ಮರೆಯಾಗದಿರಲಿ ನೋವು ಮರೆಸುವ ನಗು!: ಜಯಶ್ರೀ.ಜೆ. ಅಬ್ಬಿಗೇರಿ

ಬಹುತೇಕ ನಮ್ಮೆಲ್ಲರ ಇತ್ತೀಚಿನ ದೈನಂದಿನ ಜೀವನ ಒತ್ತಡದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದೆ. ಒತ್ತಡ ಹಾಗೂ ಬದ್ಧತೆಗಳ ಆರ್ಭಟಕ್ಕೆ ಮಣದಿರುವ ನಾವು ಅಕ್ಷರಶಃ ನಗುವುದನ್ನೇ ಮರೆತಿದ್ದೇವೆ. ಅಲ್ಲೊಮ್ಮೆ ಇಲ್ಲೊಮ್ಮೆ ಆಗೊಮ್ಮೆ ಈಗೊಮ್ಮೆ ನಕ್ಕರೂ ಅದು ಗೊಂಬೆ ನಗುವಿನಂತಿರುತ್ತದೆ. ಹೃದಯ ತುಂಬಿದ ನಗು ಅದೆಲ್ಲಿ ಮಾಯವಾಗಿದೆಯೋ ಹುಡುಕ ಬೇಕಿದೆ. ಕಿವಿಯಿಂದ ಕಿವಿಯವರೆಗಿನ ನಗು ಮರೆತು ಅದೆಷ್ಟೋ ವರ್ಷಗಳು ಕಳೆದವು ಅನಿಸುತ್ತಿದೆ ಅಲ್ಲವೇ? ನಗು ಮಾನವನ ಸಹಜ ಪ್ರಕ್ರಿಯೆ ಅದನ್ನೇ ಮರೆತು ಬಾಳುತ್ತಿರುವುದು ನಿಜಕ್ಕೂ ಖೇದಕರ ಸಂಗತಿಯೇ ಸರಿ. ಒಂದು ಅಧ್ಯಯನದ … Read more

ಇತಿ ತಮ್ಮ ವಿಶ್ವಾಸಿ: ಪ್ರಣವ್ ಜೋಗಿ

ಬಹುಶಃ ಶಾಲೆಯ ದಿನಗಳು ಇರಬೇಕು. ಯಾವುದೋ ಒಂದು ಪರೀಕ್ಷೆಯಲ್ಲಿ ಬರೆದ ಪತ್ರ. ಅದೇ ಕೊನೆಯ ಪತ್ರವಾಗಲಿದೆ ಎಂಬ ಸುಳಿವು ಆಗಲೇ ದೊರೆತ್ತಿದ್ದಿದ್ದರೆ, ಇನ್ನೂ ಒಂದಷ್ಟು ಸಾಲುಗಳನ್ನು ಬರೆದು ಬಿಡುತ್ತಿದ್ದೆ. ಆ ನಂತರ ಎಂದೂ ಪತ್ರ ಬರೆಯಲೇ ಇಲ್ಲ. ಕ್ಷಣ ಮಾತ್ರದಲ್ಲಿ ಸಂದೇಶ ತಲುಪುವ ತಂತ್ರಜ್ಞಾನ ಇರುವಾಗ, ಪತ್ರವೇಕೆ ಬರೆಯಬೇಕು ಎಂಬ ಆಲೋಚನೆ ಇದರ ರೂವಾರಿ. ದುರಂತರವೆಂದರೆ, ಮುಂಚೆ ಬರೆದ ಪತ್ರಗಳೂ ಕೂಡ ಪರೀಕ್ಷೆಗಳಲ್ಲೇ. ನಿಜ ಜೀವನದಲ್ಲಿ, ದೂರದ ಸಂಬಂಧಿಕರೊಬ್ಬರಿಗೆ ಒಂದೆರಡು ಬಾರಿ ಪತ್ರ ಬರೆದಿರಬಹುದಷ್ಟೇ. ಇಂದಿನ ಕಾಲದಲ್ಲಿ … Read more

ಸಂ-ಜನ: ಹೆಚ್. ಷೌಕತ್ ಆಲಿ, ಮದ್ದೂರು

ಒಂದು ತಾಲ್ಲೋಕಿನಿಂದ ಮತ್ತೊಂದು ತಾಲ್ಲೋಕಿನ ಒಂದು ಕಾಲೇಜಿನಲ್ಲಿ ನಾನು ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ದಿನಾ ಕೆ ಎಸ್ ಆರ್ ಟಿ ಸಿ ಬಸ್ನಲ್ಲಿ ಹೋಗಿ ಬರುವುದು ಮಾಮೂಲಿಯಾಗಿತ್ತು. ಸಮಯಕ್ಕೆ ಅರ್ಧಘಂಟೆ ಮುಂಚೆ ನಾನು ಬಸ್ಸ್ಟ್ಯಾಂಡ್ ನಿಂದ ಇಳಿದು ಕಾಲೇಜಿಗೆ ನಡೆದುಕೊಂಡೆ ಹೋಗುತ್ತಿದ್ದೆ. ನನ್ನ ಕೈಯಲ್ಲಿ ಟೀಫಿನ್ ಬಾಕ್ಸ್, ವಾಟರ್ ಬಾಟಲ್ ಅವುಗಳನ್ನು ಹೊತ್ತಿರೋ ಒಂದು ಬ್ಯಾಗ್ ಆ ಬ್ಯಾಗ್ ನನ್ನ ಕೈಯಲ್ಲಿ. ಆ ಬ್ಯಾಗ್ ಹಿಡಿದುಕೊಂಡು ನಾನು ಕಾಲೇಜಿಗೆ ಬರುವಾಗ, ಹೋಗುವಾಗ ನನ್ನ ವಾಕಿಂಗ್ ಸ್ಟೈಲ್ … Read more

