ಪಂಜು ಕಾವ್ಯಧಾರೆ
ಹರಿದ್ರ ಕುಂಕುಮ ಶೋಭಿತಳಾದವಳಿಗೆ ಅದಕ್ಕಿಂತ ಬೇರೆ ಐಶ್ವರ್ಯ ಇಲ್ಲ ಅವನು ಹಾಕುವ ಮೂರುಗಂಟಿಗೆ ತಾನು ಬೆಳದ ಪರಿಸರ ತೊರೆಯುವಳಲ್ಲ ತಾಂಬೂಲದ ಮೇಲೆ ಕಾಸಿಟ್ಟು ಧಾರೆಯೆರೆಯುವರಲ್ಲ ತಂದೆಯ ಪ್ರೀತಿ ತಾಯಿಯ ವಾತ್ಸಲ್ಯ, ಒಡಹುಟ್ಟಿದವರ ಮಮತೆಯ ಕುಡಿಯನ್ನು ಇನ್ನೂ ನಿನಗೆ ಸ್ವಂತವೆಂದು ದೈವಸಾಕ್ಷಿಯಾಗಿ ಒಪ್ಪಿಸಿದರಲ್ಲ…. ಸಪ್ತಪದಿಯ ತುಳಿದು ತವರು ಮನೆಯ ನೆನಪಿನೊಂದಿಗೆ ತನ್ನ ಮನೆ ಸೇರುವಳಲ್ಲ ಗಂಡನ ಮನೆಯ ಸುಖ ಶಾಂತಿ ನೆಮ್ಮದಿ ಬಯಸಿ ತನ್ನ ತನವನ್ನು ಬದಿಗಿರಿಸಿ ಮನೆಗಾಗಿ ದುಡಿಯುವಳಲ್ಲ ಅತ್ತೆ ಮಾವನಿಗೆ ಮಗಳಂತೆ ಸೇವೆಮಾಡಿ ಗಂಡ ಮಕ್ಕಳ … Read more
ಕುರಿಯ ಹಾಲಿನ ಐಸ್ ಕ್ರೀಮು (ಭಾಗ ೩): ಗುರುಪ್ರಸಾದ ಕುರ್ತಕೋಟಿ
ಇಲ್ಲಿಯವರೆಗೆ ಬೆಳಗಾಗುವುದೇ ಕಾಯುತ್ತಿದ್ದೆ. ಅಯೋವಾದ ಕುರಿ ಸಾಕಾಣಿಕಾ ಕೇಂದ್ರಕ್ಕೆ ಹೋಗುವ ಯೋಜನೆ ಆಗಲೇ ಸಿದ್ಧವಾಗಿತ್ತು. ಅಮೇರಿಕಾದಲ್ಲಿ ಪರಿಚಯವಾಗಿ ಚಡ್ಡಿ ದೊಸ್ತನಾಗಿದ್ದ ಮಂಜು ಎಲ್ಲ ಸಿದ್ಧತೆ ಮಾಡಿಕೊಂಡಿದ್ದ. ಅಲ್ಲಿ ದೂರ ಪ್ರವಾಸ ಹೋಗಬೇಕೆಂದರೆ ನಮ್ಮದೇ ಕಾರ್ ಒಯ್ಯಬೇಕೆಂದಿಲ್ಲ. ಬಾಡಿಗೆಗೆ ತರ ತರಹದ ಕಾರುಗಳು, ವ್ಯಾನುಗಳು ಅಲ್ಲಿ ದೊರಕುತ್ತವೆ. ಎಷ್ಟು ಸೀಟಿನ ವಾಹನ ಬೇಕು ಅಂತ ನಿರ್ಧರಿಸಿ, ಗ್ಯಾಸ್ ಹಾಕಿಸಿಕೊಂಡು ಹೊರಟರೆ ಆಯ್ತು. ಹೌದು ಅಲ್ಲಿ ಪೆಟ್ರೋಲ್ ಗೆ ಗ್ಯಾಸು ಅಂತಾರೆ. ಅವರು ಹಂಗೆ… ನಾವೇ ಬೇರೆ ನಮ್ಮ ಸ್ಟೈಲೇ … Read more
ಬದಲಾವಣೆಯ ಆರಂಭ ನಮ್ಮಿಂದಲೇ ಸಾಧ್ಯ: ಪ್ರೀತಿ ಕಾಮತ್
ಮೊನ್ನೆ ನಾನು ಮತ್ತು ನನ್ನ ಫ್ರೆಂಡ್ಸ ಸೇರಿ ನಡುರಾತ್ರಿ ವಿಡಿಯೋಕಾಲ್‍ನಲ್ಲೇ ಒಂದು ಸಣ್ಣ ಚರ್ಚಾಕೂಟ ಏರ್ಪಡಿಸಿದ್ದೆವು. ಹೆಣ್ಮಕ್ಳು ಅಂದ್ರೆ ಮತ್ತೆ ಕೇಳಬೇಕಾ? ಮಾತನಾಡಲು ಅವಕಾಶ ಸಿಕ್ಕರೆ ಸಾಕು. ಆದರೆ ಸದಾ ವಟಗುಡುವ ಗೆಳತಿ ಮಾತ್ರ ಬಾಯಿಗೆ ಬೀಗ ಹಾಕಿ ಕೂತಿದ್ದು ನನಗೆ ಸಹಿಸಲಾಗಲಿಲ್ಲ. ಕಾರಣ ಕೇಳಿದಾಗ ಹುಡುಗಿಯರು ಇಲ್ಲಿ ಮಾತನಾಡುವುದಷ್ಟೇ ಬಂತು ಸಮಯ ಬಂದಾಗ ನಾವು ಬಾಯಿ ಬಿಡಲಾರೆವು ಅಲ್ವಾ? ಅಂದಳು. ಲೇ ಎಲ್ಲಾದರೂ ಭೋಧೀ ವೃಕ್ಷದ ಕೆಳಗೆ ಕೂತಿದ್ದಿಯಾ? ಯಾಕೋ ತತ್ವಜ್ಞಾನಿಯಂತೆ ಮಾತಾಡುತ್ತಿದ್ದಿ, ಏನ್ ಮ್ಯಾಟರ್ … Read more
ಪುಟ್ರಾಜು: ಅಭಿಜಿತ್. ಎಮ್
ಪುಟ್ರಾಜುಗೆ ಪರೀಕ್ಷೆ ಹತ್ತಿರ ಬಂದಿದೆ. ಪುಸ್ತಕ ಹಿಡಿದು ಓದಲು ಕುಳಿತರೆ ಭಯ ಮನಸ್ಸು, ಮೆದುಳನ್ನು ಆವರಿಸುತ್ತದೆ. ಐದನೇ ತರಗತಿಯಲ್ಲಿ ಓದುತ್ತಿರುವ ಪುಟ್ರಾಜು ಗೆ ಈ ಬಾರಿಯೂ ಪರೀಕ್ಷೆ ಯಲ್ಲಿ ಕಡಿಮೆ ಅಂಕ ಗಳಿಸಿದರೆ ಏನಪ್ಪಾ ಗತಿ ಅನ್ನುವುದೇ ಚಿಂತೆಯಾಗಿರುತ್ತದೆ. ಶಾಲೆಯಲ್ಲಿ ಟೀಚರ್ ಗಳು, ಮನೆಯಲ್ಲಿ ಹೆತ್ತವರ ಬೈಗುಳ ತಿಂದು. . ತಿಂದು. . . ಹೈರಾಣಾಗಿರುತ್ತಾನೆ. ಅದಕ್ಕೆ ಓದಲು ಕುಂತರೂ ಪುಟ್ರಾಜುಗೆ ಅದೇ ಚಿಂತೆ. ಜಾಸ್ತಿ ಅಂಕ ಹೇಗೆ ಗಳಿಸುವುದು ಎಂದು ಆಲೋಚಿಸುತ್ತಿರುತ್ತಾನೆ. ಅವನ ತಲೆಯಲ್ಲಿ ಹಲವಾರು … Read more
