ಗಜಲ್ ಹಾದಿಯಲ್ಲಿ: ‘ನೇರಿಶಾ’ಳ ಹೊಂಬೆಳಕು: ಯಲ್ಲಪ್ಪ ಎಮ್ ಮರ್ಚೇಡ್

ಪುಸ್ತಕ : ‘ನೇರಿಶಾ’ (ಗಜಲ್ ಸಂಕಲನ)ಗಜಲ್ ಕವಿ: ನಂರುಶಿ ಕಡೂರುಬೆಲೆ : 180/-ಸಂಪರ್ಕಿಸಿ: 8073935296, 8277889529 ಗಜಲ್ ಸಂಕ್ಷಿಪ್ತ ಪರಿಚಯ : ಗಜಲ್‌ ಎಂದರೆ ಪ್ರೀತಿ–ಪ್ರೇಮ ಕುರಿತಾಗಿಯೇ ಬರೆಯಲಾಗಿರುವ ಮತ್ತು ಬರೆಯಬೇಕಾಗಿರುವ ಕಾವ್ಯ ಪ್ರಕಾರ ಎನ್ನುವುದು ಸರಿಯಲ್ಲ. ಸಾಂಪ್ರದಾಯಿಕ ವಸ್ತು ಮತ್ತು ವ್ಯಾಪ್ತಿ ಮೀರಿ ಗಜಲ್‌ ತುಂಬಾ ದೂರ ಕ್ರಮಿಸಿದೆ. ಇದರ ಗೇಯತೆ, ಲಯ, ಕೋಮಲ ವಿನ್ಯಾಸದಲ್ಲಿ ವರ್ತಮಾನಕ್ಕೆ ‘ಮುಖಾಮುಖಿ’ ಆಗುವುದಿಲ್ಲ ಎನ್ನುವ ಮತ್ತೊಂದು ಆಕ್ಷೇಪವಿದೆ. ಆದರೆ ಗಜಲ್‌ಗಳಲ್ಲಿ ಬಂಡಾಯ ಮತ್ತು ಸಾಮಾಜಿಕತೆಯ ಧ್ವನಿಯೂ ಇದೆ. ನವ್ಯಕಾವ್ಯದ … Read more

‘ವಿಚಿತ್ರ ವಿಕ್ಷಿಪ್ತ ನಿಕೃಷ್ಠ ಬಿಸಿಯುಸಿರ ಬೇಗೆಯಲಿ ತಣ್ಣನೆ ರೋಧಿಸುವ ಕೆಂಗುಲಾಬಿ’: ಎಂ. ಜವರಾಜ್

ಹನುಮಂತ ಹಾಲಗೇರಿ ಅವರ “ಕೆಂಗುಲಾಬಿ” ಯ ವಯಸ್ಸು ಹತ್ತತ್ತಿರ ದಶಕಗಳೇ ಆಗಿವೆ. ಇದು ಪುಸ್ತಕ ರೂಪದಲ್ಲಿ ಇದುವರೆಗೆ ಐದು ಆವೃತ್ತಿ ಕಂಡಿದೆ. ಈ ‘ಕೆಂಗುಲಾಬಿ’ ಪುಸ್ತಕ ರೂಪ ತಾಳುವ ಮೊದಲು ಆನ್ ಲೈನ್ ಪತ್ರಿಕೆಯಲ್ಲಿ ಪ್ರಕಟಗೊಂಡು ಸಾಹಿತ್ಯಾಸಕ್ತರ ಗಮನ ಸೆಳೆದಿತ್ತು. ಈ ಕೃತಿಯ ಕುರಿತಾಗಿ ಪತ್ರಿಕೆಗಳಲ್ಲಿ ಒಂದೆರಡು ಬರಹ ಓದಿದ್ದು ಬಿಟ್ಟರೆ ನಾನು ಈ ಕೃತಿ ಓದಿರಲಿಲ್ಲ. ನನ್ನ ಕಿರಿಯ ಮಿತ್ರರೊಬ್ಬರು ಸಾಕಷ್ಟು ಪುಸ್ತಕಗಳನ್ನು ಅಂಚೆ ಮೂಲಕ ತರಿಸಿಕೊಳ್ಳುತ್ತಾರೆ. ಅವರಿಗೆ ಈ ಎಲ್ಲ ಪುಸ್ತಕ ಓದಲು ಸಮಯಾಭಾವ … Read more