ಹೋರಾಟದ ಹೆಜ್ಜೆ ಮೂಡಿಸಿ ಮರೆಯಾದ ಮಿತ್ರ ಈಶ್ವರ ಮಗದುಮ್: ಅಶ್ಫಾಕ್ ಪೀರಜಾದೆ

ಈಗ ಬರೆಯುತ್ತಿರುವ ಒಂದೊಂದು ಅಕ್ಷರಕೂಡ ನೇರವಾಗಿ ನನ್ನ ಹೃದಯದಿಂದ ತೊಟ್ಟಿಕುತ್ತಿರುವಂತೆ ಭಾಸವಾಗುತ್ತಲಿದೆ. ಅಂತಿಮವಾಗಿ ಅವನ ಮುಖದರ್ಶನ ಮಾಡಿಕೊಂಡು ಬಂದಾಗಿನಿಂದಲೂ ಮನಸ್ಸಿಗೆ ಸೊಗಸೇ ಇಲ್ಲದಂತಾಗಿದೆ. ಏನೋ ಕಳೆದುಕೊಂಡಿದ್ದು ಅಲ್ಲ ಎಲ್ಲವನ್ನು ಕಳೆದುಕೊಂಡಂತೆ ಹೃದಯ ತಬ್ಬಲಿಯಾಗಿ ಆಕ್ರಂದಿಸುತ್ತಲಿದೆ. ಜೀವ ಸಮಾಧನವಿಲ್ಲದೆ ಒದ್ದಾಡುತ್ತಿದೆ. ನನ್ನೊಳಗಿನ ತಬ್ಬಲಿತನದ ಭಾವನೆ ಶಬ್ಧಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಅನಿಸುತ್ತಲಿದೆ. ಅಣ್ಣ ಸಯಿದ ಮತ್ತು ಸ್ನೇಹಿತ ವಿಠ್ಠಲ ಕರೆ ಮಾಡಿ ನಮ್ಮ ಈಶ್ವರ ಇನಿಲ್ಲವೆಂದಾಗ ಒಂದು ಕ್ಷಣ ನನ್ನ ಕಾಲ ಕೆಳಗಿನ ಭೂಮಿಯೇ ಬಾಯ್ದೆರೆದು ನುಂಗಿದಂತೆ ಭಾಸವಾಯಿತು ನನಗೆ. … Read more

ನಡುವೆ ಬಂದವರು: ಸಿಂಧು ಭಾರ್ಗವ್

ರೋಶನಿ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ. ವಯಸ್ಸು 35 ವರ್ಷವಿರಬಹುದು. ಮದುವೆಯಾಗಿ ಒಂದು ಮಗು ಇರುವ ಸಂಸಾರಸ್ಥೆ. ಹೀಗಿರುವಾಗ ರೋಹಿತ್ ಎಂಬ ಹೊಸ ಸಹೋದ್ಯೋಗಿಯ ಪರಿಚಯವಾಗಿ ಸ್ನೇಹ ಬೆಳೆದು ಪ್ರೀತಿಯ ನಾಮಕರಣ ಮಾಡಿದ್ದಳು. ಅವನೋ ಇನ್ನೂ ಯುವಕ. 23 ವರ್ಷ ವಯಸ್ಸಿರಬಹುದು. ನೋಡಲು ಸುರದ್ರೂಪಿ. ಉತ್ಸಾಹಿ ಕೆಲಸಗಾರ. ಅನುದಿನವೂ ಅವಳ ಜೊತೆ ಹರಟುವುದು, ಅವಳ ಸೌಂದರ್ಯವನ್ನು ಹೊಗಳುವುದು, ವೃತ್ತಿ ನಿಷ್ಠೆಯನ್ನು ಹೊಗಳುವುದು ಅವನ ದಿನಚರಿಯಾಗಿತ್ತು. ಹೆಣ್ಮಕ್ಕಳಿಗೆ ಸ್ವಲ್ಪ ಹೊಗಳಿದರೂ ಕರಗಿ ಹೋಗುವುದು ಅವರ ಮನೋ ದೌರ್ಬಲ್ಯ … Read more

