ನಾಲ್ವರ ಕವಿತೆಗಳು: ಸಿರಿ ಹೆಗ್ಡೆ, ಚಿದು, ಬಿದಲೋಟಿ ರಂಗನಾಥ್, ಕಿರಣ್ ಬಾಗಡೆ

ಕ್ಷಮಿಸಿ ನನ್ನನ್ನು … ಇಷ್ಟು ವರ್ಷಗಳ ಕಾಲ ಕುಣಿಸಿದೆ, ಗೆಜ್ಜೆಯ ಗೀಳು ಹತ್ತಿಸಿದೆ, ನಿಮ್ಮಿಂದ ನಾ ಹೆಸರು ಗಳಿಸಿದೆ, ಆದರಿಂದು …? ಕ್ಷಮಿಸಿ ನನ್ನನ್ನು… ನೋವೆಂದು ನೀವಳುತ್ತಿದ್ದ ದಿನಗಳವು, ಬೇಡ ಸಾಕೆಂದು ಗೋಗರೆಯುತ್ತಿದ್ದ ಕಾಲ, ಕೇಳಲಿಲ್ಲ ನಾನು, ಅಹಂಕಾರಿ ! ಮತ್ತೆ ಕಟ್ಟಿಸಿದೆ ಗೆಜ್ಜೆ, ಕುಣಿಸಿದೆ, ಆದರಿಂದು …? ಕ್ಷಮಿಸಿ ನನ್ನನ್ನು… ನಿಮ್ಮ ಸಾಮರ್ಥ್ಯಕ್ಕಿಂತ ಜಾಸ್ತಿ ದುಡಿಸಿದೆ, ಇಂದು ನನ್ನ ಹೊಗಳುತ್ತಾರೆ, ನಿಮ್ಮಿಂದ, ನಾ ಸದಾ ಕೃತಜ್ನೆ, ಆದರಿಂದು …? ಕ್ಷಮಿಸಿ ನನ್ನನ್ನು… ಬಂದನವನು ನನ್ನ ಬಾಳಲ್ಲಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭಾವಗಳ ಬಂಡಿಯೇರಿ: ಪ್ರಶಸ್ತಿ

ಭಾವಲಹರಿಯೆನ್ನೋದೇ ಹಾಗೆ. ಈ ಭಾವಗಳ ಮಡಿಲಲ್ಲಿದ್ದಾಗ ಶಬ್ದಗಳ ಹಂಗಿಲ್ಲ, ಕಾಲದ ಅರಿವಿಲ್ಲ,ಸುತ್ತಣ ಪರಿಸರದ ಪರಿವೆಯೂ ಇಲ್ಲದ ಪರಿಸ್ಥಿತಿ. ಪಕ್ಕದ ಯಾವುದೋ ಘಟನೆ ನಮ್ಮ ತಟ್ಟೆಬ್ಬಿಸೋ ತನಕ ಕಲ್ಪನಾಲೋಕದಲ್ಲಿ ನಮಗೆ ನಾವಲ್ಲದೆ ಇನ್ಯಾರೂ ಇಲ್ಲ.ಭಾವಗಳ ಬಂಡಿಯೇರಿದ ಆ ಪಯಣ ಸಾಗೋ ಪರಿಯೇ ಅದಮ್ಯ.ಆ ಕ್ಷಣಕ್ಕೆ ಮೂಡೋ ಭಾವಕ್ಕೊಂದು ಆಕಾರವಿಲ್ಲದಿದ್ದರೆ ಕಳೆದೇ ಹೋದೀತೆಂದು ಸಿಕ್ಕ ಮೊಬೈಲಲ್ಲೋ ಪೇಪರಲ್ಲೋ ಕಂಪ್ಯೂಟರಲ್ಲೋ ಗೀಚುವವರದು ಒಂದು ಲಹರಿ.ಕಡಲಲೆಗಳಲ್ಲಿ ಕಂಡ ಸುಂದರ ಅಲೆಯೊಂದು ಕಾಲದ ಗರ್ಭದಲ್ಲಿ ಕರಗಿಹೋಗೋ ಹಾಗೆ ಮುಂಬರುವ ಭಾವ ಪ್ರವಾಹದಲ್ಲಿ ಈಗಿನ ಭಾವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

