ದೊಡ್ಡ ಕಿವಿಯ ಮೊಲ – ಆಕಾಶ ಗುಬ್ಬಿಗಳ ಧರಣಿ: ಅಖಿಲೇಶ್ ಚಿಪ್ಪಳಿ

(ಪಶ್ಚಿಮಘಟ್ಟಗಳ ಸ್ಥಿತಿ-ಗತಿ-೩ನೇ ಭಾಗದ ಪ್ರಕಟಣೆ ೧ ವಾರ ಮುಂದೆ ಹೋಗಿದೆ. ಅಡಚಣೆಗಾಗಿ ಕ್ಷಮಿಸಿ ಎಂದು ಮೊದಲಿಗೆ ಕೇಳಿಕೊಳ್ಳುತ್ತಾ. . . ಸಹೃದಯಿ ಓದುಗರು ದಯಮಾಡಿ ಸಹಕರಿಸಬೇಕು). ಸರಣಿ ಲೇಖನಗಳನ್ನೂ ಅದರಲ್ಲೂ ಗಾಡ್ಗಿಳ್ ಮತ್ತು ರಂಗನ್ ವರದಿಯನ್ನು ಭಾವಾನುವಾದ ಮಾಡುವಾಗ ನಮ್ಮ ಸ್ವಂತ ಯೋಚನೆಗಳಿಗೆ ಹೆಚ್ಚಿನ ಅವಕಾಶವಿರುವುದಿಲ್ಲ. ಈ ಸರಣಿ ಇನ್ನೂ ನಾಲ್ಕಾರು ವಾರ ಮುಂದುವರೆಯುವ ಸಂಭವ ಇರುವುದರಿಂದ, ಸ್ಥಳೀಯ ಕೆಲವು ಘಟನೆಗಳು ಅಕ್ಷರ ರೂಪ ಪಡೆಯದೇ ಹೋಗಬಹುದು ಎಂಬ ಆತಂಕದಿಂದ ಈ ಕೆಳಕಂಡ ಘಟನೆಗಳನ್ನು ದಾಖಲಿಸುವ ಪ್ರಯತ್ನವಾಗಿದೆ.  … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ – ಅವಲೋಕನ-೨: ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ ಫ್ರೊ:ಮಾಧವ ಗಾಡ್ಗಿಳ್ ನೇತೃತ್ವದ ಸಮಿತಿಯು ಕೇಂದ್ರ ಸರ್ಕಾರ ವಹಿಸಿದ ಮಹತ್ವದ ಈ ಮಹಾಕಾರ್ಯವನ್ನು ಪ್ರಚಂಡ ಉತ್ಸಾಹದೊಂದಿಗೆ ಪ್ರಾರಂಬಿಸಿತು. ದೀರ್ಘಕಾಲದಿಂದ ಚರ್ಚೆಗೊಳಪಟ್ಟ, ಗೊಂದಲಗಳ ಗೂಡಾದ ಪಶ್ಚಿಮಘಟ್ಟಗಳ ಉಳಿವಿಗೆ ಸಂಬಂಧಿಸಿದಂತೆ ಬಹುಮುಖ್ಯ ಕಾರ್ಯತಂತ್ರದ ಭಾಗವಾಗಿ ಬಹು ಮುಖ್ಯವಾಗಿ ಮೂರು ಹಂತಗಳನ್ನು ಗುರುತಿಸಿಕೊಂಡಿತು. ೧. ಈಗಾಗಲೇ ಪಶ್ಚಿಮಘಟ್ಟಗಳಿಗೆ ಸಂಭಂದಿಸಿದಂತೆ ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ಕ್ರೂಡಿಕರಿಸುವುದು. ೨. ಪಶ್ಚಿಮಘಟ್ಟಗಳ ಭೌಗೋಳಿಕ ವಿಸ್ತಾರದಲ್ಲಿ ಪರಿಸರ ಸೂಕ್ಷ್ಮಪ್ರದೇಶಗಳನ್ನು ನಿಖರವಾಗಿ ಗುರುತಿಸಿ ಅದನ್ನು ವ್ಯವಸ್ಥಿತವಾಗಿ ಗಣಕೀಕೃತಗೊಳಿಸುವುದು. ೩.ಮುಖ್ಯ ಕೈಗಾರಿಕೋದ್ಯಮಿಗಳ, ಸಂಘ-ಸಂಸ್ಥೆಗಳ, ಜನಸಾಮಾನ್ಯರ, ಜನಪ್ರತಿನಿಧಿಗಳಿಂದ ಸಮಗ್ರವಾಗಿ ಮಾಹಿತಿಯನ್ನು … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ – ಅವಲೋಕನ: ಅಖಿಲೇಶ್ ಚಿಪ್ಪಳಿ

