ಹೀಗೊಂದು ವಾರ್ತಾಲಾಪ..: ಅನಿತಾ ನರೇಶ್ ಮಂಚಿ

ಕೊಕ್ಕೋ ಹಣ್ಣಿನ್ನು ಒಡೆದು ಬೀಜ ಬೇರ್ಪಡಿಸುವ ಕೆಲಸ ಶುರುವಾಗಿತ್ತು. ನಾನೂ ಹೋಗಿ ಸೇರಿಕೊಂಡೆ. ಇವರು ಹಣ್ಣುಗಳನ್ನು ಒಡೆದು ರಾಶಿ ಹಾಕಿದರೆ ನಾನು, ಮಾವ, ಮತ್ತು ನಮ್ಮ ತೋಟದ ಸಹಾಯಕರಾದ ವಿನ್ಸಿ, ಸುಬ್ಬಪ್ಪ, ಇಸುಬು ಎಲ್ಲರೂ ಸೇರಿ ಒಳಗಿನ ಬೀಜ ಬೇರ್ಪಡಿಸಿ ದೊಡ್ಡ ಕಟಾರ ( ಹಿಡಿ ಇರುವ ದೊಡ್ಡದಾದ ಪಾತ್ರೆ) ಕ್ಕೆ ತುಂಬುತ್ತಿದ್ದೆವು. ಸಮಯ ಬೇಡುವಂತಹ ಕೆಲಸ ಇದಾದ ಕಾರಣ ಹೊತ್ತು ಹೋಗಲು ಏನಾದರೊಂದು ಟಾಪಿಕ್ ಇದ್ದೇ ಇರುತ್ತಿತ್ತು.  ‘ ಮೊನ್ನೆ ಲಾರೆನ್ಸ್ ಬೈಕಿನಲ್ಲಿ ಹೋಗ್ತಾ ಇದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಂತರ್ಜಾಲದಲ್ಲಿ ದೈತ್ಯ ಕಂಪನಿಗಳು ಮತ್ತು ಬಳಕೆದಾರರ ನಡುವೆ ಸಂಘರ್ಷ: ಜೈಕುಮಾರ್.ಹೆಚ್.ಎಸ್

'ಜಾಲದಲ್ಲಿ ಸಮಾನತೆ'ಗಾಗಿ ನಡೆಸುವ ಹೋರಾಟವು ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುವ ಯುದ್ದಗಳಲ್ಲೇ ಪ್ರಮುಖವಾದದ್ದು. – ರಾಬರ್ಟ್ ಮ್ಯಾಚೆಸ್ನಿ, ಅಮೇರಿಕಾದ ಪ್ರಸಿದ್ದ ಮಾಧ್ಯಮ ಚಿಂತಕ ಜಾಲದಲ್ಲಿ ಸಮಾನತೆ ಕುರಿತು ಚರ್ಚಿಸುವ ಮುನ್ನ ಒಂದೆರಡು ಸರಳ ಉದಾಹರಣೆಗಳ ಮೂಲಕ ಅದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸೋಣ.  …ದೀರ್ಘ ಪ್ರಯಾಣ ನಡೆಸುವ ವೇಳೆ ಬಹುತೇಕ ಎಲ್ಲ ಬಸ್ಸುಗಳು ಈಗಾಗಲೇ ನಿಗಧಿಮಾಡಿಕೊಂಡಿರುವ ಹೋಟೆಲ್ ಗಳ ಬಳಿಯೇ ನಿಲ್ಲಿಸುತ್ತವೆ. ಅವುಗಳ ನಡುವೆ ಮೊದಲೇ ಕೊಡುಕೊಳುವಿಕೆಯ ಒಪ್ಪಂದವಾಗಿರುತ್ತದೆ. ಆ ಹೋಟೆಲ್ ಗಳು ಪ್ರಯಾಣಿಕರಿಗೆ ಇಷ್ಟವಿದೆಯೋ ಇಲ್ಲವೋ, ಅವುಗಳ ಗುಣಮಟ್ಟ ಚೆನ್ನಾಗಿದೆಯೋ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಣ್ಣೀರು ಜಾರಿದ ಆ ಕ್ಷಣ…..: ಚೈತ್ರಾ ಎಸ್.ಪಿ.

