ಕಾಡು : ನಾ ಕಂಡಂತೆ:  ಸ್ನೇಹಲತಾ ಗೌನಳ್ಳಿ

     ಕಾಡಿನಲ್ಲಿ ಹೊರಡುವಾಗಿದ್ದ ಸಂತಸ ಹೊರ ಬಂದಾಗ ಮಾಯವಾಗಿ ಮಂಕು ಕವಿಯುತ್ತಿದೆ. ಹೌದು ಶ್ರೀ ಕೃಷ್ಣ ಆಲನಹಳ್ಳಿಯವರ ಕಾಡು ಕಾದಂಬರಿ ಓದಿದ ನಂತರ ಉಂಟಾದ ಭಾವ ಅದು. ಇಲ್ಲಿ ಭಾರತದ ಆರ್ಥಿಕತೆಯ ಬೆನ್ನೆಲುಬಾದ ಹಳ್ಳಿಗಳು ಸಾಮಾಜಿಕ ಸ್ತರ ವಿನ್ಯಾಸದ ನೆಲೆಯಲ್ಲಿ ರೂಪುಗೊಂಡ ದರುಣ ಬದುಕಿನ ಕ್ರೌರ್ಯದ ದಾಖಲೆಯಿದೆ. ಜಾತಿ, ಮತ, ವರ್ಗ, ಸಂಘರ್ಷಗಳ ಚಿತ್ರಣವಿದೆ “ ಕಿಟ್ಟಿ” ಎಂಬ ಪೋರನ ಮುಖಾಂತರ ಕಾದಂಬರಿಯು ತನ್ನನ್ನು ಬಿಚ್ಚಕೊಳ್ಳುತ್ತಾ ಸಾಗುತ್ತದೆ. ಇಡೀ ಕಾದಂಬರಿಯಲ್ಲಿ ಕಮಲಮ್ಮ ಮತ್ತು ಕಿಟ್ಟಿಯ ಪಾತ್ರಗಳು … Read more

ಕದ ತಟ್ಟಿದ ಕನಸು ಪುಸ್ತಕ ವಿಮರ್ಶೆ: ಪಿ ಕೆ…? ನವಲಗುಂದ

ಕೃತಿ-ಕದ ತಟ್ಟಿದ ಕನಸು ಕವಿ- ಭೀಮಪ್ಪ ಮುಗಳಿ  ಪ್ರಕಾಶಕರು-ಸಹಜ ಪ್ರಕಾಶನ  ವಿದೇಶದಲ್ಲಿ ಇದ್ದು ಕನ್ನಡದ ಹಣತೆ ಹಚ್ಚಿ ಮೂರು ಕವನ ಸಂಕಲನವನ್ನು ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಭೀಮಪ್ಪ ಮುಗಳಿಯವರಿಗೆ ಮೊದಲ ಅಭಿನಂದನೆಗಳು ತಿಳಿಸುತ್ತೇನೆ. ಮೈತುಂಬ ಕೆಲಸ ಹೊಟ್ಟೆ ತುಂಬಾ ಊಟ ಕಣ್ಣು ತುಂಬಾ ನಿದ್ದೆಯಿದ್ದರೆ ಊಹೆಗೆ ಮೀರಿದ್ದ ಕನಸುಗಳು ಮೂಡುತ್ತವೆ. ಆ ಕನಸುಗಳು ಕೆಟ್ಟದ್ದು ಆಗಿದೆಯೋ? ಒಳ್ಳೆಯದು ಆಗಿದೆಯೋ? ಅನ್ನೋದು ಎರೆಡನೇ ವಿಚಾರ ಆದರೆ ಕನಸುಗಳು ಸುತ್ತ ಹೆಣೆದಿರುವ ಕವನ ಸಂಕಲನವೇ.  "ಕದ ತಟ್ಟಿದ ಕನಸು"  … Read more