ಇತ್ತೀಚಿನ ದಿನಗಳಲ್ಲಿ ಪತ್ರಿಕೋಧ್ಯಮದಲ್ಲಿ ಹೊಸ ತಲೆಮಾರು ಸೃಷ್ಟಿಯಾಗುತ್ತಿದೆ. ಆದರೆ ಸಾರವುಳ್ಳ ಮಾಹಿತಿಗಳು ಲಭ್ಯವಾಗುತ್ತಿಲ್ಲ. ನವಂಬರ್ ಮತ್ತು ಡಿಸೆಂಬರ್ ೨೦೧೪ರ ತಿಂಗಳಲ್ಲಿ ಸಾಗರಕ್ಕೆ ಪತ್ರಿಕೋಧ್ಯಮದ ಹಿರಿಯ ದಿಗ್ಗಜರಿಬ್ಬರು ಆಗಮಿಸಿದ್ದರು. ನವಂಬರ್ ೩೦ರಂದು ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸಿದ ಶ್ರೀ ದಿನೇಶ್ ಅಮಿನ್‌ಮಟ್ಟು ಹಾಗೂ ಡಿಸೆಂಬರ್ ೧೧ರಂದು ಶ್ರೀ ನಾಗೇಶ ಹೆಗಡೆ. ಪ್ರಸ್ತುತ ಪತ್ರಿಕೋಧ್ಯಮದ ವಿಷಯದಲ್ಲಿ ಈರ್ವರ ಅಭಿಪ್ರಾಯವು ಹೆಚ್ಚು-ಕಡಿಮೆ ಹೋಲುತ್ತಿದ್ದವು. ದಿನೇಶ್ ಅಮಿನ್‌ಮಟ್ಟು ಹೇಳಿದ್ದು, ನಮ್ಮ ಕಾಲದಲ್ಲಿ ಪತ್ರಿಕೋಧ್ಯಮಕ್ಕೆ ಬೇಕಾದ ತಯಾರಿ ಇರುತ್ತಿತ್ತು ಆದರೆ ಆತ್ಮವಿಶ್ವಾಸದ ಕೊರತೆ ಕಾಡುತ್ತಿತ್ತು. ಈಗಿನ ಪತ್ರಿಕೋಧ್ಯಮದಲ್ಲಿ … Read more

ನಾಝ್ಕಾ ಗೆರೆಯ ವಿರೂಪ: ಅಖಿಲೇಶ್ ಚಿಪ್ಪಳಿ

ದಿನಾಂಕ:೧೧/೧೨/೨೦೧೪ರ ಗುರುವಾರ ಸಂಜೆ ಸಾಗರದಲ್ಲಿ ಒಟ್ಟು ಮೂರು ಪುಸ್ತಕಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಗೊಂಡವು. ಶ್ರೀ ನಾಗೇಶ ಹೆಗಡೆಯವರ ನರಮಂಡಲ ಬ್ರಹ್ಮಾಂಡ, ಶ್ರೀ ಆನಂದ ತೀರ್ಥ ಪ್ಯಾಟಿಯವರ ಅಹಾ ಇಸ್ರೇಲಿ ಕೃಷಿ ಹಾಗೂ ನನ್ನದೇ ಆದ ಜೋಗದ ಸಿರಿ ಕತ್ತಲಲ್ಲಿ. ಇದೇ ಹೊತ್ತಿನಲ್ಲಿ ಪೆರು ದೇಶದ ಲಿಮಾದಲ್ಲಿ ೧೯೦ ದೇಶಗಳ ಧುರೀಣರು ಒಟ್ಟು ಸೇರಿ ಭೂಬಿಸಿಯನ್ನು ನಿಯಂತ್ರಿಸುವ ಕುರಿತು ೧೧ನೇ ದಿನದ ಗಂಭೀರ ಚರ್ಚೆ ನಡೆಸುತ್ತಿದ್ದರು, ಒಟ್ಟು ಹನ್ನೆರೆಡು ದಿನ ನಡೆದ ಈ ಜಾಗತಿಕ ಸಮಾವೇಶದಲ್ಲಿ ಭೂಬಿಸಿಗೆ ಕಾರಣವಾಗುವ … Read more

ಗಾಧಿಮಾಯಿ ಹತ್ಯಾಕಾಂಡ: ಅಖಿಲೇಶ್ ಚಿಪ್ಪಳಿ

ದಕ್ಷಿಣ ನೇಪಾಳದ ಕಠ್ಮಂಡುವಿನಿಂದ ಸುಮಾರು 160 ಕಿ.ಮಿ. ದೂರದಲ್ಲಿರುವ ಜಿಲ್ಲೆಯ ಹೆಸರು ಬಾರ. ಈ ಜಿಲ್ಲೆಯ ಭರಿಯಾರ್‍ಪುರ್‍ನಲ್ಲಿರುವ ಗಾಧಿಮಾಯಿ ದೇವಸ್ಥಾನ ಇವತ್ತು ಜಗತ್ ಖ್ಯಾತವಾಗಿದೆ. 5 ವರ್ಷಗಳಿಗೊಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ. ನಮ್ಮಲ್ಲೂ ಹಳ್ಳಿ-ಹಳ್ಳಿಗಳಲ್ಲಿ ಜಾತ್ರೆಗಳು ನಡೆಯುತ್ತವೆ. ಇದರಲ್ಲೇನು ವಿಶೇಷವೆಂದು ಕೇಳಬಹುದು. ಎಲ್ಲಾ ಜಾತ್ರೆಗಳಲ್ಲೂ ಮಾರಿಯನ್ನು ಸಂತೃಪ್ತಿಗೊಳಿಸುವ ಸಲುವಾಗಿ ಪ್ರಾಣಿಬಲಿಯನ್ನು ನೀಡುತ್ತಾರೆ. ಕೆಲವು ಕಡೆ ಅಕ್ರಮವಾಗಿ ನರಬಲಿಯನ್ನು ನೀಡುವುದೂ ಇದೆ. ಭಾರತದಂತಹ ದೇಶದಲ್ಲಿ ಪ್ರಾಣಿಬಲಿ ತಡೆಯುವ ಕಟ್ಟುನಿಟ್ಟಾದ  ಕಾನೂನುಗಳಿವೆ. ಈ ಕಾನೂನು ಹಲವು ಬಾರಿ ವಿಫಲವಾಗುತ್ತದೆ. ಕಾನೂನು … Read more

