ಸ್ತ್ರೀಯರ -ಸಿದ್ಧ ಮಾದರಿಯ ಸಂವೇದನೆಗಳು: ನಾಗರೇಖಾ ಗಾಂವಕರ

“ನಾನೇ ಮಾಡ್ತೀನಿ, ನೀ ಮಾಡೋದೇನೂ ಬೇಡ,ಎಂದು ಎಷ್ಟು ಹೇಳಿದರೂ ಕೇಳದೇ ದಿನಕ್ಕಾಗುವಷ್ಟು ಅಡುಗೆ ಮಾಡಿಟ್ಟೇ ಹೋಗಿದ್ದಾಳೆ, ಪಾಪ.ಕೆಲವು ವಿಷಯಗಳಲ್ಲಿ ಹೆಣ್ಮಕ್ಕಳು ತೀರಾ ಪೋಸೆಸಿವ್ ಅಲ್ವಾ?”ಎರಡು ದಿನಗಳ ಮಟ್ಟಿಗೆ ತೌರಿಗೆ ಹೊರಟ ಹೆಂಡತಿ ಪತಿಗಾಗಿ ಮುತುವರ್ಜಿಯಿಂದ ಅಲ್ಲಿ ಇಲ್ಲಿ ತಿಂದು ಹೊಟ್ಟೆ ಕೆಡಿಸಿಕೊಳ್ಳಬಾರದೆಂಬ ಕಾರಣದಿಂದ ತೌರಿಗೆ ಹೋಗುವಾಗಲೂ ಒಂದಿಟ್ಟು ಬೇಯಿಸಿಟ್ಟು ಹೋದ ಬಗ್ಗೆ ಪತಿ ಮಹಾಶಯನೊಬ್ಬನ ಅಂಬೋಣ ಇದು. ನನಗಾಶ್ಚರ್ಯ. ತನಗಾಗಿ ಕಾಳಜಿಯಿಂದ ಅಡುಗೆ ಮಾಡಿಟ್ಟು ಹೋದ ಹೆಂಡತಿಗೆ ಪೊಸೆಸಿವ್ ಎಂಬ ಬಿರುದುಕೊಟ್ಟ ಗಂಡಿನ ಬಗ್ಗೆ.ಇದಕ್ಕೆ ಕಾರಣ ಆತನಲ್ಲ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಈ ಬಾರಿಯ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ಮಿನೆಸೊಟಾ ರಾಜ್ಯದ ರಾಚೆಸ್ಟರ್‍ನಲ್ಲಿ ನೆಲೆಸಿರುವ ಗುರುಪ್ರಸಾದ ಕಾಗಿನೆಲೆ ಅವರ ಕೃತಿ: ಹಿಜಾಬ್ ಇದಕ್ಕೆ ದೊರೆತಿದೆ. ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ: ಆಗಸ್ಟ್ 13, 2018 ಸೋಮವಾರ ಅಪರಾಹ್ನ: 2.00 ಗಂಟೆಗೆ ನಡೆಯಲಿದೆ. ಮುಖ್ಯ ಅತಿಥಿ ಗಳಾಗಿ ಎಸ್. ದಿವಾಕರ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ವಿವರ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಬೆಳಿಗ್ಗೆ 9.30 ರಿಂದ ನಿನಾದ ಕನ್ನಡ ಕಾವ್ಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಸಹಜ-ಸುಧೆ ಸಾಗರದಾಚೆಗೆ ಏನೆಂದು ತೀರಕೇ ಅರಿವಿಲ್ಲ ಅಂಚಿನಾ ಚಿಂತೆಯ ಮಂಥನ ಬೇಕೇ? ಸಾಗರದಲೆಯಿರಲು ಒಂದೊಂದೂ ಅನನ್ಯ ಸೆರೆಯಾಗಲಿ ಕಣ್ಮನ ಅದಕೇ! ಅತಿ ಹೆಚ್ಚು! ಅತಿ ದೊಡ್ಡ! ಅತಿ ಜಾಣ! ಅತಿ ಭಾರ! ಅತಿ ಅವನತಿ ಅತೀತಗಳ ಗತಿಗಿದೆ ಕರ್ಮ ಅವಲೋಕನಗಳ ಕೊನೆ ನಿಲ್ದಾಣವಿಗೋ ಮರ್ಮ| ಜೀವ-ಜೀವವೂ ಆಗಿರೆ ಜೀವಾಳದನ್ವಯ ವ್ಯಾಖ್ಯಾನ ಚಿತ್ರಿಸುತಿದೆ ಅನುಭವದ ಅವ್ಯಯ|| ಸಾಧ್ಯತೆಯ ಸಲೀಸಿಗೆ ಸೋತರದು ಅಫಲ ಸಾಧಕದ ಸ್ಥಾಯಿಯ ಮೆಟ್ಟರೊಲೀತು ಸಫಲ| ಸಾಧು ತಾನೆಂದು ಹೊಳೆಯುತಿರೆ ಸಾರ್ಥಕತೆ ಸದ್ದು-ಸುದ್ದಿಯ ಹಂಗೇ ಸಾಧನೆಯನಳೆವ ಸಾಧನಕೆ? … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೇಳುವುದಕ್ಕೆ ಕೇಳುವುದಕ್ಕೆ ಇವರಿಗೆ ಹಕ್ಕಿದೆಯೇ?: ಗುರುಪ್ರಸಾದ ಕುರ್ತಕೋಟಿ, ಬೆಂಗಳೂರು

ಕೆಲವು ದಿನಗಳ ಹಿಂದೆ ಒಂದು ಪತ್ರಿಕೆಯಲ್ಲಿ ನಮ್ಮ ಭಾರತದ ಸಮಸ್ಯೆಗಳ ಕುರಿತು, ಎಷ್ಟೋ ವರ್ಷಗಳಿಂದ ಅಮೆರಿಕೆಯಲ್ಲಿ ನೆಲೆಸಿರುವ ಒಬ್ಬರು ಬರೆದ “ಹೇಳುವವರು ಕೇಳುವವರು ಇಲ್ಲದ ದೇಶ” ಎಂಬ ಲೇಖನ ಓದಿದೆ. ಭಾರತದ ಬಗೆಗಿನ ಅವರ ಹೊರನೋಟ ಅದಾಗಿತ್ತು. ಅವರು ಇಲ್ಲಿಗೆ ಕೆಲ ದಿನಗಳ ಮಟ್ಟಿಗೆ ಬಂದಾಗ ಆದ ಕಟು ಅನುಭವಗಳ ಕುರಿತು ಪ್ರಸ್ತಾಪಿಸಿದ್ದರು. ಟ್ಯಾಕ್ಸಿಯ ಡ್ಯಾಶ್ ಬೋರ್ಡ್ ಅಲ್ಲಿ ಇಲಿ ಬಂತಂತೆ… ಯಾವ್ದೂ ಸಿಸ್ಟಮ್ ಕೆಲಸ ಮಾಡಲ್ವಂತೆ… ಇಲ್ಲಿನ ಜನ ಏನು ಮಾಡಿದರೂ ಸುಮ್ಮನಿರುತ್ತಾರಂತೆ… ಹಾಗೆ ಹೀಗೆ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಾಲಿಗೆ ಬಂದದ್ದು ಪಂಚಾಮೃತ……: ನಳಿನಿ. ಟಿ. ಭೀಮಪ್ಪ.

ರಾಜುವಿಗೆ ಏನೋ ಕುತೂಹಲ. ತಾನು ಮನೆಯಲಿಲ್ಲದ ಸಮಯದಲ್ಲಿ ಅಪ್ಪ, ಅಮ್ಮ, ಅಣ್ಣ, ಅತ್ತಿಗೆ ತನ್ನ ಮದುವೆಯ ಬಗ್ಗೆ ಏನೋ ಗಂಭೀರವಾಗಿ ಚರ್ಚಿಸುತ್ತಿದ್ದುದನ್ನು ಅಣ್ಣನ ಮಕ್ಕಳು ಆಟವಾಡುತ್ತಾ ಗಮನಿಸಿ ವಿಷಯ ತಿಳಿಸಿದ್ದರು. ಮದುವೆ, ರಾಜು ಹೆಸರು ಆಗಾಗ ಹೇಳುತ್ತಿದ್ದರು ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ಹೇಳಿ ಆಡಲು ಓಡಿದವು. ಆಟದ ಬಗ್ಗೆ ಲಕ್ಷ್ಯವಿದ್ದ ಮಕ್ಕಳಿಗೆ ದೊಡ್ಡವರ ಮಾತುಗಳಲ್ಲಿ ಆಸಕ್ತಿಯೇನೂ ಇರಲಿಲ್ಲ. ಸ್ವಲ್ಪ ದಿನದಲ್ಲಿ ರಾಜುವಿನ ಮದುವೆಯ ಬಗ್ಗೆ ಚರ್ಚೆ ಕಾವೇರತೊಡಗಿತ್ತು. ಮಕ್ಕಳಿಗೆ ವಿಷಯವೆಲ್ಲಾ ಸರಿಯಾಗಿ ಕೇಳಿಸಿಕೊಳ್ಳಲು ಚಾಕೊಲೇಟಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಂದಿನ ಆ ಕರಾಳ ರಾತ್ರಿ: ನಂದಾ ಹೆಗಡೆ

ಎಪ್ಪತ್ತರ ಇಳಿವಯಸ್ಸಿನಲ್ಲಿ ನಾನು ನನ್ನ ಹಿಂದಿನ ಬದುಕಿನ ಬಗ್ಗೆ ಒಂದು ಸಿಂಹಾವಲೋಕನ ಮಾಡಿದಾಗ—————– ನನ್ನ ಬದುಕು ನಾನಂದುಕೊಂಡಂತೆಯೇ ನಡೆಯಿತು. ಎಷ್ಟೋ ಜನ ಹೇಳುತ್ತಾರೆ, ಬದುಕು ನಾನಂದುಕೊಂಡಂತೆ ನಡೆಯಲೇ ಇಲ್ಲ. ನಾನಂದುಕೊಂಡಿದ್ದೇ ಒಂದು, ಬದುಕು ನಡೆದದ್ದೇ ಬೇರೆ, ನಾನೇನೇನೋ ಕನಸು ಕಂಡಿದ್ದೆ. ಆದರೆ ನನ್ನ ಯಾವ ಕನಸೂ ನನಸಾಗಲಿಲ್ಲ. . . . . . . . . ಹೀಗೇ ಏನೇನೋ . . . . . . . . . . . … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿನ್ನ ಪ್ರೀತಿಯಲ್ಲಿ ರಾಧೆಯಾಗುವ ಇರಾದೆ ನನಗಿಲ್ಲ ಗೆಳೆಯ: ಜಯಶ್ರೀ.ಜೆ. ಅಬ್ಬಿಗೇರಿ

ಸಿಕ್ಕ ಸಿಕ್ಕವರೊಂದಿಗೆ ನಾನೇ ಮುಂದಾಗಿ ಕೈ ಚಾಚಿ ಗೆಳೆತನ ಮಾಡಿಕೊಳ್ಳೋದು ಅಂದ್ರೆ ಮೊದಲಿನಿಂದಲೂ ಅದೇಕೋ ಇಷ್ಟ ನಂಗೆ. ಈ ಗೆಳೆತನದ ವಿದ್ಯೆಗೆ ನಾನೇ ಗುರುವಾಗಿ ತುಂಬಾ ಕಲಿತಿದಿನಿ. ತೊಚಿದ್ದೆನ್ನೆಲ್ಲಾ ಗೀಚಬೇಕೆನ್ನುವ ಹುಚ್ಚು ಅದ್ಯಾವಾಗ ಹಿಡಿತೋ ಎಷ್ಟು ತಲೆ ಕೆರೆದುಕೊಂಡರೂ ನೆನಪಾಗ್ತಿಲ್ಲ. ಪುಸ್ತಕಗಳ ರಾಶಿಯ ಮಧ್ಯೆ ನನ್ನನ್ನೇ ಮರೆತು ಹೋಗುವ ಖಯಾಲಿಯಂತೂ ಖಾಸಾ ಗೆಳತಿಯರಿಂದ ಹಿಡಿದು ನಿನ್ನೆ ಮೊನ್ನೆ ಕೈಕುಲುಕಿದವರಿಗೂ ಗೊತ್ತಿದೆ.ಹಟ ತೊಟ್ಟ ಹಟವಾದಿ ಹಂಗ ಓದೋದು ಬರೆಯೋದು ಅಂದ್ರ ಪಂಚಪ್ರಾಣ.ಹಂಗಂತ ಮಾತಿಗೇನೂ ಕಮ್ಮಿಯಿಲ್ಲ. ಆದರೂ ಯಾರೂ ನನಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಕ್ಕಳ ಕವನಗಳು: ಡಾ.ಶಿವಕುಮಾರ ಎಸ್‌.ಮಾದಗುಂಡಿ, ವೆಂಕಟೇಶ ಚಾಗಿ, ಸಿಂಗಾರಿಪುರ ಆದಿತ್ಯಾ

