ಭೂಮಿಕಾ: ನಂದಾ ಹೆಗಡೆ
"ಭಟ್ರನ್ನ ಒಳಗೆ ಕರಿಲನೇ" ಎಂದು ನನ್ನವಳಿಗೆ ಕೇಳಿ ಒಪ್ಪಿಗೆ ಪಡೆದು ನಾನು ಇಬ್ಬರು ಭಟ್ಟರೊಂದಿಗೆ ದೇವರ ಮನೆ ಪ್ರವೇಶಿಸಿದೆ. ಇಂದು ನನ್ನಮ್ಮನ ಎಂಟನೇ ಶ್ರಾಧ್ದ. ಪ್ರತೀ ಶ್ರಾಧ್ದದ ದಿನವೂ ನಾನು ಒಂದು ರೀತಿಯ ಭಾವೋದ್ವೇಗಕ್ಕೆ ಒಳಗಾಗುತ್ತೇನೆ. ಅಮ್ಮನ ನೆನಪೇ ಹಾಗೆ. ನೋವು ನಲಿವಿನ ತಂತಿ ಎದೆಯಲ್ಲಿ ಮೀಟಿದ ಹಾಗೆ. ನನ್ನಮ್ಮ ಹುಟ್ಟು ಹೋರಾಟಗಾರ್ತಿ. ಮದುವೆಗೆ ಮೊದಲೇ ತನ್ನ ಅಪ್ಪ, ಅಣ್ಣನ ಜೊತೆಗೆ ತೋಟ ಗದ್ದೆಗಳ ಕೆಲಸ ಮಾಡುವವಳಂತೆ. ನನ್ನಜ್ಜಿ ಯಾವಾಗಲೂ "ನಿನ್ನಮ್ಮ ಗಂಡಾಗಿ ಹುಟ್ಟಬೇಕಿತ್ತು"ಎಂದು ಹೇಳುತ್ತಿದ್ದರು. ಮದುವೆ … Read more