎರಡು ಮಾತಿಲ್ಲ.   ಹಣಕಾಗಿ ಜನ ಮರಳು ಹಣಕಾಗಿ ಜಾತ್ರೆ ಮರಳು. ಮರೆತು ಹೋಗಿದೆ ಇಂದು ಮಾನವತೆಯ ತಿರುಳು.   ದ್ವೇಷದ ದಳ್ಳುರಿಯಲ್ಲಿ ಪ್ರೀತಿ ಹೋಗಿದೆ ಸೋತು. ಪ್ರೀತಿ-ಪ್ರೇಮ ಎನ್ನುವುದು ಮರೀಚಿಕೆಯ ಮಾತು.   … Read more

ಟೆಲಿಪತಿ: ಪ್ರಶಸ್ತಿ ಅಂಕಣ

ಪೀಠಿಕೆ:ನಂಬಿಕೆ-ಮೂಡನಂಬಿಕೆಗಳ ನಡುವಿನ ವಾದ ಪ್ರತಿವಾದಗಳೇನೇ ಇರ್ಲಿ. ವಿಜ್ಞಾನದ ಸೂಕ್ಷ್ಮದರ್ಶಕಗಳ , ಪರೀಕ್ಷಾ ವಿಧಾನಗಳ ಕಣ್ಣಿಗೆ ಕಂಡಿದ್ದು ಮಾತ್ರ ಸತ್ಯ ಅನ್ನೋ ವೈಜ್ಞಾನಿಕರು, ನಮ್ಮಲ್ಲಿನ ವಸ್ತು, ವಿದ್ಯೆ, ಜ್ಞಾನಗಳನ್ನೆಲ್ಲಾ ಅವಲಕ್ಷಿಸುತ್ತಿದ್ದಾರೆ ಎಂದು ಅಲವತ್ತುಕೊಳ್ಳೋ ಪ್ರಾಚೀನರಿಗೂ ಇಂದಿನ ಮಹಾನ್ ಜ್ಞಾನಿ ಬುದ್ದಿಜೀವಿಗಳಿಗೂ ನಡುವೆ ನಡೀತಿರೋ ಸಂಘರ್ಷಗಳೇನೇ ಇದ್ರೂ ಕೆಲವೊಮ್ಮೆ ಈ ಮನಸ್ಸು ಅನ್ನೋದು ಯಾರ ಊಹೆಗೂ ನಿಲುಕದಂತೆ ವರ್ತಿಸುತ್ತಿರುತ್ತೆ. ನಾವು ಫೋನ್ ಮಾಡ್ಬೇಕು ಅಂತಿದ್ದಾಗಲೇ ಆತ್ಮೀಯರೊಬ್ಬರು ಫೋನ್ ಮಾಡೋದು, ಗೆಳತಿಯ ಹತ್ರ ನಾವೇನೋ ಮಾತಾಡಬೇಕು ಅಂತಿರುವಾಗ ಅವಳೇ ಅದ್ರ ಬಗ್ಗೆ … Read more

ಹದಿನೈದು ವರ್ಷದ ಹಳೆಯ ಗೆಳತಿಯೊಂದಿಗೆ ಒಂದು ಸಂಜೆ: ಅಮರ್ ದೀಪ್ ಪಿ. ಎಸ್.