ಅವತ್ತಿನ ದಿನಾಂಕ ನೆನಪಿಲ್ಲ. ನೆನಪಿಟ್ಕೊಬೇಕು ಅಂತ ಯಾವತ್ತು ಅನಿಸಿಲ್ಲ. ಆದರೆ ಈಗದರ ಅವಶ್ಯಕತೆ ಇತ್ತು ಅಂತ ಅನಿಸ್ತಾ ಇದೆ. ಯಾಕಂದ್ರೆ ಹೀಗೊಂದು ಘಟನೆಯ ಬಗ್ಗೆ ಬರೀತೀನಿ ಅಂತ ನನ್ಯಾವತ್ತು ಅಂದ್ಕೊಂಡಿರ್ಲಿಲ್ಲ. ಆದರೆ ಬರೀಬೇಕು ಅಂತ ತುಂಬಾ ಅನ್ನಿಸಿ ಬಿಡ್ತು….. ಯಾಕಿಷ್ಟು ಪೀಠಿಕೆ ಅಂತ ಯೋಚ್ನೆ ಮಾಡ್ತ ಇದ್ದೀರ ?? ತುಂಬಾ ಉದ್ದ ಎಳೀದೆ ಆರಂಭಿಸ್ತೀನಿ….. ನಮ್ಮನೇಲೊಬ್ಬ ಪುಟ್ಟ ಪಾರ್ಥ. ಹೊಟ್ಟೆಯೊಳಗಿದ್ದಾಗಿನಿಂದ್ಲೇ ನಮಗೆ ಸಂಭ್ರಮ ನೀಡ್ತ ಇದ್ದ ಪೋರ. ಹತ್ತು-ಹದಿನೈದು ವರ್ಷಗಳ ನಂತರ ಮಗುವಿನ ಅಳು-ಕೇಕೆ, ಪುಟ್ಟ-ಪುಟ್ಟ ಕಾಲ್ಗಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪರದೆ ಮೆ ರೆಹೆನೆ ದೋ: ಅಮರ್ ದೀಪ್ ಪಿ.ಎಸ್.

ಕಣ್ ಕಣ್ಣ ಸಲಿಗೆ….  ಸಲಿಗೆ ಅಲ್ಲ ಸುಲಿಗೆ…..  ನೀನಿನ್ನು ನನಗೆ ನನಗೆ…………….. ನನ್ನನಗೇ……….. ಆರು ತಿಂಗಳಿಂದ  ಹೀಗೇ ಬಿಡದೇ ಕಾಡುತ್ತಿದ್ದಾಳೆ. ಅದ್ಯಾಕೆ ನಾನು ಇವಳ ಹಿಂದೆ ಬಿದ್ದೆನೋ ಏನೋ.  ಇವಳ ಸಲುಗೆ, ಸರಸ ಅತಿಯಾಗಿದೆ.   ಇವಳೇ ಮೊದಲೇನಲ್ಲ.  ಸರಿಸುಮಾರು ಒಂಭತ್ತು ವರ್ಷಗಳಿಂದ  ಇಂಥವಳ ಹಲವರ ಸಹವಾಸಕ್ಕೆ ಬಿದ್ದು ನಾನು ನಾನಾಗಿ ಉಳಿದಿಲ್ಲ.  ಆದರೆ, ನಾನು ಈ ಹಿಂದೆ ಬೆನ್ನು ಬಿದ್ದ ಯಾರೂ ಈ ಮಟ್ಟದಲ್ಲಿ ಕಾಡಿದ್ದಿಲ್ಲ.  ನನ್ನ ದುರಾದೃಷ್ಟ ನೋಡಿ ಇಂಥ ರತಿಯರೊಂದಿಗೆ “ಸರಸ” ಸಲ್ಲಾಪವಾಡತೊಡಗಿದ್ದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಇವನು ಬದುಕಲೇ ಬೇಕು: ಜೆ.ವಿ.ಕಾರ್ಲೊ, ಹಾಸನ.

ಇಂಗ್ಲಿಷಿನಲ್ಲಿ: ರೊಆಲ್ಡ್ ದಾಹ್ಲ್ ಕನ್ನಡಕ್ಕೆ: ಜೆ.ವಿ.ಕಾರ್ಲೊ, ಹಾಸನ. ‘ಚಿಂತೆ ಮಾಡುವ ಅವಶ್ಯಕತೆಯೇ ಇಲ್ಲ. ಎಲ್ಲಾ ಸರಿಯಾಗಿದೆ.’ ವೈದ್ಯರು ಹೇಳುತ್ತಿದ್ದರು.. ಅವಳಿಗೆ ವೈದ್ಯರ ಸ್ವರ ಗಟ್ಟಿಯಾಗಿ, ಬಹಳ ದೂರದಿಂದೆಂಬಂತೆ ಕೂಗಿ ಹೇಳಿದಂತೆ ಭಾಸವಾಯಿತು. ‘ನಿನಗೆ ಗಂಡು ಮಗು ಹುಟ್ಟಿದ್ದಾನೆ!’ ವೈದ್ಯರು ಹೇಳಿದರು. ‘ಏನು?’ ಆಕೆ ಪ್ರಯಾಸದಿಂದ ಕೇಳಿದಳು.  ‘ಗಂಡು ಮಗು, ಗಂಡು ಮಗು. ಈಗ ಕೇಳಿಸಿತೇನು?’ ‘ಮಗು ಹೇಗಿದೆ ಡಾಕ್ಟರ್?’ ‘ಚೆನ್ನಾಗಿದೆ. ಚೆನ್ನಾಗಿದೆ.’ ‘ನಾನು ನೋಡಬಹುದೆ, ಡಾಕ್ಟರ್?’ ‘ಖಂಡಿತಾ, ಖಂಡಿತಾ. ಇನ್ನೊಂದು ಗಳಿಗೆ..’ ‘ಮಗು ಖಂಡಿತವಾಗಿಯೂ ಆರೋಗ್ಯದಿಂದೆಯಾ ಡಾಕ್ಟರ್?’ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕ್ಯಾನ್ಸರ್ ಟ್ರೇನ್ – ಭಟಿಂಡಾ ಟೂ ಬಿಕನೇರ್: ಅಖಿಲೇಶ್ ಚಿಪ್ಪಳಿ