ಅಜ್ಜನ ಹಲ್ಲು ಸೆಟ್ಟು ಮಕ್ಕಳಿಗಾಗಿ ಕವಿತೆಗಳು: ಸೂಗೂರೇಶ ಹಿರೇಮಠ

ಕವಿಗಳು: ಗುಂಡುರಾವ್ ದೇಸಾಯಿ ಪ್ರಕಾಶಕರು: ಜಿ ಜಿ ದೇಸಾಯಿ ಮಸ್ಕಿ ಅಜ್ಜನ ಹಲ್ಲು ಸೆಟ್ಟು ಮಕ್ಕಳ‌ಸಾಹಿತ್ಯದ ಮೂಲ ಪುರುಷರೆಂದರೆ ಅಜ್ಜ ಅಜ್ಜಿ ಮೊಬೈಲ್ ಟೀವಿಗಳಿಲ್ಲ ಕಾಲದಲ್ಲಿ ನಮ್ಮ ಅಜ್ಜ ಅಜ್ಜಿಯರು ಕತೆ ಹೇಳಿತ್ತಾ ಮಕ್ಕಳಿಗೆ ಮೌಲ್ಯಗಳನ್ನೂ ಹಾಗೂ ಮನರಂಜನೆಯನ್ನು ನೀಡುತ್ತಾ ಶಾಲೆಗಳು ಕಲಿಸದಂತಹ ಸೃಜನಾತ್ಮಕತೆಯನ್ನು ಅಜ್ಜ ಅಜ್ಜಿಯರು ಹೇಳಿಕೊಡುತ್ತಿದ್ದರು. ಹೀಗಿರುವಾಗ ಮಕ್ಕಳಿಗೆ ಅಜ್ಜನೆಂದರೆ ಹಿಗ್ಗೊಹಿಗ್ಗು ಅಂತಹ ಹಿಗ್ಗು ಕೊಡುವಂತಹ ಕೃತಿ ಅಜ್ಜನ ಹಲ್ಲು ಸೆಟ್ಟು. ಸ್ವತಃ ಶಿಕ್ಷಕರಾಗಿರುವ ಹಾಸ್ಯ ಪ್ರಬಂಧಕಾರರಾಗಿರುವ ಶ್ರೀಯುತ ಗುಂಡುರಾವ್ ದೇಸಾಯಿ ಯವರು ಮಕ್ಕಳಿಗಾಗಿ … Read more

ಪದ್ಯಗಳೂ ಹೂನಗೆ ಬೀರಲಿ: ಹೆಚ್. ಷೌಕತ್ ಆಲಿ

ಬೆಣ್ಣೆನಗರಿಯ ಸರಿತ ಕೆ.ಗುಬ್ಬಿ ಹೊಸಪೇಟೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಂತೆ ಸಾಹಿತ್ಯಸಕ್ತಿ ಬೆಳೆಸಿಕೊಂಡ ಕವಯತ್ರಿಯು ಹೌದು ಅನೇಕ ವಿಷಯಗಳು ವಿಚಾರಗಳು, ಘಟನೆಗಳು ಕಣ್ಣಿನ ಮುಂದೆ ಘಟಿಸಿದಾಗ ಆ ಚಿತ್ರಗಳನ್ನು ಮನದಾಳದಲ್ಲಿ ರೂಪನೀಡಿ ಸುಂದರ ಕವಿತೆಗಳಿಗೆ ತಮ್ಮ ಲೇಖನಿಯ ಮುಖಾಂತರ ಬರೆಯುವ ಹವ್ಯಾಸಿ ಕನ್ನಡತಿ. ಬದುಕು ಸುಲಭದ ವಿಚಾರವಲ್ಲ ಇಲ್ಲಿ ಅನೇಕ ಹಂತಗಳಿವೆ, ಮಜಲುಗಳಿವೆ. ಸಂತಸ ಸಂಭ್ರಮ ನೋವು ಹಿಂಸೆ ಎಲ್ಲವನ್ನು ಮೆಟ್ಟಿನಿಲ್ಲಲ್ಲಿ ಸಮಾಜದ ವಕ್ರತೆಯಲ್ಲಿಯು ಗಮನಿಸಬೇಕಾದ ಜವಾಬ್ದಾರಿಯು ತಮ್ಮ ಕವನಗಳ ಮೂಲಕ ಓದುಗರ ಮುಂದೆ ಪ್ರಸ್ತುತ ಪಡೆಸುವಲ್ಲಿ ಸಫಲತೆಯನ್ನು … Read more

ಬಸು ಬೇವಿನಗಿಡದ ಅವರ “ನೆರಳಿಲ್ಲದ ಮರ”: ಅಶ್ಫಾಕ್ ಪೀರಜಾದೆ.

