ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 10): ಪ್ರಸಾದ್ ಕೆ.

ಇಲ್ಲಿಯವರೆಗೆ ನ್ಯಾಯಮೂರ್ತಿ ಆರ್ಚಿ ಕ್ಯಾಂಪ್ಬೆಲ್ ರ ವರದಿಯು ಸ್ಕಾರ್-ಬೋರೋ ಸರಣಿ ಅತ್ಯಾಚಾರ ಪ್ರಕರಣಗಳಲ್ಲದೆ ಉಳಿದ ಪ್ರಕರಣಗಳ ಮೇಲೂ ಬೆಳಕು ಚೆಲ್ಲಿ ಉತ್ತಮ ಒಳನೋಟವನ್ನು ಕೊಡುತ್ತದೆ.  ಕಾರ್ಲಾ ಹೊಮೋಲ್ಕಾಳ ತಂಗಿ ಟ್ಯಾಮಿ ಹೊಮೋಲ್ಕಾಳ “ಆಕಸ್ಮಿಕ ಮತ್ತು ಸ್ವಾಭಾವಿಕ'' ಸಾವೆಂದು ತಪ್ಪಾಗಿ ದಾಖಲಾದ ಘಟನೆಯನ್ನು ಉಲ್ಲೇಖಿಸುತ್ತಾ, ಟ್ಯಾಮಿಯ ಎಡಕೆನ್ನೆ, ಮೇಲ್ದುಟಿ ಮತ್ತು ಎಡಭುಜದ ಮೇಲೆ ಕಂಡುಬಂದಿದ್ದ ದಟ್ಟಕೆಂಪುಕಲೆಗಳ ಬಗ್ಗೆ ವರದಿಯು ಒತ್ತಿಹೇಳುತ್ತದೆ. ಹಚ್ಚೆಯಂತೆ ದಟ್ಟವಾಗಿ ಮೂಡಿಬಂದಿದ್ದ ಈ ಅಪರೂಪದ ಕಲೆಗಳನ್ನು ಕಡೆಗಣಿಸುವುದು ಸಾಧ್ಯವೇ ಇರಲಿಲ್ಲ. ಅಸಲಿಗೆ ಆಕೆಯ ಉಸಿರಾಟ ನಿಂತುಹೋದಾಗಲೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಗೋಚರ: ಪ್ರಶಸ್ತಿ

