ನಾವು- ನಮ್ಮ ಕನ್ನಡ: ನಾಗೇಶ್ ಟಿ. ಕೆ.

ನನ್ನ ಹೆಸರು ನಾಗೇಶ್ ಟಿ ಕೆ. ಮೂಲತಃ ಹಾಸನ ಜಿಲ್ಲೆಯವ, ಪ್ರಸ್ತುತ ಗೌರಿಬಿದನೂರು ತಾಲ್ಲೋಕಿನಲ್ಲಿ ವಾಸ. ನಾನೊಬ್ಬ ಕನ್ನಡ ಪ್ರೇಮಿ, ಹುಚ್ಚು ಅಭಿಮಾನಿಯಲ್ಲ ಕೇವಲ ಭಾಷಾಭಿಮಾನಿಯಷ್ಟೆ.     1956ರಲ್ಲಿ ಅಸ್ಥಿತ್ವಕ್ಕೆ ಬಂದ ‘ಮೈಸೂರು ರಾಜ್ಯ’ ಇಂದು ಶ್ರೀಗಂಧದ ಬೀಡು, ಶಿಲ್ಪಕಲೆಗಳ ತವರೂರು ಎಂದು ಕರೆಯಲ್ಪಡುವ ‘ಕರ್ನಾಟಕ’ 60ನೇ ಕನ್ನಡ ರಾಜ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಕನ್ನಡ ನಾಡು, ಕನ್ನಡ ರಾಜ್ಯೋತ್ಸವದ ವಿಶೇಷತೆ, ಕನ್ನಡಿಗರ ಭಾಷಾಭಿಮಾನದ ಬಗ್ಗೆ ಬರೆಯಲು ಇಚ್ಛಿಸುತ್ತೇನೆ.    ಕನ್ನಡ ನಾಡಿನ ಇತಿಹಾಸ ಎರಡು ಸಾವಿರ ವರ್ಷಕ್ಕು … Read more

ಕನ್ನಡ ಕಣ್ಮಣಿ “ಅನ್ನದಾನಯ್ಯ ಪುರಾಣಿಕ”: ಉದಯ ಪುರಾಣಿಕ

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ದೌರ್ಜನ್ಯಕ್ಕೆ ಹೆದರದೆ, ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದಲ್ಲಿ ನಿಜಾಮ್ ಸೇನೆಯ ಗುಂಡಿಗೆ ಬೆದರದೆ ಮತ್ತು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪೋಲಿಸರ ಮತ್ತು ಕನ್ನಡ ಮತ್ತು ಏಕೀಕರಣ ವಿರೋಧಿಗಳ ಹಿಂಸೆಗೆ ಜಗ್ಗದೆ, ನಾಡು-ನುಡಿಗಾಗಿ ಕಳೆದ 67 ವರ್ಷಗಳಿಗಿಂತ ಹೆಚ್ಚು ಕಾಲ ನಿಸ್ವಾರ್ಥ, ನಿರಂತರ, ಅಪ್ರತಿಮ ಸೇವೆ ಸಲ್ಲಿಸಿದವರು. ಗಾಂಧಿವಾದಿ, ಕನ್ನಡ ಕಣ್ಮಣಿ 87 ವರ್ಷದ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕರು. ಪ್ರೀತಿ ನನ್ನ ಮತ, ಸೇವೆ ನನ್ನ ವ್ರತ ಎಂದು ಬಾಳಿದ ಈ ಸಜ್ಜನರ … Read more

ಭಾರತದಲ್ಲಿ ಜಾತಿವ್ಯವಸ್ಥೆ: ದ್ಯಾವನೂರ್ ಮಂಜುನಾಥ್

“ಮಳೆಯ ಭರದಿ ತಿಳಿಯ ಮಣ್ಣು ಒಳಗು ಹೊರಗೂ ಏಕವಾಗಿ ಸೋರುತಿಹುದು ಮನೆಯ ಮಾಳಗಿ ಅಜ್ಞಾನದಿಂದ…..” ಇದನ್ನು ಬಗೆಹರಿಸಲು ಬುದ್ಧ ಬಸವಣ್ಣನಂತಹ ಮಹಾತ್ಮರು ಎಲ್ಲಿ ಸೋತರು ಎನ್ನುವ ಪ್ರಶ್ನೆ ನನ್ನಲಿ ಸದಾ ಪ್ರಶ್ನಿಸುತ್ತಿರುವೆ. ಈ ಒಂದು ಪ್ರಶ್ನೆಗೆ ನಮ್ಮ ಬಳಿ ಸ್ಪಷ್ಟವಾದಂತಹ ಉತ್ತರವಿಲ್ಲ ಯಾಕೆಂದರೆ ಭಾರತದಲ್ಲಿ ಜಾತಿವ್ಯವಸ್ಥೆ ಇದೆಯೆ? ಎನ್ನು ಗೊಂದಲದ ಪ್ರಶ್ನೆ ಹುಟ್ಟುತ್ತದೆ. ಇಂದಿನ ನಮ್ಮ ಸಮಾಜ ವಿಜ್ಞಾನಗಳಲ್ಲಿ ನಡೆಯುವ ಪ್ರಭಕಾರಿಯಾದ ಸಂಶೋಧನೆಯಲ್ಲಿ ನೋಡುವಂತಹದ್ದು ಐಡಿಯಾಲಾಜಿಕಲ್ ಸ್ವರೂಪದ್ದೆ ವಿನಃ ಯಾವುದೇ ರೀತಿಯಲ್ಲಿ ವೈಜ್ಞಾನಿಕ ಸ್ವರೂಪದಲ್ಲ.     ಇತ್ತೀಚಿಗೆ … Read more

