ನೀರಿಗಾಗಿ ಜನಾಂದೋಲನಗಳ ಮಹಾಮೈತ್ರಿ: ಅಖಿಲೇಶ್ ಚಿಪ್ಪಳಿ

ದಕ್ಷಿಣ ಕನ್ನಡದಂತಹ ಸಮೃದ್ಧ ಜಿಲ್ಲೆಯೀಗ ನೀರಿನ ಕೊರತೆಯಿಂದಾಗಿ ಬಳಲುತ್ತಿದೆ. ನೀರಿನ ಕೊರತೆಗೆ ಕಾರಣಗಳೇನು? ಹಾಗೂ ಇದನ್ನು ಶಾಶ್ವತವಾಗಿ ಪರಿಹರಿಸುವ ಬಗೆ ಹೇಗೆ? ಇತ್ಯಾದಿ ಗಂಭೀರ ಸಮಸ್ಯೆಗಳ ಕುರಿತಾಗಿ ವ್ಯಾಪಕ ಚರ್ಚೆ ಪ್ರಾರಂಭವಾಗಿದೆ. ಜನಾಂದೋಲನಗಳ ಮಹಾಮೈತ್ರಿ ಹೆಸರಿನಡಿಯಲ್ಲಿ ನೀರಿನ ಲಭ್ಯತೆ, ಬಳಕೆ, ನಿರ್ವಹಣೆ ಇತ್ಯಾದಿಗಳ ಕುರಿತಾಗಿ ಆಂದೋಲನ ಶುರುವಾಗಿದೆ. ಸಮುದ್ರದ ತಟದಲ್ಲೇ ಇರುವ ಈ ಜಿಲ್ಲೆಯೀಗ ಭೀಕರ ಬರಗಾಲಕ್ಕೆ ತುತ್ತಾಗಿದೆ. ನೀರಿನ ಸಮರ್ಪಕ ನಿರ್ವಹಣೆಗಾಗಿ ಸರ್ಕಾರಗಳು ಏನು ಮಾಡಬೇಕು, ಸಾರ್ವಜನಿಕರ ಕರ್ತವ್ಯವೇನು? ಮುಂತಾದ ವಿಚಾರಗಳು ಚರ್ಚೆಯಲ್ಲಿ ಒಳಗೊಳ್ಳುತ್ತವೆ. ನೀರಿಲ್ಲದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಲ್ಲಿಗೆಯ ದಂಡೆಯನು ಹಿಂಡಿದರೆ: ವೃಂದಾ ಸಂಗಮ

“ಜ್ಞಾನಪೂರ್ಣಂ ಜ್ಞಾನಂ ಜ್ಯೋತಿ. ನಿರ್ಮಲವಾದ ಮನವೇ ಕರ್ಪೂರದಾರತಿ.“  ಅಕ್ಕನ ಬಳಗದ ಭಜನೆ ಹಾಡು ಕಿವಿಗೊಮ್ಮೆ ಬಿದ್ದಾಗ ಅಲ್ಲೇ ಬಾಜೂಕ, ಮಠದಾಗ ಕೂತಿದ್ದ ಸ್ವಾಮಿಗಳು ಮೈ ಕೊಡವಿದರು. ಪ್ರತಿ ದಿನ ಅಕ್ಕನ ಬಳಗದಾಗ ಸಂಜೀ ಮುಂದ ಎಲ್ಲಾ ಸದಸ್ಯರೂ ಮನೀಗೆ ಹೋಗೋ ಮುಂದ ಬಸವಣ್ಣಗ ಒಂದು ಆರತಿ ಮಾಡತಾರ. ಆವಾಗ ಎಷ್ಟೇ ಭಜನಿ ಹಾಡಿದ್ದರೂ ಸೈತ, ಆರತಿ ಮಾಡುವಾಗ, ಈ ಹಾಡು ಹಾಡೇ ಹಾಡತಾರ. ದಿನಾ ಕೇಳೋ ಹಾಡೇ ಆದರೂ ಇವತ್ತ ಯಾಕೋ ಅವರ ಮನಸಿಗೆ ಚುಳುಕ್ ಅಂತು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಶಿ (ಭಾಗ 2): ಗುರುರಾಜ ಕೊಡ್ಕಣಿ

