ಲಾಸ್ಟ್ ಬೇಂಚ್: ಪದ್ಮಾ ಭಟ್

ಲೇ ಮಚ್ಚ ಇವತ್ತಾದ್ರೂ ಬೇಗ ಕ್ಲಾಸಿಗೆ ಹೋಗೋಣ  ಇಲ್ಲಾಂದ್ರೆ ಹಿಂದಿನ ಬೇಂಚಿನಲ್ಲಿ ಯಾರಾದ್ರೂ ಕೂತ್ಕೊಂಡ್ ಬಿಡ್ತಾರೆ.. ಆಮೇಲೆ ದಿನವಿಡೀ ಮುಂದಿನ ಬೇಂಚೆ ಗತಿ.. ಎಂದು ಆತ ಹೇಳುತ್ತಿದ್ದ.. ಅರೇ! ಹಿಂದಿನ ಬೇಂಚಿಗೆ ಇಷ್ಟೆಲ್ಲಾ ಕಾಂಫೀಟೇಶನ್ನಾ? ಎಂದು ಅಂದ್ಕೋಬೇಡಿ ಕಾಲೇಜಿನಲ್ಲಿ ಯಾವಾಗಲೂ ಮುಂದಿನ ಬೇಂಚಿಗಿಂತ ಹಿಂದಿನ ಬೇಂಚಿಗೆ, ಕಾಂಫೀಟೇಶನ್ ಜಾಸ್ತಿ.. ಇಷ್ಟವಿಲ್ಲದ ಪ್ರೊಫೆಸರ್ ಪಾಠವನ್ನು ಮುಂದಿನ ಬೇಂಚಿನಲ್ಲಿ ಕೂತರೆ ಕಷ್ಟಪಟ್ಟು ಕೇಳಲೇಬೇಕಾಗುತ್ತದೆ. ಆದರೆ ಹಿಂದಿನ ಬೇಂಚು ಎನ್ನುವುದು ಒಂಥರಾ ಮನೆ ಇದ್ದಂಗೆ, ಡೆಸ್ಕಿನ ಒಳಗೆ ಪತ್ತೇದಾರಿ ಕಾದಂಬರಿಯನ್ನು ಓದಬಹುದು, … Read more

ಸಾಮಾನ್ಯ ಜ್ಞಾನ (ವಾರ 65): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು? ೨.    ಕೆ.ಎಸ್.ಎಸ್.ಐ.ಡಿಸಿ (KSSIDC)ನ ವಿಸ್ತೃತ ರೂಪವೇನು? ೩.    ಕಬುಕಿ ನೃತ್ಯ ಶೈಲಿ ಯಾವ ದೇಶದ್ದಾಗಿದೆ? ೪.    ಜೀತ ಪದ್ಧತಿಯ ನಿರ್ಮೂಲನಕ್ಕಾಗಿ ೧೯೭೬ರಲ್ಲಿ ಜಾರಿಗೊಳಿಸಲಾದ ಶಾಸನ ಯಾವುದು? ೫.    ಕನ್ನಡ ಕವಯತ್ರಿ ಸಂಚಿ ಹೊನ್ನಮ್ಮ ಯಾರ ಆಸ್ಥಾನದಲ್ಲಿದ್ದಳು? ೬.    ಭಾರತದ ಮೊಟ್ಟಮೊದಲ ಮೀನುಗಾರಿಕೆಯ ಕಾಲೇಜನ್ನು ಕರ್ನಾಟಕದಲ್ಲಿ ಎಲ್ಲಿ ಸ್ಥಾಪಿಸಲಾಯಿತು? ೭.    ಆರ್ಯುವೇದದ ಪಿತಾಮಹ ಯಾರು? ೮.    ವಿಜಯನಗರದ ವಾಟರ್ ಲೂ ಎಂದು ಕರೆಯಲ್ಪಡುವ ಸ್ಥಳ ಯಾವುದು? … Read more