ನಾಡು ಕಂಡ ಪ್ರಮುಖ ಕಥೆಗಾರರಲ್ಲಿ ಬೇವಿನಗಿಡದ ಕೂಡ ಒಬ್ಬರು. ಅದರಲ್ಲೆ ವಿಶೇಷವಾಗಿ ಉತ್ತರ ಕರ್ನಾಟಕದ ಅತ್ಯಂತ ಪ್ರಖ್ಯಾತ ಕಥೆಗಾರರು ಬಸು ಅವರು. ತಾಯವ್ವ, ಬಾಳೆಂಬ ಕಂಬ, ಹೊಡಿ ಚಕ್ಕಡಿ, ಹಾಗು ಉಗುಳು ಬುಟ್ಟಿ ಹೀಗೆ ಒಟ್ಟು ಐದು ಕಥಾಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ಬಸುಬೇವಿನ ಗಿಡದ ಅವರು ಇತ್ತೀಚೆಗೆ ಆರನೇಯ ಕಥಾ ಸಂಕಲನ “ನೆರಳಿಲ್ಲದ ಮರ” ಕತಾಪ್ರಿಯರ ಕೈಗಿಟ್ಟಿದ್ದಾರೆ. ಪ್ರತಿಷ್ಠಿತ ಪಲ್ಲವ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿ ತನ್ನ ಬಾಹ್ಯ ಸೌಂದರ್ಯದಿಂದ ಮನ ಸೆಳೆಯುವಂತೆ ಒಳ … Read more

ಸಾವನ್ ಕೆ ಸಿಂಧನೂರು ರವರ ಮಗರಿಬ್‌ ಗಜಲ್‌ ಸಂಕಲನ: ಶಿವಕುಮಾರ ಮೋ ಕರನಂದಿ

ಕೃತಿ: ಮಗರಿಬ್ ಗಜಲ್ ಸಂಕಲನ ಲೇಖಕರು: ಸಾವನ್ ಕೆ ಸಿಂಧನೂರು ಪ್ರಕಾಶನ: ಅಮ್ಮಿ ಪ್ರಕಾಶನ ಗಜಲ್ ಉರ್ದು ಕಾವ್ಯದ ಅತ್ಯಂತ ಜನಪ್ರಿಯ ರೂಪ. ಉರ್ದು ಸಾಹಿತ್ಯದಲ್ಲಿ ಜನಪ್ರಿಯವಾಗಿರುವ ಗಜಲ್ ಗಂಭೀರ ಕಾವ್ಯವೂ ಹೌದು. ಪ್ರಾಯಶಃ ಹನ್ನೊಂದನೇ ಶತಮಾನದಲ್ಲಿ ಪ್ರಾರಂಭವಾಗಿರಬೇಕು. ಗಜಲ್ ಅನ್ನು ಉರ್ದು ಕಾವ್ಯದ ರಾಣಿ ಎನ್ನುತ್ತಾರೆ. ಗಜಲ್ ಅಂದರೆ ಫಾರಸಿ ಭಾಷೆಯಲ್ಲಿ ಜಿಂಕೆ! ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡುವ ಈ ಜಿಂಕೆ ಸೆರೆಸಿಕ್ಕಾಗ ಹೊರಡಿಸುವ ಅರ್ತನಾದವೇ ಕರುಣಾ ರಸವನ್ನೊಳಗೊಂಡ `ಗಜಲ್~ ಎಂದು ಅರ್ಥೈಸುತ್ತಾರೆ. ಗಜಲ್ ರಾಣಿಯ ಹುಚ್ಚು … Read more

ಭಾವೈಕ್ಯತೆಯೆಂಬ ಬಳ್ಳಿಯ ಹೂವುಗಳು: ಹೆಚ್. ಷೌಕತ್ ಆಲಿ

ಯುವ ಕವಿ ಮೆಹಬೂಬ ಪಾಷ ಎ.ಮಕಾನದಾರ ಕೊಪ್ಪಳದವರು.ಸಮಾಜಶಾಸ್ತ್ರದಲ್ಲಿ ಎಂ.ಎ ಮತ್ತು ಬಿ.ಎಡ್ ಶಿಕ್ಷಣದ ಬಳಿಕ ಅತಿಥಿ ಉಪನ್ಯಸಕರಾಗಿ ಸೇವಾ ಕಾರ್ಯ ಆರಂಭ. ಕವಿಯ ಬಗ್ಗೆ ನಾನು ಒಂದಷ್ಟು ವಿಚಾರ ಹೇಳಬೇಕನ್ನಿಸುತ್ತೆ, ಬದುಕಿಗೆ ತುಂಬ ಹತ್ತಿರದನೆಂಟು ಮೆಹಬೂಬ ಪಾಷರವರ ಚಿಂತನೆಗಳು ಆಳಕ್ಕೆ ಹೋದರೂ ಅಲ್ಲಿಯು ಒಂದು ಚಿಗುರು ಕಾಣುವಂಥದ್ದು. ಜಾತಿ, ನೀತಿ, ರೀತಿ, ರೀವಾಜುಗಳಿಂದ ಆಚೆಗೆ ಇವರ ಹೃದಯ ಚಿಂತಿಸುತ್ತದೆ. ಬದುಕು ಅನೇಕ ಘಟ್ಟಗಳಲ್ಲಿ ಅನೇಕ ಅನುಭವ ನೀಡಿ ಅದರಿಂದ ಕಲಿತ ಪಾಠವೇ ಜೀವನದ ಸಾರ್ಥಕದ ಮುನ್ನೋಟವಾಗಿರುತ್ತೆ ಇಂತಹ … Read more