ಗುಬ್ಬಿ ಮರಿ!! ಗುಬ್ಬಿ ಗುಬ್ಬಿ ಚೀಂವ್ ಚೀಂವ್ ಎನ್ನುವ ನಿನ್ನಯ ಸಪ್ತಸ್ವರ ರಾಗ ಕೇಳುತ್ತಿಲ್ಲ! ನಮ್ಮ ಬಳಿಯೇ ಸುಳಿಯ ಬಯಸುವ ಚೀಂವ್ ಚೀಂವ್ ಗುಬ್ಬಿ ನಿನ್ನ ದ್ವನಿ ಕೇಳುತ್ತಿಲ್ಲ! ಕಾಳನು ಹಾಕುತಾ ಹಿಡಿಯಲು ಬರುವೇ ನೀನೆಲ್ಲಿ ಹೋದೆ ಗುಬ್ಬಚ್ಚಿ ನಿಮ್ಮಯ ಕಲರವ ಕಾಣುತ್ತಿಲ್ಲ! ನಮ್ಮ ಮನೆಯ ಅಂಗಳದೊಳಗೆ ನಿಮ್ಮ ಸ್ನೇಹ ಬಳಗದ ಸದ್ದು ಈಗ ನಾ ನೋಡಿಲ್ಲಾ! ನಿಮ್ಮಗಳಿಗಾಗಿ ಇಂದು ಹುಡುಕಾಡುವ ಸ್ಥಿತಿ ನಮಗೆ ಬಂದಿದೆ ನಿವೆಲ್ಲಿ ಹೋದಿರಾ ಗುಬ್ಬಿಚ್ಚಿ…!! ಡಾ.ಶಿವಕುಮಾರ ಎಸ್‌.ಮಾದಗುಂಡಿ       … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತಂತ್ರಗಾರಿಕೆಯ ಚಕ್ರಮೇಘದಲ್ಲಿ ಮರೆಯಾದ ಜಯದ್ರತಭಾಸ್ಕರ!: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ಮಹಾಭಾರತ ತಂತ್ರಗಳ ಆಗರ! ಶ್ರೀಕೃಷ್ಣ ತಂತ್ರಗಾರಿಕೆಯ ಅರಸ! ಪಾಂಡವರಿಂದ ಜಯಿಸಲಸದಳವಾದ ಕುರುಕ್ಷೇತ್ರ ಯುದ್ದವ, ಅತಿರಥ ಮಹಾರಥರೆನಿಸಿದ ಭೀಷ್ಮ, ದ್ರೋಣ, ಕರ್ಣ, ದುರ್ಯೋಧನ ಮೊದಲಾದವರನ್ನು ತಂತ್ರಗಾರಿಕೆಯಿಂದಲೇ ಜಯಿಸುವಂತೆ ಮಾಡಿ ವಿಜಯ ಮಾಲೆ ಪಾಂಡವರಿಗೆ ಹಾಕಿಸಿದ ಮಹಾತಂತ್ರಿ! ಇದೆಲ್ಲಾ ಧರ್ಮ ಸಂಸ್ಥಾಪನಾರ್ಥಾಯ ದುಷ್ಟ ಶಿಕ್ಷಣಾರ್ಥಾಯ ಶಿಷ್ಟ ರಕ್ಷಣಾರ್ಥಾಯ! ದ್ರೋಣ ಪರ್ವ ಆರಂಭವಾಗಿರುತ್ತದೆ. ಪಾಂಡವರು ಮತ್ತು ಕೌರವರೆಲ್ಲರಿಗೂ ಬಿಲ್ವಿದ್ಯೆಯನ್ನು ಕಲಿಸಿದ ಗುರು ದ್ರೋಣ. ಇವರು ಕುರುಕ್ಷೇತ್ರ ಯುದ್ದದ ಸಂದರ್ಭದಲ್ಲಿ ಕೌರವರ ಪಕ್ಷದಲ್ಲಿ ಇರಬೇಕಾಗುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಸೇನಾ ನಾಯಕನಾಗಿದ್ದ ಭೀಷ್ಮರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಿರುಲೇಖನಗಳು: ವೇದಾವತಿ ಎಚ್.ಎಸ್.

