ಚಾತುರ್ಮಾಸ: ಉಮೇಶ ಕ. ಪಾಟೀಲ

ಆಷಾಢಮಾಸದಿಂದ ನಾಲ್ಕು ತಿಂಗಳುಗಳ ಕಾಲ ನಡೆಯುವ ಒಂದು ವ್ರತ ಆಚರಣೆಯಾಗಿದೆ. ಆಷಾಢ ಶುಕ್ಲ ಪೂರ್ಣಿಮೆಯಿಂದ ಕಾರ್ತಿಕ ಶುಕ್ಲ ಪೂರ್ಣಿಮೆಯ ವರೆಗೆ ನಾಲ್ಕು ತಿಂಗಳ ಸಮಯವನ್ನು ‘ಚಾತುರ್ಮಾಸ’ ಎಂದು ಪರಿಗಣಿಸಲ್ಪಟಿದೆ. ಚಾತುರ್ಮಾಸ ಸಮೀಪಿಸದೊಡನೆ ಪೂಜ್ಯ ಮುನಿಗಳು, ಆರ್ಯಿಕೆಯರು, ತ್ಯಾಗಿಗಳು, ಬ್ರಹ್ಮಚಾರಿಗಳು ಮೊದಲಾದ ತಾವು ಚಾತುರ್ಮಾಸಕ್ಕಾಗಿ ನಿಶ್ಚಿಯಿಸಿದ ಗ್ರಾಮ, ನಗರಗಳನ್ನು ಆಶ್ರಯಿಸುತ್ತಾರೆ. ಈ ವ್ರತವನ್ನು ಆಷಾಢ ಶುಕ್ಲ ಏಕಾದಶಿ, ದ್ವಾದಸೀ, ಹುಣ್ಣಿಮೆ, ಕರ್ಕಾಟಕ ಸಂಕ್ರಮಣ, ಇವುಗಳಲ್ಲೊಂದು ದಿವಸ ಈ ವ್ರತವನ್ನು ಪ್ರಾರಂಭಿಸುತ್ತಾರೆ. ಈ ವ್ರತ ಆಚರಣೆಯನ್ನು ಪ್ರಾರಂಭ ಕಾಲ ಭಿನ್ನವಾಗಿದ್ದರು … Read more

ಭಾರತದಲ್ಲಿ ಏಕರೂಪ ಶಿಕ್ಷಣದ ಒಂದು ಚರ್ಚೆ: ಸಿದ್ದುಯಾದವ್ ಚಿರಿಬಿ

ಶಿಕ್ಷಣ ಎಂಬ ಪದಕ್ಕೆ ವ್ಯಾಪಕವಾದ ಅರ್ಥವಿದೆ. ಆ ಅರ್ಥವನ್ನು ಹಿಡಿದಿಡುವ ಒಂದು ಸಮರ್ಥ ವ್ಯಾಖ್ಯೆಯನ್ನು ಅಥವಾ ನಿರ್ದಿಷ್ಟ್ಟವಾಗಿ ಇದೇ ಶಿಕ್ಷಣ ಎಂಬ ವ್ಯಾಖ್ಯೆಯನ್ನು ಕೊಡುವುದು ಕಷ್ಟ್ಟ .ತತ್ವಜ್ಞಾನಿಗಳು ಶಿಕ್ಷಣತಜ್ಞರು ,ರಾಜಕಾರಣಿಗಳು ಮತ್ತು ಸಾಧುಸಂತರು ಇನ್ನು ಮುಂತಾದವರೆಲ್ಲರೂ ತಮ್ಮ ತಮ್ಮ ದೃಷ್ಟಿ ಕೋನಗಳಿಗನುಗುಣವಾಗಿ ಶಿಕ್ಷಣವನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಯೊಂದು ಸಂಪೂರ್ಣವಲ್ಲದಿದ್ದರು ಶಿಕ್ಷಣದ ಬಗ್ಗೆ ಪರಿಗಣಿಸಬೇಕಾದ ಒಂದಲ್ಲ ಒಂದಂಶವನ್ನು ಎತ್ತಿ ಹಿಡಿಯುವದರಿಂದ ಶಿಕ್ಷಣದ ಯಾವುದೇ ವ್ಯಾಖ್ಯೆಯನ್ನು ತಳ್ಳಿಹಾಕುವಂತಿಲ್ಲ. ಇದರಿಂದ ಶಿಕ್ಷಣದ ಪರಿಕಲ್ಪನೆಯು ಸಂಕೀರ್ಣವಾದುದು ಹಾಗೂ ಸಕ್ರಿಯವಾದುದು ಎಂದು ಹೇಳಬಹುದಾಗಿದೆ. ನಿರಂತರವಾಗಿ … Read more

