ದೈವತ್ವದ ಪರಿಕಲ್ಪನೆ: ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ಬಸವಣ್ಣನವರ ವಚನವೊಂದರ ಸಾಲುಗಳು ಹೀಗಿವೆ: ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು, ಸಸಿಯೊಳಗಣ ರಸದ ರುಚಿಯಂತಿದ್ದಿತ್ತು, ನನೆಯೊಳಗಣ ಪರಿಮಳದಂತಿದ್ದಿತ್ತು…… ನೀರೊಳಗೆ ಬೆಂಕಿಯಿದೆ, ಅದರಿಂದಲೇ ವಿದ್ಯುತ್ತು ಹೊರಬರುವುದು. ಆಮೇಲೂ ಆ ನೀರು ನೀರಾಗಿಯೇ ಉಳಿವುದು. ಒಂದರಿಂದ ಇನ್ನೊಂದು ಹೊರಬಂದ ಮೇಲೂ ಅದು ಅದಾಗಿಯೇ ಇರುವ ಚೋದ್ಯವಿದು. ಮುಂದೆ ಬಿಡಲಿರುವ ಹಣ್ಣಿನ ರುಚಿ ಈಗಾಗಲೇ ಚಿಗುರುತ್ತಿರುವ ಸಸಿಯೊಳಗೆ ಹುದುಗಿದೆ. ಮೊಗ್ಗು ಅರಳುವ ಮುಂಚೆಯೇ ಅದರೊಳಗೆ ಪರಿಮಳ ಅಡಗಿರುತ್ತದೆ. ತಾಯಗರ್ಭದೊಳಗೆ ಬೆಳೆಯುತ್ತಿರುವ ಭ್ರೂಣದಲ್ಲೇ ಅದರೆಲ್ಲ ಬೆಳವಣಿಗೆಗೆ ಬೇಕಾದ ಅವಯವಗಳು ಹುದುಗಿರುವಂತೆ, ನವಿಲಿನ ಮೊಟ್ಟೆಯೊಳಗೆ … Read more