ಹೊಸ ತನವನ್ನು ಹೇಳುವ ಮಕ್ಕಳೇ ಬರೆದ ಪುಸ್ತಕ: ಅಕ್ಕಿಮಂಗಲ ಮಂಜುನಾಥ

ಈಗ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿದು ತಾತ್ಸಾರದಿಂದ ನೋಡುವವರೇ ಹೆಚ್ಚು. ಆದರೆ ಅಲ್ಲೊಂದು ಇಲ್ಲೊಂದು ಸರ್ಕಾರಿ ಶಾಲೆಗಳು ಬೆಳೆಯುತ್ತಿರುವ ರೀತಿ ಮತ್ತು ಕ್ರಿಯಾಶೀಲತೆ ಗಮನಿಸಿದರೆ, ಈ ಶಾಲೆಗಳ ಮುಂದೆ ಲಕ್ಷಾಂತರ ಡೊನೇಶನ್ ದೋಚುವ ಕಾನ್ವೆಂಟುಗಳು ಏನೇನೂ ಅಲ್ಲ ಎನ್ನಿಸುತ್ತದೆ. ಅಂತಹ ಒಂದು ಸರ್ಕಾರಿ ಶಾಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಢ್ಲಘಟ್ಟ ತಾಲೂಕಿನ ಪುಟ್ಟ ಹಳ್ಳಿ ಕನ್ನಮಂಗಲದಲ್ಲಿದೆ ಎಂದರೆ ಎಂಥವರಿಗೂ ಆಶ್ಚರ್ಯಕರವಾಗಿ ಕಾಣಬಹುದು. ಈ ಶಾಲೆಯ ಅಧ್ಯಾಪಕ ವೃಂದ  ವ್ಯವಸ್ಥಿತವಾಗಿ ವಿದ್ಯೆ ಕಲಿಸುವುದರ ಜೊತೆಗೆ ಕ್ರೀಡೆ ಮತ್ತು ಕಲೆಯನ್ನು ವಿಶೇಷವಾಗಿ ಮಕ್ಕಳಿಗೆ … Read more

ಗೆಂಡೆದೇವ್ರು ಸಾಮಾಜಿಕ ನೆಲೆಗಟ್ಟಿನಲ್ಲಿ ರಚಿತವಾದ ಕಥಾಸಂಕಲನ: ಕೆ.ಎಂ.ವಿಶ್ವನಾಥ ಮರತೂರ.

ಅಂದು ರಾತ್ರಿ ಸರಿಯಾಗಿ ಹತ್ತು ಗಂಟೆ ಸಮಯ ಊಟ ಮಾಡಿ ನಿದ್ರಾದೇವತೆಯ ಮುತ್ತಿಟ್ಟು ಮಲಗುವ ಸಮಯವಾಗಿತ್ತು, ಆಗ ಕಾವ್ಯಮನೆಯ ರುವಾರಿ ಪುಟಾಣಿ ಗೆಳೆಯ ಕಪಿಲ್ ಅವರ ಕರೆ ರಿಂಗಣಿಸಿತು. “ಗುರುಗಳೆ ನಮಸ್ಕಾರ ಗೆಂಡೆದೇವ್ರು ಕಳಿಸಿದ್ದೀನಿ ನೀವು ಓದಬೇಕು” ಆಗಲಿ ಕ್ಯಾಪ್ಟ್‍ನ್ ಅವರೆ ಎಂದು ನಿದ್ದೆ ಬಂದಿದ್ದರಿಂದ ಮಲಗಿದೆ. ಆ ರಾತ್ರಿಯಿಂದು ಸರಿ ಸುಮಾರು ಏಳು ರಾತ್ರಿಗಳು ಗೆಂಡೆದೇವ್ರ ಕಡೆಗೆ ಮನಸ್ಸು ಹೋಗಲೆಯಿಲ್ಲ. ಕೆಲಸದ ಒತ್ತಡದೊಳಗೆ ಜೀವನ ಹೊಸೆಯುತ್ತಾ, ಹತ್ತಾರು ಕಾರ್ಯಕ್ರಮಗಳು ವೃತ್ತಿ ಜೀವನದಲ್ಲಿ ಭರದಲ್ಲಿ ಗೆಂಡೆದೇವ್ರನ ಕಾಣಲು … Read more

ಹುರಿಗೆಜ್ಜಿಯ ಸದ್ದು ಮನಸಿನ ಕಿವಿತಾಕಿದಾಗ…: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ

ಕೃತಿ: ಹುರಿಗೆಜ್ಜಿ ಲೇಖಕರು:  ರಾಜಕುಮಾರ್ ಮಡಿವಾಳರ ಅವಲೋಕನ:  ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ ಹುರಿಗೆಜ್ಜಿಯ ಸದ್ದು ಮನಸಿನ ಕಿವಿತಾಕಿದಾಗ… *** ರಾಜಕುಮಾರ್ ಮಡಿವಾಳರ ಅವರನ್ನು ಬೇಟಿಯಾಗಿ ಸರಿಯಾಗಿ ಎರಡು ವರ್ಷಗಳ ನಂತರ ಮತ್ತೊಮ್ಮೆ ಮೊನ್ನೆ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ಎದುರುಗೊಂಡೆನು. ಈ ಕವಿ ಜೊತೆಗೆ ಬರೆತಾಗ ಕವಿ ಬೆರೆಯುವದಕ್ಕು ಬರೆಯುವದಕ್ಕೂ ವ್ಯತ್ಯಾಸವಿಲ್ಲ ಅನಿಸಿತು. ಪ್ರೀತಿಯಿಂದ ಹುರಿಗೆಜ್ಜಿ ಕೇಳಿದಾಗ ರಾಜಮರ್ಯಾದೆಯೊಂದಿಗೆ…  ಎಂದು ಬರೆದು ನನ್ನ ಕೈಗಿಟ್ಟ ಈವತ್ತು ಅವನ ಹುರಿಗೆಜ್ಜಿಯ ಸದ್ದನ್ನು ಮನಸಿನ ಕಿವಿ ನಿಮರಿಸಿಕೊಂಡು ಕೇಳುವ … Read more