’ಮಂಗಳಮುಖಿ’ಯರಿಗೆ ಮರೀಚಿಕೆಯಾದ ಸಮಾನತೆಯ ಬದುಕು: ಗುರುರಾಜ್ ಎನ್

ಪ್ರಿಯಾಂಕ, ಮಮತ, ಚೆಲುವೆ, ಅಪ್ಸರ, ಜಯಶ್ರೀ, ವಿಧ್ಯಾ, ಹೀಗೆ  ಎಷ್ಟೋಂದು ಸುಂದರ ಹೆಸರುಗಳು, ಇವು ಒಂದು ವಿಭಿನ್ನ ಸಾಮಜಿಕ ಗುಂಪಿಗೆ ಸೇರಿದ ಹಿಜ್ರಾ, ಕೋಥಿ, ಮಂಗಳಮುಖಿ, ಜೋಗಪ್ಪ, ಡಬಲ್ ಡೆಕ್ಕರ್,  ದ್ವಿಲಿಂಗ ಕಾಮಿ, ಟ್ರಾನ್ಸ್‌ಜೆಂಡರ್, ಅಂತರ್‌ಲಿಂಗಿ, ಇಕ್ವಿಯರ್, ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಗಳ ಹೆಸರುಗಳು. ಗಂಡು ದೇಹದಲ್ಲಿ ಬಂದಿಯಾಗಿರುವ ಹೆಣ್ಣುಗಳ ಹೆಸರುಗಳಿವು ಹಾಗೇನೆ ಹೆಣ್ಣು ದೇಹದಲ್ಲಿ ಗಂಡುಗಳ ಹೆಸರುಗಳು ಬಂದಿಯಾಗಿರುವವರು ಇದ್ದಾರೆ. ಸಮಾಜದ ಕಣ್ಣಿಗೆ ಅವರು ಯಾರು? ಅವರ ನೋವು ಸಂಕಟಗಳೇನು? ಅವರ ತೊಂದರೆಗಳೇನು? ಎಂದು ಊಹಿಸಲು ಸಾದ್ಯಾವಾಗುವುದಿಲ್ಲ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಗೆ ಹನಿ: ರಾಮಪ್ರಸಾದ.ಬಿ.

ಸಂಗೀತ ಮೇಷ್ಟ್ರು:ಏನಮ್ಮ ರಾಗಿಣಿ! ಸ…ರಿ…ಅನ್ನು…. ರಾಗಿಣಿ:ಸಾರಿ ಅನ್ನೋಂತಹ ತಪ್ಪು ನಾನೇನು ಮಾಡಿದ್ದೇನೆ ಗುರುಗಳೇ?! **** ರಮ್ಯ:ಡ್ಯಾಡಿ,ನನಗೆ ಟೀಚರ್ ಶಿಕ್ಷೆ ಕೊಟ್ರು … ತಂದೆ:ಯಾಕೋ ಪುಟ್ಟ ಅಂತಾ ತಪ್ಪು ನೀನೇನು ಮಾಡಿದೆ?! ರಮ್ಯ:ನಮ್ ಟೀಚರ್ ನನ್ಹತ್ರ ಸ್ಕೇಲ್ ತೋರಿಸಿ ಎಲ್ರ ಮುಂದೆ ಹೇಳ್ತಿದ್ರು-"ಈ ಸ್ಕೇಲ್ ತುದಿಗೆ ಒಬ್ಬ ಮೂರ್ಖ ವ್ಯಕ್ತಿ ನಿಂತಿದ್ದಾಳೆ…" ಆಗ ನಾನು ಸ್ಕೇಲ್ ನ ಯಾವ ತುದಿ ಟೀಚರ್ ಅಂತ ಕೇಳಿದೆಯಷ್ಟೇ!" **** ಡಾಕ್ಟರ್:ನೀವೇನು ಭಯಪಡಬೇಡಿ!ಆಪರೇಷನ್ ಆದಕೂಡಲೇ ನೀವು ಹಾಯಾಗಿ ನಿಮ್ಮ ಮನೆಗೆ ನಡೆದುಕೊಂಡೇ ಹೋಗಬಹುದು…. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 87): ಮಹಾಂತೇಶ್ ಯರಗಟ್ಟಿ

