ಈ ಪ್ರೀತಿಯ ಬಗ್ಗೆ ಒಂದಿಷ್ಟು,,,,,,,,!: ಶಿದ್ರಾಮ ತಳವಾರ

ಈ ಪ್ರೀತಿ ಅನ್ನೋದೆ ಹೀಗೆ ರಾಮಾಯಣದಲ್ಲಿ ಸೀತೆಗೆ ಮಾಯಾ ಜಿಂಕೆಯಾಗಿ ತತ್ ಕ್ಷಣದಲಿ ಸೀತೆ ಅದರಂದಕೆ ಸೋತು ಅದನ್ನು ಪಡೆದೇ ತೀರಬೇಕೆಂಬ ಹುಚ್ಚು ಆಸೆ ಹುಟ್ಟಿದ್ದರಿಂದ ದೊಡ್ಡ ರಾಮಾಯಣವೇ ನಡೆದು ಹೋಯಿತು ಎನ್ನಬಹುದು.  ಇಲ್ಲಿ ಮಾಯಾ ಜಿಂಕೆಯ ವಿಷಯ ಯಾಕೆ ಬಂತು ಅಂದರೆ ಈ ಪ್ರೀತಿಯೂ ಒಂದು ಮಾಯೆ ಇದ್ದಂತೆ. ಯಾವ ಸಂದರ್ಭದಲ್ಲಿ ಯಾರ ಜೊತೆ ಈ ಪ್ರೀತಿ ಅಂಕುರಿಸುವುದೋ ಹೇಳಲಾಗುವುದಿಲ್ಲ. ಸಹಜವಾಗಿ ಪ್ರೀತಿ ಹೆಣ್ಣು ಮತ್ತು ಗಂಡು ಈ ಎರಡು ಜೀವಗಳಲ್ಲಿ ಅಂಕುರಿಸುವುದು ಸಾಮಾನ್ಯ. ಮೊದ ಮೊದಲು ಸಹಜವಾಗಿದ್ದ ವ್ಯಕ್ತಿ ಈ ಪ್ರೀತಿ ಆಕರ್ಷಣೆಗೆ ಒಳಗಾದ ಮೇಲೆ ತನ್ನ ಮೇಲೆ ತಾ ಹಿಡಿತವನ್ನೇ ಕಳೆದುಕೊಳ್ಳುತ್ತಾನೆ.

ಈ ಪ್ರೀತಿಯಲ್ಲಿ ಸಾಕಷ್ಟು ಧನಾತ್ಮಕ ಅಂಶಗಳ ಜೊತೆಗೆ ಋಣಾತ್ಮಕ ಅಂಶಗಳು ಉಂಟು. ಪ್ರೀತಿಗೆ ವಯೋಮಾನ, ಜಾತಿ, ಆಸ್ತಿ, ಅಂತಸ್ತು, ರೂಪ ಇದಾವುದರ ಪರಿವೆಯೂ ಇಲ್ಲಾ. ಅದಾವುದೋ ಆಕಸ್ಮಿಕ ಘಟನೆಯಂತೆ ಜೀವಿ ಈ ಪ್ರೀತಿಗೆ ಒಳಗಾಗುತ್ತಾನೆ. ಈ ಪ್ರೀತಿಗೆ ಒಳಗಾದ ನಂತರದಲ್ಲಿ ಅವನ/ಳ ದಿನಚರಿಗಳೆಲ್ಲಾ ಬದಲಾಗುವುದರೊಂದಿಗೆ ಮಾನಸಿಕವಾಗಿ ದೈಹಿಕವಾಗಿ ದಿನೇ ದಿನೇ ಬದಲಾಗುತ್ತಾ ಹೋಗು ಪರಿ ಈ ಪ್ರೀತಿಯಲ್ಲಿದೆ. ಸ್ವಚ್ಛಂದವಾಗಿ ಆಗಸದ ಹಕ್ಕಿಯಂತೆ ಹಾರಾಡಿಕೊಂಡಿರುವ ಪಕ್ಷಿಗಳಂತೆ ತನ್ನ ಪ್ರೀತಿಗೆ ಪಾತ್ರರಾದ ವ್ಯಕ್ತಿಯೊಂದಿಗೆ ಜೀವನದ ಅತೀ ಹೆಚ್ಚು ಸಮಯವನ್ನು ಕಳೆಯಲು ಉತ್ಸುಕನಾಗಿರುತ್ತಾನೆ.