ಮತಿಭ್ರಮಣೆ: ಶಿವಕುಮಾರ ಚನ್ನಪ್ಪನವರ

ಪೆಣ್ಣು, ಪೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು  -ಸಂಚಿ ಹೊನ್ನಮ್ಮ ತಾನು ಸೋಮುವಿಗೆ ಹೀಗೆನ್ನಬಾರದಿತ್ತು. ಪಾಪ ಎಷ್ಟು ನೊಂದುಕೊಂಡನೋ ಏನೋ……? ತಾನೇ ಸಾಕಿ ಬೆಳೆಸಿದ ಕೂಸು ಆದರೂ ಅವನು ಹದ್ದುಮೀರಿ ಮಾತಾಡಿದ್ದ. ಬೇಡವೆಂದರೂ ಕೇಳದೇ ಹೆಂಡತಿಯ ಭ್ರೂಣಪತ್ತೆಯ ಕೆಲಸಕ್ಕೆ ಕೈ ಹಾಕಿದ್ದಿರಬಹುದು, ತಮ್ಮ ತಾಯಿಗೆ ಗಂಡು ಮಗುವೇ ಬೇಕೆಂದು, ತನಗೂ ಅದೇ ಇಷ್ಟವಿದೆಯೆಂದು, ಹಟ ಹಿಡಿದು ಈ ಸಲ ಹೆಣ್ಣಾದರೆ ಆಪರೇಷನ್ ಮಾಡಿಸದೇ ಮುಂದಿನದಕ್ಕೆ ಬಿಡಬೇಕೆಂದು ಹಟ ಹಿಡಿದದ್ದು ತಪ್ಪಲ್ಲವೇ……?, ಡಾಕ್ಟರು ಇದು ಎರಡನೇ ಬಾರಿ ಸಿಜೇರಿಯನ್ … Read more

ಗೆಳೆತನದ ಸುವಿಶಾಲ ಆಲದಡಿ..:ಅನಿತಾ ನರೇಶ್ ಮಂಚಿ.

  ಜೀವನದಲ್ಲಿ  ನನ್ನರಿವಿಗೆ ಬಂದಂತೆ ಮೊಟ್ಟ ಮೊದಲಿಗೆ ನನಗೊಂದು ಪ್ರಮೋಶನ್ ಸಿಕ್ಕಿತ್ತು. ಅದೂ ನಾವು ಅ ಊರಿಗೆ ಕಾಲಿಟ್ಟ ಕೆಲವೇ ಸಮಯದಲ್ಲಿ.. ಅಂಗನವಾಡಿಗೆ ಹೋಗಲಿಕ್ಕೆ ಶುರು ಮಾಡಿ ತಿಂಗಳಾಗಬೇಕಾದರೆ  ಡೈರೆಕ್ಟ್ ಆಗಿ ಒಂದನೇ ತರಗತಿಗೆ..  ಒಂದನೇ ತರಗತಿಗೆ  ವಯಸ್ಸು ಇಷ್ಟೇ ಆಗಿರಬೇಕೆಂಬ ಸರ್ಕಾರಿ ನಿಯಮವೇನೋ ಇದ್ದರೂ ಮಕ್ಕಳು ಮನೆಯಲ್ಲಿದ್ದರೆ ಅಪ್ಪ ಅಮ್ಮನಿಗೆ ಬೇಗನೇ ವಯಸ್ಸಿಗೆ ಬಂದಂತೆ ಕಾಣಿಸಲು ಶುರು ಆಗ್ತಾರಲ್ಲ ಅದಕ್ಕೇನು ಮಾಡೋದು.. ಹಾಗೆ ನಾನೂ ನನ್ನ ಅವಳಿ ಅಣ್ಣನೂ ಒಂದನೇ ತರಗತಿಯೊಳಗೆ ಉದ್ದದ ಒಂದೇ ಕೈ … Read more

ಚಲರೇ ಭೋಪಳ್ಯಾ ಟುಣಕ್-ಟುಣಕ್ (ಆಡಿಯೋ ಕತೆ): ಸುಮನ್ ದೇಸಾಯಿ

ಒಂದು ಭಯಂಕರ ದಟ್ಟ ಜಂಗಲ್ ಇತ್ತು. ಆಲ. ಹಲಸು, ಹುಣಸೆ, ಮಾವು ಸೊಗೆ, ದೊಡ್ಡ ದೊಡ್ಡ ಮರ ಇದ್ವು. ಅದೆಷ್ಟು ದಟ್ಟ ಇತ್ತಂದರ. ಮಟಾ ಮಟಾ ಮಧ್ಯಾಹ್ನದಾಗು ಸೂರ್ಯನ ಬೆಳಕಿಗೂ ಒಳಗ ಬರಲಿಕಕ್ಕೆ ಜಾಗ ಇದ್ದಿಲ್ಲ. ಆ ಕಾಡಿನ ತುಂಬ ಪ್ರಾಣಿಗಳು ಭಾಳ ಇದ್ವು. ಕಾಡಿಗೆ ಹಚ್ಚಿ ಇನ್ನೊಂದು ಕಡೆ ಸುಂದರ ಸರೋವರ ಇತ್ತು. ಸರೋವರದ ಇನ್ನೊಂದು ಕಡೆ ಒಂದು ಪುಟ್ಟ ಹಳ್ಳಿ ಇತ್ತು. ಅಲ್ಲಿಯ ಜನ ಯಾವಾಗಲೂ ಕಾಡಿನ ಭಯದಿಂದ ಜೀವ ಕೈಯ್ಯೊಳಗ ಹಿಡಕೊಂಡನ ಜೀವನ … Read more