 ಅರಳುಗುಪ್ಪೆ : ಕಲ್ಲರಳಿ ಕಲೆಯಾಗಿ…: ದಂಡಿನಶಿವರ ಮಂಜುನಾಥ್

ಬೇಲೂರು-ಹಳೇಬೀಡಿನ ದೇವಾಲಯಗಳು ವಿಶ್ವದಲ್ಲಿಯೇ ಶಿಲ್ಪಕಲೆಗೆ ಹೆಸರುವಾಸಿಯಾಗಿವೆ. ಹಾಗೆಯೇ ಅದೆಷ್ಟೋ ದೇವಾಲಯಗಳು ಶಿಲ್ಪಕಲಾ ಸೌಂದರ್ಯದಿಂದ ತುಳುಕುತ್ತಿದ್ದರೂ ಸಹ ಇನ್ನೂ ಅಪರಿಚಿತವಾಗಿಯೇ ಉಳಿದಿದೆ. ಅಂತಹ ಅಪರಿಚಿತ ದೇವಾಲಯಗಳಲ್ಲಿ ಅರಳುಗುಪ್ಪೆಯ ದೇವಾಲಯಗಳೂ ಸೇರ್ಪಡೆಗೊಂಡಿವೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿರುವ ಅರಳುಗುಪ್ಪೆ ಎಂಬ ಕುಗ್ರಾಮ ಕಿಬ್ಬನಹಳ್ಳಿ ಹೋಬಳಿಗೆ ಸೇರಿದೆ. ಇಲ್ಲಿರುವ ಹೊಯ್ಸಳರ ಕಾಲದ ಶ್ರೀ ಚನ್ನಕೇಶವ ದೇವಾಲಯ ಮತ್ತು ದ್ರಾವಿಡ ಶೈಲಿಯ ಶ್ರೀ ಕಲ್ಲೇಶ್ವರ ದೇವಾಲಯಗಳು ಶಿಲ್ಪಕಲಾ ಸೌಂದರ್ಯದಿಂದ ಕಂಗೊಳಿಸುತ್ತಿವೆ. ಚನ್ನಕೇಶವ ದೇಗುಲ : ಚನ್ನಕೇಶವ ದೇವಾಲಯವನ್ನು ನೋಡಿದ ತಕ್ಷಣ ನಮಗೆ ನೆನಪಾಗುವುದು ಬೇಲೂರು ಮತ್ತು … Read more

ಉತ್ತರಕರ್ನಾಟಕ ಉದಯೋನ್ಮುಖ ಪ್ರತಿಭೆ ಪೂರ್ಣಿಮಾ ದೇಶಪಾಂಡೆ: ಗುಂಡೇನಟ್ಟಿ ಮಧುಕರ

      ಬೆಳಗಾವಿ ಭಾಗ್ಯನಗರದಲ್ಲಿ ವಾಸಿಸುತ್ತಿರುವ  ಪೂರ್ಣಿಮಾ ದೇಶಪಾಂಡೆ ಇವಳಿಗೆ ಮೊದಲಿನಿಂದಲೂ ಒಂದೇ ಆಸೆ. ತಾನು ಚಲನಚಿತ್ರ ನಿರ್ದೇಶಕಿಯಾಗಬೇಕೆಂಬುದು. ಇದು ಹೇಗೆ ಅವಳ ಮನಸ್ಸಿನಲ್ಲಿ ಮೊಳಕೆಯೊಡೆಯಿತೋ ಗೊತ್ತಿಲ್ಲ. ಆದರೂ ಅವಳದು ಒಂದೇ ಆಸೆ ನಿರ್ದೇಶಕಿಯಾಗಬೇಕೆಂದು. ಅದರಂತೆ ಅವರ ತಂದೆ ತಾಯಿ ಇಬ್ಬರೂ ಸಹಕರಿಸಿದರು. ಮಗಳ ಮನಸ್ಸಿನ ವಿರುದ್ಧ ಹೋಗಬಾರದೆಂದು ಅವಳಲ್ಲಿರುವ  ಪ್ರತಿಭೆಗೆ ನೀರೆರೆಯಲು ಮುಂದಾದರು. ಎಲ್ಲ ಪಾಲಕರೂ ತಮ್ಮ ಮಕ್ಕಳು ಇಂಜನಿಯರರು ಇಲ್ಲವೇ ಡಾಕ್ಟರರಾಗಬೇಕು. ಇವೆರಡನ್ನು ಬಿಟ್ಟು ಬೇರೆ ಜಗತ್ತೇ ಇಲ್ಲವೆಂದು ವರ್ತಿಸುತ್ತಿರುವ ಇಂದಿನ ಜಗತ್ತಿನಲ್ಲಿ. ಪೂರ್ಣಿಮಾಳ … Read more

ಜಗತ್ಪ್ರಸಿದ್ಧ ಪುರಿ ಜಗನ್ನಾಥ ಮಂದಿರ: ಕೃಷ್ಣವೇಣಿ ಕಿದೂರ್.

ಶಂಕರಾಚಾರ್ಯರು   ಸ್ಥಾಪಿಸಿದ   ಚಾರ್ ಧಾಮ್ ಗಳಲ್ಲಿ ಬದರಿನಾಥ  ದ್ವಾರಕಾ,  ಪುರಿ  ಮತ್ತು  ರಾಮೇಶ್ವರಂ  ಪವಿತ್ರ   ಪುಣ್ಯಕ್ಷೇತ್ರಗಳು.  ಒರಿಸ್ಸಾದ  ನೆಲದಲ್ಲಿ  ಈ ಚಾರ ಧಾಮ್ ಗಳಲ್ಲಿ  ಒಂದಾದ ಪುರಿ ಜಗನ್ನಾಥ  ದೇವಸ್ಥಾನ    ಸ್ಥಾಪಿಸಲಾಗಿದೆ.  ಅಲ್ಲದೆ   ಇಲ್ಲಿನ  ಕೊನಾರ್ಕ್  ಸೂರ್ಯ  ದೇಗುಲ   ಜಗತ್ ಪ್ರಸಿದ್ಧ.ದೇಶ ವಿದೇಶಗಳ  ಸಹಸ್ರಾರು ಭಕ್ತರು  ನಿತ್ಯ ನಿತ್ಯ  ಇಲ್ಲಿಗೆ  ತಲಪುತ್ತಾರೆ.                      ಬೆಳಗಿನ  ಹತ್ತುಘಂಟೆಯ … Read more

