ಕಮಲಾದಾಸ್ ರ ಎರಡು ಕವನಗಳ ಕನ್ನಡರೂಪ: ಚಿನ್ಮಯ್ ಎಂ.
( ಕಮಲಾದಾಸ್ ರ ‘My Grandmother’s House’ ಕವನದ ಕನ್ನಡರೂಪ ) ನನ್ನ ಪ್ರೀತಿಯ ಮನೆ ದೂರದಲ್ಲಿದೆ. ಆ ಮುದುಕಿ ಸತ್ತಮೇಲೆ ಅವಳ ಬಿಳಿ ಸೀರೆಯಂತೆ ಮೌನವನ್ನುಟ್ಟ ಮನೆಯ ಪುಟಗಳ ನಡುವೆ, ಗೋಡೆಯ ಬಿರುಕುಗಳಲ್ಲಿ ಹಾವುಗಳು ಹರಿದಾಡಿದವು. ನನ್ನ ಪುಟ್ಟ ಜೀವ ಹೆಪ್ಪುಗಟ್ಟಿತು. ಅದೆಷ್ಟು ಬಾರಿ ಅಲ್ಲಿಗೆ ಹೋಗುವ ಯೋಚನೆ ಮಾಡಿಲ್ಲ ನಾನು? ಕಿಟಕಿಗಳ ಖಾಲಿ ಕಣ್ಣುಗಳಾಚೆ ಇಣುಕಿ ಹೆಂಚಿನ ಕಾವಿಗೆ ಮೈಯ್ಯೊಡ್ಡಿ ನೀರವದ ಸದ್ದಿಗೆ ಕಿವಿಗೊಟ್ಟು ಅಥವಾ ಕಡೇ ಪಕ್ಷ ಹುಚ್ಚು ನಿರಾಸೆಯಿಂದ ಬೊಗಸೆ ತುಂಬಾ … Read more