ನಾ..ನೀ.. ಕೇವಲ ಎರಡಕ್ಷರವಲ್ಲ: ಹೆಚ್. ಷೌಕತ್ ಆಲಿ, ಮದ್ದೂರು

ಯುವಕವಿ ಪ್ರಕಾಶ ಶಿವಲಿಂಗಪ್ಪ ಡೆಂಗಿಯವರು ವೃತ್ತಿಯಲ್ಲಿ ವೈದ್ಯರಾಗಿದ್ದು ಪ್ರವೃತ್ತಿಯಲ್ಲಿ ಒಬ್ಬ ಪ್ರಜ್ಞಾವಂತ ಕವಿಯಾಗಿ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣ ಮಾಡುತಲಿದ್ದಾರೆ. ಇವರ ಪ್ರತಿಭೆಗಳನ್ನು ಪೋಟೋಗ್ರಾಪಿಯಲ್ಲಿ, ಕಲಾಚಿತ್ರಗಳ ಸಂಗ್ರಹದಲ್ಲಿ, ನಿಸರ್ಗದ ಮಡಿಲಲ್ಲಿ ವಿಹರಿಸುವ ಪ್ರವಾಸಪ್ರಿಯರಾಗಿ, ಪುಸ್ತಕಗಳನ್ನು ಸಂಗ್ರಹಿಸುವುದರಲ್ಲಿ ಕಾವ್ಯವಾಚನ ಜತೆಯಲ್ಲಿ ಗಾಯನ ಪ್ರೀತಿಯಲ್ಲಿ ತಮ್ಮನ್ನೂ ತೊಡಗಿಸಿಕೊಂಡು ತಮ್ಮದೇ ಆದ ಲೋಕದಲ್ಲಿ ವಿಹರಿಸುವ ಮನೋವಿಕಾಸದ ಉತ್ತಮ ಸ್ನೇಹಿತ. ಪ್ರಸ್ತುತ ‘ನಾ..ನೀ’ ಕೇವಲ ಎರಡಕ್ಷರವಲ್ಲ ಕವಿತ ಸಂಕಲನ ಪ್ರಕಾರ ಡಂಗಿಯವರ ದ್ವೀತಿಯ ಕೃತಿಯಾಗಿದ್ದು ಅನುಭವಿಸಿದ ಅಥವಾ ಕಣ್ಣ ಮುಂದೆ ಹಾದು ಹೋಗುವ … Read more

ಇಳಾ ಕಾದಂಬರಿ: ಚಂದ್ರು ಪಿ ಹಾಸನ್

ಕರೋನಾದ ಹಿನ್ನೆಲೆಯಲ್ಲಿ ರಜೆಯೊಂದಿಗೆ ಮಜಾ ಮಾಡುತ್ತಿದ್ದ ಸಂದರ್ಭದಲ್ಲಿ , ದಿನದ ಕೆಲಕಾಲ ಸಾಹಿತ್ಯದಲ್ಲಿ ಒಲವು ಮೂಡುತ್ತಿತ್ತು. ಇಂದಿನ ಸಾಹಿತ್ಯಾಸಕ್ತಿಯ ಆ ಕಾಲದಲ್ಲಿ ನನ್ನ ಹಿತಚಿಂತಕರು, ಮಾರ್ಗದರ್ಶಕರು ಆದಂತಹ ಶ್ರೀಮತಿ ವಾಣಿ ಮಹೇಶ್ ರವರು ಒಮ್ಮೆ ಪರಿಚಯಿಸಿದ ಪುಸ್ತಕ ಶ್ರೀಮತಿ ಶೈಲಜಾ ಹಾಸನ ಇವರ ಇಳಾ ಕಾದಂಬರಿಯನ್ನು ಓದಿದೆ ಎಂದು ಹೇಳಲು ಹರ್ಷಿಸುತ್ತೇನೆ. ಸಕಲ ಸದ್ಗುಣಗಳನ್ನು ತನ್ನಲ್ಲಿ ತುಂಬಿಕೊಂಡಿರುವ ಭೂಮಿಯಂತೆ, ಒಂದು ಹೆಣ್ಣಿನ ಕಥೆ ಇಳಾ. ತನ್ನ ತಂದೆಯ ಸಾವಿನಿಂದ ಕೃಷಿ ಜಗತ್ತಿಗೆ ತಿಳಿಯಬೇಕಾದ ಇಳಾ ತಂದೆಯನ್ನು ದೂಷಿಸದೆ … Read more

