ಬೆಳೆದಿದೆ ನೋಡಾ ಬೆಂಗಳೂರು ನಗರ!!!: ಅಖಿಲೇಶ್ ಚಿಪ್ಪಳಿ

ಹಿಂದಿನ ಭಾನುವಾರ ಸಾಗರದಲ್ಲಿನ ಸ್ವಸಹಾಯ ಗುಂಪಿನ ವಾರ್ಷಿಕ ಸಭೆ ಕರೆದಿದ್ದರು. ಪೇಟೆಯಲ್ಲಿ ತರಕಾರಿ ಬೆಳೆಯುವ ಬಗ್ಗೆ ಮಾಹಿತಿ ನೀಡಿ ಎಂಬುದು ಅವರ ಕೋರಿಕೆ. ವಾಯುಭಾರ ಕುಸಿತದಿಂದಾಗಿ ಅಂದು ಜೋರು ಮಳೆಯಿತ್ತು, ಕರೆಂಟು ಇರಲಿಲ್ಲ. ಅದೊಂದು ಸುಮಾರು 50-60 ಜನರಿರುವ ಚಿಕ್ಕ ಸಭೆ.  ಸಭೆಯ ವಿಧಿ-ವಿಧಾನಗಳು ಮುಗಿದ ಮೇಲೆ ಮಾತಿಗೆ ಶುರುವಿಟ್ಟುಕೊಂಡಿದ್ದಾಯಿತು. ಆ ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಮೂಲತ: ಕೃಷಿ-ಕುಟುಂಬದವರೇ ಆಗಿದ್ದರು. ನಿಮ್ಮ ವಂಶವಾಹಿನಿಯಲ್ಲೇ ಕೃಷಿ-ತೋಟಗಾರಿಕೆಗೆ ಬೇಕಾಗುವ ಅಂಶವಿದೆ ಆದ್ದರಿಂದ ತರಕಾರಿ ಬೆಳೆಯುವ ಬಗ್ಗೆ ಆಮೇಲೆ ಮಾತನಾಡೋಣ ಎಂದು, … Read more

ಮಾಸದ ಸೋಣೆ – ಶ್ರಾವಣದ ಸೋಣೆ ಆರತಿ: ಬೆಳ್ಳಾಲ ಗೋಪಿನಾಥ ರಾವ್

ಆಶಾಢ ಕಳೆದರೆ ಬರುವುದೇ ಶ್ರಾವಣ ಮಾಸ. ಆಗಾಗ್ಗೆ ಹನಿ ಹನಿದು ಒಮ್ಮೊಮ್ಮೆ ಬೀಡು ಭಿರುಸಾಗಿ ಬೀಳೋ ಮಳೆ ಕೂಡಾ ವಾತಾವರಣವನ್ನು ಆಮೋದ ಕಣವನ್ನಾಗಿ ಮಾಡಿ ಇಡೀ ಭೂರಮೆಯೇ ಹಸಿರುಟ್ಟು ಕಂಗೊಳಿಸೊ ಕಾಲವನ್ನಾಗಿ ಪರಿವರ್ತಿಸಿ ಬಿಡುತ್ತೆ, ಅದರ ಜತೆ ಸಂಘ ಜೀವಿ ಮಾನವನಿಗೂ ತನ್ನ ಸಹೃದಯತೆಯ ಸಂಚಲನೆಯ ಪಾಠ ಹೇಳೊಕೊಡೊದರಲ್ಲಿರುವ ವಸುಂಧರೆ…ಪ್ರಕೃತಿಯ ಮರ ಗಿಡ ಬಳ್ಳಿಗಳು ನಲಿ ನಲಿದು ಪ್ರತಿ ಕ್ಷಣವನ್ನು ಸವಿಯುತ್ತಾ ನಮ್ಮೆಲ್ಲರನ್ನೂ ಇವರೆಲ್ಲರ ಋಣಿಯನ್ನಾಗಿಸಿ ಬಿಡುತ್ತವೆ. ನೋಡಿದಷ್ಟೂ ಉದ್ದಕ್ಕೆ ಕಣ್ಮನ ತಣಿಸುವ ಹಸಿರು ಉಲ್ಲಾಸ ನೀಡುತ್ತದೆ. … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಸತ್ತ ಹಿರಿಯರಿಗೆ ಗೌರವ ಸೂಚಿಸುವುದು ಚೀನೀ ಮಹಾಶಯನೊಬ್ಬ ತನ್ನ ಹಿರಿಯರ ಸಮಾಧಿಗಳ ಫಲಕಗಳ ಎದುರು ಹಣದ ನೋಟ್‌ಗಳನ್ನು ಸುಡುತ್ತಿರುವುದನ್ನು ಪಾಶ್ಚಾತ್ಯನೊಬ್ಬ ನೋಡಿ ಕೇಳಿದ, “ಕಾಗದದ ಹಣದ ಹೊಗೆಯಿಂದ ನಿಮ್ಮ ಹಿರಿಯರು ಹೇಗೆ ಲಾಭ ಪಡೆಯಲು ಸಾಧ್ಯ?” ಚೀನೀಯನು ಉತ್ತರಿಸಿದ, “ನೀವು ಸಮಾಧಿಯ ಮೇಲೆ ಹೂವುಗಳನ್ನು ಇಟ್ಟಾಗ ಮರಣಿಸಿದ ನಿಮ್ಮ ಹಿರಿಯರು ಹೇಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೋ ಅದೇ ರೀತಿ.” ***** ೨. ದಾವಾ ಹಾಕು, ಹಸಿವಿನಿಂದ ಸಾಯಿಸಬೇಡ ರಾಜನೀತಿಜ್ಞ ಡೇನಿಯಲ್‌ ವೆಬ್‌ಸ್ಟರ್‌ ಕುರಿತಾದ ದಂತಕತೆ ಇದು. … Read more