ಕಿರುಗತೆಗಳು: ಪುನೀತ್ ಕುಮಾರ್
ಸ್ವಯಂ ಮೌಲ್ಯಮಾಪನ ಒಮ್ಮೆ ಒಬ್ಬ ಹುಡುಗ, ಒಂದು ಅಂಗಡಿಯ ಫೋನ್ನಿಂದ ಯಾರಿಗೋ ಕರೆ ಮಾಡಿ “ಅಮ್ಮ, ದಯಮಾಡಿ ನನಗೆ ಒಂದು ಕೆಲಸ ಕೊಡಿ” ಎಂದು ಕೇಳಿಕೊಳ್ಳುತ್ತಿದ್ದನು. ಅಲ್ಲೇ ಪಕ್ಕದಲ್ಲೇ ಇದ್ದ ಅಂಗಡಿಯವ ಇವನ ಮೃದು ದನಿಯ ಮಾತುಗಳನ್ನು ಕೇಳಲು ಆರಂಭಿಸಿದ. ಹುಡುಗ ಮುಂದುವರೆಯುತ್ತಾ ” ಅಮ್ಮ, ನಾನು ತುಂಬ ಬಡವ, ಮನೆಯಲ್ಲಿ ಹಣಕ್ಕಾಗಿ ತೊಂದರೆ ಇದೆ, ದಯವಿಟ್ಟು ಬೇಡ ಎನ್ನಬೇಡಿ ” ಎಂದು ಬೇಡಿಕೊಳ್ಳಲಾರಂಭಿಸಿದ. ಆದರೆ ಆ ಕಡೆಯಿಂದ ಬೇಡ ಆಗಲೇ ನಮ್ಮಲ್ಲಿ ಒಬ್ಬ ಹುಡುಗ ಕೆಲಸದಲ್ಲಿದ್ದಾನೆ. … Read more
ಸ್ನೇಹ ಮತ್ತು ಪ್ರೇಮವನ್ನು ಅಮರಗೊಳಿಸುವ- Shakespearean Sonnets: ನಾಗರೇಖಾ ಗಾಂವಕರ
ಸ್ನೇಹ ಎನ್ನುವುದು ಮಾನವ ಜಗತ್ತಿನ ಪ್ರಬಲ ಆಕಾಂಕ್ಷೆ ಮತ್ತು ಅದೊಂದು ಬಲ. ಸ್ನೇಹದ ಜೇನಹನಿ ಸ್ವಾದ ಸವಿದ ಮನಸ್ಸುಗಳಿಗೆ ಅದರ ಕಂಪು ಕೂಡಾ ಚಿರಪರಿಚಿತ. ಸ್ನೇಹ ಸ್ವರ್ಗದ ವಿಶಿಷ್ಟ ಕಾಣಿಕೆ. ವೈಯಕ್ತಿಕ ಜೀವನದ ಅದೆಷ್ಟೋ ಭಿನ್ನತೆಗಳು, ನ್ಯೂನ್ಯತೆಗಳು ಸ್ನೇಹದ ಪಯಣಕ್ಕೆ ಅಡ್ಡಿಯಾಗುವುದಿಲ್ಲ. ಅದಕ್ಕೊಂದು ಅಪೂರ್ವ ಉದಾಹರಣೆಯಾಗಿ ಶೇಕ್ಸಪಿಯರ್ ತನ್ನ ಜೀವಿತಾವಧಿಯಲ್ಲಿ ರಚಿಸಿದ 154 ಸಾನೆಟ್‍ಗಳಲ್ಲಿ ಮೊದಲ ಭಾಗದ ಸುಮಾರು 126 ಸುನೀತಗಳನ್ನು ತನ್ನ ಆಪ್ತ ಹಾಗೂ ಸುರಸುಂದರಾಂಗ ಶ್ರೀಮಂತ ಗೆಳೆಯನೊಬ್ಬನ ಕುರಿತು ಬರೆದಿದ್ದಾನೆ. ಆತನೊಂದಿಗಿನ ತನ್ನ ಅನುಪಮ … Read more
ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 23 & 24): ಎಂ. ಜವರಾಜ್
-೨೩- ‘ಏಯ್, ಕೇಳಿಲ್ಲಿ..’ ಆ ಮೋರಿ ಅಂಚಿಂದ ಬೆಳಕಿನ ಜ್ವಾಲೆ ಎದ್ದು ಆ ಜ್ವಾಲೆಯೊಳಗಿಂದ ಗದರಿದಂಥ ಮಾತು. ಸಡನ್ ಎದ್ದೆ ನನಗೆ ಮಂಪರು ಆ ಬೆಳಕಿನ ಜ್ವಾಲೆ ಬೆಂಕಿ ತರ ಆಯ್ತು ಆ ಬೆಂಕಿ ಜ್ವಾಲೆಗೆ ನನ್ನ ಮಂಪರು ಅಳಿದು ಸೆಟೆದು ನಿಂತೆ. ಮೇಲೆ ಮಿಂಚು ಸೊಂಯ್ಯನೆ ಫಳಾರಂತ ಸಿಡಿಲು ಸಿಡಿಸಿಡಿ ಸಿಡಿತಾ ಗುಡುಗು ನಿಧಾನಕೆ ಗುಡುಗುಡುಗುಡುಕ್ತಾ ಇತ್ತು ‘ನನ್ ಮಾತ ನೀ ತಲಗಾಕತಿಲ್ಲ ಗಾಳಿ ಬೀಸ್ತ ಅದ ಆ ಮೋರಿಯಿಂದ ಈ ಮೋರಿಲಿ ಬಿದ್ದಿನಿ’ ‘ಅದೇನ … Read more
ರವಿಯು ಮಳೆಮೋಡವನು ಚುಂಬಿಸಿ ಆಗಸದಲಿ ರಂಗಿನ ರುಜು ಹಾಕಿದ: ಭಾರ್ಗವ್ ಹೆಚ್. ಕೆ.
