ನವದಂಪತಿಗಳನ್ನು ಉದ್ದೇಶಿಸಿ: ಹೃದಯಶಿವ ಅಂಕಣ
ನೀವು ಈ ಜಗತ್ತಿನ ರಮ್ಯಜೀವಿಗಳು, ನೂತನ ಜಗತ್ತಿಗೆ ಮೈಮನಸುಗಳನ್ನು ತೆರೆದುಕೊಳ್ಳುತ್ತಿರುವ ಆಸೆಗಣ್ಣುಗಳ ಕೋಮಲ ಹೃದಯವಂತರು… ನಿಮ್ಮೊಟ್ಟಿಗೆ ಒಂದಿಷ್ಟು ಮಾತುಗಳನ್ನು ಹಂಚಿಕೊಳ್ಳುವ ತುಡಿತ ನನ್ನದು . ನೀವು ಅಂದರೆ, ಇನ್ನಷ್ಟೇ ದಾಂಪತ್ಯ ಬದುಕಿಗೆ ಪ್ರವೇಶ ಪಡೆಯುತ್ತಿರುವ, ಆದರೆ ಹುಡುಗುತನದ ಗಡಿಯನ್ನು ಮೀರಿದ, ಕುಂಟೋಬಿಲ್ಲೆ, ಮರಕೋತಿ ಆಟಗಳನ್ನು ಬಿಟ್ಟು ಈಗಷ್ಟೇ ಮದುವೆಯಾಗಿರುವ ತರುಣ ಅಥಾ ತರುಣಿ. ನೀವು ಜನ ತುಂಬಿದ ಎಲ್ಲಾ ಊರುಗಳಲ್ಲಿ, ಚಿತ್ರಮಂದಿರಗಳಲ್ಲಿ, ದೇವಸ್ಥಾನಗಳಲ್ಲಿ ಕಣ್ಣಿಗೆ ಬೀಳುತ್ತೀರಿ. ಮುಂಬಯಿಯ ಇಂಡಿಯಾ ಗೇಟಿನ ಬಳಿ, ಊಟಿಯ ಚಳಿಯ ನಡುವೆ, ಕೇರಳದ … Read more
ಭ್ರಮೆ? (ಅತೀಂದ್ರಿಯ ಅನುಭವದ ಕಥೆಗಳು – ಭಾಗ ೪): ಗುರುಪ್ರಸಾದ ಕುರ್ತಕೋಟಿ
(ಈ ಕಥೆ ನನ್ನ ಗೆಳೆಯ ವಿಟ್ಠಲ ಕುಲಕರ್ಣಿಗಾದ ಅನುಭವದ ಮೇಲೆ ಹೆಣೆದಿದ್ದು. ನಂಬುವಿರೋ ಇಲ್ವೊ ಗೊತ್ತಿಲ್ಲ… ಇದನ್ನು ಅವನ ಬಾಯಿಂದ ಕೇಳುತ್ತಿದ್ದಾಗ ಹಾಗೂ ಈ ಕಥೆಯನ್ನ ರಾತ್ರಿ ಬರೆಯುತ್ತಿರುವಾಗ ನನ್ನ ಮೈಯಲ್ಲಿ ಭಯದ ಕಂಪನಗಳೆದ್ದಿದ್ದಂತೂ ನಿಜ! ಅಂದ ಹಾಗೆ, ಕಥೆಯಲ್ಲಿ ಬಳಸಿರುವ ಹೆಸರು ನಿಜವಾದ ವ್ಯಕ್ತಿಯದಲ್ಲ.) — ಸುಮಾರು ಹದಿನೈದು ವರ್ಷಗಳ ಹಿಂದೆ, ನಾನಿನ್ನೂ ಹುಬ್ಬಳ್ಳಿಯಲ್ಲೇ ಕೆಲಸ ಮಾಡುತ್ತಿದ್ದೆ. ಸ್ಟುಡಿಯೋ ಒಂದರಲ್ಲಿ ಗ್ರಾಫಿಕ್ ಡಿಸೈನರ್ ಕೆಲಸ. ಬೆಳಿಗ್ಗೆ ಒಂಭತ್ತರಿಂದ ಸಂಜೆ ಆರು . ಆದರೂ ಒಂದೊಂದು ಸಲ … Read more
“ಆರೋಗ್ಯದ ಮೇಲೆ ಸಕಾರಾತ್ಮಕ ಮನೋಭಾವದ ಪರಿಣಾಮ “: ಶುಭ.ಆರ್ ದೀಪು
ಆರೋಗ್ಯವೇ ಭಾಗ್ಯ ಎಂಬ ನಾಣ್ನುಡಿಯಂತೆ ಮನುಜನಾದವನ ದೇಹಕ್ಕೆ ಉತ್ತಮ ಆರೋಗ್ಯ ಮುಖ್ಯ. ಎಷ್ಟೇ ಸಿರಿಸಂಪತ್ತಿದ್ದರೂ ಅದನ್ನು ಅನುಭವಿಸಲು ಉತ್ತಮ ಆರೋಗ್ಯಬೇಕು. ಉತ್ತಮ ಆರೋಗ್ಯವನ್ನು ಹೊಂದಿರಲು, ಚೈತನ್ಯವನ್ನು ಪಡೆಯಲು ನಾವು ಸೇವಿಸುವ ಗಾಳಿ, ಕುಡಿಯುವ ಶುದ್ದನೀರು,ವಾಸಿಸುವ ಶುದ್ದ ವಾತಾವರಣ ಹಾಗೂ ಪೌಷ್ಟಿಕ ಆಹಾರ ಹೇಗೆ ಮುಖ್ಯವೋ ಅದೇರೀತಿಯಲ್ಲಿ ಮನುಷ್ಯನಲ್ಲಿ ಸಕಾರಾತ್ಮಕ ಮನೋಭಾವನೆ ಕೂಡಾ ಅತಿ ಮುಖ್ಯ. ಸಕಾರಾತ್ಮಕ ಮನೋಭಾವನೆ ಎಂದರೆ ಸದಾ ಒಳಿತನ್ನೇ ಆಲೋಚಿಸುವುದು. ಜೀವನದಲ್ಲಿ ಎಷ್ಟೇ ಬೆಟ್ಟ ಗುದ್ದದಂತಹ ಕಷ್ಟಗಳೂ ಎದುರಾದರೂ ಅದಕ್ಕಾಗಿ ದೃತಿಗೆಡದೆ ಸಕಾರಾತ್ಮಕವಾಗಿ ಯೋಚಿಸಿ … Read more
“ಕೇಳಿ ಕಥೆಯ” ಅನ್ನುವ ಒಂದು ವಿನೂತನ ಪ್ರಯತ್ನ: ವಾಸುಕಿ ರಾಘವನ್