ಸ್ವಾತಂತ್ರ್ಯೋತ್ಸವದ ಪಾವನ ದಿನ: ಹೊಳಲ್ಕೆರೆ ಲಕ್ಷ್ಮಿವೆಂಕಟೇಶ್

ನಮ್ಮ ದೇಶದ  ಸ್ವಾತಂತ್ರ್ಯೋತ್ಸವದ ಪಾವನ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ ! ಈ  ಹಬ್ಬದ ಆಚರಣೆ ಕೇವಲ ಸಿಹಿ-ತಿಂಡಿ ತಿನ್ನಲು, ಇಲ್ಲವೇ ಮಜಾಮಾಡುತ್ತಾ ಕಾಲಹರಣ ಮಾಡುವುದಕ್ಕಲ್ಲ ಎನ್ನುವುದನ್ನು ನಾವು ಮೊದಲು ತಿಳಿಯಬೇಕು, ಮತ್ತು ಇತರರಿಗೆ ತಿಳಿಸಬೇಕು ಸಹಿತ ! ಬಾಲಗಂಗಾಧರ ತಿಳಕ್, ಗಾಂಧಿ, ನೆಹರು, ಪಟೇಲ್, ಬೋಸ್, ಮತ್ತು ಸಾವಿರಾರು ಜನ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತಮ್ಮ ತನುಮನ ಧನಗಳನ್ನು ಒತ್ತೆಯಿಟ್ಟು  ನಮ್ಮ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದಿದ್ದಾರೆ. ಆ ಎಲ್ಲಾ ಮಹನೀಯರು ಮಹಿಳೆಯರಿಗೆ ನಾವು ಶಿರಬಾಗಿ ನಮನ … Read more

ಜೀವನದ ಸಂತೆಯಲಿ ಮಂದವಾಗಿದೆ ಬೀದಿದೀಪ: ಸಿಂಧು ಭಾರ್ಗವ್.

ಪ್ರತಿ ಸಂಜೆಯಾಯಿತೆಂದರೆ ಹಬ್ಬದ ವಾತಾವರಣವಿರುವ ಮಲ್ಲೇಶ್ವರಂ ಎಂಟನೇ ತಿರುವಿನಲ್ಲಿ ಸುತ್ತಾಡುವುದೇ ಕಣ್ಣಿಗೆ ಹಬ್ಬ… ಹದಿನೈದನೇ ತಿರುವಿನವರೆಗೂ ಸಣ್ಣಸಣ್ಣ  ವ್ಯಾಪಾರದಂಗಡಿಗಳು ರಸ್ತೆ ಬದಿಯಲ್ಲಿ ತುಂಬಾ ಕಾಣಸಿಗುತ್ತವೆ. ಹೂವಿನ ರಾಶಿ, ಹಣ್ಣು-ಹಂಪಲು, ಆಟಿಕೆಗಳು, ಬಟ್ಟೆ ವ್ಯಾಪಾರಿಗಳು, ಚಪ್ಪಲ್ ಅಂಗಡಿ, ಬ್ಯಾಂಗಲ್ಸ್ ,ಬ್ಯಾಗ್ ಗಳು, ತಿನ್ನಲು ಸ್ವೀಟ್ ಕಾರ್ನ್,ಕತ್ತರಿಸಿ ಅಲಂಕರಿಸಿಟ್ಟ ಮಾವು , ಚರುಮುರಿ, ಸಮೋಸ, ಕಚೋರಿ, ಕುಡಿಯಲು ಕಾಫಿ, ಟೀ, ಜ್ಯೂಸ್ ಏನಿದೆ ?ಏನಿಲ್ಲ ? ಕೇಳುವುದೇ ಬೇಡ. ಅಪರೂಪಕ್ಕಾದರೂ ಬೇಟಿ ನೀಡುವುದೆಂದರೆ ನಮಗೂ ಖುಷಿ. ತುಂಬಿದ ಜೇಬಿನೊಂದಿಗೆ ಹೋದರೆ … Read more

