ಕೆಂಪು ಹುಂಜ: ಜೆ.ವಿ.ಕಾರ್ಲೊ

ಸೋಂಬಾನ ಆರೂಡುವ ಎತ್ತು ಹೊಟ್ಟೆಯುಬ್ಬರಿಸಿಕೊಂಡು ಸತ್ತು ಬಿದ್ದಿತ್ತು. ಸೋಂಬಾನ ಜಗತ್ತು ತಲೆ ಕೆಳಗಾದುದರಲ್ಲಿ ಆಶ್ಚರ್ಯವಿಲ್ಲ. ಎತ್ತು ಮುದಿಯಾಗಿತ್ತು, ನಿಜ. ನಿತ್ರಾಣಗೊಂಡಿತ್ತೂ ನಿಜವಾದರೂ, ಒಳ್ಳೆಯ ಸಮಯ ನೋಡಿಯೇ ಸೋಂಬಾನಿಗೆ ಕೈ ಕೊಟ್ಟಿತ್ತು… ಒಂದು ಹದವಾದ ಮಳೆ ಉದುರಿ ಭೂಮಿ ಉತ್ತನೆಗೆ ತಯಾರಾದಾಗ! ಎತ್ತು ಯಾಕೆ ಸತ್ತಿತು ಎಂದು ಕಾರಣ ಸೋಂಬಾನಿಗೆ ಸ್ಪಷ್ಟವಾಗಿ ಗೊತ್ತಿತ್ತು. ಅವನ ಹೊಲದ ಬದಿಯಲ್ಲೇ ಒಂದು ದೈತ್ಯಾಕಾರದ ಆಲದ ಮರವಿತ್ತು. ಅದರಲ್ಲಿ ವಾಸವಿದ್ದ ಚೌಡಿಗೆ, ಪ್ರತಿವರ್ಷ ಕೊಯ್ಲಿನ ನಂತರ ಕೆಂಪು ಹುಂಜನನ್ನು ಬಲಿ ಕೊಡುವುದು ರೂಢಿ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮು೦ಜಾವದ ಕಲರ್ ಫುಲ್ ಜಗತ್ತು-ವೆ೦ಡರ್ ಕಣ್ಣು: ವೆಂಕಟೇಶ್ ಪ್ರಸಾದ್

ಸುಮಾರು ೮-೧೦ ವರ್ಷಗಳ ಹಿ೦ದಿನ ಮಾತು, ನಾನಾಗ ೭ನೇ ಇಯತ್ತೆಯಲ್ಲಿ ಓದುತ್ತಿದ್ದೆ. ಒ೦ದು ದಿನ ಶಾಲೆಯಲ್ಲಿ ಕನ್ನಡ ಅಧ್ಯಾಪಕರು ದಿನ ಪತ್ರಿಕೆಗಳ ಬಗ್ಗೆ ಮಾತನಾಡುತ್ತಿದ್ದರು. ಮಾತಿನ ಕೊನೆಯಲ್ಲಿ ಯಾರೆಲ್ಲಾ ಮನೆಯಲ್ಲಿ ದಿನಪತ್ರಿಕೆ ಗಳನ್ನು ಓದುತ್ತೀರಿ ? ಎ೦ಬ ಪ್ರಶ್ನೆ ಕೇಳಿದರು. ಹೆಚ್ಚಿನವರು ಕೈ ಎತ್ತಿ ನಾವು ಓದುತ್ತೇವೆ ಸರ್ ಎ೦ದರು. ನಾನು ಕೈ ಎತ್ತಿರಲಿಲ್ಲ. ಕಾರಣ ನಮ್ಮ ಮನೆಯಲ್ಲಿ ಆಗ ದಿನ ಪತ್ರಿಕೆ ತರಿಸುತ್ತಿರಲಿಲ್ಲ. ಆ ದಿನ ಮನೆಗೆ ಬ೦ದ ನಾನು ದಿನಪತ್ರಿಕೆ ತರಿಸುವ೦ತೆ ಜಗಳ ಮಾಡಿದ್ದೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 6): ಮಹಾಂತೇಶ್ ಯರಗಟ್ಟಿ