ಮಣ್ಣಿಗೆ ಬಿದ್ದ ಹೂಗಳು ಕವನ ಸಂಕಲನ ವಿಮರ್ಶೆ: ನೂರುಲ್ಲಾ ತ್ಯಾಮಗೊಂಡ್ಲು

ನವ್ಯೋತ್ತರ ಕಾವ್ಯಮಾರ್ಗದಲ್ಲಿ, ಮತ್ತೆ ದಲಿತೀಯ ನೆಲೆಯಲ್ಲಿ ಅಂಥದೇ ಸಿಟ್ಟು, ಹತಾಶೆ,ರೋಷ, ಸಮಾಜಿಕ ಶೋಷಣೆಯ ಹಾಗೂ ತಾಯಿ ಮಮತೆ, ಗೆಳತಿಯ ಒಲವು, ಚೆಲುವು, ಮಗುವಿನ ಅಕ್ಕರೆ, ರಾಜಕೀಯ ವಿಡಂಬನೆಗಳನ್ನು ಶಿಲ್ಪವಾಗಿಸಿಕೊಂಡು ಮೈತಳೆದ ಕೃತಿ” ಮಣ್ಣಿಗೆ ಬಿದ್ದಹೂಗಳು” ಬಿದಲೋಟಿ ರಂಗನಾಥ್‍ರ ಇದು ಪ್ರಥಮ ಕವನ ಸಂಕಲನ. ಈ ಸಂಕಲದಲ್ಲಿ ಒಟ್ಟು 51 ಕವನಗಳಿಗೆ ಇವುಗಳಲ್ಲಿ ಬಹುಮುಖ್ಯವಾಗಿ ದಲಿತೀಯಾ ನಿಲುವನ್ನೇ ತಾತ್ವಿಕವಾಗಿರಿಸಿಕೊಂಡು ರಚನೆ ಮಾಡಿದಂತಹ ಕವನಗಳು. ಇಲ್ಲಿ ಮುಖ್ಯವಾಗುತ್ತವೆ. ಸಂಕಲನದ ಶೀರ್ಷಿಕೆಯ ಕವನವೇ ‘ಮಣ್ಣಿಗೆ ಬಿದ್ದ ಹೂಗಳು-ಇಲ್ಲಿ ಕವಿ, ದಲಿತನಾಗಿ ತನಗಾದ … Read more

ಮಗು ಮನಸ್ಸಿನ ಮಹಾಕಾವ್ಯ : ಮತ್ತೊಂದು ಮಹಾಭಾರತ: ಡಾ.ವಿ.ಚಂದ್ರಶೇಖರ ನಂಗಲಿ

ನಮ್ಮ ಮುಖದ ಮೇಲಿನ ಎರಡು ಕಣ್ಣುಗಳು ಇಡೀ ಜಗತ್ತನ್ನು ನೋಡುವಂತೆಯೇ, ನಮ್ಮ ನೆಲದ ಎರಡು ಕಣ್ಣುಗಳಂತಿರುವ ರಾಮಾಯಣ ಮತ್ತು ಮಹಾಭಾರತಗಳಿಂದ ಇಡೀ ಜೀವನವನ್ನು ಅರ್ಥಮಾಡಿಕೊಳ್ಳಬಹುದು. ನವಭಾರತದೇಶದ ಸಂವಿಧಾನದಂತೆಯೇ ಇವೆರಡು ಮಹಾಕಾವ್ಯಗಳು ನಮ್ಮ ದೇಶದ ನಿತ್ಯನೂತನ ಸಂವಿಧಾನವೆನ್ನಬಹುದು. ರಚ್ಚೆಯಲ್ಲಿ, ಕಟ್ಟೆಯ ಮೇಲೆ, ಸಂತೆಬೀದಿಯಲ್ಲಿ, ಮಾರುಕಟ್ಟೆಯಲ್ಲಿ ಜನರು ಕುಳಿತು ಮಾತನಾಡುವಾಗ ಈ ಮಹಾಕಾವ್ಯಗಳ ಪ್ರಸ್ತಾಪ ಮತ್ತು ದರ್ಶನವಿದ್ದೇ ಇರುತ್ತದೆ. ಇವನ್ನು ಕುರಿತು ಓದಿದವರ ಕಾವ್ಯಪ್ರಯೋಗವೆನ್ನುವುದಕ್ಕಿಂತಲೂ ಕುರಿತೋದದ ಜನಪದರ ಎದೆಯ ಹಾಡುಗಳೆಂದು ಹೇಳಬಹುದು. ಮಣ್ಣು, ನೀರು, ಗಾಳಿ, ಬೆಳಕುಗಳಂತೆ ಪ್ರಕೃತಿಯ ಜೀವಸತ್ವಗಳಾಗಿ … Read more

