ಗಾಂಧಿ @ ಕೂರ್ಮಾವತಾರ:ಮಹಾದೇವ ಹಡಪದ
ಸಾಹಿತ್ಯದ ಜೊತೆಗಿನ ಸಿನೆಮಾ ನಂಟು ಬಹಳ ಹಳೆಯದು. ಸಿನೆಮಾ ಅಂದ್ರೆ ಪ್ರಾಯೋಗಿಕವಾಗಿ ನಿರ್ದೇಶಕನೇ ಕುಂತು ಕತೆಗಾರನೊಂದಿಗೆ ಕತೆ ಕಟ್ಟುತ್ತ ಹೋಗುತ್ತಾನೆ. ಆದರೆ ಸಾಹಿತ್ಯಿಕ ಕಥಾವಸ್ತುವೊಂದನ್ನು ಆಯ್ದುಕೊಂಡು ಅದನ್ನು ಚಿತ್ರದ ವಿನ್ಯಾಸದಲ್ಲಿ ಅಳವಡಿಸುವುದು ಗಿರೀಶ ಕಾಸರವಳ್ಳಿಯವರ ವಿಶೇಷ ವ್ಯಾಕರಣವಾಗಿದೆ. ಘಟಶ್ರಾದ್ಧದಿಂದ ಕೂರ್ಮಾವತಾರದ ವರೆಗಿನ ಪಯಣದಲ್ಲಿ ಅವರು ಕತೆಯ ಆಯ್ಕೆಯಲ್ಲಿ ವಿಶೇಷವಾದ ಆಸಕ್ತಿ ತೋರಿಸಿದ್ದಾರೆ. ಕನ್ನಡದ ಪ್ರಸಿದ್ಧ ಕತೆಗಾರರಾದ ಕುಂವೀ ಅವರ ಸಣ್ಣ ಕತೆಯಾಧಾರಿತ ಕೂರ್ಮಾವತಾರ ಸಿನೆಮಾವನ್ನು ಕನ್ನಡದ ಪ್ರಸಿದ್ಧ ಚಿತ್ರನಿರ್ದೇಶಕರಾದ ಕಾಸರವಳ್ಳಿಯವರು ನಿರ್ದೇಶಿಸಿದ್ದಾರೆ. ಮೊದಲ ದೃಶ್ಯದಲ್ಲಿಯೇ ಗಾಂಧಿ ಸಾವು … Read more