1. ಸ್ವತಂತ್ರ ಭಾರತದ ಮೊದಲನೆಯ ಗವರ್ನರ್ ಜನರಲ್ ಯಾರು? 2. ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ ಭಾರತೀಯ ಯಾರು? 3. ಭಾರತದ ಪ್ರಥಮ ಕೃತಕ ಉಪಗ್ರಹ ಯಾವುದು? 4. ಸಿಂಧೂ ನಾಗರೀಕತೆಯ ನಗರ ಯೋಜನೆಯ ಮುಖ್ಯ ಲಕ್ಷಣ ಯಾವುದು? 5. ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು? 6. ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ? 7. ಗೌತಮ ಬುದ್ಧನು ಯಾವ ಭಾಷೆಯಲ್ಲಿ ಬೋಧಿಸಿದನು? 8. ಭಾರತದ ಮೊದಲ ವಾಕ್ ಚಿತ್ರ ಯಾವುದು? 9. ವಾಯುದಳದಲ್ಲಿ ಪ್ರಥಮ ಮಹಿಳಾ ಪೈಲಟ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೆವೆನ್: ವಾಸುಕಿ ರಾಘವನ್ ಅಂಕಣ

ಪೋಲಿಸ್ ಡಿಟೆಕ್ಟಿವ್ ಸೊಮರ್ಸೆಟ್ ಇನ್ನೊಂದು ವಾರದಲ್ಲಿ ನಿವೃತ್ತನಾಗಲಿದ್ದಾನೆ. ಅವನಿಗೆ ಆ ಊರು, ಆ ಕೆಲಸ ಸಾಕುಸಾಕಾಗಿಹೋಗಿದೆ. ಅವನ ಜಾಗಕ್ಕೆ ವರ್ಗಾವಣೆಯಾಗಿ ಬರುವ ಮಿಲ್ಸ್ ಅನ್ನುವ ಬಿಸಿರಕ್ತದ ಯುವಕನ ಜೊತೆ ಒಂದು ವಾರದ ಮಟ್ಟಿಗೆ ಕೆಲಸ ಮಾಡಬೇಕಾಗಿದೆ. ತದ್ವಿರುದ್ಧ ವ್ಯಕ್ತಿತ್ವದ ಇವರಿಬ್ಬರಿಗೂ ತಿಕ್ಕಾಟ ಶುರುವಾಗುತ್ತದೆ. ಅದೇ ವೇಳೆಯಲ್ಲಿ ಆ ಊರಿನಲ್ಲಿ ಒಂದು ಭೀಕರ ಕೊಲೆಯಾಗುತ್ತದೆ. ಅನುಭವೀ ಸೊಮರ್ಸೆಟ್ ಈ ಕೊಲೆ ಯಾರೋ ಆತುರದಲ್ಲಿ ಮಾಡಿದ್ದಲ್ಲ ಅಂತ ವಾದಿಸುತ್ತಾನೆ, ಆದರೆ ಮಿಲ್ಸ್ ಅವನ ಮಾತನ್ನು ಒಪ್ಪುವುದಿಲ್ಲ. ಅಷ್ಟರಲ್ಲೇ ಇನ್ನೊಂದು ಭಯಾನಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಉಡಪಿ ರಾಯನ್ ಹೋಟೆಲ್: ಸುಮನ್ ದೇಸಾಯಿ ಅಂಕಣ