ಇಹದ ದುರ್ಗಂಧ- ಪರದ ಪರಿಮಳ: ಡಾ. ಹೆಚ್ ಎನ್ ಮಂಜುರಾಜ್

(ಹರಿದಾಸ ಪ್ರಸಿದ್ಧ ಶ್ರೀಪಾದರಾಜರ ಎರಡು ಕೀರ್ತನ ರಚನೆಗಳ ವಿಶ್ಲೇಷಣೆ) ರಚನೆ : ಶ್ರೀ ಶ್ರೀಪಾದರಾಜರು ಮರುದಂಶರ ಮತ ಪಿಡಿಯದೆ ಇಹ -ಪರದಲ್ಲಿ ಸುಖವಿಲ್ಲವಂತೆ || ಪ || ಅರಿತು ವಿವೇಕದಿ ಮರೆಯದೆ ನಮ್ಮಗುರುರಾಯರ ನಂಬಿ ಬದುಕಿರೋ || ಅ.ಪ.|| ಕ್ಷೀರವ ಕರೆದಿಟ್ಟ ಮಾತ್ರದಿ ಸಂಸ್ಕಾರವಿಲ್ಲದೆ ಘೃತವಾಗದಂತೆ ಸೂರಿಜನರ ಸಂಗವಿಲ್ಲದೆ ಸಾರವೈರಾಗ್ಯ ಭಾಗ್ಯ ಪುಟ್ಟದಂತೆ || ೧ || ಉಪದೇಶವಿಲ್ಲದ ಮಂತ್ರ ಏಸುಜಪಿಸಲು ಫಲಗಳ ಕೊಡದಂತೆ ಉಪವಾಸ ವ್ರತಗಳಿಲ್ಲದೆ ಜೀವತಪಸಿಯೆನಿಸಿಕೊಳ್ಳಲರಿಯನಂತೆ || ೨ || ಸಾರಮಧ್ವಶಾಸ್ತ್ರವೋದದೆ ಗುರುತಾರತಮ್ಯ ಜ್ಞಾನ … Read more

ಪರಿಸರದ ಮೇಲೆ ಮಾನವ ಹಲ್ಲೆ ನಿಲ್ಲುವುದು ಯಾವಾಗ?: ನರಸಿಂಹ ಮೂರ್ತಿ ಎಂ. ಎಲ್.

ನಾವು ಪ್ರತಿದಿನ ಪತ್ರಿಕೆಗಳಲ್ಲಿ ಓದುವಾಗ ದೇಶ ರಾಜಧಾನಿಯು ವಾಯುಮಾಲಿನ್ಯದ ಹೊಡೆತಕ್ಕೆ ತತ್ತರಿಸುತ್ತಿರುವ ಬಗೆಯನ್ನು ಗಮನಿಸುತ್ತಿರಬಹುದು. ಶುದ್ಧಗಾಳಿಯನ್ನು ಖರೀದಿಸಿ ಉಸಿರಾಡುವ ಪರಿಸ್ಥಿತಿಗೆ ಈ ದೇಶವು ಬಂದು ತಲುಪಿದೆ ಎಂದರೆ ಮುಂದಿನ ದಿನಗಳಲ್ಲಿ ಜೀವ ಜಗತ್ತಿನ ಉಳಿವಿನ ಬಗ್ಗೆಯೇ ಸಂಶಯ ಮೂಡುತ್ತದೆ. ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಡಪ್ಪಲ್ಲಿ, ಹೊನ್ನಂಪಲ್ಲಿ, ಮದಕವಾರಪಲ್ಲಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಆಶ್ರಯ ತಾಣವಾಗಿದ್ದ ಕೊರ್ಲಗುಡ್ಡಂ ಬೆಟ್ಟವನ್ನು ಅಕ್ರಮ ಕಲ್ಲು ಗಣಿಗಾರುಕೆಯವರು ನಾಶ ಮಾಡುತ್ತಿದ್ದಾರೆ. ಇದರ ಪರಿಣಾಮ ಬೃಹತ್ ಕಲ್ಲುಬಂಡೆಗಳು ರೈತರ ಜಮೀನುಗಳಿಗೆ ಉರುಳುತ್ತಿವೆ. … Read more