ಸಂಜೆ 4 ಗಂಟೆ. . ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳ ಸಂದಣಿ. 8ನೆಯ ತರಗತಿಯಲ್ಲಿ ಕಾಮನಬಿಲ್ಲಿನ ಬಗ್ಗೆ ಪೌರಾಣಿಕ ಕಥೆಯು ಅನುರಣಿಸುತ್ತಿತ್ತು. ಕಥಾಪ್ರಸ್ತುತಗಾರ ನಿಂಗಪ್ಪ ಮಾಸ್ಟರ್, ಲೇ. . ಆಟದ ಹೊತ್ತು ಆಯಿತು. . ಯಾವನಾದ್ರು ಹೋಗಿ ಗಂಟೆ ಹೊಡೀರಿ. ಇಷ್ಟು ಅಂದಿದ್ದೆ ತಡ. . . ಎಲ್ಲರೂ ಕೇ ಹೊ. . ಅಂತ ಮೈದಾನಕ್ಕೆ ತೆರಳಿದರು. ಮಾಳಿಂಗರಾಯನು ಮಾತ್ರ ಕದಲಲಿಲ್ಲ. ಸರ್. . ನಾವು ಏನು ಬೇಕಾದ್ರೂ ಕೇಳ್ತೀವಿ ಅಂತ ಕಾಮನಬಿಲ್ಲು ಬಗ್ಗೆ ಪೌರಾಣಿಕ ಕಥೆ ಹೇಳುತ್ತೀರಿ. ಶೃತಿ … Read more
ಪ್ರೀತಿಯು ಪ್ರೀತಿಯಾಗಬೇಕೇ ವಿನಃ ಹಿಂಸೆಯಾಗಬಾರದು: ನಾಗೇಶ್ ಪ್ರಸನ್ನ.ಎಸ್.
ಬಯಸಿದ್ದೆಲ್ಲಾ ಸಿಕ್ಕಿಬಿಡಬೇಕು – ಹುಟ್ಟಿದ ದಿವಸದಿಂದಲೂ ಇದು ಮನುಷ್ಯನಿಗೆ ಅಂಟಿಕೊಂಡಿರುವ ಒಂದು ತೆರನಾದ ವಿಚಿತ್ರ ಖಾಯಿಲೆ. ಈ ಖಾಯಿಲೆಯಿಂದ ಯಾರು ಹೊರಬರುತ್ತಾರೋ ಅವರೇ ಸುಖಜೀವಿಗಳು. ಇಲ್ಲದಿದ್ದರೆ, ಅವರಷ್ಟು ವಿಚಿತ್ರವಾಗಿ ನಡೆದುಕೊಳ್ಳುವವರೇ ಸಿಗುವುದಿಲ್ಲ. ಇದಕ್ಕೆ ಬುದ್ಧ ಹೇಳಿದ “ಆಸೆಯೇ ದುಃಖಕ್ಕೆ ಮೂಲ” ಎಂಬ ಮಾತು ಒಂದು ಉದಾಹರಣೆ. ಬದುಕಿನಲ್ಲಿ ಆಸೆಯನ್ನು ತ್ಯಜಿಸಿದವರು ಬಹಳಷ್ಟು ಮಂದಿ ಸಿಗುತ್ತಾರೆ. ಆದರೆ, ಪ್ರೀತಿಯಲ್ಲಿ ಆಸೆ ತ್ಯಜಿಸುವವರು ಅಥವಾ ಪ್ರೀತಿಯೆಂಬ ಆಸೆಯನ್ನೇ ತ್ಯಜಿಸುವವರು ಕೇವಲ ಬೆರಳೆಣಿಕೆಯ ಹೃದಯಗಳಷ್ಟೇ. ಈಗ ನಾನು ಆ ದಾರಿಯಲ್ಲಿ ಹೆಜ್ಜೆ … Read more
ಯುದ್ಧ ಗೆದ್ದ ಬಂದ ಪಾರ್ವತಿ: ಚಂದ್ರಿಕಾ ಆರ್ ಬಾಯಿರಿ
ಇದೇನಿದು ? ಯುದ್ಧ ಗೆದ್ದು ಬಂದ ಪಾರ್ವತಿ ಎಂದಾಕ್ಷಣ ಶಿವ ಪಾರ್ವತಿಯರ ಪುರಾಣ ಕಥೆ ಅಂದುಕೊಂಡಿರಾ? ಅಲ್ಲ, ಶಿವಪಾರ್ವತಿಯಂತಿರುವ ದಂಪತಿಗಳ ಕಥೆ. ಹೌದು ಮೊದಲನೆಯ ಮಗ ಸುಬ್ರಹ್ಮಣ್ಯ ಹುಟ್ಟಿ ಈಗಾಗಲೇ ಮೂರು ವರುಷ ಕಳೆದಿದೆ. ಮಗನ ಲಾಲನೆ ಪಾಲನೆ ಮಾಡಲು ಅಜ್ಜ ಅಜ್ಜಿ ಇರುವುದರಿಂದ ಮಗ ಬೆಳೆದು ದೊಡ್ಡವನಾದದ್ದೆ ಗೊತ್ತಾಗಲಿಲ್ಲ ಅವರಿಗೆ. ಕೆಲಸಕ್ಕೆ ಹೋಗಿ ಬಂದು ಮಗ ಅತ್ತೆ ಮಾವ ಗಂಡನನ್ನು ಬಹಳ ಅಕ್ಕರೆಯಿಂದಲೇ ನೋಡಿಕೊಂಡಳು ಪಾರ್ವತಿ. ಎರಡನೇ ಮಗುವಿಗಾಗಿ ಹಂಬಲಿಸುತ್ತಿದ್ದ ಗಂಡ ಈಗಲೇ ಇನ್ನೊಂದು ಮಗು … Read more
ಡಾ. ಹೆಚ್. ಶಾಂತಾರಾಮ್ ಪ್ರಶಸ್ತಿಗೆ ಕೃತಿ ಆಹ್ವಾನ