ಏಳ್ಬೇಕು ಅಂತಷ್ಟೊತ್ತಿಗೆ ಏಳ್ಬೇಕು, ಮಲಗ್ಬೇಕು ಅಂದಷ್ಟೊತ್ತಿಗೆ ಮಲಗಿ ಬಿಡ್ಬೇಕು. ಈ ಫೇಸ್ಬುಕ್ಕು,ವಾಟ್ಸಾಪು, ಜೀಮೆಲುಗಳನ್ನೆಲ್ಲ ಡಿಲಿಟ್ ಮಾಡಿ ಎಲ್ಲಾದ್ರೂ ದೂರ ಹೋಗಿ ಬಿಡಬೇಕು ಗುರೂ ಅಂತಿದ್ದವ ಅದರಲ್ಲೇ ಮೂರೊತ್ತೂ ಮುಳುಗಿರುತ್ತಿದ್ದ. ರಾಶಿ ರಾಶಿ ಪುಸ್ತಕಗಳ ಗುಡ್ಡೆ ಹಾಕಿಕೊಂಡವ ಕ್ಲಾಶ್ ಆಫ್ ಕ್ಲಾನ್ಸು, ಫ್ಯೂಚರ್ ಫೈಟಗಳಲ್ಲಿ ಕಳೆದುಹೋಗಿರುತ್ತಿದ್ದ. ಆಟಗಳಲ್ಲಿ ಸಿಗುವ ಕಾಲ್ಪನಿಕ ಕಾಸ ಹಿಂದೆ ಆತನ ಇಂದು ಕಾಣದಷ್ಟು ಕುರುಡನಾಗಿದ್ದವ ಒಮ್ಮೆ ಇದನ್ನೆಲ್ಲಾ ಪಟ್ಟನೆ ಬಿಟ್ಟು ಎಲ್ಲೋ ಮರೆಯಾಗಿಬಿಡುವನೆಂದು ಯಾರೂ ಎಣಿಸಿರಲಿಲ್ಲ. ಬೆಳಗಿಂದ ರಾತ್ರೆಯವರೆಗೂ ಆಫೀಸಲ್ಲೇ ಕೊಳೆಯುತ್ತಾನೆ ಎಂದು ಹೀಗಳೆಯೋ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಮೌನಿ, ಗಿಜಿಗಿಡುವಂತೆ ಜನ ಸುತ್ತಲೆಲ್ಲರಿದ್ದರೂ ನಾ ನನ್ನೊಳು ಮಾತ್ರ ಮೌನಿ, ನನಗೆ ನಾನೇ ಮಿತ್ರ ನಾನೇ ಶತ್ರು ಏರಿಳಿತಗಳಲ್ಲೆಲ್ಲಾ ನನ್ನದು ಒಂದೇ ವೇಗ ಏರಿಗೆ ಕುಗ್ಗೇನು ಇಳಿವಿಗೆ ಹಿಗ್ಗೇನು ಜಾರಿದರೂ ಅಷ್ಟೇ ನೇಪಥ್ಯಕ್ಕೆ ಸರಿದರೂ ಅಷ್ಟೇ,, ಒಂಟಿ ದಾರಿಯಲಿ ನನಗೆ ನಾನೇ ಜಂಟಿ  ಒಬ್ಬೊಬ್ಬನೇ ಮಾತನಾಡಿಕೊಳ್ಳುತ್ತೇನೆ ಅಳುತ್ತೇನೆ, ನಗುತ್ತೇನೆ ಒಮ್ಮಮ್ಮೆ  ದು:ಖದಲಿ ಬಿಕ್ಕಿ ಬಿಕ್ಕಿ ಅಳುತ್ತೇನೆ, ಗೊತ್ತು ! ಈ ಜನರೆಲ್ಲ ನನ್ನ ಹಿಂದೆ ಆಡಿಕೊಳ್ಳುವರೆಂದು, ಹುಚ್ಚುಡುಗನೆಂದು ಲೊಚಗುಟ್ಟುವರೆಂದು, ಹರಿದ ಪ್ಯಾಂಟಿಗೆ ದಾರ ಕಟ್ಟಿ ಗೇಲಿ ಮಾಡುವರೆಂದು, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಉಬ್ಬಿಯ ಸ್ವಗತ……..: ಅಮರ್ ದೀಪ್ ಪಿ.ಎಸ್.

ಗೆಳೆಯ, ಮೇರೆ ಬಾತೋ ಮೇ ತೇರಿ ಫಿಕರ್ ಸದಾ…………………. ಮೇರೆ ಯಾದೋಂ ಮೇ ತೇರಿ ಫಿಕರ್ ಸದಾ………………..   ಖುಷಿಯಾಗಬೇಡ, ನಿನ್ನ ನೆನಸ್ಕೊಂಡು ಈ ಹಾಡು ಗುನುಗುತ್ತಿಲ್ಲ.  ತುಂಬಾ ಹಾಯಾಗಿದ್ದೆ ಕಣೋ ನಾನು, ಸ್ವಾಭಿಮಾನಿ.  ಚಿಕ್ಕಂದಿನಲ್ಲಿ ನನ್ನಿಬ್ಬರು ಗೆಳತಿಯರೊಡನೆ ಹರಟುತ್ತಾ, ನಗುತ್ತಾ ಶಾಲೆಗೆ, ಕಾಲೇಜಿಗೆ ಹೋಗುವುದು ಓದು ಕಲಿಯಲು ಎನ್ನುವುದನ್ನೇ ಮರೆತು ತುಂಬಾ ನಲಿಯುತ್ತಿದ್ದೆ. ಕಾಲೇಜಿನಲ್ಲಿ ಚೂಡಿ ಹಾಕಿದರೆ ವೇಲ್ ಹಾಕದೇ ಹೊರಟರೆ, ಇದ್ದರೂ ಕೊರಳಿಗಷ್ಟೇ ಸುತ್ತಿಕೊಂಡು ತಿರುಗುವುದನ್ನು ನೋಡಿ ಫ್ಯಾಮಿಲಿ ಫ್ರೆಂಡ್ಸ್ ಥರವಿದ್ದ ಹುಡುಗನೊಬ್ಬ ಗದರಿಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