ಘಟ್ಟ ಉಳಿಸುವ ವರದಿಗೆ ಅಗ್ನಿಸ್ಪರ್ಷ: ಅಖಿಲೇಶ್ ಚಿಪ್ಪಳಿ

ಭಾನುವಾರ ರಜಾದಿನ. ಬಂಧುಗಳೊಬ್ಬರ ಮನೆಯಲ್ಲಿ ಅದೇನೋ ವಿಶೇಷ ಕಾರ್ಯಕ್ರಮವಿತ್ತು, ಮುಗಿಸಿಕೊಂಡು ಬರುವಾಗ ಸಂಜೆ ೫ ಗಂಟೆ. ಪೇಟೆ ಸುಮಾರು ೫ ಕಿ.ಮಿ. ದೂರವಿತ್ತು. ಬರುವ ರಸ್ತೆಯಲ್ಲಿ ವಿಪರೀತ ಹೊಗೆ ತುಂಬಿಕೊಂಡಿತ್ತು. ನಮ್ಮ ಮುಂದೆ ಸಾಗುತ್ತಿದ್ದ ಕಾರು ಮುಂದೆ ರಸ್ತೆ ಕಾಣದೆ ನಿಂತಿತ್ತು. ನೋಡಿದರೆ, ರಸ್ತೆಯ ಪಕ್ಕದ ಕಾಡಿಗೆ ಬೆಂಕಿ ಹಚ್ಚಿದ್ದರು. ಗಾಳಿಯಿಲ್ಲದ ಕಾರಣ ಹೊಗೆ ನಿಧಾನಕ್ಕೆ ಮೇಲ್ಬಾಗದ ರಸ್ತೆಯಲ್ಲಿ ತುಂಬಿಕೊಂಡು ರಸ್ತೆಯನ್ನೇ ಬಂದ್ ಮಾಡಿ ಹಾಕಿತ್ತು. ಅಪಾಯವೇನು ಇರಲಿಲ್ಲವಾದರೂ, ರಸ್ತೆಯೇ ಕಾಣುತ್ತಿರಲಿಲ್ಲ. ಬೈಕಿನಲ್ಲಿ ಮುಂದೆ ಸಾಗಿದವನಿಗೆ ಉಸಿರು … Read more

ಎಲ್ಕ್ ಎಂಬ ಸಾರಂಗದ ದುರಂತ ಕತೆ: ಅಖಿಲೇಶ್ ಚಿಪ್ಪಳಿ

ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬಾಟ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಯಿ-ಭಾಯಿ ಎಂದು ಪರಸ್ಪರ ಹೊಗಳಿಕೊಳ್ಳುತ್ತಾ ಉಭಯದೇಶಗಳ ಸಂಬಂಧವೃದ್ಧಿಗೆ ಅಡಿಪಾಯ ಹಾಕುತ್ತಿರುವ, ಪರಮಾಣು ಒಪ್ಪಂದಕ್ಕೆ ಕೈಜೋಡಿಸುತ್ತಾ, ಯುರೇನಿಯಂ ಆಮದಿಗೆ ಸಹಿ ಹಾಕುತ್ತಿರುವ ಮೂರು ದಿನ ಮೊದಲು ಅಮೆರಿಕಾದ ನಾರ್ತ್ ಕ್ಯಾರೋಲಿನ ರಾಜ್ಯದ ಗ್ರೇಟ್ ಸ್ಮೋಕಿ ಮೌಂಟೇನ್ ರಾಷ್ಟ್ರೀಯ ಅಭಯಾರಣ್ಯದ ಸಾರಂಗವೊಂದನ್ನು ಅಲ್ಲಿನ ಅಧಿಕಾರಿಗಳೇ ಗುಂಡಿಟ್ಟು ಕೊಂದರು. ಆ ಗುಂಡಿನ ಸದ್ದು ಸುದ್ದಿಯಾಗಲಿಲ್ಲ. ಅಕ್ಟೋಬರ್ ೨೦ ೨೦೧೪ರ ದಿನದಂದು ಹವ್ಯಾಸಿ ಛಾಯಾಚಿತ್ರಗ್ರಾಹಕನಾದ ಜೇಮ್ಸ್ ಯಾರ್ಕ್ ಎಂಬಾತ ಇದೇ … Read more