ಇಲ್ಲಿಯವರೆಗೆ ಅಂದು ರಾತ್ರಿಯಿಡಿ ನಾನು ಶಶಿಯ ಬಗ್ಗೆ ಯೋಚಿಸುತ್ತಿದ್ದೆ. ಅವರ ಮನೆಯಲ್ಲಿ ನಡೆದ ಜಗಳ ಶಶಿಯ ಕುರಿತಾಗಿಯೇ ನಡೆದದ್ದು ಎನ್ನುವುದು ನನಗೆ ಬಹುತೇಕ ಖಚಿತವಾಗಿತ್ತು. ಇಬ್ಬರು ಹೆಣ್ಣುಮಕ್ಕಳ ಮದುವೆಯ ನಂತರ ನಂಜಮ್ಮನ ಮನೆಯಲ್ಲಿದ್ದಿದ್ದು ಶಶಿ, ಫಕೀರಪ್ಪ ಮತ್ತು ಆಶಾ ಮಾತ್ರ. ಅವರಿಬ್ಬರೂ ಮೂರನೆಯ ಹೆಂಗಸಿನ ಮೇಲೆ ಕೂಗಾಡುತ್ತಿದ್ದರೆಂದರೆ ಅದು ಶಶಿಯೇ ಆಗಿರಬೇಕೆನ್ನುವ ಅಂದಾಜು ನನಗಾಗಿತ್ತು. ಗುದ್ದಿದ್ದು ಸಹ ಶಶಿಯನ್ನೇ ಎಂಬುದು ಊಹಿಸಿಕೊಂಡಾಗ ನಿಜಕ್ಕೂ ನನಗೆ ಕಸಿವಿಸಿಯಾಯಿತು. ಅಂಥಹ ತಪ್ಪು ಅವಳೇನು ಮಾಡಿದ್ದಳೆಂದು ಊಹಿಸಲಾಗದೇ , ತೊಳಲಾಟದಲ್ಲಿಯೇ ನಿದ್ರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎರಡು ಜಾನಪದ ಚಿತ್ರಣಗಳು: ಕೆ ಟಿ ಸೋಮಶೇಖರ ಹೊಳಲ್ಕೆರೆ.

    ಯಾರಿಂದ ಸೃಷ್ಟಿಯಾದವೆಂದು ತಿಳಿಯದ ತ್ರಿಪದಿ, ಸೋಬಾನೆ ಹಾಡು, ಬೀಸುವಾಗ, ದವಸ ಧಾನ್ಯ ಕುಟ್ಟುವಾಗ ಬ್ಯಾಸರ ಕಳೆಯಲೆಂದು ಕಟ್ಟಿ ಹಾಡಿದ ಹಾಡು,  ಕಾವ್ಯ,  ಕಥೆ, ಗಾದೆ, ತೊಗಲು ಗೊಂಬೆ ಆಟ, ಕೋಲಾಟ, ಸೋಮನ ಕುಣಿತ, ಎತ್ತುಗಳಿಂದ ಬೆಂಕಿ ಹಾಯಿಸುವ ಸ್ಪರ್ದೆ, ಜಲ್ಲಿಕಟ್ಟು, ಯಕ್ಷಗಾನ, ಭಜನೆ, ನಂದಿಕೋಲು ಕುಣಿತ, ಕಂಬಳ,  ವೀರಗಾಸೆ… ಮುಂತಾದವು ನಮ್ಮ ಸಂಪ್ರದಾಯವಾಗಿ ಪರಂಪರೆಯಲ್ಲಿ ಉಳಿದು ಬಂದಿವೆ. ಇವುಗಳನ್ನು ಜಾನಪದ ಎನ್ನುತ್ತೇವೆ. ಕೆಲವು ಮಂಟೆ ಸ್ವಾಮಿಯಂಥ ಕಾವ್ಯಗಳು, ಕಥೆ, ತ್ರಿಪದಿ, ಸೋಬಾನೆ ಹಾಡು, ಕುಟ್ಟುವಾಗ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ಅವಳ ನೆನಪಲ್ಲೆ’ ಪುಸ್ತಕ ಪರಿಚಯ: ಸೂಗೂರಯ್ಯ.ಎಸ್.ಹಿರೇಮಠ

