ಜಪ್ತಿ: ಎಂ ಜವರಾಜ್

ಅಪ್ಪನನ್ನು ತಬ್ಬಿಕೊಂಡು ಮಲಗಿದ ರಾತ್ರಿಗಳು ಸಾಕಷ್ಟಿದ್ದವು. ಅವನ ಮಗ್ಗುಲು ಬೆಚ್ಚನೆಯ ಗೂಡಾಗಿತ್ತು. ಒಂದೊಂದು ಸಾರಿ ಆ ಬೆಚ್ಚನೆಯ ಗೂಡು ದುಗುಡದಲಿ ಕನವರಿಸಿ ಕನವರಿಸಿ ನನ್ನನ್ನು ದೂರ ತಳ್ಳುತ್ತ ಮಗ್ಗುಲು ಬದಲಿಸುತ್ತಿತ್ತು. ಅಪ್ಪನನ್ನು ತಬ್ಬಿಕೊಂಡು ಮಲಗಲು ಅಷ್ಟು ಸುಲಭವಾಗಿರಲಿಲ್ಲ. ತಮ್ಮಂದಿರ ಸರದಿಯ ಸಾಲಿತ್ತು. ಒಂದೊಂದು ರಾತ್ರಿ ಒಬ್ಬೊಬ್ಬರಿಗೆ ಎಂದು ನಿಗದಿ ಮಾಡಿದ್ದರಿಂದ ಆ ಸರದಿಯ ಸಾಲಿನ ರಾತ್ರಿ ನನ್ನದಾಗುತ್ತಿತ್ತು. ಉಳಿದವರು ಅವ್ವನ ಮಗ್ಗುಲಲ್ಲಿ ಮಲಗುತ್ತಿದ್ದರು. ನನ್ನದಾದ ಆ ರಾತ್ರಿಗಳು ಅಪ್ಪನ ಪೇಚಾಟ ನರಳಾಟ ನನಗೆ ದಿಗಿಲು ಹುಟ್ಟಿಸುತ್ತಿತ್ತು. ಕರಿಯ … Read more

ಮುಚ್ಚಿಟ್ಟ ಪುಟಗಳು: ಉಮೇಶ ದೇಸಾಯಿ

  “ದಿವ್ಯಾ ಮಗನ ಪ್ರಶ್ನಿ ಕೇಳಿ ತಲಿ ತಿನಬ್ಯಾಡ. ಇದರ ಮಜಾ ತಗೊಳಲಿಕ್ಕೆ ಬಿಡು. ” ಶ್ರೀ ಹೇಳಿದ ಮಾತು ದಿವಾಕರನಿಗೂ ನಾಟಿತು. ಅವನು ಗ್ಲಾಸು ಎತ್ತಿ ಬೀರು ಗುಟಕರಿಸಿದ. ಹಂಗ ನೋಡಿದರ ದಿವಾಕರನ ಉತ್ಸಾಹಕ್ಕ ಅರ್ಥನೂ ಇತ್ತು. ಬರೋಬ್ಬರಿ ಮುವ್ವತ್ತು ವರ್ಷ ಆದಮ್ಯಾಲೆ ಜೀವದ ಗೇಳೆಯನ ಭೇಟಿ ಆಗಿದ್ದ ಅವ. ಗೆಳೆಯ ಅಂದರ ಅಂತಿತಂಹ ಗೆಳೆಯ ಅಲ್ಲ ರಂಗೀಲಾ ವ್ಯಕ್ತಿತ್ವದವ. ದಿವಾಕರನಿಗೆ ಯಾವಾಗಲೂ ಒಂದು ನಿಗೂಢ ವ್ಯಕ್ತಿಹಂಗ ಕಾಣಸತಿದ್ದ ಇವ ಹಿಂಗ ಇವನ ನಡಾವಳಿ ಹಿಂಗ … Read more

ಜೀರ್ಣೋದ್ದಾರ: ಸತೀಶ್ ಶೆಟ್ಟಿ ವಕ್ವಾಡಿ.

ಗುತ್ತಿಗೆಪುರದ ಶ್ರೀ ಅನಂತಪದ್ಮನಾಭ ದೇವಸ್ಥಾನ ಇತಿಹಾಸ ಪ್ರಸಿದ್ಧವಾದದ್ದು. ಸುತ್ತಲಿನ ಐದಾರು ಊರುಗಳ ಆರಾಧ್ಯ ದೇವರಾದ ಅನಂತಪದ್ಮನಾಭನನ್ನು ಏಳುನೂರು ವರ್ಷಗಳ ಹಿಂದೆ ಇಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಪ್ರತಿವರ್ಷದ ಮಾರ್ಗಶಿರ ಮಾಸದ ಮೊದಲ ಅಷ್ಟಮಿಯ ದಿನ ಇಲ್ಲಿ ರಥೋತ್ಸವ ಮತ್ತು ಕೃಷ್ಣಾಷ್ಟಮಿಯ ದಿನ ವಿಶೇಷ ಉತ್ಸವದ ಕಾರ್ಯಕ್ರಮವಿರುತ್ತದೆ. ಇದಲ್ಲದೆ ಗಣೇಶೋತ್ಸವ ಮತ್ತು ನವರಾತ್ರಿ ಉತ್ಸವಗಳನ್ನೂ ಆಚರಿಸಲಾಗುತ್ತೆ. ಆವಾಗೆಲ್ಲ ಸುತ್ತಲಿನ ಊರುಗಳ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಲರವ ರಂಗೆರಿಸುತ್ತವೆ. ಊರಿನವರೆಲ್ಲ ತಮ್ಮ ಗದ್ದೆಗಳ ನಾಟಿ ಮಾಡುವ ಮುನ್ನ ದಿನ ಮತ್ತು ನಾಟಿಯ ಕೊನೆ … Read more