ಸಚಿನ್ ಅಂಕೋಲಾ ಅವರ ಪ್ರಗತಿಪರ ಕ್ರಾಂತಿಕಾರೀ ಕವನಗಳು: ಹುಳಗೋಳ ನಾಗಪತಿ ಹೆಗಡೆ

ಇತ್ತೀಚೆಗೆ ಅಂಕೋಲೆಯ ಪಿ.ಎಮ್. ಜ್ಯೂನಿಯರ್ ಕಾಲೇಜಿನಲ್ಲಿ ಸಚಿನ್ ಅಂಕೋಲಾ ಅವರ, ‘ನಾನೂ ಹೆಣ್ಣಾಗಬೇಕಿತ್ತು..’ ಕವನ ಸಂಕಲನ ಲೋಕಾರ್ಪಣೆಗೊಂಡಿತು. ಈ ಮೊದಲೇ ತಮ್ಮ ಹಲವು ಗಟ್ಟಿ ಕವನಗಳ ಮೂಲಕ ಅನೇಕ ಹಿರಿಯರ ಗಮನ ಸೆಳೆದವರು ಸಚಿನ್. ಬಹಳಷ್ಟು ಕವಿಗೋಷ್ಠಿಗಳಲ್ಲಿ ಸಾಕಷ್ಟು ಸಶಕ್ತವಾದ ಕವನಗಳನ್ನೇ ವಾಚಿಸಿ, ಕಾವ್ಯಪ್ರಿಯರ ಮೆಚ್ಚುಗೆಯನ್ನೂ ಗಳಿಸಿಕೊಂಡಿದ್ದಾರೆ. ಇದೀಗ ಲೋಕಾರ್ಪಣೆಗೊಂಡಿರುವ ತಮ್ಮ ಕವನ ಸಂಕಲನದಲ್ಲಿ ಹಿರಿಯರು ಇಟ್ಟ ನಂಬಿಕೆಯನ್ನು ಹುಸಿಗೊಳಿಸದೆ ಇನ್ನಷ್ಟು ಭರವಸೆಯನ್ನು ಮೂಡಿಸಿ ಕನ್ನಡ ಕಾವ್ಯಲೋಕಕ್ಕೆ ಇನ್ನೊಬ್ಬ ಗಟ್ಟಿ ಕವಿ ಬರುತ್ತಿರುವ ಎಲ್ಲ ಬಗೆಯ ವಿಶ್ವಾಸವನ್ನೂ … Read more

ಅರಸು ಯುಗ: ಕರ್ನಾಟಕ ರಾಜಕೀಯ ಕನಸುಗಾರನ ಏಳುಬೀಳಿನ ಕಥನ: ಪ್ರದೀಪ್ ಮಾಲ್ಗುಡಿ

ಕರ್ನಾಟಕ ರಾಜಕಾರಣದಲ್ಲಿ ದೇವರಾಜ ಅರಸು ಅವರ ಹೆಸರು ಅನೇಕ ಕಾರಣಗಳಿಗೆ ಮಹತ್ವಪಡೆದುಕೊಂಡಿದೆ. ಅಂತೆಯೇ ವಿವಾದಕ್ಕೂ ಉಲ್ಲೇಖಿತವಾಗುತ್ತದೆ. ಆದರೆ, ಇತ್ತೀಚಿನವರೆಗೆ ಅವರ ಮಿತಿಗಳನ್ನು ಕುರಿತು ನಡೆದಷ್ಟು ಮಾತುಕತೆಗಳು ಅವರ ಸಾಧನೆ ಕುರಿತು ನಡೆದಿರಲಿಲ್ಲ. ಅರಸು ಅವರ ಜನ್ಮಶತಮಾನೋತ್ಸವದ ನೆಪದಲ್ಲಿ ಇತ್ತೀಚೆಗೆ ಹಿಂದುಳಿದ ವರ್ಗಗಳ ಆಯೋಗ, ಕೆಲ ಅರಸು ಪರ ಸಂಘಟನೆಗಳು ಮತ್ತು ಅಭಿಮಾನಿಗಳು ಮತ್ತು ಕರ್ನಾಟಕ ಸರ್ಕಾರ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ವಸ್ತುನಿಷ್ಟ ಸಂಗತಿಗಳು ಚರ್ಚೆಗೆ ಬಂದಿವೆ.  ಪ್ರಬಲ ಜಾತಿಗಳ ಬೆಂಬಲವಿಲ್ಲದೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಹುದ್ದೆ ಪಡೆಯುವುದು, ಸುಧಾರಣೆಗಳನ್ನು … Read more