ಚಿಕ್ಕವರಿದ್ದಾಗ ಎಲ್ಲಾ ಮಕ್ಕಳು ಸಾಮಾನ್ಯವಾಗಿ ಆಡುತ್ತಿದ್ದ ಆಟ ಕಣ್ಣಾಮುಚ್ಚಾಲೆ. ತಂಡದಲ್ಲಿ ಯಾವುದಾದರೂ ಒಂದು ಮಗು ಕಣ್ಣು ಮುಚ್ಚಿಕೊಂಡು ಹಾಡನ್ನು ಹೇಳುವುದು ಸಾಮಾನ್ಯವಾಗಿರುತ್ತದೆ.ಆ ಹಾಡು ಒಬ್ಬರ ಬಾಯಿಂದ ಇನ್ನೋಬ್ಬರ ಬಾಯಿಗೆ ಆಟದ ಮುಖಾಂತರವಾಗಿ ಬಂದಿದೆ. ಈ ಹಾಡಿನ ಒಳಾರ್ಥ ಮಾತ್ರ ಮಕ್ಕಳಿಗೆ ತಿಳಿಸಿದವರು ವಿರಳ ಎನ್ನಬಹುದು. “ಕಣ್ಣಾ ಮುಚ್ಚೇ…ಕಾಡೇ ಗೂಡೇ…ಉದ್ದಿನ ಮೂಟೆ…ಉರುಳೇ ಹೋಯ್ತು…ನಮ್ಮಯ ಹಕ್ಕಿ…ನಿಮ್ಮಯ ಹಕ್ಕಿ…ಬಿಟ್ಟೇ ಬಿಟ್ಟೆ…”ಕೊನೆಯಲ್ಲಿ “ಕೂ”ಎಂದು ಕಣ್ಣು ಮುಚ್ಚಿಕೊಂಡ ಮಗು,ಕಣ್ಣು ಬಿಟ್ಟು ಕೊಂಡು ಬೇರೆಯವರನ್ನು ಹುಡುಕಿಕೊಂಡು ಹೋಗುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದರ ಅರ್ಥ ಹೀಗಿದೆ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಿರುಲೇಖನಗಳು: ವೆಂಕಟೇಶ್ ಚಾಗಿ, ಪ್ರವೀಣ ಶೆಟ್ಟಿ, ಕುಪ್ಕೊಡು, ಕೆಂದೆಲೆ ವನಜ

ತಪ್ಪು ಮಾಡದವ್ರು ಯಾರವ್ರೆ ? ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರೂ ಒಂದಲ್ಲಾ ಒಂದು ತಪ್ಪು ಮಾಡೇ ಮಾಡಿರ್ತಾರೆ ಅಲ್ಲವೇ? ನಾನು ತಪ್ಪೇ ಮಾಡಿಲ್ಲ ಎಂದು ಘಂಟಾಘೋಷವಾಗಿ ಹೇಳುವವರು ಯಾರಾದರೂ ಇದ್ದಾರೆಯೇ ? ಇಲ್ಲ . ತಪ್ಪು ಮಾಡುವುದು ಮಾಡುವುದು ಮನುಷ್ಯನ ಸಹಜಧರ್ಮ . ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ತಪ್ಪುಗಳನ್ನು ಮಾಡಿರುತ್ತೇವೆ. ಅವು ತಪ್ಪುಗಳಲ್ಲ. ಸ್ವ ಕಲಿಕೆಯ ಹಂತಗಳು. ತಪ್ಪುಗಳು ಒಂದೊಂದೇ ಕಲಿಕೆಯನ್ನು ತಿಳಿಸುತ್ತಾ ಹೋಗುತ್ತವೆ. ಮಗು ಆಟವಾಡುವಾಗ, ಮಾತನಾಡುವಾಗ, ಬರೆಯುವಾಗ ಹೀಗೆ ಹಲವಾರು ಸನ್ನಿವೇಶಗಳಲ್ಲಿ ತನಗೆ ಅರಿವಿಲ್ಲದೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದಯೆಯೇ ಧರ್ಮದ ಮೂಲ (ಕೊನೆಯ ಭಾಗ): ಸುನಂದಾ ಎಸ್ ಭರಮನಾಯ್ಕರ

