ಪಂಜು ಚುಟುಕ ಸ್ಪರ್ಧೆ: ರಘು ನಿಡುವಳ್ಳಿ ಅವರ ಚುಟುಕಗಳು
1 ಸಮಾನತೆ ಭೋರ್ಗರೆವ ಶರಧಿ ಅದರ ಸೆರಗಲ್ಲೆ ಮಹಾಮೌನಿ 'ಹಿನ್ನೀರು' ದಿಗ್ಗನೆ ಬೆಳಗುವ ದೀಪ ಅದರ ಬದಿಯಲ್ಲೆ ದಿವ್ಯಧ್ಯಾನಿ 'ಕತ್ತಲು ಸೃಷ್ಟಿಗಿಲ್ಲ ಅದರ ದೃಷ್ಟಿಗಿಲ್ಲ ಭೇಧ ಬಿನ್ನ ಪಕ್ಷಪಾತ ಹುಟ್ಟು ಸಾವು ನೋವು ನಲಿವು ಎಲ್ಲ ನಮ್ಮ ನಿಮ್ಮ ವರಾತ! 2 ಚೋದ್ಯ ಕತ್ತಲೆಗೆ ಗೊತ್ತಿರುವ.. ಗುಟ್ಟು.. ಬೆಳಕಿನ ಪಾಲಿಗೆ ಅಪರಿಚಿತ ಹಣತೆ ಕಂಡಿರೋ ಸತ್ಯ.. ಕತ್ತಲಪಾಲಿಗೆ ಅದೃಶ್ಯ .. ಇದು ಸೃಷ್ಟಿಯ..ಚೋದ್ಯ 3 ಅಪೂರ್ಣ ಒರಟು ವಜ್ರಕ್ಕೆ..ಹೊಳಪು ಕೊಟ್ಟ.. ಸುವಾಸನೆ ಕೊಡಲಿಲ್ಲ.. ಮೃದುಲ..ಮಲ್ಲಿಗೆಯಲಿ.. … Read more