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ಹೆಸರಿನಲ್ಲಿ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡಲಾಗುತ್ತಿದ್ದು ಈ ವರ್ಷ ಕಾದಂಬರಿಗಳನ್ನು ಮಾತ್ರ ಪರಿಗಣಿಸಲು ನಿರ್ಧರಿಸಲಾಗಿದೆ. 2018 ಜನವರಿಯಿಂದ 2019 ಡಿಸೆಂಬರ್ ಒಳಗೆ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಕಾದಂಬರಿಗಳನ್ನು ಆಹ್ವಾನಿಸಲಾಗಿದೆ. ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಜೂನ್ 5,2020ರ ಒಳಗೆ ( 5/6/2020) ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ, ಉಡುಪಿ ಜಿಲ್ಲೆ 576201.ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. … Read more
ರವಿವಾರದ ಸಂತೆ: ವೆಂಕಟೇಶ ಚಾಗಿ
ಇತ್ತೀಚಿನ ವರ್ಷಗಳಲ್ಲಿ ಸಂತೆಗೆ ಹೋಗುವುದೇ ತೀರ ಕಡಿಮೆ ಆಗಿದೆ. ದಿನಬೆಳಗಾದರೆ ತಾಜಾ ತಾಜಾ ತರಕಾರಿಗಳನ್ನು ತರಕಾರಿ ತಮ್ಮಣ್ಣ ತನ್ನ ತಳ್ಳುವ ಗಾಡಿಯಲ್ಲಿ ಮನೆ ಮುಂದೆ ತಂದು ನಿಲ್ಲಿಸ್ತಾನೆ. ಇನ್ನು ಕಿರಾಣಿ ಸಾಮಾನು ಬೇಕಾದ್ರೆ ರಸ್ತೆಯ ಕೊನೆಯಲ್ಲಿ ಇರುವ ಕಿರಾಣಿ ಅಂಗಡಿಯಲ್ಲಿ ಬೇಕಾದಾಗ ತಂದು ಬಿಡುತ್ತೇವೆ. ಡ್ಯೂಟಿಗೆ ಹೋದಾಗ ಹೆಂಡತಿ ಪೋನ್ ಮಾಡಿ “ರೀ , ವಾಟ್ಸ್ಯಾಪ್ ಲಿ ಲಿಸ್ಟ್ ಹಾಕಿದೀನಿ. ಕೆಲಸ ಮುಗಿಸಿ ಬರುವಾಗ ಅದರಲ್ಲಿನ ಸಾಮಾನೆಲ್ಲಾ ತಂದು ಬಿಡಿ.” ಎಂದು ಆದೇಶ ಮಾಡಿಬಿಡುತ್ತಾಳೆ. ಮನೆ ಯಜಮಾನಿ … Read more
ಹಕ್ಕಿ ಗೂಡು ಬಿಟ್ಟ ಮೇಲೆ ಗೂಡಿಗೇನು ಬೆಲೆಯಿದೆ . . ?: ಜಯಶ್ರೀ.ಜೆ. ಅಬ್ಬಿಗೇರಿ
ಬಾಳ ದಾರಿಯಲ್ಲಿ ಕೈ ಹಿಡಿದು ನಡೆಸುವ ಬಂಧಗಳ ಶಕ್ತಿ ಅಪರಮಿತವಾದದ್ದು. ಮಗ್ಗಲು ಮುಳ್ಳುಗಳಂತೆ ಚುಚ್ಚುವ ಸಮಸ್ಯೆಗಳು ಹಣಿಯುತ್ತಿರುವಾಗಲಂತೂ ಇವುಗಳು ಸಲುಹುವ ರೀತಿ ಪದಗಳಲ್ಲಿ ಹಿಡಿದಿಡಲಾಗದು. ಇತ್ತಿತ್ತಲಾಗಿ ಸಂಬಂಧಗಳೇ ಮಾಯವಾಗುತ್ತಿವೆ. ಅನ್ನುವ ಮಟ್ಟಿಗೆ ಬದುಕಿನ ಸವಾರಿ ನಡೆಸುತ್ತಿದ್ದೇವೆ. ದೂರ ದೂರ ಸರಿದು ನಿಂತು ಒಂದೊಂದು ಗೂಡಿನಲ್ಲಿ ಜೀವಿಸುತ್ತಿದ್ದೇವೆ. ಸಂಬಂಧಗಳ ಸವಿರುಚಿಯನ್ನು ಸವಿಯುವುದು ಕ್ವಚ್ಚಿತ್ತಾಗಿ ಬಿಟ್ಟಿದೆ. ಈ ಹಿಂದೆ ಸಂಬಂಧಗಳು ನಮ್ಮನ್ನು ಕೂಡು ಕುಟುಂಬದಲ್ಲಿ ಹತ್ತು ಹಲವು ರೀತಿಯಲ್ಲಿ ಆವರಿಸುತ್ತಿದ್ದವು. ಇನ್ನಿಲ್ಲದಂತೆ ಪೋಷಿಸುತ್ತಿದ್ದವು. ಅಜ್ಜ ಅಜ್ಜಿಯರಿಂದ ನೀತಿ ಕಥೆಗಳು ಹೇಳಲ್ಪಡುತ್ತಿದ್ದವು. … Read more
ಕುರಿಯ ಹಾಲಿನ ಐಸ್ ಕ್ರೀಮು (ಭಾಗ ೨): ಗುರುಪ್ರಸಾದ ಕುರ್ತಕೋಟಿ