  ನಿಜದನಿ: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ನಾವು ಯಾವುದನ್ನೂ  ಬಲವಂತವಾಗಿ  ಉಳಿಸಲಾಗದು. ಹಾಗೆ ಉಳಿಸಿದರೂ ಬಹಳ ವರ್ಷ ಬದುಕದು. ಯಾವುದನ್ನು ಬಳಸುತ್ತೇವೋ ಅದು ಬಹಳ ವರ್ಷ ಉಳಿಯುತ್ತದೆ ಬೆಳೆಯುತ್ತದೆ. ಬರಿ ಬಾಯಿಯಿಂದ ಕನ್ನಡ ಉಳಿಸಿ ಬೆಳೆಸಿ ಎಂದು ಅಬ್ಬರಿಸಿದ ಮಾತ್ರಕ್ಕೆ ಕನ್ನಡ ಉಳಿಯದು. ಕನ್ನಡ ಬಳಸಿದರೆ ಉಳಿದೀತು, ಪ್ರೀತಿಸಿದರೆ ಬೆಳೆದೀತು. ಇದು ಯಾವುದೇ ಸಂಘ, ಸಂಸ್ಥೆ,  ಒಕ್ಕೂಟಗಳ ಜವಾಬ್ದಾರಿಯಾಗಿರದೆ ಪ್ರತಯೊಬ್ಬ ಕನ್ನಡಿಗನ ಕರ್ತವ್ಯವಾಗಿರುತ್ತದೆ ಕನ್ನಡ ಸುಂದರ ಲಿಪಿಯಿರುವ ಮಧುರ ಭಾಷೆ. ಕನ್ನಡಿಗರನ್ನು, ಕನ್ನಡ ಸಂಸ್ಕೃತಿಯನ್ನು ರೂಪಿಸಿ, ದಾನ, ತ್ಯಾಗ ಉದಾತ್ತ ಗುಣಗಳಿಗೆ ಹೆಸರಾದ ಭಾಷೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎತ್ತರಕ್ಕೆ ಬೆಳೆಯಲು ಜಾಣನೆಂಬ ಅಹಂಗೆ ಪೆಟ್ಟಾಗಲೇ ಬೇಕು..: ನಾಗರಾಜ್. ಮುಕಾರಿ (ಚಿರಾಭಿ)

        ನಾಲ್ಕನೇ ತರಗತಿಯಲ್ಲಿ ಕ್ಲಾಸ್ ಟೀಚರ್ ಆಗಿ ಇದ್ದಿದ್ದು ಒಬ್ಬರೇ ಮಾಸ್ತರು. ಅವರು ನನ್ನ ಜೀವನದಲ್ಲಿ ನೆನಪಿಟ್ಟು ಕೊಳ್ಳುವಂತಹ ವ್ಯಕ್ತಿತ್ವದವರು. ಅದು ನನ್ನ ನೆಚ್ಚಿನ ಕೊಟ್ರಪ್ಪ ಮಾಸ್ತರು. ಅವರೊಬ್ಬರೇ ಕನ್ನಡ, ವಿಜ್ಞಾನ, ಸಮಾಜ ಮತ್ತು ಗಣಿತ ಪಾಠವನ್ನು ಅತೀ ಸಂತೋಷವಾಗಿ ಹೇಳಿಕೊಡುತ್ತಿದ್ದುದು. ತಿಂಗಳಿಗೊಮ್ಮೆ ಪರೀಕ್ಷೆ, ಗರಿಷ್ಟ ಅಂಕ ಇಪ್ಪತೈದು. ಸರಿಸುಮಾರು ಎಲ್ಲಾ ವಿಷಯಗಳಲ್ಲೂ ಇಪ್ಪತ್ತರ ಮೇಲೆಯೇ ಗಳಿಸಿದ ನೆನಪು ನನಗೆ, ಅದಕ್ಕೆಂದೇ ಒಮ್ಮೆ ತರಗತಿಯ ಮಾನಿಟರ್ ಅದದ್ದೂ ಉಂಟು.  ಹಾಗೆಯೇ ಇರಲು ಒಂದು ದಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಐದ್ಸಾವರ ಫ್ರೆಂಡ್ಸು ಮತ್ತು ನಾವು: ಪ್ರಶಸ್ತಿ