ಮಾತು ಮದುವೆ ಮಂಟಪದೊಳು ಸಕಲ ಕಾರ್ಯವಾ: ಡಾ. ವೃಂದಾ ಸಂಗಮ

ಸರಸ್ವತಿ ಮನೆಗೆ ಬಂದಾಗ ಏಳೂವರೆ. ಮುಂದಿನ ಹಾಲ್ ನಲ್ಲಿಯೇ ಲಕ್ಷ್ಮಿ ತನ್ನ ತಮ್ಮನನ್ನು ಓದಿಸುತ್ತಿದ್ದಳು. ಅಮ್ಮ ಬಂದಿದ್ದು ಕಂಡೊಡನೇ ಕಾಫಿ ಮಾಡಲು ಎದ್ದಳು. ಸರಸ್ವತಿ ಹತ್ತಿರದಲ್ಲೇ ಇರುವ ಹೆಸರಾಂತ ನರ್ಸಿಂಗ್ ಹೋಂ ಒಂದರಲ್ಲಿ ಹೆಡ್ ನರ್ಸ. ಮೈ ತುಂಬಾ ಕೆಲಸ. ಮನೆಗೆ ಬಂದರೆ ಸಾಕೋ ಸಾಕು ಎನಿಸುತ್ತಿರುತ್ತದೆ. ಈಗ ಮಗಳು ಲಕ್ಷ್ಮಿ ಮನೆಯಲ್ಲೇ ಇರುವುದರಿಂದ ಅವಳಿಗೆ ಮನೆ ಕೆಲಸದಲ್ಲಿ ಸಂಪೂರ್ಣ ವಿನಾಯಿತಿ. ಮಧ್ಯಮ ವರ್ಗದ ಮನೆಯಲ್ಲಿ ಬೇಡಿ ಬಯಸುವಂತಹ ಮಗಳು. ಪಿ ಯು ಸಿ ಯಲ್ಲಿ ಅತ್ಯುತ್ತಮ … Read more

ನಿಂಗಿ: ಗೀತಾ ಜಿ. ಹೆಗಡೆ, ಕಲ್ಮನೆ

“ಅಮ್ಮಾ ಅಮ್ಮಾ ” ಯಾರಿದು? ಒಂದೆ ಸಮ ಕಿಟಕಿ ಸಂಧಿಯಲ್ಲಿ ಮೂತಿ ಇಟ್ಕಂಡು ಕರೆಯುತ್ತಿರೋದು? ಓಹ್! ಮಾದೇವಿ. ಈ ದಿನ ಬೆಳಗ್ಗೆಯೇ ಬಂದು ಮನೆ ಕೆಲಸ ಮಾಡಿ ಹೋದಳಲ್ಲಾ? ಇನ್ನೂ ಮಧ್ಯಾಹ್ನ ಎರಡೂವರೆಯಷ್ಟೆ. ಈಗ್ಯಾಕೆ ಬಂದ್ಲಪ್ಪಾ ಇವಳು? ಇನ್ನೇನು ರಾಮಾಯಣವೊ ಏನೊ? ಇವಳ ಗೋಳು ಯಾವತ್ತು ಮುಗಿಯುತ್ತೊ? ಸದಾ ಒಂದಲ್ಲಾ ಒಂದು ಗಲಾಟೆ ಕುಡುಕ ಗಂಡನನ್ನು ಕಟ್ಟಿಕೊಂಡು. ಇದ್ದ ಒಬ್ಬ ಮಗನ ಪಾಲನೆ,ಪೋಷಣೆಯ ಜವಾಬ್ದಾರಿಗೆ ನಿಯತ್ತಾಗಿ ಮೂಕ ಎತ್ತಿನಂತೆ ದುಡಿಯುವ ಹೆಣ್ಣು. ಏನು ಹೇಳಿದರೂ ಇಲ್ಲಾ ಅನ್ನದೇ … Read more

ಇಸ್ಪೀಟು ರಾಣಿ: ಜೆ.ವಿ.ಕಾರ್ಲೊ.

