ಓಜೋನ್-ವಿನಾಶ ಅನಿಲಗಳ ನಿಯಂತ್ರಣ: ಜೈಕುಮಾರ್
ದೈತ್ಯ ಕಂಪನಿಗಳ ಪರ ನಿಂತಿರುವ ಅಮೇರಿಕಾ ಅಮೇರಿಕಾ ದೇಶದ ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದಿಸುವ ಅನಿಲಗಳನ್ನು ಮಾತ್ರವೇ ಶೀತಲೀಕರಣ (ರೆಫ್ರಿಜರೇಶನ್) ಉಪಕರಣಗಳಲ್ಲಿ ಉಪಯೋಗಿಸುವಂತೆ ಅಮೇರಿಕಾವು ಭಾರತದ ಮೇಲೆ ಒತ್ತಡ ಹಾಕುತ್ತಿದೆ. ಶೀತಲೀಕರಣಗಳಲ್ಲಿ ಬಳಸುವ ಅನಿಲಗಳು ಇತರೆ ಹಸಿರು ಮನೆ ಅನಿಲಗಳಂತೆ ಭೂಮಿಯ ತಾಪಮಾನಕ್ಕೆ ಕಾರಣವಾಗುತ್ತವೆ ಎಂಬ ಕಾರಣವೊಡ್ಡಿ ಅಮೇರಿಕಾ ತನ್ನ ಕಂಪನಿಗಳಿಗೆ ಭಾರತದಲ್ಲಿ ಮಾರುಕಟ್ಟೆ ಹುಡುಕುತ್ತಿದೆ. ಶೀತಲೀಕರಣ ಅನಿಲಗಳನ್ನು ಎರಡು ಅಂತರಾಷ್ಟ್ರೀಯ ಒಪ್ಪಂದಗಳ ವ್ಯಾಪ್ತಿಗೆ ತರಲಾಗಿದೆ: ಮಾಂಟ್ರಿಯಲ್ ಒಡಂಬಡಿಕೆ ಮತ್ತು ಹವಾಮಾನದ ಬದಲಾವಣೆ ಕುರಿತ ವಿಶ್ವಸಂಸ್ಥೆ ಚೌಕಟ್ಟುಗಳ ಒಪ್ಪಂದ. … Read more