ಗೋಧಿಯ ಕಣಜವಾದ ಪಂಜಾಬ್ ರಾಜ್ಯದ ಕ್ಯಾನ್ಸರ್ ಟ್ರೇನ್ ಕತೆ ಗೊತ್ತಿರಬಹುದು. ಆದರೂ ಕೊಂಚದಲ್ಲಿ ಹೇಳಿಬಿಡುತ್ತೇನೆ. ನಮ್ಮಲ್ಲಿ ಹೇಗೆ ಅಕ್ಕಿ ಮುಖ್ಯ ಆಹಾರವೋ ಹಾಗೆ ಉತ್ತರ ಭಾರತದಲ್ಲಿ ಗೋಧಿ ಮುಖ್ಯ ಆಹಾರ. ಅಲ್ಲಿ ಅಕ್ಕಿಯನ್ನು ಬಹು ಅಪರೂಪಕ್ಕೆ ಉಪಯೋಗಿಸುತ್ತಾರೆ. ಅದರಲ್ಲೂ ಡಾಭಾಗಳು ಮೈದಾ ಹಿಟ್ಟಿನ ರೋಟಿಯನ್ನೇ ಮಾಡುತ್ತಾರೆ. ಮೈದಾಹಿಟ್ಟು ತಯಾರಾಗುವುದು ಗೋಧಿಯಿಂದಲೇ. ಶಕ್ತಿಯುತ, ಹೇರಳ ಪ್ರೊಟೀನ್ ಮತ್ತು ನಾರಿನಂಶವಿರುವ ಗೋಧಿಯ ಮೇಲಿನ ಭಾಗ ಬೂಸ ಎಂದು ಕರೆಯಲ್ಪಟ್ಟು ಜಾನುವಾರುಗಳಿಗೆ ಆಹಾರವಾಗುತ್ತದೆ. ಹಾಗೆಯೇ ಗೋಧಿ ರವೆ, ಹಿಟ್ಟು ಆಮೇಲೆ ಗೋಧಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬರಹಗಾರರ ಭಾವವೂ, ಭಾಷೆಯ ನೋವೂ: ಪ್ರಶಸ್ತಿ

ಪೇಪರ್ರಲ್ಲಿ, ಇಂಟರ್ನೆಟ್ಟಲ್ಲಿ, ಮೊಬೈಲಲ್ಲಿ ಏನೋ ಓದುತ್ತೇವೆ, ಇನ್ನೇನೋ ನೋಡುತ್ತೇವೆ, ಮತ್ತಿನ್ನೇನೋ ಕೇಳುತ್ತೇವೆ, ಸಮಾಜದಲ್ಲಿನ ಆಗುಹೋಗುಗಳಲ್ಲಿ ಒಂದಾಗಿ ಏನೇನೋ ಅನುಭವಿಸುತ್ತಿರುತ್ತೇವೆ. ಈ ಘಟನೆಗಳಗಳಲ್ಲಿ ಯಾವುದೋ ಒಂದು ಇನ್ಯಾವುದೋ ಭಾವವನ್ನು ಸ್ಪುರಿಸಿರುತ್ತದೆ. ಹಿಂದಿನ ಓದಿನಿಂದ ಪ್ರಭಾವಿತರಾಗಿರುವಂತೆಯೇ ಆ ಕ್ಷಣಕ್ಕೆ ಹುಟ್ಟಿದ ಸ್ವಂತದ ಭಾವಕ್ಕೊಂದು ಅಕ್ಷರರೂಪ ಕೊಡಬೇಕೆಂಬ ಹಂಬಲವೂ ಹುಟ್ಟಬಹುದು. ಸರಿ, ಬರೆಯುತ್ತೇನೆ. ಆದರೆ ಬರೆಯುವುದು ಎಲ್ಲಿ ಎಂಬುದು ಆಗ ಮೂಡೋ ಮೊದಲ ಪ್ರಶ್ನೆ. ಶಾಲಾ ಕಾಲೇಜು ದಿನಗಳಲ್ಲಾದರೆ ಪುಸ್ತಕದ ಕೊನೆಯ ಪೇಜಿನಲ್ಲೋ, ಸಿಕ್ಕ ಖಾಲಿ ಹಾಳೆಯಲ್ಲೋ ಬರೆದು ಗೆಳೆಯರಿಗೆ ತೋರಿಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವನಗಳು: ಬಿದಲೋಟಿ ರಂಗನಾಥ್, ರಾಜಹಂಸ, ಗ಼ಂಗಾಧರ ಬೆನ್ನೂರ