ರಶ್ಯನ್ ಮೂಲ: ಅಲೆಕ್ಸಾಂಡರ್ ಪುಷ್ಕಿನ್ ಇಂಗ್ಲಿಷಿನಿಂದ: ಜೆ.ವಿ.ಕಾರ್ಲೊ. ಅಶ್ವದಳದ ಸೇನಾಧಿಪತಿ ನರುಮೋವನ ವಸತಿ ಗೃಹದಲ್ಲಿ ಇಸ್ಟೀಟ್ ಆಟ ಬಹಳ ಜೋರಾಗಿ ನಡೆದಿತ್ತು. ಚಳಿಗಾಲದ ಆ ರಾತ್ರಿ ಹೇಗೆ ಕಳೆಯಿತೆಂದು ಯಾರಿಗೂ ಅರಿವಾಗಲಿಲ್ಲ. ಅವರೆಲ್ಲಾ ಊಟಕ್ಕೆಂದು ಎದ್ದಾಗ ಬೆಳಗಿನ ಜಾವ ಐದಾಗಿತ್ತು! ಗೆದ್ದವರಿಗೆ ಊಟ ರುಚಿಕರವಾಗಿದ್ದರೆ, ಸೋತವರಿಗೆ ಅದೊಂದು ಯಾಂತ್ರಿಕ ಕರ್ಮವಾಯಿತು. ಕೊನೆಗೂ ಶಾಂಫೇನಿನ ಬಾಟಲಿ ಕೈ ಬದಲಾಯಿಸಿದಾಗ ಅವರಲ್ಲಿ ಹೊಸ ಹುರುಪು ತುಂಬಿ ಬಂದಿತು. “ಸುರಿನ್? ಏನಪ್ಪ ನಿನ್ನ ಕತೆ?” ಮನೆಯ ಯಜಮಾನ ನರುಮೊವ್ ಕೇಳಿದ. “ಅಯ್ಯೋ, … Read more

ಕಪ್ಪೆ ಉಚ್ಚೆಯೂ ಬೆಳ್ಳಿ ಕಪ್ಪೆಯೂ. . . : ರಮೇಶ್ ನೆಲ್ಲಿಸರ. ತೀರ್ಥಹಳ್ಳಿ

ಮೀನುಶಿಕಾರಿಯಾಗದೆ ಹದಿನೈದು ದಿನಗಳೇ ಆಗಿ ಹೋಗಿದ್ದವು, ಸಿಕ್ಕ ಒಂದೆರಡು ಸೋಸಲು ಸಾಂಬಾರಿಗೆ ಸರಿಯಾಗಿ, ಅಲ್ಲಿ ಇಲ್ಲಿ ಕೂಲಿಮಾಡಿಕೊಂಡು ರಾಮಯ್ಯ ಹೇಗೋ ಬಿಕನಾಸಿ ಜೀವನದ ಗಾಲಿಯಿರದ ಚಕ್ಕಡಿಯನ್ನು ನೂಕುತ್ತಿದ್ದ ಅಥವಾ ಅದೇ ಇವನನ್ನು ದಿಕ್ಕುದಸೆಯಿಲ್ಲದೆ ಎಳೆಯುತ್ತಿತ್ತು. ನಲವತ್ತು ವರ್ಷದ ಹೆಂಡತಿಗೆ ಮತ್ತು ಐವತ್ತು ವರ್ಷದ ಆತನಿಗೆ ಜನಿಸಿದ ನಾಗನೆಂಬ ಮಗ ಹೇಗೋ ಹುಟ್ಟಿದರಾಯಿತೆಂದು ಹುಟ್ಟಿದಂತಾಗಿ ಐದು ವರ್ಷ ಸರಿದರೂ ನಾಲ್ಕೋ ಐದೋ ಕೆಜಿ ಮಾಂಸವನ್ನು ಎಲುಬು ಚಕ್ಕಳದ ದೇಹದಲ್ಲಿ ಅಲ್ಲಲ್ಲಿ ಅಡಗಿಸಿಟ್ಟುಕೊಂಡು ಒಂದು ಜೀವವಿರಬಹುದೇನೋ ಎಂದು ಅನಿಮಾನಿಸುವಂತೆ ಬದುಕಿದ್ದ. … Read more

ಅವಮಾನವೇ ಆದರ್ಶವಾದ ಕಥೆ: ಅಯ್ಯಪ್ಪ ಕಂಬಾರ

ಊರ ಅಗಸಿ ಬಾಗಿಲಿನ ಬಳಿ ಕಾರು ಬಂದ ತಕ್ಷಣ ಡ್ರೈವರ್ ಸರ್. . ಸರ್. . ಎದ್ದೇಳಿ ಸರ್ ನಿಮ್ಮ ಊರು ಬಂತು ಎಂದ. ಆಗ ಸಮಯ 11 ಗಂಟೆ ರಾತ್ರಿ. ಆಜೀವ ದಡಬಡಾಯಿಸಿ ಎದ್ದು ಕಾರು ನಿಲ್ಲಿಸು ಎಂದವನೇ ಕಣ್ಣು ಪಿಚ್ಚು ಒರೆಸಿಕೊಳ್ಳುತ್ತ, ಮುಖದಲ್ಲಿ ಎಲ್ಲಿಂದಲೋ ನಗು ಕಡ ತಂದು ಕಾರಿನ ಗಾಜು ಇಳಿಸಿ ಆಕಡೆ ಈಕಡೆ ಹಿಂದೆ ಮುಂದೆ ಮೇಲೆ ಕೆಳಗೆ ನೋಡುತ್ತ, ಇದ್ದಕ್ಕಿದ್ದವನೆ ಕೆಳಗಿಳಿದು, ಬಾಗಿ ನೆಲ ಮುಟ್ಟಿ ನಮಸ್ಕರಿಸಿ ಮೇಲೆದ್ದ. ಬೀದಿ … Read more