ಕಲೆಗೆ ರಾಜಕೀಯ ರಂಗು, ರಾಜಕೀಯಕ್ಕೆ ಕಲಾವಿದರ ಪ್ರವೇಶ ಸರಿಯೇ. . .?: ಕೆ.ಪಿ.ಎಮ್. ಗಣೇಶಯ್ಯ

ಚುನಾವಣಾ ಸಂದರ್ಭ ಕಲಾವಿದರ ಕಲೆಯ ಮಾನ ಮಾರಣ ಹೋಮ. ಇದು ಇತ್ತೀಚೆಗೆ ಚಿಂತನೆಗೀಡು ಮಾಡಿದ ವಿಷಯ. ಕಲಾವಿದ ಎಂದು ಗುರುತಿಸಿಕೊಂಡ ಮೇಲೆ ರಾಜಕೀಯಕ್ಕೆ ಬರಬಾರದು. ಇದು ನನ್ನ ಅಪೇಕ್ಷೆ. ಕಾರಣ ಇಷ್ಟೆ, ಹಲವಾರು ರಾಜಕೀಯ ಪಕ್ಷಗಳು ಭಿನ್ನ ವಿಭಿನ್ನವಾದ ಆಶೋತ್ತರಗಳನ್ನು ಇಟ್ಟುಕೊಂಡು ಗುಂಪುಗಾರಿಕೆಯ ಚಟುವಟಿಕೆ, ಹೀಯ್ಯಾಳಿಕೆ, ಕಾಲೆಳೆಯುವುದು, ತಮ್ಮತನವನ್ನು ತಾವು ಹೊಗಳಿಕೊಳ್ಳುವುದು, ಇತರರನ್ನು ತೆಗಳುವುದು. ಒಳಗಿಂದೊಳಗೆ ಆಮಿಷಕ್ಕೊಳಗಾಗುವುದು ಹೀಗೆ ರಾಜಕೀಯದಲ್ಲಿ ಎಲ್ಲವೂ ಸರಿ. ರಾಜಕೀಯ ಅಂದ್ರೆ ಹೀಗೇನೆ, ಒಪ್ಪೋಣ ಆದರೆ ರಾಜಕೀಯಕ್ಕೆ ಕಲಾವಿದರ ಪ್ರವೇಶ ಎಷ್ಟರ ಮಟ್ಟಿಗೆ … Read more

ಕನ್ನಡ ಉಳಿಯಲಿ, ಕನ್ನಡ ಸಾಹಿತ್ಯ ಬೆಳಗಲಿ, ಬೆಳೆಯಲಿ: ಚಂದ್ರಿಕಾ ಆರ್ ಬಾಯಿರಿ

“ಹಾಯ್! ಸುಶೀಲಾ ‘ಹವ್ ಆರ್ ಯೂ’?. ಎಲ್ಲಿಗೆ ಹೋಗ್ತಾ ಇದೀಯಾ?” “ಹಾಯ್! ಸಹನಾ ಟ್ಯೂಷನ್ ಕ್ಲಾಸ್ ಗೆ ಹೋಗ್ತಾ ಇದೀನಿ.” “ಟ್ಯೂಷನ್ ಕ್ಲಾಸ್ ಗೆ ಹೋಗ್ತಾ ಇದೀಯಾ. ಯಾಕೆ? ಯಾರಿಗೆ ಟ್ಯೂಷನ್?” “ಅಯ್ಯೋ! ನನ್ನ ಮಗನಿಗೆ ಇನ್ನೂ ಕನ್ನಡ ಓದೋದಕ್ಕೆ ಬರೆಯೋದಕ್ಕೆ  ಸರಿಯಾಗಿ ಬರಲ್ಲ ಕಣೇ. ಅದಕ್ಕೆ ಟ್ಯೂಷನ್ ಗೆ ಹಾಕೋಣ ಅಂತ.” “ಏನು? ಟ್ಯೂಷನ್ ಗೆ ಹಾಕ್ತೀಯಾ. ನಿನ್ನ ಮದರ್ ಟಂಗ್ ಯಾವುದು ಸುಶೀಲಾ?” “ಕನ್ನಡ” “ಮತ್ತೆ ನೀನೇ ಹೇಳಿ ಕೊಡಬಹುದಿತ್ತಲ್ವ.” “ಇಲ್ಲ ಕಣೇ. ನಾನು … Read more

ಒಳಿತು, ಕೆಡುಕು ಹಾಗು ಮನಸ್ಥಿತಿ: ಸಹನಾ ಪ್ರಸಾದ್

ಎಲ್ಲರಂತೆ ನನ್ನ ಬೆಳಗ್ಗಿನ ಕಾಫಿಗೆ ಜತೆಗೂಡುವುದು ಅಂದಿನ ಪತ್ರಿಕೆ. ಎದ್ದ ತಕ್ಷಣ ಅದರ ಮೇಲೆ ಕಣ್ಣಾಡಿಸಿಯೇ ಬ್ರಶ್ ಮಾಡಲು ಹೋಗುವುದು. ಅದರಲ್ಲಿಯ ಸುದ್ದಿಗಳಿಗೆ ಮನ ಬಹಳ ಬೇಗ ಅಂಟಿಕೊಂಡು ಅದರ ಬಗ್ಗೆಯೇ ಯೊಚಿಸಿ, ಚಿಂತನೆಗೆ ಶುರು ಆಗುತ್ತದೆ. ಅಚ್ಚಾಗಿರುವ ವಿವರಗಳ ಮೇಲೆ ಅಂದಿನ ಮನಸ್ಥಿತಿ ರೂಪಗೊಳ್ಳುವುದು. ಅದೇ ರೀತಿ ಒಳ್ಳೆ ಹಾಡು ಕೇಳಿದರೆ, ಏನಾದರು ಖುಶಿಯಾಗಿರುವುದನ್ನು ನೋಡಿದರೆ/ ಓದಿದರೆ ಮನಸ್ಸು ಪ್ರಫ಼ುಲ್ಲವಾಗುವುದು. ಆದುದರಿಂದ ನನ್ನ ಬೆಳಗ್ಗಿನ ” ಆಹಾರ” ನನಗೆ ಬಹಳ ಮುಖ್ಯ. ಅದೊಂದೇ ಅಲ್ಲ, ದಿನವಿಡೀ … Read more