ಕಾಡೋ ಕುದುರೆಯ ಕನಸು ದಯೆಗೆ ಅಂಕುಶವಿಟ್ಟ ಪ್ರೀತಿಯೇ ಜಾತಿಯ ಬೆನ್ನ ಬಿದ್ದು ಯಾಕೋದೆ? ಕಣ್ಣ ನೀರಲಿ ಸಾವಿರ ಕಣ್ಣುಗಳ ಹುಟ್ಟಿಸಿ. ಬದುಕು ಜಿಂಕೆಯೋಟ ಮರೆವು ಮಂಗನಾಟ ಕುಲಕಿ ಕುಲಕಿ ಬೆರತ ಆ ನೋಟ ರೆಂಬೆ ಕೊಂಬೆಯಾಗಿ ಚಾಚಿದೆ ವರುಷ ವರುಷಗಳೇ ಸಂದರು. ನೀನಿಟ್ಟ ಹೆಜ್ಜೆ ಮಾತಿನಲಿ ಕಥೆಯಾಗಿದ್ದು ಅಲ್ಪ ಕಾವ್ಯವಾಗಿ ಕಾಡಿದ್ದೇ ಗಹನ ಕಾಡೋ ಕುದುರೆಯ ಕನಸು ಜೂಜಾಟವಾಗಿದ್ದು ಸರಿಯೆ? ಮೋರಿ ಮೇಲೆ ಕೂರಿಸಿ ಮಾಡದ ತಪ್ಪಿಗೆ ಹಿಂಡುವ ನೆನಪ ಬೆಂಬಲಿಸಿದ್ದು ಹಿತವೆ? ಒಂಟಿ ಮರದ ಮೇಲೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೆನಪು: ವೇಣುಗೋಪಾಲ್ ಹೆಚ್.

ಹೊಸ ಬದುಕು, ಹೊಸ ಊರು, ಹೊಸ ಗೆಳೆಯರು, ಎಲ್ಲವೂ ಹೊಸದೇ ಆದರೆ ನೆನಪುಗಳು………????                   ಹೀಗೆ ಮೊನ್ನೆ ಹುಟ್ಟಿದ ಊರಿಗೆ ಹೋಗಿದ್ದೆ ಆ ಜಾಗ, ಶಾಲೆ, ಮನೆ, ಗಿಡ-ಮರಗಳ ನೆನಪು ಹಾಗೆ ಕಣ್ಣಮುಂದೆ ಹಾಗೆ ಬಂದುಹೋದಂತಾಯಿತು….ಆ ಸೊಗಡಿನಲ್ಲಿ ಬೆಳೆದ ಎಲ್ಲರಿಗೂ ಆದ ಅನುಬವವೇ ಈ ನೆನಪು.. ಮೊದಲನೆಯದಾಗಿ ಆ ಮಲಗುವ ಅಟ್ಟ ಒಮ್ಮೆ ಕಣ್ಣು ಮುಚ್ಚಿದರೆ ಏಳುತಿದ್ದದ್ದು ಬೆಳೆಗ್ಗೆಯೆ ನಮ್ಮದು ಬೇರೆ ದೇಶದವರತರವಲ್ಲ ಅಪ್ಪ ಅಮ್ಮನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಬೋಹ್‌ಲುಲ್‌ ಮತ್ತು ಸೇತುವೆ ನದಿ ನೀರಿನ ಹರಿಯುವಿಕೆಯನ್ನು ನೋಡುತ್ತಾ ಒಂದು ಸೇತುವೆಯ ಮೇಲೆ ಕುಳಿತಿದ್ದ ಬೋಹ್‌ಲುಲ್‌. ರಾಜ ಅವನನ್ನು ನೋಡಿದ, ತಕ್ಷಣ ದಸ್ತಗಿರಿ ಮಾಡಿಸಿದ. ರಾಜ ಹೇಳಿದ, “ಸೇತುವೆ ಇರುವುದು ನದಿಯನ್ನು ದಾಟಲೋಸುಗ, ಅಲ್ಲಿಯೇ ಉಳಿದುಕೊಳ್ಳಲು ಅಲ್ಲ.” ಬೋಹ್‌ಲುಲ್ ಉತ್ತರಿಸಿದ, “ನೀವೊಮ್ಮೆ ನಿಮ್ಮನ್ನೇ ನೋಡಿಕೊಳ್ಳುವುದು ಒಳ್ಳೆಯದು. ಈ ಜೀವನಕ್ಕೆ ಹೇಗೆ ಅಂಟಿಕೊಂಡಿದ್ದೀರಿ ಎಂಬುದನ್ನೊಮ್ಮೆ ಗಮನಿಸುವುದು ಒಳ್ಳೆಯದು.” ***** ೨. ಬಾಸ್ರಾದ ಹಸನ್‌ನಿಗೆ ರಬಿ’ಆ ಳ ಉಡುಗೊರೆಗಳು ರಬಿ’ಆ ಅಲ್‌-ಅದವಿಯ್ಯಾ ಬಾಸ್ರಾದ ಹಸನ್‌ನಿಗೆ ಮೂರು ವಸ್ತುಗಳನ್ನು ಕಳುಹಿಸಿದಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕವಿತೆ ಕಳ್ಳರಿದ್ದಾರೆ ಎಚ್ಚರಿಕೆ!!!: ನಟರಾಜು ಎಸ್. ಎಂ.