ರಸ್ತೆ ರಾಗ: ಅಖಿಲೇಶ್ ಚಿಪ್ಪಳಿ

ಯಾವುದೋ ಕೆಲಸದ ಮೇಲೆ ಸೊರಬ ತಾಲ್ಲೂಕಿನ ಒಂದು ಊರಿಗೆ ಹೋಗುವುದಿತ್ತು. ಆ ರಸ್ತೆಯಲ್ಲಿ ಹೋಗದೆ ಮೂರ್‍ನಾಲ್ಕು ತಿಂಗಳು ಕಳೆದಿತ್ತು. ವಾಪಾಸು ಬರುವಾಗ ರಸ್ತಯ ಬದಿಯಲ್ಲಿ ಏನೋ ಬದಲಾವಣೆಯಾದಂತೆ ಕಂಡು ಬಂತು. ಗಮನಿಸಿದಾಗ ಲೋಕೋಪಯೋಗಿ ಇಲಾಖೆಯ ಕರಾಮತ್ತು ಬೆಳಕಿಗೆ ಬಂತು. ರಸ್ತೆಗಳಿಗೆ ದೇಶದ ನರನಾಡಿಗಳು ಎಂದು ಕರೆಯುತ್ತಾರೆ. ಒಂದು ದೇಶದ ಅಭಿವೃದ್ದಿಯನ್ನು ಮನಗಾಣಬೇಕಾದರೆ ಆ ದೇಶದ ರಸ್ತೆಗಳ ಗುಣಮಟ್ಟವನ್ನು ನೋಡಬೇಕು ಎನ್ನುವ ಜನಜನಿತ ಅಭಿಪ್ರಾಯವಿದೆ. ರಸ್ತೆಗಳಲ್ಲೂ ಸುಮಾರು ವಿಧಗಳಿವೆ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ, ಜಿಲ್ಲಾ … Read more

ನಾಕವನ್ನು ನರಕ ಮಾಡುತ್ತಿರುವವರ ಹುನ್ನಾರ!?: ಅಖಿಲೇಶ್ ಚಿಪ್ಪಳಿ

ಕಳೆದೆರಡು ತಿಂಗಳಲ್ಲಿ ಭೂಮಿಯ ಆರೋಗ್ಯದ ಕುರಿತು ವಿಶ್ವ ವನ್ಯ ನಿಧಿ ಸಂಸ್ಥೆ ಮತ್ತು ಗ್ರೀನ್‌ಪೀಸ್ ಸಂಸ್ಥೆಗಳು ವಿಸೃತವಾದ ವರದಿ ನೀಡಿವೆ. ಭೂಮಾತೆಗೆ ಬಂದಿರುವ ಜ್ವರ ವಿಪರೀತ ಮಟ್ಟಕ್ಕೆ ಹೋಗಿದೆ ಎಂಬುದೇ ಎರಡೂ ವರದಿಗಳ ಸಾರಾಂಶ. ಮನುಷ್ಯ ಕೇಂದ್ರಿತ ಅಭಿವೃದ್ಧಿ, ಕಾಡುನಾಶ ಇತ್ಯಾದಿಗಳು ಕಾರಣ ಎಂದು ರೋಗದ ಮೂಲವನ್ನು ಪತ್ತೆ ಮಾಡಿದ್ದಾರೆ. ಯಾವುದೇ ಅತ್ಯುತ್ತಮ ವೈದ್ಯನ ಕೌಶಲ್ಯ ಅಭಿವ್ಯಕ್ತಗೊಳ್ಳುವುದು ಖಾಯಿಲೆಯನ್ನು ಗುರುತಿಸುವ ಬಗೆಯಲ್ಲಿರುತ್ತದೆ. ಚಿಕಿತ್ಸೆ ನೀಡುವುದು ಎರಡನೆಯ ಹಂತ. ಹಾಗೆಯೇ ಭೂಜ್ವರಕ್ಕೆ ಕಾರಣ ಗೊತ್ತಾಗಿದೆ. ವಿಪರ್ಯಾಸವೆಂದರೆ, ಕಾಯಿಲೆ ಹರಡುವವರೇ … Read more

ಒಂಟಿ ಬದುಕಿನ ದುರಂತ: ಅಖಿಲೇಶ್ ಚಿಪ್ಪಳಿ

ಆಂಡ್ಯಾಯ್ಡ್, ಲ್ಯಾಪ್‍ಟಾಪ್, ವೈಫೈ ಇವತ್ತು ಏನೆಲ್ಲಾ ಇವೆ. ಪ್ರಪಂಚವೇ ಅಂಗೈಲಿದೆ. ಕುಳಿತಲ್ಲೇ ಏನೂ ಬೇಕಾದರೂ ಮಾಡಬಹುದಾದ ಕಾಲ. ಆನ್‍ಲೈನ್‍ಲ್ಲೇ ಆರ್ಡರ್ ಮಾಡಿ ಬೇಕಾದ್ದನ್ನು ಪಡೆಯುವ ಕಾಲ. ನೆಂಟರಿಷ್ಟರಿಲ್ಲದೆ, ಬಂಧು-ಬಳಗವಿಲ್ಲದೆ, ಸ್ನೇಹಿತರ ಹಂಗಿಲ್ಲದೆ ಬದುಕಿಬಾಳಬಹುದಾದ ಕಾಲ. ಇಂತಹ ಸನ್ನಿವೇಶದಲ್ಲೇ ನಿಗೂಢ ರೀತಿಯಲ್ಲಿ ಸಾವಿಗೀಡಾಗಿ, 6 ವರ್ಷಗಳವರೆಗೂ ಯಾರ ಗಮನಕ್ಕೂ ಬಾರದೆ ಅಜ್ಞಾತವಾಗಿ ಕೊಳೆತು ಹೋದ ಒಂದು ಹೆಂಗಸಿನ ಕತೆಯಿದು. ಪಿಯಾ ಫಾರೆನ್‍ಕೋಫ್, 45 ವರ್ಷದ ಈ ಮಹಿಳೆ ಕುಟುಂಬದಿಂದ ಪರಿತ್ಯಕ್ತ ವiಹಿಳೆಯಾಗಿದ್ದಳು,  ತಂದೆ-ತಾಯಿಯಿಂದ ಬೇರೆಯಾಗಿದ್ದ ಪಿಯಾಳಿಗೆ ಮದುವೆಯಾಗಿರಲಿಲ್ಲ. ಅದೊಂದು … Read more