ಕಾಲೇಜ್ ಎಂಬ ಬಣ್ಣಬಣ್ಣದ ದೃಶ್ಯಕಾವ್ಯ: ಗಾಯತ್ರಿ ಬಡಿಗೇರ

ಮುಂಗಾರು ಮಳೆ ಶುರುವಾಗುವ ಅಮೃತ ಕ್ಷಣ. ಎಂತವರನ್ನೂ ಕನಸಿನ ಲೋಕಕ್ಕೆ ಕೊಂಡ್ಯೊಯುವ ಒಂದು ಅದ್ಭುತ ಘಳಿಗೆ. ಪರಸ್ಪರ ಅಪ್ಪಿಕೊಳ್ಳುವ ತಂಗಾಳಿಯ ತಂಪಿನೊಂದಿಗೆ, ಚಿಗುರುವ  ಕನಸಿನೊಂದಿಗೆ ವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಇತರರು ಸುಮಾರು ವೇಷ-ಭೂಷಣದೊಂದಿಗೆ ಅಂಗಳವನ್ನು ಅಲಂಕರಿಸುವರು. ಮೊದ-ಮೊದಲು ಮೌನದಲ್ಲಿ, ಕಣ್ಣಿನ ಸಲಿಗೆಯಲ್ಲಿ ಪರಿಚಯವಾಗವ ಅನಾಮಿಕರು.  ರಿಪ್ರಸೇಂಟ್ ಮಾಡಲು ಹೊರಟ ಮಾಕ್ರ್ಸಕಾರ್ಡ್ ಹೊತ್ತ ಪ್ಲ್ಯಾಸ್ಟಿಕ ಕವರ್‍ಗಳ ಕಾರಬಾರು, ಮಾರುಕಟ್ಟೆಯಲ್ಲಿ ಸೇಲ್ ಆಗದೆ ಉಳಿದ ಮಾರ್ಡನ್ ಟಾಪ್‍ಗಳು, ರಂಬೆ, ಊರ್ವಶಿ,  ಮೇನಕೆಯರ ನಾಟ್ಯದ ಜಲಕನ್ನು ಉಂಟು ಮಾಡುವ ವರ್ತನೆಗಳು, ದೇಹದ … Read more

ದತ್ತಿನಿಧಿ ಸದ್ಭಳಕೆಯಾಗಲಿ ಲೂಸಿ ಸಾಲ್ಡಾನ: ಲಕ್ಕಮ್ಮನವರ್

ಧಾರವಾಡ ಅಗಸ್ಟ:19: ಧಾರವಾಡದ ನಿವೃತ್ತ ಶಿಕ್ಷಕಿ ಲೂಸಿ.ಸಾಲ್ಡಾನ ಅವರು ತಮ್ಮ 55ನೇ ದತ್ತಿನಿಧಿಯನ್ನು ಜೀರಿಗವಾಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಿದರು. ದತ್ತಿ ನಿಧಿಯನ್ನು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯವರು ಮತ್ತು ಶಾಲಾ ಮುಖ್ಯ ಶಿಕ್ಷಕರುಗಳಿಗೆ ಹಸ್ತಾಂತರಿಸಿ ಮಾತನಾಡಿದ ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದ ನಾನು ಅನಿರಿಕ್ಷಿತವಾಗಿ ತಂದೆ ತಾಯಿಯನ್ನು ಕಳೆದುಕೊಂಡು ಬಡತನವನ್ನು ಕಣ್ಣಾರೆ ಕಂಡು, ಎಲ್ಲೋ ಎದ್ದು ಬಿದ್ದು ಅಕ್ಷರ ಕಲಿತು ಶಿಕ್ಷಕಿಯಾಗಿ ಇಂದ ನಾನು ನಿವೃತ್ತನಾಗಿದ್ದೇನೆ. ಹಳ್ಳಿಗಾಡಿನಲ್ಲಿ ಮಕ್ಕಳನ್ನು ಪಾಲಕರು ಬಡತನದ ಕಾರಣಕ್ಕಾಗಿ ಶಾಲೆ … Read more

ರಾಜ್ಯಮಟ್ಟದ ಪ್ರಪ್ರಥಮ ಹಾಸ್ಯಸಾಹಿತ್ಯ ಸಮ್ಮೇಳನ: ಗುಂಡೇನಟ್ಟಿ ಮಧುಕರ

ಹಾಸ್ಯಸಾಹಿತ್ಯ : ಸಮ್ಮೇಳನಕ್ಕೆ ಪ್ರಥಮ ಪಾದಾರ್ಪಣೆ ನಗೆಮುಗುಳು ಹಾಸ್ಯ ಮಾಸಪತ್ರಿಕೆಯ 15 ನೇ ವಾರ್ಷಿಕೋತ್ಸವ ನಿಮಿತ್ತ ರಾಜ್ಯಮಟ್ಟದ ಪ್ರಪ್ರಥಮ ಹಾಸ್ಯಸಾಹಿತ್ಯ ಸಮ್ಮೇಳನ ಹಾಸ್ಯ ಸಾಹಿತ್ಯ ಕುರಿತು ಉಪನ್ಯಾಸ – ಹಾಸ್ಯ ದಿಗ್ಗಜರ ಮೆಲಕು –  ಹಾಸ್ಯ ಕವಿಗೋಷ್ಠಿ – ಹಾಸ್ಯಭಾಷಣಗಳು –ನಗೆನಾಟಕಗಳು      ತುಮಕೂರ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸೇರಿದ ಎಲ್ಲರ ಮುಖದಲ್ಲಿ ನಗು, ಸಂತೋಷಗಳು ಎದ್ದು ಕಾಣುತ್ತಿದ್ದವು. ಎಲ್ಲ ಹಾಸ್ಯಪ್ರಿಯರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹಾಸ್ಯಾಸಕ್ತರು ಆಗಮಿಸಿದ್ದರು. ಒಬ್ಬರು ಒಂದು ಹಾಸ್ಯಚಟಾಕಿ … Read more