  ಹಿಂದಿನ ದಿನ ಆಕೆ ಒಬ್ಬ ಗೆಳತಿ ಮನೆಗೆ ಹೋಗಿದ್ದಳಂತೆ..  ಮಾತಿನ ನಡುವೆ   "ಮನೆ ಕೆಲಸ, ಮಕ್ಕಳು,  ಟಿ ವಿ. ಸಿರಿಯಲ್ಲು,   ಯಾವುದರಲ್ಲೂ ಮನಸ್ಸು ವಾಲುತ್ತಿಲ್ಲ, ಖುಷಿಯಾಗಿ ತೊಡಗಿಸಿ ಕೊಳ್ಳಲು ಆಗುತ್ತಿಲ್ಲ,  ಯಾಕೋ ಬೇಜಾರೂ, ಲೋನ್ಲಿನೆಸ್ಸ್"  ಅಂದಿದ್ದಾಳೆ.  ಗೆಳತಿ ಒಬ್ಬ ಸಾಹಿತ್ಯಾಸಕ್ತೆ.  ಒಬ್ಬ  ಲೇಖಕನ ಬಗ್ಗೆ ಹೇಳುತ್ತಾ,  ಅವರೂ  ಒಮ್ಮೆ "ಶೂನ್ಯ ಭಾವ"ಕ್ಕೆ ಒಳಗಾಗಿದ್ದ ಸಂಧರ್ಭದಲ್ಲಿ ಒಬ್ಬ ಮನೋ ವೈದ್ಯ ಅವರಿಗೆ ನಾಲ್ಕು ಚೀಟಿಗಳಲ್ಲಿ ಪ್ರಿಸ್ಕ್ರಿಪ್ಷನ್ ಬರೆದು ಬೆಳಿಗ್ಗೆ ೯ಕ್ಕೆ ಮಧ್ಯಾನ್ಹ ೧೨ಕ್ಕೆ, ೩ಕ್ಕೆ ಮತ್ತು … Read more

ಚೈನಾಟೌನ್: ವಾಸುಕಿ ರಾಘವನ್ ಅಂಕಣ

ನಿಜವಾಗಿಯೂ ಒಂದು “ಸಸ್ಪೆನ್ಸ್” ಚಿತ್ರ ಗ್ರೇಟ್ ಅನ್ನಿಸಿಕೊಳ್ಳುವುದು ಯಾವುದರಿಂದ? ಅಂತ್ಯವನ್ನು ನಾವು ಊಹಿಸಲು ಆಗದಿರುವುದೇ ಅತೀ ದೊಡ್ಡ ಮಾನದಂಡವಾ? ಅಥವಾ ಚಿತ್ರದುದ್ದಕ್ಕೂ ಹೆಚ್ಚು ಹೆಚ್ಚು ತಿರುವುಗಳಿದ್ದು ನಮ್ಮನ್ನು ಥ್ರಿಲ್ ಮಾಡಿತ್ತು ಅನ್ನುವುದರ ಮೇಲೆ ನಿರ್ಧಾರವಾಗಿದೆಯಾ? ಹೀಗೇ ಅಂತ ನಿಖರವಾಗಿ ಹೇಳಲು ಆಗುವುದಿಲ್ಲ. ಸುಳಿವುಗಳು ಹೆಚ್ಚಿದ್ದರೆ ನಾವು  ಪರಿಹಾರವನ್ನು ಕಂಡುಹಿಡಿದ ಸಂತೃಪ್ತಿ ಸಿಗುವುದಿಲ್ಲ, ಕಮ್ಮಿ ಇದ್ದರೆ ಚಿತ್ರದೊಂದಿಗೆ ಬಂಧ ಬೆಸೆಯುವುದಿಲ್ಲ. ಈ ಸಂತುಲನವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ನನ್ನ ಪ್ರಕಾರ ಒಂದು ಅತ್ಯುತ್ತಮ “ಸಸ್ಪೆನ್ಸ್” ಚಿತ್ರ ಎರಡನೆಯ … Read more