ಒಂದು ದಿನಾ ಉಡಪಿರಾಯನ ಹೋಟೆಲು ತೆರೆದಿತ್ತ….. ಮಸಾಲಿ ದ್ವಾಸಿ ವಾಸನೆ ನಮ್ಮ ಮೂಗಿಗೆ ಬಡಿತಿತ್ತಾ….. ಖಾರಾ ಚಕ್ಕುಲಿ ಶೇವು ಚಿವಡಾ ಗೆಳತನ ಮಾಡಿದ್ವ… ಬುಟ್ಟ್ಯಾಗಿನ ಉದ್ದಿನವಡಿ ಎದ್ದೆದ್ದ ಬರ್ತಿದ್ವ….. ಅಂಟಿನ ಉಂಡಿ ಶಟಗೊಂಡ ಹೋಗಿ ಡಬ್ಬ್ಯಾಗ ಕೂತಿತ್ತ…….. ಚಹಾ ಕುಡಿದರ ಪಾನಪಟ್ಟಿ ಓಡೊಡಿ ಬರತಿತ್ತ……. ಇದೇಲ್ಲಾ ಆದಮ್ಯಾಲೆ ನಾಲ್ಕ ರೂಪಾಯಿ ಬಿಲ್ಲ ಆಗಿತ್ತ…. ಅದನ್ನ ನೋಡಿ ನನ್ನ ಎದಿ ಝಲ್ಲ ಅಂದಿತ್ತ………….. ಈ ಹಾಡನ ನಮ್ಮ ಅಮ್ಮ ಸಣ್ಣವರಿದ್ದಾಗ ತಮ್ಮ ವಾರಿಗಿ ಗೇಳ್ತ್ಯಾರ ಜೋಡಿ ಹಾಡತಿದ್ರಂತ… ಆವಾಗಿನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ನೇಹ ಭಾಂದವ್ಯ (ಭಾಗ 9): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ) ಸುಧಾ ಎಚ್ಚರವಾಗಿದುದ್ದನ್ನು ನೋಡಿದ ರಾಜೇಶ ಅವಳ ಹತ್ತಿರ ಒಂದು ಮಂಚದ ಬದಿಗೆ ಕುರ್ಚಿಯಲ್ಲಿ ಕುಳಿತಿದ್ದ ಕಾವೇರಮ್ಮ ಅವನಿಗೆ ಜಾಗ ಬಿಟ್ಟು ಎದ್ದಳು. ಆಗ ರಾಜೇಶ ಆ ಕುರ್ಚಿಯಲ್ಲಿ ಕೂಡುತ್ತ ಸುಧಾ ಎಂದು ಅವಳ ಕೈಯನ್ನು ಹಿಡಿದ ಆಗ ಸುಧಾಳ ಕಣ್ಣಲ್ಲಿ ನೀರು ಹರಿಯಲಾರಂಭಿಸಿತು. ದಯವಿಟ್ಟು ನನ್ನ ಕ್ಷಮಿಸು ಸುಧಾ. ನಾನು ನನ್ನ ಕೆಲಸದ ಒತ್ತಡದಲ್ಲಿ ನಿನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎನ್ನುತ್ತಾ ಅವಳ ಕಣ್ಣೀರು ಒರೆಸಿದ. ಇನ್ನು ಮೇಲೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ನನ್ನನ್ನು ನಂಬು ಎಂದ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೀಗೊ೦ದು ವಧು ಪರೀಕ್ಷೆ: ಶ್ರೀವಲ್ಲಭ ಆರ್ ಕುಲಕರ್ಣಿ

ಇತ್ತಿತ್ಲಾಗ ಗ೦ಡಿಗೆ ಹೆಣ್ಣು ಹುಡುಕೋದು ಕಷ್ಟ ಆಗೇದ. ಹ೦ತಾದ್ರಾಗ ಗ೦ಡು ಸಾದಾ ಕೆಲಸದಾಗ ಇದ್ರ೦ತೂ ಯಾವ ಕಪಿ (ಕನ್ಯಾ ಪಿತೃ)ಗಳೂ ತಿರುಗಿ ಸುದ್ದಾ ನೊಡ೦ಗಿಲ್ಲ. ಮೊದ್ಲಿನ್ ಕಾಲದಾಗ ಗ೦ಡಿನ ಕಡೆಯ ಜ್ವಾಳದ ಚೀಲಾ ಎಣಿಸಿ ಅವರಿಗೆ ಬಾಳೆ ಮಾಡೋ ಶಕ್ತಿ ಎಷ್ಟರಮಟ್ಟಿಗೆ ಅದ ಅ೦ತ ಲೆಕ್ಕಾ ಹಾಕಿ ಹೆಣ್ಣು ಕೊಡ್ತಿದ್ರ೦ತ. ಗ೦ಡಿನ ಕಡೆಯವರು ರ೦ಗೋಲಿ ಕೆಳಗ ಹೋಗೊ ಮ೦ದಿ, ಅಕ್ಕ ಪಕ್ಕದವರ ಮನ್ಯಾಗಿನ ಜ್ವಾಳದ ಚೀಲಾ ಗುಳೇ ಹಾಕಿ ಮದುವಿ ಮಾಡ್ಕೋತಿದ್ರ೦ತ. ಕಪಿಗಳದೂ ಏನೂ ತಪ್ಪಿಲ್ಲಾ ಬಿಡ್ರಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಗು: ಪ್ರಶಸ್ತಿ ಅಂಕಣ