ಪ್ರೊ. ಎಂ.ಎಂ. ಕಲ್ಬುರ್ಗಿ ನಾನು ಕಂಡಂತೆ.. : ಗಿರಿಜಾಶಾಸ್ತ್ರಿ, ಮುಂಬಯಿ.

ಸುಮಾರು 1990ರ ಆಸುಪಾಸು. ಪ್ರೊ. ಎಂ.ಎಂ. ಕಲ್ಬುರ್ಗಿ ಯವರು ಒಂದು ಉಪನ್ಯಾಸ ಮಾಡಲು ಮುಂಬಯಿ ವಿ.ವಿಯ ಕನ್ನಡ ವಿಭಾಗಕ್ಕೆ ಬಂದಿದ್ದರು. ಬಹುಶಃ ಅವರ “ಮಾರ್ಗ” ಸಂಪುಟಗಳ ಬಗ್ಗೆ ಮಾತನಾಡಿದರೆನಿಸುತ್ತೆ. ಅದರ ವಿವರಗಳು ಈಗ ಸರಿಯಾಗಿ ನೆನಪಿಲ್ಲದಿದ್ದರೂ, ನಮ್ಮನ್ನೆಲ್ಲಾ ಅಂದು ಬೆರಗುಗೊಳಿಸಿದ್ದ ಅವರ ಪಾಂಡಿತ್ಯದ ಆಳ ಅಗಲಗಳ ವರ್ಚಸ್ಸು, ಆ ಪ್ರಭಾವ ಇನ್ನೂ ಹಸಿಯಾಗಿಯೇ ಇದೆ. ಕಲ್ಬುರ್ಗಿಯವರನ್ನು ನಾನು ಮೊದಲ ಸಲ ನೋಡಿದ್ದು ಹೀಗೆ. ಆಗ ನಮ್ಮ ಮಾರ್ಗದರ್ಶಕರಾಗಿದ್ದ ಪ್ರೊ. ತಾಳ್ತಜೆ ವಸಂತ ಕುಮಾರ್ ಅವರು ಅಲ್ಲಿನ ಎಲ್ಲಾ … Read more

ಆರದಿರಲಿ ಬೆಳಕು: ಎಸ್. ಜಿ. ಸೀತಾರಾಮ್, ಮೈಸೂರು.

ಭಾರತ ರಾಷ್ಟ್ರೀಯ ನೇತ್ರದಾನ ಪಾಕ್ಷಿಕೋತ್ಸವ (ಆಗಸ್ಟ್ 25-ಸೆಪ್ಟೆಂಬರ್ 8, 2015) ಮತ್ತು ವಿಶ್ವ ದೃಷ್ಟಿ ದಿನ (8 ಅಕ್ಟೋಬರ್ 2015) ಸಂದರ್ಭಕ್ಕೊಂದು ನುಡಿಕಾಣಿಕೆ ಮಣ್ಣುಪಾಲಾಗುತ್ತಿರುವ ಕಣ್ಣುರಾಶಿ                                                                          … Read more

ನಾನು, ಅವ್ವ ಮತ್ತು ಸೀರೆ: ಸಾವಿತ್ರಿ ವಿ. ಹಟ್ಟಿ

ಓಂ ಶ್ರೀ ಗಣೇಶಾಯ ನಮಃ ಅವ್ವನ ಹೊಟ್ಯಾಗ ನಾನು ಮೂಡು ಮೂಡುತ್ತಿದ್ದಂತೆನೇ ಆಕೀ ಕಳ್ಳಿಗೂ ನನಗೂ ಎಂಥಾ ಬಿಡಿಸಲಾರದಂಥಾ ಸಂಬಂಧ ಬೆಳೀತು ನೋಡ್ರಿ! ಅದರಂಗ ಅವ್ವನ ಸೀರಿಗೂ ನನಗೂ ಅವತ್ತಿಂದಾನಾ ಬಿಡಿಸಲಾಗದ ಬಂಧ ಬೆಳ್ಕೊಂತ ಬಂತು…  ಅವ್ವ ನನಗ ಎಂಥಾ ಲಂಗಾ ಪೋಲಕಾ ಹೊಲಿಸಿದ್ರೂನು ಹಟ ಮಾಡದಾ ಒಮ್ಮೆಯಾದ್ರೂ ಉಟ್ಟಾಕಿನಾ ಅಲ್ಲ ನಾನು. ಅದು ಯಾಕೇನಾ ನನಗೂ ಗೊತ್ತಿಲ್ಲ. ಆಕಿ ತಂದಿದ್ದ ಹೊಸ ದಿರಿಸು ಮನಸ್ಸಿನ್ಯಾಗ ಭಾಳ ಅಂದ್ರ ಭಾಳ ಭೇಷಿ ಅನ್ಸಿರುತ್ತ. ಆದ್ರೂ ಒಂಚೂರು ರಗಳಿ … Read more