ಇಲ್ಲಿಯವರೆಗೆ ಕರುಣೆ ಇರುವುದು ಕೊಡುವುದರಲ್ಲಿ ಇಲ್ಲ:- ನಾವು ಬೇರೆಯವರಿಗೆ ತೋರಿಸುವ ಕರುಣೆ ಅವರನ್ನು ಆಶಕ್ತರನ್ನಾಗಿ, ಬಲಹೀನರನ್ನಾಗಿ ಮಾಡಬಾರದು ಅಷ್ಟೇ ಅಲ್ಲ, ನಮ್ಮ ದಯೆ ಅವರಲ್ಲಿ ದುಷ್ಟ ಆಲೋಚನೆಗಳನ್ನು ಹುಟ್ಟುಹಾಕಬಾರದು, ಹಾಗಾದಲ್ಲಿ ಅದಕ್ಕೆ ಸೂಕ್ತ ದಂಡನೆಯನ್ನು ನಾವೇ ಅನುಭವಿಸುತ್ತೇವೆ. ಅದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ. ಅರ್ಹತೆಯಿಲ್ಲದೆ ಏನನ್ನು ಪಡೆಯಬಾರದು ಹಾಗೇ ಅರ್ಹತೆಯಿಲ್ಲದವನಿಗೆ ಏನನ್ನು ಕೊಡಲೂಬಾರದು. ಸಾಧುವೊಬ್ಬ ಒಂದು ಗುಹೆಯಲ್ಲಿ ಕುಳಿತುಕೊಂಡು ಬಹಳ ಕಠಿಣವಾದ ತಪಸ್ಸನ್ನಾಚರಿಸುತ್ತಿದ್ದ ಆತ ಸಾಧನೆಯಲ್ಲಿ ಏಕಾಗ್ರತೆಯಿಂದ ತೊಡಗಿಸಿಕೊಂಡಿದ್ದನು. ಒಂದು ದಿನ ಅರಣ್ಯದಲ್ಲಿ ಬೇಟೆಯಾಡುತ್ತಾ ಬಂದ ರಾಜನೊಬ್ಬ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಗಝಲ್… ಹುಡುಕುತ್ತಾ ಹೊರಟ ನನಗೆ ಕಳೆದುಕೊಂಡಷ್ಟು ಸಿಕ್ಕಿತು ಸಖಾ.. ಬಯಸುತ್ತಾ ಹೊರಟ ನನಗೆ ಬಯಸಲಾರದಷ್ಟು ದಕ್ಕಿತು ಸಖಾ… ನಿನ್ನ ಗುಟ್ಟುಗಳೆಲ್ಲಾ ನನ್ನ ಪಿಸುದ್ವನಿಯಲಿ ರಟ್ಟಾದವು… ಮೆರೆದು ತುಳುಕಿದ ಒಂದೆರಡು ಹನಿ ಜೀವದ ಕೊನೆ ಹೊಕ್ಕಿತು ಸಖಾ… ನಿನ್ನ ಬಾಹುವಿನ ಮುದ ಬಂಧಿಸಿದೆ ಬಿಡದೆ ನನ್ನ ತಾರುಣ್ಯ… ತಾಜಮಹಲಿನ ಗೋರಿ ಇದ ಬಯಸಿ ಬಿಕ್ಕಿತು ಸಖಾ… ಯಮುನೆಯಲ್ಲಾ ಬಸಿದು ತಂದೆ ಬೊಗಸೆಯಲಿ ನನ್ನ ಕಣ್ಣ ಭಾವಕ್ಕೆ… ನನ್ನೆದೆಯ ಗಂಧ ನಿನ್ನ ಹುಮ್ಮಸ್ಸಿನ ಹೂಂ ಗುಟ್ಟುವಿಕೆಗೆ ಸೊಕ್ಕಿತು ಸಖಾ… ಬಡಿದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಂದು ಹುಡಗಿಯ ಶವ ಮತ್ತು ಪವಿತ್ರ ಜಲ !: ಅಶ್ಫಾಕ್ ಪೀರಜಾದೆ

-1- ದುಂಡಾಪುರ ! ಎಲ್ಲ ಜಾತಿಯ , ಎಲ್ಲ ವರ್ಗದ ಜನ ಒಟ್ಟಾಗಿ,ಒಗ್ಗಟ್ಟಾಗಿ ಬದುಕುವ ಒಂದು ಪುಟ್ಟ ಗ್ರಾಮ. ಜಾತಿಯಾಧಾರಿತ ಕಸಬುಗಳಲ್ಲಿ ನಿರತ ಗ್ರಾಮಸ್ಥರು ತಂತಮ್ಮ ಯೋಗ್ಯತೆಯನುಸಾರ ನಡೆದುಕೊಳ್ಳುವುದರಿಂದ ವಿವಿಧ ಕೋಮುಗಳ ನಡುವೆ ಮನಸ್ತಾಪವಿಲ್ಲ, ಗಲಭೆಗಳಿಲ್ಲ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ತತ್ತ್ವದಲ್ಲಿ ನಂಬಿಕೆಯಿಟ್ಟು ಶಾಂತಿಯಿಂದ, ನಂಬಿಕೆಯಿಂದ ಬದುಕು ಸಾಗಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಈ ಗ್ರಾಮವನ್ನು ಒಂದು ಆದರ್ಶ ಗ್ರಾಮ ಒಂದು ಮಾದರಿ ಗ್ರಾಮವೆಂದೇ ಬಣ್ಣಿಸಬಹುದು. ಜಾತಿಯಾಧಾರಿತ ಕಸಬುಗಳಾದ ಚಮ್ಮಾರಿಕೆ, ಕುಂಬಾರಿಕೆ,ಕಂಬಾರಿಕೆ, ಪತ್ತಾರಿಕೆ, ಬಡಿಗತನ, ಕುರಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಅಡಚಣೆಗಾಗಿ ಕ್ಷಮಿಸಿ…ದ್ದರೂ ಏಟು ಬಿದ್ದಿತ್ತು ಅಂದು !!”: ಗಿರೀಶ್.ವಿ