ಪಿಯುಸಿಯ ದಿನಗಳವು. ಯಾವುದೋ ಮುದ್ದು ಕನಸಿಗೆ ಬಿದ್ದು ಕವಿತೆ ಬರೆಯಲು ಶುರು ಮಾಡಿದ್ದೆ. ಬರೆದ ಕವಿತೆಯನ್ನು ತರಗತಿಯಲ್ಲಿ ಓದಬೇಕೆಂಬ ಹಪಹಪಿ ಇತ್ತು. ಅಂದು ಕ್ಲಾಸಿಗೆ ಸರ್ ಇನ್ನೂ ಬಾರದಿದ್ದ ಕಾರಣ ಕ್ಲಾಸಿನಲ್ಲಿ ಹರಟುತ್ತಾ ಕುಳಿತ್ತಿದ್ದ ಸಹಪಾಠಿಗಳಿಗೆ ಅಚ್ಚರಿಯಾಗುವಂತೆ ಡಯಾಸ್ ಬಳಿ ನಿಂತು "ಇವತ್ತು ಒಂದೆರಡು ಕವಿತೆ ಓದಬೇಕು ಅಂದುಕೊಂಡಿದ್ದೇನೆ" ಎಂದಿದ್ದೆ. ನನ್ನ ಮಾತಿಗೆ ಗಲಾಟೆಯಲ್ಲಿ ತೊಡಗಿದ್ದ ಕ್ಲಾಸ್ ಒಂದು ಹಂತಕ್ಕೆ ಸೈಲೆಂಟ್ ಆಗಿ ಹೋಗಿತ್ತು. ಹಿಂದಿನ ಬೆಂಚಿನ ಒಂದಿಬ್ಬರು ಗೆಳೆಯರು "ಎಲ್ಲಾ ಸೈಲೆಂಟ್ ಆಗ್ರಪ್ಪಾ ನಟ ಕವಿತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದಾರಿ ತೋರುವ ದುರಂತನಾಯಕ: ಚೈತ್ರಾ ಎಸ್.ಪಿ.

ಅವನೆಂದರೆ ಥಟ್ಟನೆ ನೆನಪಾಗುವುದು ಹೆಸರು ದುರಂತನಾಯಕ. ಮಹಾಕಾವ್ಯದ ದುರಂತನಾಯಕ. ಅಸಹಾಯಕ ಪರಿಸ್ಥಿತಿಯಲ್ಲಿ ಸಿಕ್ಕಿ ಒದ್ದಾಡಿದ ನತದೃಷ್ಟ.ಅವಮಾನಗಳಲ್ಲಿ ಬೆಂದು ಮಿಂದೆದ್ದವ. ತಿರಸ್ಕಾರಗಳನ್ನೆ ಕಂಡವ. ಹುಟ್ಟಿದಾಗ ತಾಯಿಗೆ ಬೇಡವಾದ. ಗುರುಕುಲದಲ್ಲಿ ಗುರುಗಳಿಗೆ ಬೇಡವಾದ.ಸ್ವಯಂವರದಲ್ಲಿ ಮೆಚ್ಚಿದ ಹುಡುಗಿಗೆ ಬೇಡವಾದ. ಹೇಗೆ ಬದುಕಿರಬಹುದು ತನ್ನ ಬಾಳನ್ನು ? ಬೇಸರದಲ್ಲೇ ? ಖಿನ್ನತೆಯಲ್ಲೇ ? ಕಂಡಿರದ ತಂದೆ-ತಾಯಿಗಾಗಿ ಹಂಬಲಿಸಿದನೇ ? ಮಾಡಿದ ತಪ್ಪಿಗಾಗಿ ಪರಿತಪಿಸಿದನೇ ? ಬೆರಳು ತೋರಿಸಿದರೆಂದು ಮರುಗಿದನೇ ? ಜನ್ಮದತ್ತವಾಗಿ ಐಶ್ವರ್ಯ, ಕ್ಷಾತ್ರಪಂಥದ ಹೆಗ್ಗುರುತಾದ ಎದೆಗವಚಗಳನ್ನು ಹೊತ್ತು ಬಂದರೂ ಸೂತಪುತ್ರನೆಂಬ ಹಣೆಪಟ್ಟಿಯಿಂದ ಕಂಗೆಟ್ಟನೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಾಂಡದ ಪರಿ-ಬಿದಿರೆಂಬ ಸಿರಿ: ಅಖಿಲೇಶ್ ಚಿಪ್ಪಳಿ