ಸೆಲ್ಫಿ ಲೋಕದಲ್ಲಿ…: ರಾಘವೇಂದ್ರ ತೆಕ್ಕಾರ್

ಸ್ಮಾರ್ಟ್ ಪೋನ್ ಯುಗದ ಈ ದಿನಗಳಲ್ಲಿ ಬದುಕೆಂಬುದು ಸೆಲ್ಫಿ ಮಯವಾಗಿದೆ. ಇತ್ತೀಚಿನ ದಿನಗಳಲ್ಲಿ ಏನೇನೊ ಕಾರಣಗಳಿಂದ ಈ ಸೆಲ್ಫಿ ಅನ್ನೊದು ಪ್ರಚಲಿತದಲ್ಲಿರೊ ಸುದ್ದಿ. ಆದೇನೆ ಇರಲಿ ಹೊರ ಚಿತ್ರ ಚೆನ್ನಾಗಿರಬೇಕು ಎಂಬ ತುಡಿತದಲ್ಲಿ ಮನಸ್ಸಿಗೆ ಸೆಲ್ಫಿ ಹಿಡಿಯುವ ದಿನಗಳು ಕಳೆದೆ ಹೋಗಿವೆಯೇನು? ಎಂಬ ಆತಂಕ ಇಂದಿನ ಯುವ ಸಮೂಹವನ್ನು ನೋಡಿದಾಗ ಅನಿಸುತ್ತಿದೆ. ಒಬ್ಬ ಗೆಳೆಯ, ಅಕ್ಕ, ತಮ್ಮ, ಸಂಬಂಧಿಕ, ಗುರು ಹೀಗೆ ಎಲ್ಲಾ ಸಂಬಂಧಗಳ ರುಜುವಾತು ಸೆಲ್ಫಿ ಮೂಲಕನೆ ಧೃಢಿಕರಣಗೊಳ್ಳಬೇಕೆನಿಸುವ ಈ ಯುಗದಲ್ಲಿ ಮೇಲಿನ ಆತಂಕವು ಸಹಜ. … Read more

‘ಸೋಲು ಗೆದ್ದವನದ್ದು!’ ಕಾದಂಬರಿಯ ಒಂದು ಅಧ್ಯಾಯ: ಮಂಜು ಬನವಾಸೆ

ಅಮ್ಮ-ಅಪ್ಪ ಅದ್ಯಾರ ಕೈಕಾಲು ಹಿಡಿದು ದುಡ್ಡು ತಂದರೋ ಗೊತ್ತಿಲ್ಲ. ಫೀಸು ಎಷ್ಟೋ ಗೊತ್ತಿಲ್ಲ. ನನ್ನನ್ನು ಸಕಲೇಶಪುರದ ಗೌರ್ಮೆಂಟ್ ಪಿಯು ಕಾಲೇಜಿಗೆ ಅಡ್ಮಿಷನ್ ಮಾಡಿಸಲಾಗಿದೆ ಮತ್ತು ಮಡಿಕೆಯೊಂದಿಗೆ ನಾನೂ ಆಟ್ರ್ಸ್ ಫಸ್ಟ್ ಇಯರ್ ಪಿಯುಸಿಗೆ ಹೋಗುತ್ತಿದ್ದೇನೆ ಎಂದು ತಿಳಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಕಾಲೇಜಿನ ಮೊದಲ ದಿನ ಬಹುಶಃ ಅದು ಜುಲೈ 7ನೇ ತಾರೀಖಿರಬಹುದು ಎನ್ನಿಸುತ್ತದೆ. ಆಷಾಢದ ಗಾಳಿ ಜೋರಾಗಿ ಬೀಸುತ್ತಿತ್ತು. ನಮ್ಮ ಮನೆಗಳಂತೂ ಅಕ್ಷರಶಃ ಮಂಜಿನಲ್ಲಿ ಮುಳುಗಿ ಹೋಗಿದ್ದವು. ಮಳೆ ಸ್ವಲ್ಪ ಬಿಡುವು ನೀಡಿದಾಗ ಇದ್ದ ಒಂದು … Read more

ದಪ್ಪ, ಸಪೂರದ ನಡುವೆ: ಅಕ್ಷಯ ಕಾಂತಬೈಲು

ಮುಂಚೆ ದಪ್ಪ ಇದ್ದಿಯಲ್ಲಾ. ಈಗ ಎಂತ ಸಡನ್ ಆಗಿ ಸಪೂರ ಆದದ್ದು ಹೀಗೆ ಕೇಳಿದರು, ಸಂಬಂಧಿಕರೊಬ್ಬರು. ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ, ಸ್ವಲ್ಪ ತಡವರಿಸುತ್ತಾ ಅವರಿಗೆ ಹೇಳಿದೆ -ನಾನು ಅಷ್ಟೊಂದು ಸಪೂರ ಆಗಿದ್ದೀನಾ…? ಎಂದು. ಆ ಸಂಬಂಧಿಕರು ನನ್ನ ಮೈಕಟ್ಟಿನ ಬಗ್ಗೆ ಹೇಳಿದ್ದು ನಿಜ ಅನ್ನಿಸಿತು. ಏಕೆಂದರೆ ಈ ಮೊದಲು ಹಲವು ಗೆಳೆಯರು ನನಗೆ ಅದೇ ರೀತಿಯಾಗಿ ಹೇಳಿದ್ದರು. ಆದರೆ ಹೇಳಿದ ಕ್ರಮ ಮಾತ್ರ ಬೇರೆ ಇತ್ತು. ಏನೋ ಲವ್ ಫೆಲ್ಯೂರಾ, ಸಿಕ್ಕಾಪಟ್ಟೆ ಓದಿದರೆ ಹೀಗೇ ಆಗೋದು, … Read more

ಶಾಂತಿ ಮಂತ್ರವೇ?: ಅಖಿಲೇಶ್ ಚಿಪ್ಪಳಿ

ಬಾಹ್ಯಾಕಾಶ ವಿಜ್ಞಾನದಲ್ಲಿ ಎಲ್ಲಾ ದೇಶಗಳೂ ಪ್ರಗತಿ ಸಾಧಿಸಿವೆ. ಹವಾಮಾನ ಮನ್ಸೂಚನೆಗಾಗಿಯೇ ಭಾರತವೂ ಅಂತರಿಕ್ಷದಲ್ಲಿ ಬಾಹ್ಯಾಕಾಶ ನೌಕೆಗಳನ್ನು ಏರಿಸಿಟ್ಟಿದೆ. ಅಲ್ಲಿಂದಲೇ ಹದ್ದುಗಣ್ಣಿನಿಂದ ಭುವಿಯ ಸಕಲ ಆಗು-ಹೋಗುಗಳನ್ನು ಈ ನೌಕೆಗಳು ಹದ್ದುಗಣ್ಣಿನಿಂದ ವೀಕ್ಷಿಸಿ ನಮಗೆ ಕರಾರುವಕ್ಕು ವರದಿ ನೀಡುತ್ತವೆ. ಲಾಗಾಯ್ತಿನಿಂದ ನಮ್ಮ ಹವಾಮಾನ ಇಲಾಖೆ ಸಾಲು-ಸಾಲು ವೈಪಲ್ಯಗಳನ್ನು ಕಾಣುತ್ತಿದೆ. ಜೂನ್ ಹತ್ತಕ್ಕೆ ಬರುವ ಮಳೆಗಾಲ ಈ ಬಾರಿ ಜೂನ್ 1ಕ್ಕೆ ಬರುತ್ತದೆ ಎಂದು ವರದಿ ಮಾಡಿತು. ಅಂತೆಯೇ ಮಳೆಯೂ ಗುಡುಗು-ಸಿಡಿಲಬ್ಬರದ ನಡುವೆ ಧೋ ಎಂದು ಸುರಿಯಿತು. ಹವಾಮಾನ ವರದಿಯನ್ನು ಅಣಕಿಸುವಂತೆ … Read more

ಮೂವರ ಕವನಗಳು: ಬಿದಲೋಟಿ ರಂಗನಾಥ್, ರಶ್ಮಿ ಹೆಜ್ಜಾಜಿ, ಅಕ್ಷತಾ ಕೃಷ್ಣಮೂರ್ತಿ ಬೇಲೇಕೇರಿ.