ಮೌನ ತಳೆದ ಹುಡುಗಿ: ರುಕ್ಮಿಣಿ ನಾಗಣ್ಣವರ

ಆಗಷ್ಟೆ ಬೆಳಕಿನ ಬೆನ್ನಿಗೆ ಕತ್ತಲು ಪತ್ತಲ ಹಾಸುತ್ತಿತ್ತು. ಮಿಣಮಿಣ ಮಿನುಗುವ ತಾರೆಗಳು ಚಂದ್ರನೊಂದಿಗೆ ಕಣ್ಣಾ ಮುಚ್ಚಾಲೆ ಆಡಲು ಸಿದ್ಧವಾಗಿದ್ದವು. ಚಂದ್ರನೋ, ತಾರೆಗಳ ಬಳಗದಿಂದ ತಪ್ಪಿಸಿಕೊಂಡವನಂತೆ ರಮೇಶನ ಕೋಣೆಯನ್ನೇ ಇಣುಕಿ ಇಣುಕಿ ನೋಡುತ್ತಿದ್ದ. ದೀಪ ಹಚ್ಚದ ಕೋಣೆಯಲ್ಲಿ ಕತ್ತಲ ತೆಕ್ಕೆಯೊಳಗೆ ರಮೇಶ್ ಗಾಢ ಮೌನಕ್ಕೆ ಶರಣಾಗಿದ್ದ. ಮನದ ಮೈದಾನದಲಿ ಜಾನಕಿಯೆಡೆಗಿನ ವಿಚಾರಗಳು ಕಾಳಗದ ಹೋರಿಯಂತೆ ಕಾದಾಟ ನಡೆಸಿದ್ದವು. ಅರಳು ಹುರಿದಂತೆ ಮಾತಾಡುವ ಜಾನಕಿ ಕಳೆದ ಆರು ತಿಂಗಳಿನಿಂದ ಮೌನವಾಗಿದ್ದಳು. ಆ ದೀರ್ಘಮೌನ ರಮೇಶನನ್ನು ಭಾದಿಸುತ್ತಿತ್ತು.  ತಲೆ ಚಿಟ್ಟೆನ್ನುವ ಅಸಹನೆ. … Read more

ಸಾಯಲೇ ಬೇಕು ಎಲ್ಲರಲ್ಲಿನ ಸೀಸರ್: ಸಚೇತನ

ಷೇಕ್ಸ್ ಪಿಯರ್ ಎನ್ನುವ ಸದಾ ತುಂಬಿ ಹರಿಯುವ ನದಿಯಿಂದ ಮೊಗೆ ಮೊಗೆದು ತೆಗೆದ ಅದೆಷ್ಟೋ ಸಾವಿರ ಸಾವಿರ ಬೊಗಸೆ ನೀರು ಲೆಕ್ಕವಿಲ್ಲದಷ್ಟು  ಸಾಹಿತ್ಯದ ಬೀಜಗಳನ್ನು ಹೆಮ್ಮರವಾಗಿಸಿ ಫಲ ಕೊಡುತ್ತಿದೆ.  ಕರುಣೆ ಕ್ರೌರ್ಯ ಪ್ರೀತಿ ಹಾಸ್ಯ ಪ್ರೇಮ ಮೋಸ ಎಲ್ಲ  ಮಾನವೀ ಭಾವಗಳ ಸಮಪಾಕವನ್ನು ನಾವೆಲ್ಲರೂ ಅದೆಷ್ಟೋ ಸಲ ರುಚಿಕಟ್ಟಾಗಿ ಉಂಡಿದ್ದರೂ ಯಾವತ್ತಿಗೂ ಅವು ಸಾಕು ಎನಿಸಿಲ್ಲ. ಹರಿಯುವ ನದಿಯಿಂದ ಕೈ ಒಡ್ಡಿ ಕುಡಿದ ಸಿಹಿ ನೀರು ಮತ್ತೆ ಮತ್ತೆ ಬೇಕೆನಿಸಿದೆ. ಸೀಸರ್ ಎನ್ನುವ ದುರಂತ ನಾಯಕನ ಕತೆಯಿಂದ … Read more

ಫೋಟೋ ಚೌಕಟ್ಟಿನ ಆಚೀಚೆ: ಅಮರ್ ದೀಪ್ ಪಿ.ಎಸ್.

ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ದಿನಗಳವು.  ವರ್ಷಕ್ಕೊಮ್ಮೆ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ಮೇಷ್ಟ್ರು “ಎಲ್ರೂ ನಾಳೆ ನೀಟಾಗಿ ನಿಮಗಿಷ್ಟವಾದ ಡ್ರೆಸ್ ಹಾಕ್ಕೊಂಡ್ ಬನ್ನಿ” ಅನ್ನುತ್ತಿದ್ದರೆ, ನಮ್ಮ ಮುಖ ಇಷ್ಟಗಲವಾಗಿ ಅಲ್ಲೇ ಹಲ್ಕಿರಿದು ನಿಂತು ಬಿಡುತ್ತಿದ್ದೆವು.   ಮತ್ತೆ ಫೋಟೋ ತೆಗೆಯೋ ದಿನ ಮಾತ್ರ  ಅದು ನಡೆಯುತ್ತೋ, ಓಡುತ್ತೋ, ನಿಂತಲ್ಲೇ ಎಲ್ಡು ಬಾರಿ ಸರಿಯಾದ ಟೈಮು ತೋರ್ಸುತ್ತೋ, ಬಿಡುತ್ತೋ, ಒಟ್ನಲ್ಲಿ ಎಲ್ಲಿಂದಲೋ ಒಂದ ವಾಚ್ ಕಟ್ಗ್ಯಂಡು ಅದು ಫೋಟೋದಲ್ಲಿ ಕಾಣೋ ಹಂಗೆ ನಿಂತು ಫೋಸ್ ಕೊಡುತ್ತಿದ್ದೆವು.  ಫೋಟೋ ಪ್ರಿಂಟ್ ಕೈ … Read more

ಮೂವರ ಕವಿತೆಗಳು: ಮುಕುಂದ್ ಎಸ್., ಮೌಲ್ಯ ಎಂ., ಅಕುವ

ಲೋ ಮಾರ್ಕು,  ನೀ ಕಟ್ಟಿದ್ ಜಗ್ಲಿ ಮ್ಯಾಕ್ ಕೂತು,  ದೊಡ್ಡ್ ದೊಡ್ಡ್ವರು ಹೇಳಿದ್ದು  ಅರ್ಥವಾಗ್ದಿದ್ರು ಬೇರೆಯವರಿಗೆ ಷೇರ್ ಗಿರ್ ಮಾಡಿಕ್ಕಂಡು, ರಾಜಕಾರಣಿ ಹಾಕೋ ಥರಾವರಿ  ಟೋಪಿಗಳ್ ನಾವ್ ನಮ್ಮ್  ಗೆಳ್ಯರಿಗು ಹಾಕಿ,  ಪರ್ ವಿರೋಧ ಬಾಯ್ ಬಡ್ಕೊಂಡು, ಫ್ರೆಂಡ್, ಅನ್ ಫ್ರೆಂಡ್ ಅಂತ್ ಆಟ್ಗಳ ಜೊತೆ ಕ್ಯಂಡಿ ಕ್ರಷುಗಳ್ ಬಗ್ಗೆ ಉರ್ಕೊಂಡು,  ನಮ್ಮ್ ನಮ್ಮ್ ಪಟ್ವ ತೆಗೆದು  ಸ್ಚಯಂವರಕ್ಕೆ ರೆಡಿ ಆಗೋ ಪರಿಯಲ್ಲಿ ತೆಗ್ಸಿ, ಲೈಕುಗಳ ಬಿಕ್ಕ್ಸೆಗೆ ಕಾಯ್ಕೊಂಡು, ಅಕ್ಕ ಪಕ್ಕ ಇರೋ ಅಣ್ಣ್ ತಮ್ಮದಿರ್ ದೂರ್ … Read more

ಝೆನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

ಪುಷ್ಪ ವೃಷ್ಟಿ ಸುಭೂತಿ ಬುದ್ಧನ ಶಿಷ್ಯನಾಗಿದ್ದ. ಶೂನ್ಯತೆಯ ಶಕ್ತಿಯನ್ನು ತಿಳಿಯುವುದರಲ್ಲಿ ಆತ ಯಶಸ್ವಿಯಾಗಿದ್ದ. ವ್ಯಕ್ತಿನಿಷ್ಠತೆ ಮತ್ತು ವಿಷಯನಿಷ್ಠತೆಗಳೊಂದಿಗೆ ಶೂನ್ಯತೆಗೆ ಇರುವ ಸಂಬಂಧದ ಹೊರತಾಗಿ ಏನೂ ಅಸ್ಥಿತ್ವದಲ್ಲಿ ಇಲ್ಲ ಅನ್ನುವ ದೃಷ್ಟಿಕೋನ ಇದು. ಒಂದು ದಿನ ಮಹೋನ್ನತ ಶೂನ್ಯತೆಯ ಚಿತ್ತಸ್ಥಿತಿಯಲ್ಲಿ ಸುಭೂತಿ ಒಂದು ಮರದ ಕೆಳಗೆ ಕುಳಿತಿದ್ದ. ಅವನ ಸುತ್ತಲೂ ಹೂವುಗಳು ಬೀಳಲಾರಂಭಿಸಿದವು. “ಶೂನ್ಯತೆಯ ಕುರಿತಾದ ನಿನ್ನ ಪ್ರವಚನಕ್ಕಾಗಿ ನಾವು ನಿನ್ನನ್ನು ಶ್ಲಾಘಿಸುತ್ತಿದ್ದೇವೆ” ಎಂಬುದಾಗಿ ಪಿಸುಗುಟ್ಟಿದರು ದೇವತೆಗಳು. “ಶೂನ್ಯತೆಯ ಕುರಿತಾಗಿ ನಾನು ಮಾತನಾಡಿಯೇ ಇಲ್ಲ” ಪ್ರತಿಕ್ರಿಯಿಸಿದ ಸುಭೂತಿ. “ನೀನು … Read more

ಫ಼ೈಂಡಿಂಗ್ ಫ಼ಾನ್ನಿ ಮತ್ತು ನಮ್ಮೊಳಗಿನ ಮುಗಿಯದ ಹುಡುಕಾಟ: ಪ್ರಶಾಂತ್ ಭಟ್

ಈಗ ನನ್ನ ಬಹಳ ಕಾಡಿದ ಒಂದು ಸಿನಿಮಾ ಬಗ್ಗೆ ಬರೆಯಬೇಕು.  ಅದರಲ್ಲಿ ಬರುವ ಒಂದು ಡೈಲಾಗ್ ಬಗ್ಗೆ 'ನಮ್ಮ ರಾಜ್ಯಕ್ಕೆ ಅಪಮಾನವಾಯಿತು' ಅಂತ ಬೊಬ್ಬಿರಿದ ನನ್ನ ರಾಜ್ಯದ ಕೆಲವರ ಬಗ್ಗೆ ನಿಜಕ್ಕೂ ಕನಿಕರವಿದೆ. ಹೌದು. ಇದು ಅದೇ ಸಿನಿಮಾ. 'ಫ಼ೈಂಡಿಂಗ್ ಫ಼ಾನ್ನಿ' ಹೋಮಿ ಅಡಜನಿಯ ನಿರ್ದೇಶನವಿರುವ  (ಇವನ ಬೀಯಿಂಗ್ ಸೈರಸ್ ಕೂಡ ಒಳ್ಳೆಯ ಪ್ರಯತ್ನ) ಕೆಲವು ಕಡೆ 'ಲೆಟ್ಟರ್ಸ್ ಟು ಜೂಲಿಯಟ್' ಅನ್ನು ಹೋಲುತ್ತದೆ. ಅರ್ಜುನ್ ಕಪೂರ್, ದೀಪಿಕಾ ಪಡುಕೋಣೆ (ಇವಳ ಸ್ಕರ್ಟ್ ನ ಅಂದವನ್ನು ಬಣ್ಣಿಸಲೇ?) … Read more

ಕತ್ತಲ ಕೊಳ್ಳದಾಚೆಗೆ: ಪ್ರಶಸ್ತಿ ಪಿ.