ಕೆಲವು ಸಲ ನಮ್ಮ ಊಹೆ ಸರಿಯಿರಲಿಲ್ಲ ಅಂತ ಪ್ರೂವ್ ಆದಾಗ ಒಂದು ಥರಾ ಖುಷಿ ಆಗುತ್ತೆ… ವಿಷಯ ಇಷ್ಟೇ…ನಾನು ಮತ್ತು ಗೆಳೆಯ ಮುಕುಂದ್ ಒಂದು ಸಲ ಹರಟೆ ಹೊಡೆಯುತ್ತಾ ನಿಂತಿರುವಾಗ ಅವರು “ನಾನು ಒಂದು ಆಡಿಯೋ ಬುಕ್ ಪ್ರಾಜೆಕ್ಟ್ ಮಾಡ್ತಿದೀನಿ ಕಣೋ” ಅಂತಂದ್ರು. ನಾನು “ಒಹ್ ಹೌದಾ, ಏನದು?” ಅಂತ ಕೇಳಿದೆ ಕುತೂಹಲದಿಂದ. ಮುಕುಂದ್ ತಮ್ಮದೇ ಶೈಲಿಯಲ್ಲಿ “ನೋಡೋ, ಏನು ಗೊತ್ತಾ, ಇವತ್ತು ಯಾರಿಗೂ ಟೈಮ್ ಇಲ್ಲ, ಹಾಗಾಗಿ ಪುಸ್ತಕ ಓದೋರೇ ಕಮ್ಮಿ ಆಗಿಬಿಟ್ಟಿದ್ದಾರೆ, ಹಾಗಾಗಿ ಕಥೆಗಳನ್ನ … Read more
ಹೀಗೊಂದು ಪರ್ಯಟನೆ: ದಿವ್ಯ ಆಂಜನಪ್ಪ
ಈ ಗಿಜಿಬಿಜಿ ಜಂಜಾಟದ ಬದುಕಿನಲ್ಲಿ ವಯಸ್ಸಿಗೂ ಮೀರಿದ ವೈರಾಗ್ಯಗಳು ಮನೆ ಮಾಡಿ ನಾನೇ ನಾನಲ್ಲವೇನೋ ಎಂದೆನಿಸುವಷ್ಟು ಈ ಐದಾರು ವರ್ಷಗಳನ್ನು ಹೀಗೆಯೇ ಕಳೆದುಬಿಟ್ಟಿದ್ದೆ. ಉತ್ತಮವಾದ ಅಂಶವೆಂದರೆ ಅನಿಸಿದ್ದೆಲ್ಲವನ್ನೂ ಬರೆದುಬಿಡುವುದು ಒಂದು ಖಯಾಲಿಯಾಗಿ ಜೀವನಕ್ಕೊಂದು ಹೊಸ ಹುರುಪನ್ನು ಕಂಡುಕೊಂಡಿದ್ದೆ. ಈ ಅಕ್ಷರ ದಾರಿ ಕಾಣಿಸಿದ ಆ ಎಲ್ಲಾ ಸ್ನೇಹಿತರನ್ನೂ ನಾನು ಎಂದಿಗೂ ನೆನೆಯುವೆನು. ಹೀಗಿರುವಾಗ ನನ್ನ ಬಾಲ್ಯ ಸ್ನೇಹಿತೆಯೊಬ್ಬಳು ಕಳೆದ ತಿಂಗಳು ಜುಲೈನ ಒಂದು ದಿನ ಸಂಜೆ ಕರೆ ಮಾಡಿ, ''ಒಂದು ದಿನದ ಟ್ರಿಪ್ ಕಣೆ, ನಾವು ನಮ್ಮ … Read more
ತುಪ್ಪದ ರುಚಿ ನಂತರವೂ ಸಾಲ ಮಾಡಲೇಬೇಕಾ?: ಅಮರ್ ದೀಪ್ ಪಿ.ಎಸ್.
ಡಾ. ಬಿ. ಆರ್. ಅಂಬೇಡ್ಕರ್ ಅವರು ಹೇಳಿದ್ದರೆನ್ನಲಾದ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಒಂದು ಘಟನೆ. ದಲಿತ ಸಮುದಾಯದವರು ಸಾಮೂಹಿಕ ಭೋಜನದಲ್ಲಿ ತುಪ್ಪವನ್ನು ಬಡಿಸಿ, ಊಟ ಮಾಡುವ ವೇಳೆ ಮೇಲ್ವರ್ಗದ ಜನರು ಅಡುಗೆ ಪಾದಾರ್ಥಗಳನ್ನು ಚೆಲ್ಲಾಪಿಲ್ಲಿ ಮಾಡಿ ಊಟ ಮಾಡುತ್ತಾ ಕುಳಿತ ಜನರನ್ನು ಹಿಗ್ಗಾಮುಗ್ಗಾ ಥಳಿಸಿದ್ದರಂತೆ. ಕಾರಣ, ಆ ವರ್ಗದ ಜನರು ತುಪ್ಪ ತಿನ್ನಬಾರದು. ತಿಂದದ್ದು ಮೇಲ್ವರ್ಗದ ಜನಗಳಿಗೆ ಮಾಡಿದ ಅಪಮಾನವಂತೆ. ಇಂಥ ಪಿಡುಗುಗಳನ್ನು ಸಾಕ್ಷರತೆ ಸಾರುವ ಮೂಲಕ ಮಾತ್ರ ತೊಡಗಿಸಲು ಸಾಧ್ಯವೆಂದರಿತು ಡಾ. ಬಿ. ಆರ್. ಅಂಬೇಡ್ಕರ್ … Read more
ನಾಲ್ವರ ಕವನಗಳು: ಜಾನ್ ಸುಂಟಿಕೊಪ್ಪ, ಪರಶು ರಾಮ್, ಮುರಳಿ ತರೀಕೆರೆ, ಪವಿತ್ರ ಆಚಾರ್ಯ
ಮೂಲ ನನ್ನ ಬಯಕೆಗಳ ಮೂಲ ಈ ಎದೆಗೂಡಾಗಿದ್ದರೆ ತುರ್ತಾಗಿ ಎದೆಗೂಡನು ಕೆಡವಿ ಬಿಡುವುದು ಲೇಸು ಇಲ್ಲವಾದರೆ – ಈ ದೇಹ ಪಾಳು ಬಿದ್ದೀತು ,,. ನನ್ನ ಬಯಕೆಗಳ ಮೂಲ ಈ ನೆತ್ತರಾದರೆ ಒಮ್ಮೆ ಎಲ್ಲವ ಬತ್ತಿಸುವುದು ಲೇಸು ಇಲ್ಲವಾದರೆ – ಮೈ ನೀಲಿಗಟ್ಟೀತು ,,, ನನ್ನ ಬಯಕೆಗಳ ಮೂಲ ಈ ಉಸಿರಾದರೆ ಒಮ್ಮೆ ಸತ್ತುಬಿಡುವುದು ಲೇಸು ಇಲ್ಲವಾದರೆ – ಉಸಿರಿಗೆ ಉಸಿರು ಸೇರಿ ಊರು ಕೆಟ್ಟೀತು ,,, ನನ್ನ ಬಯಕೆಗಳ ಮೂಲ ಈ … Read more