ದೀಪಾವಳಿ – ೨೦೧೪ ವಿ(ಶೇ)ಷ: ಅಖಿಲೇಶ್ ಚಿಪ್ಪಳಿ

ದೀಪಾವಳಿಗೆ ಇನ್ನೆರೆಡು ದಿನವಿರಬೇಕಾದರೆ, ರಾತ್ರಿ ಜ್ವರ ಜೊತೆಗೆ ವಿಪರೀತ ನಡುಕ. ಬೆಳಗ್ಗೆ ವೈದ್ಯರಿಗೆ ತೋರಿಸಿದಾಗ ವೈರಾಣು ಸೋಂಕಿನಿಂದ ಜ್ವರ ಬಂದಿದೆ ಎಂದು ಪ್ಯಾರಾಸಿಟಮಲ್ ಮಾತ್ರೆ ಕೊಟ್ಟರು. ಮತ್ತೆ ರಾತ್ರಿ ಜ್ವರ ವಿಪರೀತ ನಡುಕ. ಬೆಳಗ್ಗೆ ಎದ್ದು ಮೂತ್ರಕ್ಕೆಂದು ನಿಂತರೆ ಅಸಾಧ್ಯ ಉರಿ. ಮೂತ್ರದ ಬಣ್ಣ ತಿಳಿಗೆಂಪು. ವಿಪರೀತ ಸುಸ್ತು. ಡ್ಯೂಟಿಗೆ ಹೋಗಲೇಬೇಕಾದ ಅನಿವಾರ್ಯತೆಯಿತ್ತು. ಬಹುಶ: ನೀರು ಕಡಿಮೆಯಾಗಿ ಹೀಗಾಗಿದೆ ಎಂದುಕೊಂಡು ಕೊತ್ತಂಬರಿ ಹಾಕಿ ಕುದಿಸಿದ ೨ ಲೀಟರ್ ನೀರು ಕುಡಿದಿದ್ದಾಯಿತು. ಮತ್ತೆ ವೈದ್ಯರಿಗೆ ಹೇಳಿದಾಗ ಮೂತ್ರಪರೀಕ್ಷೆ ಮಾಡುವ … Read more

ಕಾಡ ಹಕ್ಕಿ: ಅಖಿಲೇಶ್ ಚಿಪ್ಪಳಿ

ಒಂದಾನೊಂದು ಕಾಲದಲ್ಲಿ ದೊಡ್ಡ ಪಟ್ಟಣದಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿಯಿದ್ದ. ಒಂದು ದಿನ ವ್ಯಾಪಾರ ನಿಮಿತ್ತ ಬೇರೆ ಊರಿಗೆ ಹೋಗಲು ಕಾಡಿನ ಮಾರ್ಗವಾಗಿ ಹೊರಟ. ಅಲ್ಲೊಂದು ದಟ್ಟ ಕಾಡು, ಹಕ್ಕಿಗಳ ಕಲರವ, ಮಂಗಗಳ ಕೂಗು, ಜಿಂಕೆಗಳ ನೆಗೆದಾಟ, ನವಿಲಿನ ಕೇಕೆ ಹೀಗೆ ಆ ಕಾಡೊಂದು ಸ್ವರ್ಗಸದೃಶವಾಗಿತ್ತು. ಕಾಡಿನ ಸೌಂದರ್ಯ ಆ ವ್ಯಾಪಾರಿಯನ್ನು ದಂಗುಗೊಳಿಸಿತ್ತು. ಆಗ ವ್ಯಾಪಾರಿಯ ಕಣ್ಣಿಗೊಂದು ಸುಂದರವಾದ ಪಕ್ಷಿ ಕಣ್ಣಿಗೆ ಬಿತ್ತು. ನಾನಾ ತರಹದ ಗಾಢ ಬಣ್ಣಗಳಿಂದ ಕೂಡಿದ ಹಕ್ಕಿಯನ್ನು ನೋಡಿದ ವ್ಯಾಪಾರಿ ಹಕ್ಕಿ ಎಲ್ಲೆಲ್ಲಿ ಹಾರುತ್ತಾ … Read more

ಗೆಲುವೋ? ಸೋಲೋ?: ಅಖಿಲೇಶ್ ಚಿಪ್ಪಳಿ

ಬಹುಶ: ನನಗಾಗ ನಾಲ್ಕೈದು ವರ್ಷಗಳಿರಬಹುದು.  ಅಮ್ಮನ ಜೊತೆ ಅಜ್ಜನ ಮನೆಯಲ್ಲಿ ವಾಸ್ತವ್ಯ ಹೂಡಿದ್ದೆ. ಆ ಊರಿನಲ್ಲಿ ಆಗ ಮಾರಿಜಾತ್ರೆಯ ಸಂದರ್ಭ. ಮಾರಿಜಾತ್ರೆಯೆಂದರೆ, ಬೆಳಗಿನ ಜಾವವೇ ಶುರುವಾಗುತ್ತದೆ. ಅದೇಕೋ ಗೊತ್ತಿಲ್ಲ ಗಾಢ ನಿದ್ದೆಯಲ್ಲಿದ್ದ ನನ್ನನ್ನೂ ಎಬ್ಬಿಸಿಕೊಂಡು ಮಾರಿಜಾತ್ರೆಗೆ ಕರೆದುಕೊಂಡು ಹೋದರು. ಅಜ್ಜನ ಮನೆಯ ಎದುರುಭಾಗದಲ್ಲಿರುವ ಆಚೆಕೇರಿಯಲ್ಲಿ ಮಾರಿಹಬ್ಬದ ಆಚರಣೆ. ಕತ್ತಲಲ್ಲಿ ತೋಟವಿಳಿದು ಆಚೆಕಡೆ ಹೋಗಬೇಕು. ಟಾರ್ಚ್ ಹಿಡಿದ ಯಾರೋ ಮುಂದೆ ಹೋಗುತ್ತಿದ್ದರು. ನನ್ನನ್ನು ಯಾರೋ ಎತ್ತಿಕೊಂಡಿದ್ದರು. ಆ ವಿವರಗಳು ನೆನಪಿನಲ್ಲಿ ಇಲ್ಲ. ಮಾರಿಜಾತ್ರೆ ನಡೆಯುವ ಸ್ಥಳ ತಲುಪಿದೆವು. ಆಗ … Read more