ಮರೆಯದ ಮಾಣಿಕ್ಯ ನನ್ನಜ್ಜ: ಸಿದ್ರಾಮ ತಳವಾರ

ನಮ್ಮದು ಉತ್ತರ ಕರ್ನಾಟಕವಾದ್ದರಿಂದ ತಂದೆಯ ತಂದೆಗೆ ನಾವು ಅಜ್ಜ ಅಂತಾ ಕರೆಯುವುದು ವಾಡಿಕೆ. ನನ್ನಜ್ಜ ಮರೆಯಾಗಿ ದಶಕಗಳು ಕಳೆಯುತ್ತ ಬಂದರೂ ನನ್ನಜ್ಜನೊಂದಿಗೆ ಕಳೆದ ಕ್ಷಣಗಳು ಮಾತ್ರ ನನ್ನಿಂದ ಮರೆಯಾಗದೇ ಮನದ ಮೂಲೆಯಲ್ಲಿ ಅಚ್ಚೊತ್ತಿದಂತೆ ಚಿರಸ್ಥಾಯಿಯಾಗಿ ಉಳಿದುಬಿಟ್ಟಿದೆ. ಊರಲ್ಲಿ ತಳವಾರಕೀ ಮಾಡುತ್ತಿದ್ದ ನನ್ನಜ್ಜ ಅತೀವ ಬಲಶಾಲಿಯಾದ್ದರಿಂದ ಊರಲ್ಲಿ ಸಲಗನೆಂದೇ (ಗಂಡಾನೆ) ಎಲ್ಲರೂ ಕರೆಯುತ್ತಿದ್ದುದು ವಾಡಿಕೆಯಾಗಿತ್ತು. (ಯಾವಾಗಲೋ ಒಂದು ಸಾರಿ ಈ ಕುರಿತು ನನ್ನಜ್ಜನನ್ನೇ ಕೇಳಿ ತಿಳಿದುಕೊಂಡಿದ್ದು) ಅನಕ್ಷರಸ್ಥನಾದ ನನ್ನಜ್ಜ ಅಕ್ಷರ ಲೋಕವೊಂದನ್ನು ಬಿಟ್ಟು ಮಿಕ್ಕೆಲ್ಲದರಲ್ಲೂ ಎತ್ತಿದ ಕೈ ಎಂದೇ … Read more

ಧೀಮಂತ ಚೇತನ ಕವಿ ಕಯ್ಯಾರರಿಗೊಂದು ನುಡಿನಮನ: ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ

ನಮ್ಮನ್ನಗಲಿದ ತುಳು-ಕನ್ನಡಿಗರ ಹೆಮ್ಮೆಯ ಧೀಮಂತ ಚೇತನ ಕವಿ ಕಯ್ಯಾರರಿಗೊಂದು ನುಡಿನಮನ ದುಡಿತವೇ ನನ್ನ ದೇವರು, ಲೋಕ ದೇವಕುಲ ಬೆವರೆ ಹೂ ಹಣ್ಣು ಕಾಯ್, ಕಣ್ಣೀರ ತೀರ್ಥಂ ಎಮ್ಮೊಂದಿಗರ ಬಾಳ ಸಾವು ನೋವಿನ ಗೋಳ ಉಂದಿಹೆನು ಸಮಪಾಲ-ನನಗದುವೆ ಮೋಕ್ಷಂ ದುಡಿತಕ್ಕೇ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದ ಕಾಯಕವೇ ಕೈಲಾಸಂ ಎಂ¨ ಬಸವಣ್ಣನವರ ಸತ್ಪಥದಲ್ಲಿ ಸಾಗಿ ಅದರಂತೆ ಬಾಳಿದವರು ಹಿರಿಯ ಧೀಮಂತ ಚೇತನ, ಕನ್ನಡಾಂಬೆಯ ಪುತ್ರರತ್ನ ಹಿರಿಯ ಚೇತನ ಕೈಯ್ಯಾರ ಕಿಞ್ಞಣ್ಣ ರೈ. ಕಾಸರಗೋಡಿನ ಕನ್ನಡ ಪರ ಹೋರಾಟದಲ್ಲಿ ಕೇಳಿ ಬರುವ … Read more

