ಸ್ವಾತಂತ್ರ್ಯ ಹೋರಾಟವು, ವ್ರತಗಳ ಬಂಧನವು: ಕೆ ಟಿ ಸೋಮಶೇಖರ ಹೊಳಲ್ಕೆರೆ,
ಈ ಮನುಷ್ಯನಿಗೆ ತಲೆಬಾಗಿ ಹೃದಯಪೂರ್ವಕ ನಮಿಸಬೇಕೆನ್ನಿಸುವುದು ದೇಶದ ಸ್ವಾತಂತ್ರ್ಯ ಹೋರಾಟದ ಮುಂದಾಳು ಆಗಿದ್ದ ಎಂದು ಅಲ್ಲ. ಹೋರಾಡಲು ಆಯ್ದುಕೊಂಡ ಮಾರ್ಗ ಅತ್ಯುನ್ನತವಾದುದು ಆಗಿತ್ತೆಂದು. ಸ್ವಾತಂತ್ರ್ಯ ಎಂದರೆ ನಾವು ಬಯಸಿದಂತೆ ಬದುಕಲು ಸಾಧ್ಯವಾಗುವದು. ಬದುಕಿನ ಮೇಲೆ ಯಾರ, ಯಾವ ಒತ್ತಡವೂ ಇರದೆ ಬದುಕುವುದು. ಯಾರ ಕಟ್ಟುಪಾಡುಗಳಿಗೆ ದೌರ್ಜನ್ಯಕೂ ಒಳಗಾಗದೆ ಬದುಕುವುದು. ಕಟ್ಟುಪಾಡುಗಳೇನಾದರೂ ಹಾಕಿದರೆ, ಹಿಂಸೆ ಮಾಡಿದರೆ ಮಾನವನು ಬದುಕಲು ತೊಂದರೆಯಾಗುತ್ತದೆ.ಕಟ್ಟುಪಾಡುಗಳು, ಹಿಂಸೆ ಹೆಚ್ಚಿದಂತೆಲ್ಲ ಬದುಕಲು ತೊಂದರೆ ಹೆಚ್ಚಿ,ಉಸಿರುಗಟ್ಟಿದಂತಾಗುತ್ತದೆ. ವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ. ಇದೇ ವಾತಾವರಣ ಮುಂದುವರಿದರೆ, … Read more