ಸತ್ಯ-ಅಹಿಂಸೆ-ಸ್ವಾಭಿಮಾನಕ್ಕೆ ಭವಿಷ್ಯವಿದೆಯೇ?: ಅಖಿಲೇಶ್ ಚಿಪ್ಪಳಿ ಅಂಕಣ

ಸತ್ಯ ಮತ್ತು ಅಹಿಂಸೆಗಳು ಹಿಮಾಲಯದಷ್ಟೇ ಪುರಾತನವಾದದು. ಹಾಗೂ ಇವುಗಳನ್ನು ಬಿಟ್ಟು ಬೇರೆ ಏನನ್ನೂ ಹೇಳಲಾರೆ ಎಂದು ರಾಷ್ಟ್ರಪಿತ ಗಾಂಧೀಜಿಯವರು ಹೇಳಿದ್ದರು. ಈ ಭಾರಿಯ ಗಾಂಧಿ ಜಯಂತಿಯ ಪೂರ್ವದಲ್ಲೇ ಎರಡು ದೇಶಗಳ ಮುಖ್ಯಸ್ಥರು ಸೇರಿ ಹಲವಾರು ಅಭಿವೃದ್ಧಿ ಆಧಾರಿತ ವಿಷಯಗಳನ್ನು ಗಾಢವಾಗಿ ಚರ್ಚಿಸಿದರು. ವಿದ್ವಂಸಕ ಕೃತ್ಯಗಳು, ಭಯೋತ್ಪಾದನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಒಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆಯನ್ನೂ ಚರ್ಚಿಸಿದರು. ನಮ್ಮೂರನ್ನು ನಿಮ್ಮ ಊರಿನಂತೆ ಮಾಡಿಕೊಡಿ ಎಂದು ನಮ್ಮವರು ಕೇಳಿಕೊಂಡರು. ಪರಮಾಣು ತಂತ್ರಜ್ಞಾನವನ್ನು ಹಸ್ತಾಂತರಿಸುವ ಭರವಸೆಯನ್ನು ಅಮೆರಿಕಾದ ಅಧ್ಯಕ್ಷರು ನೀಡಿದ್ದನ್ನು ನಮ್ಮ … Read more

ಅಪರಿಗ್ರಹ: ಅಖಿಲೇಶ್ ಚಿಪ್ಪಳಿ ಅಂಕಣ

ಸೆಪ್ಟೆಂಬರ್ ತಿಂಗಳೆಂದರೆ ಮಳೆಗಾಲ ಹಿಂದಾಗಿ ಚಳಿಗಾಲ ಅಂಬೆಗಾಲಿಕ್ಕುತ್ತಾ ಬರುವ ಕಾಲ. ರೈತರಿಗೂ ಸುಗ್ಗಿಯ ಪೂರ್ವತಯಾರಿ ಮಾಡಿಕೊಳ್ಳುವ ಕಾಲ. ಸತತ ಮಳೆಯಿಂದ ನಲುಗಿ ಮಾಸಿದ ಭೂತಾಯಿ ಆಭರಣಗಳು ಮತ್ತೆ ನಳನಳಿಸುವ ಕಾಲ. ಎಳೆ ಬಿಸಿಲಿಗೆ ಮೈಯೊಡ್ಡಿ ಬೆಚ್ಚಗಿನ ಕಾಫಿ ಹೀರುವ ಮಜವೇ ಬೇರೆ. ಮಣ್ಣಿನೊಳಕ್ಕೆ ಸೇರಲಾರದ ಎರೆಹುಳುಗಳು ಕಟ್ಟಿರುವೆಗಳ ದವಡೆಗೆ ಬಲಿಯಾಗುವ ಕಾಲ.  ಸೆಪ್ಟೆಂಬರ್ ತಿಂಗಳಲ್ಲಿ ಶಿಶು ಕ್ಯಾನ್ಸರ್ ಜಾಗೃತಿ, ಗರ್ಭಕೋಶದ ಕ್ಯಾನ್ಸರ್ ಜಾಗೃತಿ ಹೀಗೆ ವಿವಿಧ ರೀತಿಯ ಕ್ಯಾನ್ಸರ್ ಕುರಿತಾದ ಜಾಗೃತಿಗೊಳಿಸುವ ತಿಂಗಳು. ಪಾಶ್ಚ್ಯಾತ್ಯ ದೇಶಗಳಲ್ಲಿ ಬೇಸಿಗೆ … Read more