ಕವಿ ನಾರಾಯಣಪ್ಪ ಅವರ ‘ಎದೆಯೊಳಗಿನ ಇಬ್ಬನಿ’: ಸುರೇಶ ಎಲ್. ರಾಜಮಾನೆ, ರನ್ನಬೆಳಗಲಿ

ಕೃತಿ ; ಎದೆಯೊಳಗಿನ ಇಬ್ಬನಿ ಗಜಲ್ & ಮುಕ್ತಕಗಳ ಸಂಕಲನ ಲೇಖಕರು;-ದೊಡ್ಡಕಲ್ಲಹಳ್ಳಿ ನಾರಾಯಣಪ್ಪ. ದೊಡ್ಡಕಲ್ಲಹಳ್ಳಿ ನಾರಾಯಣಪ್ಪಾ ಅವರು ಮೊನ್ನೆ ಅರಸೀಕೆರೆಯ ಕಮ್ಮಟದಲ್ಲಿ ಬೇಟಿಯಾದ ನೆನಪಿಗಾಗಿ ತಮ್ಮ ಕಾವ್ಯಖಜಾನೆಯ ಒಂದು ವಿಸ್ಮಯಕಾರಿ ಹೊತ್ತಿಗೆಯನ್ನು ನೀಡಿದ್ದರು. ಅದನ್ನು ಸವಿಯಲು ಸಮಯ ಸಿಕ್ಕಿರಲಿಲ್ಲ… ಆದರೆ.. ಕವಿ ನಾರಾಯಣಪ್ಪ ಅವರ 'ಎದೆಯೊಳಗಿನ ಇಬ್ಬನಿ' ಇಂದು ಮುಂಜಾನೆಯ ಮಂಜು ಕರಗುವಷ್ಟರಲ್ಲಿ ಓದಿ ಮುಗಿಸಿದೆ. ನನ್ನೆದೆಗೆ ಮಂಜು ಕವಿಯಿತು. ಗಜಲ್ ಮತ್ತು ಮುಕ್ತಕಗಳನ್ನೊಳಗೊಂಡ ಈ ಹೊತ್ತಿಗೆ ಸಮಯವನ್ನೇನು ಹೆಚ್ಚು ತೆಗೆದುಕೊಳ್ಳಲಿಲ್ಲ ಆದರೆ, ಓದಿ ಅರ್ಥೈಸಿಕೊಳ್ಳಲು ಸ್ವಲ್ಪ … Read more

ವಸುಮತಿ ರಾಮಚಂದ್ರ ‘ಮಕ್ಕಳ ಮನೋಭೂಮಿ’ ಕೃತಿ ಪರಿಚಯ: ಗುಂಡೇನಟ್ಟಿ ಮಧುಕರ

ಮಕ್ಕಳ ಮನಸ್ಸನ್ನು ಅರಳಿಸುವ ಕೃತಿ ಕೃತಿಪರಿಚಯ: ಗುಂಡೇನಟ್ಟಿ ಮಧುಕರ  ಮೊ: 8904632798 ಈಗ ಮಕ್ಕಳ ಸಾಹಿತ್ಯ ರಚಿಸುವವರ ಸಂಖ್ಯೆ ಬೆರಳೆಣಿಕೆಯಷ್ಟು. ಪ್ರೌಢ ಸಾಹಿತ್ಯ ರಚಿಸುವುದಕ್ಕಿಂತ ಮಕ್ಕಳ ಸಾಹಿತ್ಯ ರಚನೆ ತುಂಬ ಕಷ್ಟದ ಕೆಲಸ. ನಾವು ಮಕ್ಕಳ ಮನಸ್ಸನ್ನರಿತು ನಾವೂ ಮಕ್ಕಳಾಗಿಯೇ ರಚಿಸಿದಾಗ ಮಾತ್ರ ಒಳ್ಳೆಯ ಮಕ್ಕಳ ಸಾಹಿತ್ಯ  ಹೊರಬರಲು ಸಾಧ್ಯ. ಇದಕ್ಕಾಗಿ ಮಕ್ಕಳ ಮನಸ್ಸನ್ನು ಅಭ್ಯಾಸ ಮಾಡಬೇಕಾದುದು ಅತ್ಯವಶ್ಯವಾಗಿದೆ. ಅದಕ್ಕಾಗಿ ನಾವು ಮಕ್ಕಳೊಂದಿಗೆ ಹೆಚ್ಚಿನ ಒಡನಾಟ ಹೊಂದಿದವರಿಂದ ಮಾತ್ರ ಉತ್ಕøಷ್ಟ ಮಕ್ಕಳ ಕೃತಿಗಳನ್ನು ರಚಿಸಲು ಸಾಧ್ಯ. ಹಿಂದಿನ … Read more

ಮೋಹಪುರವೆಂಬ ಸಾಮಾಜಿಕ ಮಾಯೆ: ಕೆ.ಎಂ.ವಿಶ್ವನಾಥ ಮರತೂರ.