ಮುಂಬಯಿ ಮಾವ: ಶೀಲಾ ಭಂಡಾರ್‌ಕರ್, ಮೈಸೂರು

ಮೂಲ ಕೊಂಕಣಿ: ವಲ್ಲಿ ಕ್ವಾಡ್ರಸ್, ಅಜೆಕಾರು. ಕನ್ನಡಕ್ಕೆ ಅನುವಾದ: ಶೀಲಾ ಭಂಡಾರ್‌ಕರ್, ಮೈಸೂರು ‘ಮುಂಬೈ ಮಾವ ತೀರಿ ಹೋದನಂತೆ.’ ಬೆಳಿಗ್ಗೆ ಎದ್ದು ಅಡುಗೆಮನೆಯೊಳಗೆ ಚಹ ಮಾಡಲು ನೀರು ಕುದಿಯಲಿಡುವ ಸಮಯಕ್ಕೆ ಸರಿಯಾಗಿ ವಾಟ್ಸ್ ಆ್ಯಪ್‍ಗೆ ಬಂದ ಮೆಸೆಜ್ ಓದಿದ ರೀಟಾಳ ಮನಸ್ಸಿನಲ್ಲಿ ಯಾವುದೇ ಭಾವನೆಗಳು ಹುಟ್ಟಲಿಲ್ಲ. ಅವನಿಷ್ಟು ದಿನ ಎಲ್ಲಿದ್ದ? ಯಾರ ಜತೆಯಲ್ಲಿದ್ದ? ಏನಾಗಿದ್ದ? ಎನ್ನುವುದು ಯಾರಿಗೂ ಸರಿಯಾಗಿ ತಿಳಿದಿರಲಿಲ್ಲ. ಆದರೂ ಹೋದ ವಾರ, ಊರಿನ ಕಾಲೇಜಲ್ಲಿ ಓದುತ್ತಿರುವ ಸೋದರತ್ತೆಯ ಮಗನೊಬ್ಬ “ಫ್ಯಾಮಿಲಿ” ಎನ್ನುವ ಹೆಸರಿನ ವಾಟ್ಸ್ … Read more

ಚಿಮಣಿ ಬುಡ್ಡಿ: ಚೈತ್ರಾ ವಿ.ಮಾಲವಿ

ಕೇರಿಯ ಬೀದಿ ದೀಪದ ಮಂದ ಬೆಳಕಲ್ಲಿ ತನ್ನ ಗುಡಿಸ್ಲು ಮುಂದ ಓದ್ತಾ ಕುಂತಿದ್ಲು ಪಾರಿ. “ಲೇ.. ಪಾರಿ, ಚಿಮಣಿ ಬುಡ್ಡಿ ಎಲ್ಲಿಟ್ಟಿ? ಕಾಣವಲ್ತು” ಒದರಿದ್ಲು ಅವ್ವ ಹುಲಿಗೆವ್ವ. “ಯವ್ವಾ, ಅಲ್ಲೇ ಇಟ್ಟಿನಿ ನೋಡ್ಬೇ” ಕುಂತಲ್ಲೇ ಉಸರಿದಳು. ಕತ್ಲು ಕವಿದ ಗುಡಿಸ್ಲು ಒಳಗ ತಡಕಾಡ್ತಿದ್ದ ಹುಲಿಗೆವ್ವಗ ಅಡಿಗೆ ಮನಿ ಮೂಲ್ಯಾಗ ತಣ್ಣಗ ಕುಂತಿದ್ದ ಚಿಮಣಿ ಬುಡ್ಡಿ ಕರ್ರಗೆ ಕಾಣ್ತು. ಏನೇನೋ ಗುನುಗುತ್ತಾ ಚಿಮಣಿ ಬುಡ್ಡಿಯನ್ನು ಕೈಗೆ ತಕ್ಕಂಡು, ಗುಡಿಸ್ಲು ನಡು ಕಂಬಕ ತಂದಿಟ್ಲು. ಬೆಂಕಿಪಟ್ಣ ಕಾಣ್ದೇ ಪಾರಿ ಮ್ಯಾಲಾ … Read more

