ಇಷ್ಟು ಗಡಿಬಿಡಿ ಮಾಡ್ಕೊಂಡ್ ಯಾಕ ಹೋದ್ರಿ?: ಗುರುಪ್ರಸಾದ ಕುರ್ತಕೋಟಿ
ಅವತ್ತು ಎಪ್ರಿಲ್ ೨೧ ನೆ ತಾರೀಖು, ಮದ್ಯಾಹ್ನದ ಹೊತ್ತು. ಫೇಸ್ ಬುಕ್ ಮೆಸ್ಸೆಂಜರ್ ನಲ್ಲಿ ಬಂದ “ಎಂತದ್ರೋ” ಅನ್ನೋ ಮೆಸ್ಸಜು ನನ್ನ ಕಣ್ಣು ಹಿಗ್ಗಿಸಿತ್ತು. ಯಾವ ಹಿರಿಯರು ಆನ್ಲೈನ್ ಇದ್ದಾರೆ ಅಂತ ಗೊತ್ತಿದ್ರೂ, ಅವರು ನನಗೆ ಎಷ್ಟು ಚೆನ್ನಾಗಿ ಪರಿಚಯ ಇದ್ರೂ, ಅವರನ್ನ ಮಾತಾಡಿಸಬೇಕು ಅಂತ ಆಸೆ ಆದರೂ ಪಿಂಗ್ ಮಾಡೋಕೆ ಹೆದರತಿದ್ನೋ, ಅವರೇ ನನಗೆ “ಎಂತದ್ರೋ” ಅನ್ನೋ ಮೆಸ್ಸೇಜ್ ಕಳಸಿದ್ರೆ ನನಗೆ ಎಷ್ಟು ಖುಷಿ ಆಗಬೇಡಾ? ಅವತ್ತಿನ ದಿನ ನಾನು ಅಮೇರಿಕದಲ್ಲಿ ಇದ್ದೆ, ಅವ್ರು ಬೆಂಗಳೂರಿನಲ್ಲಿ. … Read more