ಮೆಚ್ಚುನಗು, ಪೆಚ್ಚುನಗು, ಕೆಚ್ಚು ನಗು, ಹುಚ್ಚು ನಗು,ಮನ ಬಿಚ್ಚಿ ನಗು.. ಅಬ್ಬಬ್ಬಾ ಅದೆಷ್ಟೊಂದು ಪರಿ ನಗು ? ಆನಂದ, ಅತ್ಯಾನಂದ, ಮಹದಾನಂದ, ಅದ್ಭುತಾನಂದ ಹೀಗೆ ಹಲ ಪರಿಯ ಖುಷಿಯಾದಾಗಲೆಲ್ಲಾ ತುಂಟಿಯಂಚಿನಲ್ಲಿ ಮೂಡಿ, ಕಣ್ಣಂಚಲ್ಲಿ ಮಿನುಗುತ್ತಲ್ಲ.. ಅದೇ ನಗು. ಏನಪ್ಪಾ ಇದು ಈ ಪರಿ ಪೀಠಿಕೆ ಅಂದ್ರಾ ? ಹೆ.ಹೆ ಇವತ್ತು ಬರೆಯೋಕೆ ಹೊರಟಿರೋ ಲೇಖನ ಅದೇ ಕಣ್ರಿ. ನಗು. ಅಂದಂಗೆ ಇಲ್ಲಿರೋ ಪಾತ್ರ, ವ್ಯಕ್ತಿ, ಸನ್ನಿವೇಷಗಳನ್ನೆಲ್ಲಾ ಸಿಕ್ಕಾಪಟ್ಟೆ ಸೀರಿಯಸ್ಸಾಗಿ ತಗೋಬೇಡಿ. ಸುಮ್ನೇ ಓದಿ, ನಕ್ಕು ಬಿಡಿ. ನಗು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾನು ಮತ್ತು ಗ್ವಾಡು: ಸಚಿನ್ ಎಂ. ಆರ್.

“ಥೂ.. ಯಾಕಪ್ಪಾ ನನ್ ಜೀವನ ಹಿಂಗೇ??? ಓ ಮೈ ಗ್ವಾಡ್ ಯಾಕೆ ನೀ ನನ್ನ ಹಿಂಗೆ ಮಾಡಿದೆ? ತಲೆಯಲ್ಲಿ ಯಾಕೆ ಯಾವಾಗ್ಲೂ ಪ್ರಶ್ನೆಗಳು ಏಳ್ತಾ ಇರ್ತವೆ? ಉತ್ತರ ಮಾತ್ರ ಯಾಕೆ ಸಿಗುತಿಲ್ಲ?? ಎಕೆ ಎಲ್ಲವೂ ಹೀಗೆ ಅಯೋಮಯ?” ಅಂತ ತಲೆಯಲ್ಲಿ ಒಂದೇ ಸಮನೆ ಪ್ರಶ್ನೆಗಳೆಲ್ಲ ಗಿರಕಿ ಹೊಡೆಯುತ್ತಾ ಕುಂತಿದ್ದವು.ಏನಾದರಾಗಲಿ ದೇವರನ್ನೇ ಕೇಳೋಣ ಅಂದುಕೊಂಡೆ!! ಆದರೆ ಕೇಳೋದು ಹೆಂಗೆ? ವೈಫೈ, ಬ್ಲೂಟೂಥ್ ಯೂಸ್ ಮಾಡೋದು ನಮ್ ಗಾಡ್‍ಗೆ ಗೊತ್ತಿಲ್ಲ. ಆದರೂ ಕನೆಕ್ಟಿವಿಟಿ ಮಾಡಿ ನನ್ನ ಪ್ರಶ್ನೆಗೆ ಉತ್ತರ ಪಡೆಯಲೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕವಿತೆಗಳು:ಅಶೋಕ್ ಕುಮಾರ್ ವಳದೂರು, ಸ್ವರೂಪಾನಂದ ಕೆ., ಶಿದ್ರಾಮ ಸುರೇಶ ತಳವಾರ