ಆತ್ಮೀಯ ಹಿರಿಯರಾದ ಶ್ರೀಯುತ ಪ್ರಕಾಶ ಡಂಗಿ ಯವರ ಕವನ ಸಂಕಲನ "ಅವಳ ನೆನಪಲ್ಲೆ" ಕುರಿತು ನಿಮ್ಮೊಡನೆ ಒಂದಷ್ಟು ಅನಿಸಿಕೆಗಳು ಹಂಚಿಕೊಳ್ಳುವ ಮನಸಾಗಿದೆ…  ಪುಸ್ತಕಬಿಡುಗಡೆಯ ದಿನ ಅದೆಷ್ಟು ಚಂದದ ಕಾರ್ಯಕ್ರಮವಿತ್ತೆಂದರೆ ಶ್ರೀಯುತ ಕುಂ.ವೀ ಸರ್ ರವರ ರುಚಿಕಟ್ಟಾದ ಹಾಸ್ಯಮಯ ಮಾತುಗಳು ಹಾಗೆಯೇ ಕವಯಿತ್ರಿ ಮಮತಾ ಅರಸಿಕೇರೆ  ಮೇಡಂ ಅವರು ಕೃತಿ ಪರಿಚಯ ಮಾಡಿಕೊಟ್ಟರು. ಕವನ ಸಂಕಲನದ ಶಿರ್ಷೀಕೆಯೆ ಮನಸೆಳೆಯುವಂತಿದೆ. ನೋಡಿದ ತಕ್ಷಣವೆ ಇದೊಂದು ಪ್ರೇಮ ಕವಿತೆಗಳ ಸಂಕಲನವೆನ್ನುವುದು ಸರಿ. ಅವಳ ನೆನಪನ್ನು ಸುಂದರ ಭಾವಗಳನ್ನು ಶ್ರೀಯುತ ಪ್ರಕಾಶ ಡಂಗಿಯವರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೆಂಡಸಂಪಿಗೆಯಂಥವಳ ನೆನಪಿನಲ್ಲಿ… : ಶಿವಕುಮಾರ ಓಲೇಕಾರ  

                  ಅಬ್ಬಾ ! ಆ ದಿನಗಳು ನನ್ನಲ್ಲಿ ಅದೆಷ್ಟು ಸಂತೋಷ, ಅದೆಷ್ಟು ಉಲ್ಲಾಸದಿಂದ ಕೂಡಿದ್ದವು ಎಂದು ಹೇಳೋದಕ್ಕೆ ಈಗ ಮನಸ್ಸು ಭಾರವಾಗುತ್ತದೆ.  ಈ ಜಗತ್ತಿನಲ್ಲಿ ಕಾಣದ ಸುಂದರ ವಸ್ತು ಕಂಡು ನನ್ನದೆಂದು ಭಾವಿಸಿ ಅದನ್ನು ಅತಿಯಾಗಿ ಹಚ್ಚಿಕೊಂಡಿದ್ದೆ ನಂದೆ ತಪ್ಪು.  ಈ ಹರಿದ ಜೀವನದಲ್ಲಿ ಯಾರು ನೆನಪಿಲ್ಲ ಎಂಬ ಭಾವನೆಯ ಮುಖಾಂತರ ನನ್ನಿಂದ ನಾನೆ ದೂರಾಗಿದ್ದು, ಭಾವದ್ವೇಗಕ್ಕೆ ಒಳಗಾಗಿದ ದಿನಗಳು ಅದೆಷ್ಟೋ ಇವೆ ಎಂಬದನ್ನು ಎಣಿಸಲು  ನೆನಪು ಉಳಿಯದೆ ಹೋಗಿದೆ. ಆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

"ಬಡತನ ಬಂದಿದೆ" ಬೆಳೆದು ನಿಂತಿರುವ ಪೈರು ಸೊರಗುತ್ತಿದೆ, ನೀರಿಲ್ಲದೇ ಇಲ್ಲಿ ಮಳೆಗೆ ಬಡತನ ಬಂದಿದೆ ! ಎರಡು ಹೃದಯಗಳಲ್ಲಿ  ಅರಳಿದ ಪ್ರೀತಿಯು ವೈಮನಸ್ಸಿನ ತಾಪಕ್ಕೆ  ಬೇರೆ-ಬೇರೆ ಆಗಿವೆ ಇಲ್ಲಿ ಪ್ರೀತಿಗೆ ಬಡತನ ಬಂದಿದೆ ! ದಣಿವರಿಯದ ದೇಹಕ್ಕೆ ದಣಿವಾಗಿ ಹಾಸಿಗೆ ಹಿಡಿದು ಮಲಗಿದೆ  ಇಲ್ಲಿ ಆರೋಗ್ಯಕ್ಕೆ ಬಡತನ ಬಂದಿದೆ ! ವೈದ್ಯನಲ್ಲಿ ಕಾಯಿಲೆಗೆ ಅಸ್ತ್ರವಿದೆ ಆ ಅಸ್ತ್ರ ಪಡೆಯಲು ಇಲ್ಲಿ ಬಡವನ ಜೇಬಿಗೆ ಬಡತನ ಬಂದಿದೆ ! ನನ್ನೊಳಗೂ ಕೆಚ್ಚದೆಯ ಕಿಚ್ಚಿದೆ ಹೊತ್ತಿಸಿಬೇಕೆಂದರೇ.. ಮನಸ್ಸು ಕಣ್ಣೀರಲ್ಲಿ ಮುಳುಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಂಡಿನ ಪರಧಿಯೊಳು ಹೆಣ್ಣು – ಬಿಡುಗಡೆಯ ಹಂಬಲ: ನಾಗರೇಖಾ ಗಾಂವಕರ

