ಮಕ್ಕಳ ಹಕ್ಕುಗಳ ಗ್ರಂಥಾಲಯ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪುಸ್ತಕಗಳ ಪಾತ್ರ: ವಾಣಿ ಚೈತನ್ಯ
ಗ್ರಂಥಾಲಯ ಎಂದರೇನೆಂದು ಕೇಳಿದ್ದೇವೆ, ಮಕ್ಕಳ ಹಕ್ಕುಗಳ ಗ್ರಂಥಾಲಯವೆಂದರೆ ಏನು ಎಂದು ಎಲ್ಲರೂ ಯೋಚಿಸಬಹುದು. ವಿಶ್ವಸಂಸ್ಥೆ ರಚಿಸಿ, ಭಾರತವು ಸಹಿ ಮಾಡಿದ ಮಕ್ಕಳ ಹಕ್ಕುಗಳು ಇರುವುದೇ ಎಲ್ಲರಿಗೂ ಗೊತ್ತಿಲ್ಲದೇ ಇರುವಾಗ, ಮಕ್ಕಳ ಹಕ್ಕುಗಳ ಗ್ರಂಥಾಲಯ ಬಗ್ಗೆ ಸಾರ್ವತ್ರಿಕ ತಿಳುವಳಿಕೆ ಇನ್ನೊಂದು ಹೊಸ ಸವಾಲು. ಸಾಮಾನ್ಯವಾಗಿ ಗ್ರಂಥಾಲಯವೆಂದರೆ, ಪುಸ್ತಕಗಳನ್ನು ಸಂಗ್ರಹಿಸಿ ಇಡುವ ಮನೆ. ಪುರಾತನ ಕಾಲದಿಂದ, ಮಾನವರು ಅನುಭವಿಸಿ ಕಲಿತ, ವಿಜ್ಞಾನಿಗಳು ಪ್ರಯೋಗಗಳಿಂದ ಕಂಡುಕೊಂಡ ಜ್ಞಾನ ಭಂಡಾರಗಳ, ಮಾಹಿತಿಗಳ ಮೂಲ. ಶಾಲೆಗೆ ದಾಖಲಾಗಿ ಪಠ್ಯ ಪುಸ್ತಕಗಳನ್ನು ಓದುವುದೇ ದುಸ್ತರವಾಗಿದ್ದ ಕಾಲದಲ್ಲಿ … Read more