ಈ ಪ್ರೀತಿ ಹುಟ್ಟುವುದಕ್ಕೆ ಕೆಲವೇ ಕ್ಷಣ ಬೇಕಾದರೂ ಇದು ಪ್ರೀತಿಯೇ ? ಅಂತಾ ಕಂಡು ಹಿಡಿಯುವಲ್ಲಿ ಸಾಕಷ್ಟು ಸಮಯವನ್ನೇ ತೆಗೆದುಕೊಳ್ಳುತ್ತದೆ. ಹೀಗೆ ಕಂಡುಕೊಂಡ ಪ್ರೀತಿಯನ್ನು ನೀರೆರೆದು ಪೋಷಿಸಲು ಪ್ರೇಮಿಗಳಿಗೆ ಸ್ವಲ್ಪ ಪ್ರೈವಸಿ ಬೇಕು. ಕೆಲವೊಮ್ಮೆ ಈ ಪ್ರೀತಿ ಹುಚ್ಚು ಆಕರ್ಷಣೆಯೂ ಆಗಿರಬಹುದು. ತಾನು ಪ್ರೀತಿಸಿದವಳಿಗೆ ಏನು ಇಷ್ಟ ಏನು ಕಷ್ಟ, ಯಾವ ತಿಂಡಿ ಅವಳಿಗೆ ತುಂಬಾ ಮುಖ್ಯ ಯಾವ ಹವ್ಯಾಸ ಅಂದ್ರೆ ಅವಳಿಗೆ ತುಂಬ ಪ್ರೀತಿ ಈ ಎಲ್ಲವನ್ನೂ ಪ್ರೀತಿ ತಾನೇ ತಾನಾಗಿಯೇ ಹೇಳಿಕೊಡುತ್ತೆ. ಪರಸ್ಪರ ಅರ್ಥ ಮಾಡಿಕೊಳ್ಳುವುದರೊಂದಿಗೆ ಎಲ್ಲವನ್ನೂ ಸಮನಾಗಿ ಸ್ವೀಕರಿಸುವ, ಹಂಚಿಕೊಳ್ಳುವ ಜೀವ ಅಂದರೆ ಈ ಪ್ರೀತಿ ಒಂದೇ ಎಂಬುದು ಸಾಕಷ್ಟು ಪ್ರೇಮಿಗಳ ಬಾಯಲ್ಲಿ ಕೇಳಿ ಬರುವ ಮಾತು.

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಮೋಬೈಲ್, ಇಂಟರ್‌ನೆಟ್, ಫೇಸ್ ಬುಕ್, ಟ್ವಿಟ್ಟರ್, ವಾಟ್ಸ್ ಆಪ್ ಮುಂತಾದ ಸಾಧನಗಳ ಮೂಲಕ ಎಲ್ಲೆಂದರಲ್ಲಿ ದೇಶದ ಯಾವ ಮೂಲೆಯಲ್ಲಿದ್ದರೂ ತಮ್ಮ ಪ್ರೀತಿಗೆ ಪಾತ್ರರಾದವರ ಜೊತೆ ನಿರಂತರ ಸಂಪರ್ಕದಲ್ಲಿವೆ. ಹಿಂದಿನ ದಿನಗಳಲ್ಲಿ ಮನದ ಭಾವನೆಗಳಿಗೆ ಅಕ್ಷರ ರೂಪ ನೀಡಿ ಪ್ರೇಮದ ಓಲೆಯನ್ನು ಕಳಿಸುತ್ತಿದ್ದರಾದರೂ ಆ ಅಕ್ಷರಗಳಲ್ಲಿ ಪ್ರೀತಿಯನ್ನು ವರ್ಣಿಸುವ ಪರಿ ಅಮೋಘ. ಕಾಳಿದಾಸ-ಶಾಕುಂತಲೆ ಯರೂ ಕೂಡ ಈ ಮೇಘದೂತನ ಮೂಲಕ ಪರಸ್ಪರ ಪ್ರೇಮದ ಓಲೆಯನ್ನು ವಿನಿಮಯ ಮಾಡಿಕೊಳ್ಳುವುದನ್ನು ನಾವು ಸಾಕಷ್ಟು ಪುಸ್ತಕಗಳಲ್ಲಿ ಓದಬಹುದು. ಇಂತಹ ಉತ್ಕೃಷ್ಟ ಪವಿತ್ರ ಪ್ರೀತಿಯನ್ನು ಅನುಭವಿಸಿದವರೇ ಧನ್ಯರು.     

