ಸಂಬಂಧ: ಡಾ. ಗವಿ ಸ್ವಾಮಿ
ಬೆಂಗಳೂರಿನ ಬಿಸ್ಕೆಟ್ ಫ್ಯಾಕ್ಟರಿಯೊಂದರಲ್ಲಿ ಹೆಲ್ಪರ್ ಆಗಿದ್ದ ಇಪ್ಪತ್ತರ ವಯಸ್ಸಿನ ಸ್ವಾಮಿ ತನ್ನ ತಾತ ನಿಂಗಣ್ಣನ ಸಾವಿನ ಸುದ್ದಿ ತಿಳಿದು ಊರಿಗೆ ತಲುಪುವಷ್ಟರಲ್ಲಿ ಮಧ್ಯಾಹ್ನ ಮೂರು ಘಂಟೆಯಾಗಿತ್ತು. ನೆತ್ತಿಯ ಮೇಲೆ ಕಾರ್ಮೋಡಗಳು ಕವಿಯುತ್ತಿದ್ದವು. ಮೂರು ಮಂದಿ ತುರಾತುರಿಯಲ್ಲಿ ನಿಂಗಣ್ಣನನ್ನು ಎತ್ತಿ ತಂದು ಬಿಳಿಪಲ್ಲಕ್ಕಿಯ ಒಳಗೆ ಕೂರಿಸಿದರು. ಅತ್ತಿತ್ತ ವಾಲಾಡುತ್ತಿದ್ದ ಕುತ್ತಿಗೆಗೆ ಮೆಟರೆಕಡ್ಡಿ ಕೊಟ್ಟು ಸರಿ ಮಾಡಿದರು. ಸ್ವಾಮಿ ಒಮ್ಮೆ ಕೆಳಗೆ ಬಾಗಿ ತಾತನನ್ನು ಕಣ್ತುಂಬಿಕೊಂಡ. ತಾತನ ಒಟ್ಟು ಆಕಾರದಲ್ಲಿ ಏನೋ ಒಂದು ಕೊರತೆಯಿದೆ ಅನ್ನಿಸಿತು . ಯೆಸ್. ತಾತನ … Read more