ವಿಭಿನ್ನ ಕಲೆಯ ಪ್ರವೃತ್ತಿಯನ್ನು ವೃತ್ತಿ ಯನ್ನಾಗಿಸಿ ಯಶಸ್ಸು ಕಂಡ ಭರತ್ ಕುಲಾಲ್: ಹರ್ಷಿತಾ ಹರೀಶ ಕುಲಾಲ್

ಹುಟ್ಟಿದ ಪ್ರತಿಯೊಂದು ವ್ಯಕ್ತಿ ಯಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದಕ್ಕಾಗಿ ಸೂಕ್ತ ವೇದಿಕೆ ಸಿಕ್ಕಾಗ ಪ್ರದರ್ಶನ ಮಾಡುತ್ತಾರೆ. ಇನ್ನೂ ಕೆಲವರು ಎಲ್ಲ ಕಲೆ ಗೊತ್ತಿದ್ದು ವೇದಿಕೆ ಸಿಗದೆ ವಂಚಿತರಾಗಿರುತ್ತಾರೆ. ಹಾಗೆಯೇ ಹಲವು ಕನಸುಗಳನ್ನು ಹೊತ್ತ ಯುವಕ ತಾನು ವೇದಿಕೆಯಲ್ಲಿ ಪ್ರದರ್ಶನ ನೀಡಿ ಅದರ ಅನುಭವದ ರುಚಿಯಿಂದ ಮುಂದುವರಿದ ಪ್ರತಿಭೆ ಬಾತು ಕುಲಾಲ್.. ಇವರು ಶ್ರೀ ನಾರಾಯಣ ಹಾಗೂ ಶ್ರೀಮತಿ ಸುಂದರಿ ಯವರ ತೃತೀಯ ಪುತ್ರನಾಗಿ. ನಿರಂಜನ್ ಕುಲಾಲ್ ಹಾಗೂ ಯಶವಂತ್ ಕುಲಾಲ್ ಅವರ ಪ್ರೀತಿಯ ತಮ್ಮನಾಗಿ … Read more

ಬಾಲಕಿ ನೀಡಿದ ಆ ೫೭ ಸೆಂಟ್‌ಗಳು: ಎಂ.ಎನ್.ಸುಂದರ ರಾಜ್

ಅದೊಂದು ಚರ್ಚ್. ಚರ್ಚಿನಲ್ಲೊಬ್ಬ ಉದಾರವಾದಿ ಪಾದ್ರಿ. ಕೇವಲ ಧರ್ಮಪ್ರಚಾರವಷ್ಟೇ ತನ್ನ ಜೀವನದ ಉದ್ದೇಶವೆಂದು ಭಾವಿಸದವನು. ತನ್ನ ಚರ್ಚಿನ ಸುತ್ತ ಮುತ್ತ ಇದ್ದ ಬಡ ಕೂಲಿ ಕಾರ್ಮಿಕರ ಮನೆಮನೆಗೆ ಹೋಗಿ ಅವರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂದು ಪ್ರಚಾರ ಮಾಡುತ್ತಿದ್ದ. ಅಂತಹ ಬಡ ವಿದ್ಯಾರ್ಥಿಗಳಿಗಾಗಿ ಒಂದು ಶಾಲೆಯನ್ನೂ ಸಹ ಚರ್ಚ್ನ ಕೆಳಭಾಗದ ಒಂದು ಪುಟ್ಟ ಕೊಠಡಿಯಲ್ಲಿ ನಡೆಸುತ್ತಿದ್ದ. ಅಲ್ಲಿ ತನ್ನ ಬಿಡುವಿನ ವೇಳೆಯಲ್ಲಿ ಅತ್ಯಂತ ಶ್ರದ್ಧೆ ಮತ್ತು ಪ್ರೀತಿಯಿಂದ ಕಲಿಸುತ್ತಿದ್ದ. ಅವರಿಗೆ ಲಘು ಉಪಹಾರ, ಪುಸ್ತಕ, ಬಟ್ಟೆ ಎಲ್ಲವನ್ನೂ ನೀಡಿ, … Read more