‘ಜಾಲದಲ್ಲಿ ಸಮಾನತೆ’ (ಕೊನೆಯ ಭಾಗ): ಜೈಕುಮಾರ್.ಹೆಚ್.ಎಸ್

ಭಾರತದಲ್ಲಿ ಜಾಲದಲ್ಲಿ ಸಮಾನತೆ ಕುರಿತ ಪರಿಸ್ಥಿತಿ: ಸ್ಪರ್ಧಾತ್ಮಕ ವ್ಯವಹಾರ ಆಯೋಗವು ಜಾಲದಲ್ಲಿ ಸಮಾನತೆಯನ್ನು ಭಾರತೀಯ ಟೆಲಿಕಾಂ ಆಪರೇಟರ್ ಗಳು ಉಲ್ಲಂಘಿಸುತ್ತಿದ್ದಾರೆಯೇ ಎಂದು ಪರಿಶೀಲನೆ ನಡೆಸುತ್ತಿತ್ತು. ಅದೇ ಸಮಯದಲ್ಲಿ ದುರದೃಷ್ಟವಶಾತ್, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಇತ್ತೀಚೆಗೆ ಬಿಡುಗಡೆ ಮಾಡಿರುವ ಒವರ್-ದಿ-ಟಾಪ್ (ಒಟಿಟಿ) ಸೇವೆಗಳನ್ನು ನಿಯಂತ್ರಿಸುವ ಕುರಿತಾದ ಸಮಾಲೋಚನ ಡಾಕ್ಯುಮೆಂಟ್ ಕೇವಲ ಎರಡು ಆಯ್ಕೆಗಳನ್ನು ಮಾತ್ರವೇ ಮುಂದಿಟ್ಟಿದೆ: ಒಂದೋ ಇಂಟರ್ ನೆಟ್ ಸೇವೆಗಳಿಗೆ ಪರವಾನಗಿ ವಿಧಿಸುವುದನ್ನು ಒಪ್ಪುವುದು ಅಥವಾ ಜಾಲದಲ್ಲಿ ಸಮಾನತೆ ಕುರಿತು ರಾಜಿಯಾಗುವುದು. ಟ್ರಾಯ್ … Read more

ಪುಣೇಕರರು ಹಾಗೂ ಅವರ ಆಂಗ್ಲ ಶ್ರೀರಾಮಾಯಣ ದರ್ಶನಂ: ಶ್ರೀನಿವಾಸ ದೇಸಾಯಿ

ಶಂಕರ ಮೊಕಾಶಿ ಪುಣೇಕರ ಕನ್ನಡ ಸಾಹಿತ್ಯದ ವಿಶಿಷ್ಟ ವ್ಯಕ್ತಿ. ಎರಡು ಅಡ್ಡಹೆಸರು ಪಡೆದವರು, ಮಾತೃಭಾಷೆ ಕನ್ನಡ ಹಾಗೂ ವಿಶ್ವಭಾಷೆ ಆಂಗ್ಲಭಾಷೆ ಎರಡರಲ್ಲೂ ಪ್ರತಿಭಾನ್ವಿತರು. ದ್ವಿಭಾಷಾ ಸಾಹಿತಿ ಎಂದು ಪ್ರಸಿದ್ಧರು. ಹಾಗೇ ದೇವಭಾಷೆ ಸಂಸ್ಕೃತವೂ ಚೆನ್ನಾಗಿ ಬರುತ್ತಿತ್ತು. ಪುಣೇಕರರ ಬದುಕಿನ ಪಥವಂತೂ ಅವರೇ ಹೇಳಿಕೊಂಡಂತೆ, ಕಾರವಾನ್(Carvan)ತರಹದ್ದಾಗಿದೆ. ಬಾಲ್ಯದಿಂದಲೂ ಜೀವಕ್ಕೆ ಅಂಟಿಗೊಂಡ ಓದಿನ ಗೀಳು ಬದುಕಿನ ಅಂತ್ಯದವರೆಗೆ ಸಾಗಿತ್ತು. ಬಿ.ಎಂ.ಶ್ರೀ., ಪ್ರೊ. ಮೆನಜಿಸ್, ಡಾ. ಗೋಕಾಕರಂತಹ ಶ್ರೇಷ್ಠ ಶಿಕ್ಷಕರ ಅಡಿಯಲ್ಲಿ ಕಾಲೇಜು ಶಿಕ್ಷಣ ನಡೆದು, ಎಂ.ಎ. (ಇಂಗ್ಲಿಷ್) ಹಾಗೂ ಯೇಟ್ಸ್ … Read more

