ಸುಶೀಲೆ: ವರದೇಂದ್ರ ಕೆ.
ಜಮೀನ್ದಾರರ ಒಬ್ಬನೇ ಮಗ, ಕಣ್ಣಲ್ಲಿ ಸನ್ನೆ ಮಾಡಿದರೆ ಸಾಕು ತಟಕ್ಕನೆ ಕೆಲಸವಾಗಿಬಿಡುತ್ತದೆ. ಮಾತು ಆಡಿದರಂತೂ ಊರಿನ ಯಾವ ಧನಿಕನೂ ಎದುರಾಡುವಂತಿಲ್ಲ. ಅಷ್ಟೇ ಸಹಜ ನಡೆಯುಳ್ಳ ಪ್ರಾಮಾಣಿಕ ಜೀವ. ಗಾಂಭೀರ್ಯತೆಯೊಂದಿಗೆ ಕನಿಕರವೂ ತುಂಬಿಕೊಂಡ ಮುಖ. ಚಿರ ಯುವಕ, ಓದಿನಲ್ಲೂ ಚತುರನಾಗಿ ವೈದ್ಯಲೋಕಕ್ಕೆ ಕಾಲಿಟ್ಟ ಉತ್ತಮ ಕೈಗುಣವಿದೆ ಎಂಬ ಪ್ರಶಂಸೆಗೆ ಪಾತ್ರನಾದ ಸ್ಫುರದ್ರೂಪಿ ತರುಣಸುರೇಶ್ ಗೌಡನಿಗೆ ತಮ್ಮ ಮಗಳನ್ನೇ ಧಾರೆಯೆರೆಯಲು ದುಂಬಾಲುಬಿದ್ದ ಅದೆಷ್ಟೋ ಸಂಬಂಧಿಕರು ಹಿರಿಗೌಡರನ್ನು ಕೇಳಿ ಕೇಳಿ ಬಂದ ದಾರಿಗೆ ಸುಂಕವಿಲ್ಲವೆಂದು ಸೋತಮುಖದೊಂದಿಗೆ ಮರಳಿದ್ದಾರೆ. ಹಿರಿ ಧರ್ಮಗೌಡರು ತನ್ನ … Read more