ತೇಲಿದ ಹೆಣ: ಸುಮನ್ ದೇಸಾಯಿ

ಮಧ್ಯಾಹ್ನ ಹನ್ನೆರಡು ಗಂಟೆದ ಹೊತ್ತು, ವೈಶಾಖ ಮಾಸದ ಖಡಕ ಬಿಸಿಲಿನ್ಯಾಗ ನಮ್ಮ ಊರಿನ ಬಸ್ಸಿನ್ಯಾಗ ಕೂತು ಯಾವಾಗ ಊರ ಮುಟ್ಟತೇನೊ ಅಂತ ಚಡಪಡಿಸ್ಕೊತ ಕೂತಿದ್ದೆ. ಮುಂಝಾನೆ ಹತ್ತು ಘಂಟೆ ಆಗಿದ್ರು ಬಿಸಲು ಭಾಳ ಚುರುಕ್ಕ ಇತ್ತು. ಹೌದು ಎಷ್ಟ ವರ್ಷ ಆಗಿಹೊದ್ವು ಹಳ್ಳಿಕಡೆ ಹೋಗಲಾರದ, ಒಂದ ಏಳೆಂಟ ವರ್ಷರ ಆಗಿರಬೇಕು. ಖಿಡಕ್ಯಾಗಿಂದ ಬಿಸಿ ಗಾಳಿ ಒಳಗ ಬಂದು ಮಾರಿಗೆ ಬಡಿಲಿಕತ್ತಿತು, ಮನಸ್ಸು ಹಿಂದಿನ ನೆನಪುಗಳ ಹತ್ರ ಓಡಿ ಓಡಿ ಹೊಂಟಿತ್ತು. ಎಂಥಾ ಆರಾಮದ ದಿನಗೊಳವು. ನನ್ನ ಮದುವಿಯಾದ … Read more

ಸ್ನೇಹ ಭಾಂದವ್ಯ (ಭಾಗ 8): ನಾಗರತ್ನಾ ಗೋವಿಂದನ್ನವರ

ಇಲ್ಲಿಯವರೆಗೆ ನಿನ್ನ ಹಾಗೆ ಅವಳು ಒಂದು ಮಗುವಿನ ತಾಯಿಯಾಗುವವಳು. ಅಲ್ವೆನಮ್ಮ ಅವಳಿಗೂ ತನ್ನ ಮಗುವಿನ ಬಗ್ಗೆ ನೂರಾರು ಆಸೆ ಕನಸುಗಳು ಇರುತ್ತದೆಯಲ್ಲಮ್ಮ, ಆದರೆ ನೀನು ಅವಳಿಗೆ ತಾಯಿಯಾಗಲಿಲ್ಲ. ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ದುಃಖಿಸುತ್ತಾ ಹೊರಗೋಡಿ ಬಂದ, ರಮಾನಂದರು ವಾಕಿಂಗ್ ಮುಗಿಸಿ ಬರುತ್ತಿದ್ದವರು ಮಗನನ್ನು ನೋಡಿ ಏನಾಯಿತು ಯಾಕೋ ಹೀಗಿದ್ದೀಯಾ ಎಂದು ಕೇಳಿದರು. ರಾಜೇಶ ನಡೆದುದೆಲ್ಲವನ್ನು ವಿವರಿಸಿದ. ಅವನಿಗೆ ಹೆಂಡತಿಯ ಮೇಲೆ ವಿಪರೀತ ಕೋಪ ಬಂದಿತು. ನೀನು ಆಸ್ಪತ್ರೆಗೆ ನಡಿ ರಾಜೇಶ ತಡಮಾಡಬೇಡ. ನಾನು ಆಮೇಲೆ ಬರುತ್ತೇನೆ … Read more

ಸಾಮಾನ್ಯ ಜ್ಞಾನ (ವಾರ 5): ಮಹಾಂತೇಶ್ ಯರಗಟ್ಟಿ

೧. ಕರ್ನಾಟಕದಲ್ಲಿ ರೈಲು ಸಂಪರ್ಕವಿಲ್ಲದ ಜಿಲ್ಲೆ ಯಾವುದು? ೨. ಕನ್ನಡದಲ್ಲಿ ಭಾವಗೀತೆ ಎಂಬ ಮಹಾಪ್ರಬಂಧ ಬರೆದು ಕನ್ನಡದ ಪ್ರಪ್ರಥಮ ಪಿ.ಎಚ್.ಡಿ ಪದವಿ ಪಡೆದ ಹಿರಿಮೆಗೆ ಪಾತ್ರರಾಗಿರುವವರು ಯಾರು? ೩. ಕರ್ನಾಟಕದ ಉದ್ದವಾದ ನದಿ ಯಾವುದು? ೪. ಕರ್ನಾಟಕದಲ್ಲಿ ದೊಡ್ಡ ಆಲದ ಮರವಿರುವ ಊರು ಯಾವುದು? ೫. ಕನ್ನಡದಲ್ಲಿ ಅತೀ ಹೆಚ್ಚು ಪತ್ತೆದಾರಿ ಕಾದಂಬರಿಗಳನ್ನು ಬರೆದವರು ಯಾರು? ೬. ಭಾರತದ ಮೊದಲ ಆಕಾಶವಾಣಿ ಕೇಂದ್ರವು ಯಾವ ವರ್ಷ ಮತ್ತು ಯಾವ ಊರಿನಲ್ಲಿ ಸ್ಥಾಪಿಸಲಾಯಿತು? ೭. ರೈಡರ್ ಕಫ್ ಯಾವ … Read more