ಪ್ರೀತಿ ಮಾಡೋ ಮುಂಚೆ: ಮಲ್ಲಿಕಾರ್ಜುನ ದಾಸನಕೊಪ್ಪ

ಕಾಲೇಜು ಆರಂಭವಾಗಿ ಆರು ತಿಂಗಳುಗಳೇ ಕಳೆದಿವೆ. ಹೇಳದೆ ಪ್ರೀತಿಸುವ  ಹುಡುಗ ಹುಡುಗಿಯರಿಗೆ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ಒಂದು ವೇದಿಕೆ ಸಿದ್ಧವಾಗಿದೆ. ಹುಡುಗ ಹುಡುಗಿಯರೆಲ್ಲಾ ಸೂಕ್ತ ಪ್ರಿಯತಮ/ಮೆಯ ಹುಡುಕಾಟದಲ್ಲಿದ್ದಾರೆ. ಆ ಪ್ರಯತ್ನದಲ್ಲಿ ಕೆಲವರು  ಯಶಸ್ವಿಯು ಆಗಿದ್ದಾರೆ. ಇನ್ನು ಕೆಲವರು ತಮ್ಮ ಪ್ರೀತಿಯನ್ನು ಹೇಗೆ ಅವಳಿ/ನಿಗೆ ಅರಿಕೆ ಮಾಡಿಕೊಳ್ಳಬೇಕೆಂಬ  ತೋಳಲಾಟದಲ್ಲಿದ್ದಾರೆ. ಈ ಸಂದರ್ಭದಲ್ಲಿಯೇ “ವ್ಯಾಲೇಂಟೆನ್ಶ ಡೇ” ಸಮೀಪಸಿದೆ. ಹುಡುಗ ಹುಡುಗಿಯರ ಎದೆಯಲ್ಲಿ ಲಬ್-ಡಬ್ ಶುರುವಾಗಿದೆ.  ನಾನು ಪ್ರೀತಿಸಿದ ಹುಡುಗ/ಗಿ ನನ್ನಲ್ಲಿ ಬಂದು ಗುಲಾಬಿ ಹಿಡಿದು ಪ್ರೀತಿ ಯಾಚಿಸುತ್ತಾನಾ/ಳಾ??  ನನ್ನ … Read more

ಮಲಯಾಳ ಸಿನೆಮಾ ರಂಗವೂ ಮಲಬಾರಿನ ಸಂಸ್ಕೃತಿಯೂ: ಕೃಷ್ಣವೇಣಿ ಕಿದೂರ್

            ಬಹಳಷ್ಟು  ಜನರಿಗೆ  ಮಲಯಾಳ   ಚಿತ್ರಗಳೆಂದರೆ  ಅದು ನೀಲಿ ಚಿತ್ರಗಳಿಗೆ  ಹತ್ತಿರದ್ದು ಎಂಬ  ತಪ್ಪು ಕಲ್ಪನೆಯಿದೆ.    ಜಾಹೀರಾತುಗಳು ತೋರಿಸುವ   ಚಿತ್ರಗಳು   ಹಾಗಿರುತ್ತದೆ ಎನ್ನಬಹುದು.   ಆದರೆ ಒಬ್ಬ ಕೇರಳೀಯಳಾಗಿ  ಮಲಯಾಳಂ  ಚಲನಚಿತ್ರಗಳೆಂದರೆ  ಅಲ್ಲಿ ಮಲಬಾರಿನ ( ಕೇರಳ) ಸಾಂಸ್ಕೃತಿಕ  ಹಿನ್ನಲೆಗೆ  ಹೆಚ್ಚಿನ ಒತ್ತು  ಸಿಗುತ್ತದೆ  ಎಂದು  ಕಂಡ  ಕಾರಣ ಆ ಮಿಥ್ಯೆಯನ್ನು  ಅಲ್ಲಗಳೆಯಬೇಕಾಗಿದೆ. ಅರಬ್ಬಿ ಸಮುದ್ರದ  ಪಕ್ಕದ ಪುಟ್ಟ ರಾಜ್ಯ  ಕೇರಳ.  ಇದಕ್ಕೆ ಕೇರ … Read more