ಇಲ್ಲಿಯವರೆಗೆ ನಾವು ಅಮೆರಿಕೆಯ, ನೆಬ್ರಾಸ್ಕಾ ರಾಜ್ಯದ ಒಮಾಹಾದಲ್ಲಿ ಧರೆಗೆ ಬಂದು ಇಳಿದಿದ್ದು ಸೆಪ್ಟೆಂಬರದಲ್ಲಿ. ಆಗ ಅಲ್ಲಿ ಜಿಟಿ ಜಿಟಿ ಮಳೆ ಶುರು ಆಗಿತ್ತು. ಆದರೆ ಕಿಚಿ ಪಿಚಿ ಕೆಸರು ಇರಲಿಲ್ಲ! ಮಹಾ ನಿರ್ದಯಿ ಚಳಿಗಾಲಕ್ಕಿಂತ ಸ್ವಲ್ಪ ಮೊದಲು. ಹೀಗಾಗಿ ಮಳೆಯ ಜೊತೆಗೆ ಸ್ವಲ್ಪ ಚುಮು ಚುಮು ಚಳಿಯೂ ಇತ್ತು. ನಾವು ಹೋದ ಆ ಸಮಯ ಮುಂಬರುವ ಚಳಿಯ ಪರಿಚಯ ಮಾಡಿಕೊಳ್ಳಲು ತುಂಬಾ ಸಹಾಯ ಮಾಡಿತು. ಒಂದು ವೇಳೆ ಚಳಿಗಾಲದ ಹೊತ್ತಿನಲ್ಲಿ ಅಲ್ಲಿಗೆ ಹೋಗಿದ್ದರೆ ಹೊಂದಿಕೊಳ್ಳಲು ತುಂಬಾ ಕಷ್ಟ ಪಡುತ್ತಿದ್ದೆವೇನೋ ಅನಿಸಿತು. ಆದರೆ … Read more
ನುಣುಪುಗಲ್ಲು: ತಿರುಪತಿ ಭಂಗಿ
“ಆದದ್ದು ಆಗೇತಿ ಹ್ವಾದುದ್ದು ಹೋಗೈತಿ, ಇನ್ನ ಏನಮಾಡಿದ್ರ ಹೊಡಮರಳಿ ಬರಾಕ, ಹೆಂಗ ಸಾದ್ಯ ಆದಿತವ್ವಾ..? ನಿನ್ನ ಹಣಿಬರ್ದಾಗ ಏನ್ ಬರದಿದ್ದೋ ಆ ಹಾಟ್ಯಾನ ದೇವ್ರಾ, ಅದನೇನಾರ ತಪ್ಪಸಾಕ ಬರತೈತೇನವ್ವಾ.. ಸಮಾಧಾನ ತಗೋ ತಂಗಿ, ನಿಂದರ ಏನ್ ದೊಡ್ಡ ವಯಸ್ಸಲ್ಲಾ ಈಗ ಬಲೆಬಾರ ಆದ್ರ ಇಪ್ಪತೈದ ಇರ್ಬೇಕ, ಇಷ್ಟ ಸಣ್ಣ ವಯ್ಯಸ್ದಾಗ ಗಂಡನ ಕಳಕೊಂಡ, ಮನಿಮೂಳಿಯಾಗಿ ಕುಂದ್ರೂದಂದ್ರ ನಿನ್ನ ಹಣಿಬರಾ ಎಷ್ಟಾರ ಸುಮಾರ ಇರ್ಬಾರ್ದ, ಸತ್ತಾರ ಜೋಡಿ ನಾಂವೂ ಸಾಯಾಕ ಹೆಂಗ ಸಾದ್ಯ ಆದೀತವ್ವಾ..? ನಾಂವ ನಮಗೋಸ್ಕರಾ ಇರ್ಬೇಕ, … Read more
ಬೆಂಬಿಡದ ಭೂತ: ರಾಜೇಂದ್ರ ಬಿ. ಶೆಟ್ಟಿ
ಸುಮಾರು ಅರುವತ್ತು ವರ್ಷಗಳ ಹಿಂದೆ * ಅಪ್ಪ ಇನ್ನೂ ಮನೆಗೆ ಬಂದಿಲ್ಲ. ಅವರು ಮಂಗಳೂರಿನಿಂದ ಬರಬೇಕು. ಅದು ನಮ್ಮ ಊರಿನಿಂದ ಹತ್ತೊಂಬತ್ತು ಮೈಲು ದೂರವಂತೆ. ನಾನು, ಅಣ್ಣ ಮತ್ತು ಅಮ್ಮ ಅಪ್ಪನಿಗಾಗಿ ಕಾದು ಕುಳಿತಿದ್ದೇವೆ. ಯಾವಾಗಲೂ ರಾತ್ರಿ ಆಗುವ ಮೊದಲೇ ಬರುವ ಅಪ್ಪ ಇವತ್ತು ಇನ್ನೂ ಬಂದಿಲ್ಲ. “ಅಪ್ಪ ಕೊನೆಯ ಬಸ್ಸಿನಲ್ಲಿ ಬರಬಹುದು. ನೀವು ಊಟ ಮಾಡಿ ಮಲಗಿ” ಎಂದು ಅಮ್ಮ ನಮಗೆ ಗಂಜಿ ಬಡಿಸಿದರು. ಊಟ ಮಾಡಿ, ನಿದ್ದೆ ತಡೆಯಲಾರದೆ ನಾನು ಮಲಗಿದೆ. ನಡುವೆ ಎಚ್ಚರ … Read more
ಪದ್ಯಗಳೂ ಹೂನಗೆ ಬೀರಲಿ: ಹೆಚ್. ಷೌಕತ್ ಆಲಿ
ಬೆಣ್ಣೆನಗರಿಯ ಸರಿತ ಕೆ.ಗುಬ್ಬಿ ಹೊಸಪೇಟೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಂತೆ ಸಾಹಿತ್ಯಸಕ್ತಿ ಬೆಳೆಸಿಕೊಂಡ ಕವಯತ್ರಿಯು ಹೌದು ಅನೇಕ ವಿಷಯಗಳು ವಿಚಾರಗಳು, ಘಟನೆಗಳು ಕಣ್ಣಿನ ಮುಂದೆ ಘಟಿಸಿದಾಗ ಆ ಚಿತ್ರಗಳನ್ನು ಮನದಾಳದಲ್ಲಿ ರೂಪನೀಡಿ ಸುಂದರ ಕವಿತೆಗಳಿಗೆ ತಮ್ಮ ಲೇಖನಿಯ ಮುಖಾಂತರ ಬರೆಯುವ ಹವ್ಯಾಸಿ ಕನ್ನಡತಿ. ಬದುಕು ಸುಲಭದ ವಿಚಾರವಲ್ಲ ಇಲ್ಲಿ ಅನೇಕ ಹಂತಗಳಿವೆ, ಮಜಲುಗಳಿವೆ. ಸಂತಸ ಸಂಭ್ರಮ ನೋವು ಹಿಂಸೆ ಎಲ್ಲವನ್ನು ಮೆಟ್ಟಿನಿಲ್ಲಲ್ಲಿ ಸಮಾಜದ ವಕ್ರತೆಯಲ್ಲಿಯು ಗಮನಿಸಬೇಕಾದ ಜವಾಬ್ದಾರಿಯು ತಮ್ಮ ಕವನಗಳ ಮೂಲಕ ಓದುಗರ ಮುಂದೆ ಪ್ರಸ್ತುತ ಪಡೆಸುವಲ್ಲಿ ಸಫಲತೆಯನ್ನು … Read more