ಎರಡು ಕಿರು ಲೇಖನಗಳು: ಹೆಚ್.ಕೆ. ಶರತ್, ಸಂದೇಶ್ ಎಲ್. ಎಂ.

ಬದುಕಿನ ಬುಡದಲ್ಲಿ ಅದೆಷ್ಟು ದ್ವಂದ್ವಗಳು? ಮಡುಗಟ್ಟಿದ ಮೌನ. ಮಾತಿನ ಮನೆಯಲ್ಲಿ ಸೂತಕ. ಸಂತಸ ಹೊತ್ತು ಮೆರೆಯುತ್ತಿದ್ದ ಮನಸ್ಸು ನೀರವತೆಯ ದಡದಲ್ಲಿ ನಿಸ್ತೇಜವಾಗಿ ಕೂತಿದೆ. ಅಕಾರಣವಾಗಿ ಬದುಕು ಬೇಸರವೆನಿಸಿದೆ. ಎಲ್ಲದಕ್ಕೂ ಕಾರಣ ಹುಡುಕುವ ಬುದ್ಧಿಗೆ ಸವಾಲೊಡ್ಡುವ ಅಕಾರಣಗಳ ನಡುವಲ್ಲಿ ಬದುಕಿನ ಬಹುದೊಡ್ಡ ಸಡಗರವಿದೆ. ಹಾದಿ ಬದಿಯಲ್ಲಿ ಕಣ್ಣಿಗೆ ಬಿದ್ದ ಅವಳನ್ನು ಆವಾಹಿಸಿಕೊಳ್ಳುವುದರಲ್ಲಿ ಇರುವುದು ಕೇವಲ ಅಕಾರಣ. ಎಲ್ಲವನ್ನೂ ಲೆಕ್ಕಾಚಾರದ ತಕ್ಕಡಿಯೊಳಗೆ ತೂಗಲು ಸಾಧ್ಯವಾದರೆ ಬದುಕು ಸಿದ್ಧ ಮಾದರಿಯೊಳಗೆ ಸಮಾಧಿಯಾದಂತಲ್ಲವೇ? ತಿಕ್ಕಲುತನ ಮೈಗಂಟಿಸಿಕೊಳ್ಳದೇ ಹೋದರೆ ಮನಸು ಹಗುರಾಗಿಸಿಕೊಳ್ಳುವುದು ಹೇಗೆ? ಗಾಂಭೀರ್ಯದ … Read more

ಕಾರ್ಟೂನ್ ಕಾರ್ನರ್: ಪಿ.ಜಿ. ನಾರಾಯಣ, ಗಣೇಶ್ ಹಾರುಗಾರ್, ಅರುಣ್ ನಂದಗಿರಿ, ರಂಗನಾಥ್ ಸಿದ್ದಾಪುರ

     