ಕರಾವಳಿಯ ಸೆಖೆಯೂ ಕುಚ್ಚಲು ಗಂಜಿಯೂಟವೂ: ಕೃಷ್ಣವೇಣಿ ಕಿದೂರ್

ಈ ವರ್ಷ ಕಾಡುಮಾವಿನಮರಗಳ ತುಂಬ ಜೋತಾಡುವ ಗೊಂಚಲು ಗೊಂಚಲು ಹಣ್ಣುಗಳು ಬಾಯಲ್ಲಿ ನೀರೂರಿಸುತ್ತವೆ. ಮನೆಯಂಗಳದಲ್ಲಿ ನಿಂತು ಸುತ್ತ ತಿರುಗಿದಾಗ ಆಕಾಶ ಮುಟ್ಟುವ ಹಾಗೆ ಬೆಳೆದ ಕಾಡುಮಾವಿನ ಮರದ ತುಂಬ ಗಾಳಿಗೆ ತೊನೆಯುವ ಅರೆಹಣ್ಣು, ಕಾಯಿಗಳು . ಬಲವಾಗಿ ಬೀಸುವ ಗಾಳಿ ಉದುರಿಸುವ ಹಣ್ಣು ಹೆಕ್ಕಲು ಮಕ್ಕಳ ಸ್ಪರ್ಧೆ.ಈ ದುರ್ಮುಖ ಸಂವತ್ಸರವನ್ನೇ ಅಪರಾಧಿ ಮಾಡಬೇಕೋ ಅಲ್ಲ ವರುಷ ವರುಷಕ್ಕೂ ಬರಡಾಗುವ ಪ್ರಕೃತಿಗೆ ವಿಷಾದಿಸಬೇಕೋ ಅರಿಯದು. ಹೇಳಿ ಕೇಳಿ ನಮ್ಮದು ಅರಬ್ಬಿ ಸಮುದ್ರದ ಪಕ್ಕದ ಊರು. ಕೇರ ನಾಡಿನ ತುಂಬ … Read more

ದೈವತ್ವದ ಪರಿಕಲ್ಪನೆ: ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

ಬಸವಣ್ಣನವರ ವಚನವೊಂದರ ಸಾಲುಗಳು ಹೀಗಿವೆ: ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು, ಸಸಿಯೊಳಗಣ ರಸದ ರುಚಿಯಂತಿದ್ದಿತ್ತು, ನನೆಯೊಳಗಣ ಪರಿಮಳದಂತಿದ್ದಿತ್ತು…… ನೀರೊಳಗೆ ಬೆಂಕಿಯಿದೆ, ಅದರಿಂದಲೇ ವಿದ್ಯುತ್ತು ಹೊರಬರುವುದು. ಆಮೇಲೂ ಆ ನೀರು ನೀರಾಗಿಯೇ ಉಳಿವುದು. ಒಂದರಿಂದ ಇನ್ನೊಂದು ಹೊರಬಂದ ಮೇಲೂ ಅದು ಅದಾಗಿಯೇ ಇರುವ ಚೋದ್ಯವಿದು. ಮುಂದೆ ಬಿಡಲಿರುವ ಹಣ್ಣಿನ ರುಚಿ ಈಗಾಗಲೇ ಚಿಗುರುತ್ತಿರುವ ಸಸಿಯೊಳಗೆ ಹುದುಗಿದೆ. ಮೊಗ್ಗು ಅರಳುವ ಮುಂಚೆಯೇ ಅದರೊಳಗೆ ಪರಿಮಳ ಅಡಗಿರುತ್ತದೆ. ತಾಯಗರ್ಭದೊಳಗೆ ಬೆಳೆಯುತ್ತಿರುವ ಭ್ರೂಣದಲ್ಲೇ ಅದರೆಲ್ಲ ಬೆಳವಣಿಗೆಗೆ ಬೇಕಾದ ಅವಯವಗಳು ಹುದುಗಿರುವಂತೆ, ನವಿಲಿನ ಮೊಟ್ಟೆಯೊಳಗೆ … Read more

ಮಲೆನಾಡಿನ ದೀಪಾವಳಿ: ವೇದಾವತಿ ಹೆಚ್. ಎಸ್.

“ಮಲೆನಾಡು”ಎಂದರೆ ಅದೊಂದು ಸುಂದರವಾದ ವನಸಿರಿಗಳ ನಡುವೆ ಕಂಗೋಳಿಸುವ ಊರೆಂದರೆ ತಪ್ಪಾಗಲಾರದು. ಒಂದೊಂದು ಮನೆಯೂ ಅವರವರ ಜಮೀನುಗಳ ಮಧ್ಯದಲ್ಲಿ ಸುಂದರವಾಗಿ ಕಟ್ಟಿಕೊಂಡು, ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಂಡು ಜೀವನ ನೆಡೆಸಿಕೊಂಡು ಬಂದಿರುತ್ತಾರೆ. ಅವರಿಗೆ ಅವರದೇ ಆದ ಸಂಪ್ರದಾಯಗಳು ಹಳೆಯ ತಲೆಮಾರಿನಿಂದಲೂ ಬಳುವಳಿಯಾಗಿ ಬಂದಿರುತ್ತದೆ. ದೀಪಾವಳಿ ಹಬ್ಬವನ್ನು ನಮ್ಮ ಮಲೆನಾಡಿನ ಜನರು ಐದು ದಿನಗಳ ಕಾಲ ಸಂಭ್ರಮದಿಂದ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಹಿಂದಿನ ತಲೆಮಾರಿನ ಜನರು ನಡೆಸಿದಷ್ಟು ಆಚರಣೆಗಳು ಇಂದು ಕಡಿಮೆಯಾಗಿದ್ದರೂ, ಅದನ್ನು ಸ್ಪಲ್ಪ ಮಟ್ಟಿಗೆಯಾದರೂ ಇಂದಿನ ತಲೆಮಾರಿನ ಜನರು … Read more