“ಆಕಾಶದ ನೀಲಿಯಲ್ಲಿ  ಚಂದ್ರತಾರೆ ತೊಟ್ಟಿಲಲ್ಲಿ  ಬೆಳಕನ್ನಿಟ್ಟು ತೂಗಿದಾಕೆ  ನಿನಗೆ ಬೇರೆ ಹೆಸರು ಬೇಕೆ?  ಸ್ತ್ರೀ ಎಂದರಷ್ಟೇ ಸಾಕೆ?’ ರಾಷ್ಟಕವಿ ಡಾ. ಜಿ. ಎಸ್ ಶಿವರುದ್ರಪ್ಪನವರ ಕವನವೊಂದರ ಸಾಲುಗಳಿವು. ಸ್ರ್ತೀಯ ಅಗಾಧ ವ್ಯಕ್ತಿತ್ವ, ಆಳ ಅಗಲಗಳ ಕಲಾತ್ಮಕವಾಗಿ ಬಿಂಬಿಸಿದ ಅಪೂರ್ವ ಸಾಲುಗಳು. ಕೇಳಿದೊಡನೆ ತಾಯಿಯ ರೂಪವೇ ಎದುರು ನಿಂತಂತೆ. ಕವಿ ಸ್ತ್ರೀಯನ್ನು ಗೌರವಿಸಿದ ಅನುಪಮ ಭಾವಲಹರಿ, ಸಹೃದಯನ ಸಂವೇದನೆ ಏಕಕಾಲಕ್ಕೆ ತಾಧ್ಯಾತ್ಮತೆಯಲ್ಲಿ ಮುಳುಗಿ ಹೋಗುವುದು.  ಆದರೆ ನಿಜಕ್ಕೂ ಭಾರತೀಯ ಸಮಾಜದಲ್ಲಿ ಈ  ಗೌರವ ಸ್ಥಾನಮಾನ ಆಕೆ ಅನುಭವಿಸುತ್ತಿದ್ದಾಳೆಯೇ ಎಂಬ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜವಾಬ್ದಾರಿ: ಗಿರಿಜಾ ಜ್ಞಾನಸುಂದರ್

ವಿಭಾ ಅತಿ ಉತ್ಸಾಹದಿಂದ ತಾನು ಗೆದ್ದಿರುವ ಮೆಡಲ್ ಗಳು ಮತ್ತು ಸರ್ಟಿಫಿಕೇಟ್ ಗಳನ್ನೂ ಜೋಡಿಸುವುದರಲ್ಲಿ ಮುಳುಗಿದ್ದಳು. ಎಂಟು ವರ್ಷದ ವಿಭಾಗೆ ತಾನು ತನ್ನ ಅಣ್ಣ ವಿಶಾಲ್ ಗಿಂತ ಹೆಚ್ಚು ಪದಕಗಳನ್ನು ಗೆದ್ದಿರುವುದು ಎಲ್ಲಕ್ಕಿಂತ ಸಂತೋಷ ಕೊಟ್ಟಿತ್ತು. ಮನೆಗೆ ಬಂದವರಿಗೆಲ್ಲ ತನ್ನ ಗೆಲುವಿನ ಬಗ್ಗೆ ಹೇಳಿ ಅವರಿಂದ ಹೊಗಳಿಕೆಯನ್ನು ಪಡೆಯುವುದು ಒಂಥರಾ ಮಜಾ ಅನ್ನಿಸುತ್ತಿತ್ತು. ಆಗ ವಿಶಾಲ್ ನ ಮುಖ ಪೆಚ್ಚಾಗುವುದನ್ನು ಗಮನಿಸಲು ಮಾತ್ರ ಮರೆಯುತ್ತಿರಲಿಲ್ಲ. ಆಟ, ಪಾಠ, ಹಾಡು, ಕಲೆ ಎಲ್ಲದರಲ್ಲೂ ತನ್ನ ಇರುವಿಕೆಯನ್ನು ತೋರಿಸಬೇಕೆಂಬುದೇ ಅವಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ: ಉದಯ ಪುರಾಣಿಕ