ಕಂಬಳಿಹುಳದ ಕತೆ: ಅಖಿಲೇಶ್ ಚಿಪ್ಪಳಿ ಅಂಕಣ

  ಚಿಕ್ಕವನಿದ್ದಾಗ ಎಂದು ಹೇಳಬಹುದು. ಹಲವು ಘಟನೆಗಳು ಕಾಲಾನುಕ್ರಮದಲ್ಲಿ ಮರೆತು ಹೋಗುತ್ತವೆ. ಕೆಲವು ಘಟನೆಗಳು ಮರೆತು ಬಿಡಬೇಕೆಂದರು ಮರೆಯಲಾಗುವುದಿಲ್ಲ. ನಮ್ಮದು ಆವಾಗ ಜೋಡು ಕುಟುಂಬ. ೧೮ ಅಂಕಣದ ಸೋಗೆ ಮನೆಯಲ್ಲಿ ಎಲ್ಲಾ ಒಟ್ಟು ಸೇರಿ ಹತ್ತಾರು ತಿನ್ನುವ ಬಾಯಿಗಳು. ಪ್ರತಿವರ್ಷ ಇಡೀ ಮನೆಯ ಸೋಗೆಯನ್ನು ಬದಲಾಯಿಸಿ ಹೊಸದನ್ನು ಹೊದಿಸಬೇಕು. ಅದೊಂದು ವಾರದ ಕಾರ್ಯಕ್ರಮ. ಹತ್ತಾರು ಆಳು-ಕಾಳುಗಳು ಅವರಿಗೆ ಊಟ-ತಿಂಡಿ, ಬೆಲ್ಲದ ಕಾಫಿ ಇತ್ಯಾದಿಗಳು. ಅದಿರಲಿ ಈಗ ಹೇಳ ಹೊರಟಿರುವ ಕತೆಗೆ ಹಿಂದಿನ ವಾಕ್ಯಗಳು ಪೂರಕವಷ್ಟೆ. ವರ್ಷದಲ್ಲೊಂದು ಬಾರಿ … Read more

ನಾನೇಕೆ ಬರೆಯುವುದಿಲ್ಲ?: ಎಂ. ಎಸ್. ನಾರಾಯಣ

‘ನಾನೇಕೆ ಬರೆಯುವುದಿಲ್ಲ’ ಎಂಬ ಪ್ರಶ್ನೆ ಈ ಹಿಂದೆಯೂ ಕೆಲವೊಮ್ಮೆ ನನ್ನನ್ನು ಕಾಡಿರುವುದು ನಿಜ. ಹೌದು, ಎಲ್ಲರೂ ಬರೆಯಲೇಬೇಕೆಂಬ ನಿಯಮವೇನೂ ಇಲ್ಲ. ಅಸಲು, ಕೆಲವರು ಬರೆಯದೇ ಇರುವುದೇ ಕ್ಷೇಮ. ಆದರೆ ಒಂದು ಮಟ್ಟಿಗೆ ಓದಿಕೊಂಡಿರುವ ನನ್ನಲ್ಲಿ ಬರೆಯಬೇಕೆಂಬ ಕಾಂಕ್ಷೆಗೇನೂ ಕೊರತೆಯಿಲ್ಲ. ಸಮಸ್ಯೆ ಏನೆಂದರೆ, ನನ್ನ ತಿಳುವಳಿಕೆಯಂತೆ ನನಗೆ ಸುಮಾರಾಗಿ ಬರುವ ಇಂಗ್ಲೀಷಿನಷ್ಟೂ ಚೆನ್ನಾಗಿ ಕನ್ನಡ ಬರುವುದಿಲ್ಲ. ಜೊತೆಗೆ ಗಣಕಯಂತ್ರದಲ್ಲಿ ಕನ್ನಡ ಬರೆಯುವ ಕೌಶಲ್ಯವೂ ಕಡಿಮೆಯೇ. ಇಷ್ಟೆಲ್ಲಾ ಇತಿಮಿತಿಗಳಿರುವಾಗ, ನಾನು ಬರೆದು ಏನಾಗಬೇಕು? ನಾನು ಬರೆಯದೇ ಇದ್ದಲ್ಲಿ ಸಮಸ್ತ ಕನ್ನಡ … Read more

“ಹಾ! ಪುರುಷ ಜಗತ್ತೇ…”:ರೇಷ್ಮಾ ಎ.ಎಸ್.