ಅಣ್ಣಾ ಎಂಬ ಕೂಗಲಿ ಕರಗಿಹೋಗುವ ಮುನ್ನ: ಪ್ರಶಸ್ತಿ ಅಂಕಣ
ಪ್ರತೀ ಪದಕ್ಕೂ ತನ್ನದೇ ಆದೊಂದು ನೆನಪ ಬುತ್ತಿಯಿರುತ್ತಾ ಅಂತ. ಕೆಲವದ್ದು ನಲಿವ ನರ್ತನವಾದರೆ ಕೆಲವದ್ದು ನೋವ ಮೌನ ಗಾನ. ಅಕ್ಕ ಅನ್ನೋ ಎರಡಕ್ಷರದ ಮಾಧುರ್ಯ, ಗೆಳತಿ ಅನ್ನೋ ಮೂರಕ್ಷರದ ನವಿರು ಭಾವಗಳು, ಅಮ್ಮಾ ಅನ್ನೋ ಮಮತೆ, ಅಪ್ಪ ಅನ್ನೋ ಗೌರವ, ಹೆಮ್ಮೆ .. ಹೀಗೆ ಪ್ರತೀ ಪದವೂ ತಮ್ಮದೇ ಆದೊಂದು ಹೊಸಲೋಕಕ್ಕೆ ಕೊಂಡೊಯ್ಯುವಂತೆ. ಸ್ನೇಹ ಎಂಬ ಪದದ್ದೆಂತೂ ನೆನಪುಗಳ ಬುತ್ತಿಯಲ್ಲ. ಅದೊಂದು ಜಾತ್ರೆ. ತಿರುಗಿದಷ್ಟೂ ಮುಗಿಯದಷ್ಟು, ನೋಡಿದಷ್ಟೂ ದಣಿಯದಷ್ಟು , ಹೊಸ ಹೊಸ ದಿಕ್ಕಲ್ಲಿ ಹೊಸ ಹೊಸ … Read more
ಐ.ಲವ್ ಯೂ ಅಪ್ಪ: ಪದ್ಮಾ ಭಟ್, ಇಡಗುಂದಿ.
ನೀನ್ಯಾಕೆ ನನ್ನನ್ನು ಇಷ್ಟು ಪ್ರೀತಿಸ್ತೀಯಾ.. ನೀ ನನಗಾಗಿ ಮಾಡೋ ಒಂದೊಂದು ಪ್ರೀತಿಗೂ, ತ್ಯಾಗಕ್ಕೂ, ನಿಸ್ವಾರ್ಥದ ಮನಸಿಗೊಮ್ಮೆ ಹೀಗೆ ಕೇಳಿ ಬಿಡೋಣವೆಂದೆನಿಸುತ್ತದೆ.. ನನ್ನಗೊಂದಲ ಮನಸ್ಸಿಗೆ ನೀನು ಸಂತೈಸಿದ ದಿನಗಳು ಅದೆಷ್ಟೋ.. ನನ್ನ ಖುಷಿಯಲ್ಲಿಯೇ ನಿನ್ನ ಖುಷಿಯನ್ನು ಕಂಡ ಸಮಯಕ್ಕಂತೂ ಬಹುಶಃ ಲೆಕ್ಕವೇ ಇರಲಿಕ್ಕಿಲ್ಲ..ನಾ ಸೋತಾಗ ನನ್ನ ಕಣ್ಣೀರಲ್ಲಿಯೇ, ಹೊಸ ಭರವಸೆಯನ್ನು ಹುಟ್ಟಿಸಿದವನು ನೀನು..ಯಾವುದೇ ಒಳ್ಳೆಯ ಕೆಲಸ ಮಾಡಲಿ ಅದಕ್ಕೆಲ್ಲ ಗಟ್ಟಿಯಾದ ಸಪೋರ್ಟ್ ಕೊಡುತ್ತಾ ಬಂದಿದ್ದೀಯ..ಮಗಳೇ ಚನ್ನಾಗಿ ಓದು ಎಂಬ ಮಾತನ್ನು ನನ್ನ ಕಿವಿಯಲ್ಲಿ ಎಂದೂ ಗುನುಗುನಿಸುತ್ತಿರುವಷ್ಟು ಬಾರಿ ನೀ … Read more
ಕೃತಕ ಮಾಂಸ-ಎಲೆ ಮತ್ತು ವಿಶ್ವಬ್ಯಾಂಕ್ ಎಂಬ ವಿಷಜಾಲ: ಅಖಿಲೇಶ್ ಚಿಪ್ಪಳಿ ಅಂಕಣ
ಮೊನ್ನೆ ಅಂದರೆ ಅಗಸ್ಟ್ ೩ ೨೦೧೪ರಂದು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ ನೆರೆ ದೇಶವಾದ ನೇಪಾಳಕ್ಕೆ ಭೇಟಿ ನೀಡಿದ್ದರು. ಕಳೆದ ೧೭ ವರ್ಷಗಳಿಂದ ಯಾವುದೇ ಭಾರತದ ಪ್ರಧಾನಿ ಅಲ್ಲಿಗೆ ಭೇಟಿ ನೀಡಿರಲಿಲ್ಲ. ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯಕ್ಕೆ ರುದ್ರಾಕ್ಷಿ ಸರ ತೊಟ್ಟು ಕೊಂಡು ಭೇಟಿ ನೀಡಿದ ಸಮಯದಲ್ಲೇ ಇತ್ತ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ರುದ್ರಾಕ್ಷಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ವರದಿ ಮಾಡಿತ್ತು. ನೆರೆಯ ಚೀನಾದ ಮಂದಿ ಕಾರಿನ ಸೀಟು ಕವರ್‌ಗಳಿಗೆ ರುದ್ರಾಕ್ಷಿಯನ್ನು ಬಳಸುತ್ತಿದೆ ಎಂದು ಹೇಳಿತ್ತು. ಇದೇ … Read more
