ಮುಸುಕಿನಿಂದ ಬೆಳಕಿಗೆ: ಮಮತಾ ಕೀಲಾರ್
ತುಂತುರು ಮಳೆ, ಛಳಿ ಗಾಳಿಯಲ್ಲಿ ಒಂದು ಸಣ್ಣ ಬೆಟ್ಟದ ತಪ್ಪಲಲ್ಲಿರುವ ಕೋಟೆಯಂತಿರುವ ಆಶ್ರಮಕ್ಕೆ ಬಂದು ತಲುಪಿದಳು. ಬಹಳಷ್ಟು ಕೊತುಹಲ,ಅಂಜಿಕೆ ಹಾಗೂ ಏನೋ ಅಸ್ಪಷ್ಟ ತವಕ ಅವಳನ್ನು ಕಾಡುತಿತ್ತು. ಬಹಳ ದಿನಗಳ ಆಸೆ, ಹಲವು ಘರ್ಷಣೆಗಳ ಅಂತ್ಯ ಈ ಪ್ರಯಾಣವಾಗಿತ್ತು.ಅಲ್ಲಿಯ ಹೆಬ್ಬಾಗಿಲಿನತ್ತ ಬಂದಾಗ, ಒಂದು ಕ್ಷಣ ಹಿಂದಿನ ನೆನಪಾಯಿತು. ಧ್ಯಾನ, ಪ್ರಾಣಾಯಾಮ, ಗುರುವಿನ ಭಾವ ಚಿತ್ರ,ಪವಾಡಗಳ ಬಗ್ಗೆ ಪ್ರವಚನ, ಭಜನೆಗಳಲ್ಲಿ ತಲ್ಲೀನವಾದ ಕ್ಷಣಗಳೆಲ್ಲಾ ಕಣ್ಣಮುಂದೆ ಒಮ್ಮೆ ಹಾದು ಹೋದವು. ಅಸಹಾಯಕತೆಗೆ ಅಂತ್ಯ ಹೇಳುವ ಕ್ಷಣ ಬಂತೆಂದು ಹರ್ಷಿಸಿದಳು. … Read more