  ಪ್ರಶ್ನೆಗಳು: ೧.    ರೋಮನ್ನರ ಎರಡು ಮುಖಗಳ ಯಾವ ದೇವತೆಯ ಹೆಸರಿನಿಂದ ಜನವರಿ ತಿಂಗಳಿಗೆ ಹೆಸರನ್ನಿಡಲಾಗಿದೆ? ೨.    ಐ.ಎಫ್.ಆರ್.ಐ (IFRI)ನ ವಿಸ್ತೃತ ರೂಪವೇನು? ೩.    ನವಗಿರಿನಂದ ಇದು ಯಾರ ಕಾವ್ಯನಾಮಗಿದೆ? ೪.    ಭೂಮಿಗೆ ಅತಿ ಸಮೀಪದಲ್ಲಿರುವ ಸೌರವ್ಯೂಹದಾಚೆಗಿನ ನಕ್ಷತ್ರ ಯಾವುದು? ೫.    ರಣರಿಸಕ ಎಂಬ ಬಿರುದನ್ನು ಪಡೆದಿದ್ದ ಚಾಲಕ್ಯ ದೊರೆ ಯಾರು? ೬.    ಐಸ್ ಕ್ರೀಂ ಬೇಗ ಗಡ್ಡೆಕಟ್ಟಲು ಏನನ್ನು ಬೆರೆಸುತ್ತಾರೆ? ೭.    ಶಿಲೀಂಧ್ರಗಳ ಅಧ್ಯಯನಕ್ಕೆ ಆಂಗ್ಲ ಭಾಷೆಯಲ್ಲಿ ಏನೆಂದು ಕರೆಯುತ್ತಾರೆ? ೮.    ಕುತುಬ್ ಮಿನಾರ್ ಆವರಣದಲ್ಲಿರುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾರ್ಟೂನ್ ಕಾರ್ನರ್: ಮೋಹನ್ ಕುಮಾರ್, ಬಿ.ರಾಮಪ್ರಸಾದ ಭಟ್, ರಂಗನಾಥ್ ಸಿದ್ಧಾಪುರ, ಅರುಣ್ ನಂದಗಿರಿ, ನಾಷೀರ್

        ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಮಯ ಪರಿಪಾಲನೆ: ಅನಿತಾ ನರೇಶ್ ಮಂಚಿ

                           ನನ್ನ ಲ್ಯಾಪ್ಟಾಪಿಗೆ ಜ್ವರ ಬಂದಿತ್ತು. ಜ್ವರ ಅಂದರೆ ಅಂತಿಂಥಾ ಜ್ವರವಲ್ಲ..ಮೈಯ್ಯೆಲ್ಲಾ ಬಿಸಿಯೇರಿ ತೇಲುಗಣ್ಣು  ಮಾಲುಗಣ್ಣು ಮಾಡಿಕೊಂಡು ಕೋಮಾ ಸ್ಥಿತಿಗೆ ಹೋಯಿತು. ಹೋಗುವಾಗ ಸುಮ್ಮನೇ ಹೋಗಲಿಲ್ಲ. ನಾನು ಕಷ್ಟಪಟ್ಟು ತಾಳ್ಮೆಯಿಂದ ಬರೆಯುತ್ತಿದ್ದ  ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದ್ದ ಘನ ಗಂಭೀರ  ಲೇಖನವೊಂದನ್ನು ಕರೆದುಕೊಂಡೇ ಹೋಯಿತು. ಅದೆಷ್ಟು ತಪಸ್ಸುಗಳ ಫಲವೋ ನಾನು ಅಷ್ಟೊಂದು ಸೀರಿಯಸ್ ವಿಷಯದ ಬಗ್ಗೆ ಬರೆಯಹೊರಟಿದ್ದು. ಒಂದೆರಡು ಬಾರಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸುಡುವ ಬೆಂಕಿಯ ನಗು ಪುಸ್ತಕ ವಿಮರ್ಶೆ: ಸಚಿನ್‍ಕುಮಾರ ಬಿ.ಹಿರೇಮಠ