ಕಳೆದ 2 ವರ್ಷದಿಂದ ಕಳಲೆ ತಿಂದಿಲ್ಲ. ಕಳಲೆ ತಿನ್ನುವುದು ಕಾನೂನುಬಾಹಿರವೆಂದು ಅಂದು ಕೊಂಡಿದ್ದ ದಿನಗಳವು. ಆದರೂ ಮಳೆಗಾಲ ಬಂತೆಂದರೆ ಕಳಲೆಗೆ ಮುಗಿಬೀಳುವುದು ನಡದೇ ಇತ್ತು ಮತ್ತು ಇದೆ. ಕಳಲೆಗಾಗಿಯಲ್ಲವಾದರೂ ರೈತರು ತಮ್ಮ ಸ್ವಂತ ಜಮೀನಿನಲ್ಲಿ ಬಿದಿರನ್ನು ನೆಟ್ಟು ಬೆಳೆಸಿರುತ್ತಾರೆ. ಅದರಲ್ಲಿ ಮೂಡುವ ಕಳಲೆಗಳ (ಬ್ಯಾಂಬೂ ಶೂಟ್) ಲ್ಲಿ ಕೆಲವನ್ನು ಕತ್ತರಿಸಿ, ಸಂಸ್ಕರಿಸಿ ತಿನ್ನುವ ವಾಡಿಕೆ ಮಲೆನಾಡಿನಲ್ಲಿ ಇದೆ. ಹಿಂದಿನ ವಾಡಿಕೆಯಂತೆ ಬಿದಿರು ಹೂ ಬಿಟ್ಟ ನಂತರದಲ್ಲಿ ಸಾಯುತ್ತದೆ. ಬಿದಿರು ಹೂ ಬಿಡುವುದು 60 ವರ್ಷಕ್ಕೊಮ್ಮೆ. 2013-14ರಲ್ಲಿ ಮಲೆನಾಡಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಏಕಾದಶಿ: ಗುಂಡುರಾವ್ ದೇಸಾಯಿ

‘ಲೇ ರಂಡೆಗಂಡಾ, ಎಂತಾ ಅನಾಹುತ ಮಾಡಿಬಿಟ್ಟಿ, ನನ್ನ ಜೀವಮಾನದ ಸಾಧನೆಯಲ್ಲಾ ಇವತ್ತು ವ್ಯರ್ಥ ಮಾಡತಿದ್ದೆಲ್ಲೋ    , ಕೃಷ್ಣ ಕೃಷ್ಣ ನೀನ ಕಾಪಾಡಬೇಕ¥!À’ ಅಂತ ಬಯ್ಯಕೋತ ಗುಡಿಯಿಂದ ಬಂದ್ಲು. ‘ಏನಾಯ್ತವ್ವ ಒಮ್ಮಿದೊಮ್ಮೆಲೆ, ಯಾಕ ಸಿಟ್ಟಿಗೆದ್ದು ದಾರ್ಯಾಗಿನಿಂದ ಕೂಗಿಕೊಂತ ಬರಕತಿದಿ, ಮೆಲ್ಲಕ ಬಾರವ್ವ, ಮೆಲ್ಲಕ ಮಾತಾಡು ’ ‘ನನ್ನ ಸುದ್ದಿ ಬಿಡು, ಎಂತ ಮೋಸ ಮಾಡಿಬಿಟ್ಟೆಲ್ಲೋ, ನೀನು ಬಾಳ ಶ್ಯಾಣೆ ಅಂತ ಮಾಡಿದ್ದೇ, ನಿನಗಿಂತ ನಿಮ್ಮಕ್ಕನ ವಾಸಿ. ನಿಮ್ಮಪ್ಪ ಹೋದ ಮ್ಯಾಲೆ ಪಂಚಾಂಗ ನೋಡಿ ತಿಥಿ ಲೆಕ್ಕ ಎಷ್ಟು ಕರೆಕ್ಟಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾವು: ಪ್ರಶಸ್ತಿ