‘ಜಾಲದಲ್ಲಿ ಸಮಾನತೆ’ (ಭಾಗ 2): ಜೈಕುಮಾರ್.ಹೆಚ್.ಎಸ್

ಇಲ್ಲಿಯವರೆಗೆ ನಂತರದ ದಿನಗಳಲ್ಲಿ ಇಂಟರ್ ನೆಟ್ ನ ವಿನ್ಯಾಸ ರಚನೆ ಕೂಡ ಬದಲಾವಣೆಗೊಂಡಿದೆ. ಈ ಮುಂಚಿನ ಕೇಂದ್ರೀಕೃತ ಸರ್ವರ್ ಗಳು ಮತ್ತು ನೋಡ್ ಗಳಿಲ್ಲದ, ಪ್ರತಿಯೊಬ್ಬರೂ ಪರಸ್ಪರ ನೇರವಾಗಿ ಕಂಪ್ಯೂಟರಿಗೆ ಸಂಪರ್ಕ ಮಾಡಿಕೊಳ್ಳುವ ವಿನ್ಯಾಸ ರಚನೆಯ ಸ್ಥಳದಲ್ಲಿ ಇಂದು ಬಳಕೆದಾರರು ಇಂಟರ್ನೆಟ್ ದೈತ್ಯ ಕಂಪನಿಗಳ ಕೇಂದ್ರೀಕೃತ ಸರ್ವರ್ ಗಳನ್ನು ಅವಲಂಬಿಸುತ್ತಿದ್ದಾರೆ. ಇದನ್ನೇ ಕ್ಲೌಡ್ ಕಂಪ್ಯೂಟಿಂಗ್ ಎಂದು ಕರೆಯುವುದು. ಇಂಟರ್ ನೆಟ್ ನ ಸ್ವರೂಪದಲ್ಲಾಗಿರುವ ಈ ಮೂಲಭೂತ ಬದಲಾವಣೆಯು ಜಾಗತಿಕ ಇಂಟರ್ನೆಟ್ ಕಂಪನಿಗಳ ಏಳಿಗೆಯ ಜೊತೆ ಜೊತೆಗೇ ನಡೆದಿದೆ.  … Read more

ಅಂತರ್ಜಾಲದಲ್ಲಿ ದೈತ್ಯ ಕಂಪನಿಗಳು ಮತ್ತು ಬಳಕೆದಾರರ ನಡುವೆ ಸಂಘರ್ಷ: ಜೈಕುಮಾರ್.ಹೆಚ್.ಎಸ್

'ಜಾಲದಲ್ಲಿ ಸಮಾನತೆ'ಗಾಗಿ ನಡೆಸುವ ಹೋರಾಟವು ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುವ ಯುದ್ದಗಳಲ್ಲೇ ಪ್ರಮುಖವಾದದ್ದು. – ರಾಬರ್ಟ್ ಮ್ಯಾಚೆಸ್ನಿ, ಅಮೇರಿಕಾದ ಪ್ರಸಿದ್ದ ಮಾಧ್ಯಮ ಚಿಂತಕ ಜಾಲದಲ್ಲಿ ಸಮಾನತೆ ಕುರಿತು ಚರ್ಚಿಸುವ ಮುನ್ನ ಒಂದೆರಡು ಸರಳ ಉದಾಹರಣೆಗಳ ಮೂಲಕ ಅದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸೋಣ.  …ದೀರ್ಘ ಪ್ರಯಾಣ ನಡೆಸುವ ವೇಳೆ ಬಹುತೇಕ ಎಲ್ಲ ಬಸ್ಸುಗಳು ಈಗಾಗಲೇ ನಿಗಧಿಮಾಡಿಕೊಂಡಿರುವ ಹೋಟೆಲ್ ಗಳ ಬಳಿಯೇ ನಿಲ್ಲಿಸುತ್ತವೆ. ಅವುಗಳ ನಡುವೆ ಮೊದಲೇ ಕೊಡುಕೊಳುವಿಕೆಯ ಒಪ್ಪಂದವಾಗಿರುತ್ತದೆ. ಆ ಹೋಟೆಲ್ ಗಳು ಪ್ರಯಾಣಿಕರಿಗೆ ಇಷ್ಟವಿದೆಯೋ ಇಲ್ಲವೋ, ಅವುಗಳ ಗುಣಮಟ್ಟ ಚೆನ್ನಾಗಿದೆಯೋ … Read more

ಸಮಾಜವಾದಿ ಕ್ಯೂಬಾದ ವೈದ್ಯಕೀಯ ಕ್ರಾಂತಿ; ಜಗತ್ತಿಗೇ ಮಾದರಿ: ಜೈಕುಮಾರ್ ಹೆಚ್.ಎಸ್.