ಸಾಮಾನ್ಯ ಜ್ಞಾನ (ವಾರ 40): ಮಹಾಂತೇಶ್ ಯರಗಟ್ಟಿ
ಪ್ರಶ್ನೆಗಳು ೧. ಗುಜರಾತಿ ಲೇಖಕ ಪನ್ನಾಲಾಲ್ ಪಟೇಲವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ? ೨. ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯ ಕರ್ತೃ ಯಾರು? ೩. ಮೀರಾಬಾಯಿ ಯಾವ ಸಂತತಿಯ ರಾಣಿ? ೪. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ ಯಾವುದು? ೫. ಮೇಘಾಲಯ ರಾಜ್ಯದ ಪ್ರಾದೇಶಿಕ ಭಾಷೆ ಯಾವುದು? ೬. ಕಾವೇರಿ ನದಿ ಸೃಷ್ಟಿಸಿರುವ ಎರಡು ಪ್ರಮುಖ ಜಲಪಾತಗಳು ಯಾವುವು? ೭. ರಕ್ಕಸತಂಗಡಿಯ ಯುದ್ಧ ನಡೆದ ವರ್ಷ ಯಾವುದು? ೮. ಮೂರು ಹಂತದ ಪಂಚಾಯತ್ … Read more
ಬಾಡಿಗೆ ಮನೆಗಾಗಿ ಬಾಡಿದ ಮನಗಳು….: ಸಂತೋಷ ಗುಡ್ಡಿಯಂಗಡಿ
೧೯೧೮ರಲ್ಲಿ ನಾನು ಭಾರತಕ್ಕೆ ಮರಳಿ ಬಂದೆ. ನಾನು ಬರೋಡಾ ರಾಜ್ಯದ ಹಣಕಾಸಿನ ಸಹಾಯದಿಂದ ಉಚ್ಛ ಶಿಕ್ಷಣ ಪಡೆದವನಾದ್ದರಿಂದ ಒಪ್ಪಂದಕ್ಕೆ ಅನುಗುಣವಾಗಿ ಆ ರಾಜ್ಯಕ್ಕೆ ನನ್ನ ಸೇವೆಯನ್ನು ಸಲ್ಲಿಸಬೇಕಾಗಿತ್ತು. ಹೀಗಾಗಿ ಭಾರತಕ್ಕೆ ಮರಳಿದ ಕೂಡಲೇ ನೇರವಾಗಿ ಬರೋಡಾಕ್ಕೆ ಬಂದೆ. ಯುರೋಪ್ ಮತ್ತು ಅಮೆರಿಕೆಯಲ್ಲಿನ ಐದು ವರುಷಗಳ ವಾಸ್ತವ್ಯವು ನಾನು ಅಸ್ಪೃಶ್ಯನೆಂಬ ಪ್ರಜ್ಞೆಯನ್ನು ಸಂಪೂರ್ಣವಾಗಿ ಅಳಿಸಿಹಾಕಿತ್ತು. ಬರೋಡಾದಲ್ಲಿ ’ವಿಶಿ’ ಎಂದು ಕರೆದುಕೊಳ್ಳುವ ಹಿಂದೂ ಹೋಟೆಲ್ಲುಗಳು ಇದ್ದದ್ದು ನನಗೆ ತಿಳಿದಿದ್ದವು. ಅವು ನನಗೆ ಪ್ರವೇಶ ನೀಡಲಾರವು. ಅವುಗಳಲ್ಲಿ ಪ್ರವೇಶಿಸಲು ಇದ್ದ ಒಂದೇ … Read more
ತಾತನ ಗೋರಿ ಮತ್ತು ನೆನಪುಗಳು: ಹೃದಯಶಿವ ಅಂಕಣ
ದಟ್ಟ ಮೌನ ಕವಿದಿದೆ. ತಾತನ ಗೋರಿಯ ಪಕ್ಕದಲ್ಲಿ ಕುಳಿತು ಸುತ್ತಲೂ ದಿಟ್ಟಿಸಿದರೆ ಹಸಿರು ಹೊಲಗಳು, ಬೆಟ್ಟದ ನೆತ್ತಿಗೆ ಮುತ್ತುಗರೆವ ಕೆಂಪುಮೋಡಗಳು, ಸುತ್ತಣ ಮರಗಳ ಗೂಡುಗಳಲ್ಲಿನ ಹಕ್ಕಿಮರಿಗಳು ಚಿಲಿಪಿಲಿಗುಟ್ಟುತ್ತಿವೆ, ತಣ್ಣನೆ ಸಂಜೆಯ ಹೊತ್ತು. ಸೂರ್ಯ ನನಗೆ ಟಾಟಾ ಹೇಳುತ್ತಿದ್ದಾನೆ ಅನ್ನಿಸುತ್ತಿದೆ. ಆಕಾಶದಗಲ ಹಕ್ಕಿಗಳು ಚಿತ್ರ ಬಿಡಿಸಿದಂತೆ ಹಾರುತ್ತಿವೆ. ಪಡುವಣ ಕೆಂಪಾಗುತ್ತಿದೆ. ತಲೆಯ ಮೇಲೆ ಹುಲ್ಲುಹೊರೆ ಹೊತ್ತ ವ್ಯಕ್ತಿ ಒಂದು ಜೊತೆ ಎತ್ತಿನೊಂದಿಗೆ ಊರ ಕಡೆ ಹೊರಟಿದ್ದಾನೆ. ಒಂದು ಜಿಂಕೆಯೋ, ಸಾರಂಗವೋ ಕಣ್ಣೆದುರೇ ಛಂಗನೆ ಹಾರಿದಂತೆ ಭಾಸ, ತುಸು ದೂರದಲ್ಲೇ … Read more
ಹಬ್ಬ ಯಾವುದಾದರೇನು ಮುಬಾರಕ್ ಒಂದೇ: ಅಮರ್ ದೀಪ್ ಪಿ.ಎಸ್.