ಮಂಗನಿಂದ ದಾನವ – ಭಾಗ-೨: ಅಖಿಲೇಶ್ ಚಿಪ್ಪಳಿ ಅಂಕಣ

ಇಲ್ಲಿಯವರೆಗೆ… ಪ್ರಪಂಚದಲ್ಲಿ ಏನೇ ಆದರೂ, ಹಗಲು-ರಾತ್ರಿ ಆಗುವುದು ತಪ್ಪದು. ಕಾಲ ಯಾರಿಗೂ ಕಾಯುವುದಿಲ್ಲ. ಮೂಡಣದಲ್ಲಿ ಸೂರ್ಯನ ನಸುಬೆಳಕು ಮೂಡುತ್ತಿದ್ದಂತೆ ಮೊದಲು ಎಚ್ಚರಗೊಂಡು ಕೂಗುವುದು ಕಾಜಾಣ. ಹಿಂದೆಯೇ ಕರಿಕುಂಡೆಕುಸ್ಕದ ಸೀಟಿ ಶುರು. ಪ್ರಾಣಿ-ಪಕ್ಷಿಗಳಿಗೆ ಹೋಲಿಸಿದರೆ, ಮಾನವನಿಗೆ ಬೆಳಗಾಗುವುದು ತುಸು ತಡ. ವಯಸ್ಸಾದ ಕಾರಣಕ್ಕೆ ಹೆಚ್ಚು ನಿದ್ದೆ ಮಾಡದ ದ್ಯಾವರ ಭಟ್ಟರು ಬೇಗ ಏಳುತ್ತಾರೆ. ಹೆಂಡತಿ ತೀರಿಕೊಂಡ ಮೇಲೆ ಬೆಳಗಿನ ಕಾಫಿ ಕುಡಿಯುವ ಅಭ್ಯಾಸ ತಪ್ಪಿ ಹೋಗಿದೆ. ಬರುವ ಛಪ್ಪನ್ನಾರು ಧಾರಾವಾಹಿಗಳನ್ನು ನೋಡಿ ಸೊಸೆ-ಮಗ ಮಲಗುವುದು ರಾತ್ರಿ ೧೧.೩೦ ಆಗುತ್ತದೆ. … Read more

ಮಂಗನಿಂದ ದಾನವ:ಅಖಿಲೇಶ್ ಚಿಪ್ಪಳಿ ಅಂಕಣ

ತಳವಾರ ತಿಮ್ಮ ಬೆಳಗಿನ ಗಂಜಿ ಕುಡಿದು, ನಾಡಕೋವಿಯನ್ನು ಹೆಗಲಿಗೆ, ಮಶಿ, ಚರೆ, ಗುಂಡುಗಳ ಚೀಲವನ್ನು ಬಗಲಿಗೆ ಹಾಕಿ ಹೊರಡುತ್ತಿದ್ದಂತೆ, ಅವನ ಹೆಸರಿಲ್ಲದ ಬೇಟೆ ನಾಯಿ ಬಾಲ ಅಲ್ಲಾಡಿಸುತ್ತಾ ತಿಮ್ಮನನ್ನು ಹಿಂಬಾಲಿಸಿತು. ಬೆಳಗಿನಿಂದ ಸಂಜೆಯವರೆಗೂ ಹತ್ತಾರು ಮೈಲು ಸುತ್ತಿ ಮಂಗನನ್ನು ಅಡಿಕೆ ತೋಟದಿಂದ ಓಡಿಸುವುದು ತಿಮ್ಮನ ವೃತ್ತಿ. ಹೀಗೆ ವರ್ಷಗಟ್ಟಲೇ ನಡೆದು-ನಡೆದು ತಿಮ್ಮನ ಅಂಗಾಲು ಗಟ್ಟಿಯಾಗಿದೆ. ಸಣ್ಣ-ಪುಟ್ಟ ಮುಳ್ಳುಗಳು ತಾಗುವುದಿಲ್ಲ. ಹಾಗಾಗಿ ತಿಮ್ಮ ಚಪ್ಪಲಿ ಮೆಟ್ಟುವುದಿಲ್ಲ. ತನ್ನ ಮನೆಯಿಂದ ತೋಟ ಕಾಯುವ ಊರಿಗೆ ಹೋಗಲು ಸುಮಾರು ಒಂದು ಮೈಲಿ … Read more

ಕ್ರಾಂತಿಯೆಂಬ ಭ್ರಾಂತಿ: ಅಖಿಲೇಶ್ ಚಿಪ್ಪಳಿ

ರೈತನಿಗೆ ಮಣ್ಣಿನ ಮಗ ಎನ್ನುತ್ತಾರೆ. ರೈತ ದೇಶದ ಬೆನ್ನೆಲುಬು ಎಂದು ಹೊಗಳಿದ್ದಾರೆ. ಈ ದೇಶದಲ್ಲಿರುವ ೧೨೦ ಕೋಟಿ ಜನಸಂಖ್ಯೆಯ ಸಿಂಹಪಾಲು ಮಂದಿ ರೈತಾಪಿ ವೃತ್ತಿಯನ್ನೇ ಅವಲಂಬಿಸಿಕೊಂಡು ಬದುಕುತ್ತಿದ್ದಾರೆ. ಆದರೆ ಅನ್ನದಾತನ ಬದುಕು ಹೇಗಿದೆ? ಗ್ರಾಮೀಣ ಭಾರತದ ರೈತ ಹೇಗಿದ್ದಾನೆ? ಪ್ರಪಂಚದ ಎಲ್ಲಾ ಸಾಂಪ್ರಾದಾಯಿಕ ರೈತರ ಬದುಕು ವಾತಾವರಣವನ್ನು ಅವಲಂಭಿಸಿದೆ. ಭಾರತದ ಕೃಷಿ ಪ್ರದೇಶದ ೭೦% ಪ್ರದೇಶ ಮಳೆಯಾಧಾರಿತವಾಗಿದೆ. ಕಾಲ-ಕಾಲಕ್ಕೆ ಮಳೆಯಾದರೆ ಮಾತ್ರ ರೈತನ ಬದುಕು ತುಸು ಹಸನಾಗುತ್ತದೆ. ಬೀಜ ಬಿತ್ತುವಾಗ ಬರಗಾಲ, ಕೊಯ್ಲಿನ ಸಂದರ್ಭದಲ್ಲಿ ಅತಿವೃಷ್ಟಿಯಾದಲ್ಲಿ ರೈತನ … Read more