  ಪುಸ್ತಕದ ಹೆಸರು : “ಮೋಹಪುರ”                                          ಪ್ರಕಾರ : ಕಾದಂಬರಿ ಪ್ರಕಾಶಕರು : ಕನ್ನಡ ನಾಡು ಪ್ರಕಾಶನ              ಬೆಲೆ : ರೂ.90            ಪುಟಗಳು : 88 ಪ್ರಕಟಣೆಯ ವರ್ಷ : 2015   … Read more

ಹೋ … ಎನು….? ಪುಸ್ತಕ ಪರಿಚಯ: ಹೆಚ್. ಎಸ್. ಅರುಣ್ ಕುಮಾರ್

"ಅನಿತಾ ನರೇಶ್ ಮಂಚಿ"  ಉದಯೋನ್ಮುಖ ಲೇಖಕಿಯ ಹೋ ….. ಎನು…? ಲಘು ಬರಹಗಳ ಸಂಕಲನ ಓದಿದೆ. ರಂಗಕರ್ಮಿ "ನಟರತ್ನಾಕರ ಡಾ . ಮಾಸ್ಟರ್ ಹಿರಣ್ಣಯ್ಯ " ಅವರ ಮುನ್ನುಡಿ "ರಾಮ್ ನರೇಶ ಮಂಚಿ " ರ ಮುಖಪುಟದ ಛಾಯಾಚಿತ್ರ ಅದ್ಬುತವಾಗಿದೆ.  ಒಟ್ಟು ೪೪ ಲಘು ಹಾಸ್ಯ ಲೇಖನಗಳನ್ನು ಹೊತ್ತ ಸುಂದರ ಮುದ್ರಣದ ಪುಸ್ತಕ. "ಅನಿತಾ ನರೇಶ್ ಮಂಚಿ"  ಯವರು ದಿನ ನಿತ್ಯದ ಅನುಭವಗಳಲ್ಲಿ ಹಾಸ್ಯ ಹೇಗೆ ಹಾಸು ಹೊಕ್ಕಾಗಿದೆ ಎಂಬುದನ್ನು ತುಂಬಾ ಸ್ವಾರಸ್ಯವಾಗಿ ಹೇಳುತ್ತಾರೆ . ಅವರ … Read more

ನಿ. ರಾಜಶೇಖರ ಅವರ ಜೀವನ ದರ್ಶನ ಹಾಗೂ ಅವರ ‘ಶ್ರೀರಾಮಾಯಣ ದರ್ಶನಂ’ ಗದ್ಯಾನುವಾದ: ಶ್ರೀನಿವಾಸ ಕೃ. ದೇಸಾಯಿ

ಕೃಪೆಗೆಯ್, ತಾಯೆ, ಪುಟ್ಟನಂ!  ಕನ್ನಡದ ಪೊಸಸುಗ್ಗಿ ಬನದ ಈ ಪರಪುಟ್ಟನಂ (ಶ್ರೀ.ರಾ.ದ. ಆಯೋದ್ಯಾ ಸಂಪುಟಂ – ಸಂಚಿಕೆ 1; 139-140) ಪುಟ್ಟನನ್ನು, ಕನ್ನಡದ ಹೊಸ ಸುಗ್ಗಿವನದ ಈ ಕೋಗಿಲೆಯನ್ನು ಹರಸು ತಾಯಿ! (ಗದ್ಯಾನುವಾದ – ನಿ. ರಾಜಶೇಖರ) ಹೊಸಗನ್ನಡದ ಸಾಹಿತ್ಯದ ಮೊಟ್ಟಮೊದಲ ಮಹಾಕಾವ್ಯವೆಂದು ಮಹಾಕವಿ ಕುವೆಂಪುರವರ ಮಹಾಛಂದಸ್ಸಿನ ‘ಶ್ರೀರಾಮಾಯನ ದರ್ಶನಂ’ ಪ್ರಸಿದ್ಧಿ ಪಡೆದಿದೆ. ಇದನ್ನು ಪುಷ್ಟೀಕರಿಸುವಂತೆ, ಕನ್ನಡ ಭಾಷೆಯ ಮೊದಲ ‘ಜ್ಞಾನಪೀಠ ಪ್ರಶಸ್ತಿ’ಯನ್ನು, ಈ ಮಹಾಕಾವ್ಯ ತನ್ನದಾಗಿಸಿತು. ಅದರಂತೆಯೇ ಕರ್ನಾಟಕ ರಾಜ್ಯ ಸರ್ಕಾರವು ಪ್ರಾರಂಬಿಸಿದ ‘ಪಂಪ’ ಪ್ರಶಸ್ತಿಯು … Read more