ಈ ಫೇಸ್ಬುಕ್ಕಿನ ಸಾಹಿತಿಗಳೆಲ್ಲಾ, ಅಥವಾ ಬೇರೆಡೆ ಸಾಹಿತ್ಯ ಬರೆಯುತ್ತಿದ್ದು ಸದ್ಯ ಫೇಸ್ಬುಕ್ಕಿನಲ್ಲಿ ಸಕ್ರಿಯರಾಗಿರೋ ಸ್ನೇಹಿತರೆಲ್ಲಾ ಯಾವುದೋ ಪಕ್ಷದ ವಕ್ತಾರರಂತೆ, ಮತ್ಯಾವುದೋ ಕೋಮಿನ ಹರಿಕಾರರಂತೆ ಯದ್ವಾ ತದ್ವಾ ಪೋಸ್ಟುಗಳನ್ನ ಹರಿಬಿಡೋದನ್ನು ನೋಡಿದಾಗ ಖೇದವಾಗುತ್ತೆ. ಮೋದಿಯೊಬ್ಬ ಸರ್ವಾಧಿಕಾರಿಯೆಂದಾಗ್ಲೋ, ಟಿಪ್ಪು ಜಯಂತಿ ಬೇಡವೆನ್ನುವವರಿಗೆ ಬುದ್ಧಿಯಿಲ್ಲವೆಂದಾಗ್ಲೋ , ಉರುಳು ಸೇವೆಗೋ, ಉಡುಪಿ ಚಲೋಗೋ ಪ್ರಶಂಸೆ, ಧಿಕ್ಕಾರಗಳನ್ನ ಬರೆದಾಗಾದ ಬೇಸರವಲ್ಲವದು. ಆದರೆ ಎಡವೇ ಸರಿಯೆಂದೋ, ಬಲವೇ ಸರ್ವೋತ್ತಮವೆಂದೋ ದಿನಂಪ್ರತಿ ಜಗಳ ಕಾಯೋ ಪರಿಗೆ ಕಸಿವಿಸಿಯಾಗುತ್ತೆ. ವೈಯುಕ್ತಿಕವಾಗಿ ಇಷ್ಟವಾಗೋ ಅವರು ಫೇಸ್ಬುಕ್ಕಿಗೆ ಬಂದಾಗ ಹಿಂಗ್ಯಾಕೆ ಅನ್ನೋದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಿರು ಕತೆಗಳು: ಸಿಂಧುಭಾರ್ಗವ್, ಕೃಷ್ಣವೇಣಿ ಕಿದೂರ್.

ಅಹಂಕಾರವೂ ಕರಗುವುದು. ಆಗರ್ಭ ಶ್ರೀಮಂತನ ಮಗನಿಗೆ ಐಶಾರಾಮಿಯ ಜೀವನ ನಡೆಸಲು ಏನೆಲ್ಲ ಮಾಡಬೇಕೋ ಅದನ್ನು ಚೆನ್ನಾಗಿ ತಿಳಿದಿದ್ದ.. ಕಾರು, ಬಂಗಲೆ ಜೊತೆಗೆ ಆಳುಕಾಳು ಅಲ್ಲದೆ ಕುಡಿತ ದಿನಕ್ಕೊಬ್ಬಳು ದೇಹದಾನ ಮಾಡುವವಳು ಸಿಗುತ್ತಿದ್ದಳು.. ತಂದೆ ರಾಮುವಿನ ಸವೆತ, ಬೆವರ ಹನಿ, ದೇಹದಲ್ಲಿ ಬತ್ತಿ ಹೋದ ರಕ್ತ ಇದಾವುದೂ ಕಣ್ಣಿಗೆ ಕಾಣಿಸುತ್ತಲೇ ಇರಲಿಲ್ಲ..  * ರೈತನಾಗಿದ್ದ ರಾಮುವಿನ ತಂದೆ ತನ್ನ ಕೃಷಿಭೂಮಿಯನ್ನು ಮಗನ ಕೈಗೊಪ್ಪಿಸಿ ಕಣ್ಣುಮುಚ್ಚಿಕೊಂಡರು. ಇದ್ದ ಒಂದು ಎಕರೆ ಜಾಗದಲ್ಲಿ ಮೊದಲು ಕೃಷಿ ಆರಂಭಿಸಿದ್ದ ರಾಮು ದಿನವೂ ತಾನೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಿರು ಲೇಖನಗಳು: ಬಸವರಾಜ ಪಟ್ಟಣಶೆಟ್ಟಿ , ವೇಣುಗೋಪಾಲ್ ಹೆಚ್.

