ಸ್ವಾರ್ಥಿಗಳಾಗಿ – ಅಗತ್ಯವಿದ್ದವರಿಗೆ ನೆರವಾಗಿ: ಎಂ.ಎನ್.ಸುಂದರ ರಾಜ್, ಶಿವಮೊಗ್ಗ
ಇದೊಂದು 100 ವರ್ಷದ ಕಥೆಯಾದರೂ, ಅದರಿಂದ ದೊರಕುವ ಪಾಠ ಇಂದಿಗೂ ಪ್ರಸ್ತುತವಾದದ್ದು. 1892ನೆಯ ಇಸವಿ., ಸ್ಥಳ ಸ್ಟಾಂಡ್ ಫೋರ್ಡ್ ವಿಶ್ವವಿದ್ಯಾನಿಲಯ. 18 ವರ್ಷದ ಯುವ ವಿದ್ಯಾರ್ಥಿಯೊಬ್ಬ ಕಾಲೇಜಿನ ಶುಲ್ಕ ಕಟ್ಟಲು ಹೆಣಗಾಡುತ್ತಿದ್ದ. ಅವನೊಬ್ಬ ಅನಾಥ, ಯಾವ ಬಂಧುಗಳೂ ಇಲ್ಲ, ಹಣ ಹೊಂದಿಸುವುದು ಹೇಗೆಂದು ಒದ್ದಾಡುತ್ತಿದ್ದ. ಆಗ ಅವನಿಗೊಂದು ಉಪಾಯ ಹೊಳೆಯಿತು. ಅವನು ಮತ್ತು ಅವನ ಗೆಳೆಯನೊಬ್ಬ ವಿಶ್ವ ವಿದ್ಯಾನಿಲಯದ ಆವರಣÀದಲ್ಲಿ ಒಂದು ಸಾಂಸ್ಕøತಿಕ ಕಾರ್ಯಕ್ರಮವನ್ನೇರ್ಪಡಿಸಿ ಹಣ ಸಂಪಾದಿಸಿ ಕಾಲೇಜಿನ ಶುಲ್ಕ ಭರ್ತಿ ಮಾಡುವುದು. ಅದಕ್ಕಾಗಿ ಅಂದಿನ ಪ್ರಸಿದ್ಧ … Read more