ವಿಳಾಸವಿಲ್ಲದ ಮನುಷ್ಯ ದಿಕ್ಕಿಲ್ಲದ ಬದುಕ ಸವೆಸಲು ಎಣಗಾಡುತ ದೇಕಾಡಿ ಹರಕು ಬಟ್ಟೆ ಮುರಕು ಜೀವ ಹೊತ್ತು ನೀರು ನೆರಳಿಲ್ಲದ ಜಾಗದಲಿ ಚಳಿಯಲ್ಲಿ ಗೂಡರಿಸಿ ನ್ಯೂವ್ಸ್ ಪೇಪರ ಹೊದ್ದು  ಮಲಗಿ, ಜೋಕರಿಸುವ ನೊಂದ ಬೇಸತ್ತ ಜೀವಕು ತನ್ನ ಜೀವದ ಮೇಲೆ ಎಲ್ಲಿಲ್ಲದ ಆಸೆ ಅನ್ನ ಹಾಕುವ ಸಿಲವಾರ ತಟ್ಟೆಯಲಿ ನೊಣ ಮುಕರಿ ಗುಂಯ್ ಗುಟ್ಟುತ್ತಿವೆ ಅಳಸಲು ಅನ್ನಕೆ ಆ ದೇಕುವ ಜೀವ ಮನೆ ಮನೆಯ ಗೇಟ ಅಳ್ಳಾಡಿಸುವ ಪರಿ ನೋಡಿ ಜೀವ ಹಿಂಡುತಿದೆ ಯಾರೆತ್ತ ಮಗನೋ ಪಾಪ ಸೊರಗಿ … Read more

ಮತ್ತೊಂದು ಹೊಟ್ಟೆ: ಪ್ರಶಸ್ತಿ

ಎಲ್ರಿಗೂ ಒಂದು ಹೊಟ್ಟೆ ಇರೋದು ಗೊತ್ತು. ಈ ಮತ್ತೊಂದು ಹೊಟ್ಟೆ ಯಾವುದು ಅಂದ್ರಾ ? ಒಂದು ಹೊಟ್ಟೆ ತುಂಬಿಸೋದೇ ಕಷ್ಟ, ಇನ್ನು ಈ ತರ ಮತ್ತೊಂದು ಹೊಟ್ಟೆ ಏನಾದ್ರೂ ಇದ್ರೆ ಅದನ್ನು ಹೇಗಪ್ಪಾ ತುಂಬಿಸೋದು ಅಂದ್ರಾ ? ತಾಯಿಯ ಹೊಟ್ಟೆಯೊಳಗಿರುವ ಮಗುವಿನ ಹೊಟ್ಟೆಯನ್ನು ಮತ್ತೊಂದು ಹೊಟ್ಟೆ ಅಂತೇನಾದ್ರೂ ಕರೆಯೋಕೆ ಹೊರಟಿದ್ದೀನಿ ಅಂತೇನಾದ್ರೂ ವಿಚಿತ್ರ ಆಲೋಚನೆ ಬಂತಾ ? ಊಟ ಹೆಚ್ಚಾಗಿ ಹೊಟ್ಟೆ ಕೆಳಗಾಗಿ ಮಲಗೋಕಾಗದೇ ಇದ್ದಾಗೆಲ್ಲಾ ಹೆತ್ತವ್ವ ನನ್ನ ಹೊತ್ತಾಗ ಹೇಗೆ ಹೊಟ್ಟೆ ಕೆಳಗೆ ಮಲಗಲಾಗದೇ ಬೋರಲು … Read more

ಸಾವ ಅರಸುತ್ತಾ……..: ರೋಷನ್ ಪೂಜಾರಿ

ಮರಳನ್ನ ಅಗೆದು ಅಗೆದು ರಾಶಿ ಮಾಡಿದ ಕಡೆಯಲ್ಲಿ  ನಿಧಾನವಾಗಿ ಹತ್ತುತ್ತಿರುವ, ಇರುವೆಗಳ ಸಾಲನ್ನ ತುಂಡರಿಸಿ ಹೋಗಿದ್ದು ಸಮುದ್ರದ ನೀರು …. ಅದೆಷ್ಟೋ ಬಾರಿ ಸಾರಿಕಾಳ ಕಾಲುಗಳನ್ನ ಮುಟ್ಟಿ ಹಿಂತಿರುಗಿ ಹೋದರು ಸಹ, ಸಮುದ್ರವನ್ನ ಕ್ಷಮಿಸುವ ಮನಸ್ಸು ಅವಳಿಗಿಲ್ಲವಾಗಿತ್ತು…..ಮದುವೆಯ ನಂತರದ ದಿನಗಳು , ಅವಳು ತನ್ನ ಜೀವನದಲ್ಲಿ ಕಳೆದ ಅತ್ಯಮೂಲ್ಯ ಕ್ಷಣ. ಹನಿಮೂನಿಗೆ ಒಂದು ವಾರ ಮುಂಚೆಯೇ ಇದ್ದ ಖುಷಿ, ಹನಿಮೂನು ಮುಗಿಸಿದ ಒಂದು ವಾರದ ನಂತರ ಇರಲಿಲ್ಲ. ವಿಧಿವಶರಾಗಿದ್ದ ತನ್ನ ಗಂಡನ ನೆನಪನ್ನ ಮರೆಯಲು, ಸಮುದ್ರದ ತಟಕ್ಕಿಂತ ಬೇರೆ … Read more