ಬದಲಾಗುವ ಬಣ್ಣಗಳು (ಕೊನೆಯ ಭಾಗ): ಅಶ್ಫಾಕ್ ಪೀರಜಾದೆ

ಇಲ್ಲಿಯವರೆಗೆ -7 – ಪ್ರತೀಕ ಮೊದಲು ಬಂದವನೇ ಚೇತನನ್ನು ಭೇಟಿಯಾದ. ಚೇತನ ತನ್ನ ಹೆಂಡ್ತಿ ಮಕ್ಕಳನ್ನು ತೋರಿಸಿ ತಾನೀಗ ಸಂಸಾರ ಸಮೇತ ಹಾಯಾಗಿರುವುದಾಗಿ ಹೇಳಿದ “ಅವಳ ಸಂಗ ಬಿಟ್ಟು ಬಿಟ್ಟಿದ್ದೇನೆ. ಆದರೂ ಒಮ್ಮೊಮ್ಮೆ ಅವಳು ನೆನಪಾಗಿ ಕಾಡುತ್ತಾಳೆ ಒಂದೆರಡು ಪೆಗ್ಗು ಹಾಕಿ ಮಲಗಿ ಬಿಡುತ್ತೇನೆ” ಎಂದು ಹೇಳಿದಾಗ ಪ್ರತೀಕನಿಗೆ ಆಶ್ಚರ್ಯವಾಗುತ್ತದೆ. “ಗಂಡ ಹೆಂಡತಿಗಿಂತ ಹೆಚ್ಚಾಗಿ ಇದ್ದವರು ನೀವು… ಇಬ್ಬರೂ ಇಷ್ಟು ಸುಲಭವಾಗಿ ಹೇಗೆ ಅಗಲಿದಿರಿ..?” ಎಂದು ಪ್ರತೀಕ ಪ್ರಶ್ನೆಸಿದಾಗ ಏನು ಮಾಡಲಿ ಅನಿವಾರ್ಯವಾಯಿತು. ಈ ಮದುವೆ ಸಂಬಂಧ … Read more

ಸೆಳತ: ಕಿರಣ್. ವ್ಹಿ, ಧಾರವಾಡ

ಸುಧಾಕರ ಹಾಗು ಸ್ವಾತಿ ರಾತ್ರೋರಾತ್ರಿ ಊರು ಬಿಟ್ಟು ಹೊರಟು ಹೋದರು. ಇಬ್ಬರದು ಮೂರು ವರ್ಷಗಳ ಪ್ರೇಮ್ ಕಹಾನಿ ಆಗಿದ್ದರಿಂದ ಸೆಳತ ಹೆಚ್ಚಿಗೆಯೆ ಇತ್ತು. ಸುಧಾಕರ, ಆಟೊ ಓಡಿಸಿಕೊಂಡು ನಾಲ್ಕು ಕಾಸು ಸಂಪಾದನೆ ಮಾಡುತಿದ್ದ. ಅದ್ಹೇಗೊ ಇಬ್ಬರ ನಡುವೆ ಪ್ರೇಮಾಂಕುರವಾಗಿಬಿಟ್ಟಿತ್ತು. ಸುಧಾಕರನ ತಾಯಿ ಜಲಜಮ್ಮನಿಗೆ, ಗಂಡ ತೀರಿ ಹೋದಾಗಿನಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದಿತ್ತು. ಬಡತನವೊ, ಅಥವ ಮನೆಯ ಯಜಮಾನನಿಲ್ಲವೆಂಬ ಕಾರಣಕೋ, ಸುಧಾಕರನಿಗೆ ವಿದ್ಯೆ ಅಷ್ಟೊಂದು ತಲೆಗೆ ಹೋಗಲಿಲ್ಲ. ಕಾಲಕಳದಂತೆ ಓದಬೇಕೆಂಬ ಹಂಬಲವು ಕಡಿಮೆಯಾಯಿತು. ತಾಯಿಗೆ ವಯಸ್ಸಾಗುತ್ತಿದೆ ಎಂದು … Read more

ಧರ್ಮಸಂಕಟ: ಗಿರೀಶ ಜಕಾಪುರೆ

ಹಿಂದಿ ಮೂಲ – ಪ್ರೇಮಚಂದ ಕನ್ನಡಕ್ಕೆ – ಗಿರೀಶ ಜಕಾಪುರೆ 1. ‘ಪುರುಷರಲ್ಲಿ ಸ್ತ್ರೀಯರಲ್ಲಿ ಬಹಳ ವ್ಯತ್ಯಾಸವಿರುತ್ತದೆ. ನಿಮ್ಮ ಮನಸ್ಸು ಕನ್ನಡಿಯಂತೆ ಕಠಿಣವಾಗಿರುತ್ತದೆ, ಮತ್ತೆ ನಮ್ಮದು ಹೂವಿನಂತೆ ಮೃದು. ಹೂಗಳು ವಿರಹದ ಶಾಖ ತಾಳಲಾರವು’ ‘ಹರಳು ತಾಗಿದರೂ ಸಾಕು ಕನ್ನಡಿ ಚೂರಾಗುತ್ತದೆ. ಮೃದು ವಸ್ತುಗಳಲ್ಲಿ ಲೌಚಿಕತೆ ಇರುತ್ತದೆ’ ‘ಬಿಡು, ಮಾತಲ್ಲಿ ಮರಳು ಮಾಡಬೇಡ. ದಿನವಿಡೀ ನೀ ಬರುವ ದಾರಿ ನೋಡುತ್ತೇನೆ, ರಾತ್ರಿಯಿಡಿ ಗಡಿಯಾರದ ಮುಳ್ಳುಗಳನ್ನು. ಇಷ್ಟಾದ ಮೇಲೆ ಹೇಗೋ ಕಷ್ಟಪಟ್ಟು ನಿನ್ನ ದರ್ಶನವಾಗುತ್ತದೆ’ ‘ನಾನು ಸದಾಕಾಲ ನಿನ್ನನ್ನು … Read more