ಕನ್ನಡ ನಾಡಿನ ಅಪರೂಪದ ನೃತ್ಯತಾರೆ ಜ್ಯೋತಿ ಬಳ್ಳಾರಿ ಹಾಗೂ ಕಲಾವಿದರ ತಂಡ ಜ್ಯೋತಿ ಬಳ್ಳಾರಿ ಕರ್ನಾಟಕ ಕಂಡ ಅಪರೂಪದ ನೃತ್ಯತಾರೆ.  ಈ  ತಾರೆ ಹಿಂದೊಮ್ಮೆ ಯಾವ ಪರಿ ಪ್ರೇಕ್ಷಕರಿಗೆ ತಮ್ಮ ನೃತ್ಯದ ಮೋಹಕತೆಯಿಂದ ಹುಚ್ಚು ಹಿಡಿಸಿದ್ದರೆಂದರೆ ಅದನ್ನು ಹಿಂದಿನ ಪ್ರೇಕ್ಷಕರು ಈಗಲೂ ನೆನಪಿಸಿ ಖುಷಿ ಪಡುತ್ತಾರೆ. ಆಶ್ಚರ್ಯವೆಂದರೆ ಈಗ ಕೂಡ ಜ್ಯೋತಿ ಬಳ್ಳಾರಿಯವರು  ಅದೇ ಮೋಹಕತೆಯ ನೃತ್ಯವನ್ನು ಮಾಡಿ  ಪ್ರೇಕ್ಷಕರ ಮನದಲ್ಲಿ ಅಭಿಮಾನದ  ತರಂಗಳನ್ನು  ಎಬ್ಬಿಸುತ್ತಾರೆ. ಮೂಲತಃ ಬಳ್ಳಾರಿಯವರಾದ ಜ್ಯೋತಿಯವರು ಕರ್ನಾಟಕದ ಎಲ್ಲ ವೃತ್ತಿ ರಂಗಭೂಮಿಗಳಲ್ಲಿ  ತಮ್ಮ ಮೋಹಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಮುಖವಾಡ!  ನಮಗೆ,  ಹುಟ್ಟುತ್ತಲೆ ತೊಡಿಸುತ್ತಾರೆ ಜಾತಿ ಧರ್ಮದ ಮುಖವಾಡ ದೊಡ್ಡವರಾಗುತ್ತಲೆ ಮತ್ತೆ ನಾವೆ ತೊಡುತ್ತೇವೆ ಬಣ್ಣ ಬಣ್ಣದ ಮುಖವಾಡ ನಂಬಿದ ಹೆಂಡತಿಯ ಎದರು ನಂಬದ ಗೆಳತಿಯೆದರೂ ಪ್ರೀತಿಸುವ ಮಿತ್ರನ ಎದರು ದ್ವೇಷಿಸುವ ಶತ್ರುಗಳೆದರೂ ನಮ್ಮ ವೃತ್ತಿಗೊಂದರಂತೆ ಇದೆ ಮುಖವಾಡ ಪ್ರವೃತ್ತಿಯಾಗಿ ಮತ್ತೆ ಬೇರೆ ಮುಖವಾಡ ಸಾರ್ವಜನಿಕ ಬದುಕಿನಲ್ಲಿ ಮುಖವಾಡಗಳದೆ ಮೇಲುಗೈ ಮುಖವಾಡವಿಲ್ಲದೆ ಕ್ಷಣಹೊತ್ತು ಬದುಕಲಾರೆವು ನಾವು ನಾವು ಮುಖವಾಡ ಕಳಚುತ್ತಲೆ ಇಲ್ಲ ಕನ್ನಡಿ ತೋರುವ ಮುಖ ನಮ್ಮದೆಂದು ನಂಬಿರುವೆವು ಎಲ್ಲ ನಿಜವಾಗಿ ನಾವು ನಾವೇ ಅಲ್ಲ ಯಾರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಲಂಕೇಶ್ ಮತ್ತು ಮನಶಾಸ್ತ್ರ: ಶ್ರೀಮಂತ್ ಯನಗುಂಟಿ