ಪ್ರೀತಿಯಿ೦ದ “ಜಕ್ಕಣ್ಣ” ಎ೦ದು ಕರೆಸಿಕೊಳ್ಳುವ ಟಾಲಿವುಡ್ ಚಿತ್ರ ನಿರ್ದೇಶಕ: ಸುನಿಲ್ ಕುಮಾರ್

ಇವರ ಹೆಸರು ಎಸ್. ಎಸ್ .ರಾಜಮೌಳಿ ( ಕೊಡುರೂ ಶ್ರೀಶೈಲ ಶ್ರೀ ರಾಜಮೌಳಿ). ಜಕ್ಕಣಾಚಾರ್ಯರು ಅದ್ಬುತವಾಗಿ ಶಿಲ್ಪಗಳನ್ನು ಕೆತ್ತಿದರೆ. ಈ ಅಧುನಿಕ ಜಕ್ಕಣಾಚಾರ್ಯರು ಅದ್ಬುತವಾಗಿ ಚಿತ್ರಗಳನ್ನು ನಿರ್ಮಿಸುತ್ತಾರೆ. ಟಾಲಿವುಡ್ ನಲ್ಲಿ ಇವರನ್ನು ಪ್ರೀತಿಯಿ೦ದ " ಜಕ್ಕಣ್ಣ" ಎ೦ದು ಕರೆಯುತ್ತಾರೆ. ಭಾರತ ಚಿತ್ರರ೦ಗವನ್ನು ವಿಶ್ವಮಟ್ಟಕ್ಕೆ ಎತ್ತರಿಸಿದ ನಿರ್ದೇಶಕರು. ಇವರ ಎಲ್ಲ ಚಿತ್ರಗಳು ಸೂಪರ್ ಹಿಟ್ಟುಗಳೆ. ಇವರು ಟಾಲಿವುಡ್ ನಲ್ಲೆ ಅತಿ ಹೆಚ್ಚು ಬೇಡಿಕೆಯ ಹಾಗೂ ಜನಪ್ರಿಯ ನಿರ್ದೇಶಕರು. ಇವರ ಎಲ್ಲ ಚಿತ್ರಗಳು ಭಾರತೀಯ ಭಾಷೆಗಳಾದ ತಮಿಳು, ಬೋಜ್ ಪುರಿ, ಕನ್ನಡ … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಜಿಪುಣಾಗ್ರೇಸರ ಅಬರ್‌ಡೀನ್‌ವಾಸೀ ಜಿಪುಣನೊಬ್ಬ ಗಾಲ್ಫ್‌ ಕಲಿಯಲೋಸುಗ ಗಾಲ್ಫ್‌ಕ್ಲಬ್‌ನ ಸದಸ್ಯನಾದ. ಅವನು ಆಟವಾಡಲು ಉಪಯೋಗಿಸುವ ಚೆಂಡು ಬೇರೆ ಯಾರಿಗಾದರೂ ಸಿಕ್ಕಿದರೆ ಅವರು ಅದನ್ನು ಕ್ಲಬ್‌ನ ಕಛೇರಿಗೆ ತಲುಪಿಸಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಅದರ ಮೇಲೆ ಅವನ ಹೆಸರಿನ ಆದ್ಯಕ್ಷರಗಳನ್ನು.ಬರೆಯುವಂತೆ ತರಬೇತುದಾರ ಸೂಚಿಸಿದ. ಚೆಂಡು ಕಛೇರಿಗೆ ತಲುಪಿದರೆ ಅದನ್ನು ಕಛೇರಿಯ ಸಿಬ್ಬಂದಿಯಿಂದ ಆತ ಮರಳಿ ಪಡೆಯಬಹುದಾಗಿತ್ತು. ಈ ಸಲಹೆಯಲ್ಲಿ ಆಟ ಕಲಿಯಬಂದವನಿಗೆ ವಿಶೇಷ ಆಸಕ್ತಿ ಮೂಡಿತು. ಅವನು ತರಬೇತುದಾರನಿಗೆ ಹೇಳಿದ, “ಒಳ್ಳೆಯ ಸಲಹೆ. ನೀವೇ ಅದರ ಮೇಲೆ ನನ್ನ … Read more

ತಿನ್ನುವ ಅನ್ನಕ್ಕೆ ಕಲ್ಲು ಹಾಕುವ ಮಂದಿ ಮತ್ತು ಇಂಗದ ಹಸಿವು: ಜೈಕುಮಾರ್ ಹೆಚ್.ಎಸ್.

ದೇಶದಲ್ಲಿ ಯಾರ ಹಸಿವು ಇಂಗುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುವ ಮುನ್ನ ನಮ್ಮ ರಾಜ್ಯದ ಬಹುಸಂಖ್ಯಾತ ಜನತೆಯ ಪರಿಸ್ಥಿತಿಯತ್ತ ಕಣ್ಣು ಹಾಯಿಸೋಣ. 18 ವರ್ಷದೊಳಗಿನ ಲಕ್ಷಾಂತರ ಮಕ್ಕಳು ಇಂದಿಗೂ ಶಾಲೆಯಿಂದ ಹೊರಗುಳಿದಿವೆ. ಯೂನಿಸೆಫ್ ಸಂಸ್ಥೆಯ ಪ್ರಕಾರ ಶೇ. 50 ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ 3 ವರ್ಷದೊಳಗಿನ ಮಕ್ಕಳ ಪೈಕಿ 10ರಲ್ಲಿ 8 ಮಕ್ಕಳು ರಕ್ತಹೀನತೆ ಹೊಂದಿದ್ದರೆ, 5 ವರ್ಷದೊಳಗಿನ ಮಕ್ಕಳ ಪೈಕಿ 10ರಲ್ಲಿ 4 ಮಕ್ಕಳ ಬೆಳವಣಿಗೆ ಸರಿಯಾದ ಆಹಾರ ಪೋಷಣೆಯಿಲ್ಲದೆ ಕುಂಠಿತಗೊಂಡಿದೆ.  ನಮ್ಮ ರಾಜ್ಯವೂ … Read more

ದೋನಿಯ ತಪ್ಪು ಯಾವುದು ?: ರಘು ಕೆ.ಟಿ.

ಭಾರತ ತಂಡಕ್ಕೆ 2011 ರಿಂದ ದೋನಿ ನಾಯಕತ್ವ ವಹಿಸಿಕೊಂಡಾಗಿನಿಂದ ಎಲ್ಲ ಮಾದರಿ ಕ್ರಿಕೆಟ್ನಲ್ಲಿ ಭಾರತವು ಅನೇಕ ಯಶಸ್ವಿಗಳನ್ನು ಗಳಿಸಿ, ವಿಶ್ವ ದರ್ಜೆಯ ತಂಡವಾಗಿ ಹೊರಹೊಮ್ಮಿತು. ದೋನಿ ಮಾಡಿದ ಹಲವಾರು ತಂತ್ರಗಾರಿಕೆ, ಬದಲಾವಣೆಗಳು, ಕೈಗೊಂಡ ನಿರ್ಧಾರಗಳಿಂದ ಭಾರತವು 20-20 ವಿಶ್ವಕಪ್, ವಿಶ್ವಕಪ್-2011 ಸೇರಿದಂತೆ ಎಲ್ಲ ಪ್ರಮುಖ ಪಂದ್ಯಾವಳಿಗಳನ್ನು ಜಯಿಸಿ ವಿಶ್ವ ಖ್ಯಾತಿಯನ್ನು ಗಳಿಸಿತ್ತು. ಆಗ ಎಲ್ಲ ಪತ್ರಿಕಾ ಮಾಧ್ಯಮದವರು, ಹಿರಿಯ ಆಟಗಾರರು ದೋನಿಯ ನಿರ್ಧಾರಗಳಿಗೆ ಬೆಂಬಲ ಮತ್ತು ಶ್ರೇಷ್ಠ ನಾಯಕರೆಂದು ಹಾಡಿ ಹೊಗಳಿದರು. ಆದರೆ ಬಾಂಗ್ಲಾ ದೇಶದ ವಿರುದ್ಧ … Read more

ನಾನೂ ನಾಚಿದೆ, ನಾಚಿಕೆಯೆಂದು ತಿಳಿಯದೆ: ಚೈತ್ರಾ ಎಸ್.ಪಿ.