ನನ್ನ ಪಾಲಿನ ಮತ್ತೊಂದು ಮಾತೃರೂಪ: ಎಂ.ಎಲ್.ನರಸಿಂಹಮೂರ್ತಿ

ಪ್ರತಿ ಹಬ್ಬಕ್ಕೂ ನಮ್ಮ ಹೊಸ್ತಿಲಲ್ಲಿ ಕೂತು ಅವರ ಹೊಸ್ತಿಲ ಕಡೆ ನೋಡುವುದು ರೂಢಿಯಾಗಿಬಿಟ್ಟಿತ್ತು ನಾನು ಸಹಜವಾಗಿವೇ ತೊದಲು ನುಡಿಗಳನ್ನು ಆರಂಭಿಸಿದಾಗನಿಂದ ಇಲ್ಲಿಯ ವರೆಗೆ ಸೋಮು ಒಮ್ಮೊಮ್ಮೆ ಮಾತ್ರಕ್ಕೆ ನರಸಿಂಹ ಎಂದು ತಾಯ ಪ್ರೀತಿ ಹಂಚಿ ತಾಯಿಯಷ್ಟೆ ಅಕ್ಕರೆಯಿಂದ ನೋಡುಕೊಳ್ಳುವ ಮತ್ತೊಂದು ಮಾತೃಹೃದಯ ನಮ್ಮೂರಲ್ಲಿ ಇದಾರೆ. ನನಗೆ ಎರಡು ವರ್ಷ ವಯಸ್ಸಾಗಿದ್ದಾಗ ಬಾಲ ವ್ಯಾಧಿಯಿಂದಾಗಿ ಸತ್ತು ಹೋಗುತ್ತಿದ್ದನಂತೆ. ಆಗ ನಮ್ಮ ಅಪ್ಪ ಅಮ್ಮ, ಅಜ್ಜ ಅಜ್ಜಿ ಹೇಳಿದ ಜಾಗ, ಕೇಳಿದ ವೈದ್ಯರ ಬಳಿಗೆ , ಸೂಚಿಸಿದ ಮಂತ್ರಗಾರರ ಬಳಿಗೆ … Read more

ಗಡಿಯಾರ ರಿಪೇರಿ: ಗುಂಡೇನಟ್ಟಿ ಮಧುಕರ

ನಾನು ಚಿಕ್ಕವನಿದ್ದಾಗ ಅಪ್ಪನಿಂದ ಹಣವನ್ನಿಸಿದುಕೊಂಡು ಗಡಿಯಾರ ರಿಪೇರಿಯನ್ನು ಮಾಡಿಸಿಕೊಂಡು ಬಂದ ಪ್ರಸಂಗವನ್ನು ನಿಮ್ಮ ಮುಂದೆ ಹೇಳಬೇಕಿದೆ. ನನ್ನ ಹಾಗೂ ಗಡಿಯಾರದ ನಡುವೆ ಅನ್ಯೋನ್ಯತೆ ಅದು ಹೇಗೆ ಬೆಸೆದುಕೊಂಡಿತ್ತೊ ಏನೋ, ನಾನು ಚಿಕ್ಕವನಿದ್ದಾಗ ನಮ್ಮೂರಿನಿಂದ ಸಮೀಪದ ಊರಾದ ಬೈಲೂರಿಗೆ ಬಸವಣ್ಣನ ಜಾತ್ರೆಗೆಂದು ಅಪ್ಪನ ಭುಜವನ್ನೇರಿ ಎರಡೂ ಕಾಲುಗಳನ್ನು ಜೋತು ಬಿಟ್ಟು ಅಪ್ಪನ ತಲೆಯನ್ನು ಹಿಡಿದುಕೊಂಡು ಕುಳಿತು ಜಾತ್ರೆಗೆ ಹೋಗಿದ್ದೆ. ಅಂದರೆ ಅಪ್ಪನ ಸವಾರಿ ಮಾಡಿದ್ದೆ. ಆ ಜಾತ್ರೆಗೆ ಹೋದಾಗ ಆಸೆ ಪಟ್ಟು ಅಪ್ಪನಿಂದ ಕೊಡಿಸಿಕೊಂಡದ್ದು ಪುಟ್ಟ ವಾಚನ್ನು. ಅಪ್ಪ, … Read more