ಒಡಲಾಳದ ಪದ್ಯಗಳು: ಎಚ್.‌ ಷೌಕತ್‌ ಅಲಿ, ಮದ್ದೂರು

ಕ್ರಿಯಾಶೀಲ ಬರಹಗಾರ ಕವಿ ವಿಮರ್ಶಕ ಕಥಾಸಂಕಲನಕಾರ ನಾಗೇಶ್ ನಾಯಕ್ ಬೆಳಗಾವಿ ಜಿಲ್ಲೆಯ ಸವದತ್ತಿ ಹುಟ್ಟೂರು. ಶಿಕ್ಷಕರಾಗಿ ಮಡಿಕೇರಿಯಲ್ಲಿ ಸೇವೆ. ಜೊತೆ ಜೊತೆಯಲ್ಲಿ ಕಥೆ-ಕವನಗಳನ್ನು ನಾಡಿನ ಪತ್ರಿಕೆಗಳಲ್ಲಿ ಪ್ರಕಟಿಸಿ ತೃಪ್ತಿಯಿಂದ ಸ್ಪೂರ್ತಿಗೊಂಡು ಹತ್ತು ಹಲವು ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯ ಸೇವೆ ಮಾಡುತ್ತಿರುವ ಮತ್ತು ಪ್ರಮುಖ ಬರಹಗಾರರಲ್ಲಿ ಗುರುತಿಸಿಕೊಂಡ ಆತ್ಮೀಯ ಲೇಖಕ. ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಅನೇಕ ಸಮ್ಮೇಳನಗಳಲ್ಲಿ ಆಕಾಶವಾಣಿಯಲ್ಲಿ ಮತ್ತು ಚಂದನ ವಾಹಿನಿಯ ಸಂದರ್ಶನದ ಮೂಲಕ ಕನ್ನಡಿಗರಿಗೆ ಚಿರಪರಿಚಿತ ನಾಗೇಶ್ ನಾಯಕ್. ಪ್ರಸ್ತುತ ಇವರ ಕವನ ಸಂಕಲನ ‘ಒಡಲ … Read more

ಮೌನಯುದ್ಧದೊಂದಿಗೆ ನನ್ನ ಮಾತು: ಹೆಚ್. ಷೌಕತ್ ಆಲಿ

ಕವಿ ಸುರೇಶ ಎಲ್. ರಾಜಮಾನೆರವರು ಅಪ್ಪಟ ಕನ್ನಡಭಿಮಾನಿ, ವೃತ್ತಿಯಲ್ಲಿ ಶಿಕ್ಷಕನಾಗಿ ಪ್ರವೃತ್ತಿಯಲ್ಲಿ ಒಬ್ಬ ಕವಿಯಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ತನ್ಮೂಲಕ ಪ್ರಕಾಶಿಸುವ ಬೆಳಗಲಿ ದೀಪ. ಹುಟ್ಟೂರು ಮಹಾಕವಿ ರನ್ನನ ಊರೇ ಆಗಿರುವಾಗ ಆ ಛಾಪು ಕವಿ ಸುರೇಶನಲ್ಲಿಯೂ ಕಾಣಬಹುದಾಗಿದೆ. ಆ ನಿಟ್ಟಿನಲ್ಲಿ ಕವಿಯ ದ್ವೀತಿಯ ಕೃತಿ ರತ್ನ ‘ಮೌನಯುದ್ಧ’ ಮತ್ತೆ ಮತ್ತೆ ಓದಿದ ನಂತರ ಈ ಒಂದು ವಿಮರ್ಶೆಗೆ ನಾನು ಕೈಹಾಕಿದೆ ಓದುಗರು ಇಷ್ಟ ಪಡುವಂತಹ ಅನೇಕ ಅಂಶಗಳು ಈ ಕೃತಿಯಲ್ಲಿ ಅಡಕವಾಗಿದೆ. ಸರಳ ಭಾಷೆಯ ಸುಂದರ … Read more

ಒಡಲ ಕಿಚ್ಚಿನ ಹಿಲಾಲು ಹಿಡಿದ ಕವಿತೆಗಳು: ಅಶ್ಫಾಕ್ ಪೀರಜಾದೆ

ನಾಗೇಶ ಜೆ ನಾಯಕ ಒಬ್ಬ ಹೆಸರಾಂತ, ಕ್ರೀಯಾಶೀಲ, ಸೂಕ್ಷ್ಮಗ್ರಾಹಿ ಸಾಹಿತಿಯಾಗಿ ಕನ್ನಡ ಸಾರಸ್ವತ ಲೋಕವನ್ನು ತಮ್ಮ ಅನನ್ಯ ಅನುಭವಗಳನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ಮೂಲಕ ಶ್ರೀಮಂತಗೊಳಿಸುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವಂಥವರು. ಆಡು ಮುಟ್ಟದ ಗಿಡವಿಲ್ಲ ಎಂಬ ಮಾತಿನಂತೆ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿ ಸೈ ಎನಿಸಿಕೊಂಡವರು. ಅವರು ಬರೆದ ಅಂಕಣ ಬರಹ, ವ್ಯಕ್ತಿ ಚಿತ್ರಣ, ಲೇಖನ, ಕತೆ, ಕವಿತೆ, ವಿಮರ್ಶೆಗಳು ನಾಡಿನ ಪ್ರಕಟಗೊಂಡಿದಷ್ಟೆಯಲ್ಲದೆ ಅವರು ರಚಿಸಿ ಪ್ರಕಟಿಸಿರುವ ಗ್ರಂಥಗಳು ಪ್ರಸಿದ್ದಿ ಪ್ರಶಸ್ತಿಗಳನ್ನು ತಂದು ಕೊಟ್ಟಿವೆ. ಹೀಗಾಗಿ ಅವರು … Read more