ಗೆಳೆಯನೊಬ್ಬ ಮೆಸ್ಸೇಜ್ ಮಾಡಿದ್ದ, "ಮದ್ವೆಗೆ ಹುಡುಗನ್ನೇನಾದ್ರು ನೋಡ್ತಾ ಇದಾರೇನೆ ??", "ಇಲ್ಲಪ್ಪಾ", "ಯಾಕೋ??!!"ಎಂದು ಮರು ಪ್ರಶ್ನೆ ಹಾಕಿದ್ದೆ. "ಸುಮ್ನೆ ಕೇಳ್ದೆ, ನಾಚ್ಕೊಂಡ್ಯೇನೇ ??"ಎಂದಿದ್ದ ಆತ. ನನಗೆ ಸಿಕ್ಕಿದ್ದ ಹೊಸ ಗೆಳೆಯ. ನನ್ನ ಬಗ್ಗೆ ಅಷ್ಟು ತಿಳಿದಿರಲಿಲ್ಲ. ನನ್ನ ಹಳೆಯ ಫ್ರಿಂ ಡ್ಸ್ ಅಂತ ಕರೆಸಿಕೊಂಡವರೆಲ್ಲರೂ, " ನೀನೂ ನಾಚ್ಕೊತೀಯೇನೇ ??!! ಹುಡ್ಗೀರ್ ಮಾತ್ರ ಕಣೇ ನಾಚ್ಕೊಳೋದು ", ಅಂತ ಹೇಳ್ತ ಇದ್ರೇ ವಿನಃ ಯಾರೂ ಈ ಥರ ಕೇಳಿರ್ಲಿಲ್ಲ. ಉತ್ತರಿಸುವ ಗೊಂದಲದಲ್ಲಿದ್ದ ನನ್ನ ಭಾವ ಸರಪಳಿ ಇನ್ನೆಲ್ಲೋ … Read more

ಒಳಗೊಂದು ಆರದ ಹಣತೆ ಹಚ್ಚಿಡುವವಳು: ಅನುರಾಧ ಪಿ. ಸಾಮಗ

ಮೊನ್ನೆ ಅಮ್ಮಂದಿರ ದಿನದಂದು ನನ್ನ ಕಂದಮ್ಮ ನನಗೊಂದು ಕಾರ್ಡ್ ಮಾಡಿ ತಂದುಕೊಟ್ಟಾಗ ಕಣ್ಣಲ್ಲಿ ನೀರಾಡಿತ್ತು. ಅವಳಿಗೆ ತೋರಿಸಬಾರದೆಂದು ಕಣ್ತಪ್ಪಿಸಿದರೂ ಬಾಗಿ ಕಣ್ಣೊಳಗಿಣುಕಿ ಖಾತ್ರಿ ಪಡಿಸಿಕೊಂಡವಳೇ, ಇನ್ನೊಂದು ಮುತ್ತಿಕ್ಕಿ "ಐ ಮೀನ್ ಇಟ್ ಅಮ್ಮಾ.." ಅಂದಳು. "ಅಮ್ಮಾ, ನೀನು ಜಗತ್ತಿನ ಎಲ್ಲ ಅಮ್ಮಂದಿರಿಗಿಂತ ಶ್ರೇಷ್ಠ, ನಾನು ನಿನ್ನನ್ನು ತುಂಬಾ ಅಂದರೆ ತುಂಬಾ, ಜಗತ್ತಿನ ಎಲ್ಲದಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ.. " ಇದೇ ಆ ಹಾಳೆಯ ಮೇಲಿದ್ದುದರ ಸಾರಾಂಶ. ಎಲ್ಲ ಮಕ್ಕಳೂ ಬರೆಯುವಂಥದ್ದೇ. ಆದರೆ ಆ ಇನ್ನೊಂದು ಸಾಲು ಓದಿ, ಒಮ್ಮೆ … Read more

ವಿಶ್ವ ಯೋಗ ದಿನ: ಅನಿತಾ ನರೇಶ್ ಮಂಚಿ.

ಅವರ ಹೆಸರು ಪಾರ್ವತೀಪತಿಯೆಂದು ಗೊತ್ತಿದ್ದದ್ದು ಪೋಸ್ಟ್ ಮ್ಯಾನ್ ಮತ್ತು ಅವರು ಕೆಲಸ ಮಾಡುತ್ತಿದ್ದ ಆಫೀಸಿನ ಬಾಸ್ ಇಬ್ಬರಿಗೇ..  ಇವರೂ ಕೂಡಾ ಆ ಹೆಸರನ್ನು ಕೊಂಚ ತಿರುಚಿ ಪರ್ವತ ಪತಿ ಎಂದು ನಗೆಯಾಡುತ್ತಿದ್ದುದು ಪಾರ್ವತೀಪತಿಯವರಿಗೆ ತಿಳಿಯದ ವಿಷಯವೇನೂ ಆಗಿರಲಿಲ್ಲ. ನಮಗಂತೂ ಅವರ ಹೆಸರು ನಾಮ್ ಕೇ ವಾಸ್ತೆ ಮಾತ್ರ ಬೇಕಾಗುವುದರಿಂದ  ನಾವು  ಆ ಹೆಸರನ್ನು ಬಬ್ಬಲ್ ಗಮ್ಮಿನಂತೆ ಅಷ್ಟುದ್ದ ಎಳೆಯದೇ ಪಿ ಪಿ ಎಂದು ಶಾರ್ಟ್ ಆಗಿ ಕರೆಯೋಣ.   ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಈಗ ಹಲವು ವಿಷಯಗಳಲ್ಲಿ … Read more