ಮೈ ಫಿರ್ ಭೀ ತುಮ್ ಕೋ ಚಾಹುಂಗಾ…: ಬೀರೇಶ್ ಎನ್ ಗುಂಡೂರ್
ಕಗ್ಗತ್ತಲ ರಾತ್ರಿಗೂ ಒಂದು ಕೊನೆಯುಂಟು. ಅಲ್ಲಿ ಹೊಸ ಬೆಳಕಿನ ಹೊಸ ಚಿಗುರಿನ ಆಶಯ ಉಂಟು. ಕಪ್ಪುಗಟ್ಟಿ ಆರ್ಭಟಿಸಿ ಸುರಿಯುವ ಮಳೆಯು ಕೂಡ ಒಂದರೆ ಕ್ಷಣ ಯೋಚಿಸಿ ರಂಗುರಂಗಿನ ಕಾಮನಬಿಲ್ಲಿನ ಅಂದವನಿಕ್ಕುತ್ತದೆ. ಆದರೆ ಆ ನಿನ್ನ ಓರೆನೋಟದ ಬಿಸುಪು ಮಾತ್ರ ಇನ್ನೂ ಕರುಣೆ ತೋರುತ್ತಿಲ್ಲ ನೋಡು. ದಿನವೂ ಖಾಲಿ ಮಾಡಿಕೊಳ್ಳುವ ಚಂದಿರನ ಕಾಂತಿಗೂ ಹೊಟ್ಟೆ ಕಿಚ್ಚುಪಡುವಷ್ಟು ಕಾಂತಿಯನ್ನು ಕಣ್ಣಲ್ಲೇ ಕಾಪಿಟ್ಟುಕೊಂಡಿದ್ದೀಯಾ. ನನ್ನ ಕೆಣಕಲೆಂದೆ ಆ ನೀಳ ಹುಬ್ಬುಗಳ ಸಂಗ ಬೆಳೆಸಿದ್ದೀಯ. ಮುಂಗುರುಳ ಸರಿಸಿ ಸರಿಸಿ ಆ ಮೂಗುತಿಗೆ ಅಷ್ಟು … Read more
ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 21 & 22): ಎಂ. ಜವರಾಜ್
-೨೧- ಅಯ್ಯಯ್ಯೋ ಅಯ್ಯಯ್ಯಪ್ಪಾ ಅಂತಂತಾಗಿ ಮೈಕೈ ನೋವ ತಡಿದೆ ಪಕ್ಕಂತ ಕಣ್ಬುಟ್ಟು ನೋಡುದ್ರಾ.. ಸೂರ್ಯ ಮೂಡಿ ನಾ ಗಬ್ಬುನಾತ ಬೀರೋ ಮೋರಿ ಬದಿಲಿ ಬಿದ್ದು ನನ್ನ ಆಕಡ ಒಂದು ಈಕಡ ಒಂದು ಹಾಲ್ಕುಡಿಯೋ ಸಣ್ಣ ನಾಯಿ ಮರಿಗಳು ಎಳಿತಾ ಈಜಾಡ್ತ ಆಟ ಆಟ್ತ ಪಣ್ಣ ಪಣ್ಣಾಂತ ಆಕಡ್ಕು ಈಕಡ್ಕು ನೆಗೆದಾಡ್ತ ಗುರುಗುಡ್ತ ಇದ್ದು. ಅಸ್ಟೊತ್ಗ ಬಾಗ್ಲು ಕಿರುಗುಟ್ತು ನನ್ನ ದಿಗಿಲು ಅತ್ತಗೋಗಿ ನೋಡ್ತು.. ಸವ್ವಿ ಕಣ್ಣುಜ್ಕೊಂಡು ತಲ ಕೆರಕೊಂಡು ಲಂಗ ಮ್ಯಾಲಕ್ಕೆತ್ಕಂಡು ಬಾಯಾನಿ ಆಕುಳಿಸ್ಕಂಡು ಮೂಲಲಿರ ಸೀಗಕಡ್ಡಿ … Read more
ಏನು ಬರೆಯಬೇಕೆಂಬುದೇ ಗೊತ್ತಾಗುತ್ತಿಲ್ಲ: ನಾಗೇಶ್ ಪ್ರಸನ್ನ.ಎಸ್.
ಓದಿಕೊಂಡಿದ್ದನ್ನೆಲ್ಲಾ ಬರೆಯಲಾಗುವುದಿಲ್ಲ, ಅರಿತುಕೊಂಡಿದ್ದನ್ನಷ್ಟೇ ಬರೆಯಲಾಗುವುದು. ಅದಲ್ಲದೇ, ಅರಿತುಕೊಂಡ ಎಷ್ಟೋ ವಿಷಯಗಳಲ್ಲಿ ಕೆಲವು ಮರೆತು ಹೋಗುವುದೂ ಉಂಟು. ಮರೆತ ವಿಷಯಗಳನ್ನು ಜ್ಞಾಪಿಸಿಕೊಂಡು ಬರೆಯುವುದು ಮಾತ್ರ ಕೆಲವೇ ಕೆಲವು. ಅಂತಹ ಕೆಲವು ವಿಷಯಗಳನ್ನು ಬರೆಯಲೆತ್ನಿಸಿದಾಗಲೇ ತಿಳಿದುಕೊಂಡಿರುವುದು ಎಷ್ಟೆಂದು ತಿಳಿಯುವುದು. ಈ ಒಂದೆರಡು ವಿಷಯಗಳನ್ನು ತಿಳಿದ ಮೇಲೂ #ಏನು ಬರೆಯಬೇಕೆಂಬುದೇ ಗೊತ್ತಾಗುತ್ತಿಲ್ಲ# ನಾವು ಮೊದಲೇ ಸಿದ್ಧರಿರುತ್ತೇವೆ. ಯಾವ ವಿಷಯದ ಬಗ್ಗೆ ಬರೆಯಬೇಕು, ಯಾವ ಅಂಶಗಳನ್ನು ಬರೆಯಬೇಕು, ಯಾವ ಅಳತೆಯಲ್ಲಿ ಬರೆಯಬೇಕು ಮತ್ತು ಇತ್ಯಾದಿ. ಬರವಣೆಗಯಲ್ಲಿ ಶುದ್ಧತೆಯ ಜೊತೆಗೆ ಪಕ್ವತೆ ಇರಬೇಕು. ಬರೆಯುತ್ತಿರುವ … Read more
ಬಸು ಬೇವಿನಗಿಡದ ಅವರ “ನೆರಳಿಲ್ಲದ ಮರ”: ಅಶ್ಫಾಕ್ ಪೀರಜಾದೆ.