ಭಾರತಾಂಭೆಯೇ ನಿನ್ನ ಮಕ್ಕಳು ಕ್ಷೇಮವೇ???: ಅಖಿಲೇಶ್ ಚಿಪ್ಪಳಿ

ದೇಶದ ಜನ ಗಣಪತಿ ಹಬ್ಬದ ಸಡಗರದಲ್ಲಿದ್ದಾರೆ. ಬ್ರಹ್ಮಚಾರಿ ಗಣೇಶನ ಹಬ್ಬದ ವಾರ್ಷಿಕ ವಹಿವಾಟನ್ನು ಲೆಕ್ಕ ಹಾಕಿದವಾರೂ ಇಲ್ಲ. ವಿಘ್ನನಿವಾರಕನೆಂಬ ಖ್ಯಾತಿವೆತ್ತ, ಮೊದಲ ಪೂಜಿತನೆಂಬ ಹೆಗ್ಗಳಿಕೆಗೊಳಗಾದ ಗಣೇಶನ ಹಬ್ಬಕ್ಕೂ, ರಾಜಕೀಯಕ್ಕೂ, ಮಾಲಿನ್ಯಕ್ಕೂ ನೇರಾನೇರ ಸಂಬಂಧವಿರುವುದು ಸುಳ್ಳೇನಲ್ಲ. ಗಲ್ಲಿ-ಗಲ್ಲಿಗಳಲ್ಲಿ ಗಣಪತಿ ಪೆಂಡಾಲ್ ತಯಾರಾಗಿದೆ. ವರ್ಷವೂ ರಶೀದಿ ಪುಸ್ತಕ ಹಿಡಿದು ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಗಣಪತಿಯನ್ನು ವಿಸರ್ಜನೆ ಮಾಡುವಾಗಿನ ಮಾಲಿನ್ಯದ ಪ್ರಮಾಣವೂ ಹೆಚ್ಚುತ್ತಲೇ ಇದೆ. ಪಟಾಕಿ ಸಿಡಿಸುವುದು ಎಂದರೆ ಹಿಂದೆಲ್ಲಾ ಸಂಭ್ರಮವಾಗಿತ್ತು. ಈಗ ಪ್ರತಿಷ್ಠೆಯ ವಿಷಯವಾಗಿದೆ. ರಾಸಾಯನಿಕ ಬಣ್ಣಗಳಿಂದ ಕೂಡಿದ … Read more

ಕೊಲ್ಲುವ ರಸ್ತೆಗಳ ಪುರಾಣ: ಅಖಿಲೇಶ್ ಚಿಪ್ಪಳಿ

ಸೊರಬ ತಾಲ್ಲೂಕಿನ ಉಳವಿ ಹೋಬಳಿಯ ಕಾನಳ್ಳಿಯಿಂದ ತನ್ನ ಗಂಡ ಮತ್ತು ಎರಡು ಮುದ್ದು ಮಕ್ಕಳನ್ನು ಕರೆದುಕೊಂಡು ಹೈಸ್ಕೂಲ್ ಮಾಸ್ತರಾದ ತನ್ನ ಅಣ್ಣನಿಗೆ ರಾಖಿ ಕಟ್ಟಲು ಮೊಬೈಕಿನಲ್ಲಿ ಹೊರಟಿದ್ದ ಅಂಗನವಾಡಿ ಟೀಚರ್ ದಾರಿ ಮಧ್ಯದಲ್ಲಿ ಗುಂಡಿ ಹಾರಿದ ಬೈಕಿನಿಂದ ಬಿದ್ದು ತಲೆಗೆ ಏಟಾಗಿ ಸತ್ತೇ ಹೋದಳು. ಹಾಲು ಕುಡಿಯುವ ಮಗುವಿಗೆ ಏನೂ ಆಗಲಿಲ್ಲ. ಆಕೆಗಿನ್ನೂ ಇಪ್ಪತ್ತೇಳು ವರ್ಷವಾಗಿತ್ತಷ್ಟೆ. ಕಳಪೆ ಕಾಮಗಾರಿಯಿಂದಾದ ಹೊಂಡ ಚಿಕ್ಕ ಮಕ್ಕಳನ್ನು ತಬ್ಬಲಿ ಮಾಡಿತು. ಹೀಗೆ ದೇಶದಲ್ಲಿ ನಿತ್ಯವೂ ಸಾವಿರಾರು ಸಾವು ಸಂಭವಿಸುತ್ತದೆ. ಇದರಲ್ಲಿ ದೂರುವುದು … Read more