ಹಿಮಪಾತ: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಇವತ್ಯಾಕೆ ಇಷ್ಟೊಂದು ಬೇಗ ಎಚ್ಚರ ಆಯ್ತು ಅಂತ ಗೊತ್ತಾಗಲಿಲ್ಲ ವೆಂಕಟ್ ಗೆ. ಬೇಗ ಎದ್ದು ಏನು ಮಾಡುವುದೆಂದು ಒಂದು ಕ್ಷಣ ಅವನಿಗೆ ಹೊಳೆಯಲಿಲ್ಲ. ಬೆಂಗಳೂರಿನಲ್ಲಾಗಿದ್ದರೆ ಎದ್ದ ಕೂಡಲೇ ಬಾಗಿಲಿಗೆ ಸಿಗಿಸಿರುತ್ತಿದ್ದ ಪೇಪರ್ ಎತ್ತಿಕೊಂಡು ಓದಬಹುದಿತ್ತು.  ಈ ಪರದೇಶದಲ್ಲಿ ಹಾಗಿಲ್ಲವಲ್ಲ. ಸುದ್ದಿ ತಿಳಿಯಬೇಕೆಂದರೆ  ಒಂದೋ ಟೀವಿ, ಸ್ಮಾರ್ಟ್ ಫೋನ್, ಇಲ್ಲವೇ ಟಚಿಠಿಣoಠಿ ನಲ್ಲೆ ನೋಡಿ ತಿಳಿಯಬೇಕು. ಅವನಿಗೆ ಅಲ್ಲಿಯ ಸ್ಥಳೀಯ ಸುದ್ದಿಯ ತಿಳಿದುಕೊಳ್ಳುವ ಬಗ್ಗೆ ಉತ್ಸಾಹವೇನಿರಲಿಲ್ಲ. ಇಲ್ಲಿನ ಸುದ್ದಿಗಳೂ ಸುದ್ದಿಗಳೇ? ಒಂದು ಸಣ್ಣ ಬಿರುಗಾಳಿ ಬಂದರೇನೇ ಇಡೀ … Read more

ನಾಲ್ವರ ಕವನಗಳು: ವಿನಾಯಕ ಭಟ್, ಇಂದುತನಯ, ಯದುನಂದನ್ ಗೌಡ ಎ.ಟಿ., ಶ್ರೀದೇವಿ ಕೆರೆಮನೆ

ಅದೇ ರಾಗ, ಬೇರೆ ಹಾಡು.. (ಧಾಟಿ: ಚೆಂದುಟಿಯ ಪಕ್ಕದಲಿ; ಚಿತ್ರ: ಡ್ರಾಮ) ಕಂಗಳಲಿ ಕೋರೈಸೊ ಬೆಳದಿಂಗಳಾ ಹೊಳಪ ಚಂದಿರನ ಮೊಗದಲ್ಲೂ ನಾ ಕಾಣೆ; ಅಂಗಳದಿ ನೀ ಬರೆದ ರಂಗೋಲಿಯ ಹಾಗೇ ಬಾಳನ್ನು ಸಿಂಗರಿಸು ಓ ಜಾಣೆ; ಬರೆದಿರುವೆ ಈ ಗೀತೆ ನಿನಗಾಗಿ.. ಮೂಡಿರುವೆ ನೀ ಇದರ ಶೃತಿಯಾಗಿ.. ಹಾಡೋಣವೇ ಒಮ್ಮೆ ಜೊತೆಯಾಗಿ? ಎತ್ತರದಿ ಅರಳಿರುವ ಚಾಚೊ ಕೈಯ್ಯಿಗೆ ಸಿಗದ ಪಾರಿಜಾತದ ಹೂವು ಬಲು ಚಂದವಂತೆ; ನೀ ದೂರ ಸರಿದಂತೆ ನೆನಪುಗಳು ಸನಿಹಾಗಿ ಗಾಢವಾಗುವ ಮೋಹಕೆ ಕೊನೆಯೆಂಬುದುಂಟೆ? ಎಡರುಗಳು … Read more

ತಾಜ್ ಕಥೆ-ಆಗ್ರಾದ ವ್ಯಥೆ: ಅಖಿಲೇಶ್ ಚಿಪ್ಪಳಿ

1990ರ ಜೂನ್ ತಿಂಗಳ ಒಂದು ದಿನ ಮುಂಜಾವು. ಏರ್‍ಪೋರ್ಸ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಸ್ನೇಹಿತನ ಹೀರೋಹೊಂಡ ಹತ್ತಿ ದೆಹಲಿಯಿಂದ ಆಗ್ರಾ ಹೊರೆಟೆವು. ಈಗ ನೋಡಿದರೆ ಅದೊಂದು ಹುಚ್ಚು ಸಾಹಸವಾಗಿತ್ತು. ಆಗ್ರಾಕ್ಕೆ ಹೋಗುತ್ತಿರುವ ಉದ್ಧೇಶ ಜಗತ್ಪಸಿದ್ಧ ತಾಜ್ ಮಹಲ್ ನೋಡುವುದಾಗಿತ್ತು. ಸುಮಾರು 400 ಕಿ.ಮಿ. ದೂರ ಪಯಣ. ಕೆಳಗಿನ ಕಪ್ಪು ಟಾರೋಡು ಸೂರ್ಯನ ಎಲ್ಲಾ ಶಾಖ ಹೀರಿಕೊಂಡು ನಿಗಿ ನಿಗಿ ಸುಡುತ್ತಿತ್ತು. ಜೊತೆಗೆ ಬಿಸಿಗಾಳಿ. ಬಹುಷ: ಆಗಿನ ವಯಸ್ಸು ಇಂತದೊಂದು ವಿಲಕ್ಷಣ ಸಾಹಸಕ್ಕೆ ಪ್ರೇರಪಿಸಿತೋ ಏನೋ?. ಆಗ್ರಾ ಎಷ್ಟೊತ್ತಿಗೆ ತಲುಪಿಯೇವು? … Read more