                                                                                                              … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅರಣ್ಯ ಹಕ್ಕು ಮಾನ್ಯತೆ ಕಾಯಿದೆ ಮತ್ತು ಹವಾಮಾನ ಬದಲಾವಣೆ (ಕೊನೆಯ ಭಾಗ): ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ ಈ ಮಟ್ಟದ ಹಾಗೂ ಈ ಮೊತ್ತದ ಕಾಡು ನಾಶ ಈ ಹಿಂದೆಯೂ ಆಗಿತ್ತು. ಬಗರ್ ಹುಕುಂ ಕಾಯ್ದೆ 1989-90ರಲ್ಲಿ ಜಾರಿಯಾದ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯ ಮಿಣಿಸುತ್ತಿನ ಮರಗಳ ಮಾರಣ ಹೋಮವಾಗಿತ್ತು. ಮರಗಳ ಬುಡಕ್ಕೆ ಬೆಂಕಿ ಹಚ್ಚಿ ಸುಡಲಾಗಿತ್ತು. ಆ ಕಾರಣಕ್ಕಾಗಿಯೇ ಕಳೆದ 10 ವರ್ಷಗಳಲ್ಲಿ ತಾಲ್ಲೂಕಿನಲ್ಲಿ 40% ಮಳೆ ಪ್ರಮಾಣ ಕಡಿಮೆಯಾಗಿದೆ. ರಾಜಕೀಯ ದೂರದೃಷ್ಟಿಯ ಕೊರತೆ, ಅತಿಯಾಸೆ, ರೈತರಲ್ಲಿ ಪರಸ್ಪರ ಪೈಪೋಟಿ ಮನೋಭಾವ (ಸರ್ಕಾರಿ ಕೃಪಾಪೋಷಿತ ಇಲಾಖೆಗಳೇ ಹಸಿರು ಕ್ರಾಂತಿಯ ನೆಪದಲ್ಲಿ ಕ್ಷೇತ್ರೋತ್ಸವ ಎಂಬ ಸಂಭ್ರಮಾಚರಣೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾವ್ಯಧಾರೆ: ಪ್ರವೀಣ್ ಕುಮಾರ್ ಜಿ., ಚಾರುಶ್ರೀ ಕೆ ಎಸ್, ಸಿಪಿಲೆನಂದಿನಿ, ಸಂದೇಶ್.ಎಚ್.ನಾಯ್ಕ್

-: ನಿಂತ ನಾವೆ :-  ಮುಗುಚಿಬಿದ್ದ ನಾವೆ  ಅತ್ತ ದಡಕ್ಕಿರದೆ  ಇತ್ತ ಕಡಲ ಒಡಲಲಿ  ತೇಲದೆ ನಿಂತಿದೆ  ಕಾಲದ ಕೊಂಡಿಯಾ ಕಳಚಿಕೊಂಡು.  ಬೀಸುವ ಗಾಳಿಗೂ  ಮಿಸುಕಾಡದೆ ಅಬ್ಬರಿಸಿ  ಬರುವ ಅಲೆಗಳಿಗು  ಅತ್ತಿತ್ತಾಗದೆ ನಿಂತಿಹುದು ನಾವೆ  ಕಾಲದ ಕೊಂಡಿಯಾ ಕಳಚಿಕೊಂಡು.  ವಿಶಾಲ ಸಾಗರದ  ಎದೆಯ ಮೇಲೆ  ಮಿಸುಕದೆ ಕುಂತ ನಾವೆಯ  ಹೊತ್ತೊಯ್ಯುವವರಿರದೆ ಅನಾಥವಾಗಿ  ಕುಳಿತಿಹುದು ಕಾಲದ ಕೊಂಡಿಯಾ ಕಳಚಿಕೊಂಡು.  -ಪ್ರವೀಣ್ ಕುಮಾರ್ ಜಿ.         ನೈಜ ಪ್ರೀತಿ ನಿನ್ನ ನನ್ನ ಮರೆತು ಪ್ರೀತಿಸಿದೆ. ನನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರೋಹಿಣಿ: ಸಾವಿತ್ರಿ ವಿ. ಹಟ್ಟಿ

