ಮಕ್ಕಳ ಹಕ್ಕುಗಳ ರಕ್ಶಣೆಯಲ್ಲಿ ಮಾಧ್ಯಮದ ಪಾತ್ರ: ಜ್ಯೋತಿ ಇರವರ್ತೂರು

ಇತ್ತೀಚೆಗೆ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡಿದ್ರೆ ಮಕ್ಕಳಿಗೂ ಹಕ್ಕುಗಳು ಇದೆಯಾ ಅನ್ನಿಸುತ್ತೆ. ತಮ್ಮವರಿಂದ, ಸಮಾಜದಿಂದ ಹೀಗೆ ತಮ್ಮ ಹಕ್ಕುಗಳೇನೆಂದು ಅರಿವು ಮೂಡುವ ಮುನ್ನ ಕನಸುಗಳ ಬಣ್ಣ ಕಳೆದುಕೊಳ್ಳುತ್ತಾರೆ ಈ ಚಿಣ್ಣರು. ಇಂತಹ ಸಂದರ್ಭದಲ್ಲಿ ಅರಿವು ಮೂಡಿಸಿ ಅವರ ಭವಿಷ್ಯ ದಾರಿ ಅರ್ಥಪೂರ್ಣವಾಗಿಸಲು ಮಾಧ್ಯಮದ ಪಾತ್ರ ಬಹಳ ದೊಡ್ಡದು.  ಶಾಲೆಯಲ್ಲಿ ಪುಟ್ಟ ಬೆನ್ನಿಗೆ ಬೆಟ್ಟದ ಹೊರೆ, ಬದುಕಿನ ಬಣ್ಣ ಕಳೆದುಕೊಂಡ ಬಾಲಕಾರ್ಮಿಕರು ;  ಕಾಫಿ ಕುಡಿಯಲೆಂದು ಹೋಟೇಲಿಗೆ ಹೋದಾಗ ಟೇಬಲ್ ಒರೆಸುವ ಪುಟ್ಟ ಕಂದನನ್ನು ನೋಡಿ ನಿಮ್ಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 37): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ವಿಶ್ವ ವಿಖ್ಯಾತ ವರ್ಣ ಚಿತ್ರಕಾರ ಮತ್ತು ಶಿಲ್ಪಿ ಪಾಬ್ಲೊ ಪಿಕಾಸೋ ಯಾವ ದೇಶದವರು? ೨.    ಕೃಷ್ಣರಾಜ ಸಾಗರದಲ್ಲಿರುವ ವಿಶ್ವೇಶ್ವರಯ್ಯ ನಾಲೆಗಿದ್ದ ಮೊದಲ ಹೆಸರು ಯಾವುದು? ೩.    ಸಾಮಾನ್ಯ ತಾಪದಲ್ಲಿ ದ್ರವ ಸ್ಥಿತಿಗೆ ಬರುವ ಲೋಹಗಳು ಯಾವುವು? ೪.    ಕರ್ನಾಟಕದಲ್ಲಿ ’ನೀರ್‌ಸಾಬ್’ ಎಂದು ಪ್ರಖ್ಯಾತರಾಗಿದ್ದ ವ್ಯಕ್ತಿ ಯಾರು? ೫.    ದೆಹಲಿಯ ಮೆಟ್ರೋ ರೈಲ್ವೆಯ ಶಿಲ್ಪಿ ಯಾರು? ೬.    ಇರಾನ್ ದೇಶಕ್ಕಿದ್ದ ಮೊದಲ ಹೆಸರು ಯಾವುದು? ೭.    ಅರಬ್ಬಿ ಸಮುದ್ರ ಸೇರುವ ಭಾರತದ ದೊಡ್ಡನದಿ ಯಾವುದು? ೮.   … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನನ್ನ ಮೊದಲ ಲೇಖನ: ಶ್ರೀನಿಧಿ ಜೋಯ್ಸ್