ಒಲೆ: ಗುಂಡುರಾವ್ ದೇಸಾಯಿ

ಇತ್ತೀಚಿಗೆ ನಮ್ಮ ದೇವಸ್ಥಾನಕ್ಕೆ ದರ್ಶನಾರ್ಥವಾಗಿ ಬೆಂಗಳೂರಿನಿಂದ ಬಂದಿದ್ದ ದಂಪತಿಗಳಿಗಾಗಿ ನಮ್ಮ ಸಮಿತಿಯ ಹಿರಿಯರೊಬ್ಬರು ರಾತ್ರಿ ಅಡುಗೆ ಸಿದ್ಧ ಮಾಡುತ್ತಿದ್ದರು. ಆ ದಂಪತಿಗಳ ಪುತ್ರಿ ಅನ್ನ ಮಾಡುವುದನ್ನು ಗಾಬರಿಯಿಂದ ಬಿಟ್ಟ ಕಣ್ಣಿನಿಂದ ನೋಡುತ್ತಿದ್ದಳು. ಅದನ್ನು ಗಮನಿಸಿದ ಹಿರಿಯರು ‘ಯಾಕಮ್ಮ ಹಾಗೆ ನೋಡ್ತಾ ಇದ್ದಿಯಾ ಅಡುಗೆ ಮಾಡೋದು ನೋಡಿಲ್ವೆ? ಅಥವಾ ಹಸಿವೆಯಾಗಿದೆಯಾ?’ ಎಂದು ಕೇಳಿದರು. ‘ಅಂಕಲ್ ಅಡಿಗೆ ಈ ರೀತಿ ಮಾಡ್ತಿರಾ? ಅನ್ನ ಅದ್ಹೇಗೆ ಮಾಡ್ತೀರಿ? ವಿಜಲ್ ಕೇಳ್ತಾ ಇಲ್ಲ ಹಿಂಗೂ ಮಾಡಬಹುದಾ?’ ಎಂದು ಪ್ರಶ್ನೆ ಹಾಕಿದಳು ಹೀಗೂ ಉಂಟೆ … Read more

ಸೂರ್ಯಪುತ್ರರ ನೋವಿಗೆ ಇಲ್ಲಿದೆ ಪರಿಹಾರ: ಸಂಗಮೇಶ ಡಿಗ್ಗಿ ಸಂಗಾಮಿತ್ರ

ಹರೆಯದ ವಯಸಲ್ಲಿ ಬೇಗನೆ ಏಳುವದು ಕಷ್ಟಕಣ್ರೀ. ಗಲ್ಲಿಗೇರಿಸುವ ಶಿಕ್ಷೆಯಾದ್ರೂ ಕೊಡಿ ಬೆಳಗ್ಗಿನ ಜಾವದಲ್ಲಿ ಏಳುವ ಕೆಲಸ ಹಚ್ಚಬೇಡಿ. ರಾತ್ರಿ ಮೂರರವರೆಗೆ ಸಿನಿಮಾ, ಮೇಸೆಜು, ವಾಟ್ಸಾಪ್ ಅಂತ ಟೈಮ್‍ತಿಂದು ಮುಸುಕು ಹೊದ್ದು ಮಲಗಿದಾಗ ಜಗದ ಪರಿವೆ ಇಲ್ಲದೆ ಲೋಕದ ಯಾವುದೇ ಚಿಂತೆ ಇಲ್ಲದವರಂಥೇ ನಿದ್ದೆ ಆವರಿಸಿರುತ್ತದೆ. ಬೆಳಗ್ಗೆ ಯಾರಾದ್ರೂ ಮುಸುಕು ಹೊದ್ದು ಮಲಗಿದವನನ್ನು  ಎಚ್ಚರಿಸಿದಾಗ ಎದುರಿನವರ ಕೆನ್ನೆಯ ಮೇಲೆ ಬಿಟ್ಟಿಯಾಗಿ ಬಾಸುಂಡೆ ಮೂಡಿಸುವಷ್ಟು ಸಿಟ್ಟು ಬರುತ್ತದೆ. ಅಲ್ರೀ ನೀವೆ ಹೇಳ್ರೀ… ಬೆಳಗ್ಗಿನ ಜಾವದಲ್ಲಿ ದೀಪಿಕಾ ಪಡುಕೋಣೆ ನಮ್ಮ ಜೊತೆ … Read more

ಕ್ಷೌರ ಸಮಾಚಾರ: ಎಚ್.ಕೆ.ಶರತ್

ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆ ಹೇರ್ ಕಟ್ ಮಾಡಿಸುವುದು, ವಾರಕ್ಕೋ ಹದಿನೈದು ದಿನಕ್ಕೋ ಟ್ರಿಮ್ ಅಥವಾ ಶೇವ್ ಮಾಡಿಸೋದು ಅಂದ್ರೆ ಸುಮ್ನೆ ಅಲ್ಲ. ಅನುಭವಿಸಿದವರಿಗೇ ಗೊತ್ತು ಅದರ ಸುಖ-ದುಃಖ. ಬೆಳಿಗ್ಗೆ ಎದ್ದು ಮುಖಕ್ಕೆ ಮತ್ತು ……ಕ್ಕೆ ನೀರು ಹಾಕಿಕೊಂಡು(ಪಾಶ್ಚಿಮಾತ್ಯ ಸಂಸ್ಕøತಿ ಅಳವಡಿಸಿಕೊಂಡವರು ಟಿಶ್ಯೂ ಪೇಪರ್ ಬಳಸಬಹುದು!) ಹೇರ್ ಡ್ರೆಸಸ್ ಎಂಬ ಜಗತ್ತಿನೊಳಗಿನ ಜಗತ್ತಿಗೆ ಪ್ರವೇಶಿಸಿದರೆ ಸಾಕು, ಅಲ್ಲಿ ನಾನಾ ನಮೂನೆಯ ವಿಚಾರಗಳು ಮೈ ಕೊಡವಿ ಮೇಲೇಳುತ್ತವೆ. ಒಬಾಮಾ ನ್ಯೂಸ್‍ನಿಂದಿಡಿದು ಹೊಸ ಲೋಕಲ್ ಲವ್ ಸ್ಟೋರಿಯವರೆಗೆ ಎಲ್ಲವೂ ಮುಕ್ತ … Read more