  ಬೈಕಲ್ಲಿ ಹೋಗ್ಬೇಡ, ಒಂದಷ್ಟು ಲೇಟಾದ್ರೂ ಪರ್ವಾಗಿಲ್ಲ. ಬಸ್ಸಿಗೆ ಹೋಗೋ ಅಂತ ಅಮ್ಮ ಹೇಳಿದ ಮಾತ್ನ ಕೇಳ್ಬೇಕಾಗಿತ್ತು ಅಂತ ಬಾಳೇಬರೆ ಘಾಟೀಲಿ ಕತ್ತಲ ರಾತ್ರೇಲಿ ಕೆಟ್ಟ ಬೈಕಿಗೊಂದು ಮೆಕ್ಯಾನಿಕ್ನ ಹುಡುಕೋಕೋದಾಗ್ಲೇ ಅನಿಸಿದ್ದು. ಫ್ರೆಂಡ್ ಮನೆ ಕಾರ್ಯಕ್ರಮಕ್ಕೆ ಮಧ್ಯಾಹ್ನವೇ ಹೊರಟು ಬಿಡ್ಬೇಕಿತ್ತು. ಆದ್ರೆ ಬೈಕಿದ್ಯಲ್ಲ, ಬಸ್ಸು ಹೋದ್ರೆ ಹೆಂಗಾದ್ರೂ ರಾತ್ರೆಗೆ ಮುಟ್ಕೋಬೋದು ಅನ್ನೋ ಧೈರ್ಯವೇ ನಿರ್ಲಕ್ಷ್ಯಕ್ಕೆ ಕಾರಣವಾಗಿ ಊರಲ್ಲೇ ಸಂಜೆಯಾಗೋಗಿತ್ತು. ನಾಳೆ ಹೋಗೋಣ ಅಂದ್ರೆ ಕಾರ್ಯಕ್ರಮವಿದ್ದಿದ್ದೇ ಇವತ್ತು ರಾತ್ರೆ. ಹೋಗ್ಲೇಬೇಕೆನ್ನೊ ಹಟಕ್ಕೆ ಮನೆಯವ್ರು ಅರೆಮನಸ್ಸಿಂದ್ಲೇ ಒಪ್ಪಿದ್ರು. ಜೊತೆಗಿನ್ನಿಬ್ರು ಗೆಳೆಯಂದ್ರು … Read more

ಅಯ್ಯೋ ಅವ್ರು ಏನ್ ಅಂದ್ಕೊತಾರೋ !!: ಸಂತೋಷ್ ಗುರುರಾಜ್

ಇದು ನಮ್ಮ ನಿಮ್ಮೆಲ್ಲರ  ಅತೀ ದೊಡ್ಡ  ಕಾಡುವ ಪ್ರಶ್ನೆ ? ಇದೊಂದೇ ಡೈಲಾಗ್ ಇಂದ ಕೆಲವರು ತಮ್ಮ ಜೀವನದ ಗುರಿ ಮುಟ್ಟಲು ಆಗುವುದಿಲ್ಲ. ಇದನ್ನು ಯಾರೋ ನಮಗೆ ಆಗದೇ ಇರುವವರು ಮಾಡುವುದಲ್ಲ ನಮಗೆ ನಾವೇ ಮಾಡಿಕೊಳ್ಳುವುದು. ಇದು ಒಂತರಾ ಮಾನಸಿಕ ರೋಗ. ಇದು ಪ್ರತಿಯೊಬ್ಬನ ಜೀವನದಲ್ಲಿ ನಡೆಯುವ ನೆಗೆಟಿವ್ ಕಮಾಂಡ್. ಅದು ಎಷ್ಟರ ಮಟ್ಟಿಗೆ ಅಂದ್ರೆ ಆ ಕಮಾಂಡ್ ಇಂದ ನಾವು ತಪ್ಪಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ, ಅಷ್ಟರಲ್ಲಿ ವಯಸ್ಸು ಮುಗಿದಿರುತ್ತದೆ. ಈ ಕಮಾಂಡ್ ದಾಟಿ ದೈರ್ಯದಿಂದ … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೬): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಸೂಕ್ಷ್ಮ ಪ್ರದೇಶಗಳು: ಪರಿಸರ ಸಂರಕ್ಷಣಾ ಕಾಯ್ದೆ ೧೯೮೬ ಕಲಂ ೩ರಂತೆ,  ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಪರಿಸರ ಸಂರಕ್ಷಣೆಗಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವ ಅಧಿಕಾರ ನೀಡಿದೆ. ಈ ಕಾಯ್ದೆಯ ಪ್ರಕಾರ ಕೇಂದ್ರವು ಪರಿಸರವನ್ನು ಕಲುಷಿತಗೊಳಿಸುವ ಎಲ್ಲಾ ತರಹದ ಕಾರ್ಖಾನೆಗಳ ಸ್ಥಾಪನೆಯನ್ನು ತಡೆಯುವುದು ಮತ್ತು ಈಗಾಗಲೇ ಪ್ರಾರಂಭಿಸಲಾಗಿರುವ ಕಾರ್ಖಾನೆಗಳಿಗೆ ನಿಷೇಧ ಹೇರುವ ಅಧಿಕಾರವಿದೆ ಅಥವಾ ಕಟ್ಟುನಿಟ್ಟಾದ ಎಚ್ಚರಿಕೆ ಕ್ರಮಕೈಗೊಳ್ಳಲು ನಿರ್ದೇಶಿಸಬಹುದಾಗಿದೆ. ಕಲಂ ೫(೧)ರಂತೆ ಜೀವಿವೈವಿಧ್ಯ ನಾಶವಾಗುವಂತಹ ಕಾರ್ಖಾನೆಗಳಿಗೂ … Read more