ನನ್ನ ಹೆಸರು ಶ್ರೀನಿಧಿ. ನಾನು ಹುಟ್ಟಿದು ಶಿವಮೊಗ್ಗದಲ್ಲಿ. ಬಾಲ್ಯ, ವಿದ್ಯಾಭ್ಯಾಸ ಎಲ್ಲಾ ಶಿವಮೊಗ್ಗಾದಲ್ಲೇ. ಇಂಜಿನಿಯರಿಂಗ್ ಪದವೀಧರ.  ಕಳೆದ 4 ವರ್ಷಗಳಿಂದ ಒಂದು ಸಾಫ್ಟ್ ವೇರ್ ಸಂಸ್ಥೆಯಲ್ಲಿ ಉದ್ಯೋಗ. ತಂದೆ ತಾಯಿ ಹಾಗೂ ಒಬ್ಬ ಅವಳಿ ಸಹೋದರನಿದ್ದು ಸದ್ಯಕ್ಕೆ ಅವಿವಾಹಿತ. ನನ್ನ ಮೊದಲ ಲೇಖನಕ್ಕೆ ಈ ಕಿರು ಪರಿಚಯ ಸಾಕು ಎಂದು ನನ್ನ ಅನಿಸಿಕೆ.    ಕನ್ನಡ ಬ್ಲಾಗ್ ಬರೆಯುವ ಚಾಳಿ ಶುರುವಾದದ್ದು ಒಂದು ಸಣ್ಣ ಕಥೆ.    ಆಗ ನಾನಿದದ್ದು ಚನ್ನೈನಲ್ಲಿ. ಸ್ನೇಹಿತರೊಂದಿಗಿದ್ದ ನನಗೆ ಮನೆಯಲ್ಲಿ ಕನ್ನಡ ಬಳಕೆ ಇತ್ತೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಇರುಳಲಿ ಕಂಡವಳು! (ದೆವ್ವದ ಕಥೆಗಳು – ಭಾಗ ೨): ಗುರುಪ್ರಸಾದ ಕುರ್ತಕೋಟಿ

ಬಿದರಕಾನ ಅನ್ನುವ ಮಲೆನಾಡಿನ ಸುಂದರ ಹಳ್ಳಿಗೆ, ನನ್ನ ಮಾವನ ಊರಾದ ಕಿಬ್ಬಳ್ಳಿಯಿಂದ ಒಂದು ಗಂಟೆಯ ದಾರಿ. ಕಿಲೋಮೀಟರುಗಳ ಲೆಕ್ಕದಲ್ಲಿ ಬರಿ ಹದಿನೈದು. ಆದರೆ ಬಳುಕುತ್ತ ಹರಿಯುವ ಮೋಹಕ ನದಿ ಅಘನಾಷಿನಿಯ ಪಕ್ಕಕ್ಕೆ ಚಾಚಿಕೊಂಡ ಏರಿಳಿತದ, ತಿರುವುಗಳಿಂದಲೇ ಭೂಷಿತವಾದ ಘಾಟ್ ರಸ್ತೆಯನ್ನು ಕ್ರಮಿಸುವುದಕ್ಕೆ ಒಂದು ಗಂಟೆ ಬೇಕು. ಆ ರಸ್ತೆಯಲ್ಲಿ ಕಾರು ಓಡಿಸುವುದೇ ಒಂದು ಖುಷಿ, ಎಷ್ಟೋ ಸಲ ಆ ಖುಷಿ ಓಡಿಸುವವರಿಗೆ ಮಾತ್ರ! ಯಾಕೆಂದರೆ ಹಿಂದೆ ಕುಳಿತವರು ರೋಡಿನ ತಿರುವಿಂಗ್ಸ್ ನಲ್ಲಿ ಹೊಟ್ಟೆ ತೊಳಸಿಕೊಳ್ಳುವವರಾಗಿದ್ದರೆ, 'ಗೊಳ್' ಅಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಈರಣ್ಣ ಮೆಸ್ ಎಂಬ ಹರಟೆ ತಾಣ: ಅಮರ್ ದೀಪ್ ಪಿ.ಎಸ್.