ಬದಲಾಗುವ ಬಣ್ಣಗಳು (ಭಾಗ 3): ಅಶ್ಫಾಕ್ ಪೀರಜಾದೆ

ಇಲ್ಲಿಯವರೆಗೆ – 5 – ಚೇತನ ವಿವಾಹದ ನಂತರ ಇನ್ನಷ್ಟು ವಿಚಲಿತನಾದ. ಇನ್ನಷ್ಟು ದ್ವಂದ್ವಕ್ಕೆ ಒಳಗಾದ ಮಾನಸಿಕವಾಗಿ ಕಾವೇರಿಯೊಂದಿಗೆ ಹೊಂದಾಣಿಕೆ ಸಾಧ್ಯವಾಗುತ್ತಿರಲಿಲ್ಲ. ಪವಿತ್ರೆಯ ನೆನಪು ಅವನೆದೆಯಲ್ಲಿ ಬಿರುಗಾಳಿಯಾಗಿ ಬೀಸಿದಾಗ ಈತ ತರಗೆಲೆಯಂತಾಗಿ ಬಿಡುತ್ತಿದ್ದ. ತತ್ತರಿಸಿ ಹೋಗುತ್ತಿದ್ದ. ಮನದ ಯಾತನೆಯ ತೀವ್ರತೆ ಕಡಿಮೆಗೊಳಿಸಲು ಮತ್ತೇ ಮತ್ತೇ ಅವನು ಕುಡಿತಕ್ಕೆ ಶರಣಾಗುತ್ತಿದ್ದ. ಅದೇ ಅಮಲಿನಲ್ಲಿ ಎಲ್ಲ ಮನಸಿನ ಎಲ್ಲ ತಡೆಗೊಡೆಗಳು ದಾಟಿ ಮತ್ತೆ ಪವಿತ್ರೆಯ ಮನೆಯ ದಾರಿ ಹಿಡಿಯುತ್ತಿದ್ದ. ಪವಿತ್ರಳ ಮನೆ ಇವನಿಗೆ ಮಾನಸಿಕ ನೆಮ್ಮದಿಯ ಕೇಂದ್ರವಾಗಿತ್ತು. ಈತನ ಮದ್ವೆಯ … Read more

ಬದಲಾಗುವ ಬಣ್ಣಗಳು (ಭಾಗ 2): ಅಶ್ಫಾಕ್ ಪೀರಜಾದೆ

ಇಲ್ಲಿಯವರೆಗೆ  – 3 – ತಿಂಗಳ ಬಳಿಕ ಪ್ರೇಮಾ ಮರಳಿ ಬಂದ ಸುದ್ದಿ ಕತ್ತಲೆ ಕವಿದ ಚೇತನನ ಮನಸ್ಸಿಗೆ ಸುರ್ಯೋದಯವಾಗಿತ್ತು. ತಿಂಗಳಿಂದ ಶೇವ್ ಕಾಣದ ಮುಖದ ತುಂಬ ಗಡ್ಡ ಮೀಸೆ… ಬಾಚನಿಗೆ ಕಾಣದ ತಲೆ… ಕೆದರಿದ ಕೂದಲು… ಮೈಮೇಲೆ ಕೊಳೆಯಾದ ಬಟ್ಟೆಗಳು… ಹಳ್ಳಿ ಹುಂಬನಂತೆ ಹುಚ್ಚನಂತೆ ತೋರುತ್ತಿದ್ದ. ಹಾಗೇ ಸೀದಾ ಪ್ರೇಮಾಳ ಮನೆಯತ್ತ ಹೆಜ್ಜೆ ಹಾಕಿದ್ದ. ಡೋರ ಮುಂದೆ ನಿಂತು ಬೆಲ್ ಮಾಡಿದ ಕೆಲವೇ ಕ್ಷಣಗಳಲ್ಲಿ ಪ್ರೇಮಾಳ ತಂದೆ ಬಾಗಿಲು ತೆರೆದು ಚೇತನನ ಸ್ಥಿತಿ ನೋಡಿ ಸ್ವಲ್ಪ ಗಾಬರಿಯಾದರು. ಏಕೆಂದರೆ ಮೊದಲಿನಿಂದಲೂ ಚೇತನ ಪ್ರೇಮಾಳ … Read more