ಫೆಬ್ರವರಿ 16, 27, ಏಪ್ರಿಲ್ 24, ಡಿಸೆಂಬರ್ 25, ಆಗಸ್ಟ್ 15, ಜನವರಿ 26, ಹೀಗೆ ಸುಮಾರು ದಿನಗಳು ಒಬ್ಬೊಬ್ಬರಿಗೆ ಒಂದೊಂದು ಮರೆಯಲಾರದ ದಿನವಾಗಿರುತ್ತೆ. ಮದುವೆಯದೋ. ಹುಟ್ಟುಹಬ್ಬದ್ದೋ… ರಾಷ್ಟ್ರೀಯ ಹಬ್ಬ ಅದು ಬಿಡಿ ಎಲ್ಲರಿಗೂ ಹಬ್ಬವೇ. ಒಮ್ಮೊಮ್ಮೆ ಆ ದಿನಗಳಿಗೆ ಅಂಟಿಕೊಂಡು ಒಂದೊಂದು ಹಬ್ಬ, ಹುಣ್ಣಿಮೆ, ಅಮಾವಾಸ್ಯೆ, ಘಟನೆಗಳು ಸೇರಿರುತ್ತವೆ. ಹೆಚ್ಚು ಓದಿರದ ನಮ್ಮವ್ವನ ವಯಸ್ಸಿನವರಿಗೆ "ನನ್ನ ಹುಟ್ಟಿದ ದಿನಾಂಕ ಯಾವ್ದವ್ವ?" ಅಂತೇನಾದ್ರೂ ಕೇಳಿದ್ರೆ, ಗೊತ್ತಿಲ್ಲೆಪ್ಪಾ, ಆದ್ರ ನೀ ಹುಟ್ಟಿದ್ ಎಲ್ಡು ದಿನಕ್ಕೆ ಕಾರ ಹುಣ್ಣಿವಿ ಇತ್ನೋಡೆಪ್ಪ. … Read more
ಗಂಧದ ಘಮ..: ಅನಿತಾ ನರೇಶ್ ಮಂಚಿ
ತಲೆಬರಹ ನೋಡಿ ಇದರಲ್ಲೇನಿದೆ ವಿಶೇಷ, ’ತನ್ನನ್ನೇ ತೇದು ಪರಿಮಳವನ್ನು ಲೋಕಕ್ಕೆ ಕೊಡುವ ತ್ಯಾಗಜೀವಿ ತಾನೇ ಗಂಧ’ ಅಂತೀರಲ್ವಾ..ಹೌದು ಸ್ವಾಮೀ ನಾನು ಅದನ್ನು ಅಲ್ಲ ಅನ್ನಲಿಲ್ಲ.. ಆದ್ರೆ ಗಂಧ ತನ್ನನ್ನು ತೇಯಬೇಕಾದರೆ ಎಷ್ಟು ಜೀವ ತೇಯುತ್ತದೆ ಅಂತಾದ್ರು ನಿಮಗೆ ಗೊತ್ತಾ.. ಅದೊಂದು ದೊಡ್ಡ ಕಥೆ.. ಹೇಳ್ತೀನಿ ಕೇಳಿ.. ನನ್ನಣ್ಣನ ಮನೆ ಅಂದರೆ ಅದೊಂದು ಸಸ್ಯ ಭಂಡಾರ. ನಮ್ಮೂರಾದ ಕರಾವಳಿಯಲ್ಲಿ ಬೆಳೆಯದ ಹಲವು ಸಸ್ಯಸಂಕುಲಗಳು ಮಲೆನಾಡಿನ ಅವನ ತೋಟದಲ್ಲಿ ನಳನಳಿಸುತ್ತಿರುತ್ತದೆ. ನಾನೋ ’ಕಂಡದ್ದೆಲ್ಲಾ ಬೇಕು…… ಭಟ್ಟನಿಗೆ’ ಅನ್ನೋ ಜಾತಿ. … Read more
ಸಂಬಂಧಗಳ ಸುಳಿಯಲ್ಲಿ ’ಬೇರಿಲ್ಲದವರು’: ಹಿಪ್ಪರಗಿ ಸಿದ್ಧರಾಮ
ನಗರದಲ್ಲೊಂದು ಚಿಕ್ಕ ಮತ್ತು ಚೊಕ್ಕದಾದ ಕುಟುಂಬ. ಆಧುನಿಕ ಕಾಲದ ಸಕಲೆಂಟು-ಸೌಕರ್ಯಗಳು ಇರುವ ಆ ಕುಟುಂಬದ ಯಜಮಾನ ಸರಕಾರದ ಇಲಾಖೆಯೊಂದರಲ್ಲಿ ಇಂಜನೀಯರ್ ಮತ್ತು ಆತನ ಪತ್ನಿಯೂ ಸಹ ಆಧುನಿಕ ಕಾಲದ ಸುಶಿಕ್ಷಿತೆ ಮತ್ತು ಸರಕಾರಿ ಶಾಲೆಯ ಶಿಕ್ಷಕಿಯಾಗಿ ನೌಕರಿ ಮಾಡುತ್ತಿದ್ದಾಳೆ. ಇಂತಿಪ್ಪ ಕೈತುಂಬ ಸಂಬಳದ ಉದ್ಯೋಗಸ್ಥ ದಂಪತಿಗಳಿಗೆ ಹದಿಹರೆಯದ ಮಗ ಮತ್ತು ಮಗಳು ಇದ್ದಾರೆ. ಮನೆಯಲ್ಲಿಯೂ ಎಲ್ಲವೂ ಇದೆ ಆದರೆ ಶಾಂತಿ-ಸಮಾಧಾನ-ಹೊಂದಾಣಿಕೆ-ಅರ್ಥ ಮಾಡಿಕೊಳ್ಳುವಂತಹ ಸಾಮಾಜಿಕ ಅಂಶಗಳು ಅವಶ್ಯವಾಗಿ ಇರಬೇಕಾದುದೇ ಇಲ್ಲ. ಇರುವ ನಾಲ್ವರಿಗೂ ತಮ್ಮದೇ ಆದ ಅವಸರ, ಉದ್ವೇಗ, … Read more
ಸುದ್ದಿಯಾಗದ ಸುದ್ದಿಗಳ ಹಿಂದೆ: ಪ್ರಶಸ್ತಿ