ಸುಮಾರು ಐವತ್ತರ ಆಸುಪಾಸಿನ ವಯಸ್ಸಿನ ವ್ಯಕ್ತಿ ಆತ.  ಹೆಸರು ವೀರಣ್ಣ ಅಂತ.  ಹೆಚ್ಚು ಮಾತನಾಡದ, ತೆಳ್ಳನೆ ಆಕೃತಿ.  ಮನೆಯಲ್ಲಿ ಹೆಂಡತಿ, ಮಕ್ಕಳು ಅಳಿಯ, ಚಿಳ್ಳೆ ಪಿಳ್ಳೆಗಳು. ಮನೆಯಲ್ಲಿ ಆಡು ಭಾಷೆ ತೆಲುಗು. ಬಂದವರೊಂದಿಗೆ ತೆಲುಗು, ಕನ್ನಡ, ಹಿಂದಿ ಮಾತನಾಡುವುದು ಸರಾಗ.  ದೊಡ್ಡ ಮಗಳ ಹೆಸರು ಅರುಣಾ ಅಂತ.  ಅಳಿಯ ಸೀನ.  ಅವನು ಆಂಧ್ರದ ಯಾವುದೋ  ಊರಲ್ಲಿ ಫೈನಾನ್ಸ್ ಮಾಡುತ್ತಿದ್ದನಂತೆ.  ಅದು ಬಿಟ್ಟು ಮದುವೆ ನಂತರ ಇಲ್ಲೇ ಬಳ್ಳಾರಿಯಲ್ಲಿ ಮಾವನ ಮನೆಯಲ್ಲಿ ಬಂದು ನೆಲೆಸಿದ್ದ.  ದುರುಗಮ್ಮ ಗುಡಿ ಹತ್ತಿರದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಜೆಸ್ಟಿಕ್ಕಿನಲ್ಲೊಂದು ರಾತ್ರಿ: ಹೃದಯಶಿವ

  ಮೆಜೆಸ್ಟಿಕ್ ಬಸ್ ಸ್ಟಾಂಡಿನ ನಿದ್ರಾಹೀನ ರಾತ್ರಿ. ಶ್ರೀಮಂತ ಬೆಂಗಳೂರಿನಲ್ಲೇ ಇಷ್ಟು ಚಳಿ ಇರಬೇಕಾದರೆ ನನ್ನ ಹಳ್ಳಿ ಬೆಚ್ಚಗಿರುತ್ತದೆ. ಹೌದು, ಬೆಚ್ಚಗಿರುತ್ತದೆ: ನನ್ನ ಹಳ್ಳಿ ಈ ಹೊತ್ತಿನಲ್ಲಿ ಕಂಬಳಿಯೊಳಗೆ ಮುದುಡಿರುತ್ತದೆ. ತೊಟ್ಟಿಲ ಮಕ್ಕಳ ತಲೆಗೆ ಕುಲಾವಿ ಇದ್ದರೆ, ಮುದುಕರು ಕಿವಿಗೆ ಬಿಗಿಯಾಗಿ ವಲ್ಲಿಬಟ್ಟೆಯನ್ನೋ, ಮಫ್ಲರನ್ನೋ ಸುತ್ತಿಕೊಂಡು ಗೊರಕೆ ಹೊಡೆಯುತ್ತಿರುತ್ತಾರೆ. ತನಗೆ ಮತ್ತಷ್ಟು ಕಾವು ಕೊಟ್ಟುಕೊಳ್ಳಲು ಬಯಸುವ ರಸಿಕ ದಿಂಬು ಹಂಚಿಕೊಂಡು ಮಲಗಿದ್ದ ತನ್ನಾಕೆಯ ಕಿವಿಯಲ್ಲಿ ಮೆಲ್ಲಗೆ ಉಸುರುತ್ತಾನೆ : "ಲೇ ಇವಳೇ, ನಿನ್ನ ಕೆನ್ನೆಗೆ ಕೆನ್ನೆಯೊತ್ತಿ ಗಟ್ಟಿಯಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಲಭೆ: ವಾಸುಕಿ ರಾಘವನ್

