ಕಪ್ಪೆ ಉಚ್ಚೆಯೂ ಬೆಳ್ಳಿ ಕಪ್ಪೆಯೂ. . . : ರಮೇಶ್ ನೆಲ್ಲಿಸರ. ತೀರ್ಥಹಳ್ಳಿ
ಮೀನುಶಿಕಾರಿಯಾಗದೆ ಹದಿನೈದು ದಿನಗಳೇ ಆಗಿ ಹೋಗಿದ್ದವು, ಸಿಕ್ಕ ಒಂದೆರಡು ಸೋಸಲು ಸಾಂಬಾರಿಗೆ ಸರಿಯಾಗಿ, ಅಲ್ಲಿ ಇಲ್ಲಿ ಕೂಲಿಮಾಡಿಕೊಂಡು ರಾಮಯ್ಯ ಹೇಗೋ ಬಿಕನಾಸಿ ಜೀವನದ ಗಾಲಿಯಿರದ ಚಕ್ಕಡಿಯನ್ನು ನೂಕುತ್ತಿದ್ದ ಅಥವಾ ಅದೇ ಇವನನ್ನು ದಿಕ್ಕುದಸೆಯಿಲ್ಲದೆ ಎಳೆಯುತ್ತಿತ್ತು. ನಲವತ್ತು ವರ್ಷದ ಹೆಂಡತಿಗೆ ಮತ್ತು ಐವತ್ತು ವರ್ಷದ ಆತನಿಗೆ ಜನಿಸಿದ ನಾಗನೆಂಬ ಮಗ ಹೇಗೋ ಹುಟ್ಟಿದರಾಯಿತೆಂದು ಹುಟ್ಟಿದಂತಾಗಿ ಐದು ವರ್ಷ ಸರಿದರೂ ನಾಲ್ಕೋ ಐದೋ ಕೆಜಿ ಮಾಂಸವನ್ನು ಎಲುಬು ಚಕ್ಕಳದ ದೇಹದಲ್ಲಿ ಅಲ್ಲಲ್ಲಿ ಅಡಗಿಸಿಟ್ಟುಕೊಂಡು ಒಂದು ಜೀವವಿರಬಹುದೇನೋ ಎಂದು ಅನಿಮಾನಿಸುವಂತೆ ಬದುಕಿದ್ದ. … Read more