ಪ್ರಚಾರ ಅನ್ನೋದು ಯಾರಿಗೆ ಬೇಡ ಹೇಳಿ ? ಯಾರಿಗೂ ಒಂದು ಜೊತೆ ಬಟ್ಟೆ ಕೊಟ್ಟಿದ್ರಿಂದ ಹಿಡಿದು ಮತ್ಯಾರಿಗೋ ಐದು ರೂಪಾಯಿ ದಾನ ಮಾಡಿದವರೆಗೆ ನಿತ್ಯದ ತಿಂದುಂಡು ಮಲಗೋದ್ರ ಹೊರತಾಗಿ ಮಾಡಿದ ಒಳ್ಳೇ ಕೆಲ್ಸಗಳನ್ನ ನಾಲ್ಕು ಜನರೊಂದಿಗೆ ಹಂಚಿಕೋಬೇಕು ಅನ್ನೋ ಹಂಬಲ ನಮಗೆ. ಅದನ್ನ ಮಾಡಿದೆ, ಇದನ್ನ ಮಾಡಿದೆ ಹೇಳಿಕೊಳ್ಳೋ ಮೂಲಕ ಬೇರೆಯವ್ರ ದೃಷ್ಟಿಯಲ್ಲೊಂದು ಒಳ್ಳೇ ಸ್ಥಾನ ಪಡೆಯೋದು ಸಾಮಾನ್ಯರ ಬಯಕೆಯಾದ್ರೆ ಏನೆಲ್ಲಾ ಮಾಡ್ತಿದ್ರೂ ಯಾರ ಕಣ್ಣಿಗೂ ಬೀಳದೇ ತಣ್ಣಗಿದ್ದು ಬಿಡೋ ಜನಗಳದ್ದು ಮತ್ತೊಂದು ಗುಂಪು. ತಮ್ಮ ಜೀವನವನ್ನೇ … Read more
ಮನುಕುಲದ ಅವಸಾನ ಹತ್ತಿರವಾಗುತ್ತಿದೆಯೇ?: ಅಖಿಲೇಶ್ ಚಿಪ್ಪಳಿ ಅಂಕಣ
ಭೂಮಿಯ ಮೇಲೆ ಒಂದು ತರಹದ ವೈರಸ್ ಸೃಷ್ಟಿಯಾಗಿದೆ. ಈ ವೈರಸ್‌ಗಳು ಮನುಷ್ಯನ ದೇಹವನ್ನು ಹೊಕ್ಕು ಅವಾಂತರ ಮಾಡಿ ಕ್ರಮೇಣ ಸಾಯಿಸುತ್ತವೆ. ಸತ್ತ ಹೆಣಗಳು ಮತ್ತೆ ಎದ್ದು ಕೂತು ದೆವ್ವಗಳಾಗಿ ಪರಿವರ್ತನೆ ಹೊಂದಿ ಉಳಿದ ಮನುಷ್ಯರನ್ನು ಕಾಡುತ್ತವೆ. ಈ ತರಹದ ಕಥಾವಸ್ತುವನ್ನು ಹರವಿಕೊಂಡು ನಿರ್ಮಿಸಲಾದ ಅಮೇರಿಕಾದ ಒಂದು ಪ್ರಸಿದ್ಧ ಧಾರಾವಾಹಿಯ ಹೆಸರು ದಿ ವಾಕಿಂಗ್ ಡೆಡ್. ಈ ಧಾರಾವಾಹಿಯು ಅತ್ಯಂತ ಪ್ರಸಿದ್ಧಿಯನ್ನು ಪಡೆದು ದಾಖಲೆ ನಿರ್ಮಿಸಿದೆ. ಕಾಲ್ಪನಿಕವಾಗಿ ಸೃಷ್ಟಿಸಲಾದ ಈ ಘಟನೆಗಳು ನಿಜವಾಗಲೂ ನಡೆಯುತ್ತವೆಯೇ? ಮನುಕುಲದ ಅವಸಾನ ಸನಿಹವಾಗುತ್ತಿದೆಯೇ? … Read more
ಪಂಚಮಿ ಹಬ್ಬಾ ಉಳದಾವ ದಿನ ನಾಕ, ಅಣ್ಣಾ ಬರಲೇಯಿಲ್ಲಾ ಕರಿಯಾಕ: ಸುಮನ್ ದೇಸಾಯಿ
ಶ್ರಾವಣ ಮಾಸಾ ಬಂತಂದ್ರ ಅತ್ತಿ ಮನ್ಯಾಗಿನ ಹೆಣ್ಣಮಕ್ಕಳಿಗೆ ಎನೊ ಒಂಥರಾ ಹುರಪಿರತದ,ಪಂಚಮಿ ಹಬ್ಬಕ್ಕ ತವರುಮನಿಗೆ ಹೋಗೊ ಸಂಭ್ರಮದಾಗ ಭಾಳ ಖುಷಿಲೆ ತನ್ನ ಕರಿಲಿಕ್ಕೆ ಬರೊ ಅಣ್ಣ ಅಥವ ತಮ್ಮನ ದಾರಿಕಾಯಕೊತ, "ಪಂಚಮಿ ಹಬ್ಬಾ ಉಳದಾವ ದಿನ ನಾಕ,,, ಅಣ್ಣಾ ಬರಲೇಯಿಲ್ಲಾ ಕರಿಯಾಕ……….." ಅಂತ ತನ್ನೊಳಗ ತಾನ ಹಾಡು ಹಾಡಕೊತ,ತವರುಮನ್ಯಾಗಿನ್ ಪಂಚಮಿ ಹಬ್ಬದ ಸಂಭ್ರಮನ ತನ್ನ ಗೆಳತ್ಯಾರಿಗೆ ಹೆಳ್ಕೊತಿರತಾಳ." "ನನ್ನ ತವರಲ್ಲಿ ಪಂಚಮಿ ಭಾರಿ,. ಮಣ ತೂಕದ ಬೆಲ್ಲಾ ಕೊಬ್ಬರಿ,. ಅಳ್ಳು ಅವಲಕ್ಕಿ, ತಂಬಿಟ್ಟು ಸೂರಿ,,. … Read more
ಮೂರು ಕವಿತೆಗಳು: ಕಾವ್ಯ ಪ್ರಿಯ, ಬಸವರಾಜ್ ಕದಮ್, ರಾಣಿ ಪಿ.ವಿ.