ಬೆಂಗಳೂರಿನಷ್ಟು ಜನಸಂಖ್ಯೆ ಹೊಂದಿರುವ ಪುಟ್ಟ ದೇಶ ಕ್ಯೂಬಾ ವೈದ್ಯಕೀಯ ರಂಗದಲ್ಲಿ ಮಾಡುತ್ತಿರುವ ಹೊಸ ಆವಿಷ್ಕಾರಗಳು ಮತ್ತು ಅದರ ವಿಶಿಷ್ಟ ಆರೋಗ್ಯ ವ್ಯವಸ್ಥೆಯ ಕಾರ್ಯಕ್ಷಮತೆ ಪ್ರತಿದಿನ ಸುದ್ದಿಯಲ್ಲಿವೆ. ಅಲ್ಲಿಯ ಜನರ ಜೀವಿತಾವಧಿ ಸುಮಾರು 78 ವರ್ಷ ಮತ್ತು ಅಲ್ಲಿನ ಹಲವು ಆರೋಗ್ಯ ಸೂಚ್ಯಂಕಗಳು ಅಭಿವೃದ್ಧಿ ಹೊಂದಿದ ದೇಶಗಳ ಮಟ್ಟದಲ್ಲಿದೆ. ಭೂಕಂಪ, ಚಂಡಮಾರುತ, ಇತ್ಯಾದಿ ವಿಪತ್ತಿನ ಕಾಲದಲ್ಲಿಯಂತೂ ವಿಶ್ವದಾದ್ಯಂತ ಕ್ಯೂಬಾದ ವೈದ್ಯರು ತಮ್ಮ ಅನುಪಮ ಸೇವೆಯಿಂದ ಮೇಲ್ಪಂಕ್ತಿಯಲ್ಲಿದ್ದಾರೆ. ಮಿಷನ್ ಐ ಹೆಸರಿನ ಕಾರ್ಯಕ್ರಮದಡಿ ಇತರೆ ದೇಶಗಳಲ್ಲಿ ಸುಮಾರು 35 ಲಕ್ಷ … Read more

ಸೆಲ್ಫಿ ಲೋಕದಲ್ಲಿ…: ರಾಘವೇಂದ್ರ ತೆಕ್ಕಾರ್

ಸ್ಮಾರ್ಟ್ ಪೋನ್ ಯುಗದ ಈ ದಿನಗಳಲ್ಲಿ ಬದುಕೆಂಬುದು ಸೆಲ್ಫಿ ಮಯವಾಗಿದೆ. ಇತ್ತೀಚಿನ ದಿನಗಳಲ್ಲಿ ಏನೇನೊ ಕಾರಣಗಳಿಂದ ಈ ಸೆಲ್ಫಿ ಅನ್ನೊದು ಪ್ರಚಲಿತದಲ್ಲಿರೊ ಸುದ್ದಿ. ಆದೇನೆ ಇರಲಿ ಹೊರ ಚಿತ್ರ ಚೆನ್ನಾಗಿರಬೇಕು ಎಂಬ ತುಡಿತದಲ್ಲಿ ಮನಸ್ಸಿಗೆ ಸೆಲ್ಫಿ ಹಿಡಿಯುವ ದಿನಗಳು ಕಳೆದೆ ಹೋಗಿವೆಯೇನು? ಎಂಬ ಆತಂಕ ಇಂದಿನ ಯುವ ಸಮೂಹವನ್ನು ನೋಡಿದಾಗ ಅನಿಸುತ್ತಿದೆ. ಒಬ್ಬ ಗೆಳೆಯ, ಅಕ್ಕ, ತಮ್ಮ, ಸಂಬಂಧಿಕ, ಗುರು ಹೀಗೆ ಎಲ್ಲಾ ಸಂಬಂಧಗಳ ರುಜುವಾತು ಸೆಲ್ಫಿ ಮೂಲಕನೆ ಧೃಢಿಕರಣಗೊಳ್ಳಬೇಕೆನಿಸುವ ಈ ಯುಗದಲ್ಲಿ ಮೇಲಿನ ಆತಂಕವು ಸಹಜ. … Read more

ಸಿಡಿದೆದ್ದ ಗಾಂಧೀಶಕ್ತಿಸ್ಥಳ ಬದನವಾಳು: ಎಸ್.ಜಿ. ಸೀತಾರಾಮ್

  “ಬದನವಾಳು” ಎಂದೊಡನೆ ಹಳೆಯ ಮೈಸೂರಿಗರ ಮನಸ್ಸಿಗೆ ಬರುವುದು, ಗಾಂಧೀ ರಚನಾತ್ಮಕ ಕಾರ್ಯಕ್ರಮದಡಿಯಲ್ಲಿ 88 ವರ್ಷಗಳ ಕೆಳಗೆ, ಅಂದರೆ 1927ರಲ್ಲಿ, ಅಲ್ಲಿ ಸ್ಥಾಪಿಸಲ್ಪಟ್ಟ, “ನೂಲುವ ಪ್ರಾಂತ್ಯ” ಮತ್ತು “ಖಾದಿ ಗ್ರಾಮೋದ್ಯೋಗ ಕ್ಷೇತ್ರ.”  ಮೈಸೂರು-ಚಾಮರಾಜನಗರ ರೈಲು ಮಾರ್ಗದಲ್ಲಿರುವ ಈ ಗಾಂಧೀಕ್ಷೇತ್ರವು, ನಂಜನಗೂಡಿನಿಂದ 9 ಕಿ.ಮೀ. ಮತ್ತು ಮೈಸೂರಿನಿಂದ 34 ಕಿ.ಮೀ. ದೂರದಲ್ಲಿದೆ; “ತಗಡೂರು” ಎಂಬ ಇದರ “ಅವಳಿ” ಗಾಂಧೀಕ್ಷೇತ್ರದಿಂದ 9 ಕಿ.ಮೀ. ದೂರದಲ್ಲಿದೆ. “ಮೈಸೂರು ಗಾಂಧೀ” ಎಂದೇ ಪ್ರಸಿದ್ಧರಾಗಿದ್ದ ತಗಡೂರು ರಾಮಚಂದ್ರ ರಾವ್ ಮತ್ತು ಅಗರಂ ರಂಗಯ್ಯ (ಸಾಧ್ವೀ … Read more