ಸಾಮಾನ್ಯ ಜ್ಞಾನ (ವಾರ 64): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು  ೧.    ಸ್ವತಂತ್ರ ಭಾರತದಲ್ಲಿ ನೇಮಕಗೊಂಡ ಪ್ರಥಮ ಶಿಕ್ಷಣದ ಆಯೋಗ ಯಾವುದು? ೨.    ಕೆಎಸ್‌ಆರ್‌ಪಿ (KSRP) ನ ವಿಸ್ತೃತ ರೂಪವೇನು? ೩.    ಹಸಿರು ಸಸ್ಯಗಳು ಯಾವ ಕ್ರಿಯೆಯ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ೪.    ಡಿ.ಟಿ.ಹೆಚ್. ಸೇವೆ ಆರಂಭವಾದ ವರ್ಷ  ಯಾವುದು? ೫.    ಶೂಲಪಾಣಿ ಇದು ಯಾರ ಕಾವ್ಯನಾಮವಾಗಿದೆ? ೬.    ಜಾಕೀರ್ ಹುಸೇನ್ ಎಂದಾಕ್ಷಣ ನೆನಪಿಗೆ ಬರುವ ವಾಧ್ಯ ಯಾವುದು? ೭.    ಸಚಿನ್ ತೆಂಡೂಲ್ಕರ್ ರವರ ಮೇಣದ ಪ್ರತಿಮೆ ಆಸ್ಟ್ರೇಲಿಯಾದ ಯಾವ ಕ್ರೀಡಾಂಗಣದಲ್ಲಿದೆ? ೮.    ಸೋಮೇಶ್ವರ … Read more

ಬಿಳಿಯ ಕರುಣೆಯ ಮೇಲೆ ಕಪ್ಪು ಕ್ರೌರ್ಯದ ಕಲ್ಲು: ಸಚೇತನ

ಮನುಷ್ಯ ! ಪ್ರೀತಿಸುವ ದ್ವೇಷಿಸುವ, ಕಾಡುವ ಕಾಡಿಸುವ, ಹೆದರುವ ಹೆದರಿಸುವ, ಅಳಿಸುವ ಸೃಷ್ಟಿಸುವ, ಕರುಣೆಯ ಕ್ರೌರ್ಯದ ಮನುಷ್ಯ. ಧರ್ಮದ ಹೆಸರಿನಲ್ಲಿ ಹಸಿದ ಹೊಟ್ಟೆಗೆ  ತುತ್ತು  ಅನ್ನ  ಕೊಡುವ ಮನುಷ್ಯ ಅದೇ ಧರ್ಮದ ಹೆಸರಿನಲ್ಲಿ ಅನ್ನಕ್ಕೆ ವಿಷವನ್ನಿಕ್ಕಬಲ್ಲ.  ಆದಿ ಮಾನವ ನಂತರದ ಆಧುನಿಕ ಮಾನವ  ಬದುಕಿಗೊಂದು ಶಿಸ್ತಿನ ಚೌಕಟ್ಟು ಬೇಕು ಎಂದು ಸೃಷ್ಟಿಸಿದ ಧರ್ಮದ ಸರಳ ರೇಖೆಗಳನ್ನ ತಿರುಚಿ ವಕ್ರವಾಗಿಸಿ ಸುಂದರ ರಂಗೋಲಿಯ ಸಾಲುಗಳನ್ನು ಕುಣಿಕೆಯಾಗಿಸಿ ಕುತ್ತಿಗೆಗೆ ಬಿಗಿಯಬಲ್ಲ ಮನುಷ್ಯ.  ಕ್ರೌರ್ಯ ಮತ್ತು ಕರುಣೆ ಒಂದೇ ಮುಖದ ಎರಡು … Read more