ಸಂಘರ್ಷ ಇಂದು ನಿನ್ನೆಗಳದಲ್ಲ ಇದು ಹುಟ್ಟು ಸಾವೆಂಬ ಭವ -ಭಯ ಮೊಳಕೆಗೆ ಝರಿ ನೀರಲಿ ಕೊಳೆಯುವ ಕಳೆಯುವ ಅಂಜಿಕೆ   ಮೊಣಕಾಲೂರಿ ದೈನನಾಗಿ ಪ್ರಪಂಚ ನೋಡಿದಂದಿನಿಂದ ಸಾಧನೆಯ ಹುಚ್ಚು ಮೇಲೇರುವ ಕೆಚ್ಚು ಅಂದೇ ಶುರುವಾಯಿತು ನೋಡಿ ಸಂಘರ್ಷ !   ಬೀಸುತಿದ್ದ ಗಾಳಿ ಹರಡುತ್ತಿದ್ದ ಬೆಳಕು ಎಲ್ಲಾ ಸೀಳಿಕೊಂಡು ವೇಗ ಹಿಡಿದ ಕನಸು ಈ ಮಧ್ಯೆ ಹತೋಟಿ ಕಳಕೊಂಡ ಮನಸ್ಸು ಜರ್ಜರಿತ  ದೇಹಕ್ಕೆ ಮತ್ತೆ ವಾಪಾಸಾಗದ ಆಯಸ್ಸು !   ಬೇಸರಾಗಿ  ಬೇಡದ  ಜೀವಕ್ಕೆ ಸಮಾಜ ಕಟ್ಟಿದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿ ಕಾಣದ ಮನಸು: ಚಂದ್ರಯ್ಯ ಕೆ. ಎಚ್.

ಆಕೆಯ ಮುಖದಲ್ಲಿದ್ದ ಸಂಭ್ರಮ ಮನಸಲಿಲ್ಲ. ಮನಸಿನ ವೇದನೆಯ ಕಹಿ ಘಟನೆಗಳ ಅರಿಯುವರಾರಿಲ್ಲ, ದಾರಿಯುದ್ದಕ್ಕೂ ಮುಳ್ಳುಗಳ ರಾಶಿ, ಹತ್ತಿರ ಹೋದಷ್ಟು ಸಂಬಂಧಗಳು ದೂರ. ಆದರೆ ಆಕೆಯ ಮುಖದಲ್ಲಿ ಇದ್ಯಾವುದರ ಪರಿವಿಲ್ಲದಂತೆ ನರ್ತಿಸುವ ಪಂಚೇಂದ್ರಿಯಗಳು, ಮನಸ್ಸಿನ ನೋವು ಮನಸಿರುವವರಿಗೆ ಮಾತ್ರ ತಿಳಿಯುವುದು. ಒಂಟಿಯಾದಷ್ಟು ಕಷ್ಟ-ನೋವುಗಳ ಸುರಿಮಳೆ ಗುಡುಗು-ಮಿಂಚಂತೆ ಆಗಾಗ ಬಂದು ಹೋಗುತ್ತಿವೆ. ಜೀವ ಕಳೆದುಕೊಳ್ಳಲು ಮುಂದಾಗದ ಮನಸ್ಸು, ಜೀವನ ಸಾಗಿಸಲು ಸಂಬಂಧವಿದ್ದರೂ ಇಲ್ಲದಂತಾದ ಸಂಸಾರ. ಬದುಕಿನ ಜಂಜಾಟಗಳ ಸುಳಿಯಲ್ಲಿ ಸಿಕ್ಕು ಬಲಿಯಾಗುತ್ತಿರುವ ಆಕೆಯ ನೋವುಗಳನ್ನು ಅರಿಯುವರಾರು. ಸದಾ ಏನನ್ನೋ ಕಳೆದುಕೊಂಡಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೋತಿ ಮತ್ತು ಮನುಷ್ಯ: ರೇಷ್ಮಾ ಎ.ಎಸ್.

ಬಣ್ಣದ ಒಂದು ಇಡೀ ಸೀರೆಯನ್ನೇ ತಲೆಗೆ ರುಮಾಲಾಗಿ ಸುತ್ತಿ ಒಂದು ಚುಂಗನ್ನು ಹೆಗಲ ಮೇಲೆ ಬರುವಂತೆ ಇಳಿ ಬಿಟ್ಟಿದ್ದಾನೆ. ದೊಡ್ದ ಪೊದೆ ಮೀಸೆ, ಹಣೆಯಲ್ಲೊಂದು ಹಳದಿ ನಾಮ, ಮಾಸಲು ಕಪ್ಪು ಕೋಟು, ಎಂದೋ ಬಿಳಿಯಾಗಿದ್ದಿರಬಹುದಾದ ಪಂಚೆ, ಹೆಗಲಿಗೆ ಒಂದು ಚಿಂದಿ ಜೋಳಿಗೆ, ಒಂದು ಕೈಯಲ್ಲಿ ಬಣ್ಣದ ಬೇಗಡೆ ಹಚ್ಚಿದ ಕೋಲು, ಇನ್ನೊಂದು ಕೈಯ ದಾರದ ತಿದಿಯಲ್ಲಿ ಕಟ್ಟಿದುದು ಒಂದು ಧಡೂತಿ ಮಂಗ. ಅದೇ ಗಲ್ಲಿಯ ಮಕ್ಕಳಿಗೆಲ್ಲರಿಗೆ ಆಕರ್ಷಣೆಯಾಗಿದ್ದುದುದು. ಆ ಮಂಗಕ್ಕೆ ಬಣ್ಣ ಬಣ್ಣದ ಬಟ್ಟೆಗಳ ಚೂರುಗಳನ್ನು ಚೌಕಚೌಕವಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಕ್ರ: ಡಾ. ಗವಿಸ್ವಾಮಿ