ನಾಡು ಕಂಡ ಪ್ರಮುಖ ಕಥೆಗಾರರಲ್ಲಿ ಬೇವಿನಗಿಡದ ಕೂಡ ಒಬ್ಬರು. ಅದರಲ್ಲೆ ವಿಶೇಷವಾಗಿ ಉತ್ತರ ಕರ್ನಾಟಕದ ಅತ್ಯಂತ ಪ್ರಖ್ಯಾತ ಕಥೆಗಾರರು ಬಸು ಅವರು. ತಾಯವ್ವ, ಬಾಳೆಂಬ ಕಂಬ, ಹೊಡಿ ಚಕ್ಕಡಿ, ಹಾಗು ಉಗುಳು ಬುಟ್ಟಿ ಹೀಗೆ ಒಟ್ಟು ಐದು ಕಥಾಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ಬಸುಬೇವಿನ ಗಿಡದ ಅವರು ಇತ್ತೀಚೆಗೆ ಆರನೇಯ ಕಥಾ ಸಂಕಲನ “ನೆರಳಿಲ್ಲದ ಮರ” ಕತಾಪ್ರಿಯರ ಕೈಗಿಟ್ಟಿದ್ದಾರೆ. ಪ್ರತಿಷ್ಠಿತ ಪಲ್ಲವ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿ ತನ್ನ ಬಾಹ್ಯ ಸೌಂದರ್ಯದಿಂದ ಮನ ಸೆಳೆಯುವಂತೆ ಒಳ … Read more
ಸಾವನ್ ಕೆ ಸಿಂಧನೂರು ರವರ ಮಗರಿಬ್ ಗಜಲ್ ಸಂಕಲನ: ಶಿವಕುಮಾರ ಮೋ ಕರನಂದಿ
ಕೃತಿ: ಮಗರಿಬ್ ಗಜಲ್ ಸಂಕಲನ ಲೇಖಕರು: ಸಾವನ್ ಕೆ ಸಿಂಧನೂರು ಪ್ರಕಾಶನ: ಅಮ್ಮಿ ಪ್ರಕಾಶನ ಗಜಲ್ ಉರ್ದು ಕಾವ್ಯದ ಅತ್ಯಂತ ಜನಪ್ರಿಯ ರೂಪ. ಉರ್ದು ಸಾಹಿತ್ಯದಲ್ಲಿ ಜನಪ್ರಿಯವಾಗಿರುವ ಗಜಲ್ ಗಂಭೀರ ಕಾವ್ಯವೂ ಹೌದು. ಪ್ರಾಯಶಃ ಹನ್ನೊಂದನೇ ಶತಮಾನದಲ್ಲಿ ಪ್ರಾರಂಭವಾಗಿರಬೇಕು. ಗಜಲ್ ಅನ್ನು ಉರ್ದು ಕಾವ್ಯದ ರಾಣಿ ಎನ್ನುತ್ತಾರೆ. ಗಜಲ್ ಅಂದರೆ ಫಾರಸಿ ಭಾಷೆಯಲ್ಲಿ ಜಿಂಕೆ! ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡುವ ಈ ಜಿಂಕೆ ಸೆರೆಸಿಕ್ಕಾಗ ಹೊರಡಿಸುವ ಅರ್ತನಾದವೇ ಕರುಣಾ ರಸವನ್ನೊಳಗೊಂಡ `ಗಜಲ್~ ಎಂದು ಅರ್ಥೈಸುತ್ತಾರೆ. ಗಜಲ್ ರಾಣಿಯ ಹುಚ್ಚು … Read more
ಪಂಜು ಕಾವ್ಯಧಾರೆ
ನಂಕ್ಯಾಕೋ…. ಬೆತ್ತಿಂಗ್ಳುನ ಕಂಡ್ರೇ ಭಯಾ ಆತೈತೆ ಬಾಗ್ಲಾಕ್ಕಂಡು ಬುಡ್ಡೀದೀಪಾನ ಆರಿಸಿ ಸುಮ್ಜೆ ಕೂಕಂತೀನಿ ಗವ್ವನ್ನೋ ಕತ್ಲು ಮೈಮ್ಯಾಗೇ ನಿಧಾನುಕ್ಕೆ ರೇಷ್ಮೇ ಹುಳ ತಲೆಯಾಡ್ಸಂಗೆ ನಿನ್ನ ಗ್ಯಾಪ್ನದ ನೆನಪುಗಳು ಎದ್ದು ನಿಂತ್ಕಂತವೆ ಗ್ವಾಡೇ ಮ್ಯಾಗೆ ನೀನೇ ಬಂದಂಗಾತು ದಾಳಿಂಬೆ ಬೀಜದ ಸಾಲಿಟ್ಟಂಗೆ ನಗ್ತಿದ್ದೆ ನನ್ನ ಮನುಸ್ನಾಗೆ ಒಲವಿನ ದೀಪ ಬೆಳುಗ್ತು ನಂಕಾಗ ಗೊತ್ತಾತು ನಾನೂನು ಒಬ್ಮನ್ಸಾ ಅಂತಾ ಗ್ವಾಡೇ ಮ್ಯಾಗೇ ಕೂಕಂಡು ನಗ್ತಾ ಇರೋಳ್ಗೇ ನಡುಮನೆತಾಕ ಬಂದು ಆಸರಿಕೆ- ಬ್ಯಾಸರಿಕೆ ಕಳಿಯಾಕೆ ಮನುಸಾಗ್ತಿಲ್ವಾ… ನಂಕ್ಯಾಕೋ ಬೆಳಕೇ ಬ್ಯಾಡಾ ಅನ್ನುಸ್ಬುಟೈತೆ … Read more
ಮನೆ ಬಾಡಿಗೆಗಿದೆ!: ಎಸ್.ಜಿ.ಶಿವಶಂಕರ್
ಹೌದು, ನನ್ನ ಮನೆಯ ಮೊದಲ ಮಹಡಿ ಮನೆ ಬಾಡಿಗೆಗಿದೆ! ಫ್ಯಾಕ್ಟ್ರಿ ಕೆಲಸ ಮಾಡಿದವರಿಗೆ ನನ್ನ ಕಾಲದಲ್ಲಿ ಪೆನ್ಷನ್ ಇರಲಿಲ್ಲ. ಅದಕ್ಕೇ ಪಿಎಫ್ ಸಾಲ ತೆಗೆದು ಬಾಡಿಗೇಗೇಂತ ಇಪ್ಪತ್ತು ವರ್ಷದ ಹಿಂದೆ ಮಹಡಿ ಮೇಲೊಂದು ಮನೆ ಕಟ್ಟಿಸಿದ್ದೆ. ಕೆಳಗೆ ನಾನು ವಾಸ, ಮೇಲಿನದು ಬಾಡಿಗೆಗೇಂತ ಯೋಜನೆ ಮಾಡಿ ಕಾರ್ಯ ಅರೂಪಕ್ಕಿಳಿಸಿದ್ದೆ. ಕಳೆದ ಇಪ್ಪತ್ತು ವರ್ಷದಲ್ಲಿ ಐದಾರು ಜನ ಬಾಡಿಗೆದಾರರು ನೆಮ್ಮದಿಯಿಂದ ಇದ್ದು ಹೋದರು. ಆದರೆ ಈಗ ಮಾತ್ರ ವಿಚಿತ್ರ ಪರಿಸ್ಥಿತಿ ಎದುರಾಗಿತ್ತು. ಪ್ರತೀ ರೂಮಿಗೂ ಅಟ್ಯಾಚ್ಡ್ ಬಾತ್ರೂಮು ಕೇಳುತ್ತಿದ್ದರು! … Read more
ಭಾವೈಕ್ಯತೆಯೆಂಬ ಬಳ್ಳಿಯ ಹೂವುಗಳು: ಹೆಚ್. ಷೌಕತ್ ಆಲಿ