ಕಳೆದೆರಡು ದಿನಗಳಿಂದ ನಾರಾಯಣ ತಂತ್ರಿಯವರಿಗೆ ಆ ಊರಿನ ರೈಲ್ವೆ ಸ್ಟೇಷನ್ನಿಂದ ಹೊರಬರಲಾಗಿರಲಿಲ್ಲ. ಊರಿಗೆ ಬರುವ ಮತ್ತು ಅಲ್ಲಿಂದ ಹೊರಡುವ ರೈಲುಗಳೆಲ್ಲಾ ರದ್ದಾಗಿದ್ದವು. ಊರಿನಲ್ಲಿನ್ನೂ ಗಲಭೆ ನಿಯಂತ್ರಣಕ್ಕೆ ಬಂದಿರಲಿಲ್ಲ. ಫೋನ್ ಸರ್ವೀಸುಗಳೂ ಬಂದ್ ಆಗಿದ್ದರಿಂದ ತಮ್ಮ ಮನೆಯವರಿಗೆ ತಾವಿಲ್ಲಿ ಇರುವ ವಿಷಯ ತಿಳಿಸಲು ಆಗಿರಲಿಲ್ಲ. ಹೊರಗಡೆ ಕರ್ಫ್ಯೂ ವಿಧಿಸಲಾಗಿತ್ತು. ತುಂಬಾ ಸುಸ್ತಾಗಿದ್ದರೂ, ತಂತ್ರಿ ಹತಾಶರಾಗಿ ಪ್ಲಾಟ್ಫಾರ್ಮಿನ ಆ ಕಡೆಯಿಂದ ಈ ಕಡೆಗೆ ಓಡಾಡುತ್ತಿದ್ದರು. ತಮ್ಮ ಮಗಳಿಗೆ ಒಳ್ಳೆ ಸಂಬಂಧ ಹುಡುಕಿಕೊಂಡು ಈ ಊರಿಗೆ, ಅದೂ ಈ ಹೊತ್ತಿನಲ್ಲಿ ಬಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವಿತೆಗಳು: ಸಂಗೀತ ರವಿರಾಜ್, ಗಣೇಶ್ ಖರೆ, ಸಿದ್ಧಲಿಂಗಸ್ವಾಮಿ ಎಚ್ ಇ

ನಾನು ಕೊಳಲಾಗಿ ಪ್ರೀತಿಸಲೇ…? ಕೊಳಲಿನವಗಾಹನೆಗೆ ಜೀವ ತೆತ್ತ ರಾಧೆ ಗಾಳಿಯಲ್ಲು ಲೀನವಾದ ಸ್ವರ ಸನ್ನಿಹಿತ ಎಷ್ಟೊಂದು ಪ್ರೀತಿಗಳು! ಮುಡಿಯಲ್ಲಿ, ಹೆಬ್ಬೆರಳ ತುದಿಯಲ್ಲು……………! ನಾಚಿ ನಿಂತ ನೀರೆಗೆ ನಿರ್ಮಲ ನಿರ್ಬಂಧನೆ ಪಂಚಾಕ್ಷರಿ, ಸುಪ್ರಭಾತ ಸ್ವರ ತೆತ್ತ ಮಾಧವ ಕೊಳಲ ಗೋಪುರ ನಿನಾದ ಮುಗಿಲು ಮುಟ್ಟಿತು ಪ್ರೀತಿಗಾಗಿ ಪ್ರೀತಿಸಿದ ತೆಕ್ಕೆಗೆ ನ್ಯಾಯ ತೆತ್ತ ಮುತ್ತಿನ ಪೀಠ ತೇದ ಗಂಧದಂದದಿ ನಿಷ್ಠೆ ಹೊತ್ತ ರಾಧೆ ರಾಗ ತೆತ್ತ ದಿಟ ಸಂದೇಶ ಸುತ್ತ ಸುಳಿವ ಮಾಯೆಯಲ್ಲು ಕಣ್ಣ ಕಾಣ್ಕೆಯ ನೀಲಿ ನೋಟ ಕಣ್ಣಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರೀಮೇಕ್ ಸಿನಿಮಾಗೆ ಪ್ರತ್ಯೇಕವಾಗಿ ರಾಜ್ಯ ಸರ್ಕಾರಿ ಅವಾರ್ಡ್ ಗಳು: ಮುಕುಂದ್ ಎಸ್.