ಸೀರೆಯ ನಿರಿಗೆಗಳನ್ನು ಜೋಡಿಸುತ್ತಾ ಹಾಸಿಗೆಯಲ್ಲಿ ಮಲಗಿದ್ದ ಪುಟ್ಟ ಮಗುವನ್ನಾಕೆ ನೋಡಿದಳು. ಮಗುವಿನ ಮುಖ ಬಾಡಿದ ಹೂವಿನಂತೆ ಸೊರಗಿತ್ತು. ಕಣ್ಣುಗಳು ಜ್ವರದ ತಾಪದಿಂದ ಬಸವಳಿದು ಒಣಗಿದ ಗುಲಾಬಿ ದಳದಂತಾಗಿದ್ದವು. ಜ್ವರ ಬಿಟ್ಟ ಸೂಚನೆಯಾಗಿ ಹಣೆಯ ಮೇಲೆ ಮೂಡಿದ್ದ ಬೆವರ ಹನಿಗೆ ಹಣೆಯಂಚಿನ ಗುಂಗುರು ಕೂದಲು ತೊಯ್ದು ಅಂಟಿಕೊಂಡಿತ್ತು. ಅವಳು ಸೆರಗಿನಿಂದ ಬೆವರನ್ನು ಹಗುರವಾಗಿ ಮಗುವಿಗೆ ಎಚ್ಚರವಾಗದಂತೆ ಒರೆಸಿದಳು. ರಾತ್ರಿಯಿಡೀ ಮಗು ಮಲಗಿರಲಿಲ್ಲ. ಜ್ವರದಿಂದ ಚಡಪಡಿಸುತ್ತಿತ್ತು. ಹನ್ನೊಂದು ಘಂಟೆಯವರೆಗೆ ಹೇಗೋ ಕುಳಿತಿದ್ದ ಅವಳ ಪತಿ "ಇನ್ನು ನಂಗಾಗೋಲ್ಲ, ನಿದ್ರೆ ಕೆಟ್ರೆ … Read more

ಡುಂಡಿ ಅರಣ್ಯಕನೊಬ್ಬ ಗಣಪತಿಯಾದ ಕಥೆ: ಮಂಜು ಅರ್ಕಾವತಿ

ಸುರರು ಹರಸಲೆಂದು ನಾನು ಕರಗಳೆತ್ತಿ ಬೇಡಿದೆ. ಅಸುರರು ಕೈಹಿಡಿದು ನನ್ನ ಜತನದಿ ಕಾಪಾಡಿದರು ಕಾಣದೆಲ್ಲೋ ಅವಿತಿರುವ ದೇವರುಗಳ ವಂದಿಸಿದೆ ಎದುರಿರುವ ನನ್ನಂತಹ ನರರುಗಳನೇ ನಿಂದಿಸಿದೆ ದೇವರುಗಳನು ಮಾಡಲು ಹೋದೆ ಅತಿಸನ್ಮಾನ ನನ್ನ ನಾನು ಮಾಡಿಕೊಂಡಿದ್ದು ಅತಿ ಅವಮಾನ ಸಾಕಿನ್ನು ಬೇಡುವ, ಕಾಡುವ ವ್ಯರ್ಥ ಕೆಲಸಗಳು ಜೋಡಣೆಯಾಗಲಿ ಹರಿದಿರುವ ಬದುಕುಗಳು  ತಾನು ಪೂಜಿಸಿದ ಆರ್ಯರ ಪಡೆಯಿಂದ ಸಾವಿನಂಚಿಗೆ ಹೋಗಿ ಡುಂಡಿಯ ಗಣದಿಂದ ಕಾಪಾಡಲ್ಪಟ್ಟ ಯಾಜ್ಞಿಕನ ನುಡಿ.  ಶಂಬರನೆನ್ನುವ ಅರಣ್ಯಕನೊಬ್ಬ ಯಾಜ್ಞಿಕನೆಂಬ ಭ್ರಾಹ್ಮಣನೊಬ್ಬನ ಜೊತೆ ಮರಣ ಶಯ್ಯೆಯಲ್ಲಿರುವ ಡುಂಡಿಯನ್ನು ನೋಡಲು … Read more

ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸ (ಕೊನೆಯ ಭಾಗ): ಗುರುಪ್ರಸಾದ ಕುರ್ತಕೋಟಿ

  ಕಾಲಿಮ್ ಫಾಂಗ್ ನಿಂದ ಗ್ಯಾಂಗ್ ಟಾಕ್ ಗೆ ಹೋಗುತ್ತಿದ್ದಾಗ ಮಧ್ಯೆ ದಾರಿಯಲ್ಲಿ ನಮಗರಿವಿಲ್ಲದಂತೆ ಒಮ್ಮೆಲೆ ಬೆಂಗಳೂರಿನ ನೆನಪಾಯಿತು. ಅದಕ್ಕಿದ್ದ ಒಂದೇ ಕಾರಣವೆಂದರೆ… ಈ ಪ್ರವಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅರ್ಧ ಗಂಟೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕೊಂಡಿದ್ವಿ! ಅಂತೂ ಪೋಲಿಸರಿಲ್ಲದಿದ್ದರೂ ಹೇಗೋ ಆ ಜಾಮ್ ಕರಗಿ ನಮ್ಮ ಪಯಣ ಮುಂದುವರಿಯಿತು.    ಗ್ಯಾಂಗ್ ಟಾಕ್, ಸಿಕ್ಕಿಂ ಎಂಬ ಪುಟ್ಟ ರಾಜ್ಯದ ರಾಜಧಾನಿ. ಆ ಊರಿಗೆ ಪ್ರವೇಶಿಸುವುದಕ್ಕೆ ಮೊದಲು, ಬಂಗಾಲ ಹಾಗೂ ಸಿಕ್ಕಿಂ ನ ಗಡಿಯಲ್ಲಿ ಅಗಸೆ … Read more

ಕುದುರೆ ಧ್ಯಾನದ ಚಿತ್ರಸಂತ: ಆನಂದ್ ಕುಂಚನೂರು

ಚಿತ್ರಕಲೆಯಲ್ಲಿ ತೊಡಗಿರುವವರದು ಒಂದೊಂದು ರೀತಿಯ ಯಶಸ್ಸು, ಸಾಧನೆ. ಬಣ್ಣಗಳ ಮೂಲಕ ತಮ್ಮ ವಿಶಿಷ್ಟ ಅಭಿವ್ಯಕ್ತಿ, ಸಂವೇದನೆಗಳಿಂದ ಗಮನ ಸೆಳೆದವರು ಹಲವಾರು ಜನ. ಅಂತಹ ಕೆಲವು ಕಲೆಗಾರರಲ್ಲಿ ಇತ್ತೀಚಿನ ದಿನಗಳಲ್ಲಿ ಕೊಂಚ ಭಿನ್ನವಾಗಿ ನಿಲ್ಲುವ ಹಾಗೂ ಚಿತ್ರಕಲೆಯ ಇನ್ನೊಂದು ಆಯಾಮದಂತೆ ತಮ್ಮ ಕಲೆಯಿಂದ ಚಿತ್ರ ರಸಿಕರ ಗಮನ ಸೆಳೆದಿರುವ ಕಲಾವಿದ, ರವಿ ಪೂಜಾರಿ. ಕುದುರೆ ಇವರ ಕಲೆಯ ಮೂಲದ್ರವ್ಯ. ಕುದುರೆಯ ವಿವಿಧ ಭಂಗಿ, ಆಕಾರ, ಭಾವನೆಗಳನ್ನು ಸೆರೆಹಿಡಿಯುವ ಮೂಲಕ ಅದನ್ನೇ ಧ್ಯಾನಿಸುತ್ತಾ ತಮ್ಮ ಕಲಾ ಅಭಿವ್ಯಕ್ತಿಯ ಮಾಧ್ಯಮವಾಗಿ ಬಳಸಿಕೊಂಡಿದ್ದಾರೆ. … Read more