ಪ್ರಾಚೀನ ಕರ್ನಾಟಕದ ಪ್ರಮುಖ ಅಗ್ರಹಾರಗಳಲ್ಲಿ ಕುಕನೂರು ಕೂಡಾ ಒಂದಾಗಿತ್ತು. ಶಾಸನಗಳ ಪ್ರಕಾರ “ಶ್ರೀಮನ್ಮಹಾಗ್ರಾರ ಕುಕ್ಕನೂರು” ಎಂದು ಕರೆಯುವ ಈ ಅಗ್ರಹಾರದ ಉತ್ತರದಲ್ಲಿ ಸುಮಾರು ಒಂದು ಮೈಲಿ ದೂರದಲ್ಲಿ ದ್ಯಾಂಪುರ (ದೇವಿಪುರ)ವನ್ನುವ ಪುಟ್ಟ ಗ್ರಾಮವಿದೆ. ಕೊಪ್ಪಳ ಜಿಲ್ಲೆಯ, ಯಲಬುರ್ಗಾ ತಾಲೂಕಿನಲ್ಲಿರುವುದು ಈ ದ್ಯಾಂಪುರ. ಕನ್ನಡ ಭಾಷೆಯಲ್ಲಿ 12 ಪುರಾಣಗಳನ್ನು ರಚಿಸಿರುವ, ವೇದಾಂತಿ, ದಾರ್ಶನಿಕ ಮತ್ತು ಪ್ರಸಿದ್ಧ ಪ್ರವಚನಕಾರರಾದ ಚೆನ್ನಕವಿಗಳು ಮತ್ತು ಅವರ ಅಣ್ನನ ಮಗನಾದ ಕವಿರತ್ನ ಕಲ್ಲಿನಾಥ ಶಾಸ್ತ್ರಿ ಪುರಾಣಿಕರವರು ಕನ್ನಡ ನಾಡು-ನುಡಿಗಾಗಿ ಅವಿರತ ಮತ್ತು ಅನುಪಮ ಸೇವೆಯನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಡು : ನಾ ಕಂಡಂತೆ:  ಸ್ನೇಹಲತಾ ಗೌನಳ್ಳಿ

     ಕಾಡಿನಲ್ಲಿ ಹೊರಡುವಾಗಿದ್ದ ಸಂತಸ ಹೊರ ಬಂದಾಗ ಮಾಯವಾಗಿ ಮಂಕು ಕವಿಯುತ್ತಿದೆ. ಹೌದು ಶ್ರೀ ಕೃಷ್ಣ ಆಲನಹಳ್ಳಿಯವರ ಕಾಡು ಕಾದಂಬರಿ ಓದಿದ ನಂತರ ಉಂಟಾದ ಭಾವ ಅದು. ಇಲ್ಲಿ ಭಾರತದ ಆರ್ಥಿಕತೆಯ ಬೆನ್ನೆಲುಬಾದ ಹಳ್ಳಿಗಳು ಸಾಮಾಜಿಕ ಸ್ತರ ವಿನ್ಯಾಸದ ನೆಲೆಯಲ್ಲಿ ರೂಪುಗೊಂಡ ದರುಣ ಬದುಕಿನ ಕ್ರೌರ್ಯದ ದಾಖಲೆಯಿದೆ. ಜಾತಿ, ಮತ, ವರ್ಗ, ಸಂಘರ್ಷಗಳ ಚಿತ್ರಣವಿದೆ “ ಕಿಟ್ಟಿ” ಎಂಬ ಪೋರನ ಮುಖಾಂತರ ಕಾದಂಬರಿಯು ತನ್ನನ್ನು ಬಿಚ್ಚಕೊಳ್ಳುತ್ತಾ ಸಾಗುತ್ತದೆ. ಇಡೀ ಕಾದಂಬರಿಯಲ್ಲಿ ಕಮಲಮ್ಮ ಮತ್ತು ಕಿಟ್ಟಿಯ ಪಾತ್ರಗಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಂತಾರಾಷ್ಟ್ರೀಯ ಪರಿಸರ ಚಲನಚಿತ್ರೋತ್ಸವ ಮತ್ತು ಜಿಗಳಿ ಗೂಡು!: ಅಖಿಲೇಶ್ ಚಿಪ್ಪಳಿ