ಮಿಂಚುತಾರೆಗಳ ಬೆಳದಿಂಗಳು: ಹೆಚ್. ಷೌಕತ್ ಆಲಿ

ಯುವ ಕವಿ ಗುರು ಹಿರೇಮಠರ ಬೆಳಂದಿಗಳು ಚುಟುಕು ಕವಿತೆಗಳ ಸುಂದರ ವಿಚಾರ ಲಹರಿ. ಕವಿಯ ಅಂತರಂಗದಲ್ಲಿ ಹೊಕ್ಕಿನೋಡಿದಾಗ ಒಬ್ಬ ಸತ್ಯ ಅನ್ವೇಷಕ, ಮಮತೆ ವಾತ್ಸಲ್ಯಮಯಿಯಾಗಿ, ಪ್ರೀತಿಯ ಚಿಲುಮೆಯ ನಲ್ಮೆಯ ಪ್ರೇಮಿಯಾಗಿ, ಪ್ರಕೃತಿಪುರುಷನಾಗಿ ಸಂತನಾಗಿ ಕಾವ್ಯಕುಸುರಿಯಲ್ಲಿ ಸಂಶೋಧನೆ ನಡೆಸಿದಂತೆ ನನಗೆ ಅರಿವಿಲ್ಲದೇ ನನಗೆ ಇಷ್ಟವಾದರು ಗುರು. ತನ್ನಷ್ಟಕ್ಕೆ ತೆರೆದುಕೊಳ್ಳುವ ಈ ಕೃತಿಯ ಒಂದೊಂದು ಕವಿತೆಯು ಹೊನ್ನಹೂವುಗಳಾಗಿ ಓದುಗರು ಯಾರೆ ಆಗಿರಲಿ ಮನಸ್ಸಿಗೆ ಮುದ ನೀಡುತ್ತ ಕಾವ್ಯದ ಪಾವಿತ್ರ್ಯತೆಯನ್ನು ಪರಿಚಯಿಸುವ ಪ್ರಯತ್ನ ಫಲಕಾರಿ ಎಂದೆನಿಸಿತು. ಈ ಕೃತಿಯ ಬಗ್ಗೆ ನಾಲ್ಕು … Read more

ರಾಗ ಅನುರಾಗಕ್ಕೆ ಒಗ್ಗಿಕೊಂಡ ಕವಿತೆಗಳು “ಅಳಿದ ಮೇಲೆ”: ಅಶ್ಫಾಕ್ ಪೀರಜಾದೆ.

ವಿಷಯ ವೈವಿಧ್ಯತೆಗಳಿಂದ ಕೂಡಿದ ಒಟ್ಟು ನಾಲವತ್ತಾರು ಕವನಗಳು ಮತ್ತು ಐವತ್ತು ಹನಿಗವನಗಳಿಂದ ಸಂಕಲಿತಗೊಂಡ ಕವನ ಸಂಕಲನ “ಅಳಿದ ಮೇಲೆ”. ಇದು ಪ್ರೇಮಾನಂದ ಶಿಂಧೆ ಅವರ ಚೊಚ್ಚಿಲು ಕೃತಿ. ಕೃತಿಯ ಕುರಿತು ಪ್ರಸ್ತಾವನೆ ಮಂಡಿಸಿರುವ ಸಾಹಿತಿ ಮಾರ್ತಾಂಡಪ್ಪ ಕತ್ತಿ ” ಪ್ರತಿ ಮನುಷ್ಯ ಇತರೆಲ್ಲ ಆಯಾಮಗಳಿಗಿಂತಲೂ ಕವಿತೆಗೆ, ಹಾಡಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುತ್ತಾನೆ. ಮಾತಿನಲ್ಲಿ ಹೇಳಲು ಅಸಾಧ್ಯವಾದುದನ್ನು ಕವಿತೆಯ ಮೂಲಕ ಹೊರ ಹಾಕಲು ಸಾಧ್ಯ. ಇದು ಕವಿತೆಗಿರುವ ಶಕ್ತಿ ಮತ್ತು ಆಕರ್ಷಿಸುವ ಗುಣ. ಅನಿವರ್ಚನೀಯವಾದ ಕವಿತೆ ಜೀವನದ ಅತ್ತ್ಯುತ್ತಮ … Read more

