ನೂರರ ಕಸಾಪ ತೊಡಬೇಕಾಗಿರುವ ರೂಪ: ಪ್ರದೀಪ್ ಮಾಲ್ಗುಡಿ
ಕನ್ನಡ ಸಾಹಿತ್ಯ ಪರಿಷತ್ತು ಶತಮಾನದ ಸಂಭ್ರಮಾಚರಣೆಯ ಹೊಸ್ತಿಲಲ್ಲಿದೆ. ಮೈಸೂರಿನ ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಯ ಉದ್ದೇಶದಿಂದ ೦೫/೦೫/೧೯೧೫ರಂದು ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು. ಇಂದಿಗೆ ಕಸಾಪಗೆ ೯೯ ವರ್ಷಗಳು ತುಂಬಲಿವೆ. ಅಂದಿನ ಉದ್ದೇಶಗಳೆಲ್ಲ ಇಂದಿಗಾದರೂ ಈಡೇರಿದೆಯೇ? ಎಂಬ ಪ್ರಶ್ನೆಯನ್ನು ಕೇಳಿದರೆ ಸಮಾಧಾನಕರ ಉತ್ತರ ಸಿಗುವುದಿಲ್ಲ. ಈ ಸಮಯದಲ್ಲಿ ೨೩ ಅಧ್ಯಕ್ಷರ ಅವಧಿ ಮುಗಿದು, ೨೪ನೆಯವರು ಅಧ್ಯಕ್ಷರಾಗಿ ಕಾರ್‍ಯನಿರ್ವಹಿಸುತ್ತಿದ್ದಾರೆ. ಪುಸ್ತಕ ಪ್ರಕಟಣೆ, ಸಾಹಿತ್ಯ ಸಮ್ಮೇಳನಗಳ ಆಯೋಜನೆಯನ್ನು ಹೊರತು ಪಡಿಸಿದರೆ … Read more