ಈಗೊಂದು 25 ವರ್ಷಗಳ ಹಿಂದೆ ಧಾರವಾಡಕ್ಕೆ ಹೋಗಿದ್ದೆ. ಆವಾಗಿನ ನಮ್ಮ ಮನಸ್ಥಿತಿಗೂ ಇವತ್ತಿನ ಸ್ಥಿತಿಗೂ ವ್ಯತ್ಯಾಸವಿದೆ. ಫೆಬ್ರುವರಿ 18 ಮತ್ತು 19ರಂದು ಧಾರವಾಡದಲ್ಲಿ “ಅಂತಾರಾಷ್ಟ್ರೀಯ ಪರಿಸರ ಚಲನಚಿತ್ರೋತ್ಸವ” ಕಾರ್ಯಕ್ರಮ ಇತ್ತು. ಮೂಲತ: ಹೊನ್ನಾವರದ ಸಮೀಪದವರಾದ ಡಾ:ಪ್ರಕಾಶ್ ಭಟ್ ಈ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು. ಪರಿಸರ ಎಂದ ಕೂಡಲೇ ಕಿವಿ ನಿಮಿರುವ ನಮಗೆ (ನಾನು, ಚಾರ್ವಾಕ ರಾಘು ಹಾಗೂ ಏಸು ಪ್ರಕಾಶ್) ಇದೊಂದು ಅಪ್ಯಾಯಮಾನವಾದ ಹಾಗೂ ಜರೂರತ್ತಾದ ಕಾರ್ಯಕ್ರಮವೇ ಆಗಿತ್ತು. ಸುಸ್ಥಿರ ಅಭಿವೃದ್ಧಿ ವೇದಿಕೆಯ ಮುಖ್ಯಸ್ಥರಾದ ಸಜ್ಜನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭಾಷಣ – ಭೀಷಣ – ಭೂಷಣ: ಪ್ರಸಾದ್ ಕೆ.

“ಈ ಎರಡು ಮಾತುಗಳನ್ನು ಹೇಳಿ ನಾನು ನನ್ನ ಮಾತನ್ನು ಮುಗಿಸುತ್ತಿದ್ದೇನೆ'', ಎಂದು ಆ ಗಣ್ಯರು ಹೇಳುತ್ತಿದ್ದರು.  ಹೀಗೆ ವೇದಿಕೆಯಲ್ಲಿ ಮೈಕಿನ ಮುಂದೆ ಆ ಗಣ್ಯರು ಹೇಳುತ್ತಿದ್ದಿದ್ದು ಹತ್ತಕ್ಕೂ ಹೆಚ್ಚಿನ ಬಾರಿ. ಅದು ಶಾಲಾ ವಾಷರ್ಿಕೋತ್ಸವ ಒಂದರ ಸಮಾರಂಭ. ಆಮಂತ್ರಣ ಪತ್ರಿಕೆಯಲ್ಲಿ ಏಳು ಘಂಟೆಗೆ ಕಾರ್ಯಕ್ರಮವು ಶುರುವಾಗಲಿದೆಯೆಂದು ಮುದ್ರಿಸಿದ್ದರೂ ಶುರುವಾಗಿದ್ದು ಎಂಟೂವರೆಗೆ. ಮೊದಲು ಗಣ್ಯರ ಭಾಷಣ, ಸನ್ಮಾನ ಕಾರ್ಯಕ್ರಮ, ಬಹುಮಾನ ವಿತರಣೆ ಇತ್ಯಾದಿಗಳು, ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂಬುದು ಆ ಶಾಲೆಯಲ್ಲಿ ಹಲವು ವರ್ಷಗಳಿಂದಲೂ ನಡೆದು ಬಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾಜಿಕ ಜವಾಬ್ದಾರಿ ಮತ್ತು ಜವಾಬ್ದಾರಿಯುತರು: ಕೆ ಟಿ ಸೋಮಶೇಖರ ಹೊಳಲ್ಕೆರೆ.