ಅಂಬಿಕಾತನಯನ ಕಾವ್ಯಾನುಸಂಧಾನ: ಅಶ್ಫಾಕ್ ಪೀರಜಾದೆ

ದಿನಾಂಕ ೦೭/೦೧/೨೦೨೦ ರಂದು ಧಾರವಾಡದ ಬೇಂದ್ರೆ ಭವನದಲ್ಲಿ ವಿಜಯಶ್ರೀ ಸಾಹಿತ್ಯ ಪ್ರಶಸ್ತಿ ವಿಜೇತ ಯುವ ಸಾಹಿತಿ ಶ್ರೀ ಮಾರ್ತಾಂಡಪ್ಪ ಎಂ. ಕತ್ತಿಯವರು ರಚಿಸಿದ “ಅಂಬಿಕಾತನಯನ ಕಾವ್ಯಾನುಸಂಧಾನ” ಗ್ರಂಥ ಲೋಕಾರ್ಪಣೆಗೊಂಡಿತು. ಈ ಪ್ರಯುಕ್ತ ಕೃತಿ ಪರಿಚಯ ಇಲ್ಲಿದೆ. ಈ ಕೃತಿಯಲ್ಲಿ ಕತ್ತಿಯವರು ಒಟ್ಟು ಮೂವತ್ತಾರು ಬೇಂದ್ರೆ ಕವಿತೆಗಳೊಂದಿಗೆ ಹೃದಯ ಸಂಪರ್ಕ ಸಾಧಿಸಿದ್ದಾರೆ. ವರ ಕವಿ ಬೇಂದ್ರೆಯವರ ವಿವಿಧ ಕಾವ್ಯ ಸಂಕಲನಗಳಿಂದ ಅತಿಮುಖ್ಯ ಅನಿಸುವ ಕವಿತೆಗಳನ್ನು ಅಯ್ದುಕೊಂಡು ಅದರೊಂದಿಗೆ ಅನುಸಂಧಾನ ನಡೆಸಿದ್ದಾರೆ. ನಾಕು ತಂತಿ, ಜೋಗಿ, ಪರಾಗ, ಏಲಾಗೀತ, ನನ್ನವಳು, … Read more

ಉದಯನ್ಮುಖ ಬರಹಗಾರ್ತಿ ವೀಣಾ ನಾಗರಾಜ್: ವೈ. ಬಿ. ಕಡಕೋಳ

ಶ್ರೀಮತಿ ವೀಣಾ ನಾಗರಾಜು ಉತ್ತಮ ಶಿಕ್ಷಕಿ, ಪ್ರತಿಭಾವಂತೆ, ಸಮಾಜಶಾಸ್ತ್ರ ವಿಷಯದಲ್ಲಿ ಎಂ. ಎ. ಪದವೀಧರೆ. ಇವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಳಜ್ಜಿ ಹಟ್ಟಿಯಲ್ಲಿ ಕಳೆದ 12 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ. ಚನ್ನಬಸವಯ್ಯ ಸಾವಿತ್ರಮ್ಮ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಹಿರಿಯ ಸುಪುತ್ರಿ. ಇವರ ಪತಿ ನಾಗರಾಜು ಕೂಡ ಪ್ರೌಢಶಾಲಾ ಶಿಕ್ಷಕ. ಎಂ. ಎ(ಸಮಾಜಶಾಸ್ತ್ರ) ಓದಿರುವ ಶಿಕ್ಷಕಿ ವೀಣಾ ನಾಗರಾಜು ವೃತ್ತಿಯೊಡನೆ ಬರವಣಿಗೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡು 15 ಕ್ಕೂ ಹೆಚ್ಚು ಕತೆಗಳನ್ನು … Read more

ಪ್ರೇಮ ಪ್ರವಾದಿಯ ಪರಿಸರ ಪ್ರೇಮ: ಅಶ್ಫಾಕ್ ಪೀರಜಾದೆ

ತನ್ನ ಪ್ರಥಮ ಕೃತಿ ” ಮಮದಾಪೂರ ಚುಟುಕುಗಳು ” ಮೂಲಕ ಪ್ರೇಮ ಪ್ರವಾದಿ ಎಂದು ನಾಡಿನಾದ್ಯಂತ ಪ್ರಸಿದ್ದಿ ಪಡೆದಿರುವ ಈಶ್ವರ ಮಮದಾಪುರ ಅವರು ಇತ್ತೀಚೆಗೆ ಇನ್ನೊಂದು ಕೃತಿ “ಮಮದಾಪೂರ ಹನಿಗವಿತೆಗಳು” ಓದುಗರ ಕೈಗಿಟ್ಟಿದ್ದಾರೆ. ಚುಟುಕು, ಹನಿಗವಿತೆ, ಹಾಯ್ಕು, ಕಿರುಪದ್ಯ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ಸಾಹಿತ್ಯ ಪ್ರಕಾರ ಕವಿಯ ಮನದ ಪರದೆಯ ಮೇಲೆ ಆ ಕ್ಷಣಕ್ಕೆ ಮಿಂಚಿ ಮಾಯವಾಗುವ ಭಾವ ಸ್ಪಂದನ.. ಅದೇ ಬರಹದ ರೂಪ ಪಡೆದುಕೊಂಡು ಓದುಗರ ಹೃದಯ ತಾಕುವ ತಂತುವಾಗಿ ಮಾರ್ಪಡುತ್ತದೆ. ಈಶ್ವರ ಮಮದಾಪುರ … Read more