ಜೈನಾಬಿ, ರೋಸ್ ಮೇರಿ, ಮತ್ತು ಮಾಯಾ ಬಾರ್:  ವಸುಧಾ ಪ್ರಭು

ಟಕ್-ಟಕ್-ಟಕ್ ಮಾಯಾ ಬಾರಿನ ಮೇಲೆ ನಿನ್ನೆ ಮುನ್ಸಿಪಾಲಿಟಿಯವರು ಮಾಡಿದ ದಾಳಿಯಿಂದಾಗಿ ಎಂದಿಗಿಂತ ಒಂದೂವರೆ ಗಂಟೆಯ ಮೊದಲೇ ಫ್ಲ್ಯಾಟಿಗೆ ಬಂದರೆ, ನೆರೆಯ ಫ್ಲ್ಯಾಟ್ ನಲ್ಲಿರುವ ಅಮ್ಮಿ ಬಾಗಿಲು ಬಡಿದಾಗಲೇ ಜೈನಾಬಿಗೆ ಎಚ್ಚರವಾಯಿತು. ಕಣ್ಣು ಸರಿಯಾಗಿ ಬಿಡುತಿದ್ದಂತೆಯೇ ಎದ್ದು ಮೊದಲು ಬಚ್ಚಲಿಗೆ ಧಾವಿಸಿದಳು. ಒಂದರ ಮೇಲೊಂದು ಬಾಲ್ದಿ ಇಟ್ಟಂತೆ ಬಾಲ್ದಿಯನ್ನು ನಲ್ಲಿ ಕೆಳಗೆ ನೀರು ತುಂಬಲು ಇಟ್ಟು ಟೂತ್ ಪೇಸ್ಟ್ ಬ್ರಶ್ ಹಿಡಿದು ಹಲ್ಲುಜ್ಜತೊಡಗಿದಳು. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನಾಲ್ಕನೇ ಅಂತಸ್ತಿನಲ್ಲಿರುವ ಇರುವ ಇವಳ  ಮನೆಯ ನಲ್ಲಿಯಲ್ಲಿ ಸಪೂರವಾಗಿ ಕೇವಲ … Read more

ಬದಲಾಗುವ ಬಣ್ಣಗಳು (ಭಾಗ 1): ಅಶ್ಫಾಕ್ ಪೀರಜಾದೆ

– 1 – ಡಿಶಂಬರ್ – 25, ಕ್ರಿಸಮಸ್ ಹಬ್ಬ. ಯೇಸು ಈಗಲೂ ಆ ಗೋಡೆಯ ಮೇಲೆ ನೇತಾಡುತ್ತಿದ್ದ. ಪ್ರತಿ ಹೊಸ ವರ್ಷದಂದು ಯೇಸು ಚಿತ್ರವಿರುವ ದಿನದರ್ಶಿಕೆ ತಂದು ಪವಿತ್ರ ತನ್ನ ಮನೆಯಲ್ಲಿ ನಿತ್ಯ ಆರಾಧನೆ ಸಲ್ಲಿಸುವದನ್ನು ರೂಡಿಸಿಕೊಂಡಿದ್ದಳು. ಮನುಕುಲವನ್ನೇ ಉದ್ಧರಿಸಿದ ಯೇಸುತನ್ನನ್ನು ಕೂಡ ಒಂದಿಲ್ಲ ಒಂದು ದಿನ ಉದ್ಧರಿಸುತ್ತಾನೆ ಎನ್ನುವ ಬಲವಾದ ನಂಬಿಕೆ ಅವಳದು. ಆ ಕ್ಯಾಲೆಂಡರದಲ್ಲಿ ಡಿಶೆಂಬರ 1980 ಎಂದು ಅಚ್ಚಾದ ಕೊನೆ ತಿಂಗಳ ಪುಟದ ಬಣ್ಣವೆಲ್ಲ ಮಾಸಹೋಗಿ ಹೊಗೆ ಹಿಡದವರಂತೆ ಬಣ್ಣ ಬದಲಾಗಿ ಸ್ಪಷ್ಟವಾಗಿ ಕಾಣದ ದಿನಾಂಕಗಳ … Read more

ಮೂಕ ಕಹಳೆ: ಗಿರಿಜಾ ಜ್ಞಾನಸುಂದರ್

ಕೈಯಲ್ಲಿ ಮಿಠಾಯಿ ಡಬ್ಬಿ ಹಿಡಿದು ಅಮ್ಮನ ಬಳಿ ಓಡಿ ಬಂದಳು ಆರತಿ, “ಅಮ್ಮ, ನಾನು     ಎಸ್ಎಸ್ಎಲ್ಸೀ ಪಾಸ್ ಆದೆ, ಫಸ್ಟ್ ಕ್ಲಾಸ್” ಎಂದು ಹೇಳುತ್ತಾ ಅಮ್ಮನ ಬಾಯಿಗೆ ಸಿಹಿಯನ್ನು ತುರುಕಿದ್ದಳು. ಅಮ್ಮನ ಖುಷಿಯನ್ನು ಅಮ್ಮ ತನ್ನ ಮುಗುಳ್ನಗೆಯಲ್ಲಿ ತಿಳಿಸಿದಳು. ಮನೆಯಲ್ಲಿ ಸಂಭ್ರಮ. ಒಂದು ವಾರವಾಗಿತ್ತು. ಯಾವ ಕಾಲೇಜು ಸೇರುವುದು, ಯಾವ ವಿಷಯ ಓದುವುದು ಎಂದು ಚರ್ಚೆ ನಡೆಯುತ್ತಿತ್ತು. ಆರತಿಯ ಅಜ್ಜಿ ಮನೆಗೆ ಬಂದರು. ಅಜ್ಜಿಗೂ ಸಿಹಿ ಕೊಟ್ಟದಾಯಿತು, ಸಂತೋಷ ಹಂಚಿದ್ದಾಯಿತು. ಆದರೂ ಅಜ್ಜಿ ಯಾಕೋ ಸಂತೋಷದಲ್ಲಿದ್ದಂತಿರಲಿಲ್ಲ. ಆರತಿಯ … Read more