ಬ್ಯಾಚುಲರ್ ಫುಡ್ಸ್.. ಬೆಳಗಾಗುತ್ತಲೆ ಎದ್ದೊಡನೆ ಏನಾಗುವುದು ನನಗೇಕೊ ಮೊದಲು ಹಸಿವಾಗುವುದು ಊರಿನಲ್ಲಿದ್ದಾಗ ತಿ೦ಡಿ ತಯಾರಾಗುತ್ತಿದ್ವು ಹೊಟ್ಟೆ ತು೦ಬ ತಿ೦ದು ಅಡ್ಡಾಡುತ್ತಿದ್ದೆವು… ಇ೦ದಿನ ಪರಿಸ್ತಿತಿ ಬದಲಾಗಿಹುದು ರಾತ್ರಿ ಮನೆಗೆ ಬ೦ದರೂ ಕೇಳರಾರಿಹರು ಊಟ ತಿ೦ಡಿ ಉಪಚಾರದ ಮಾತೆಲ್ಲಿಹುದು ಪಿಜಾ ಅ೦ಗಡಿಯವನಿಗೆ ವ್ಯಾಪಾರ ಜೋರು… ಇದಕ್ಕೆ ಬೇಕೊ೦ದು ಶಾಶ್ವತ ಪರಿವಾರವು ಯೊಚಿಸಿ ನೊಡಿದೆ ಎನಿಹುದು ದಾರಿಯೂ ಅಡಿಗೆ ಮಾಡುವುದು ನನಗೆ ಸುಲಭವು ಲೇಟಾದರೂ ಹಚ್ಚುವೆನು ಒಲೆಯ ದಿನವೂ…. ಬೆಳಗಿನ ತಿ೦ಡಿಗೆ ಕಾರ್ನ್ ಫ್ಲೇಕ್ಸು ಮಧ್ಯಾನ ಕ್ಯಾ೦ಟೀನ ಮಿನಿ ಮೀಲ್ಸು ಸ೦ಜೆ … Read more
ಸಾಮಾನ್ಯ ಜ್ಞಾನ (ವಾರ 39): ಮಹಾಂತೇಶ್ ಯರಗಟ್ಟಿ
೧) ೨೦೧೨ ರಲ್ಲಿ ಎಚ್.ಎಸ್ ಶಿವಪ್ರಕಾಶ ಅವರ ಯಾವ ಕೃತಿಗೆ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ? ೨) ಸತ್ಯಕಾಮ ಇದು ಯಾರ ಕಾವ್ಯನಾಮ ? ೩) ಬಾ೦ಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು ? ೪) ಕೃಷ್ಣನದಿಯ ಉಗಮಸ್ಥಳ ಯಾವುದು ? ೫) ಮಣ್ಣಿನಲ್ಲಿ ಎರೆಹುಳುವಿನ ಮಹತ್ವವನ್ನು ಕ೦ಡುಹಿಡಿದವರು ಯಾರು ? ೬) ಐಎಸ್‌ಐ (ಇ೦ಡಿಯನ್ ಸ್ಟಾಂಡರ್ಡ್ ಇನ್ಸ್ಟಿಟ್ಯೂಷನ್) ಆಸ್ತಿತ್ವಕ್ಕೆ ಬಂದವರ್ಷ ಯಾವುದು? ೭) ನೀರಿನಲ್ಲಿ ಆಮ್ಲಜನಕವವನ್ನು ಹೀರಿಕೊಳ್ಳಲು ಮೀನಿಗೆ ಸಹಾಯ ಮಾಡುವ ಅ೦ಗ ಯಾವುದು ? … Read more
ಪ್ರಕಟಣೆ
ಕನ್ನಡ ನಾಡು ನುಡಿಯ ಸೇವೆ ಮಾಡುವ ನಿಟ್ಟಿನಲ್ಲಿ ಸ್ವಯಂ ಇಚ್ಚೆಯಿಂದ ಕನ್ನಡ ನಾಡು ನುಡಿಯ ಬಗ್ಗೆ ಕವನ ಸಂಕಲನವೊಂದು ಹೊರತರಲು ಯೋಚಿಸಲಾಗಿದೆ. ಅದಕ್ಕಾಗಿ ತಾವು ಕನ್ನಡ ನಾಡು, ನುಡಿ, ಕನ್ನಡಕ್ಕಾಗಿ ದುಡಿದ ಮಹಿಳೆ/ಪುರುಷ, ಕನ್ನಡ ನೆಲ, ಜಲ, ಕನ್ನಡದ ವೈವಿಧ್ಯತೆ, ಕರ್ನಾಟಕದ ಪ್ರಾಕೃತಿಕ ಸೌಂದರ್ಯ ಇತ್ಯಾದಿ ವಿಷಯಗಳ ಕುರಿತು ತಮ್ಮ ಇತ್ತೀಚಿನ ಎರಡು ಕವನಗಳನ್ನು ಆಹ್ವಾನಿಸಲಾಗುತ್ತಿದೆ. ಆಯ್ದ ಕವಿಗಳಿಗೆ ಸನ್ಮಾನಿಸಲಾಗುವುದು. ಪುಸ್ತಕ ರೂಪದಲ್ಲಿ ಕವನಗಳನ್ನು ಪ್ರಕಟಿಸಲಾಗುವುದು. ಕವನ ಕಳುಹಿಸಲು ಕೊನೆಯ ದಿನ ಆಗಷ್ಟ್ ೨೩, ಕವನ ಸ್ವತಂತ್ರ … Read more
ಕಗ್ಗಲಿಪುರದಲ್ಲೊಂದು ಕನ್ನಡ ಸೇನೆ: ಹೃದಯಶಿವ ಅಂಕಣ