ನೆಗಡಿಯಾದಾಗ ಮೂಗನ್ನೇ ಕೊಯ್ದರೆ,,,!: ಆರ್.ಬಿ.ಗುರುಬಸವರಾಜ. ಹೊಳಗುಂದಿ

ಮೂಗು ಇದ್ದವರಿಗೆಲ್ಲಾ ನೆಗಡಿ ಬರುವುದು ಸರ್ವೇ ಸಾಮಾನ್ಯ. ಪದೇ ಪದೇ ನೆಗಡಿ ಬರುತ್ತದೆ ಅಂತ ಮೂಗನ್ನೇ ಕೊಯ್ದು ಹಾಕುತ್ತೇವೆಯೇ? ಇಲ್ಲವಲ್ಲ. ಆದರೆ ಈಗ ಕರ್ನಾಟಕ ರಾಜ್ಯದಲ್ಲಿ ಇಂತಹದ್ದೊಂದು ಮೂಗನ್ನು ಕೊಯ್ಯಲು ಮುಂದಾದ ಪ್ರಕ್ರಿಯೆ ಶುರುವಾಗಿದೆ. ಅದೇನೆಂದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಅದೇ ಲೋಕಾಯುಕ್ತ ಸಂಸ್ಥೆಯನ್ನು ಕೋಲೇ ಬಸವನಂತೆ ಮಾಡ ಹೊರಟಿರುವುದು.      ಭ್ರಷ್ಟಾಚಾರ ನಿಗ್ರಹಕ್ಕಾಗಿ ಭಾರತದ ರಾಜ್ಯಗಳಲ್ಲಿ ನಿಯೋಜಿತಗೊಂಡಿರುವ ‘ಲೋಕಾಯುಕ್ತ’ ಸಂಸ್ಥೆಯ ಅಧಿಕಾರವನ್ನು ಮೊಟಕುಗೊಳಿಸಿ ಅದಕ್ಕೆ ಪರ್ಯಾಯವಾಗಿ ಇನ್ನೊಂದು ಭ್ರಷ್ಟಾಚಾರ ನಿಗ್ರಹ ದಳ(ಎ.ಸಿ.ಬಿ.) ಎನ್ನುವ ಸಂಸ್ಥೆಯನ್ನು … Read more

ಗೋವಿಂದಯ್ಯನವರ ಗೃಹಬಂಧನ:ಕಿರಣ್ ಕುಮಾರ್ ಕೆ. ಆರ್.

'ನಾಳೆ ಅಪ್ಪನಿಗೆ ಟೌನಿಗೆ ಹೋಗ್ಲಿಕ್ಕೆ ಹೇಳ್ಬೇಕು.', ಎಂದುಕೊಂಡ ರಾಜಮೂರ್ತಿ. ಅಪ್ಪ ಗೋವಿಂದಯ್ಯನವರಿಗೆ ಎಂಬತ್ತರ ಆಸುಪಾಸು. ಅವರದು ಮೊದಲಿನಿಂದಲೂ ಸ್ವಲ್ಪ ದುರ್ಬಲ ಶರೀರ. ಶಾರೀರವೂ ಅಷ್ಟೆ, ದುರ್ಬಲ. ಆದರೂ ಅವರದು ಬಿಡುವಿಲ್ಲದ ಓಡಾಟ. ಒಂದೆಡೆ ಸುಮ್ಮನೆ ಕುಳಿತವರಲ್ಲ. ಎಲ್ಲೋ ಒಂದು ಮದುವೆ ಎಂದರೆ ಅಡಿಗೆಗೆ ಸಹಾಯಕ್ಕೆ, ಇನ್ನೆಲ್ಲೋ ಪೂಜೆ ಎಂದರೆ ಅಲ್ಲಿಗೆ 'ಸುಧಾರಿಸಲಿಕ್ಕೆ', ಮತ್ತೆಲ್ಲೋ ಶ್ರಾದ್ಧವೆಂದರೆ ಅಲ್ಲಿಗೂ ಕೆಲಸದಲ್ಲಿ ಕೈ ಜೋಡಿಸಲಿಕ್ಕೆ – ಒಟ್ಟಿನಲ್ಲಿ ಯಾವ ಸಮಾರಂಭವಾದರೂ ಗೋವಿಂದಯ್ಯ ಅಲ್ಲಿರುತ್ತಿದ್ದರು. ಅವರ ಜೀವನವಿಡೀ ಅವರು ಮಾಡಿದ್ದು ಇದನ್ನೇ. 'ಈ … Read more

ಪ್ರಾಯ.. ಪ್ರಾಯ..ಪ್ರಾಯ..: ಪ.ನಾ.ಹಳ್ಳಿ.ಹರೀಶ್ ಕುಮಾರ್

ಹರೆಯದ ಮಾತು ಬಲು ಸೊಗಸು, ಅಂದವಾಗಿರುವುದೆಲ್ಲ ನನ್ನದೆಂಬ ಭಾವನೆ, ಮೀಸೆ ಚಿಗುರುವ ವಯಸು, ನಾವೀನ್ಯತೆಗೆ ಚಡಪಡಿಸುವ ಮನಸು, ಸೊಲನ್ನೊಪ್ಪದೇ ಬರೀ ಗೆಲುವೇ ಬೇಕೆಂಬ ಹಂಬಲ, ಹದಿನೈದು ದಾಟಿ ಬಂದ ಈ ವಯಸ್ಸು ನೋಡಿದ್ದೆಲ್ಲಾ ಸುಂದರವಾಗೇ ಕಾಣಬೇಕು, ಕೇಳಿದ್ದೆಲ್ಲಾ ಸಂಗೀತವೇ ಆಗಿರಬೇಕು, ಕಷ್ಟಕಾರ್ಪಣ್ಯಗಳಿಲ್ಲದೇ ಕೇವಲ ಸುಖದಲ್ಲೇ ಒರಳಾಡಬೇಕೆಂಬ ತುಡಿತ ಈ ಹರೆಯದ್ದು. ಮನ್ಮಥನನ್ನೂ ನಾಚಿಸುವ ರಸಿಕತೆ, ಮದಕರಿಯನ್ನೂ ಮೀರಿಸುವ ಧೈರ್ಯ, ಜಗತ್ತನ್ನೇ ಗೆಲ್ಲಬಲ್ಲ ಆತ್ಮವಿಶ್ವಾಸ ಈ ಹುಚ್ಚುಕೋಡಿ ಮನಸ್ಸಿನದು. ಪರಾವಲಂಬನೆಯಿಂದ ಹೊರಬಂದು ಸ್ವಾವಲಂಬಿ ಜೀವನದತ್ತ ಮುಖಮಾಡುವ ಮಧ್ಯಂತರ ಅವಧಿಯೇ … Read more