ಆ ಒಂಟಿ ಕೋಣೆಯಲ್ಲಿ ಅವಳನ್ನು ಹೊರತುಪಡಿಸಿದರೆ, ಒಂದೆರಡು ತಟ್ಟೆ ಲೋಟಗಳು, ಒಂದೆರಡು ಪಾತ್ರೆಗಳು, ಪ್ಲಾಸ್ಟಿಕ್ ಕೊಡ, ಬಕೆಟ್, ಚೊಂಬು ಹಾಗೂ ಒಂದಷ್ಟು ಪುಸ್ತಕಗಳು ಮಾತ್ರ. ಕೋಣೆಯಲ್ಲಿ ನಿಃಶಬ್ದ ಕವಿದಿತ್ತು. ಅಪರೂಪಕ್ಕೆ ಕೈಜಾರಿಸಿದರೆ ಪಾತ್ರೆಗಳ ಸದ್ದಷ್ಟೆ. ಆ ಮೌನ ಅವಳನ್ನು ಅದೆಷ್ಟು ಹಿಂಸಿಸುತ್ತಿತ್ತೆಂದರೆ ಇನ್ನೂ ತಾಸು ಮುಂಚಿತವಾಗಿಯೇ ಕಾಲೇಜಿಗೆ ಹೊರಟು ಬಿಡುತ್ತಿದ್ದಳು. ಅಲ್ಲಿಯಾದರೆ ವಿದ್ಯಾರ್ಥಿಗಳ, ಸಹೋದ್ಯೋಗಿಗಳ ಒಡನಾಟ ಸಿಗುತ್ತದೆ. ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲಿಯ ಪುಸ್ತಕಗಳಿರುತ್ತವೆ ಎಂಬುದು ರೋಹಿಣಿಯ ಯೋಚನೆಯಾಗಿರುತ್ತಿತ್ತು. ಆದರೆ ಅವಳಿಗೆ ಮೊದಲಿನಂತೆ ತನ್ಮಯಳಾಗಿ ಪಾಠ ಮಾಡಲಾಗುವುದಿಲ್ಲ. ಮೈಮರೆತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ವಿದ್ವಾಂಸ ಸಾರಥಿ ಮುಲ್ಲಾ ನಜರುದ್ದೀನ್‌ ಒಮ್ಮೆ ಕುದುರೆಗಾಡಿಯ ಸಾರಥಿಯ ಕೆಲಸವನ್ನು ಮಾಡಲು ಒಪ್ಪಿಕೊಂಡ. ಒಂದು ದಿನ ಆತ ಪಟ್ಟಣದ ಕುಖ್ಯಾತ ಭಾಗಕ್ಕೆ ಮಾಲಿಕನನ್ನು ಒಯ್ಯಬೇಕಾಗಿತ್ತು. ಗಮ್ಯಸ್ಥಾನ ತಲುಪಿದ ನಂತರ ಗಾಡಿಯಿಂದಿಳಿದ ಮಾಲಿಕ ಸಲಹೆ ನೀಡಿದ, “ಬಲು ಜಾಗರೂಕನಾಗಿರು. ಇಲ್ಲಿ ತುಂಬಾ ಕಳ್ಳರಿದ್ದಾರೆ.” ತುಸು ಸಮಯ ಕಳೆದ ನಂತರ ಹೊಸ ಸಾರಥಿ ಏನು ಮಾಡುತ್ತಿದ್ದಾನೆಂಬುದನ್ನು ತಿಳಿಯಲು ಇಚ್ಛಿಸಿದ ಮಾಲಿಕ ತಾನಿದ್ದ ಮನೆಯ ಕಿಟಕಿಯೊಂದರಿಂದ ತಲೆ ಹೊರಹಾಕಿ ಬೊಬ್ಬೆಹಾಕಿದ, “ಎಲ್ಲವೂ ಸರಿಯಾಗಿದೆಯಷ್ಟೆ? ಈಗ ನೀನೇನು ಮಾಡುತ್ತಿರುವೆ?” “ಒಬ್ಬ ವ್ಯಕ್ತಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆಲಿಯೋ: ಪ್ರಶಸ್ತಿ

