ಪುಟ್ರಾಜು ಕತೆ: ಗವಿಸ್ವಾಮಿ
ಮಧ್ಯಾಹ್ನದ ಹೊತ್ತು. ಪಕ್ಕದ ಹಳ್ಳಿಯಲ್ಲೊಂದು ಕೇಸು ಮುಗಿಸಿಕೊಂಡು ವಾಪಸ್ ಬರುತ್ತಿದ್ದೆ. ಹೈವೇ ಬದಿಯಲ್ಲಿರುವ ಪುಟ್ಟರಾಜುವಿನ ಸೂರ್ಯಕಾಂತಿ ಹೊಲದಲ್ಲಿ ಐದಾರು ಮಂದಿ ಟೂರಿಸ್ಟುಗಳು ಫೋಟೋ ತೆಗೆಸಿಕೊಳ್ಳುತ್ತಿದ್ದರು. ಬಂಡೀಪುರ – ಊಟಿ ಕಡೆಗೆ ಹೋಗುವ ಟೂರಿಸ್ಟುಗಳು ದಾರಿಯಲ್ಲಿ ಎತ್ತಿನಗಾಡಿಯನ್ನು ಕಂಡರೂ ಫೋಟೊ ತೆಗೆಸಿಕೊಳ್ಳುತ್ತಿರುತ್ತಾರೆ. ಗಾಡಿ ಮೇಲೆ ಕೂತ ರೈತನಿಗೆ ಒಂಥರಾ ಬೆರಗು! ಪಾಪ ಅವರ ಕಡೆ ಇದೆಲ್ಲಾ ನೋಡೋದಿಕ್ಕೆ ಸಿಗೋದಿಲ್ವೇನೋ ಅಂದುಕೊಂಡು ಖುಷಿಯಿಂದ ಪೋಸು ನೀಡುತ್ತಾನೆ. ಇನ್ನು ಕೆಲ ಟೂರಿಸ್ಟರು ಆಲದ ಮರದ ಬೀಳಲುಗಳನ್ನು ಹಿಡಿದು ಜೋತಾಡುವ ತಮ್ಮ ಮಕ್ಕಳನ್ನು ನೋಡುತ್ತಾ ರಿಲ್ಯಾಕ್ಸ್ ಆಗುತ್ತಿರುತ್ತಾರೆ. … Read more