ಅಂದು ಡಿಸೆಂಬರ್ 4, 2017 ರಾತ್ರಿ ಎಂಟಾಗಿತ್ತು. ನನ್ನವಳು ಕನ್ನಡ ಪತ್ರಿಕೆ ಯೊಂದರಲ್ಲಿನ ಪದಬಂಧ ಬಿಡಿಸುವುದರಲ್ಲಿ ನಿರತಳಾಗಿದ್ದಳು. ಸಾಮಾನ್ಯವಾಗಿ ಅತೀ ವೇಗದಲ್ಲಿ ಉತ್ತರ ಕಂಡುಕೊಳ್ಳುತ್ತಿದ್ದವಳಿಗೆ ಅಂದು ಒಂದು ಸಾಲು ಮಾತ್ರ ಕೈಕೊಟ್ಟಿತ್ತು. ‘ಈಗಂತೂ ಅರ್ಜೆಂಟಾಗಿ ಒಂದು ಕಾಫಿ ಬ್ರೇಕ್ ತಗೋಬೇಕು’ ಅನ್ನುತ್ತಾ ಎದ್ದವಳಿಗೆ ನಾನು ‘ವಿರಾಮ ಬೇಕಿದ್ದರೇ ಸ್ವಲ್ಪ ದೂರ ವಾಕಿಂಗ್‍ಗೆ ಹೋಗಬಹುದು, ಅದಿಲ್ಲದಿದ್ದರೆ ಸಂಗೀತ ಕೇಳಬಹುದು! ಆದ್ರೆ ಕಾಫಿ ಮಾತ್ರ ಬೇಡ ಅಂದೆ’. ಇನ್ನೂ ಮುಂದುವರಿದು, ತಮಾಷೆಗೆ ‘ನಿನ್ನ ಸಾಮಥ್ರ್ಯ ಮತ್ತು ಬುದ್ಧಿಮತ್ತೆ ಚುರುಕಾಗಲು ಕಾಫಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬುಟ್ಟಿಗೊಂದು ಬುತ್ತಿ ಬಿದ್ದಾಗ…: ಮಂಗಳ ರವಿಕುಮಾರ್

ಬೆಂಗಳೂರಿನಲ್ಲಿ ಬದುಕುವುದು ಕಲಿತು ನಾಲ್ಕೈದು ವರ್ಷ ಆಗಿರಬಹುದು. ಆದರೆ ನನ್ನನ್ನು ನಾನು ಇಷ್ಟೊಂದು ಕಳೆದುಕೊಂಡಿದ್ದು ಇದೇ ಮೊದಲು. ಹಾಡು, ಕುಣಿತ, ಎಲ್ಲರನ್ನೂ ಆಕರ್ಷಿಸುತ್ತಿದ್ದ ನನ್ನ ತಮಟೆ ಸದ್ದು.. ಅವ್ಯಾವೂ ಈಗಿಲ್ಲ. ನಾನು, ನನ್ನ ಅಸ್ಮಿತೆ ಬೇರೆಬೇರೆಯಂತೆ ಅನಿಸುತ್ತಿದೆ. ನೋಡಿ, ಆಗ ಜೊತೆಗಿದ್ದ ಗೆಳೆಯ-ಗೆಳತಿಯರು ಈಗ ದೊಡ್ಡ ಸಾಧಕರಂತೆ, ಪತ್ರಕರ್ತರಂತೆ, ಅಥವಾ ತುಂಬಾ ಸುಖೀ ಜೀವಿಗಳಂತೆ ಕಾಣುತ್ತಾರೆ. ನಾನೂ ಅವರನ್ನೆಲ್ಲಾ ಸಂಪರ್ಕಿಸುವುದೇ ಕಡಿಮೆ. ಬಹುಶಃ ನಾನೀನ ಅವರಿಗೆ ತುಂಬಾ ದೂರದ ಗೆಳತಿಯಾಗಿದ್ದಿರಬಹುದು. ಅಥವಾ ನನಗೇ ನಾನೇ ಹಾಗಂದುಕೊಂಡಿರಬಹುದು! ಒಂದಿಷ್ಟು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಾಣಸುದ್ದಿ 12: ಕೊಳ್ಳೇಗಾಲ ಶರ್ಮ, ಡಾ. ಎನ್. ಆರ್. ಮಂಜುನಾಥ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹುರುಳಿ ಕಾಳಿನ ಬಸ್ಸಾರು, ಹುರುಳಿ ಕಾಳಿನ ಉಸುಲಿ ರೆಸಿಪಿ: ವೇದಾವತಿ ಹೆಚ್. ಎಸ್.