ಬೆಂದಕಾಳೂರಿನ ಕುಂದಲಹಳ್ಳಿ ಅನ್ನೋ ಒಂದು ಹಳ್ಳಿಯಲ್ಲದ ಹಳ್ಳಿಯ ಕೆರೆಯ ಪಕ್ಕದಲ್ಲಿ ನಮ್ಮ ಪೀಜಿಯಿದೆ ಅನ್ನೋ ವಿಚಾರವನ್ನ ಹಿಂದಿನ ಲಹರಿಗಳಲ್ಲಿ ಓದೇ ಇರುವ ನಿಮಗೆ ಅದ್ರ ಹೆಸರು ಹೇಳೋ ಅಗತ್ಯ ಇಲ್ಲದಿದ್ದರೂ ಅಲ್ಲಿನ ಆಲಿಯೋ ಕತೆಯನ್ನಂತೂ ಹೇಳಲೇಬೇಕು. ಆಲಿಯೋನಾ ? ಅದ್ಯಾರು ಅಂತ ಊಹೆ ಮಾಡೋಕೆ ಶುರು ಮಾಡಿದ್ರಾ ?  ನಾ ಹೇಳಹೊರಟಿದ್ದು ಲವ್ ಯೂ ಆಲಿಯಾ ಬಗ್ಗೆಯಲ್ಲ, ಮಾತಾಡಿದ್ದೆಲ್ಲಾ ಕಾಮಿಡಿಯಾಗೋ ಆಲಿಯೋ ಭಟ್ ಬಗ್ಗೆಯೋ ಅಲ್ಲ. ನಮ್ಮ ಪೀಜಿ ಕಿಶೋರ್ ಭಯ್ಯಾನ ಆಲಿಯೋ ಬಗ್ಗೆ. ಈಗ ಈ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದೇವದಾಸಿಯರನ್ನು ರಕ್ಷಿಸುವುದೆಂದು?: ಜಯಶ್ರೀ ಎಸ್. ಎಚ್.

ಜಗತ್ತಿನಲ್ಲಿ ತೃತೀಯ ಲಿಂಗದ ಜನರನ್ನು ಜನರೆಂದು ಬಾವಿಸದೆ ನಿರಂತರ ಶೋಷಣೆಗೆ ಒಳಪಡುವಂತ ಸಮುದಾಯ ಇದು .ಅವರಷ್ಟೆ ಶೋಷಣೆಗೆ ಒಳಗಾದ ಇನ್ನೊಂದು ಸಮುದಾಯ ಇದೆ ಅದು ದೇವದಾಸಿ ಸಮುದಾಯ. ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ದಲಿತ  ಹೆಣ್ಣು ಮಕ್ಕಳನ್ನು ಮೇಲ್ಜಾತಿಯವರು ತಮ್ಮ ಭೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅವರನ್ನು ಹೀನಾಯವಾಗಿ ಶೋಷಣೆ ಮಾಡುವ ಪ್ರವೃತ್ತಿಯು ಇನ್ನು ಕೆಲವೊಂದು ಸ್ಥಳಗಳಲ್ಲಿ ಜೀವಂತವಾಗಿದೆ. ಅನೇಕ ಮುಗ್ಧ ಹೆಣ್ಣು ಮಕ್ಕಳು ಈ ಪಾಪದ  ಪದ್ದತಿಗೆ ತಿಳಿದೋ ತಿಳಿಯದೆಯೋ ಬಲಿಯಾಗುತ್ತಿದ್ದಾರೆ. ಮೂಢನಂಬಿಕೆ ಮತ್ತು ಬಡತನ ಕಾರಣ ನೀಡಿ ಒಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗೌರ್ಮೆಂಟ್ ಇಸ್ಕೂಲು..!: ಪ.ನಾ.ಹಳ್ಳಿ.ಹರೀಶ್ ಕುಮಾರ್

ಪಾರಿ  ಶಾಲೆ ಕಡೆಯಿಂದ ಯಾರನ್ನೋ  ಬೈಯ್ದುಕೊಳ್ಳುತ್ತಾ  ಬರ್ತಿರೋದು ನೋಡಿ ಅವಳನ್ನ ತಡೆದು ನಿಲ್ಲಿಸಿದ ಸಿದ್ಧ ಕೇಳಿದ, ‘ಯಾಕಮ್ಮೀ, ಎತ್ತಕಡೆಯಿಂದ ಬರ್ತಿದ್ದೀ ?’ ಅದಕ್ಕೆ ಏದುಸಿರು ಬಿಡುತ್ತಿದ್ದ ಪಾರಿ, ‘ಏ.. ಕಾಣಕಿಲ್ವಾ.. ಇಸ್ಕೂಲ್ತಾಕೆ ಹೋಗಿದ್ದೆ.’ ಅಂದಳು. ಅವರೀರ್ವರ ಮಾತುಕತೆ ಹೀಗೇ ಮುಂದುವರೆಯುತ್ತದೆ. ‘ ಇಸ್ಕೂಲ್ತಾಗೆ ಏನಿತ್ತವೀ ನಿಂದು ಅಂತಾ ಕೆಲ್ಸಾ..?’  ‘ ಏ..ನಂದೇನಿದ್ದತು ಬಿಡು. ಆ ನಮ್ಮ  ಮೂದೇವಿ ಐತಲ್ಲಾ. ವೆಂಕಟೇಸ ಅಂತಾ..ಅದುನ್ನ ಒಳಿಕ್ಕೆ ಕೂಡಿ ಬರೋಕೆ ಹೋಗಿದ್ದೆ.’ ‘ ಯಾಕಂತೆ ಪಾರವ್ವ, ಅವುನ್ಗೆ ಇಸ್ಕೂಲು ಬ್ಯಾಡಂತೇನು ?’ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಕ್ಕಳ ಭವಿಷ್ಯಕ್ಕೆ ಮುಳ್ಳಾಗುವ ‘ಬಾಲ ಕಾರ್ಮಿಕ’ ಪದ್ಧತಿ…: ಹುಸೇನಮ್ಮ ಪಿ.ಕೆ. ಹಳ್ಳಿ