ಬೃಂದಾ(ನ್ಯೂಸ್ ನಿರೂಪಕಿ):  ಕನ್ನಡ ಚಿತ್ರರಂಗದ ಉದ್ಧಾರಕ್ಕಾಗಿ  ನಮ್ಮ ಸರ್ಕಾರಕ್ಕೂ  ಚಿತ್ರರಂಗದವರಿಗೂ  ನಡೆದ  ಚರ್ಚೆ  ಸಫಲವಾಗಿದೆ. ಚಲನ ಚಿತ್ರ ವಾಣಿಜ್ಯ ಮಂಡಲಿ ಅಧ್ಯಕ್ಷರು ಗೋವಿಂದೋ ಗೋವಿಂದರವರು ಇದು ಚಿತ್ರೋದ್ಯಮದ ಹೊಸ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ರೀಮೇಕ್ ಸಿನಿಮಾಗೆ ಪ್ರತ್ಯೇಕವಾಗಿ ರಾಜ್ಯ ಸರ್ಕಾರಿ ಅವಾರ್ಡ್ ಗಳು ಘೋಷಣೆಯಾಗಿದೆ ! ನಮ್ಮ ವರದಿಗಾರ ಸತ್ಯನಾಥ ಇದರ ಬಗ್ಗೆ ಹೇಳ್ತಾರೆ. ಹೇಳಿ ಸತ್ಯನಾಥ! ಸತ್ಯನಾಥ !  (ಸಿಟ್ಟಲ್ಲಿ)  : ರೀ ಸತ್ಯನಾಥ!  ಸತ್ಯನಾಥ ಬರುತ್ತಾನೆ!  ಬೃಂದಾ(ನ್ಯೂಸ್ ನಿರೂಪಕಿ): ಎಲ್ಲಿ ಹಾಳಾಗಿ ಹೋಗಿದ್ದ್ರೀ.. ಥೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮರಗಳ್ಳರೇ! ವನ್ಯ ಹಂತಕರೇ – ಇದೋ ನಾವು ಕೇಳಿಸಿಕೊಳ್ಳುತ್ತಿದ್ದೇವೆ!! ಎಚ್ಚರ!!!: ಅಖಿಲೇಶ್ ಚಿಪ್ಪಳಿ

ಜುಲೈ ೫ ೨೦೧೪ ಶನಿವಾರದಂದು ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ. ಉದಯೋನ್ಮುಖ ಕವಿ ರಚಿಸಿದ ಪರಿಸರ ಜಾಗೃತಿ ಕುರಿತಾದ ನಾಟಕ ಸಂಜೆ ೭ ಗಂಟೆಗೆ ಶುರುವಾಗಬೇಕಿತ್ತು. ಕಾರಣಾಂತರಗಳಿಂದಾಗಿ ರಾತ್ರಿ ೯.೩೦ಕ್ಕೆ ಶುರುವಾಯಿತು. ಮುಕ್ಕಾಲು ತಾಸಿನ ಮಕ್ಕಳು ಅಭಿನಯಿಸಿದ ಸುಂದರ ನಾಟಕ ಮುಗಿಸಿ ಮನೆಗೆ ಹೋಗಿ ಊಟ ಮಾಡಿ ಮಲಗುವಾಗ ಹನ್ನೊಂದು ಘಂಟೆಯ ಮೇಲಾಗಿತ್ತು. ಮೆಸ್ಕಾಂನವರು ಹಠ ತೊಟ್ಟು ವಿದ್ಯುತ್ ನಿಲುಗಡೆ ಮಾಡಿ ಮಲಗಿದ್ದರು. ಮಲಗಿದವನಿಗೆ ಕಣ್ಣು ಹತ್ತುತ್ತಿತ್ತು. ಡಂ! ಎಂಬ ಶಬ್ಧವಾಯಿತು. ಮಗ ಎದ್ದು ಬಂದ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಿಂಚುಳ: ಪ್ರಜ್ವಲ್ ಕುಮಾರ್