Happy 50th anniversary to “ಸಂಸ್ಕಾರ” …: ಆದರ್ಶ ಬಿ. ವಶಿಷ್ಟ

ಹಿಂದಿರುಗಿ ನೋಡಿದಾಗ …  ಹೀಗೆಯೇ ಎಚ್ಚೆಸ್ವಿ ಅವರ "ಅನಾತ್ಮ ಕಥನ " ಓದುತ್ತಾ ಕುಳಿತಿದ್ದೆ. ಯಾವುದೊ ಸಣ್ಣ ಕಥೆಯ ಮಧ್ಯದಲ್ಲಿ ಅವರು ಯು. ಆರ್. ಅನಂತಮೂರ್ತಿಯವರ " ಸಂಸ್ಕಾರ " ಕಾದಂಬರಿಯ ಬಗ್ಗೆ ಉಲ್ಲೇಖಿಸಿದ್ದರು. ತಕ್ಷಣವೇ ಏನೋ ಹೊಳೆದಂತಾಗಿ ಇಂಟರ್ ನೆಟ್ನಲ್ಲಿ ಸಂಸ್ಕಾರ ಮೊದಲು ಬಿಡುಗಡೆ ಆದ ವರ್ಷ ಯಾವುದೆಂದು ಹುಡುಕಿದೆ. ವರ್ಷ ೧೯೬೫ ನೋಡಿದ ಕೂಡಲೇ ಮುಖದಲ್ಲೊಂದು ಮಂದಾಹಾಸ. ' ಅರೆ, ಸಂಸ್ಕಾರ ಮುದ್ರಣಗೊಂಡು ೫೦ ವರ್ಷ ಆಗಿಹೊಯ್ತಾ ?? ' ಎಂದುಕೊಂಡೆ. ತಕ್ಷಣವೇ ಇಂತಹದೊಂದು … Read more

ಅಮ್ಮನ ನೆನಪಿನ ಧಾರೆ: ಮಾಲಾ

ಅಮ್ಮನ ನೆನಪು, ಸಂಪುಟ ೧,  ಸಂಪಾದನೆ: ಚಂದ್ರಕಾಂತ ವಡ್ಡು,  ಅಂಕುರ ಪ್ರಕಾಶನ, ನಂ. ೧೧೪೮, ೧ನೇ ಮಹಡಿ,  ೨ನೇ ಅಡ್ಡರಸ್ತೆ, ಪಡುವಣ ರಸ್ತೆ,  ಮೈಸೂರು ೫೭೦೦೨೩,  ಪುಟಗಳು ೨೦೦,  ಬೆಲೆ ರೂ. ೧೫೦ ಮಕ್ಕಳ ಪ್ರಪಂಚದಲ್ಲಿ ಮೊದಲಿಗೆ ಅಮ್ಮನಿಗೇ ಸ್ಥಾನ. ಅಮ್ಮ ಎಂಬ ಪದವೇ ಸಾಕು ನಮಗೆ ಹರುಷ ತರಲು.  ಎಲ್ಲ ಮಕ್ಕಳಿಗೂ ಅಮ್ಮನ ನೆನಪು ಅವಳಿಲ್ಲದಿರುವಾಗಲೇ ಹೆಚ್ಚು ಕಾಡುತ್ತದೆ ಎಂದು ನನಗನಿಸುತ್ತದೆ. ಈ ಹೊತ್ತಗೆಯಲ್ಲಿ ೩೬ ಜನ ಮಕ್ಕಳು ಅವರ ತಾಯಿ ಬಗ್ಗೆ ತಮ್ಮ ನೆನಪನ್ನು … Read more

ಹನಿಯೂರು ಚಂದ್ರೇಗೌಡರ “ಸೋಲಿಗರು: ಬದುಕು ಮತ್ತು ಸಂಸ್ಕೃತಿ” ಕೃತಿಯ- ಒಂದು ವಿಮರ್ಶೆ: ಡಾ. ಕೆ.ಮಧುಸೂದನ ಜೋಷಿ

  ಬಹುಮುಖಿಯಾಗಿ  ಬಹುರೂಪಿಯಾಗಿ ಬೆಳೆದು ಬಂದ ಕನ್ನಡ ಸಾಹಿತ್ಯ ಕಾಲದಿಂದ ಕಾಲಕ್ಕೆ ತಕ್ಕಂತೆ ಬದಲಾಗುತ್ತ, ಪ್ರಸ್ತುತಗೊಳ್ಳುತ್ತ ಬಂದಿದ್ದರಿಂದಲೇ ಅದು ಜೀವಂತಿಕೆಯನ್ನು ಕಾಯ್ದುಕೊಂಡು 8 ಜ್ಞಾನಪೀಠಗಳನ್ನು ಏರಿ ಭರತೀಯ ಸಾಹಿತ್ಯ ಸಾಮ್ರಾಜ್ಯದ ಮೊದಲ ಚಕ್ರವರ್ತಿಯಾಗಿ ಮೆರೆದಿದೆ; ಮೆರೆಯುತ್ತಿದೆ. ಕಾವ್ಯ, ಕತೆ, ಕಾದಂಬರಿ, ನಾಟಕ, ವಿಮರ್ಶೆ, ಸಂಶೋಧನೆ, ಆತ್ಮಚರಿತ್ರೆ, ಜೀವನಚರಿತ್ರೆ, ಗೀತನಾಟಕ, ಕಥನಕವನ, ಪ್ರವಾಸಕಥನ, ಜನಾಂಗೀಯ ಅಧ್ಯಯನ…. ಹೀಗೆ ಹತ್ತು ಹಲವು ಮುಖಗಳಲ್ಲಿ ಹೊಮ್ಮಿಬಂದ ಕನ್ನಡ ಸಾಹಿತ್ಯವಾಹಿನಿ ಮೈದುಂಬಿಕೊಳ್ಳುತ್ತ, ಮನಗಳನ್ನು ತುಂಬುತ್ತ ಸಾಗಿದೆ. ಆದರೆ ಈ ಎಲ್ಲ ಸಾಹಿತ್ಯದ ಪ್ರಕಾರಗಳಲ್ಲಿಯೇ ಅಪರೂಪ … Read more