ಆಲ್ ನ್ಯಾಚುರಲ್ ಎಂಬ ಮರಾಮೋಸ:ಅಖಿಲೇಶ್ ಚಿಪ್ಪಳಿ ಅಂಕಣ

  ಮನುಷ್ಯನ ಬುದ್ಧಿ ಒಂದೊಂದು ಬಾರಿ ಪೂರ್ವಜನುಮದ ಸ್ಮರಣೆಗೆ ಹೋಗುತ್ತದೆ. ಕೋತಿ ಬುದ್ಧಿ. ಮೊನ್ನೆ ನಮ್ಮ ಹಿರಿಯ ಸ್ನೇಹಿತರೊಬ್ಬರು ಬೆಂಗಳೂರಿಗೆ ಹೋಗಿದ್ದರು. ಈಶಾನ್ಯ ಭಾಗದಿಂದ ಬಂದ ಒಂದಿಷ್ಟು ಜನ ಬಿದಿರಿನಿಂದ ಮಾಡಿದ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಇದೇನು ಹೊಸ ವಿಷಯವಲ್ಲ. ಗುಡಿ ಕೈಗಾರಿಕೆಗಳಲ್ಲಿ ತಯಾರಿಸಿದ ವಸ್ತುಗಳನ್ನು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಮಾರಾಟ ಮಾಡುತ್ತಾರೆ. ರಸ್ತೆ ಬದಿಗಳಲ್ಲಿ ಗಿಡಮೂಲಿಕೆ ಔಷಧಗಳನ್ನು ಮೈಕಿನಲ್ಲಿ ಕೂಗುತ್ತಾ ಮಾರಾಟ ಮಾಡುವ ಜನ ಆಗಾಗ ಕಾಣ ಸಿಗುತ್ತಾರೆ. ಇವರು ಕೊಡುವ ಮೂಲಿಕೆಗಳಿಂದ ಎಲ್ಲಾ … Read more

ಒಂಟಿಬುಡಕ! :ಪ್ರಶಸ್ತಿ ಅಂಕಣ

ನಮ್ಕಡೆ  ಒಂದು ಪದ ಇದೆ "ಒಂಟಿಬುಡುಕ" ಅಂತ. ಪದ ಅನ್ನೋದಕ್ಕಿಂತ ಅದನ್ನೊಂದು ಸ್ವಭಾವ ಅನ್ನಬಹುದು. ಏನನ್ನೂ, ಯಾರಿಗೂ ಹಂಚದೇ ತಿನ್ನುವ, ಅನುಭವಿಸೋ ಸ್ವಭಾವದವನು/ದವಳಿಗೆ ಒಂಟಿಬುಡುಕ ಆಗ್ಬೇಡ. ಒಳ್ಳೇದಲ್ಲ ಅದು ಅಂತ ಅಪ್ಪ-ಅಮ್ಮ, ಹಿರಿಯರು ಕಿವಿ ಮಾತು ಹೇಳ್ತಿರುತ್ತಾರೆ. ಆ ಸ್ವಭಾವವಿದ್ದವರಿಗೆ ಏನೂ ಅನಿಸದಿದ್ದರೂ, ಹೊರಗಿನವರ ದೃಷ್ಟಿಯಲ್ಲಿ ಕೆಟ್ಟ ಅಭಿಪ್ರಾಯವನ್ನು ಮೂಡಿಸುತ್ತಿರುತ್ತೆ. ಇಂದು ಅದೇ ಸ್ವಭಾವದ ಬಗ್ಗೆ ಒಂದಿಷ್ಟು ಮಾತುಗಳು..ಯಾರದೋ ವ್ಯಕ್ತಿಗತ ನಿಂದೆ ಅಂತಲ್ಲ. ನಮ್ಮ ನಿಮ್ಮೊಳಗೂ ಅರಿಯದೇ ಅವಿತಿರುವ ಈ ಮರಿ ರಾಕ್ಷಸನ ಗುರುತಿಸಿ ಹೊರಗಾಕಲನುವಾಗಲೊಂದು ಪ್ರಯತ್ನ … Read more