             ಪ್ರತಿಯೊಬ್ಬ ವ್ಯಕ್ತಿಯೂ ತಾನಿರುವ ಸಮಾಜದ, ನಾಡಿನ ಆಗು ಹೋಗಿಗೆ ಜವಾಬ್ದಾರಿಯಾಗಿರುತ್ತಾನೆ. ಹಾಗೆ ಇರಬೇಕಾದುದು ಅವನ ಕರ್ತವ್ಯ ಕೂಡ. ಜನಸಾಮಾನ್ಯರು ಇದಕ್ಕೆ ಹೊರತಲ್ಲ .ಇವರು ಹೊರತಾದರೆ ಬೆರಳೆಣಿಕೆಯಷ್ಟು ಜನಕ್ಕೆ ಹಾನಿ. ಸಾರ್ವಜನಿಕ ಕ್ಷೇತ್ರದಲ್ಲಿರುವವರು ಹೊರತಾದರೆ ಇಡೀ ಸಮಾಜಕ್ಕೆ, ನಾಡಿಗೆ, ದೇಶಕ್ಕೆ ಹಾನಿ ಸಂಭವಿಸುತ್ತದೆ. ಆದ್ದರಿಂದ ಜನಸಾಮಾನ್ಯರಿಗಿಂತ ಸಾರ್ವಜನಿಕ ಕ್ಷೇತ್ರದಲ್ಲಿರುವವರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ. ಪುರಾಣ, ಇತಿಹಾಸದಲ್ಲಿ ಅನೇಕರು ನುಡಿದಂತೆ ನಡೆದು ಆದರ್ಶವಾಗಿ ಬದುಕಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ! ಭರತ, ರಾಮ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎಲ್ಲರಂಥವನಲ್ಲ ನನ್ನಪ್ಪ! – ಬರಹಗಳ ಅಹ್ವಾನ

"ನಮ್ಮ ಅಪ್ಪ ನಮಗೆ ಹೀರೋ! ಅವನ ಹಾಗೆ ಮತ್ತೊಬ್ಬನಿಲ್ಲ!" ಅಂತ ನಿಮಗನ್ನಿಸಿದೆಯೇ? ಹಾಗಿದ್ದರೆ ಅದನ್ನು ವ್ಯಕ್ತಪಡಿಸುವ ಅವಕಾಶ ಇಲ್ಲಿದೆ….    ಅಪ್ಪಂದಿರ ಬಗ್ಗೆ ಪುಸ್ತಕ ಮಾಡುವ ಪ್ರಯತ್ನ ನಡೆದಿದೆ. ವಿಶ್ವದ ಎಲ್ಲ ಅಪ್ಪಂದಿರಿಗೆ ನಮ್ಮ ಪ್ರೀತಿಯ ಕೊಡುಗೆ ಇದು. ಅವರು ನಿಮಗೆ ಹೇಗೆ ಸ್ಪೂರ್ತಿ ಆದರು, ಅವರ ಬಗ್ಗೆ ನಿಮಗೇನಿಷ್ಟ, ಅವರ ಜೊತೆ ಕಳೆದ ಭಾವನಾತ್ಮಕ ಕ್ಷಣಗಳು, ಯಾವುದೋ ಒಂದು ಸಣ್ಣ ಜಗಳ, ಕಾಡುತ್ತಿರುವ ಪಾಪ ಪ್ರಜ್ಞೆ, ನಿಮ್ಮ ಕಣ್ಣಲ್ಲಿ ನೀರು ಹರಿಸಿದ ಅವರು ಪಟ್ಟ ಕಷ್ಟಗಳು… … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಿರುಲೇಖನಗಳು: ಪ್ರಶಸ್ತಿ, ಶಿವು ನಾಗಲಿಂಗಯ್ಯನಮಠ

  ನಂಬರ್ ಪ್ಲೇಟ್ ಬಂಗಾರದ ಹುಡಿಯ ಜಗಕೆಲ್ಲಾ ಎರಚೋಕೆ ಹೊರಟಿದ್ದ ಸೂರ್ಯ ಹಿಂದೆಂದಿಗಿಂತಲೂ ಹೆಚ್ಚು ಖುಷಿಯಾಗಿದ್ದ.ರಾತ್ರಿ ಪಾಳಿ ಮುಗಿಸಿ ಬರುತ್ತಿದ್ದ ಚಂದ್ರನಿಗೊಂದು ಟಾಟಾ ಹೇಳಿ, ಅರುಣೋದಯಕ್ಕೇ ಗೂಡು ಬಿಡೋ ಹಕ್ಕಿಗಳಿಗೊಂದು ಹಾಯ್ ಹೇಳೋ ನಿತ್ಯಕರ್ಮದಲ್ಲಿ ಎದುರಾಗೋ ಅಂಕಲ್ಲುಗಳಿಗೆ ಇವನೆಂದರೆ ಪಂಚ ಪ್ರಾಣ.ವಾಕಿಂಗ್ ಮಾಡೋಕೆ ಮನಸಿದ್ರೂ ಚಳಿ ಚಳಿಯೆನ್ನುತ್ತಾ ಮನೆ ಬಿಡೋಕೇ ಬೇಜಾರಾಗೋ ಸಂದರ್ಭದಲ್ಲಿ ಬೆಳಕ ಬೆಚ್ಚನೆಯ ಶಾಲು ಹೊಚ್ಚುವವನ ಕಂಡರೆ ಯಾರಿಗೆ ಇಷ್ಟವಿರೋಲ್ಲ ಹೇಳಿ ? ತರುಲತೆಗಳಿಗೆ ಗೆಲುವು ತರುವವನ, ಮೊಗ್ಗಾಗಿ ಮುದುಡಿದ ಮನಗಳ ಅರಳಿಸೋನ ಬರುವಿಕೆಗೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕ್ಯಾಂಪಸ್ ಕವಿಗೋಷ್ಠಿ