  ನವೀನ್ ಸಾಗರ್ ಅವ್ರು ಬರ್ದಿರೋ 'ಣವಿಣ – ಅಂಗಾಲಲ್ಲಿ ಗುಳುಗುಳು' ಓದ್ತಾ ಇದ್ದೆ. ಅದ್ರಲ್ಲಿರೋ ರೇಷ್ಮೆ ಹುಳದ ಕಥೆ ಅಥವಾ ಘಟನೆ ಓದಿ ನಂ ಮಿಂಚುಳದ ಘಟನೆ ನೆನಪಾಯ್ತು! 'ಸಿಲ್ಲಿ-ಲಲ್ಲಿ' ಸೀರಿಯಲ್ಲಿನ ಡೈಲಾಗ್ ನೆನಪಿಸಿಕೊಂಡು 'ಜೇಡ ಕಟ್ಟಿರೋ ಮೂಲೆ ನೋಡ್ದೆ'. ನಾನವಾಗ ಎರಡೋ, ಮೂರೋ, ನಾಲ್ಕನೇದೋ ಕ್ಲಾಸು. ಒಟ್ನಲ್ಲಿ ಹಾಕ್ಕೊಳೋ ಚಡ್ಡಿ ಎಲಾಸ್ಟಿಕ್ಕಿಂದೇ ಆಗ್ಲಿ, ಗುಂಡೀದೇ ಆಗ್ಲಿ; ಜೇಬು ಮಾತ್ರ ಇರ್ಲೇ ಬೇಕು ಅಂತ ಹಟ ಮಾಡ್ತಿದ್ದ ವಯಸ್ಸು. ನಮ್ದು ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಲ್ಲಿರೋ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆಂಗ್ಳೂರ ಮಳೆ: ಪ್ರಶಸ್ತಿ ಪಿ.

ಬೆಂಗ್ಳೂರಲ್ಲಿ ಭಾರೀ ಮಳೆ ಅಂತ ಟೀವಿನಲ್ಲಿ ಬೆಳಗ್ಗಿಂದ ತೋರಿಸ್ತಿದ್ದದ್ನ ನೋಡಿ ಅಮ್ಮ ಗಾಬ್ರಿಯಾಗಿ ಫೋನ್ ಮಾಡಿದ್ರು. ಅಯ್ಯೋ ಅಮ್ಮಾ , ನಿಂಗೆ ಮಾಡಕ್ಕೆ ಬೇರೆ ಕೆಲ್ಸ ಇಲ್ಲ. ಯಾವ್ದೋ ಏರಿಯಾದಲ್ಲಿ ಮಳೆ ಬಂತು ಅಂದ್ರೆ ಇಡೀ ಬೆಂಗ್ಳೂರೇ ಮುಳುಗಿ ಹೋಯ್ತು ಅಂತ ತೋರಿಸ್ತಾರೆ ಈ ಟೀವಿಯವ್ರು. ಅವ್ರಿಗೆ ಒಂದೋ ತೋರ್ಸಕ್ಕೆ ಬೇರೆ ಸುದ್ದಿ ಇಲ್ಲ. ಮಾಡಕ್ಕೆ ಬೇರೆ ಕೆಲ್ಸ ಇಲ್ಲ ಅಂದ ಮಗ. ಮಗನ ಮಾತು ಕೇಳಿ ತಾಯಿಗೆ ಎಷ್ಟೋ ಸಮಾಧಾನವಾದ್ರೂ ಸೊಂಟ ಮಟ್ಟ ನೀರಲ್ಲಿ ನಿಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಂಗೊಂದಿಷ್ಟು ಸಮಯ ಬೇಕೇ ಬೇಕು: ಪದ್ಮಾ ಭಟ್