ಮೌಢ್ಯತೆಯ ಕೊಡಲಿಗೆ ಕಾಂತತೆಯ ಕಾವು: ರೋಹಿತ್ ವಿ. ಸಾಗರ್

  ಕಬ್ಬಿಣದಂತಹ ಕೆಲವು ವಸ್ತುಗಳನ್ನು ಪ್ರೀತಿಯಿಂದ ಸೆಳೆದು ಕೊಳ್ಳುವ ವಿಶೇಷ ರೀತ್ಯ ವಸ್ತುಗಳನ್ನು ಆಯಸ್ಕಾಂತಗಳು ಎಂದು ಕರೆಯುತ್ತೇವೆ. ಅವುಗಳಿಗೆ ಈ ಆಯಸ್ಕಾಂತ ಎಂಬ ಹೆಸರು ಬಂದಿದ್ದು ಒಲವು ಎಂಬ ಅರ್ಥ ನೀಡುವ ಐಮಂತ್ ಎಂಬ ಫ್ರೆಂಚ್  ಭಾಷೆಯ ಪದದಿಂದ. ಇಲ್ಲಿ ಒಲವು ಎಂದರೆ ಕಬ್ಬಿಣದಂತಹ ವಸ್ತುಗಳ ಬಗೆಗಿರುವ ಪ್ರೀತಿ ಎಂದು ಬೇರೆ ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೇ. ಪ್ರಾನ್ಸಿನವರು ಮಾತ್ರ ವಲ್ಲ ನೈಸರ್ಗಿಕವಾಗಿ ದೊರೆಯುತ್ತಿದ್ದ ಆಯಸ್ಕಾಂತಗಳನ್ನು ಮೊದಲ ಬಾರಿ ಹಡಗು ದೋಣಿಗಳಲ್ಲಿ ದಿಕ್ಕು ತೋರಿಸುವ  ಸೂಜಿಗಲ್ಲುಗಳಾಗಿ ಬಳಸಿದ್ದ ಚೀನಿಯರು … Read more

ಅಣ್ಣಾವ್ರ ನೆನಪುಗಳು: ಹೊ.ರಾ.ಪರಮೇಶ್ ಹೊಡೇನೂರು

       ಇದೇ ಏಪ್ರಿಲ್ 12ಕ್ಕೆ ಕನ್ನಡಿಗರ ಕಣ್ಮಣಿ, ನಟಸಾರ್ವಭೌಮ, ವರನಟ ಡಾ.ರಾಜಕುಮಾರ್ ಅವರು ವಿಧಿವಶರಾಗಿ ಒಂಭತ್ತು ವರ್ಷಗಳು ಪೂರೈಸಿವೆ.ಭೌತಿಕವಾಗಿ ಇಲ್ಲವಾದರೂ ಜನ ಮಾನಸದಲ್ಲಿ ಅವರು ಸ್ಥಾಪಿಸಿರುವ ಛಾಪು ಚಿರ ಕಾಲ ಉಳಿಯವಂತಾದ್ದು. ಅಣ್ಣಾವ್ರ ಒಂಭತ್ತನೇ ಪುಣ್ಯತಿಥಿ  ಹಾಗೂ ಅವರ ಜನ್ಮ ದಿನ(ಏಪ್ರಿಲ್-24)) ಸಂದರ್ಭದಲ್ಲಿ  ಈ ಲೇಖನ.              ಕನ್ನಡ ಚಿತ್ರರಂಗದ ಅನಭಿಶಕ್ತ ದೊರೆ, ಕಲಾಕೌಸ್ತುಭ, ಕರ್ನಾಟಕ ರತ್ನ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದು … Read more