ಪಿ.ಲಂಕೇಶ್. ಕನ್ನಡ ಸಾಹಿತ್ಯದಲ್ಲಿ ತುಂಬಾ ಪರಿಚಿತ ಮತ್ತುಆತ್ಮಿಯ ಹೆಸರು. ಈಗಾಗಲೇ ಲಂಕೇಶ್‍ರ ಬದುಕು ಮತ್ತು ಬರಹದ ಬಗ್ಗೆ ಅನೇಕ ಬರಹಗಾರರು ಕೃತಿಗಳನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಏಕೆ ಸ್ವತಃ ಲಂಕೇಶರೇ ತಮ್ಮ ಆತ್ಮಚರಿತ್ರೆ "ಹುಳಿಮಾವಿನ ಮರ"ವನ್ನು ನಮ್ಮಕೈಗಿಟ್ಟು ಹೋಗಿದ್ದಾರೆ. ಆದರೆ ಒಂದು ಮಾತ್ರ ನಿಜ. ಆ ಬರಹಗಳನ್ನೆಲ್ಲ ಮತ್ತೆ ಮತ್ತೆಓದಿದ ಹಾಗೆ ಮತ್ತೆ ಮತ್ತೆ ಲಂಕೇಶರ ವಿಭಿನ್ನ ಮನಸ್ಥಿತಿಗಳ ಅರಿವು ಗಾಢವಾಗುತ್ತಾ ಹೋಗುತ್ತದೆ. ಮೊದಲಿಗೆ ಓದಿದಾಗ ಲಂಕೇಶ ಒಬ್ಬ ಉತ್ತಮ ವಿಚಾರವಾದಿ ಹಾಗೂ ಸಮಾಜವಾದಿ ಎನಿಸಬಹುದು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಾತ್ಯಾಗೇನೈತಿ ಸುಡಗಾಡ: ತಿರುಪತಿ ಭಂಗಿ

       ಅಂವ ಉಳಿಯೋದ ಗ್ಯಾರಂಟಿ ಇಲ್ಲ. ನಾಂವ sಮಾಡಬೇಕಾದ ಪ್ರಯತ್ನಾ ಎಲ್ಲಾ ಮಾಡಾಕ ಹತ್ತೀವಿ. ಮಿಕ್ಕಿದ್ದ ಆ ದೇವ್ರಿಗೆ ಬಿಟ್ಟದ್ದ ಅನಕೋತ ಕೈಯಾಗ ಒಂದ ದೇಹಾ ಚಕ್ಕಮಾಡುವ ಮಶಿನ್ ಹಿಡಕೊಂಡ ಮಾತಾಡಕೋತ ಮಾತಾಡಕೋತ ಕಂಚಿ ಡಾಕ್ಟರ್ ಆಫ್ರೇಶನ್ ಥೇಟರ್ಗೆ ಹೊಂಟ. ಬಿಳಿ ಸೀರಿ,ಬಿಳಿ ಜಂಪರ್ ತೊಟ್ಟ, ಮೂಗಿಗೆ ಎತ್ತಗೊಳಿಗೆ ಹಾಕಿದಂಗ ಒಂದ ಬಾಯಿಬುಟ್ಟಿ ಹಕ್ಕೊಂಡ, ಮನಿ ಕಳ್ಳತನಾ ಮಾಡಾಕ ಬಂದ ಕಳ್ಳರಂತೆ ವೇಷಧಾರಿ ನರಸಬಾಯಿಗೋಳು ಡಾಕ್ಟರ್ ಹಿಂದ ಮುಂದ ಪಾದರಸದ ಹಂಗ ಆ ಕಡೆಯಿಂದ ಈ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಕಲ ಕುಲತಿಲಕ ಶ್ರೀಕನಕದಾಸರು!: ಹೊರಾ.ಪರಮೇಶ್ ಹೊಡೇನೂರು