  ಮಕ್ಕಳನ್ನು ‘ನಂದವನದ ಹೂಗಳು’ ಎನ್ನುತ್ತಾರೆ. ಮಕ್ಕಳು ಅಷ್ಟು ಮೃದು, ಅಮೂಲ್ಯ ಮತ್ತು  ಶ್ರೇಷ್ಠ ಎಂಬ ಭಾವನೆ ಎಲ್ಲರಲ್ಲೂ ಇದ್ದೆ ಇರುತ್ತದೆ. ಮಕ್ಕಳು, ಪ್ರೀತಿಯ ಲಾಲನೆ-ಪಾಲನೆಯಲ್ಲಿ ಬೆಳೆಯಬೇಕಾದ ಅವಶ್ಯಕತೆ ಇರುತ್ತದೆ. ಒಂದು ವೇಳೆ ಇಂತಹ ವಾತ್ಸಲ್ಯ ದೊರಕದೆ ಹೋದರೆ, ಆರೋಗ್ಯ ಬೆಳವಣಿಗೆಯ ಜೊತೆಗೆ ಅವರ ಎಳೆಯ ಮನಸ್ಸಿನ ಮೇಲೂ ಇದು ದುಷ್ಪರಿಣಾಮ ಬೀರುತ್ತದೆ. ಆಡಿ ನಲಿಯಬೇಕಾದ ಸುಂದರ ಬಾಲ್ಯವನ್ನು ಅವರಿಂದ ಕಸಿದುಕೊಂಡಂತಾಗುತ್ತಿದೆ.  ಬಹಳಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಬಾಲ್ಯದ ಸಂತೋಷವನ್ನು ಅನುಭವಿಸಲಾಗದೆ, ನಿರಾಶದಾಯಕ ಭವಿಷ್ಯದಲ್ಲಿ ತೊಳಲಾಡುವ ಪರಿಸ್ಥಿತಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೆರಳು-ಬೆಳಕಿನ ಮಾಯಾಲೋಕದ ಮಹಿಳಾ ಭಾರತ: ಹಿಪ್ಪರಗಿ ಸಿದ್ಧರಾಮ, ಧಾರವಾಡ

ಜೋಗುಳ ಹಾಡುವ ತಾಯಿಯ ಇಂಪಾದ ಧನಿಗೆ ತೊಟ್ಟಿಲ ಮಗು ನಿದ್ರೆಗೆ ಜಾರುವುದರೊಂದಿಗೆ ತೆರೆದುಕೊಳ್ಳುವ ಪುರಾಣ, ಇತಿಹಾಸ ಮತ್ತು ಸಮಕಾಲೀನಗಳ ಸಮಾಗಮದ ಸಂದರ್ಭಗಳ ಸಮ್ಮೀಶ್ರಣದ ಹದವಾದ ಪಾಕದಂತಹ ನಾಟಕ ಪ್ರದರ್ಶನ. ಕಾಲಬೇಧ ಮತ್ತು ಭಾಷಾಬೇಧಗಳಿಲ್ಲದೇ ಮಹಿಳಾ ಆಲಾಪದ ಕಲಾಪಗಳು ರಂಗದಲ್ಲಿ ನಡೆಯುತ್ತಾ, ಹಲವಾರು ಪ್ರಸಂಗಗಳ ಚರ್ಚೆ, ವಿಮರ್ಶೆಯ ಗಂಭೀರ ಕಥನವು ಕುತೂಹಲವನ್ನು ಹುಟ್ಟಿಸುತ್ತಲೇ ಪ್ರೇಕ್ಷಕ ಪ್ರಭುವಿನ ಗ್ರಹಿಕೆಯನ್ನು ವಿಸ್ತರಿಸುತ್ತಾ ಸಾಗುವ “ಮಹಿಳಾ ಭಾರತ” ನಾಟಕ ಪ್ರದರ್ಶನವು ಅದ್ಬುತವಾಗಿ ಇತ್ತೀಚೆಗೆ (03.01.2016) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೀಗೊಂದು ಕಥೆ : ಇಬ್ಬನಿಯ ಹುಡುಗ ರಾಮು

