ಸೋಲು: ಗಿರಿಜಾ ಜ್ಞಾನಸುಂದರ್
ಸಪ್ಪೆ ಮೊರೆ ಹಾಕಿಕೊಂಡು ಬರುತ್ತಿದ್ದ ಪ್ರೀತಿಯನ್ನು ಪಕ್ಕದ ಮನೆ ಆಂಟಿ “ಏನ್ ಪುಟ್ಟಿ! ರಿಸಲ್ಟ್ ಏನಾಯ್ತು? ಯಾವಾಗ್ಲೂ ಫಸ್ಟ್ ಬರ್ತಿದ್ದೆ ಅಲ್ವಾ. ಈಸಲ ಏನು? ಸ್ವೀಟು ಕೊಡ್ಲಿಲ್ಲ?” ಸುಮ್ಮನೆ ತಲೆ ತಗ್ಗಿಸಿ ಅಲ್ಲಿಂದ ಹೊರಟು ಬಂದಿದ್ದಳು. ಶಾಲೆಯಲ್ಲಿ ಎಲ್ಲದರಲ್ಲೂ ಮುಂದಿದ್ದ ಹುಡುಗಿ. ಇಡೀ ಶಾಲೆಗೆ ೧೦ನೇ ತರಗತಿಯಲ್ಲಿ ಎರಡನೇ ಸ್ಥಾನದಲ್ಲಿ ಪಾಸಾಗಿದ್ದವಳು. ಅವರಪ್ಪ ಅದಕ್ಕಾಗಿ ತಮ್ಮ ಸುತ್ತಮುತ್ತಲಿನ ಮನೆಗಳಿಗೆಲ್ಲ ಒಂದೊಂದು ಸ್ವೀಟ್ ಡಬ್ಬವನ್ನೇ ಹಂಚಿದ್ದರು. ತಮ್ಮ ಶಾಲೆಯಿಂದ ಬೇರೆ ಶಾಲಿಗಳಿಗೂ ಬಹಳಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ತಂದುಕೊಟ್ಟವಳು. … Read more