ಯುವ ಕವಿ ಮೆಹಬೂಬ ಪಾಷ ಎ.ಮಕಾನದಾರ ಕೊಪ್ಪಳದವರು.ಸಮಾಜಶಾಸ್ತ್ರದಲ್ಲಿ ಎಂ.ಎ ಮತ್ತು ಬಿ.ಎಡ್ ಶಿಕ್ಷಣದ ಬಳಿಕ ಅತಿಥಿ ಉಪನ್ಯಸಕರಾಗಿ ಸೇವಾ ಕಾರ್ಯ ಆರಂಭ. ಕವಿಯ ಬಗ್ಗೆ ನಾನು ಒಂದಷ್ಟು ವಿಚಾರ ಹೇಳಬೇಕನ್ನಿಸುತ್ತೆ, ಬದುಕಿಗೆ ತುಂಬ ಹತ್ತಿರದನೆಂಟು ಮೆಹಬೂಬ ಪಾಷರವರ ಚಿಂತನೆಗಳು ಆಳಕ್ಕೆ ಹೋದರೂ ಅಲ್ಲಿಯು ಒಂದು ಚಿಗುರು ಕಾಣುವಂಥದ್ದು. ಜಾತಿ, ನೀತಿ, ರೀತಿ, ರೀವಾಜುಗಳಿಂದ ಆಚೆಗೆ ಇವರ ಹೃದಯ ಚಿಂತಿಸುತ್ತದೆ. ಬದುಕು ಅನೇಕ ಘಟ್ಟಗಳಲ್ಲಿ ಅನೇಕ ಅನುಭವ ನೀಡಿ ಅದರಿಂದ ಕಲಿತ ಪಾಠವೇ ಜೀವನದ ಸಾರ್ಥಕದ ಮುನ್ನೋಟವಾಗಿರುತ್ತೆ ಇಂತಹ … Read more
ಅಹಮಿಲ್ಲದ ಮಹಮದರ ಬದುಕೇ ಕವಿತಾಸಾರ: ಡಾ. ಹೆಚ್ಚೆನ್ ಮಂಜುರಾಜ್
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ ರಾಡಿಗೊಳಿಸುವೆ ಏಕೆ, ಮಧುರ ನೆನಪೇ? ಬಹಳ ಒಳ್ಳೆಯ ಕವಿ ಹಾಗೂ ಅದಕಿಂತಲೂ ಒಳ್ಳೆಯ ಮನುಷ್ಯರಾದ ನಿಸಾರ್ ಅಹಮದ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ‘ಕನ್ನಡವೆಂದರೆ ಬರಿ ನುಡಿಯಲ್ಲ. ………’ ಎಂದು ತಿಳಿಸಿ ಕೊಟ್ಟವರಿವರು. ಮನಸು ಗಾಂಧಿಬಜಾರು ಎಂದವರು. ಕನ್ನಡ ನಾಡು ನುಡಿಗಳ ನಿತ್ಯೋತ್ಸವವನ್ನು ಸತ್ಯವಾಗಿಸಿದವರು. ಕುರಿಗಳು ಸಾರ್ ಕುರಿಗಳು ಎಂದು ವಿಡಂಬಿಸಿದವರು. ಮೂಲತಃ ಭೂಗರ್ಭ ವಿಜ್ಞಾನಿಯಾದರೂ ನವೋಲ್ಲಾಸದ ಕವಿಗಳಾಗಿಯೇ … Read more
ಕುರಿಯ ಹಾಲಿನ ಐಸಕ್ರೀಮು (ಭಾಗ ೧): ಗುರುಪ್ರಸಾದ ಕುರ್ತಕೋಟಿ
ಅಮೇರಿಕೆಗೆ ಹೋಗುವುದು ಖಚಿತವಾಗಿ, ವೀಸಾ ಸಂಭ್ರಮಗಳೆಲ್ಲ ಮುಗಿದಾಗ ನಮ್ಮ ಕಂಪನಿಯಲ್ಲಿ ನನಗೆ ಕರೆಗಳು ಬರಲು ಶುರುವಾಗಿದ್ದವು. ಅಮೆರಿಕೆಯ ವೀಸಾ ಸೀಲು ಬಿದ್ದವರು ಅಂದರೆ ಮದುವೆಗೆ ತಯಾರಾದ ಕನ್ಯೆಯರು ಇದ್ದಂತೆ. ಹುಡುಗಿಗೆ ವಯಸ್ಸಾದಂತೆ ತಂದೆತಾಯಿಯರಿಗೆ ಎಷ್ಟು ಆತಂಕ ಇರುತ್ತದೋ (ನಮ್ಮ ಕಾಲದಲ್ಲಿ ಹಾಗಿತ್ತು, ಈಗ ಹುಡುಗನ ತಂದೆತಾಯಿಗೆ ಅಂತ ಓದಿಕೊಳ್ಳಿ!) ಅದಕ್ಕಿಂತ ಹೆಚ್ಚು ಆತಂಕ ಆಯಾ ವಿಸಾಧಾರಿಗಳ ಮ್ಯಾನೇಜರ್ ಗಳಿಗೆ. ನಾವು ಒಂಥರಹದ ಬಿಸಿ ತುಪ್ಪ ಅವರಿಗೆ. ಅದಕ್ಕೆ ಕಾರಣವೂ ಇದೆ. ವೀಸಾಕ್ಕೆ ಅಂತ ಸಿಕ್ಕಾಪಟ್ಟೆ ಖರ್ಚು ಮಾಡಿರುತ್ತಾರೆ. … Read more
ಬೆನ್ ಜಾನಸನ್‍ನ ನಾಟಕ- Every Man In His Humour- ಅವಿವೇಕತನಕ್ಕೆ ಕನ್ನಡಿ: ನಾಗರೇಖಾ ಗಾಂವಕರ
ಇಂಗ್ಲೆಂಡಿನ ಹಳೆಯ ಉಪನಗರ ಹಾಗ್ಸ್‍ಡೆನ್‍ನ ನೋವೆಲ್ಲ್ ವಯೋವೃದ್ದ, ಆದರೆ ಧೀಮಂತ, ವ್ಯವಹಾರಿಕ ಕಲೆಯಲ್ಲಿ ನಿಪುಣ. ಆತನ ಮಗ ತರುಣ ಎಡ್ವರ್ಡ. ಮಗನ ಆಸಕ್ತಿಗಳು ಆತನ ಶ್ರೇಯಸ್ಸು ಇವುಗಳ ಬಗ್ಗೆಯೇ ತಂದೆಯ ಮೊದಲ ಆದ್ಯತೆ. ಮಗನಿಗೆ ಆಪ್ತವಾಗಿರುವ ಕಾವ್ಯ ಸಾಹಿತ್ಯಗಳೆಲ್ಲವೂ ಆತನಿಗೆ ಉಪಯೋಗಕ್ಕೆ ಬಾರದ ಸಂಗತಿಗಳು. ಲಾಭವಿಲ್ಲದ ವಿದ್ಯೆ. ಅದರೊಂದಿಗೆ ಆತನ ಇನ್ನೊಂದು ಚಿಂತೆ ಸದಾ ಗಿಡುಗಗಳ ಪಳಗಿಸುತ್ತ ಕಾಲಹರಣ ಮಾಡುವ ಆತನ ಅಣ್ಣನ ಮಗ ಹಳ್ಳಿ ಗಮಾರ ಸ್ಟೀಫನ್ ಬಗ್ಗೆ. ಒಬ್ಬ ವ್ಯಾವಹಾರಿಕ ಚಾತುರ್ಯವುಳ್ಳ ನೊವೆಲ್ಲ್ ತಂದೆಯಾಗಿ … Read more