''ತಾಯವ್ವಾ'' ''ಇನ್ನೂ ಆಗಿಲ್ಲ ಕ ನಿಂಗಿ ..  ತಿರ್ಗಾಡ್ಕಂಡ್ ಬಾ ಹೋಗು'' ''ಆಗಿದ್ದದೇನೋ ಅಂದ್ಕಂಡು ಕೇಳ್ದಿ ಕನ್ನೆವ್ವಾ … ಇಲ್ಲೇ ಕೂತಿರ್ತಿನಿ ತಕ್ಕಳಿ'' ಒಳಗೆ ಪೇಪರ್ ಒದುತ್ತಾ ಕೂತಿದ್ದವನು ನಿಂಗಿಯ ಸದ್ದು ಕೇಳಿ ಆಚೆ ಬಂದೆ. ಆವತ್ತು ಗೌರಿ ಹಬ್ಬ. ಹಬ್ಬಹರಿದಿನಗಳಂದು ಹೊಲಗೇರಿಯ ನಿಂಗಿ ನಮ್ಮ ಕೇರಿಯ ಮನೆಗಳಿಗೆ ಬಂದು ಊಟ ತಿಂಡಿ ಹಾಕಿಸಿಕೊಂಡು ಹೋಗುವುದು ಮಾಮೂಲು. ಆವತ್ತು ಎಂದಿನಂತೆ ಅದೇ ಹಳೆಯ  ಬಿದಿರಿನ ಪುಟ್ಟಿಯೊಂದಿಗೆ ಪಡಸಾಲೆಯ ಕೆಳಗಿನ ಮೆಟ್ಟಿಲುಗಳ ಮೇಲೆ ಕೂತಿದ್ದಳು. ಚಪ್ಪಲಿಗಳನ್ನು ಅಡ್ಡಾದಿಡ್ಡಿಯಾಗಿ ಬಿಟ್ಟಿದ್ದರಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಾಯೇಜರ್ ಗಗನ ನೌಕೆಗಳು – ೩೬ ವರ್ಷಗಳ ಕಾಲ ೧೯೦೦ ಕೋಟಿ ಕಿ.ಮೀ ದೂರ ಪಯಣ: ಜೈಕುಮಾರ್.ಹೆಚ್.ಎಸ್.

ವಾಯೇಜರ್ ಗಗನನೌಕೆಗಳ ಪಯಣ: ೧೯೭೭ರಲ್ಲಿ ಅಮೇರಿಕಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ನಾಸಾ) ’ವಾಯೇಜರ್ ೧’ ಮತ್ತು ಅದರ ಅವಳಿ ಗಗನನೌಕೆ ’ವಾಯೇಜರ್ ೨’ ಹೆಸರಿನ ಎರಡು ಗಗನನೌಕೆಗಳನ್ನು ೧೬ ದಿನಗಳ ಅಂತರದಲ್ಲಿ ಗಗನಕ್ಕೆ ಹಾರಿಬಿಟ್ಟಿತು. ಇವೆರಡೂ ಇನ್ನೂ ತಮ್ಮ ಪಯಣವನ್ನು ಮುಂದುವರೆಸುತ್ತಾ ಸೌರವ್ಯೂಹದಾಚೆಗಿನ ಮಾಹಿತಿಯನ್ನು ನಮಗೆ ರವಾನಿಸುತ್ತಲೇ ಇವೆ. ಇವೆರಡೂ ಗಗನನೌಕೆಗಳು ಮೊದಲಿಗೆ ಗುರು ಮತ್ತು ಶನಿ ಗ್ರಹವನ್ನು ಹಾದು ಹೋಗಿ ನಂತರದಲ್ಲಿ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ಹಾದು ಮುಂದೆ ಹೋಗಿವೆ. ಇಲ್ಲಿಂದಾಚೆಗೆ ಅಂತರನಕ್ಷತ್ರ ಪ್ರದೇಶವಿದೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವಿತೆಗಳು: ಮಂಜು ಹಿಚ್ಕಡ್, ಸುನೀತಾ ಮಂಜುನಾಥ್, ದಿಲೀಪ್ ರಾಥೋಡ್