ಬ್ಲಾಕ್ ಎಂಡ್ ಲೈಪ್ ಕಲರ್ ಫುಲ್ ಕನಸು ಕಾಣುತ್ತದೆ: ಅಜ್ಜೀಮನೆ ಗಣೇಶ

“Holi is the day to express love with colors. It is a time to show affection. All the colors that are on you are of love!” ಬಣ್ಣಗಳಲ್ಲೂ ಒಲವಿನ ಒಲುಮೆಯನ್ನೆ ಕಾಣುತ್ತಾನೆ ಕ್ರೇಜಿ ಗುರು ಓಶೋ… ಹೋಳಿ ಬಗ್ಗೆ ಏನಾದ್ರು ಬರೆಯಿರಿ, ಅಂತ ಪಂಜುವಿನ ನಟರಾಜು ಕೇಳಿದಾಗ ನನಗೆ ಮೊದಲು ನೆನಪಾಗಿದ್ದು ಸಹ ಮತ್ತದೆ ..ಓಶೋ..ಕಾರಣ ಸಿಂಪಲ್.. ಕೈಲಿರೋ ಹಿಡಿ ಬಣ್ಣವನ್ನು ಎದುರಿದ್ದವರ ಮುಖಕ್ಕೆ ಎರಚಿ, ಅವರ … Read more

ರಂಗ್ ರಂಗಿನ ಹೋಳಿಹಬ್ಬದ ಹಿನ್ನೆಲೆ : ಶುಭರಾಣಿ. ಆರ್

ನಮ್ಮ ಭಾರತ ದೇಶದಾದ್ಯಂತ  ಸಡಗರದಿಂದ   ಆಚರಿಸಲ್ಪಡುವ  ರಂಗು ರಂಗಿನ ಹಬ್ಬ  ಹೋಳಿಹಬ್ಬ. ಮಾಘ -ಫಾಲ್ಗುಣ ಮಾಸಗಳ ಶಶಿರ ಋತು  ಮುಗಿದು ಚೈತ್ರ ಮಾಸ ವಸಂತ ಋತು  ಕಾಲಿಡುವಾಗ ಹೊಸಚಿಗುರು ಮೂಡಿ,ಹೂಗಳು  ಅರಳಿನಿಂತು  ನಲಿಯುವಾಗ ನಾವುಗಳು  ಸಂತಸದಿಂದ  ರಂಗಿನಾಟವನ್ನು  ಆಡಲು ತೊಡಗುತ್ತೇವೆ. ಪಾಲ್ಗುಣ ಮಾಸದ ಶುಕ್ಲಪಕ್ಷದ ಪೌರ್ಣಮಿಯ  ದಿನದಂದು ಹೋಳಿಹಬ್ಬವನ್ನು  ಆಚರಿಸಲಾಗುತ್ತದೆ.  ಈ ಹಬ್ಬವನ್ನು  ಒಂದೊಂದು ರಾಜ್ಯದಲ್ಲೂ  ಅದರದೆಯಾದ  ನಾಮಾವಳಿಗಳಿಂದ ಆಚರಿಸುವರು. ನಮ್ಮಲ್ಲಿ  "ಹೋಳಿಹಬ್ಬ, ಕಾಮನ ಹಬ್ಬ  ಅಥವಾ ಕಾಮದಹನ ,ರಂಗಿನ ಹಬ್ಬ(ಬಣ್ಣಗಳ ಹಬ್ಬ ) "ಎನ್ನುತ್ತೇವೆ, … Read more

ಶಿರಸಿಯಲ್ಲಿ ಹೋಳಿಯ ವಿಶೇಷ ಬೇಡರವೇಷದ ಆವೇಶ: ಸಚಿನ್ ಎಂ. ಆರ್.

ಎರಡು ವರ್ಷಗಳಿಗೊಮ್ಮೆ ಜರುಗುವ ಶ್ರೀ ಮಾರಿಕಾಂಬಾ ಜಾತ್ರೆ ಈ ವರ್ಷ ಇಲ್ಲ. ಆದರೆ ಈ ಸಮಯದಲ್ಲಿ ಶಿರಸಿಯ ಜನತೆಗೆ ಆ ಕೊರತೆಯನ್ನು ನೀಗಿಸಲು, ಗುಂಪಾಗಿ ಸೇರುವ ಅವಕಾಶವನ್ನು ಕಲ್ಪಿಸಲು ಇನ್ನೇನು ಈ ವಾರಾಂತ್ಯದಿಂದಲೇ ಶುರುವಾಗಲಿದೆ ಬೇಡರ ವೇಷದ ವಿಶಿಷ್ಟ ನರ್ತನ. ಮಾರ್ಚ್ 1ರಿಂದ ಮಾರ್ಚ್ 4ರವರೆಗೆ ರಾತ್ರಿಯಲ್ಲಿ ಮಾತ್ರ ನಡೆಯುವ ಬೇರಡವೇಷವು ಒಂದು ಶಿಷ್ಟ ಜಾನಪದ ಕಲೆ. ಹೋಳಿ ಹಬ್ಬದ ಸಡಗರವನ್ನು ಹೆಚ್ಚಿಸುವ ಇದು ಮುಖ್ಯವಾಗಿ ಶಿರಸಿಯಲ್ಲಿ ಮಾತ್ರ ಕಂಡುಬರುವಂಥಾದ್ದು. ಇದನ್ನು ನೋಡಲೆಂದೇ ವಿವಿಧ ಕಡೆಯಿಂದ ಜನರು … Read more