ಕಾಣೆಯಾದವರು !!!: ಸತೀಶ್ ಶೆಟ್ಟಿ ವಕ್ವಾಡಿ

“ಸಾರ್, ಸಾರ್, ನಾಗೇಶ್ ಮೇಸ್ಟ್ರು ಕಾಣೆಯಾಗಿದ್ದರಂತೆ !!.” ಬೆಳ್ಳಂ ಬೆಳಿಗ್ಗೆ ಪ್ರಾಂಶುಪಾಲರ ಕಚೇರಿಗೆ ಎದುರುಸಿರು ಬಿಡುತ್ತಾ ನುಗ್ಗಿದ ಕಾಲೇಜು ಕ್ಲರ್ಕ್ ರೂಪ ಗಾಬರಿ ಮತ್ತು ದುಗುಡದಿಂದ ಹೇಳಿದಾಗ, ಪ್ರಾಂಶುಪಾಲರಾದ ನಾರಾಯಣ ಉಪಾಧ್ಯಾಯರಿಗೆ ಜೀವ ಬಾಯಿಗೆ ಬಂದಂತಾಯಿತು. ಆಗ ತಾನೆ ಕಾಲೇಜಿಗೆ ಬಂದು ತಮ್ಮ ಛೇಂಬರಿನ ದೇವಮೂಲೆಯಲ್ಲಿದ ದೇವರ ಫೋಟೋಕ್ಕೆ ಹೂ ಹಾರಹಾಕಿ, ಉದುಕಡ್ಡಿ ಹಚ್ಚುತ್ತಿದ್ದವರಿಗೆ ರೂಪ ಹೇಳಿದ ವಿಷಯ ಬರಸಿಡಿಲು ಬಡಿದಂತಾಯಿತು. ಕೈಲಲ್ಲಿದ್ದ ಉದುಕಡ್ಡಿಯನ್ನು ಅಲ್ಲೆ ಬಿಟ್ಟು ಸೀದಾ ಸಿಟಿಗೆ ಬಂದು ಕೂತ ಉಪಾಧ್ಯಾಯರು ಗಾಬರಿಗೆ ಪಕ್ಕದಲ್ಲಿದ್ದ … Read more

ಕಾಮಾಟಿಪುರದ ರಾಣಿ: ಜೆ.ವಿ.ಕಾರ್ಲೊ

ಇಂಗ್ಲಿಷಿನಲ್ಲಿ: ಎಸ್.ಹುಸೇಯ್ನ್ ಝೈದಿ/ ಜೇನ್ ಬೋರ್ಜೆಸ್ ಕನ್ನಡಕ್ಕೆ: ಜೆ.ವಿ.ಕಾರ್ಲೊ ಅವಳಿಗೆ ವಧುವಿನಂತೆ ಶೃಂಗರಿಸಿ ಮಂಚದ ಮೇಲೆ ಕುಳ್ಳಿರಿಸಿ ಸುತ್ತ ಗುಲಾಬಿ ಪಕಳೆಗಳನ್ನು ಹರವಲಾಗಿತ್ತು. ತುಟಿಗಳಿಗೆ ಗಾಢವಾದ ಕೆಂಪು ಬಣ್ಣವನ್ನು ಬಳಿದು ದೊಡ್ಡದಾದ ಮೂಗುತಿಯನ್ನು ತೊಡಿಸಿದ್ದರು. ಆ ಕೋಣೆಯಲ್ಲಿ ಪುರಾತನ ಗ್ರಾಮಫೋನೊಂದು ಹಳೆ ಹಿಂದಿ ಹಾಡನ್ನು ಪದೇ ಪದೇ ಹಾಡುತ್ತಿತ್ತು. ಮೊದಲರಾತ್ರಿಯ ವಾತಾವರಣವನ್ನು ಅಲ್ಲಿ ಸೃಷ್ಟಿಸಲಾಗಿತ್ತು. ಆದರೆ ಮಧುಗೆ ಇದಾವುದರ ಪರಿವೆಯೂ ಇರಲಿಲ್ಲ. ತನ್ನನ್ನೇಕೆ ಇಲ್ಲಿ ತಂದು ಕುಳ್ಳಿರಿಸಿದ್ದಾರೆಂದು ಅವಳಿಗಿನ್ನೂ ಅರ್ಥವಾಗಿರಲಿಲ್ಲ. ಒಮ್ಮೆಲೆ ಬಾಗಿಲು ತೆರೆದು ಒಳಗೆ ಬಂದ … Read more