          ಪ್ರೀತಿಯ ದಡ್ಡ  ಒಂದೊಂದು ಬಾರಿ ನಿನ್ನ ಬಗ್ಗೆ ಯೋಚಿಸುತ್ತಿರುವಾಗ ನಾನ್ಯಾರೆಂಬುದನ್ನೇ ಮರೆತುಬಿಡುತ್ತೇನೆ..ನನ್ನ ಹೃದಯದ ಗೂಡಿನಲಿ ಆವರಿಸಿರುವ ಪ್ರೀತಿಯು ನೀನು..ನನ್ನ ಬಗೆಗೆ ಯೋಚಿಸುವುದನ್ನೇ ಮರೆತು ಬಿಟ್ಟಿರುವ ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತಿರಬಹುದು ಎಂದು ನಿನಗೂ ಗೊತ್ತಲ್ವಾ?ಅದೆಷ್ಟೋ ಸಾವಿರ ಕನಸು ನಂಗೆ. ನಿನ್ನ ಬಗೆಗೆ.. ಪ್ರತೀ ಬಾರಿಯೂ ನಿನ್ನ ಜೊತೆ ಮಾತನಾಡುವಾಗಲೂ ಇನ್ನೂ ಏನೋ ಹೇಳಬೇಕು. ಕೇಳಬೇಕು. ಭಾವನೆಯ ಹಂಚಿಕೊಳ್ಳಬೇಕೆನ್ನಿಸುವುದುಂಟು. ಹಠಮಾರಿ ಹುಡುಗಿ ನಾನು.. ನನ್ನೀ ಜೀವನದ ಪ್ರತೀ ಕ್ಷಣವೂ ನಿನ್ನನ್ನೇ ಪ್ರೀತಿಸುತ್ತಾ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 36): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು  ೧.    ಬಾಹ್ಯಾಕಾಶದಲ್ಲಿ ಪ್ರಥಮ ಬಾರಿ ಆಡಲಾದ ಕ್ರೀಡೆ ಯಾವುದು? ೨.    ಸಿತಾರ್‌ನ್ನು ಕಂಡು ಹಿಡಿದ ಕೀರ್ತಿ ಯಾರದು? ೩.    ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಯಾರು? ೪.    ತಂಬಾಕಿನಲ್ಲಿರುವ ವಿಷ ಪದಾರ್ಥ ಯಾವುದು? ೫.    ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ ಎಲ್ಲಿದೆ? ೬.    ಮೊದಲ ಪಾಣಿಪತ್ ಕದನ ನಡೆದ ವರ್ಷ ಯಾವುದು? ೭.    ಹ್ಯಾಲಿ ಧೂಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ? ೮.    ಅಹಂ ಬ್ರಹ್ಮಾಸ್ಮಿ ಎಂದು ಪ್ರತಿಪಾದಿಸಿದವರು ಯಾರು? ೯.    ಎಂ.ಎಸ್.ಸುಬ್ಬಲಕ್ಷ್ಮಿಯವರಿಗಿದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕರ್ಮ ಕಾದಂಬರಿ ವಿಮರ್ಶೆ: ಗಣೇಶ್ ಖರೆ, ಪ್ರಶಾಂತ್ ಭಟ್

ಮೊದಲಿನಿಂದಲೂ ನಾನು ಓದಿದ್ದು ಕಡಿಮೆಯೇ… ಅದರಲ್ಲೂ ಪುಣೆಗೆ ಬಂದಮೇಲೆ ಮುಗಿಯಿತು, ಇಲ್ಲಿ ಕನ್ನಡ ಪುಸ್ತಕವೂ ದೊರೆಯುವುದಿಲ್ಲ. ಆದರೆ ಇತ್ತೀಚೆಗೆ ಓದುವ ಹವ್ಯಾಸ ಬೆಳೆದಿದೆ. ಹಾಗಾಗಿ ಊರಿಗೆ ಹೋದಾಗೆಲ್ಲ ಬರುವಾಗ ಒಂದಿಷ್ಟು ಕಾದಂಬರಿಗಳನ್ನ ತಂದಿರುತ್ತೇನೆ. ಅವರಿವರಲ್ಲಿ ಕೇಳಿ ಯಾವ ಕಾದಂಬರಿಗಳು ಚೆನ್ನಾಗಿವೆ ಅಂತ ಖರೀದಿಸುವುದು ನನ್ನ ವಾಡಿಕೆ. ಮೊನ್ನೆ ಹೀಗೆ ಫೇಸ್ ಬುಕ್ ಲ್ಲಿ ಗೆಳತಿಯೊಬ್ಬಳು "ಕರಣಂ ಪವನ್ ಪ್ರಸಾದ್" ಬರೆದಿರುವ "ಕರ್ಮ" ಕಾದಂಬರಿ ತುಂಬಾ ಚೆನ್ನಾಗಿದೆ, ಓದಲೇಬೇಕಾದ ಪುಸ್ತಕ ಅಂದಾಗ ಇವರು ಯಾವ ಲೇಖಕರು ಇವರ ಹೆಸರನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೋವೊಂದು ಬಳಿ ಬಂದು .. : ಅನಿತಾ ನರೇಶ್ ಮಂಚಿ