ಶ್ರೀ ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಬಹಳ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ದಾಸ ಶ್ರೇಷ್ಠರೆಂದು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಗಣನೀಯ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ "ಅಶ್ವಿನಿ ದೇವತೆ"ಗಳೆಂದು ಬಣ್ಣಿಸಲಾಗಿದೆ. ಕನಕದಾಸರು ಆರಂಭದಲ್ಲಿ ದಂಡನಾಯಕರಾಗಿದ್ದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸುಬ್ರಹ್ಮಣ್ಯ ಸುತ್ತಮುತ್ತ: ಪ್ರಶಸ್ತಿ

ಸುಮಾರಷ್ಟು ಜನರಿಗೆ ಸುಬ್ರಹ್ಮಣ್ಯ ಅಂದ್ರೆ ಅಲ್ಲಿ ನಡೆಯೋ ನಾಗಪ್ರತಿಷ್ಟೆ, ಆಶ್ಲೇಷ ಬಲಿಗಳು ನೆನಪಾಗುತ್ತೆ. ಟ್ರೆಕ್ಕಿಂಗು ಅಂತ ಹೋಗೋರಿಗೆ ಅದಕ್ಕೆ ಸಮೀಪದಲ್ಲಿರೋ ಕುಮಾರ ಪರ್ವತ ನೆನಪಾಗಬಹುದು. ಆದರೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂದಿರುವ ಮರಕತ ಪರ್ವತ ಗೊತ್ತಾ ಎಂದರೆ, ಆದಿ ಸುಬ್ರಹ್ಮಣ್ಯ, ಕಾಶಿ ಕಟ್ಟೆ ಗಣಪತಿ, ಅಭಯ ಗಣಪತಿ, ವನದುರ್ಗಾ ದೇವಿ ನೋಡಿದ್ದೀರಾ ಎಂದರೆ ಎಲ್ಲಿದೆಯಪ್ಪಾ ಇವು ಎನ್ನಬಹುದು. ಸುಬ್ರಹ್ಮಣ್ಯದಿಂದ ೨೦ ಕಿಮೀ ದೂರದ ಒಳಗಿರುವ ಪಂಜ ಪಂಚಲಿಂಗೇಶ್ವರ ದೇವಸ್ಥಾನ, ಬಿಳಿನೆಲೆ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ, ಬನವನ ಮೂಲೆ ಈಶ್ವರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂಕ ಪ್ರಾಣಿಯ ಪ್ರೀತಿ: ಪ್ರವೀಣ ಕಾಗಾಲ.ಕುಮಟಾ.

                 ಅದೊಂದು ಪುಟ್ಟ ಊರು.  ಆ ಊರಿನಲ್ಲಿ ಸೊಮೇಗೌಡ ಎಂಬ ಮಧ್ಯಮವರ್ಗದ ವ್ಯಕ್ತಿಯು ತನ್ನ ಹೆಂಡತಿ ಹಾಗೂ ಎರಡು ಮಕ್ಕಳೊಂದಿಗೆ ಬಾಳ್ವೆ ನಡೆಸುತ್ತಿದ್ದನು. ಸೊಮೆಗೌಡನು ಇತರರಿಗೆ ಯಾವಾಗಲೂ ಸಹಾಯ ಮಾಡುತ್ತ ತನ್ನ ಎರಡು ಮಕ್ಕಳನ್ನು ಒಳ್ಳೆಯ ವ್ಯಕ್ತಿಗಳನ್ನಾಗಿ ರೂಪಿಸಲು ಇವರು ಶ್ರಮಿಸುತ್ತಿದ್ದರು. ಸೊಮೇಗೌಡನ ಮಗನ ಹೆಸರು ನಿಖಿಲ್. ಹತ್ತನೆಯ ತರಗತಿಯಲ್ಲಿ ಓದುತ್ತಿದ್ದನು. ಮಗಳ ಹೆಸರು ರೂಪಾ. ಇವಳು ನಿಖಿಲ್ ಗಿಂತ ಎರಡು ವರ್ಷ ದೊಡ್ಡವಳಾಗಿದ್ದಳು. ನಗರದ ಕಾಲೇಜಿನಲ್ಲಿ ಪಿ. ಯು. ಸಿ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಮನದಾಳ”: ಟಿ.ಎ.ಗೋಪಾಲ 