ಮುಂಬೈ ಮುಂಗಾರು ಮಳೆ: ಅಪರ್ಣಾ ರಾವ್

ನೀನು ಇನ್ನೇನು ಎರಡು ದಿನದಲ್ಲಿ ಬರ್ತೀಯ ಅಂತ ಗುಲ್ಲು ಹಬ್ಬಿತ್ತು.  ಎಲ್ಲಾ ಕಡೆ ನಿಂದೇ ಜಪ. ನನಗೂ ನೀನು ಬರೋ ನಿರೀಕ್ಷೆ  ಬೆಟ್ಟದಷ್ಟು..  ಆದ್ರೆ  ಯಾರ ಹತ್ರಾನೂ  ಹೇಳ್ಕೊಲ್ಲಿಲ್ಲ. ನಿನ್ನ ನೆನಪಾದಾಗಲೆಲ್ಲಾ ಒಂದು ದೀರ್ಘ ಬಿಸಿ ಉಸಿರು ಬಿಟ್ಟಿದ್ದಷ್ಟೇ. ನನಗೆ  ಸಿಟ್ಟೂ ಕೂಡ ನಿನ್ಮೇಲೆ.. ಅದೆಷ್ಟು ಜನರಿಗೆ ನೀನು ಪ್ರಿಯತಮ.? ನೀನು ನನಗಿಂತಾ ಹೆಚ್ಚು ಆ ಊರ್ಮಿಳೆ  ಇಳೆ ಜೊತೆ ಸರಸ ಆಡೋ ವಿಷ್ಯ ನನಗೇನು ಗೊತ್ತಿಲ್ವಾ? ನೀನು ಅವಳು ದೂರದಲ್ಲೆಲ್ಲೋ ಸೇರೋದನ್ನ ವಾಸನೆಯಲ್ಲೇ ಕಂಡು ಹಿಡಿತೀನಿ … Read more

ಕವಿತೆಯ ಜಾಡು ಹಿಡಿದು: ಸ್ಮಿತಾ ಅಮೃತರಾಜ್. ಸಂಪಾಜೆ.

ಈ ಕವಿತೆ ಒಮ್ಮೊಮ್ಮೆ ಅದೆಷ್ಟು ಜಿಗುಟು ಮತ್ತುಅಂಟಂಟು ಅಂದ್ರೆ ಹಲಸಿನ ಹಣ್ಣಿನ ಮೇಣದ ತರ. ಮತ್ತೆ ಮತ್ತೆ  ತಿಕ್ಕಿದಷ್ಟೂ ಅಂಟಿಕೊಳ್ಳುತ್ತಾ, ಬಿಡದೇ ಕಾಡುತ್ತಾ , ಸತಾಯಿಸುತ್ತಾ, ಹಿಂದೆ ಮುಂದೆ ಸುತ್ತಿ ಸುಳಿದು ಯಾವುದೋ ಭಾವನಾ ತೀರಕ್ಕೆ ಲಗ್ಗೆಯಿಡುತ್ತಾ ತನ್ನನ್ನು ತಾನು ಮರೆವಿಗೆ ನೂಕಿಬಿಡುತ್ತದೆ. ಅರೆ ಕ್ಷಣವೂ  ಬಿಟ್ಟೂ ಬಿಡದ ಆತ್ಮಸಂಗಾತಿಯಂತೆ ಪಕ್ಕಕ್ಕಿರುತ್ತದೆ. ಕವಿತೆ ಯಾವೊತ್ತೂ ನನ್ನ ಕೈ ಬಿಡಲಾರದು ಎಂಬ ಗುಂಗಿನಲ್ಲೇ, ತುಸು ಹೆಚ್ಚೇ ಹಚ್ಚಿಕೊಂಡು, ಯಾವುದಕ್ಕೂ ವಿನಾಕಾರಣ ತಲೆ ಕೆಡಿಸಿಕೊಳ್ಳದೇ, ಕವಿತೆಯನ್ನು ನನ್ನ ತೆಕ್ಕೆಯೊಳಗಿಟ್ಟೋ. . … Read more