ಸಾವೆಂಬುದು ಬೆನ್ನ ಹತ್ತಿ ಬರುತ್ತಿದೆಯಾ ಎಂಬ ಭಾವ ಪದೇ ಪದೇ ಕಾಡತೊಡಗಿತ್ತವನಿಗೆ. ಯದ್ವಾತದ್ವಾ ಟ್ರಾಫಿಕ್ ಜ್ಯಾಂನಿಂದ ರೈಲು ತಪ್ಪಿಸಿಕೊಂಡ ಬೇಜಾರಲ್ಲಿ ಬಸ್ಸಿಗೆ ಹೋದ ದಿನವೇ ರೈಲಿನ ಅಪಘಾತವಾಗಿ ಅದೆಷ್ಟೋ ಜನ ಅಸುನೀಗಿದ್ದರು. ಆ  ಆಘಾತ ಮನಸ್ಸಿನಿಂದ ಅಳಿಸೋ ಮುನ್ನವೇ ಇವ ರಿಸರ್ವ ಮಾಡಿಸಿದ್ದ ಬಸ್ಸು ಆಯತಪ್ಪಿ ಕೊರಕಲಿಗೆ ಜಾರಿದ ಸುದ್ದಿ ಕೇಳಿಬಂದಿತ್ತು. ಬೇಗ ಹೋಗಬೇಕಂದುಕೊಂಡ್ರೂ ಆ ಶುಕ್ರವಾರವೇ ವಿಪರೀತ ಲೇಟಾಗಿ ರಿಸರ್ವ್ ಮಾಡಿಸಿದ ಬಸ್ಸಿಗೆ ಹೋಗಲಾಗದ್ದಕ್ಕೆ ಅದೆಷ್ಟೋ ಶಾಪ ಹಾಕಿದ್ದವನಿಗೆ ಮಾರನೇ ದಿನದ ಪೇಪರ್ ನೋಡಿದಾಗ ಮತ್ತೊಮ್ಮೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಲ್ವರ ಕವನಗಳು: ಶಿದ್ರಾಮ ತಳವಾರ, ನೂರುಲ್ಲಾ ತ್ಯಾಮಗೊಂಡ್ಲು, ಮೆಲ್ವಿನ್ ಕೊಳಲಗಿರಿ, ಆಶಿತ್

ಪಯಣ ಎಲ್ಲೋ ನಡೆಯುತ್ತಿದೆ ನನ್ನೀ ಪಯಣ ಎಲ್ಲೆಂತೆನಗರಿವಿಲ್ಲವಾದರೂ ಇಲ್ಲೇ ಎಲ್ಲೋ ನಡೆಯುತ್ತಿದ್ದೇನೆ,,,,, ದಾರಿಯುದ್ದಕ್ಕೂ ಬರೀ ಕತ್ತಲು ಎಲ್ಲೆಲ್ಲೂ ಸ್ಮಶಾನ ಮೌನ ಕಾಣದಿಹ ಈ ದಾರಿಯಲ್ಲಿ ನನಗೆ ನಾನೇ ಪ್ರಶ್ನೆ, ಅಲ್ಲಲ್ಲಿ ನಾಯಿ ಊಳಿಡುತಿವೆ, ತಂಪು ಗಾಳಿಗೆ ಒಣಗಿದೆಲೆಗಳು ಪಟ ಪಟ ಉದುರುವ ಸದ್ದು ಬೇರೇನಿಲ್ಲ, ಆದರೂ,,, ಅದಾರೋ ನನ್ನ ಹಿಂಬಾಲಿಸುವಂತಿದೆ. ಇಲ್ಲೇ ಎಲ್ಲೋ ದೂರದಲ್ಲಿ ಬೆಂಕಿ ಹೊತ್ತಿಕೊಂಡಿದೆ ಬಹುಶ: ಹೆಣ ಸುಡುತಿರಬಹುದು ವಾಸನೆ ಮೂಗು ಕಟ್ಟುತಿದೆ ಯಾವುದೀ ತಾಣ ? ಕೆಟ್ಟ ಕನಸಿರಬಹುದು ಅಲ್ಲವೇ ? ಆದರೂ,,,, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗೆಲುವು ಸುಲಭಾನಾ?: ರೋಷನ್ ಅರೆಹೊಳೆ

ಅದ್ಭುತವಾದ ವಿಜಯವನ್ನು ಸಾಧಿಸಿದವರೆಲ್ಲ ಉನ್ನತ ಸ್ಥಾನದಿಂದ ಬಂದವರಲ್ಲ…! ತೀರಾ ಕೆಳಮಟ್ಟದಿಂದಾನೇ ಬಂದಿರುವವರು….! ಕಷ್ಟದ ಅರಿವಿದ್ದರೆ, ಜಯದ ರುಚಿ ಬೇಕು ಎನಿಸುವುದು. ಒಮ್ಮೆ ಕೆಲವು ಸಾಧಕರ ಬಗ್ಗೆ ತಿಳಿದುಕೊಂಡರೆ, ನಾವು ಎಲ್ಲಿದ್ದೇವೆ? ಎನ್ನುವಂತಹದ್ದು ಅರಿವಾಗುತ್ತದೆ. ಇಂದು ಜಗತ್ತಿನಾದ್ಯಂತ ಅತಿ ಹೆಚ್ಚು ಜನರು ಇಷ್ಟ ಪಡುವ ಆಟ ಫುಟ್ಬಾಲ್. ಸದ್ಯದ ಯುವಕರಿಗೆ ಫುಟ್ಬಾಲ್ ಅಲ್ಲಿ ಇಷ್ಟವಾಗುವ ಆಟಗಾರ "ಲೂಯಿಸ್ ಲಯೋನೆಲ್ ಆ್ಯಂಡ್ರೆಸ್ ಮೆಸ್ಸಿ" ಲೂಯಿಸ್ ರೊನಾಲ್ಡೊ ತರ ಆಕ್ರಮಣಕಾರಿ ಆಟಗಾರನಲ್ಲದಿದ್ದರೂ ಆತ ಜಗತ್ತಿಗೆ ಇಷ್ಟವಾಗುತ್ತಾನೆ….! ಇಷ್ಟರ ಮಟ್ಟಿಗೆ ಈತ ಜನಪ್ರಿಯನಾಗಲು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹನಿಯೂರು ಚಂದ್ರೇಗೌಡರ “ಸೋಲಿಗರು: ಬದುಕು ಮತ್ತು ಸಂಸ್ಕೃತಿ” ಕೃತಿಯ- ಒಂದು ವಿಮರ್ಶೆ: ಡಾ. ಕೆ.ಮಧುಸೂದನ ಜೋಷಿ

