ಕವಲುದಾರಿ: ಹರ್ಷ ಮೂರ್ತಿ
ಸಂಜೆಯ ಜಿಟಿಪಿಟಿ ಮಳೆ ಹನಿಯುತ್ತಿತ್ತು. ರಸ್ತೆಯ ಗುಂಡಿಗಳೆಲ್ಲ ನೀರು ತುಂಬಿ ಸಮೃದ್ಧವಾಗಿದ್ದವು, ಅವು ಮೋಟಾರು ವಾಹನಗಳ ಬರುವಿಕೆಗೆ ಕಾಯುತ್ತ ಕೆಸರೆರೆಚಾಟಕ್ಕೆ ಸನ್ನದ್ಧವಾಗಿದ್ದವು. ಗಿಡಮರಗಳೆಲ್ಲವೂ ಮಳೆಯಲ್ಲಿ ತೊಯ್ದು ಹಸುರಿನಿಂದ ಕಂಗೊಳಿಸುತ್ತಿದ್ದವು. ರಸ್ತೆಯಲ್ಲಿ ಜನಸಂಚಾರ ಬಹಳ ವಿರಳವಾಗಿತ್ತು. ಅಲ್ಲೊಂದು ಓಬಿರಾಯನ ಕಾಲದ ಮುರುಕಲು ಬಸ್ ಸ್ಟಾಪ್. ಊರಿಗೆ ಹೊಸ ರಸ್ತೆ ಬಂದ ಮೇಲೆ ಈ ರಸ್ತೆಯಲ್ಲಿ ಊರಿನವರ ಕೆಲ ವಾಹನಗಳ ಬಿಟ್ಟರೆ ಬಸ್ಸುಗಳಾವುವೂ ಓಡುತ್ತಿರಲಿಲ್ಲ. ಹೀಗಾಗಿ ಆ ಬಸ್ ಸ್ಟಾಪನ್ನು ಕೇಳುವರಾರೂ ಇಲ್ಲದೆ ಅವಸಾನದತ್ತ ಸಾಗಿತ್ತು. ಅದೇ ಬಸ್ … Read more