ವೈದೇಹಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ‘ಕ್ರೌಂಚ ಪಕ್ಷಿಗಳು’: ಮೋಹನ್ ಕೊಳ್ಳೇಗಾಲ
ವೈದೇಹಿಯವರ ‘ಕ್ರೌಂಚ ಪಕ್ಷಿಗಳು’ ಹತ್ತು ಕಥೆಗಳನ್ನೊಳಗೊಂಡ ಒಂದು ಕಥಾಸಂಕಲನ. ಎಲ್ಲಾ ಕಥೆಗಳಲ್ಲಿಯೂ ಹೊಸ ಹುಡುಕಾಟವಿದೆ, ಅದ್ಭುತ ಮತ್ತು ನೈಜವೆನಿಸಿಕೊಳ್ಳುವ ಭಾವನೆಗಳನ್ನು ಎಳೆ ಎಳೆಯಾಗಿ ಹರಿಯಬಿಡುವ ನಿರೂಪಣೆಯಿದೆ, ಹೊಸ ಹೊಸ ಭಾವನೆಗಳ ಮಿಳಿತವಿದೆ, ನೋವಿನ ಜೊತೆಗೆ ನಲಿವಿದೆ, ನಂಬಿಕೆ ಅಪನಂಬಿಕೆಗಳ ನಡುವಿನ ಗುದ್ದಾಟವಿದೆ, ಅರ್ಧದಾರಿಗೇ ನಮ್ಮನ್ನು ನಿಲ್ಲಿಸಿಹೋಗುವ ಒಗಟುಗಳಿವೆ, ಪ್ರಶ್ನೆಯಾಗಿ ಕಾಡಿ ಪ್ರಶ್ನೆಯಾಗಿಯೇ ಉಳಿದುಕೊಳ್ಳುವ ಭಾವನೆಗಳಿವೆ, ಜೊತೆಗೆ ಕುಂದಾಪುರ ಕನ್ನಡದ ನವಿರು ಸೊಗಡಿನ ದುಡಿಮೆಯಿದೆ. ಇವೆಲ್ಲಕ್ಕಿಂತಲೂ ಈ ಕಥೆಗಳಲ್ಲಿ ಪ್ರಮುಖವಾಗಿ ಗ್ರಹಿಸಿಕೊಳ್ಳಬಹುದಾದ ಅಂಶವೆಂದರೆ ‘ಪ್ರತಿ ಕಥೆಯಲ್ಲೂ ವಿರುದ್ಧಭಾವಗಳು ಒಟ್ಟೊಟ್ಟಿಗೆ … Read more