  ಬಹುಮುಖಿಯಾಗಿ  ಬಹುರೂಪಿಯಾಗಿ ಬೆಳೆದು ಬಂದ ಕನ್ನಡ ಸಾಹಿತ್ಯ ಕಾಲದಿಂದ ಕಾಲಕ್ಕೆ ತಕ್ಕಂತೆ ಬದಲಾಗುತ್ತ, ಪ್ರಸ್ತುತಗೊಳ್ಳುತ್ತ ಬಂದಿದ್ದರಿಂದಲೇ ಅದು ಜೀವಂತಿಕೆಯನ್ನು ಕಾಯ್ದುಕೊಂಡು 8 ಜ್ಞಾನಪೀಠಗಳನ್ನು ಏರಿ ಭರತೀಯ ಸಾಹಿತ್ಯ ಸಾಮ್ರಾಜ್ಯದ ಮೊದಲ ಚಕ್ರವರ್ತಿಯಾಗಿ ಮೆರೆದಿದೆ; ಮೆರೆಯುತ್ತಿದೆ. ಕಾವ್ಯ, ಕತೆ, ಕಾದಂಬರಿ, ನಾಟಕ, ವಿಮರ್ಶೆ, ಸಂಶೋಧನೆ, ಆತ್ಮಚರಿತ್ರೆ, ಜೀವನಚರಿತ್ರೆ, ಗೀತನಾಟಕ, ಕಥನಕವನ, ಪ್ರವಾಸಕಥನ, ಜನಾಂಗೀಯ ಅಧ್ಯಯನ…. ಹೀಗೆ ಹತ್ತು ಹಲವು ಮುಖಗಳಲ್ಲಿ ಹೊಮ್ಮಿಬಂದ ಕನ್ನಡ ಸಾಹಿತ್ಯವಾಹಿನಿ ಮೈದುಂಬಿಕೊಳ್ಳುತ್ತ, ಮನಗಳನ್ನು ತುಂಬುತ್ತ ಸಾಗಿದೆ. ಆದರೆ ಈ ಎಲ್ಲ ಸಾಹಿತ್ಯದ ಪ್ರಕಾರಗಳಲ್ಲಿಯೇ ಅಪರೂಪ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಇರಲಾದರದ್ದು ಮಾಡಿ ಮೈ ಕೆರಕೊಂಡರಂತ…: ಗಾಯತ್ರಿ ಬಡಿಗೇರ

ಬಾಳಿನ ಹಾದಿಯಲ್ಲಿ ಸಂಬಂಧ, ಸ್ನೇಹ, ಪ್ರೀತಿ, ದ್ವೇಷ, ಸಿಟ್ಟು ಮತ್ತು ನೋವು-ನಲಿವು ಎಲ್ಲವೂ ಸಹಜ. ಕೆಲವೊಮ್ಮೆ ಕನಸದಾಗು ನೆನಸಿಕೊಂಡಿರಂಗಿಲ್ಲ ಹಂತಾ ದುರಂತ ನಡದ ಬಿಡ್ತಾವ. ಜೀವನಾ ಒಂದ ಚೌಕ್ಕಟನ್ಯಾಗ ಇರಬೇಕು. ಆದ್ರ ಚೌಕ್ಕಟ್ಟೆ ಜೀವನಲ್ಲ. ತಿಳ್ಕೊಬೇಕಾದ ವಿಷಯ ಹೇಳಲಾರದಷ್ಟ ಆದ. ಆದ್ರ ಕೇಳೊ ಮನಸ್ಸಗಳು ಪ್ರೀತಿ ಎಂಬ ಬೆಂಕಿಯಲ್ಲಿ ಬಿದ್ದು ಜಗತ್ತಿನ ಅರಿವಿಲ್ಲದೆ ನರಳತಿದಾವ. ಪ್ರೀತಿ ಮಾಡೋದ ತಪ್ಪಲ್ಲ. ಹಂಗಂತಾ ಪ್ರೀತಿನೇ ಜೀವನಾ ಅಲ್ರಿ. ಪ್ರೀತಿ ಮಾಡಿ ಅದೇನು ಸಾದಸ್ತಾರೋ? ಗೊತ್ತಿಲ್ಲ. ಆದ್ರ ಮನೆವರ ಹೊಟ್ಟೆ ಮಾತ್ರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