ಈ ಪ್ರೀತಿಗೆ ಮರುಳಾಗದ ಯಾವ ಜೀವಿಯೂ ಈ ಪ್ರಪಂಚದಲ್ಲಿ ಇಲ್ಲ ಅಂತಾ ಹೇಳಬಹುದು. ಅಂಕುರಿಸಿದ ಪ್ರೀತಿ ಬೆಳೆದು ಮರವಾಗಿ ಫಲ ಕೊಡುವ ಮಟ್ಟಿಗೆ ಯಶಸ್ಸನ್ನು ಸಾಧಿಸಿದವರು ಅತೀ ವಿರಳ ಎನ್ನಬಹುದು. ಸಮಾಜದ ಕಟ್ಟುಪಾಡುಗಳಿಗೆ ತಂದೆ ತಾಯಿಯರ ಒತ್ತಾಐಕ್ಕೆ, ಆಸ್ತಿ, ಜಾತಿ ಮುಂತಾದ ಹಲವಾರು ಕಾರಣಗಳಿಗೆ ಈ ಪ್ರೀತಿ ಅದೆಷ್ಟೋ ಪ್ರೇಮಿಗಳಿಂದ ಕೊಲೆಯಾಗಿದ್ದುಂಟು. ಈ ಪ್ರೀತಿ ಕೆಲವೊಮ್ಮೆ ಸಾಕಷ್ಟು ಅನಾಹುತಗಳಿಗೆ ಎಡೆ ಮಾಡಿಕೊಟ್ಟದ್ದೂ ಉಂಟು. ಹದವಾದ ಮಣ್ಣಿನಲಿ ತಂಪಾದ ಗಾಳಿಗೆ ಮೋಡ ಕಳಚಿ ನೀರು ಹನಿ ಹನಿಯಾಗಿ ಭೂಮಿಗೆ ಬಿದ್ದೊಡನೆ ಭೂಮಿ ಅದೆಷ್ಟು ಹಿತವಾಗಿ ಅರಳುವುದೋ ಹಾಗೆ ಈ ಪ್ರೀತಿ ಹೃದಯದಲ್ಲಿ ಅಂಕುರಿಸಿದೊಡನೆ ಹೃದಯ ಹಾಯಾಗಿ ಹಾರಾಡುವುದು. ಸಾಕಷ್ಟು ಸಾಹಿತಿಗಳು, ಕವಿಗಳು ಈ ಪ್ರೀತಿಯನ್ನು ತಮ್ಮ ಬರಹದಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೂ ಅವರ ಬರವಣಿಗೆಯ ಮಿತಿಯನ್ನು ಮೀರಿ ಈ ಪ್ರೀತಿ ತನ್ನ ಹರಿವನ್ನು ಹೊಂದಿದೆ.
 
ಪ್ರೀತಿ ಅನ್ನೋದನ್ನ ಇಷ್ಟೇ ಅಂತ ಅದಾವ ಅಳತೆಯಲ್ಲೂ ಹಿಡಿದಿಡಲಾಗದು. ಈ ಕುರಿತು ಸಾಕಷ್ಟು ಲೇಖನಗಳು, ಪುಸ್ತಕಗಳು, ವಿವಿಧ ಭಾಷೆಗಳಲ್ಲಿ ಇದ್ದರೂ ಈ ಎಲ್ಲ ಬರವಣಿಗೆಗಳನ್ನೂ ಮೀರಿದುದು ಈ ಪ್ರೀತಿ ಇಷ್ಟೆಲ್ಲಾ ಪುಸ್ತಕಗಳಲ್ಲಿ ವಿವರಿಸಲಾಗದ ಪ್ರೀತಿ ಬಗ್ಗೆ ಈ ಒಂದು ಚಿಕ್ಕ ಲೇಖನದಲ್ಲಿ ಈ ದೈತ್ಯ ಪ್ರೀತಿಯನ್ನು ಅದ್ಹೇಗೆ ಹಿಡಿದಿಡಲು ಸಾಧ್ಯ ಅಲ್ಲವೇ. ತಾನು ಇಷ್ಟ ಪಟ್ಟ ವ್ಯಕ್ತಿಯೊಂದಿಗೆ ಕಳೆದ ಕೆಲವೇ ಕೆಲವು ಕ್ಷಣಗಳೂ ಕೂಡ ಆ ಪ್ರೇಮಿಗೆ ಅದೆಷ್ಟೋ ವರ್ಷಗಳಷ್ಟು ಜೊತೆಗಿದ್ದ ಸಂತಸವ ನೀಡಬಲ್ಲುದು. ಆ ಒಂದು ನೋಟ ತನ್ನ ದಿನದ ಗೆಲುವಿಗೆ ಕಾರಣವಾಗಬಹುದು. ಇಂತಹ ಈ ಪ್ರೀತಿ ಅನಂತ ಅನನ್ಯ ಅಗೋಚರ,,, ಇದನ್ನು ಅನುಭವಿಸಬೇಕಷ್ಟೇ ಹೊರತು ಅನುಮಾನಿಸಬಾರದು, ಇಂದಿನ ಯುವ ಹೃದಯಗಳು ಇತ್ತೀಚಿಗೆ ಬರುತ್ತಿರುವ ಚಿತ್ರಗಳನ್ನು ನೋಡಿ ಹುಚ್ಚು ಆಕರ್ಷಣೆಗೆ ಒಳಗಾಗಿ ಈ ಪ್ರೀತಿಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪವಿತ್ರ ಹೃದಯಗಳ ಬೆಸುಗೆಯ ಸಂಕೇತವಾದ ಈ ಪ್ರೀತಿ ಸದಾ ಶಾಶ್ವತವಾಗಿರಲಿ ಎನ್ನುವುದೇ ನನ್ನ ಹಾರೈಕೆ.

******

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
amardeep.p.s.
amardeep.p.s.
9 years ago

good one….

amardeep.p.s.
amardeep.p.s.
9 years ago

good one.

2
0
Would love your thoughts, please comment.x
()
x