ಕಲ್ತಪ್ಪವೂ ಒಂದಗುಳು ಅನ್ನವೂ: ಕೃಷ್ಣವೇಣಿ ಕಿದೂರ್

 ನಮ್ಮದು   ಕೇರಳ, ಕರ್ನಾಟಕದ  ಗಡಿಭಾಗದಲ್ಲಿ ಮನೆ. ಮನೆಯ ಎದುರಿಗೆ  ಅಂಗಳ ದಾಟಿದರೆ ವಿಸ್ತಾರವಾದ ಅಡಿಕೆ, ಬಾಳೆ, ಕೊಕ್ಕೋ ಮತ್ತುತೆಂಗಿನ ತೋಟ. ಪ್ರಾಥಮಿಕ  ಶಾಲೆ ಕೇರಳದಲ್ಲಿ. ಮನೆಯಿಂದ ಅರ್ಧ ಗಂಟೆಯ ಕಾಲ್ನಡಿಗೆಯ ಹಾದಿ. ಮಧ್ಯಾಹ್ನ ಶಾಲೆಯಲ್ಲಿ ಈಗಿನ ಹಾಗೆ ಬಿಸಿಯೂಟ ಇಲ್ಲ. ಮನೆಯಲ್ಲಿ ಬೆಳಗ್ಗೆ ಮಾಡಿದ ಗಂಜಿಗೆ ಇಷ್ಟು ಮಜ್ಜಿಗೆ ಸುರಿದು ಅದರ ಮೇಲೆ ಒಂದು ಮಾವಿನ ಮಿಡಿ ಉಪ್ಪಿನಕಾಯಿಯ ಮಿಡಿ ಹಾಕಿ ಲೆಫ್ಟ್, ರೈಟ್ ಮಾಡುತ್ತ ನಡೆದರೆ  ಎರಡು ರಾಜ್ಯಗಳಾಲ್ಲಿ ನಮ್ಮ ಸಂಚಾರ.  ಗಡಿ, ಬೇರೆ … Read more

ಬಾ ಗೆಳೆಯಾ ಹಾರಿಸೋಣ ಗಾಳಿಪಟ: ಮಲ್ಲೇಶ ಮುಕ್ಕಣ್ಣವರ

ಹಾಯ್ ಫ್ರೆಂಡ್ … ಈಗೆಲ್ಲಿರುವಿರೋ? ಏನು ಮಾಡುತ್ತಿರುವಿರೋ? ಗೊತ್ತಿಲ್ಲ. ಆದರೆ ನಿನ್ನ ನೋಡಬೇಕು ಅಂತ ನನ್ನ ಮನಸ್ಸು ಪರಿ ಪರಿಯಾಗಿ ಹಂಬಲಿಸುತ್ತಿದೆ. ನಿನಗೆ ನೆನಪಿದೆಯಾ? ಆಗ ನನಗೆ ನಿನೇ ಜಗತ್ತು. ಊಟ, ಆಟ, ಪಾಠ ಎನೇ ಇದ್ದರೂ ಅದರಲ್ಲಿ ನಮ್ಮಿಬ್ಬರದ್ದು ಸಮಪಾಲು ಸಮಬಾಳು. ಕಿತ್ತು ತಿನ್ನುವ ಬಡತನವಿದ್ದರು ನನಗೆ ಅದ್ಯಾವುದರ ಅರಿವು ಬರದಂತೆ ನೋಡಿಕೊಂಡವನು ನೀನು. ಹಬ್ಬ ಬರಲಿ ಜಾತ್ರೆ ಇರಲಿ ಮನೇಲಿ ಗಲಾಟೆ ಮಾಡಿ ನಿನ್ನಂತ ಬಟ್ಟೆನ ನಂಗೂ ಕೊಡಿಸುವರೆಗೂ ಬಿಡತಾನೇಯಿರಲಿಲ್ಲಾ. ನನ್ನ ಮೇಲೆ ಸಿಟ್ಟು … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಜ಼ರುದ್ದೀನ್‌ನ ಚೆರಿಹಣ್ಣಿನ ತರ್ಕ ಪೇಟೆಯಲ್ಲಿ ಮಾರುವ ಉದ್ದೇಶದಿಂದ ಒಂದು ಚೀಲ ತುಂಬ ಚೆರಿಹಣ್ಣನ್ನು ತನ್ನ ಕತ್ತೆಯ ಮೇಲೆ ಹೇರಿಕೊಂಡು ನಜರುದ್ದೀನ್ ಪಟ್ಟಣಕ್ಕೆ ಹೋಗುತ್ತಿದ್ದ. ದಾರಿಯಲ್ಲಿ ಒಂದು ಡಜನ್‌ ಮಕ್ಕಳು ಅವನನ್ನೂ ಅವನು ಒಯ್ಯುತ್ತಿದ್ದ ಚೆರಿಹಣ್ಣುಗಳನ್ನೂ ನೋಡಿದರು. ಕೆಲವು ಚೆರಿಹಣ್ಣುಗಳು ತಿನ್ನಲು ಸಿಕ್ಕುತ್ತವೆಂಬ ಸಂತೋಷದಿಂದ ಅವರು ನಜ಼ರುದ್ದೀನ್‌ನ ಸುತ್ತಲೂ ಹಾಡುತ್ತಾ ಕುಣಿಯತೊಡಗಿದರು. ಅವರು ಕೇಳಿದರು, “ಮುಲ್ಲಾ, ನಮಗೆ ಕೆಲವು ಹಣ್ಣುಗಳನ್ನು ಕೊಡು.” ನಜ಼ರುದ್ದೀನ್‌ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ. ಅವನಿಗೆ ಮಕ್ಕಳ ಮೇಲೆ ಬಲು ಪ್ರೀತಿ ಇತ್ತು, ಎಂದೇ ಅವರಿಗೆ … Read more