ಹುರುಳಿ ಕಾಳು ದ್ವಿದಳ ಧ್ಯಾನವಾಗಿದ್ದು, ಅನೇಕ ರೀತಿಯ ಆರೋಗ್ಯ ಸಂಗಾತಿ ಗುಣ ಹೊಂದಿದೆ. ಬಹಳ ರುಚಿಯಾದ ಹಾಗೂ ಪೋಷಕಾಂಶಯುಕ್ತ ಆಹಾರ ಪದಾರ್ಥಗಳಲ್ಲೊಂದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್, ವಿಟಮಿನ್, ಜೀವಸತ್ವ, ಖನಿಜ, ಕಬ್ಬಿಣ, ಫಾಸ್ಪರಸ್, ಕ್ಯಾಲ್ಸಿಯಂ ಹೊಂದಿದೆ. 1.ಹುರುಳಿ ಕಾಳಿನ ಬಸ್ಸಾರು. ಬೇಕಾಗುವ ಸಾಮಾಗ್ರಿಗಳು: ಮೊಳಕೆ ಕಟ್ಟಿದ ಹುರುಳಿ ಕಾಳು 1ಕಪ್ ತೆಂಗಿನ ತುರಿ ಅರ್ಧ ಕಪ್/ಆಗಲೇ ತುರಿದದ್ದು. ಹುಣುಸೆ ಹಣ್ಣಿನ ರಸ ಸ್ವಲ್ಪ ಜೀರಿಗೆ ಒಂದು ಟೀ ಚಮಚ ಸಾಸಿವೆ ಅರ್ಧ ಟೀ ಚಮಚ ಇಂಗು ಚಿಟಿಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅರೆ! ನಾವ್ಯಾಕೆ ಹೀಗಾಡ್ತಿವಿ??: ಜಯಶ್ರೀ.ಜೆ.ಅಬ್ಬಿಗೇರಿ.

ಮನಸ್ಸಿನಲ್ಲಿ ಮಂಡಿಗೆ ತಿನ್ನೋದು ಅಂತಾರಲ್ಲ ಹಾಗೆ ಮನೆ ಮಂದಿಗೆ ಗೆಳೆಯರಿಗೆ ಹೆತ್ತವರಿಗೆ ಹೇಳಲೇಬೇಕಾದುದನ್ನು ನಮ್ಮಲ್ಲಿ ಕೆಲವರು ತಾವು ಹೇಳುವುದು ಸರಿಯಿದ್ದರೂ ಹೇಗೆ ಹೇಳೋದು ಅಂತ ಇದ್ದ ಒಂದು ತಲೆ ಕೆಡಿಸಿಕೊಂಡು ಬೇಕಾಗಿದ್ದನ್ನು ಬೇಡವಾಗಿದ್ದನ್ನು ಯೋಚಿಸಿ ಇನ್ನೇನು ಪರಿಸ್ಥಿತಿ ಹದಗೆಡುತ್ತೆ ಅನ್ನೋವಾಗ ಅದೆಷ್ಟೋ ದಿನಗಳಿಂದ ತಲೆಯಲ್ಲಿಟ್ಟಕೊಂಡ ವಿಷಯವನ್ನು ಹೇಳಿದರೆ ಅವರೇನು ಅಂದುಕೊಳ್ತಾರೋ ಎಲ್ಲಿ ನೊಂದುಕೊಳ್ತಾರೋ ತನ್ನಿಂದಾಗಿ ಅವರಿಗೆ ಬೇಸರ ಆದರೆ ಸಿಟ್ಟು ಮಾಡಿಕೊಂಡರೆ ಅಂತ ತಾವೇ ಲೆಕ್ಕ ಹಾಕುತ್ತ ಕೂಡಿಸಿ ಕಳೆದು ಗುಣಿಸಿ ಇನ್ನೇನು ತಲೆ ಸಿಡಿಯುತ್ತೆ ಅನ್ನುವಾಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