ದೊಡ್ಡಪ್ಪನ ಮನೆಯೊಳಗೆ ಕರ್ಫ್ಯೂ ವಿಧಿಸಿದಂತಿದ್ದ ವಾತಾವರಣ. ದೊಡ್ಡಮ್ಮ ಮತ್ತು ಅತ್ತಿಗೆಯರ ಸಂಭಾಷಣೆಯೆಲ್ಲಾ ಸನ್ನೆಯಲ್ಲೇ ಸಾಗುತ್ತಿತ್ತೇ ವಿನಃ ಸ್ವರ ಹೊರ ಬರುತ್ತಿರಲಿಲ್ಲ. ಅಣ್ಣಂದಿರು ಅಲ್ಲಲ್ಲಿ ತಮ್ಮ ಕೆಲಸದಲ್ಲಿ ತೊಡಗಿದಂತೆ ಕಂಡರೂ   ಅವರ ಗಮನವೆಲ್ಲಾ ಈಸೀಚೇರಿನಲ್ಲಿ ಕುಳಿತ ದೊಡ್ಡಪ್ಪನ ಕಡೆಯೇ ಇತ್ತು. ಅವರೊ ಇತ್ತಲಿನ ಪರಿವೆಯಿಲ್ಲದೆ  ಕೈಯನ್ನು ಮೇಲೆತ್ತಲು ಪ್ರಯತ್ನಿಸುತ್ತಾ ಎತ್ತಲಾಗದೇ ಕೆಳಗೆ ಹಾಕುವುದು ಮಾಡುತ್ತ ಕುಳಿತಿದ್ದರು. ಕಣ್ಣಿನಲ್ಲಿ ಶೂನ್ಯ ಭಾವ.  ಮನೆಯೆಲ್ಲಾ ಮೌನದಲ್ಲಿ ಮುಳುಗಿ ಯಾವುದೋ ಶೋಕವನ್ನು ನಿರೀಕ್ಷಿಸುವಂತೆ ಇತ್ತು. ನನ್ನ ಆಗಮನ ಎಲ್ಲರ ಮೊಗದಲ್ಲೂ ನಗೆರೇಖೆಯನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಂತರ್ಜಾಲದ ಖೆಡ್ಡಾಗಳು ಮತ್ತು ಕಾಟಕೊಡೋ ಕುಕ್ಕಿಗಳು: ಪ್ರಶಸ್ತಿ. ಪಿ.

ದಿನ ಬೆಳಗಾದಾಗ ಮುಖ ತೊಳೆಯೋ ಮುನ್ನವೇ ವಾಟ್ಸಾಪು ಮೆಸೇಜು ನೋಡ್ಲಿಲ್ಲ ಅಂದ್ರೆ ರಾತ್ರೆಯೊಳಗೆ ಒಮ್ಮೆಯೂ ಫೇಸ್ಬುಕ್ಕು ಹೊಕ್ಕಿಲ್ಲ ಅಂದ್ರೆ ನಮ್ಮ ಆ ದಿನವೇ  ಅಪೂರ್ಣವಾದ ಭಾವ !. ಈ ಅಂತರ್ಜಾಲದಲ್ಲಿ ನಾವು ಎಷ್ಟು ಮುಳುಗಿ ಹೋಗಿದ್ದೇವೆ ಅಂದ್ರೆ ಕಾಲ್ಪನಿಕ ಜಗತ್ತೇ ಸರ್ವಸ್ವವೂ ಆಗಿ ಇಲ್ಲೇ ಕೃಷಿ ಮಾಡೋದ್ರಿಂದ(farm villa), ಓಡೋವರೆಗೆ(temple run) ನಿಜಜೀವನದ ಎಲ್ಲವನ್ನೂ ಅನುಕರಿಸೋ ತಂತ್ರಾಂಶಗಳನ್ನು ಬರೆದು ಅವುಗಳಲ್ಲೇ ಮುಳುಗಿ ಹೋಗಿ ಒಂಥರಾ ಕಾಲ್ಪನಿಕ ಜಗತ್ತಲ್ಲೇ ಕಳೆದುಹೋಗಿದ್ದೇವೆ. ಒಂದು ವಾರ ಫೇಸ್ಬುಕ್ಕಲ್ಲಿ ದಿನಾ ರಾತ್ರಿ ಹರಟಿದವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