    ಹಲವು ದಿನದ ಹಂಬಲ, ತಿಳಿಯುವ ಆಸೆ, ಅರಿಯುವ ಬಯಕೆ, ಬಂದನದಿಂದ ಹೊರಬರುವ ಚಿಂತನೆ. ಅದೇನೊ ನನ್ನ ಬೆನ್ನ ಹಿಂದೆ ಬಿದ್ದು ಎಳೆಯುತಿದೆ ಎಂದು ಕೆಲವು ಬಾರಿ ಬಾಸವಾಗುತ್ತದೆ. ಇದೆಲ್ಲವನ್ನು ತಿಳಿದುಕೊಳ್ಳಲು ಒಂದು ದಿನ ನನ್ನನ್ನು ನಾನು ವಿಶ್ಷ್ಲೇಷಿಸಿದೆ, ಹಲವಾರು ಸತ್ಯಾಂಶಗಳು ಕಂಡುಬಂದವು, ಅವು ಮನದಲ್ಲಿ ಗೊಂದಲ, ಜಂಜಾಟ, ಅಸಮಾದಾನ, ಅಶಾಂತಿ, ಉನ್ಮಾದ ಮತ್ತು ಎನೋ ಒಂದು ತರಹದ ಭಯ. ಇವೆಲ್ಲವು ಬೊರ್ಗರೆಯುವ ವೇಗದಲ್ಲಿ ಸಂಚಲಿಸುತ್ತಿವೆ, ಇದನ್ನು ಹಿಡಿದು ನಿಲ್ಲಿಸುವ ಯೋಚನೆ ಆದರೆ ಸಾದ್ಯವಾಗುತ್ತಿಲ್ಲ, ಹಲವು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶತಮಾನದ ಅಧ್ಬುತಗಳಲ್ಲೊಂದು-ಗೋಲ್ಡನ್ ಗೇಟ್ ಬ್ರಿಡ್ಜ್: ಪ.ನಾ.ಹಳ್ಳಿ.ಹರೀಶ್ ಕುಮಾರ್

ಇಲ್ಲೊಂದು ಸೇತುವೆಯಿದೆ. ಇದನ್ನು ನೋಡಿದವರೆಲ್ಲಾ ಇದೊಂದು ಇಪ್ಪತ್ತನೇ ಶತಮಾನದ ಅದ್ಭುತಗಳಲ್ಲೊಂದು ಎಂದು ಉಧ್ಗರಿಸುತ್ತಾರೆ. ಅಲ್ಲದೇ ಇದನ್ನು ಶತಮಾನದ ಅದ್ಬುತಗಳಲ್ಲೊಂದು ಎಂದೂ ಘೋಷಿಸಲಾಗಿದೆ. ಜಗತ್ತಿನ ಮೊದಲ ತೂಗುಸೇತುವೆಯೂ ಇದೇ ಆಗಿದೆ ಎಂದರೆ ಆಶ್ಚರ್ಯವಲ್ಲ. ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ಮೇಲಿರುವ ಈ ತೂಗುಸೇತುವೆಯು 1.7 ಮೈಲುಗಳಷ್ಟು ಉದ್ದವಿದ್ದು, ಸ್ಯಾನ್ ಫ್ರಾನ್ಸಿಸ್ಕೋದ ಉತ್ತರ ತುದಿಯನ್ನು ಮರೀನ್‍ಕೌಂಟಿಯ ಸಸಲಿಟೋದೊಂದಿಗೆ ಸೇರಿಸುತ್ತದೆ. ಆಧುನಿಕ ಜಗತ್ತಿನ 7 ಅಧ್ಬುತಗಳಲ್ಲಿ ಗೋಲ್ಡನ್ ಗೇಟ್ ಬ್ರಿಡ್ಜ್ ಕೂಡಾ ಒಂದು. ಸ್ಯಾನ್‍ಫ್ರಾನ್ಸಿಸ್ಕೋ ಕೊಲ್ಲಿಯ ಮೇಲಿರುವ ಈ ತೂಗುಸೇತುವೆ ಮುಖ್ಯವಾಗಿ ಎರೆಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