ನಮ್ಮ ಇಂದ್ರಿ ಕತಿ: ರುಕ್ಮಿಣಿ ನಾಗಣ್ಣವರ

ಕೆಲಸದ ಮ್ಯಾಲ ಹೆಡ್ ಆಫಿಸಿಗಿ ಹ್ವಾದ್ರ ನನ್ನದಲ್ಲದ ಕೆಲಸಾನೂ ನಾ ಮಾಡಬೇಕಾಗಿ ಬರ್ತದ. ಮನ್ನಿ ಮನ್ನೆರ ಕಂಪ್ಯೂಟರ್ ಕೆಲಸಕಂತ ಒಬ್ಬ ಹುಡುಗನ ನೇಮಿಸ್ಯಾರ.  ಅದೇನೋ ಡಿಪ್ಲೊಮಾ ಕೋರ್ಸ್ ಮುಗಿಸ್ಯಾನಂತ. ಆ ಊರ ಪಲ್ಲಾಳಗಿತ್ತಿ ಪದ್ದಿ ಬಾಯಾಗಿಂದ ಕೇಳಿದ ಸುದ್ದಿ. ಡಿಪ್ಲೊಮಾ ಮುಗಿಸಿದ ಹುಡಗ ಇಲ್ಲಿ ಇವರ ಕೊಡು ಯಾಡ ಸಾವಿರಕ ಅವರ ಅಂದಿದ್ದ ಅನಿಸ್ಕೊಂಡ ನಾಯಿಗಿಂತ ಕಡೆ ಆಗಿ ಯಾಕ ಸಾಯ್ಲಿಕ್ ಬಂದಾನೊ? ಅಂತ ನನಗ ಅನಿಸಿದ್ದೂ ಅದ. ಅವನ ಮಾರಿ ನೋಡಿದರ ಅಯ್ಯೋ ಪಾಪ! ಅನಿಸಿ … Read more

‘ನಿಶಾ’ಗಮನ: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ) ಇಡೀ ರಾತ್ರಿ ನಿದ್ದೆ ಹತ್ತಿರಕ್ಕೂ ಸುಳಿಯದೇ ಒದ್ದಾಡಿ ತನಗೆ ಯಾವಾಗಲೋ ನಿದ್ದೆ ಹತ್ತಿದ್ದು ಬೆಳಿಗ್ಗೆ ಎದ್ದಾಗಲೇ ಸುಜಯ್ ಗೆ ಗೊತ್ತಾಗಿದ್ದು. ಎದ್ದವನೇ ಅತ್ತಿತ್ತ ತಡಕಾಡಿ ತನ್ನ ಸ್ಮಾರ್ಟ್ ಫೋನು ಎಲ್ಲಿಹುದು ಅಂತ ಹುಡುಕಾಡಿದ. ಎದ್ದ ಕೂಡಲೇ ಅದರ ಮುಖ ನೋಡದಿದ್ದರೆ ಸಮಾಧಾನವಿಲ್ಲ ಅವನಿಗೆ. ಅದು ಪಕ್ಕದಲ್ಲಿರದಿದ್ದರೆ ಅವನಿಗೆ ಉಸಿರಾಡುವುದೂ ಕಷ್ಟವೇ! ಹಿಂದಿನ ಕಾಲದ  ಕಥೆಗಳಲ್ಲಿ ರಾಕ್ಷಸರ ಜೀವ ಒಂದು ಗಿಣಿಯಲ್ಲಿ ಇರುತ್ತಿತ್ತಂತೆ ಹಾಗೆಯೇ ಸುಜಯ್ ನ ಜೀವ ಅವನ ಸ್ಮಾರ್ಟ್ ಫೋನ್ ನಲ್ಲೆ ಇದೆ. ಅದನ್ನೊಂದು … Read more