ಸೂರ್ಯಾಸ್ತ: ಪ್ರಶಸ್ತಿ

ಆಫೀಸಿನ ಗಾಜಿನಾಚೆ ಕಾಣುತ್ತಿದ್ದ ಸಂಜೆಯ ಬಣ್ಣದೋಕುಳಿ ಖುಷಿಯ ಬದಲು ಜಿಗುಪ್ಸೆ ಹುಟ್ಟಿಸಿತ್ತವನಿಗೆ. ಎಷ್ಟು ದಿನವೆಂದು ಹೀಗೆ ಹೊತ್ತುಗೊತ್ತಿಲ್ಲದಂತೆ ಗೇಯುವುದು ? ಒಂದು ದಿನವಾದರೂ ಹೊತ್ತಿಗೆ ಸರಿಯಾಗಿ ಮನೆ ತಲುಪಬೇಕೆಂಬ ಕನಸು ಕನಸಾಗೇ ಉಳಿದುದನ್ನು ಪ್ರತಿದಿನದ ಸೂರ್ಯಾಸ್ತ ಚುಚ್ಚಿ ಚುಚ್ಚಿ ನೆನಪಿಸಿದಂತನಿಸುತ್ತಿತ್ತು ಅವನಿಗೆ.  ಕೆಂಪು, ಕೇಸರಿ, ಅರಿಷಿಣಗಳ ಬಣ್ಣ ಹೊದ್ದ ಮೋಡಗಳು ಒಂದೆಡೆ ಇರಲಾರದೇ ಮದುವೆ ಮನೆಯ ಸುಂದರಿಯರಂತೆ ಅತ್ತಿತ್ತ ಓಡಾಡುತ್ತಿದ್ದರೆ ಬೀಸುತ್ತಿದ್ದ ತಂಗಾಳಿ ಅಲ್ಲೇ ನಿಂತಿದ್ದ ಹೆಣ್ಣೊಬ್ಬಳ ಕೂದಲೊಂದಿಗೆ ಆಟವಾಡುತ್ತಿತ್ತು.  ಮೋಡಗಳ ಮೆರವಣಿಗೆಯಿಂದ ಕೊಂಚ ಕೆಳಗೆ ಕತ್ತು … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಾಯಿಗೆ ತಿಳಿದಿದೆಯೇ?  ನನ್ನ ಮಿತ್ರನೊಬ್ಬ ಒಂದು ದೇಶದ ಅಧ್ಯಕ್ಷರನ್ನು ಬೇಟಿ ಮಾಡಲು ಹೋಗಿದ್ದ.  ಆದ್ಯಕ್ಷರ ನಿವಾಸದ ಆವರಣದಲ್ಲಿ ಅವರು ಮಾತನಾಡುತ್ತಾ ಸುತ್ತಾಡುತ್ತಿದ್ದಾಗ ನೋಡಲು ಭಯಂಕರವಾಗಿದ್ದ ದೊಡ್ಡ ನಾಯಿಯೊಂದು ಅಲ್ಲಿಯೇ ಇದ್ದ ಒಬ್ಬ ಹಿಂದೂ ಗುರುವಿನ ಕೌಪೀನವನ್ನು ಕಚ್ಚಿ ಹರಿದದ್ದಲ್ಲದೆ ಜೋರಾಗಿ ಬೊಗಳುತ್ತಾ ಅವನನ್ನು ಒಂದು ಗೋಡೆಯ ಸಮೀಪಕ್ಕೆ ಅಟ್ಟಿಕೊಂಡು ಹೋಯಿತು. ಹುಲಿಗಳನ್ನು ತನ್ನ ನೋಟದಿಂದಲೇ ಪಳಗಿಸುವ ಸಾಮರ್ಥ್ಯ ಉಳ್ಳವನು ಎಂಬುದಾಗಿ ಖ್ಯಾತನಾಗಿದ್ದ ಆ ಗುರುವಿಗೆ ನಾಯಿಗಳನ್ನು ಆ ರೀತಿ ಪಳಗಿಸುವ ಸಾಮರ್ಥ್ಯವಿರಲಿಲ್ಲವಾದ್ದರಿಂದ ಏನಾದರೂ ಮಾಡುವಂತೆ ನನ್ನ … Read more

ಈ ಮನವೆಂಬ ದುಂಬಿಯ ಕರೆದೊಯ್ದು: ಅಜಿತ್ ಭಟ್

ನೀ ಮುಗಿಲಾಗು ನಾ ಕಡಲಾಗುವೆ ಜೊತೆ ಇರದಿದ್ದರೇನಂತೆ ರೆಪ್ಪೆ ತೆರೆದರೆ ನನಗೆ ನೀನು, ನಿನಗೆ ನಾನು.. ಎಲ್ಲಿರುವೆ? ಹೇಗಿರುವೆ? ಎಲ್ಲೋ ಸಾಗಬೇಕಿದ್ದ ಈ ನನ್ನ ಬದುಕನ್ನು ಇನ್ನೆಲ್ಲಿಗೆ ತಂದು ನಿಲ್ಲಿಸಿರುವೆ. ಎಲ್ಲಿಗೆ? ಯಾತಕೆ? ಏನೂ ಕೇಳದೆ ಕಣ್ಮುಚ್ಚಿ ನಿನ್ನ ಹಿಂಬಾಲಿಸಿ ಬಂದೆ ಕಣ್ತೆರೆದು ನೋಡಿದಾಗ ಕವಲು ದಾರಿಯಲ್ಲಿ ನಾ ಒಂಟಿ ಪಯಣಿಗ. ನೀನು ಇನ್ನಾರದೋ ಬದುಕಿನ ಸಾರಥ್ಯವ ಹಿಡಿದಿರುವೆಯ? ಆದರೆ ನನ್ನ ಪರಿಸ್ಥಿತಿ ಗೂಡನ್ನು ತಪ್ಪಿಸಿಕೊಂಡ ಜೇನು ಹುಳುವಿನಂತೆ ಎತ್ತ ಸಾಗಿದರು ಅದು ನನ್ನದಲ್ಲದ ದಾರಿ. ನನ್ನ … Read more

ಸೋಮರಸಕ್ಕೆ ರಾಜಮಾರ್ಗ: ಆದರ್ಶ ಸದಾನ೦ದ ಅರ್ಕಸಾಲಿ

ನಿನ್ನೆ, ಅ೦ದರೆ ಶನಿವಾರ, ಮಾನ್ಸೂನ್ ಮಾಸದ ಮೊದಲ ಶನಿವಾರ, ಅದೇ ತಲೆ ಕೆಟ್ಟು ಹೋಗುವಷ್ಟು ಕೆಲಸ ಇದ್ದ ಶನಿವಾರ, ಊಟ ತಿ೦ಡಿ ನೆಟ್ಟಗೆ ತಿನ್ನದೆ ಸ೦ಜೇವರೆಗೂ ಪೇಶೆ೦ಟ್ಸ್ ನೋಡಿದ ಶನಿವಾರದ ಬಗ್ಗೆ ಬರೆಯುವ ಮುನ್ನ ಕೇರಳದ ಸಾರಾಯಿ ಕಲ್ಚರ್ ಬಗ್ಗೆ ಸ್ವಲ್ಪ ಮುನ್ನುಡಿ ಬರೆಯುವೆ. ಭಾರತದಲ್ಲೇ ಪ್ರತಿ ತಲೆಗ೦ತೆ ಅಧಿಕ ಸಾರಾಯಿ ಕುಡಿಯುವ ಪ್ರ(ಕು)ಖ್ಯಾತಿ ಹೊ೦ದಿದ ಅಕ್ಷರಸ್ತ, ಗಾಡ್ಸ್ ಓನ್ ಲ್ಯಾ೦ಡ ಕೇರಳ. ಆದರೆ ಇಲ್ಲಿ ಕುಡಿತಕ್ಕೆ ಕಡಿವಾಣ ಹಾಕಲೋ ಅಥವಾ ಸಾರಾಯಿ ಮಾರುವದರಿ೦ದ ಬರುವ ಲಾಭವನ್ನು … Read more