ಬಹು ಮುಖದ ‘ ಚಿಲುಮೆ’: ಅರವಿಂದ ಚೊಕ್ಕಾಡಿ

ಸ್ನೇಹಿತ ಲಕ್ಷ್ಮೀಕಾಂತ ಮಿರಜಕರ ಮೊಳಕಾಲ್ಮೂರಿನ ದೇವಸಮುದ್ರದ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರು. ನನ್ನ ಇಲಾಖಾ ಸನ್ಮಿತ್ರರು. ನಮ್ಮದು ಬಹಳ ಸಣ್ಣ ವ್ಯವಸ್ಥಾಪನೆಯಾದುದರಿಂದ, ಸಂಕಷ್ಟಗಳು ಮತ್ತು ಅನುಭವಗಳು ಉಳಿದೆಲ್ಲ ಇಲಾಖೆಯವರಿಗಿಂತ ಭಿನ್ನವಾಗಿರುವುದರಿಂದ ಬೃಹತ್ ವ್ಯವಸ್ಥೆಯಲ್ಲಿ ಕಣ್ಣಿಗೆ ಕಾಣದಷ್ಟು ಸಣ್ಣ ಸಂಖ್ಯೆಯವರು ಇಟ್ಟಾಗಿ ಬಡಿದಾಡಬೇಕಾದ್ದರಿಂದ ಸಂಬಂಧಗಳು ಬಿಗಿಯಾಗಿರುತ್ತವೆ. ಇಂತಿಪ್ಪ ಲಕ್ಷ್ಮೀಕಾಂತರು ಇತ್ತೀಚೆಗೆ ನನಗೊಂದು ಪುಸ್ತಕವನ್ನು ಕಳಿಸಿಕೊಟ್ಟರು. ಅದು ತಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಬರೆದ ಬರಹಗಳ ಸಂಕಲನ-‘ಚಿಲುಮೆ’. ‘ಚಿಲುಮೆ’ಯ ವೈವಿಧ್ಯ ಬಹಳ ಮುದ ನೀಡಿತು. ಒಬ್ಬ ವಿದ್ಯಾರ್ಥಿ ಕವನ … Read more

ಅಸ್ಪೃಶ್ಯತೆಯ ಕರಾಳ ದರ್ಶನ: ಅಶ್ಫಾಕ್ ಪೀರಜಾದೆ

“ಇನ್ನು ದಾಹವಾಗುವದಿಲ್ಲ ಬಿಡು” ಆನಂದ ಲಕ್ಕೂರ ಅವರ ವಿಭಾ ಸಾಹಿತ್ಯ ಪುರಸ್ಕೃತ ಕವನ ಸಂಕಲನ “ಉರಿವ ಏಕಾಂತ ದೀಪ” ಓದಿ ಮುಗಿಸಿದಾಗ ಅದರಲ್ಲಿ ನನಗೆ ಎರಡು ಕವನಗಳು ಪ್ರಮುಖ ಅನಿಸಿದವು. ಒಂದನೇಯದು ‘ಅವ್ವ’ ಮತ್ತು ಎರಡನೇಯದು ‘ಇನ್ನು ದಾಹವಾಗುವದಿಲ್ಲ ಬಿಡು’. ಇವೆರಡರಲ್ಲಿ ಯಾವದನ್ನು ಅಭಿಪ್ರಾಯಕ್ಕಾಗಿ ಎತ್ಕೋಬೇಕು ಎಂದು ಯೋಚಿಸುವಾಗ ‘ಅವ್ವ’ಕ್ಕಿಂತ ದಾಹವಾಗುದಿಲ್ಲ ಕವಿತೆ ಪ್ರಸ್ತುತ ಸಾಮಾಜಿಕ ಅರಾಜಕತೆ, ಅಸಹಿಷ್ಣತೆಯ ಹಿನ್ನಲೆಯಲ್ಲಿ ಮುಖ್ಯವೆನಿಸುದರಿಂದ ಇದನ್ನು ಮೊದಲು ಪರಿಚಯಿಸುವುದು ಅಗತ್ಯವೆನಿಸಿತು. ಇದರ ಜೊತೆಗೆ ಕವಿ ಇದನ್ನು ಒಂದು ಸತ್ಯ ಘಟನೆ … Read more