ಅವನು ಕಡುಬಡವ ಕುಟುಂಬದಿಂದ ಬಂದಿದ್ದ, ತಾಯಿಯ ಪ್ರೀತಿಯ ಬೆಲೆ ತಿಳಿದಿದ್ದ, ಕಷ್ಟ ಏನಂತ ಸ್ವತಃ ಅನುಭವಿಸಿದ್ದ ಕೂಡ, ಕಿತ್ತು ತಿನ್ನುವ ಬಡತನದ ಮಧ್ಯೆ ಬದುಕಿನಲ್ಲಿ.ಸಾಧಿಸಬೇಕೆಂಬ ಕನಸು ಕಂಡಿದ್ದ ಆ ಕನಸುಗಳನ್ನು ನನಸಾಗಿಸಲು ಹೊರಟ ಹಾದಿಯಲ್ಲಿ ಎದುರಾದ ಸವಾಲುಗಳೇ ಈ "ಹಿಗೋಂದು ಕಥೆ" ಎಂಬ ಲೇಖನ. ತಂದೆಯನ್ನು ಕಳೆದುಕೊಂಡಾಗ ಅವನ ವಯಸ್ಸು ೭ ವರ್ಷ, ಬೀದಿಪಾಲಾಗಿ ಒಂದು ಒಪ್ಪತ್ತು ಅನ್ನ ನೀರಿಗೂ ಕಷ್ಟ ಪಡುವ ಪರಿಸ್ಥಿತಿ ಎದುರಿಸಿದ್ದ, ಅವ್ವನ ತವರು ಮನೆಯಲ್ಲಿ ಆಶ್ರಯಿಸಿದ್ದ ಅಲ್ಲೆಯೆ ಅವನ ಕನಸಿಗೆ ಕಲ್ಪನೆಯೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅರಣ್ಯ ಹಕ್ಕು ಮಾನ್ಯತೆ ಕಾಯಿದೆ ಮತ್ತು ಹವಾಮಾನ ಬದಲಾವಣೆ (ಭಾಗ 2): ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ ಅರಣ್ಯಹಕ್ಕು ಮಾನ್ಯತೆ ಕಾಯ್ದೆ ಜಾರಿ ಪ್ರಯತ್ನ ಹವಾಮಾನದ ಬದಲಾವಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ನೋಡೋಣ. ಸಾಗರ ತಾಲ್ಲೂಕಿನಲ್ಲಿ 29 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಹಾಗೂ ನೈಸರ್ಗಿಕ ಕಾಡನ್ನು ಸವರಿ ಎಂ.ಪಿ.ಎಂ.ನವತಿಯಿಂದ ಬೆಳೆಸಿದ 7100 ಹೆಕ್ಟರ್ ಅಕೇಶಿಯಾವೆಂಬ ಹಸಿರು ಮರಳುಗಾಡೂ ಇದೆ. ಕರ್ನಾಟಕ ಪವರ್ ಕಾರ್ಪೊರೇಷನ್‍ವತಿಯಿಂದ 653 ಹೆಕ್ಟೆರ್ ಅರಣ್ಯ ಪ್ರದೇಶವನ್ನು ಎಂ.ಪಿ.ಎಂ.ನವರಿಗೆ ಅಕೇಶಿಯಾ ಬೆಳೆದುಕೊಳ್ಳಲು ನೀಡಲಾಗಿದೆ. 1989-90ರಲ್ಲಿ ಜಾರಿಯಾದ ಬಗರ್‍ಹುಕುಂ ಕಾಯ್ದೆಯಡಿಯಲ್ಲಿ ಇದೇ ಅರಣ್ಯ ಪ್ರದೇಶದಲ್ಲಿ ಮಂಜೂರಾದ ಜಮೀನುಗಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