ಮತ್ತೆ ಮಳೆ ಹೊಯ್ಯುತ್ತಿದೆ: ಹೃದಯ ಶಿವ
ಒಂದು ಮಳೆಗಾಲದ ಬೆಳಗ್ಗೆ ಸಕಲೇಶಪುರದ 'ಅಶ್ರಿತಾ' ಲಾಡ್ಜಿನ ಬಾತ್ ರೂಮಿನಲ್ಲಿ ಯೋಗರಾಜಭಟ್ಟರು ಬಾಗಿಲು ಹಾಕಿಕೊಂಡು ಸ್ನಾನ ಮಾಡುತಿದ್ದರು.ನಾನು ಹೊರಗೆ ನಿಂತು 'ಇವನು ಗೆಳೆಯನಲ್ಲ'ವಾಗಬೇಕಿದ್ದ ಕೆಲವು ಅಸ್ಪಷ್ಟ ಸಾಲುಗಳನ್ನು ಹೇಳುತಿದ್ದೆ. ಅವರು ಸ್ನಾನ ಮಾಡುತ್ತಲೇ ಸಾಲುಗಳನ್ನು ಕೇಳಿಸಿಕೊಂಡು ಒಳಗಿನಿಂದಲೇ ಕರೆಕ್ಷನ್ಸ್ ಸೂಚಿಸುತಿದ್ದರು. ನಾನು ಗುರುತು ಹಾಕಿಕೊಳ್ಳುತ್ತಿದ್ದೆ. ಸ್ನಾನ ಮುಗಿಸಿ ಹೊರಬಂದ ಭಟ್ಟರು ಬಟ್ಟೆ ಹಾಕಿಕೊಂಡು ನನ್ನನ್ನೂ ದಡದಡನೆ ಎಳೆದುಕೊಂಡು ಹೋಟೆಲಿನ ಹೊರಕ್ಕೆ ಬಂದಾಗ ನಟ ಗಣೇಶ್,ಕ್ಯಾಮೆರಾಮ್ಯಾನ್ ಕೃಷ್ಣ, ಮ್ಯಾನೇಜರ್ ಪ್ರತಾಪ್ ರಾವ್ ಮತ್ತಿತರರು ಚಳಿಗೆ ನಡುಗುತ್ತ ಕಾರಿನಲ್ಲಿ ಕುಳಿತಿದ್ದರು. … Read more