“ಒಂದು ಸಾಂತ್ವನಪರ ನುಡಿ ಚಳಿಗಾಲದ ಮೂರು ತಿಂಗಳನ್ನು ಬೆಚ್ಚಗಿಡಬಲ್ಲದು”: ಜಯಶ್ರೀ ಭ.ಭಂಡಾರಿ.
ಇಂದಿನ ಆಧುನಿಕ ಜೀವನದ ಧಾವಂತದ ಬದುಕಿನಲ್ಲಿ ಮಾನವೀಯ ಹಾಗೂ ಸಂವೇದನಾಶೀಲ ಗುಣಗಳ ಕೊರತೆ ಎದ್ದುಕಾಣುತ್ತಿದೆ.ಪರಸ್ಪರ ಕಾಲೇಳದಾಟದಲ್ಲಿ ಮೌಲ್ಯಯುತ ಜೀವನ ಕಾಣದಂತಾಗಿದೆ.ನಮ್ಮ ಪೂರ್ವಜರ ಬದುಕನ್ನು ಕಂಡಾಗ ಮನಸ್ಸು ಹಳಹಳಿಸುತ್ತದೆ.ಇಂದು ದಯಾಪರ ಜೀವನ ಎಂದಿಗಿಂತ ತುಂಬ ಆವಶ್ಯಕವೆನಿಸುತ್ತಿದೆ. ಮನುಷ್ಯ ಮನುಷ್ಯರ ಮಧ್ಯ ಪರಸ್ಪರ ಕೊಡಮಾಡಲು ಸಾಧ್ಯವಿರುವ ಉಡುಗೊರೆಗಳೆಲ್ಲ ಮೌಲ್ಯಯುತವಾದುದು ಎಂದರೆ ದಯೆ. ಅದು ಕಾರುಣ್ಯ,ಸಹಾನುಭೂತಿ,ಅನುಕಂಪ ಎಂಬ ಇತರ ಹೆಸರುಗಳಿಂದಲೂ ಕರೆಯಲ್ಪಡುತ್ತದೆ.ಮನುಷ್ಯ ತೋರ್ಪಡಿಸುವ ದಯೆ ಹುಟ್ಟುಗುಣವಾಗಿದ್ದರೂ ಅದು ಆತನಲ್ಲಿ ಸ್ಥಿರವಾಗಿ ನೆಲೆಗೊಳ್ಳಲು ಅದನ್ನು ಮಾದರಿಯಾದ ಗುಣವಿಶೇಷಗಳಿಂದ ಬೆಳೆಸಬೇಕಾಗುತ್ತದೆ. ಮನುಷ್ಯ ಸ್ವತಂತ್ರ ಜೀವನವನ್ನು … Read more