‘ಸೋಲು ಗೆದ್ದವನದ್ದು!’ ಕಾದಂಬರಿಯ ಒಂದು ಅಧ್ಯಾಯ: ಮಂಜು ಬನವಾಸೆ

ಅಮ್ಮ-ಅಪ್ಪ ಅದ್ಯಾರ ಕೈಕಾಲು ಹಿಡಿದು ದುಡ್ಡು ತಂದರೋ ಗೊತ್ತಿಲ್ಲ. ಫೀಸು ಎಷ್ಟೋ ಗೊತ್ತಿಲ್ಲ. ನನ್ನನ್ನು ಸಕಲೇಶಪುರದ ಗೌರ್ಮೆಂಟ್ ಪಿಯು ಕಾಲೇಜಿಗೆ ಅಡ್ಮಿಷನ್ ಮಾಡಿಸಲಾಗಿದೆ ಮತ್ತು ಮಡಿಕೆಯೊಂದಿಗೆ ನಾನೂ ಆಟ್ರ್ಸ್ ಫಸ್ಟ್ ಇಯರ್ ಪಿಯುಸಿಗೆ ಹೋಗುತ್ತಿದ್ದೇನೆ ಎಂದು ತಿಳಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಕಾಲೇಜಿನ ಮೊದಲ ದಿನ ಬಹುಶಃ ಅದು ಜುಲೈ 7ನೇ ತಾರೀಖಿರಬಹುದು ಎನ್ನಿಸುತ್ತದೆ. ಆಷಾಢದ ಗಾಳಿ ಜೋರಾಗಿ ಬೀಸುತ್ತಿತ್ತು. ನಮ್ಮ ಮನೆಗಳಂತೂ ಅಕ್ಷರಶಃ ಮಂಜಿನಲ್ಲಿ ಮುಳುಗಿ ಹೋಗಿದ್ದವು. ಮಳೆ ಸ್ವಲ್ಪ ಬಿಡುವು ನೀಡಿದಾಗ ಇದ್ದ ಒಂದು … Read more

’ಪ್ರೇಮಕಾವ್ಯ’ ಕಾದಂಬರಿ ಕುರಿತು: ವೀರಣ್ಣ ಮಂಠಾಳಕರ್, ಬಸವಕಲ್ಯಾಣ

ಕಾವ್ಯಶ್ರೀ ಮಹಾಗಾಂವಕರ್ ಅವರ ಸಾಮಾಜಿಕ ಕಾದಂಬರಿ ’ಪ್ರೇಮಕಾವ್ಯ’ ಜಾತಿಯೆಂಬ ಕಂದಾಚಾರದ ನಡುವೆ ಪ್ರೇಮಿಗಳಿಬ್ಬರೂ ಸಿಕ್ಕಿ ಬೀಳುವ ಕಥಾ ವಸ್ತು ಹೊಂದಿದೆ. ಸರಳ ನಿರೂಪಣೆ, ಸರಾಗವಾಗಿ ಓದಿಸಿಕೊಂಡು ಹೋಗುವ ಸಂಭಾಷಣೆ, ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ ನಡೆಸುವ ಹೋರಾಟ ಮನ ಮುಟ್ಟುತ್ತದೆ. ಬಸ್ ಪ್ರಯಾಣದ ಮೂಲಕ ಎರಡು ಹೃದಯಗಳ ಮಧ್ಯೆ ಆಗುವ ತಲ್ಲಣಗಳು, ಅಲ್ಲಿಂದಲೇ ಶುರುವಾಗುವ ಪರಿಚಯ ಅರಿಯದೇ ಹುಟ್ಟಿಕೊಳ್ಳುವ ಪ್ರೀತಿ.  ಬ್ರಾಹ್ಮಣ ಜಾತಿಯ ಕಟ್ಟುಪಾಡುಗಳಿಗೆ ಕಟಿಬಿದ್ದು ಹೆತ್ತವರು ನಡೆಸುವ ದರ್ಪ, ತಾಯಿ ಭಾಗ್ಯಳ ಸಹಜ ಉಪದೇಶ, ಹಲವು ಕಷ್ಟ, … Read more