  ದಿನಾಂಕ 15-03-2017 ರಂದು ಬೆಳಿಗ್ಗೆ 11 ಗಂಟೆಗೆ ಕನ್ನಡ ಅಧ್ಯಯನ ಕೇಂದ್ರದ ಕರ್ನಾಟಕ ಸಂಘ ದಿಂದ‘ಕ್ಯಾಂಪಸ್ ಕವಿಗೋಷ್ಠಿ’ಯನ್ನು ಆಯೋಜಿಸಲಾಗಿದೆ. ಈ ಕವಿಗೋಷ್ಠಿಯಲ್ಲಿ ವಿವಿಧ ವಿಶ್ವವಿದ್ಯಾಲಯದ, ವಿವಿಧ ವಿಷಯಗಳ, ವಿವಿಧ ಭಾಷೆಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಳ್ಳ ಬಹುದಾಗಿದ್ದು ಆಸಕ್ತ ವಿದ್ಯಾರ್ಥಿಗಳು ತಮ್ಮ ಕವಿತೆಗಳನ್ನು ಈ ಕೆಳಕಂಡ ವಿಳಾಸಕ್ಕೆ ದಿನಾಂಕ 13-03-2017 ರೊಳಗೆ ತಲುಪಿಸಬೇಕಾಗಿ ಕೋರುತ್ತೇವೆ. ಇದರೊಂದಿಗೆ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ನೀಡಬೇಕಾಗಿ ವಿನಂತಿ. ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ : 9900903084 ಬೆಂಗಳೂರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಶಾಂತಿಗೀತೆ ಮುಗಿಲು.. ಕೆಂಡಕಾರುವ ಅಗ್ನಿಪಾತ್ರೆ ನೆಲ.. ಕಿಚ್ಚು ಎಬ್ಬಿಸುವ ಒತ್ತಲು ಗಾಳಿ.. ಕೊಳ್ಳಿಹೊತ್ತಿಸುವ ಕಟುಕ ಮಳೆ.. ಬಾರದೆ ಕಾಡುವ ಇನಿಯ ನಾನು..  ನೆಲವಾಗಬೇಕು ಮಲೆನಾಡ ಕಾಡಂತೆ ಮುಗಿಲಾಗಬೇಕು ಹುಣ್ಣಿಮೆ ಇರುಳಂತೆ ನಾನು.. ಗಾಳಿಯಾಗಬೇಕು.. ಬೆಂದೊಡಲ ತಣಿಸಬೇಕು ಮಳೆಯಾಗಬೇಕು.. ನದಿಯಾಗಿ ಹರಿಯಬೇಕು ನಾನು.. ಹಕ್ಕಿಯಾಗಬೇಕು.. ಗಡಿಗಳಾಚೆ ಹಾರಬೇಕು ಮದ್ದುಗುಂಡು ಬರುವ ದಾರಿಹಾಯ್ದು ಆಚೆ  ಹೋಗಿ ಶಾಂತಿ ಸಾರಿ ಬರಬೇಕು ಸರಹದ್ದಿನಗುಂಟ ಮುಳ್ಳಿನ ಬೇಲಿ ನಿಬಿಡ ಸರಳುಗಳ ಪಂಜರ ಹೇಗೆ ಹಾರಲಿ? ಬೇಡ.. ಬೇಡ.. ಈ ಜೀವಾವಧಿ ಶಿಕ್ಷೆ.. ನೀಡಬೇಡ.. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