ಕಗ್ಗಲಿಪುರದಲ್ಲಿ 'ಕರುನಾಡ ಗಜಕೇಸರಿ ಸೇನೆ'ಯ ಉದ್ಘಾಟನೆ ಇವತ್ತಷ್ಟೇ (ಜುಲೈ 27) ನಡೆಯಿತು. ನನಗೆ ಅಲ್ಲಲ್ಲಿ ಆಗಾಗ ಕಂಡಂಥ ಕೆಲವು ಮುಖಗಳು ಅಲ್ಲಿ ಎದುರಾದವು. ನನಗೆ ಇದ್ದಕ್ಕಿದ್ದಂತೆಯೇ ಒಂದಿಷ್ಟು ನೆನಪುಗಳು ಆವರಿಸಿದವು. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ಅವ್ವನ ಅವ್ವ ಹಾಗೂ ಅವ್ವನ ಅಣ್ಣನೊಂದಿಗೆ ಮೊದಲಬಾರಿ ಬೆಂಗಳೂರಿಗೆ ಬರುವಾಗ ಕಗ್ಗಲಿಪುರದ ಮಾರ್ಗವಾಗಿಯೇ ಹಾದುಬಂದಿದ್ದೆ; ಗವಿಪುರದಲ್ಲಿ ನಡೆದ ಸಂಬಂಧಿಕರೆನ್ನಿಸಿಕೊಳ್ಳುವ ಯಾರದೋ ಮದುವೆಗೆ; ಈಗ ಅದೆಲ್ಲ ಅದೇಕೋ ನೆನಪಾಯಿತು. ಅಲ್ಲೇ ಇದ್ದ ಇಬ್ಬರು ಹಳ್ಳಿ ಯುವಕರಲ್ಲಿ ಒಬ್ಬ, "ಪಂಪ್ ಸನ್ಗ್ ಬಂದ್ರಾ ಸಾ?" … Read more
ಹೆಣ್ಣುಮಕ್ಕಳು ನಿರ್ಭಯರಾಗಿ ಓಡಾಡುವ ಕಾಲ ಮುಗಿದೇ ಹೋಯಿತೇ?: ಕೆ. ಉಷಾ ಪಿ. ರೈ
ನಿರ್ಭಯಳ ಭೀಕರ ಬಲತ್ಕಾರ ನಡೆದ ನಂತರ ’ಬಲಾತ್ಕಾರ’ ಎನ್ನುವ ಪದ ಅಂಕೆ ಸಂಖ್ಯೆಗಳ ಮಿತಿಯನ್ನೂ ಮೀರಿ ಯಾವುದೇ ಸಂಕೋಚವಿಲ್ಲದೆ ಅದೂ ಒಂದು ದಿನ ನಿತ್ಯದ ಬಳಕೆಯ ಶಬ್ಧದಂತೆ ಕಿವಿಗೆ ಬೀಳುತ್ತಲೇ ಇರುತ್ತದೆ. ಇದೇನೂ ಚರಿತ್ರೆಯಲ್ಲೇ ಮೊದಲ ’ಬಲತ್ಕಾರ’ದ ಕೇಸ್ ಅಲ್ಲ. ಆದರೆ ಇಡೀ ದೇಶದ ಜನರು ಒಗ್ಗಟ್ಟಾಗಿ ಪ್ರತಿಭಟಿಸಿದ್ದು ಈ ಘಟನೆಯನ್ನು. ಹಾಗಾಗಿ ಈ ಕೇಸಿಗೆ ಬಲ ಬಂದಿತ್ತು. ಇಡೀ ದೇಶದ ಜನರ ಪ್ರತಿಭಟನೆಯ ನಂತರವೂ ಬಲತ್ಕಾರಗಳು ನಿಲ್ಲಲಿಲ್ಲ. ಅದರ ನಂತರ ಮುಂಬಯಿಯಲ್ಲಿ ನಡೆದ ಶಕ್ತಿಮಿಲ್ ಬಲಾತ್ಕಾರದ … Read more
ದೀಪದ ದೆವ್ವ (ದೆವ್ವದ ಕಥೆಗಳು – ಭಾಗ ೩):ಗುರುಪ್ರಸಾದ್ ಕುರ್ತಕೋಟಿ
(ಇದು ಸಂಗೀತಾ ಕೇಶವ ಅವರಿಗಾದ ಅನುಭವದ ಎಳೆಯ ಮೇಲೆ ಹೆಣೆದ ಕತೆ) ನಾನಾಗ ಪೀಯುಸಿ ಮೊದಲ ವರ್ಷದಲ್ಲಿ ಓದುತ್ತಿದ್ದೆ. ನಾವಿದ್ದದ್ದು ನನ್ನ ಊರಾದ ಚಿಕ್ಕೋಡಿಯಲ್ಲಿ. ಅದು ಬೆಳಗಾವಿ ಜಿಲ್ಲೆಯಲ್ಲಿದೆ. ಹವಾಮಾನದ ವಿಷಯದಲ್ಲಿ ಅದಕ್ಕೂ ಬೆಳಗಾವಿಗೂ ಏನೂ ವ್ಯತ್ಯಾಸವಿರಲಿಲ್ಲ. ಅದು ಆಗಿನ ಸಂಗತಿ. ಈಗ ಬಿಡಿ ಬೆಳಗಾವಿಯ ಹವಾಮಾನವೂ ಪ್ರಕೃತಿ ವೈಪರಿತ್ಯಕ್ಕೆ ಬಲಿಯಾಗಿ ಹದಗೆಟ್ಟಿದೆ. ಆಗೆಲ್ಲಾ ಬೆಳಗಾವಿಯಲ್ಲಿ ಮಳೆ ಯಾವ ಪರಿ ಸುರಿಯುತ್ತಿತ್ತೆಂದರೆ… ಸುರಿಯುತ್ತಿತ್ತು ಅಷ್ಟೆ! ಒಮ್ಮೆ ಶುರುವಾಯಿತೆಂದರೆ ನಿಲ್ಲುವ ಮಾತೆ ಇರಲಿಲ್ಲ. ಚಿಕ್ಕೋಡಿಯ ಪರಿಸ್ಥಿತಿಯೂ ಹೆಚ್ಚು ಕಡಿಮೆ … Read more
ಒಲವೇ ಬಾಡಿಗೆ ಮನೆಯ ಲೆಕ್ಕಾಚಾರ:ಅಮರದೀಪ್ ಅಂಕಣ
ಹೊರಗೆ ಜೋರು ಮಳೆ. ಮನೆ ತುಂಬಾ ತಟಕ್ ತಟಕ್ ಎಂದು ಸೋರಿದ ಮಳೆ ಹನಿಗಳು ಹೊರಡಿಸುವ ಪ್ಯಾಥೋ ಸಾಂಗಿನ ತುಣುಕು ಸಂಗೀತ. ಮನೆ ಮಾಳಿಗೆಯ ಹೊಗೆ ಗೂಡಿನ ಬಾಯಿಗೆ ತಗಡು ಮುಚ್ಚುವುದನ್ನು ಮರೆತಿದ್ದಳು ಮುದುಕಿ. ಫಕ್ಕನೇ ನೋಡಿ ಮೊಮ್ಮಗನಿಗೆ ಹೇಳಿದಳು. ಹುಡುಗ ಹತ್ತಲೋ ಬೇಡವೋ ಎಂಬಂತೆ ನೋಡಿದ; ಹಣ್ಣಣ್ಣು ಮುದುಕಿ ತನ್ನ ಅಳಿದುಳಿದ ಹಲ್ಲುಗಳನ್ನು ಜೋಪಾನ ಮಾಡಿಟ್ಟು ಕೊಂಡು ದಿನ ದೂಡುವಂತೆ ಗೋಚರಿಸುತ್ತಿದ್ದ ಏಣಿಯ ಪರಿಸ್ಥಿತಿ. ಹಂಗೂ ಹಿಂಗೂ ಸವ್ಕಾಶಿ ಹತ್ತಿ ಮಾಳಿಗೆ ನೋಡಿದರೆ ಏನಿತ್ತು? … Read more