ಎಲ್ಲಿ ಹೋದವು ಆ ದಿನಗಳು?: ಗೌರಿ. ಚಂದ್ರಕೇಸರಿ
ಗುರುವಿಗೊಬ್ಬ ಯೋಗ್ಯ ಶಿಷ್ಯ, ಶಿಷ್ಯನಿಗೊಬ್ಬ ಜ್ಞಾನಿಯಾದ ಗುರು ಇವೆರಡೂ ಲಭ್ಯವಾಗುವುದು ಅವರಿಬ್ಬರ ಅದೃಷ್ಟವೆಂದೇ ಹೇಳಬೇಕು. ವಿದ್ಯಾರ್ಥಿಗಳ ಜ್ಞಾನದಾಹವನ್ನು ನೀಗಿಸುವ ಗುರು ನಿರ್ಧಿಷ್ಟ ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿಕೊಂಡಿರಬೇಕಾಗುತ್ತದೆ. ಸತತ ಪರಿಶ್ರಮಿಯಾಗಿರಬೇಕಾಗುತ್ತದೆ. ತಾವು ಬೋಧಿಸುವ ವಿಷಯದ ಕುರಿತು ತುಡಿತವನ್ನು ಹೊಂದಿರಬೇಕಾಗುತ್ತದೆ. ಅಂದಾಗಲೇ ಅದನ್ನು ಮತ್ತೊಬ್ಬರೊಂದಿಗೆ ಪ್ರಸ್ತುತಪಡಿಸಬಹುದು ಹಾಗೂ ಚರ್ಚಿಸಬಹುದು.‘ಗುರು’ ಎಂಬ ಶಬ್ದವೇ ಕತ್ತಲೆಯನ್ನು ಹೊಡೆದೋಡಿಸುವುದು ಎಂಬ ಅರ್ಥವನ್ನು ಹೊಂದಿದೆ. ಪ್ರತಿಷ್ಠಿತ ಕಾಲೇಜೊಂದರಲ್ಲಿ ಓದಿದ ನಾನು ಪ್ರಸಿದ್ಧ ಸಾಹಿತಿಗಳು, ವಿಮರ್ಶಕರು, ವಾಗ್ಮಿಗಳು, ಭಾಷಾ ಪಾರಂಗತರನ್ನು ಗುರುಗಳನ್ನಾಗಿ ಪಡೆದದ್ದು ನನ್ನ … Read more