ಅಸಹಾಯಕತೆ: ನಾವೆ
ಅದೊಂದು ದಿನ ಮಟ ಮಟ ಮಧ್ಯಾಹ್ನ. ಸೂರ್ಯ ನೆತ್ತಿಯ ಮೇಲೆ ಪ್ರಖರ ಕಿರಣಗಳಿಂದ ಸುಡುತ್ತಿದ್ದ. ಗ್ರಾಮೀಣ ಪ್ರದೇಶವಾದ್ದರಿಂದ ಅದಾಗಲೇ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳ ಹೊರಬಾಗಿಲುಗಳೆಲ್ಲ ಮುಚ್ಚಲ್ಪಟ್ಟಿದ್ದವು. ಅಂಗಡಿ ಮಾಲಿಕರು, ಕಾರ್ಮಿಕರೆಲ್ಲ ಹಸಿವೆಂಬ ರಕ್ಕಸನ ಅಬ್ಬರ ತಣಿಸಲು ಅವರವರ ಮನೆಯತ್ತ ಪಯಣಿಸಿಯಾಗಿತ್ತು. ಹಾಗಾಗಿ ಆ ಸಮಯದಲ್ಲಿ ಮನೆಗೆ ಹೋಗದೇ ಊಟ ಹೊತ್ತು ತರುವ ನನ್ನ ಅಂಗಡಿಯೊಂದೇ ತೆರೆದಿತ್ತು.ಊಟದ ಸಮಯದಲ್ಲಿಯೂ ಅಂಗಡಿಯು ತೆರೆದೇ ಇರುತ್ತಾದ್ದರಿಂದ ಅದರ ಗೋಜಿಗೆ ಹೋಗದೆ ನಾನೂ ಕೂಡ ಊಟದ ತಯಾರಿ ನಡೆಸುತ್ತಿದ್ದೆ. ಹಸಿವೆಂಬ ಬ್ರಹ್ಮರಾಕ್ಷಸನ ತೃಪ್ತಿ … Read more