ಮತ್ತೆ ಕಟ್ಟಲಾದಿತೇ ರಾಮರಾಜ್ಯ! ಹುಚ್ಚೆದ್ದು ಕುಣಿಯುತಿದೆ ನಾಡಿನ ಜನತೆ. ಮರೆಯಾಗಿ ಹೋಗುತಿದೆ ಒಲವಿನ ಒರತೆ.   ಇತ್ತ ರೋಡಲಿ ಕಾರು ಅತ್ತ ಬಾರಲಿ ಬೀರು ಎಲ್ಲಿ ನೋಡಿದರಲ್ಲಿ ಹಣದ ಕಾರುಬಾರು.   ಮಾನಕ್ಕೆ ಬೆಲೆಯಿಲ್ಲ ಮಾನವಂತರು ಇಲ್ಲ. ಆಗಿಹುದು ನಾಡು, ಸುಡುಗಾಡು ಎರಡು ಮಾತಿಲ್ಲ.   ಹಣಕಾಗಿ ಜನ ಮರಳು ಹಣಕಾಗಿ ಜಾತ್ರೆ ಮರಳು. ಮರೆತು ಹೋಗಿದೆ ಇಂದು ಮಾನವತೆಯ ತಿರುಳು.   ದ್ವೇಷದ ದಳ್ಳುರಿಯಲ್ಲಿ ಪ್ರೀತಿ ಹೋಗಿದೆ ಸೋತು. ಪ್ರೀತಿ-ಪ್ರೇಮ ಎನ್ನುವುದು ಮರೀಚಿಕೆಯ ಮಾತು.   … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಟೆಲಿಪತಿ: ಪ್ರಶಸ್ತಿ ಅಂಕಣ

ಪೀಠಿಕೆ:ನಂಬಿಕೆ-ಮೂಡನಂಬಿಕೆಗಳ ನಡುವಿನ ವಾದ ಪ್ರತಿವಾದಗಳೇನೇ ಇರ್ಲಿ. ವಿಜ್ಞಾನದ ಸೂಕ್ಷ್ಮದರ್ಶಕಗಳ , ಪರೀಕ್ಷಾ ವಿಧಾನಗಳ ಕಣ್ಣಿಗೆ ಕಂಡಿದ್ದು ಮಾತ್ರ ಸತ್ಯ ಅನ್ನೋ ವೈಜ್ಞಾನಿಕರು, ನಮ್ಮಲ್ಲಿನ ವಸ್ತು, ವಿದ್ಯೆ, ಜ್ಞಾನಗಳನ್ನೆಲ್ಲಾ ಅವಲಕ್ಷಿಸುತ್ತಿದ್ದಾರೆ ಎಂದು ಅಲವತ್ತುಕೊಳ್ಳೋ ಪ್ರಾಚೀನರಿಗೂ ಇಂದಿನ ಮಹಾನ್ ಜ್ಞಾನಿ ಬುದ್ದಿಜೀವಿಗಳಿಗೂ ನಡುವೆ ನಡೀತಿರೋ ಸಂಘರ್ಷಗಳೇನೇ ಇದ್ರೂ ಕೆಲವೊಮ್ಮೆ ಈ ಮನಸ್ಸು ಅನ್ನೋದು ಯಾರ ಊಹೆಗೂ ನಿಲುಕದಂತೆ ವರ್ತಿಸುತ್ತಿರುತ್ತೆ. ನಾವು ಫೋನ್ ಮಾಡ್ಬೇಕು ಅಂತಿದ್ದಾಗಲೇ ಆತ್ಮೀಯರೊಬ್ಬರು ಫೋನ್ ಮಾಡೋದು, ಗೆಳತಿಯ ಹತ್ರ ನಾವೇನೋ ಮಾತಾಡಬೇಕು ಅಂತಿರುವಾಗ ಅವಳೇ ಅದ್ರ ಬಗ್ಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹದಿನೈದು ವರ್ಷದ ಹಳೆಯ ಗೆಳತಿಯೊಂದಿಗೆ ಒಂದು ಸಂಜೆ: ಅಮರ್ ದೀಪ್ ಪಿ. ಎಸ್.