ಬಿದ್ದಾಗಲೆಲ್ಲಾ ಎತ್ತಿ ಎಚ್ಚರಿಸಿದ ಅಪ್ಪನೆಂಬ ಧೀಮಂತ: ನಾಗರೇಖಾ ಗಾಂವಕರ

ನನ್ನ ಅಪ್ಪನ ಬಗ್ಗೆ ಬರೆಯಲೇನಿದೆ? ಬದುಕಿನ ಹಾಳೆಯಲ್ಲಿ ಮಕ್ಕಳ ಮುಖದಲ್ಲಿಯ ನಗುವಿಗೋಸ್ಕರ ತೇಯ್ದ ಜೀವನದ ಹಾದಿಯಲ್ಲಿ ಕಂಡುಂಡಿದ್ದು ಸಂಕಟಗಳೇ. ಅದೆಷ್ಟು ಆಪ್ತವಾಗಿತ್ತು ಕೆಲವೊಮ್ಮೆ ಅವರ ಮಾತು, ಪ್ರೀತಿ ತುಂಬಿದ ನೋಟ,ಬಾಲ್ಯದ ಬಿಂಬಗಳು ಜೀವ ರಸವೂಡುವ ಪ್ರತಿಮೆಗಳು. ತಂದೆ ತಾಯಿಯೆಂದರೆ ಭಯಮಿಶ್ರಿತ ಪ್ರೀತಿ. ಅಪ್ಪನೆದುರು ಎದೆ ಸೆಟೆಸಿ ಮಗುವಾಗಿದ್ದಾಗ ಹಠಮಾಡಿ ಕಾಡುತ್ತಿದ್ದ ಅದೇ ನಾನು ಕಿಶೋರಾವಸ್ಥೆಗೆ ಬಂದಂತೆ ಬಾಲ್ಯದ ಹುಡುಗಾಟ ಅಲ್ಪಸ್ವಲ್ಪವೇ ಕಣ್ಮರೆಯಾಗಿತ್ತು. ತಂದೆಯೆದುರು ತಲೆ ಎತ್ತಿ ಮಾತನಾಡಲು ಆಗದ ಸಂಕೋಚ ತಾನೆ ತಾನಾಗಿ ಹುಡುಗಿಯರಲ್ಲಿ ಮೂಡುತ್ತದೆ. ಅದಕ್ಕೂ … Read more

ಗೋವಿನ ಹಾಡು: ಆಶಾ ಜಗದೀಶ್..

ಪಕ್ಕದ ಮನೆಯ ಹಸು ಉಸ್ಸು ಬುಸ್ಸು ಎಂದು ನಿಟ್ಟುಸಿರಿಡುತ್ತಾ ಅಲ್ಲಿಯವರೆಗೂ ಮೇಯ್ದದ್ದನ್ನು ಕೂತು ಮೆಲುಕು ಹಾಕುತ್ತಿತ್ತು. ಅತ್ತಲಿಂದ ಬಂದ ಹಸೀನ, ಇಮ್ತಿಯಾಜ಼್ ಆಂಟಿಗೆ ಹಸುವನ್ನು ತೋರಿಸುತ್ತಾ “ಪಾಪ ನೋವು ತಿಂತಾ ಇದೆ… ನಾವು ಮನುಷ್ಯರಾದ್ರೆ ಇಷ್ಟೊತ್ತಿಗೆ ಆಸ್ಪತ್ರೆ ಆ್ಯಂಬುಲೆನ್ಸು ಅಂತ ಓಡ್ತಿದ್ವಿ… ಆದ್ರೆ ಪಾಪ ಮೂಕ ಪ್ರಾಣಿಗಳಿಗೆ ಅದೆಲ್ಲ ಏನೂ ಇಲ್ಲ…” ಅಂದಳು. ಅಲ್ಲಿಯವರೆಗೂ ದಿನನಿತ್ಯ ನೋಡುತ್ತಿದ್ದ ಆ ಹಸು ಗಬ್ಬಾಗಿದೆ ಎಂದು ನನಗೆ ತಿಳಿದಿರಲೇ ಇಲ್ಲ! ಸೋ ಕಾಲ್ಡ್ ನಗರಗಳಲ್ಲಿ ಹುಟ್ಟಿ ಬೆಳೆದ ನಮ್ಮಂಥವರಿಗೆ ಇಂತವೆಲ್ಲ … Read more

ಕನ್ನಡ ಭಾಷೆಯ ಅಳಿವು ಉಳಿವು: ಎಂ.ಎಚ್. ಮೊಕಾಶಿ. 

ಕನ್ನಡಿಗರೆಲ್ಲರೂ ಒಂದು ಭೌಗೋಳಿಕ ವ್ಯಾಪ್ತಿಗೆ ಒಳಪಟ್ಟ ಸಂದರ್ಭಕ್ಕೆ ಈಗ 64 ವರ್ಷಗಳ ಸಂಭ್ರಮ. ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡವನ್ನೆಲ್ಲ ಒಂದು ಗೂಡಿಸಿ ಅದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಸುದಿನ. ಒಂದು ಭಾಷೆ ಸಮಾಜ ಮುಕ್ತವಾಗಿ ಅರಳಬೇಕು. ಪ್ರತಿಯೊಂದು ಜನರ ಅಭಿವೃದ್ದಿಯೇ 1956 ರಲ್ಲಾದ ಭಾಷಾವಾರು ಪ್ರಾಂತದ ರಚನೆಯೇ ಮೂಲ ಉದ್ದೇಶವಾಗಿತ್ತು. ಇಂದು ಹೊಸ ಬದುಕಿಗೆ ಕಾಲಿಡುತ್ತಿರುವ ನಾವು ಈ 64 ವರ್ಷಗಳಲ್ಲಿ ಸಾಧಿಸಿದ್ದೇನು? ಸಾಧಿಸಬೇಕಾದದ್ದೇನು? ಎಂದು ತಿಳಿಯಲು ಇದು ಸಕಾಲವಾಗಿದೆ. 64 ವರ್ಷಗಳ ಹೊಸ್ತಿಲಲ್ಲಿ ನಿಂತು … Read more