  ಹಿಂದಿನ ದಿನ ಆಕೆ ಒಬ್ಬ ಗೆಳತಿ ಮನೆಗೆ ಹೋಗಿದ್ದಳಂತೆ..  ಮಾತಿನ ನಡುವೆ   "ಮನೆ ಕೆಲಸ, ಮಕ್ಕಳು,  ಟಿ ವಿ. ಸಿರಿಯಲ್ಲು,   ಯಾವುದರಲ್ಲೂ ಮನಸ್ಸು ವಾಲುತ್ತಿಲ್ಲ, ಖುಷಿಯಾಗಿ ತೊಡಗಿಸಿ ಕೊಳ್ಳಲು ಆಗುತ್ತಿಲ್ಲ,  ಯಾಕೋ ಬೇಜಾರೂ, ಲೋನ್ಲಿನೆಸ್ಸ್"  ಅಂದಿದ್ದಾಳೆ.  ಗೆಳತಿ ಒಬ್ಬ ಸಾಹಿತ್ಯಾಸಕ್ತೆ.  ಒಬ್ಬ  ಲೇಖಕನ ಬಗ್ಗೆ ಹೇಳುತ್ತಾ,  ಅವರೂ  ಒಮ್ಮೆ "ಶೂನ್ಯ ಭಾವ"ಕ್ಕೆ ಒಳಗಾಗಿದ್ದ ಸಂಧರ್ಭದಲ್ಲಿ ಒಬ್ಬ ಮನೋ ವೈದ್ಯ ಅವರಿಗೆ ನಾಲ್ಕು ಚೀಟಿಗಳಲ್ಲಿ ಪ್ರಿಸ್ಕ್ರಿಪ್ಷನ್ ಬರೆದು ಬೆಳಿಗ್ಗೆ ೯ಕ್ಕೆ ಮಧ್ಯಾನ್ಹ ೧೨ಕ್ಕೆ, ೩ಕ್ಕೆ ಮತ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚೈನಾಟೌನ್: ವಾಸುಕಿ ರಾಘವನ್ ಅಂಕಣ

ನಿಜವಾಗಿಯೂ ಒಂದು “ಸಸ್ಪೆನ್ಸ್” ಚಿತ್ರ ಗ್ರೇಟ್ ಅನ್ನಿಸಿಕೊಳ್ಳುವುದು ಯಾವುದರಿಂದ? ಅಂತ್ಯವನ್ನು ನಾವು ಊಹಿಸಲು ಆಗದಿರುವುದೇ ಅತೀ ದೊಡ್ಡ ಮಾನದಂಡವಾ? ಅಥವಾ ಚಿತ್ರದುದ್ದಕ್ಕೂ ಹೆಚ್ಚು ಹೆಚ್ಚು ತಿರುವುಗಳಿದ್ದು ನಮ್ಮನ್ನು ಥ್ರಿಲ್ ಮಾಡಿತ್ತು ಅನ್ನುವುದರ ಮೇಲೆ ನಿರ್ಧಾರವಾಗಿದೆಯಾ? ಹೀಗೇ ಅಂತ ನಿಖರವಾಗಿ ಹೇಳಲು ಆಗುವುದಿಲ್ಲ. ಸುಳಿವುಗಳು ಹೆಚ್ಚಿದ್ದರೆ ನಾವು  ಪರಿಹಾರವನ್ನು ಕಂಡುಹಿಡಿದ ಸಂತೃಪ್ತಿ ಸಿಗುವುದಿಲ್ಲ, ಕಮ್ಮಿ ಇದ್ದರೆ ಚಿತ್ರದೊಂದಿಗೆ ಬಂಧ ಬೆಸೆಯುವುದಿಲ್ಲ. ಈ ಸಂತುಲನವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ನನ್ನ ಪ್ರಕಾರ ಒಂದು ಅತ್ಯುತ್ತಮ “ಸಸ್ಪೆನ್ಸ್” ಚಿತ್ರ ಎರಡನೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